*ವಚನ ಬೆಳಕು*
*ಮಿಂದು ದೇವರ ಪೂಜಿಸಿಹೆನೆಂಬ* *ಸಂದೇಹಿ ಮಾನವಾ ನೀ ಕೇಳಾ,*
*ಮಿಯದೇ ಮೀನು🐟? ಮಿಯದೇ ಮೊಸಳೆ🐊?*
*ತಾ ಮಿಂದು, ತನ್ನ ಮನ ಮಿಯದನ್ನಕ್ಕರ?*
*ಈ ಬೆಡಗಿನ ಮಾತ ಮೆಚ್ಚುವನೆ*
*ನಮ್ಮ ಗುಹೇಶ್ವರ?*
✍️:*ಅಲ್ಲಮ ಪ್ರಭುಗಳು*🙏
*ವಚನ ಭಾವಾರ್ಥ:* ಅಂತರಂಗದ ಶುದ್ಧಿಯಿಲ್ಲದೆ, ಸದ್ಭಾವ ಇಲ್ಲದೆ,ಒಳ್ಳೆಯ ಮನವಿಲ್ಲದೆ, ಕೇವಲ ಸ್ನಾನ ಮಾಡಿ, ನೀರಿನಲ್ಲಿ ಮುಳುಗಿ ಮಡಿಯಾದೆ ಶುದ್ಧನಾದೆ,ದೇವರನ್ನು ಪೂಜಿಸಲು ನಾನು ಅರ್ಹ ಎನ್ನುವ ಮಾನವರನ್ನು ಸಂದೇಹಿಗಳು ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ. ಜಲಚರಗಳಾದ ಮೀನು ಮೊಸಳೆಗಳು🐟🐊 ಯಾವಾಗಲು ನೀರಿನಲ್ಲೇ ಇರುತ್ತವೆ ಎಂದು ಅವುಗಳೂ ಭಕ್ತರಾಗುತ್ತಾವ? ಬಹಿರಂಗ ಶುದ್ದಿಗಿಂತ ಅಂತರಂಗ ಶುದ್ಧಿ ಮುಖ್ಯ ಎನ್ನುತ್ತಾರೆ ಅಲ್ಲಮ ಪ್ರಭುಗಳು. 🙏🙏🙏🙏
No comments:
Post a Comment