ಅವಿಭಕ್ತ ಕುಟುಂಬವನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಅವರಿಂದ ವಚನಗಾಯನ ಮಾಡಿಸಿರುವುದು ಹೆಮ್ಮೆಯ ವಿಷಯ ಎಂದು ಮೈಸೂರು ಜಿಲ್ಲೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಅಂತರ್ಜಾಲದಲ್ಲಿ ಐದನೆಯ ಸಮೂಹ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ಕಾಲಮಾನದಲ್ಲಿ ಕೂಡು ಕುಟುಂಬವನ್ನು ಕಾಣುವುದು ವಿರಳ. ಇಂತಹ ಸಂದರ್ಭದಲ್ಲಿ ಮೂರು ತಲೆಮಾರಿನವರಾದ ಅಜ್ಜಿ, ತಾಯಿ, ಮೊಮ್ಮಗಳಿಂದ ಒಟ್ಟಾಗಿ ವಚನ ಹಾಡಿಸಿ ಜನಮಾನಸದಲ್ಲಿ ಬೇರೂರಿಸುವ ಕೆಲಸವನ್ನು ಶರಣು ವಿಶ್ವವಚನ ಫೌಂಡೇಷನ್ ಮಾಡುತ್ತಿರುವುದು ಶ್ಲಾಘನೀಯ. ಶರಣರ ಅನುಭಾವದ ನುಡಿಗಳು ಎಲ್ಲಾ ಕಾಲಮಾನದಲ್ಲಿಯೂ ಪ್ರಸ್ತುತವಾಗಿದ್ದು, ಶರಣರ ಚಿಂತನೆ, ವೈಚಾರಿಕ ಬದುಕು ಕರ್ನಾಟಕ ಮತ್ತು ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ನಂತರ ನಡೆದ ವಚನ ಮಾದುರ್ಯ ಕಾರ್ಯಕ್ರಮದಲ್ಲಿ ಮನದೊಳಗೆ ಮಂದಾಗ್ನಿಯ ವಚನವನ್ನು ಮೈಸೂರಿನ ಉಮಾ ಮಹದೇವಸ್ವಾಮಿ, ಶ್ರೀಲಕ್ಷ್ಮಿ, ಭವಾನಿ, ಎನ್ನ ತನುವೆ ಅಗ್ಘವಣಿಯ ಬಿಂದಿಗೆ ಎಂಬ ವಚನವನ್ನು ಕೊಪ್ಪಳದ ಪದ್ಮಾವತಿ ಗೋಂದಕರ, ವಿಜಯಲಕ್ಷ್ಮಿ ಈಶ್ವರ ಲಿಂಗಾಯತ, ಚೈತ್ರ ಈಶ್ವರ ಲಿಂಗಾಯತ, ಕಂತೆ ತೊಟ್ಟವಾ ಗುರು ಅಲ್ಲ ವಚನವನ್ನು ಬೆಳಗಾವಿಯ ಪಾರ್ವತಿ ಗುಡಸ, ಮಹಾದೇವಿ ಮಹಾಂತೇಶ ಗುಡಸ, ಪ್ರಾರ್ಥನಾ ಮ. ಗುಡಸ, ವಚನದಲ್ಲಿ ನಾಮಾಮೃತ ತುಂಬಿ ವಚನವನ್ನು ಮೈಸೂರಿನ ಎಂ.ಪಿ ನೀಲಾಂಬಿಕಾದೇವಿ ನಾಗರಾಜ, ಕೆ.ಎನ್. ರಶ್ಮಿ ನಾಗರಾಜ, ಎಚ್ ಎನ್ ಸಂಜನ, ಅರಸುವ ಬಳ್ಳಿ ಕಾಲ ಸುತ್ತಿತೆಂಬಂತೆ ವಚನವನ್ನು ಬೆಳಗಾವಿಯ ವಂದನಾ ಬಾಬಾನಗರ, ರೂಪ ಶರಣ ಪ್ರಸಾದ, ಬಸವದೀಕ್ಷಾ, ಬೆಟ್ಟದ ಮೇಲೊಂದು ಮನೆಯ ಮಾಡಿ ವಚನವನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿಯ ನೀಲವ್ವ ವಾಜಂತ್ರಿ, ಕಸ್ತೂರಿ ವಾಜಂತ್ರಿ, ಗಂಗಾಂಬಿಕ ವಾಜಂತ್ರಿ, ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ವಚನವನ್ನು ಬೆಳಗಾವಿಯ ಪ್ರೇಮಾ ಎಸ್ ಗುಡಸ, ಶೀಲಾ ಆ. ಗುಡಸ, ವಚನಾ ಆ. ಗುಡಸ ಸಾಮೂಹಿಕವಾಗಿ ಗಾಯನ ಮಾಡಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ವಾಜಂತ್ರಿ, ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ, ವಿ. ಲಿಂಗಣ್ಣ, ಉಷಾ ನಾಗೇಶ್, ಡಾ. ಸುಮಂಗಲ ಆರ್, ಶೀಲ ನಂದೀಶ್, ಸುನಿತಾ ಅಂಗಡಿ ಕೊಡೇಕಲ್, ಮಾರುತೇಶ್, ಅನಿತಾ ನಾಗರಾಜು, ಚಂಚಲ ಜಯದೇವ್, ನೀಲಾಂಬಿಕೆ ನಾಗರಾಜಪ್ಪ, ಸರಸ್ವತಿ ರಾಮಣ್ಣ, ವಿಜಯಕುಮಾರ್ ವಾಜಂತ್ರಿ, ಪುಟ್ಟಪ್ಪ, ಭಾಗ್ಯ ತೆಗ್ಗೆಳ್ಳಿ, ಹನುಮಂತರೆಡ್ಡಿ, ದೀಪ ತೊಲಗಿ, ಗಿರಿಜೇಶ್, ವಚನ ಉಪಸ್ಥಿತರಿದ್ದರು.

No comments:
Post a Comment