ಅಂಗವಿಕಲತೆ ದೌರ್ಬಲ್ಯವಲ್ಲ ಅದು ವಿಶೇಷ ಶಕ್ತಿ
ಮೈಸೂರು : ವಿಶೇಷಚೇತನರೂ ಕೂಡಾ ಅಂತರ್ಜಾಲ ಬಳಕೆ ಮಾಡಿ ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲು ಮುನ್ನುಡಿ ಬರೆದಿದ್ದಾರೆ ಎಂದು ಭಾರತ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಪದ್ಮಶ್ರೀ ಶೇಖರ ನಾಯಕ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನರಿಗಾಗಿ ವಚನ ಮಾಧುರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗವಿಕಲತೆ ನಮ್ಮ ದೌರ್ಬಲ್ಯವಲ್ಲ, ಅದು ನಮ್ಮ ಶಕ್ತಿ. ಅನೇಕ ವಿಶೇಷ ಚೇತನರು ಬಡತನದಲ್ಲಿ ಹುಟ್ಟಿದ್ದರೂ ಅವರನ್ನು ಸಾಧಕರನ್ನಾಗಿ ಮಾಡಲು ಪೋಷಕರು ಬಹಳ ಶ್ರಮಿಸಿದ್ದಾರೆ. ಪ್ರತಿಯೊಬ್ಬರೂ ಒಂದು ಗುರಿ ಇಟ್ಟು ಪ್ರಯತ್ನ ಮಾಡಿದರೆ ನಮ್ಮ ಕನಸು ನನಸಾಗುತ್ತದೆ. ಅದಕ್ಕೆ ಉದಾಹರಣೆ ನಾನು ಕಿರಿಯ ವಯಸ್ಸಿನಲ್ಲಿಯೇ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಮೂವತ್ತನೆಯ ವಯಸ್ಸಿನಲ್ಲಿ ರಾಷ್ಟ್ರದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದೇನೆ. ಇಂತಹ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಲಬುರಗಿ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರಿ ಹೇರೂರ ದಾಸ ಸಾಹಿತ್ಯಕ್ಕೆ ಮೂಲಪ್ರೇರಣೆ ವಚನ ಸಾಹಿತ್ಯ. ಪದ್ಯವೂ ಅಲ್ಲದ ಗದ್ಯವೂ ಅಲ್ಲದ ಸಾಹಿತ್ಯ ವಚನ ಸಾಹಿತ್ಯ. ಭಕ್ತಿ, ದಾಸೋಹ ಮತ್ತು ಕಾಯಕಕ್ಕೆ ಮಹತ್ವವನ್ನು ನಾವು ನೀಡಬೇಕು ಎಂದು ಹೇಳಿ ಶರಣು ವಿಶ್ವವಚನ ಫೌಂಡೇಷನ್ ಬೆಳೆದು ಬಂದ ಹಾದಿ ಹಾಗೂ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಲು ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ತಿಳಿಸಿದರು. ನಂತರ ನಡೆದ ವಚನ ಮಾಧುರ್ಯದಲ್ಲಿ ಶರಣರ ವಿವಿಧ ವಚನಗಳನ್ನು ವಿಶೇಷ ಚೇತನರಾದ ಕಿರಣ್ ಎಚ್.ಪಿ ಸಂಗೀತ ಶಿಕ್ಷಕರು, ಮೈಸೂರು, ಜ್ಯೋತಿ, ಸಂಗೀತ ಶಿಕ್ಷಕರು, ರಾಮನಗರ, ಭಾರತಿ ಬಿ. ಸಂಗೀತ ಶಿಕ್ಷಕರು, ಸುತ್ತೂರು, ಕು. ಭಾನುಮತಿ ಬಿ. ಸಂಗೀತ ಶಿಕ್ಷಕರು, ಸುತ್ತೂರು, ಯೋಗೇಶ್ ಜಿ ಎಸ್ ಸಂಗೀತ ಶಿಕ್ಷಕರು, ಮೇಟಗಳ್ಳಿ ಮೈಸೂರು, ಕು. ಕವಿತ ಟಿ.ಎಸ್. ಹಿಂದೂಸ್ಥಾನಿ ಶಾಸ್ತ್ರೀಯ ಮತ್ತು ಸುಗಮಸಂಗೀತ ಗಾಯಕರು, ಬೆಂಗಳೂರು, ಜಯಣ್ಣ, ಚಿಕ್ಕಮಗಳೂರು ಇವರು ಶರಣರ ವಿವಿಧ ವಚನಗಳನ್ನು ಗಾಯನ ಮಾಡಿದರು. ಈ ಸಂದರ್ಭದಲ್ಲಿ ಶಿವಣ್ಣ ಜಿ.ಎಸ್. ಎಫ್.ಡಿ.ಎ ಮಾಗಡಿ ಕೋರ್ಟ್, ಲತಾ ಎಚ್ ಎನ್ ಮೈಸೂರು, ಶಿವು ಎಸ್.ಡಿ.ಎ ಬೀರಿಹುಂಡಿ ಸಂಪೂರ್ಣ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ, ವಿ. ಲಿಂಗಣ್ಣ, ಬಹ್ರೈನ್ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶಿವಾನಂದಪಾಟೀಲ್, ನೀಲಾಂಬಿಕಾ ದೇವಿ ನಾಗರಾಜು, ಜಯಶೀಲ, ಸುಮಂಗಳ ಆರ್, ಅನಿತಾ ನಾಗರಾಜ್, ಬಸಲಿಂಗಯ್ಯ ಹಿರೇಮಥ್, ಡಾ. ಪುಟ್ಟಪ್ಪ ಮುಡಿಗುಂಡ, ಪೂರ್ಣಿಮಾ ನಾಗೇಂದ್ರಸ್ವಾಮಿ, ಸರಸ್ವತಿ ರಾಮಣ್ಣ, ಚಂದ್ರಶೇಖರ್, ನಾಗನಗೌಡ ಪಾಟೀಲ್, ದೀಪಾ ತೊಲಗಿ, ಚೆನ್ನಪ್ಪ, ಭೀಮಯ್ಯ ಹಡಪದ, ಸಿದ್ಧಪ್ಪ ಬೋರಗಿ, ಉಮಾಪತಿ, ಪ್ರಭುಸ್ವಾಮಿ, ಸಂಧ್ಯಾ ರಾಣಿ ಉಪಸ್ಥಿತರಿದ್ದರು.

No comments:
Post a Comment