Wednesday, November 16, 2022

ಸ್ವಚ್ಛ ಕನ್ನಡ ಭಾಷಾ ಅಭಿಯಾನ

 *ಸ್ವಚ್ಛ ಕನ್ನಡ ಭಾಷಾ ಅಭಿಯಾನ*


ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಎಲ್ಲರೂ ಕನ್ನಡವನ್ನು ಸರಿಯಾಗಿ ಬಳಕೆ ಮಾಡುವ ಸುದುದ್ದೇಶದಿಂದ ಸ್ವಚ್ಛ ಕನ್ನಡ ಭಾಷಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ವಿವಿಧ ವಾಹನ, ಅಂಗಡಿ, ಮನೆ, ಆಸ್ಪತ್ರೆ, ಕಛೇರಿ, ಮಾಲ್ ಮುಂತಾದ ಕಡೆ ಕನ್ನಡದಲ್ಲಿ ನಾಮಫಲಕ ಹಾಕುವಾಗ  ಕನ್ನಡ ಬರೆವಣಿಗೆಗೆ ಸಂಬಂಧಿಸಿದಂತೆ ಅನೇಕ ತಪ್ಪುಗಳಾಗುತ್ತಿದ್ದು, ಇತರರು ಅದನ್ನು ನೋಡಿ ಅನುಕರಣೆ ಮಾಡುತ್ತಿರುವುದರಿಂದ ಕನ್ನಡ ಪದ ಬಳಕೆಯಲ್ಲಿ ಲೋಪವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಸದುದ್ದೇಶದಿಂದ ಅನೇಕ ಸಮಾನ ಮನಸ್ಕರ ಸಹಯೋಗದೊಂದಿಗೆ ಸ್ವಚ್ಛ ಕನ್ನಡ ಭಾಷಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ವಿಶ್ವದಾದ್ಯಂತ ಕನ್ನಡವನ್ನು ಬರೆವಣಿಗೆಯಲ್ಲಿ ಬಳಕೆ ಮಾಡುವವರು ಸರಿಯಾದ ಕನ್ನಡದ ಬರೆವಣಿಗೆಗೆ ಸಂಬಂಧಿಸಿದಂತೆ 9901137948 ಮೊಬೈಲ್ ನಂಬರನ್ನು ಸಂಪರ್ಕಿಸಬಹುದು. ಯಾವುದೇ ರೀತಿಯ ನಾಮಫಲಕ, ಆಹ್ವಾನ ಪತ್ರಿಕೆ ಮತ್ತು ವಿವಿಧ ಪುಸ್ತಕಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಉಚಿತವಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ತಿಳಿಸಿದ್ದಾರೆ.

Thursday, November 3, 2022

ಶಾಸನ- ಬಸವಣ್ಣ


 #ಹಾಲಬಸವಿದೇವನಶಾಸನ

       ಅಣ್ಣ ಬಸವಣ್ಣನ ವಂಶಾವಳಿ,ಬಸವಣ್ಣ ಮಾದರಸರ ಮಗ ಮತ್ತು ಅವರು ಹುಟ್ಟಿದ್ದು ಬಾಗೇವಾಡಿಯಲ್ಲಿಯೇ ಎಂದು ತಿಳಿಸುವ ಅತ್ಯಂತ ಮಹತ್ವದ ಕನ್ನಡ ಶಾಸನವಿದು


#   ಯುಗಪುರುಷರಾದ ಮಹಾತ್ಮ ಬಸವೇಶ್ವರ ರ ಕುರಿತು ಸಾಕಷ್ಟು ಸಾಹಿತ್ಯಿಕ ದಾಖಲೆಗಳು(ವಚನಗಳು,ರಗಳೆಗಳು,ಕಾವ್ಯಗಳು,ಜನಪದ) ಲಭಿಸಿದರೂ ಸಹ ದಾಖಲಿಸುವ ದಾಖಲೆಗಳಾದ ಶಾಸನ,ತಾಮ್ರಪಟ,ಸ್ಮಾರಕಗಳು ಇಲ್ಲದಿರುವುದು #ಬಸವಣ್ಣನ ಕುರಿತು ಖಚಿತವಾಗಿ ಹೇಳಲು ಯಾವ ದಾಖಲೆಗಳು ಲಭ್ಯವಿರಲಿಲ್ಲ


# ಅಂತಹ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ #ಅರ್ಜುನವಾಡ ದಲ್ಲಿ ಈ ಹಾಲಬಸವಿದೇವರ ಶಾಸನ ಲಭಿಸಿತು


# ಈ ಶಾಸನದಲ್ಲಿ ಬಸವಣ್ಣನವರನ್ನು ಬಸವರಾಜ ಮತ್ತು ಸಂಗನಬಸವ ಎಂದು ಉಲ್ಲೇಖಿಸಲಾಗಿದೆ

#ಈ ಶಾಸನವನ್ನು ಸಂಶೋಧಿಸಿದವರು ಶ್ರೀ ರಾಜಪುರೋಹಿತ,ಎಸ್ ಸಿ ನಂದೀಮಠ ಮತ್ತು ಗೆಳಯರ ಬಳಗದ ಮಧುರಚೆನ್ನರು,ಶ್ರೀಯುತರು ಇದನ್ನು ಕನ್ನಡ ವಚನ ಪಿತಾಮಹ ಎಂದು ಖ್ಯಾತರಾದ ಫ.ಗು.ಹಳಕಟ್ಟಿಯವರ ಶಿವಾನುಭವ ಪತ್ರಿಕೆಯಲ್ಲಿ 1928 ರಲ್ಲಿ ಹೊರಡಿಸಲಾಯಿತು. ಈ ಮೂಲಕ ಬಸವಣ್ಣನವರ ಜೀವನದ ಕುರಿತು ಬೆಳಕು ಚೆಲ್ಲುವ ಒಂದು ಐತಿಹಾಸಿಕ ದಾಖಲೆ ದೊರೆದಂತಾಯಿತು.


#ಇಂದು ಈ ಐತಿಹಾಸಿಕ ಶಾಸನ ಧಾರವಾಡ ಜಿಲ್ಲೆಯ ಖ್ಯಾತ ವಿ.ವಿಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದವರು ಸಂಗ್ರಹಿಸಿರುವ ಕನ್ನಡ ಸಂಶೋಧನಾ ಕೇಂದ್ರದ ಮ್ಯೂಸಿಯಂನಲ್ಲಿ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿ ಇಡಲಾಗಿದೆ.


# ಈ ಶಾಸನವನ್ನು ದೇವಗಿರಿಯ ಯಾದವರ ಪ್ರಧಾನಮಂತ್ರಿಯಾದ ನಾಗರಾಜನು ಹೊರಡಿಸಿರುವ ದತ್ತಿ ಶಾಸನವಾಗಿದ್ದು 80  ಸಾಲುಗಳನ್ನು ಒಳಗೊಂಡಿದೆ.

#ಇಂತಹ ಐತಿಹಾಸಿಕ ಶಾಸನವನ್ನು ಕಣ್ತುಂಬಿಕೊಳ್ಳಬೇಕು ಎನ್ನುವರು ಧಾರವಾಡಕ್ಕ ಬಂದರ ಕರ್ನಾಟಕ ವಿವಿಗೆ ಬಂದು ಈ ಮ್ಯೂಸಿಯಂಗೆ ಹೋಗೋದು ಮಾತ್ರ ಮರಿಬೇಡ್ರಿ


 #ಇತಿಹಾಸವನ್ನು_ಮರೆತವರು_ಇತಿಹಾಸವನ್ನು_ಸೃಷ್ಟಿಸಲಾರರು

#ಬಸವಣ್ಣ #ಧಾರವಾಡ #ಹುಬ್ಬಳ್ಳಿ #ಕರ್ನಾಟಕ #ವಿಶ್ವವಿದ್ಯಾಲಯ

Wednesday, November 2, 2022

ವಿವಿಧ ಶರಣರ ವಚನಗಳ ತಾತ್ಪರ್ಯಗಳು

 *ವಚನ ಬೆಳಕು*

 *ಮಿಂದು ದೇವರ ಪೂಜಿಸಿಹೆನೆಂಬ* *ಸಂದೇಹಿ ಮಾನವಾ ನೀ ಕೇಳಾ,* 

*ಮಿಯದೇ ಮೀನು🐟? ಮಿಯದೇ ಮೊಸಳೆ🐊?*

*ತಾ ಮಿಂದು, ತನ್ನ ಮನ ಮಿಯದನ್ನಕ್ಕರ?*

*ಈ ಬೆಡಗಿನ ಮಾತ ಮೆಚ್ಚುವನೆ*

*ನಮ್ಮ ಗುಹೇಶ್ವರ?*

   ✍️:*ಅಲ್ಲಮ ಪ್ರಭುಗಳು*🙏

*ವಚನ ಭಾವಾರ್ಥ:* ಅಂತರಂಗದ ಶುದ್ಧಿಯಿಲ್ಲದೆ, ಸದ್ಭಾವ ಇಲ್ಲದೆ,ಒಳ್ಳೆಯ ಮನವಿಲ್ಲದೆ,  ಕೇವಲ ಸ್ನಾನ ಮಾಡಿ, ನೀರಿನಲ್ಲಿ ಮುಳುಗಿ ಮಡಿಯಾದೆ  ಶುದ್ಧನಾದೆ,ದೇವರನ್ನು ಪೂಜಿಸಲು ನಾನು ಅರ್ಹ  ಎನ್ನುವ ಮಾನವರನ್ನು  ಸಂದೇಹಿಗಳು  ಎಂದು ಅಲ್ಲಮಪ್ರಭುಗಳು  ಹೇಳುತ್ತಾರೆ. ಜಲಚರಗಳಾದ ಮೀನು ಮೊಸಳೆಗಳು🐟🐊 ಯಾವಾಗಲು ನೀರಿನಲ್ಲೇ ಇರುತ್ತವೆ ಎಂದು ಅವುಗಳೂ ಭಕ್ತರಾಗುತ್ತಾವ? ಬಹಿರಂಗ ಶುದ್ದಿಗಿಂತ  ಅಂತರಂಗ ಶುದ್ಧಿ ಮುಖ್ಯ ಎನ್ನುತ್ತಾರೆ ಅಲ್ಲಮ ಪ್ರಭುಗಳು. 🙏🙏🙏🙏

Tuesday, November 1, 2022

ಕನ್ನಡ ರಾಜ್ಯೋತ್ಸವ -೨೦೨೨


 ಮೈಸೂರು : ಅನ್ಯ ಭಾಷಿಗರಿಗೂ ಕನ್ನಡ ಕಲಿಸಿ ವಚನ ರಚಿಸಲು ಪ್ರೇರಣೆ ನೀಡಿದ ಬಸವಣ್ಣನವರ ಕನ್ನಡಾಭಿಮಾನ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಯೂರಬೇಕು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಗರದ ಬೋಗಾದಿಯ ಶಾರದಾ ನಗರ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ ಐದನೇ ಶತಮಾನದಿಂದಲೇ ಬಳಕೆಯಲ್ಲಿದ್ದರೂ ಕೂಡಾ ಕನ್ನಡದ ನಿಜವಾದ ಉತ್ಸವ ಪ್ರಾರಂಭವಾದದ್ದು ಹನ್ನೆರಡನೆಯ ಶತಮಾನದಲ್ಲಿ ಏಕೆಂದರೆ ಓದು ಬರೆಹ ಬಾರದ ವಿವಿಧ ಕಾಯಕಗಳಲ್ಲಿ ತೊಡಗಿಕೊಂಡಿದ್ದ ಕಾಯಕ ಜೀವಿಗಳನ್ನು ಅನುಭವ ಮಂಟಪದಲ್ಲಿ ಕಲೆಹಾಕಿ ಅವರೂ ಕೂಡಾ ವಚನ ಸಾಹಿತ್ಯ ರಚಿಸಲು ಪ್ರೇರಣೆ ನೀಡಿದರು. ಜೊತೆಗೆ ಆಪ್ಘಾನಿಸ್ಥಾನದಿಂದ ಬಂದ ಮರುಳ ಶಂಕರದೇವ, ಕಾಶ್ಮೀರದಿಂದ ಬಂದ ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ, ಇಂದಿನ ಗುಜರಾತನ್ನು ಅಂದು ಸೌರಾಷ್ಟç ಎಂದು ಕರೆಯಲಾಗುತ್ತಿತ್ತು. ಅಲ್ಲಿಂದ ಬಂದ ಆದಯ್ಯನವರಿಗೆ ಕನ್ನಡ ಭಾಷೆ ಕಲಿಸಿ ಅವರು ಸಾವಿರಾರು ವಚನಗಳನ್ನು ರಚಿಸಲು ನೆರವಾದರು. ಆಂಡಯ್ಯ ಕವಿ ಹದಿಮೂರನೇ ಶತಮಾನದಲ್ಲಿ ಒಂದು ಸಂಸ್ಕೃತ ಪದವನ್ನು ಕೂಡಾ ಬಳಸದೆ ಕಬ್ಬಿಗರ ಕಾವಂ ಕೃತಿ ರಚಿಸಿ ಅಚ್ಚಗನ್ನಡದ ಕವಿ ಎಂದು ಎನಿಸಿಕೊಂಡರೆ ಹದಿನೇಳನೆಯ ಶತಮಾನದಲ್ಲಿ ದೇಶಿಕೇಂದ್ರ ಸಂಗನ ಬಸವಯ್ಯ ಎಂಬ ಬಸವೋತ್ತರ ಯುಗದ ವಚನಕಾರ ತಮ್ಮ ವಚನಗಳಲ್ಲಿ ಒಂದೂ ಸಂಸ್ಕೃತ ಉದ್ಧರಣೆಗಳನ್ನು ಬಳಸದೆ ಅಚ್ಛಗನ್ನಡದಲ್ಲಿ ವಚನಗಳನ್ನು ರಚಿಸಿ ಅಚ್ಛಗನ್ನಡ ವಚನಕಾರ ಎನಿಸಿದ್ದಾರೆ. ಇಂತಹ ಕನ್ನಡ ಪ್ರೇಮ ನಮಗೆ ಮಾದರಿಯಾಗಬೇಕು ಎಂದರು. ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಮಾತನಾಡಿ ೧೯೫೬ರಲ್ಲಿ ಉದಯವಾದ ಮೈಸೂರು ರಾಜ್ಯ ನಂತರ ೧೯೭೩ರಲ್ಲಿ ಕರ್ನಾಟಕ ಎಂದು ಮರು ನಾಮಕರಣವಾಯಿತು. ಅಂದಿನಿAದಲೂ ಕೂಡಾ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಕನ್ನಡದ ಉಳಿವಿಗಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿವೆ. ಪ್ರಸ್ತುತ ವರ್ಷ ಕೋಟಿ ಕಂಠಗಾಯನದ ಮೂಲಕ ಪ್ರತಿಯೊಬ್ಬರ ಧ್ವನಿಯೂ ಕನ್ನಡವಾಗಿ ಹೊರಹೊಮ್ಮಲು ಸರ್ಕಾರ ಕೈಗೊಂಡ ಇಂತಹ ಚಟುವಟಿಕೆಗಳು ಹೆಚ್ಚಾದಾಗ ಕನ್ನಡದ ಬಗ್ಗೆ ಬದ್ಧತೆಯೂ ಕೂಡಾ ಹೆಚ್ಚುತ್ತದೆ. ಕರ್ನಾಟಕ ಎಂದ ತಕ್ಷಣ ಯಾವುದೇ ದೇಶದವರೂ ಭೇಟಿ ಕೊಡಲು ಉತ್ಸುಕರಾಗಿರುತ್ತಾರೆ ಕಾರಣ ಕನ್ನಡದ ಪ್ರಾಕೃತಿಕ ಸಂಪತ್ತು, ವಿಶಾಲವಾದ ನದಿಗಳು, ಕವಿಗಳ ಮತ್ತು ಶರಣರ ಸಾಹಿತ್ಯ ಕನ್ನಡದ ಬಾಹ್ಯ ಮತ್ತು ಆಂತರಿಕ ಸೊಬಗನ್ನು ಹೆಚ್ಚಿಸಿದೆ ಎಂದರು. ನಂತರ ಪೌರ ಕಾರ್ಮಿಕ ವಿದ್ಯಾರ್ಥಿಗಳಿಗೆ ಸಮವಸ್ತç ಹಂಚಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಸಮವಸ್ತç ದಾಸೋಹಿಗಳಾದ ಶಿವಪುರ ಉಮಾಪತಿ, ವಚನ, ಗಿರಿಜೇಶ್, ನಿಜಗುಣ, ಮಂಜುಳ, ಕಾವ್ಯ, ಸಾದನ, ಚಂದ್ರು, ಬಿ.ಆರ್.ಕಾವ್ಯ ಉಪಸ್ಥಿತರಿದ್ದರು.