ಶ್ರೀ ಸಿದ್ಧಗಂಗಾ ದಿವ್ಯ ತಪೋನಿಧಿ
ಅಂದು ನಾನು ಕಂಡ ಪ್ರತ್ಯಕ್ಷ ದೇವರು
1999 ರ ಇಸವಿ ನಾನು ಒಂಭತ್ತನೇ ತರಗತಿಯಲ್ಲಿದ್ದೆ ಶಾಲೆಯಿಂದ ಪ್ರವಾಸ ಹೊರಟಿದ್ದೆವು ತುಮಕೂರಿನತ್ತ ಅಲ್ಲಿ ಎಲ್ಲಾ ಪ್ರವಾಸ ಮುಗಿಸಿ ಕೊನೆಗೆ ಸಂಜೆ ವೇಳೆಗೆ ಸಿದ್ದಗಂಗೆಯ ಪವಿತ್ರವಾದ ಸ್ಥಳಕ್ಕೆ ಬಂದು ತಲುಪಿದೆವು ಎಲ್ಲರೂ ಬಸ್ಸಿನಿಂದ ಇಳಿದು ಕೈಕಾಲು ಮುಖ ತೊಳೆದು ವಿಭೂತಿ ಧಾರಣೆ ಮಾಡಿ ಪೂಜ್ಯರ ದರುಶನ ಪಡೆಯಲು ಸಾಲಾಗಿ ನಿಂತೆವು ಮಠದ ಮಕ್ಕಳೊಂದಿಗೆ ಕೂಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಂತರ ದೇವರ ದರ್ಶನ ಪಡೆದೆವು ನಂತರ ಪ್ರಸಾದ ಸ್ವೀಕರಿಸಿ ಹೊರಡಲು ಸಜ್ಜಾದೇವು ಬಸ್ಸು ಹತ್ತಲು ಬಂದಾಗ ತಿಳಿಯಿತು ಪಂಚರ್ ಆಗಿದೆ ಎಂದು ಆಗಲೇ ರಾತ್ರಿ10 ರ ಸಮಯವಾಗಿತ್ತು ಅದರಿಂದ ಅಲ್ಲೇ ಉಳಿಯುವ ವ್ಯವಸ್ಥೆ ಮಾಡಲು ಶಿಕ್ಷಕರು ಹೊರಟರು ಅಲ್ಲಿ 20 ವರುಷಗಳ ಹಿಂದೆ ಅಷ್ಟೇನೂ ವ್ಯವಸ್ಥೆ ಇರದ ಕಾರಣ ನಮಗೆ ಮಲಗಲು ಕೋಣೆ ಸಿಗಲಿಲ್ಲ ಎಲ್ಲರನ್ನೂ ಕರೆದುಕೊಂಡು ಮಠದ ಮುಂಬಾಗದಲ್ಲಿ ಟಾರ್ಪಲ್ ಹಾಸಿ ಎಲ್ಲರನ್ನೂ ಮಲಗುವ ವ್ಯವಸ್ಥೆ ಮಾಡಿದರು ಡಿಸೆಂಬರ್ ತಿಂಗಳು ಅದಾದ ಕಾರಣ ತುಂಬಾ ಚಳಿ ಇತ್ತು ನಾವೆಲ್ಲ ವಾಪಸ್ ಬರುವೆವು ಎಂದೂ ಏನನ್ನು ತೆಗೆದುಕೊಂಡು ಹೋಗಿರಲಿಲ್ಲ ಮಧ್ಯರಾತ್ರಿ ಕಳೆಯುತ್ತಿದ್ದ ಹಾಗೇ ಚಳಿ ಜಾಸ್ತಿ ಆಯಿತು ಆ ಸಮಯದಲ್ಲಿ ನಮ್ಮ ನಡೆದಾಡುವ ದೈವವು ಆ ಮಾರ್ಗವಾಗಿ ಸಂಚರಿಸುತ್ತ ಬಂದರು ಅಂತಹ ಚಳಿಯಲ್ಲಿ ನಡುಗುತ್ತಾ ಮಲಗಿರುವ ಮಕ್ಕಳನ್ನು ಕಂಡು ಮರುಗಿದ ನಮ್ಮ ದೇವರು ಕೂಡಲೇ ಮಠದ ಮುಂಬಾಗ ಸೌದೆಗಳನ್ನು ತಂದು ಬೆಂಕಿ ಹಾಕಿಸಿ ಬೆಳಗಿನ ವರೆಗೂ ಉರಿಯುತ್ತಿರಬೇಕೆಂದು ಮಠದ ಸಿಬ್ಬಂದಿಗೆ ಸೂಚನೆ ಕೊಟ್ಟರು ಅದರಂತೆ ಆ ಬೆಂಕಿಯ ಶಾಖದಿಂದ ನಮ್ಮ ಚಳಿ ಮಾಯಾವಾಗಿ ಅಮ್ಮನ ಮಡಿಲಲ್ಲಿ ಮಲಗಿದ್ದ ಭಾಸವಾಗಿ ಅಂದಿನ ರಾತ್ರಿ ನೆಮ್ಮದಿಯ ನಿದ್ದೆ ಮಾಡಿದೇವು ಬೆಳಗಾಗುತ್ತಿದ್ದ ಹಾಗೇ ಸೂರ್ಯನ ಕಿರಣಗಳು ಮೈ ಮೇಲೆ ಬೀಳಾಲಾರಂಬಿಸಿದವು ಎಲ್ಲರು ಕಣ್ಣು ಬಿಟ್ಟು ನೋಡಿದೆವು ನಮ್ಮ ಮುಂದೆ ಸಾಕ್ಷಾತ್ ಭಗವಂತನ ಸ್ವರೂಪವಾದ ಶಿವಕುಮಾರ ಸ್ವಾಮಿಗಳು ನಿಂತಿದ್ದರು ಮಠದ ಮುಂದೆಲ್ಲ ಉರಿದು ಬೂದಿಯಾದ ಸೌದೆ ರಾಶಿ ಕಂಡೆವು ದೇವರು ಕೇಳಿದರು ನಮ್ಮನ್ನು ಮಕ್ಕಳೇ ನಿದ್ದೆ ಚೆನ್ನಾಗಿ ಬಂತೆ ಎಂದೂ ಎಲ್ಲರನ್ನೂ ಪ್ರೀತಿಯಿಂದ ಆಲಂಗಿಸಿ ನಮ್ಮ ಮಠದ ವತಿಯಿಂದ ನಿಮಗೆ ಮಲಗುವ ವ್ಯವಸ್ಥೆ ನೀಡಲಾಗದ್ದಕ್ಕೆ ಕ್ಷಮೆಯಿರಲಿ ಎನ್ನುವುದೆ ನಮಗಂತೂ ಏನು ಮಾತಾಡುವುದು ತಿಳಿಯಲಿಲ್ಲ ತಕ್ಷಣ ಎಲ್ಲರೂ ಕೈ ಮುಗಿದು ಅವರಲ್ಲಿ ಸಾಕ್ಷಾತ್ ತಾಯಿಯ ಮಮತೆ ವಾತ್ಸಲ್ಯ ಪ್ರೀತಿಯ ಕಂಡೆವು ಎಲ್ಲರೂ ಶುಚಿಯಾಗಿ ಬಂದು ಫಲಹಾರ ಸ್ವೀಕರಿಸಿ ಎಂದೂ ಹೇಳಿ ಅವರ ಕಾಯಕಕ್ಕೆ ನಡೆದಾಡುತ್ತ ಹೊರಟರು ಅಂತಹ ಕರುಣಮಯಿಯನ್ನು ಕಂಡು ಅವರ ಪ್ರೀತಿಯನ್ನು ಪಡೆದ ನಾವುಗಳೇ ಪುಣ್ಯವಂತರು ಅವರ ಹೊಗಳಲು ಪದಗಳೇ ಇಲ್ಲಾ 😢😢😢
ನನ್ನ ಮಗನಿಗೇ ಇಷ್ಟ ಲಿಂಗವನ್ನು ಅವರ ಅಮೃತ ಹಸ್ತದಿಂದ ಪಡೆದದ್ದೆ ನಮ್ಮ ಪೂರ್ವಜನ್ಮದ ಪುಣ್ಯ ಎಂದೂ ನನ್ನ ಮನದಾಳದ ಮಾತು
ಇಂದಿಗೂ ನಾನು ಮುಂಜಾನೆ ಎದ್ದಾಗ ಕಾಣುವ ಮೊದಲ ದೈವ ಅವರೇ ಈ ಶತಮಾನ ಕಂಡ ಮಹಾನ್ ಚೇತನ ನಮ್ಮ ದೇವರು
ಮಹಾಮಹಿಮ,ಪರಮನಿರಂಜನ,ತ್ರಿವಿಧ ದಾಸೋಹಿ,ಜಗಜ್ಯೋತಿ ಬಸವಣ್ಣನವರ ಅನುಯಾಯಿ,ಕಾರುಣ್ಯ ಗಂಗೆಯ ಜನಕ,ಈ ಶತಮಾನದ ತೇಜೋಮಯಯವಾದ ಮಕ್ಕಳ ಪ್ರೀತಿಯ ಅಮೃತಮಯಿ,ಕಾಯಕವೇ ಕೈಲಾಸ ಎಂದ ಬಸವಣ್ಣನವರ ನುಡಿಯಂತೆ ನಡೆದರು ನಮ್ಮ ದೇವರು ಸಿದ್ದಗಂಗೆಯ ಪೂಜ್ಯರು
ಊರೂರ ತಿರುಗಿ ಭಿಕ್ಷೆಯ ಬೇಡಿ ಬಂದು ದಾಸೋಹವನ್ನು ಉಸಿರಾಗಿಸಿಕೊಂಡ ದೇವತಾಮನುಷ್ಯ ಇವರಿಗೆ ನಮ್ಮ ಶತಕೋಟಿ ನಮನಗಳು🙏🙏🙏🙏🙏
ದಾಸೋಹಕ್ಕೆ ಅಂದು ಹಚ್ಚಿದ ಓಲೆಯು ಇಂದಿಗೂ ಜಗ ಜಗನೇ ಉರಿಯುತ್ತ ಎಲ್ಲರ ಹಸಿವ ನೀಗಿಸುತಲಿದೆ
ಹೊಟ್ಟೆ ಹಸಿವು ಅದರ ಜೊತೆಗೆ ಜ್ಜಾನದ ಹಸಿವನ್ನು ಕೂಡ ತಣಿಸಿದ ಗುರುವು ಈಗ ನಮ್ಮ ಕಣ್ಣ ಮುಃದಿಲ್ಲ ಎನ್ನುವುದು ವಿಷಾಧಕರ ಸಂಗತಿ😢😢😢
ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತಿರುವ ನಮ್ಮ ದೇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಬಾಳಿನ ದಾರಿಯಲ್ಲಿ ಜ್ಞಾನದ ದೀವೀಗೆ ಹಚ್ಚೋಣ ಶರಣು ಶರಣಾರ್ಥಿಗಳು
🙏🙏🙏🙏🙏
ಪುಷ್ಪಲತಾ ಕುಮಾರಸ್ವಾಮಿ
.............
@@@@@@
6.
ಮೂರು ಜೋಳಿಗೆಯ ಜಂಗಮನಿಗೆ ನುಡಿ ಮಾಲೆ
ಸಿದ್ದಗಂಗೆಯ ಸಿರಿಯು,ಉದ್ದಾನ ಶಿವಯೋಗಿಯ ಕರುಣೆಯು,ಮರುಳರಾಧ್ಯರ ಕಂದನು ಶ್ರೀ ಶಿವಕುಮಾರ ಸ್ವಾಮಿಗಳು,
ವೀರಾಪುರದಲ್ಲಿ ಕಂದನಾಗಿ ಜನಿಸಿ ಜಗ ಬೆಳಗುವ ಜ್ಯೋತಿಯಾಗಿ ಕಾಯಕವ ಮಾಡಿ ಮಹಾದೇವನಾದರು ನಾನೆಂಬ ಅಹಂಕಾರವನ್ನೇ ಅರಿಯದ ಅರಸನು ಈ ಗುರುವು,ಮಕ್ಕಳಿಗಾಗಿ ತನ್ನೊಕ್ಕಲನ್ನೆ ಲೆಕ್ಕಿಸದೆ ಲೋಕದ ಸೇವೆಗಾಗಿ ತನ್ನನ್ನೇ ತೊಡಗಿಸಿಕೊಂಡು ಮಕ್ಕಳಿಗಾಗಿ ಮಠ ಕಟ್ಟಿ,ಅರಸಿ ಬಂದವರಿಗೆ ಸೂರು ನೀಡಿದ ಸಿರಿವಂತ ಹಾಗೂ ಶಿವನ ಅಂಗಾರವೇ ಬಂಗಾರವೆಂದು ಜ್ಞಾನವೇ ಜೀವನಕ್ಕೆ ದೀಪ,ಕಾಯಕವೇ ದೇವರಿರುವ ತಾಣ,ಸಮಾಜ ಸೇವೆಯೇ ಸೌಭಾಗ್ಯ ಎಂದು ನಡತೆಯಲ್ಲಿ ತೋರಿ ನಡೆದಾಡುವ ದೇವರಾದ ನಿರಂಜನ,ನಿರಾಭರಣ ಗುರುಗಳು ಇವರು, ನಾ ಸಾಹಿತ್ಯದಿ ಅಲ್ಪ ಬೆಳೆಯಲು ದಾರಿ ದೀಪವಾದ ಧೀಮಂತನು ದಯೆಯ ಮೂರುತಿ ಈ ತುಮಕೂರಿನ ಸಿದ್ದಗಂಗೆಯ ಸಿದ್ದ ಪುರುಷ,
ಅನ್ನಾಕ್ಷರದ ಒಡೆಯನು ಈ ಅರಸನು
ಬೇಡಿ ಬಂದವರಿಗೆ ತುಸು ನಕ್ಕು ಆಶೀರ್ವಾದಿಸುವ ಜಂಗಮನು *ಮೂರು ಜೊಳಿಗೆಯ ಮಹಿಮನು*, ತ್ರಿವಿಧದ ಒಡೆಯನು ಈ ಭುವಿಯ ಭಗವಂತನು,
ಆರದ ಅಗ್ನಿ,ಅಳಿಯದ ಅಕ್ಷರ,ಸವೆಯದ ಸೂರು ಇಲ್ಲಿ ಅಕ್ಷಯವಾಗಿದೆ ಸಿದ್ದಗಂಗೆಯ ಸಿರಿನಾಡು
ಧಣಿದು ಬಂದ ಮನಕ್ಕೆ ತಣಿಸುವ ತಂಗಾಳಿಯಾಗಿ ಸಾಮಾನ್ಯರಲ್ಲಿ ಬೆರೆತು ಬಡವರ ಸಿರಿಯಾದನು
ಅನ್ನವಿಟ್ಟು ಅರಸನಾದನು,ಅಕ್ಷರ ತಿದ್ದಿಸಿ ಗುರುವಾದನು,ಸೂರನ್ನು ಕೊಟ್ಟು ಆಸರೆಯಾಗಿ ಆಲದ ಮರದಂತೆ ನೆರಳಾದ ನಿತ್ಯ ನಿರಂಜನ ಈ ಶಿವಕುಮಾರ ಗುರುವು,
ಕಾಯಕವ ಮಾಡಿ ಗದ್ದುಗೆಯ ಗುಡಿ ಸೇರಿದ ಗುರುವೇ, ನಮಗೆಲ್ಲಾ ದೇವರು ನೀನೆ
ಎನ್ನ ಮನದ ಹೃದಯದ ಗುಡಿಯಲ್ಲಿ ನೆಲೆಸಿದ ದೇವರು ನೀನು ನಿನ್ನ ಪಾದಡಿಯಲ್ಲಿ ಮಣಿದ ನನ್ನ ಕಣ್ಮನಗಳೇ ಧನ್ಯ,
*"ನಾ ಹೋದರು ಹಸಿವ ನೀಗಿಸಿ ಎಂದ ದೇವರು ನೀನು",*
ಪುಣ್ಯವಾಯ್ತು ಈ ನೆಲವು ಕಾಯ ಹೋದರು ಕಾಯಕದ ನೀತಿಯನ್ನು ಅರುಹಿ ಗದ್ದುಗೆಯಲ್ಲಡಗಿ ಶಿವನಾದೆ ನೀನು,
ನೀ ನಡೆಯುವ ನಡೆ ಚಂದ ಗುರುವೇ
ನೀ ನುಡಿಯುವ ಮಾತು ವೇದಾಂತ ಗುರುವೇ
ನಿನ್ನ ಪಾದದ ದನಿಯು ಚೈತನ್ಯದ ಚಿಲುಮೆ ಓ ಚಿನ್ಮಯನೇ,
ಸದ್ದಿಲ್ಲದೆ ಕಾಯಕವ ಮಾಡಿ ಶರಣರ ಹೆಸರಿಗೆ ಗರಿಯಾಗಿ ಸಾರ್ಥಕತೆಗೆ ಮುನ್ನುಡಿಯಾಗಿ ಜಗಕ್ಕೆ ದೀಪವಾದ ನೀನು ಹುಣ್ಣುಮೆ ಬೆಳಕಲ್ಲಿ ಲೀನವಾಗಿ ಶಿವಸಾಯುಜ್ಯವ ಪಡೆದೆ,
ಇಹಲೋಕವ ತೊರೆದು ದೇವಲೋಕದಿ ದಾಸೋಹಿಯಾಗಲೋದೆಯ ಧೀಮಂತನೇ, ಅರಿವಿನ ಗುರುವೇ ಅವತರಿಸು ಬಾ ಮತ್ತೊಮ್ಮೆ,ಸದ್ದಿಲ್ಲದೆ ಎದ್ದು ಬಾ ಗುರುವೇ ನೀ ಸಮಾಜದ ಸಿರಿಯು,
ಗದ್ದುಗೆಯ ಸದ್ದಿಲ್ಲದೆ ಏರು ಬಾ ನಿನ್ನ ನೆನೆಯುವ ಈ ಮನವು ಮನಬಾಗಿ ನುಡಿ ಮಾಲೆಯ ನಿನಗರ್ಪಿಸಿ ನಾ ಶರಣೆಂದು ನಮಿಸುವೇ ಸಿದ್ದಗಂಗೆಯ ಸಿದ್ದನೇ, ಶರಣು ಶರಣಯ್ಯ...
ಶ್ರೀಹರಿ ದ್ರಾವಿಡ್(ಲೇಖಯೋಗಿ)
ನಾಯಕನಹಟ್ಟಿ
ಚಿತ್ರದುರ್ಗ ಜಿಲ್ಲೆ-577536
..........................
7.
ಪರಮ ಪೂಜ್ಯ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ
ಶ್ರೀ ಶಿವಕುಮಾರಸ್ವಾಮಿಗಳು ಅಥಣಿ ಮುರುಘೇಂದ್ರ ಶಿವಯೋಗಿಗಳು ಹೇಳುತಿದ್ದ ಮಡಿವಾಳ ಮಾಚಯ್ಯ, ಅರಳಯ್ಯ, ಅಪ್ಪಣ್ಣ, ಚನ್ನಯ್ಯ, ಕಕ್ಕಯ್ಯ ತಂದೆಗಳ ಕಾಯಕವ ನಾನು ಮಾಡುವೆ, ಆಯಾಯ ಕಾಯಕದಲ್ಲಿ ಬಸವೇಶ ಇರುತಿಹನು.
ಎಲ್ಲ ಶರಣ ಶರಣೆಯರ ಭಕ್ತಿ, ನುಡಿದಂತೆ ನಡೆಯುತಿದ್ದುದ್ದನ್ನು ವಚನಗಳ ಉದಾಹರಿಸಿ ಶರಣರು ಹೀಗೆ ಹೇಳಿಬಿಟ್ಟಿದ್ದಾರೆ ಎಂದು ತಮ್ಮ ಆಶೀರ್ವಚನಗಳಲ್ಲಿ ಹೇಳಿ ನಾವೆಲ್ಲ ಶರಣ ಪಥದಾಲ್ಲಿ ನಡೆಯಲು ಆಶೀರ್ವದಿಸಿದ್ದಾರೆ.
ಶ್ರೀ ಮಠದ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿಂದ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಕೋರಿಕೆಯಂತೆ ಭಕ್ತರ ಊರುಗಳಲ್ಲಿ ರಾತ್ರಿಯಿಡೀ ಎಲ್ಲ ನಾಟಕಗಳನ್ನು ಶ್ರೀಗಳು ನೋಡುತ್ತಿದ್ದು, ಮರು ದಿನ ತಮ್ಮ ಕಚೇರಿಯಲ್ಲಿ ಕಾಯಕ, ದರ್ಶನದಲ್ಲಿ ತೊಡಗುತ್ತಿದ್ದದ್ದು "ಪವಾಡವೇ" ಸರಿ!
ಶ್ರೀಗಳು ತಮಗೆ ೧೦೦ ವರ್ಷಗಳಾದರೂ ಒಂದು ಗಂಟೆಗೂ ಹೆಚ್ಚು ಕಾಲ ನಿಂತೆಯೇ ಆಶೀರ್ವಚನ ಮಾಡುತ್ತಿದ್ದರು!
ಶ್ರೀಗಳು ಭಿನ್ನಹ ಒಪ್ಪಿಕೊಂಡ ಪೂಜೆ, ಸಾರ್ವಜನಿಕ ಸಮಾರಂಭಗಳಿಗೆ ಸರಿಯಾಗಿ ತಪ್ಪದೆ ದಯಮಾಡುತಿದ್ದುದ್ದು ವಿಶೇಷ.
ಶ್ರೀಗಳ ಜೀವನವನ್ನು ಅಧ್ಯಯನ ಮಾಡಿದವರು ಬೆಕ್ಕಸ ಬೆರಗಾಗುವರು!
ಭಕ್ತರಿಗೆ ನಡೆದಾಡುವ ದೇವರು ಆಗಿದ್ದ ಶ್ರೀಗಳು ಪ್ರತಿದಿನ ಮೂರು ಸಾರಿ ಇಷ್ಟ ಲಿಂಗವನ್ನು ಪೂಜಿಸಿ ಮಹಾ ಲಿಂಗವೇ ಆಗಿ, ಸಿದ್ದ ಗಂಗೆಯನ್ನು ಭೂಕೈಲಾಸ ಮಾಡಿ ತಮ್ಮ ಗುರುಗಳಾದ ಉದ್ದಾನ ಮಹಾ ಶಿವಯೋಗಿಗಳ ಕೃಪೆಯಿಂದ ಅಕ್ಕಮಹಾದೇವಿ ಅವರ ವಚನ : ಗುರುವಿನ ಕರುಣೆಯಿಂದ ಲಿಂಗವ ಕಂಡೆ
ಗುರುವಿನ ಕರುಣೆಯಿಂದ ಪಾದೋದಕ ಕಂಡೆ
ಗುರುವಿನ ಕರುಣೆಯಿಂದ ಪ್ರಸಾದವ ಕಂಡೆ
ಗುರುವಿನ ಕರುಣೆಯಿಂದ ಜಂಗಮರ ಕಂಡೆ
ಗುರುವಿನ ಕರುಣೆಯಿಂದ ಶರಣರ ಕಂಡೆ ಚನ್ನ ಮಲ್ಲಿಕಾರ್ಜುನಾ.
ಶ್ರೀಗಳು ತಮ್ಮ ಗುರುಗಳನ್ನು (ಶಿಷ್ಯ ಗುರುಗಳನ್ನು ಮೀರಿಸುವಂತೆ)ಮೀರಿಸಿದ್ದಾರೆ.
ಬಸವಣ್ಣನವರ ವಚನ :
ಜಗದಗಲ
ಮುಗಿಲಗಲ
ಮಿಗೆಯಗಲ
ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.
ನಮ್ಮೆಲ್ಲರ ನಡೆದಾಡುವ ದೇವರು ಸಿದ್ದಗಂಗಾಮಠದ ಗದ್ದುಗೆಯಲ್ಲಿ ಕಾಯವನ್ನು ಬಿಟ್ಟು ಮಹಾ ಲಿಂಗವೇ ಆಗಿ ಅಗೋಚರವಾಗಿದ್ದಾರೆ.
ಶರಣಾರ್ಥಿಗಳು,
ಗುರುಪಾದಸ್ವಾಮಿ
ಬಿಲಿಗೆರೆ ಹುಂಡಿ
ಕಿರಗಸೂರು ಅಂಚೆ
ಟಿ ನರಸೀಪುರ ತಾಲೂಕು
ಮೈಸೂರು ಜಿಲ್ಲೆ
571124
12.
🙏ಸರ್ವ ಧರ್ಮದ ಸಾಕಾರಮೂರ್ತಿ🙏
ನಡೆದಾಡುವ ದೇವರು ಸರ್ವಧರ್ಮದ ತ್ಯಾಗಮಯಿ ಕರುಣಮಯಿ
ಕಲಿಯುಗದ ಬಸವಣ್ಣ
ತ್ರಿವಿದ ದಾಸೋಹಿಗಳು .ಉಚಿತ ವಿದ್ಯಾಭ್ಯಾಸ ಕೊಟ್ಟು ಉಪನ್ಯಾಸ ಮಾಡಿದರು ಮಕ್ಕಳಿಗೆ ಮಕ್ಕಳಾದವರು
ಸೌಹಾರ್ದತೆಗಾಗಿ ಸರ್ವಶ್ರೇಷ್ಠತೆಯ
ಕಾಯಕವೇ ಕೈಲಾಸ ವೆಂದು ಜಗಕೆ ಸಾರಿದ ಗುರುಗಳು
ಜಗದ ಸಕಲಜೀವಿಗಳಿಗೆ ಉಸಿರಿಗಾಗಿ ಬದುಕಿನಲ್ಲಿ. ಬದುಕನ್ನು ಕಂಡವರು
ನಡೆದಾಡುವ ದೇವರು ನುಡಿದಂತೆ ನೆಡೆ ನುಡಿ ನುಡಿದು ಪ್ರಸಾದ ಕೊಟ್ಟು ನಮಗೆ
ದಾರಿ ದೀಪವಾದವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಗುರುಗಳಿಗೆ ನನ್ನ ನುಡಿ ನಮನ
ಕಾಂತರಾಜು ವೈಬಿ ಸಾಲುಮರದ ಪೊಲೀಸ್ ಯಲಗುಂದ
@@@@@@@
13.
*ಶರಣರ ಪಾಲಿನ ಧೀಶಕ್ತಿ ಶ್ರೀ ಸಿದ್ಧಗಂಗಾ ಶ್ರೀ*
ನುಡಿಯೆಂಬುದು ನಡೆಯೊಳಡಗಿರುವ *ಧೀಶಕ್ತಿ* ಅರಿವೆಂಬುದು ಆಂತರ್ಯದಲ್ಲಡಗಿರುವ *ಜ್ಞಾನ ದೀವಿಗೆ* ಈ ಸತ್ವಯುತ, ಶಕ್ತಿಯುತ ಮಾತುಗಳಿಗೆ ಪ್ರೇರಣೆಯಾದವರು ಸಿದ್ಧಗಂಗಾ ಶ್ರೀ. ಅಭಿನವ ಬಸವಣ್ಣರೆಂದು ಅಸಂಖ್ಯಾತ ಜನರಿಂದ ಕರೆಸಿಕೊಂಡ ಶ್ರೀಗಳು ತಮ್ಮ ಜೀವನದುದ್ದಕ್ಕೂ ಕಳಂಕ ರಹಿತರಾಗಿ ಬದುಕಿದರು. ಜನಸಾಮಾನ್ಯರಿಂದ ಹಿಡಿದು ಅತ್ಯುನ್ನತ ಅಧಿಕಾರದಲ್ಲಿರುವ ವ್ಯಕ್ತಿಗಳನ್ನು ಒಂದೇ ಸಮನಾಗಿ ಕಂಡ ಅದಮ್ಯ ಚೇತನ ಸಿದ್ಧಗಂಗಾ ಶ್ರೀ. ವ್ಯಕ್ತಿಗೆ ವ್ಯಕ್ತಿತ್ವವೇ ಶ್ರೀರಕ್ಷೆ ಎಂಬುದನ್ನು ಸಾಬೀತು ಮಾಡಿದ ಮಹಾನ್ ಚೇತನರು ಶ್ರೀ ಸಿದ್ಧಗಂಗಾ ಶ್ರೀ. ಸ್ವಚ್ಛಂದ ಮನಸ್ಸಿನ ಸತ್ ಚಾರಿತ್ರ್ಯ ಪಾಲಕರು, ಸಾಮಾಜಿಕ ಕ್ಷೇತ್ರದ ಅಸಾಮಾನ್ಯ ಸಾಧಕರು ಸಿದ್ಧಗಂಗಾ ಶ್ರೀ. ಜ್ಞಾನಕುಸುಮಗಳ ಬಾಳಿನ ಭವ್ಯ ಜ್ಯೋತಿ ಸಿದ್ಧಗಂಗಾ ಶ್ರೀ. ತಮ್ಮ ನೆನಪಿನ ಕುರುಹು ನಮ್ಮ ಬದುಕಿಗೆ ತಿರುವು ಎಂಬುದ ಅರಿತು ನಾವು ನಡೆಯುವೆವು ತಮಗಿದೋ ನನ್ನ ಅನಂತ ಅನಂತ ನಮನಗಳು.
✍ *ಶೆಟ್ಟಹಳ್ಳಿ ಮಹಾಂತೇಶ್*
ಕನ್ನಡ ಅಧ್ಯಾಪಕ
ಪರಿವರ್ತನ ಶಾಲೆ & ಕಾಲೇಜು, ಶ್ರೀರಂಗಪಟ್ಟಣ.
@@@@@@@@
14.
🙏ನಾ ಕಂಡ ದೈವ ನನ್ನೊಲವ ದೇವ🙏
*ಬಯಸಿದ್ದೆಲ್ಲವ ಪಡೆಯಲು ಬೇಕು ಪರಿಶ್ರಮ,ಯಾವ ಬಯಕೆಗಳಿಲ್ಲದಿದ್ದರೂ ಸೆಳೆದರು ಎಲ್ಲರ ಮನೆ-ಮನ*
*ಪಡೆದರು ತ್ರಿವಿಧ ದಾಸೋಹಿ,ನಡೆದಾಡುವ ದೇವರೆಂಬ ಬೆಲೆಕಟ್ಟಲಾಗದ ಬಿರುದು ಸನ್ಮಾನ ಇವರಿಗಿಂತ ಬೇಕೇ ನಮಗೆ ಜೀವನದ ನಿಜ ದರ್ಶನ*
*ಅವರ ಪ್ರಾಮಾಣಿಕತೆಯೇ ನಮಗೆ ಚೇತನ*
*ಅವರ ಕಂಡ ನಮ್ಮ ಬದುಕಾಗಿದೆ ಸುಗಮ*
"ಗೌರವ ಪೂರ್ವಕ ಸಾಷ್ಟಾಂಗ ನಮನದೊಂದಿಗೆ ಭಕ್ತಿಯಿಂದ ಸದಾ ನಿಮ್ಮ ಹಾದಿಯಲ್ಲಿ ಬದುಕಲು ಪ್ರಯತ್ನಿಸುವ ಹಸುಗೂಸು"
ಗೀತಾ.ಎಂ.ಶ್ಯಾನುಭೋಗ್*
ದೇವಲಾಪುರ
ವರುಣಾ ಹೋಬಳಿ, ಮೈಸೂರು ತಾಲ್ಲೂಕು
ಮತ್ತು ಜಿಲ್ಲೆ ೫೭೧೩೧೧.
@@@@@@@
15.
"ನಡೆದಾಡುವ -ದೇವರು"
ಶ್ರೀ-ಎಂಬ ಗೌರವ.
ಸಂಬೋಧನೆಯೊಂದಿಗೆ.
ಶಿ-ವನ ಸ್ವರೂಪಿಯಾಗಿ
ಸಾವಿರಾರು ಬಡಮಕ್ಕಳಿಗೆ
ವ-ರದಾನವಾಗಿ
ಸಿದ್ದಗಂಗಾಮಠವು ಅತಿಥಿಗಳ
ಕು- ಶಲೋಪರಿಸುವ
ಸಂಪ್ರದಾಯ ರೂಢಿ
ಮಾ- ಡಿ ಶಿಷ್ಯಕೋಟಿಯಲ್ಲಿ
ಸಂಸ್ಕಾ
ರ---ವನ್ನು ಬೆಳಸಿ ಉಳಿಸುವ
ಹಾದಿಯಲ್ಲಿ ನಿ
ಸ್ವಾ-ರ್ಥದಿಂದ ಎಲ್ಲರನ್ನೂ
ಒಂದೇ ಭಾವನೆಯಲ್ಲಿ
ಮಿ-ಂದೆದ್ದು ದಿನವು ಅನ್ನ
ದಾಸೋಹಕ್ಕೆ ತಮ್ಮ
ಜೀ- ವವನ್ನು ಮುಡಿಪಾಗಿಸಿದ್ದ
ನಡೆದಾಡುವ ದೇವರು..
ಕಾಯಕ ಯೋಗಿ ...
ನಿತ್ಯದಾಸೋಹಿ...ಎಂದೆ
ಪ್ರಸಿದ್ಧರಾಗಿದ್ದ ಶ್ರೀ..ಶ್ರೀ.ಶಿವಕುಮಾರಸ್ವಾಮಿಜೀ
ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ 🙏🏼🙏🏼🙏🏼🙏🏼🙏🏼🌹🌹🌹🌹🌹🌹🌹
ಸತೀಶ್. ಎಸ್.ದಳವಾಯಿ
ನಂಜನಗೂಡು ....
@@@@@@@
16.
🙏ಮಾನವೀಯತೆಯ ಆಗರ ಶಿವಕುಮಾರಶ್ರೀಗಳು🙏
ತ್ರಿವಿಧ ದಾಸೋಹಿ ನಡೆದಾಡುವ ದೇವರು ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮಿಗಳು ದಿನಾಂಕ 21-01-2019 ರಂದು ಶಿವೈಕ್ಯರಾದರು. ಸಾವಿನಲ್ಲೂ ಮಹಾನ್ ಸದ್ಗುಣ ಮಾನವೀಯತೆ ಮೆರೆದ ಮಹಾನ್ ಪುರುಷ ಅವರು ಪೂರ್ವಾಹ್ನ 11:44ಕ್ಕೆ ಪ್ರಾಣ ಪಕ್ಷಿ ಹಾರಿ ಹೋಗಿದ್ದರು ಮಕ್ಕಳು ಮದ್ಯಾಹ್ನದ ಊಟ ಮಾಡಿದ ತರುವಾಯ ವಿಷಯ ತಿಳಿಸಿ ಎಂದಿರುವುದು ಒಬ್ಬ ಮಹಾನ್ ಮಾನವತಾವಾದಿಯ ಸದ್ಗುಣವಾಗಿದೆ. ಯಾವುದೇ ಜಾತಿ ಧರ್ಮದ ಭೇದ ವಿಲ್ಲದೆ ಬಡವರ ಮಕ್ಕಳಿಗೆ ವಸತಿಸಹಿತ ಶಿಕ್ಷಣ ನೀಡಿದ ಆಧುನಿಕ ಸಾಮಾಜಿಕ ನ್ಯಾಯದ ಹರಿಕಾರ ಅವರೂ. ಇಂತಹ ಆಧುನಿಕ ದೈವ ಪುರುಷ ದೇಶದಲ್ಲಿಯೇ ಅತೀ ಹೆಚ್ಚು ವರ್ಷ ಬದುಕಿ ಬಾಳಿ ಸಾರ್ಥಕತೆ ತೋರಿದ್ದೂ ದೇಶದ ನಾಡಿನ ಹೆಮ್ಮೆಯ ವಿಷಯ. ಇಂತಹ ಮಹಾನ್ ಪುರಷರು ಮತ್ತೆ ಹುಟ್ಟಿ ಬರಲಿ ಎಂದು ಎಲ್ಲರು ಪ್ರಾರ್ಥಿಸೋಣ
ಯಶೋಧ ತೇಜೇಂದ್ರ, ಸಿ
ಶಿಕ್ಷಕರು , ಮೈಸೂರು
@@@@@@@@
17.
ನಡೆದಾಡುವ ದೇವರು
~~~~~~~~~~~~
ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನಿಸಿ ಅಸಾಮಾನ್ಯರಾಗಿ ಬದುಕಿ ಅಸ್ತಂಗತರಾದ ಅಸಾಧಾರಣ ವ್ಯಕ್ತಿತ್ವದ ಶ್ರೀಗಳ ಬಗ್ಗೆ ಬರೆಯುವಷ್ಟು ಹಿರಿಯ ನಾನಲ್ಲವೆಂದು ಇಷ್ಟು ದಿನ ಸುಮ್ಮನೆ ಇದ್ದೆ. ಆದರೆ ನಿಜಕ್ಕೂ ಏನನ್ನೂ ಬರೆಯದೆ ಹೋದರೆ ನನ್ನ ಈ ಜನ್ಮವೇ ವ್ಯರ್ಥ ಎನಿಸುವಂತಹ ಭಾವನೆ ಇಂದು ನನ್ನನ್ನು ತೀವ್ರವಾಗಿ ಕಾಡುತ್ತಿದೆ.
ಪರಮಪೂಜ್ಯ ಡಾ|| ಶಿವಕುಮಾರ ಮಹಾಸ್ವಾಮಿಗಳು ೧೯೦೭ ರಲ್ಲಿ ಸಾಮಾನ್ಯ ಕುಟುಂಬದಲ್ಲಿ ೧೩ ನೆಯ ಪುತ್ರನಾಗಿ ಜನಿಸಿ ತಮ್ಮ ಎಳೆತನದ ವಯಸ್ಸಿನಲ್ಲಿ ಸಹ ಮಠ ಮಾನ್ಯಗಳಲ್ಲಿಯೆ ತಮ್ಮ ವಿದ್ಯಾಭ್ಯಾಸದ ಹಂತದಲ್ಲಿಯೇ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಸಂಪರ್ಕವನ್ನು ಹೊಂದಿದ್ದರು ಎಂದು ಡಾ|| ಶಿವಕುಮಾರ ಮಹಾಸ್ವಾಮಿಗಳು ಲಿಂಗ ಧಾರಣೆಗೊಂಡು ಸ್ವಾಮೀಜಿಗಳಾಗಿ ಗದ್ದುಗೆಯೇರುವ ಮೊದಲೇ ಮಹಾ ಸ್ವಾಮೀಜಿಗಳ ಗುರುಗಳಾಗಿದ್ದ ಉದ್ದಾನ ಶಿವಯೋಗಿಗಳು ಅಥವಾ ಮರುಳಾರಾಧ್ಯ ಸ್ವಾಮಿಗಳು ಶಿವಕುಮಾರ ಸ್ವಾಮಿಗಳ ಆಯುಷ್ಯದ ಕುರಿತು ಅವರ ಮಹಾನ್ ಕಾರ್ಯದ ಕುರಿತು ಭವಿಷ್ಯ ನುಡಿದಿದ್ದರೆಂದು ಎಲ್ಲಿಯೋ ಓದಿದ ನೆನಪು. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಮಹಾಸ್ವಾಮಿಗಳ ಭವಿಷ್ಯವನ್ನು ಆ ಮಹಾ ಗುರು ಸ್ವಾಮಿಗಳು ಅದಾವ ರೀತಿಯಲ್ಲಿ ಕಂಡುಕೊಂಡರು ಎಂಬುದು ನಮ್ಮ ಯೋಗ್ಯತೆಗೆ ನಿಲುಕದ ವಿಚಾರ.
ಆದರೆ ಅವರ ಎರಡೂ ಮಾತುಗಳನ್ನು ನಿಜಗೊಳಿಸಿದ ಕೀರ್ತಿ ಮಾತ್ರ ಡಾ|| ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಸಲ್ಲಬೇಕು. ಸ್ವಾತಂತ್ರ್ಯ ಪೂರ್ವ ರಾಜಮನೆತನದ ಆಳ್ವಿಕೆಯ ಕಾಲ ಆಗಲೂ ಅನ್ನ ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇದ್ದ ಜನಗಳು ಸತ್ಯ ಧರ್ಮ ನಾಲ್ಕು ಕಾಲಿನಲ್ಲಿ ನಡೆಯುತ್ತಿತ್ತು ಎನ್ನಬಹುದು. ಸಾಲದೆಂದು ಅನೇಕ ಕಂದಾಚಾರಗಳ ಜೊತೆಗೆ ಮೂಢನಂಬಿಕೆ ಜಾತಿ ಪದ್ಧತಿ ಸ್ವಾಮೀಜಿಯಾದರೇನು ಜಾತಿ ಧರ್ಮಗಳಿಗೆ ಮಿಗಿಲಾದವರಲ್ಲವೆಂಬ ಕರ್ಮಠವಾದಿಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇದ್ದ ಕಾಲದಲ್ಲಿ ಏಕಾಂಗಿಯಾಗಿ ಅದೆಷ್ಟೋ ಕಡೆಗೆ ಒಬ್ಬಂಟಿಯಾಗಿ ಪ್ರಯಾಣ ಬೆಳಸಿ ಮಾನಾವಮಾನಗಳನ್ನು ಅವಡುಗಚ್ಚಿ ಸಹಿಸಿ ಮಠದ ಮಕ್ಕಳಿಗಾಗಿ ಹಗಲಿರುಳು ಶ್ರಮಿಸಿದ ಆ ದಿನಗಳು ಹೇಗಿದ್ದಿರಬಹುದು ಕಲ್ಪಿಸಿಕೊಳ್ಳಲು ಸಹ ಅಸಾಧ್ಯ ಎನಿಸುತ್ತದೆ.
ಸ್ವಾಮೀಜಿಯವರು ಮಠಾಧೀಶರಾಗುವ ವೇಳೆಗೆ ಕೇವಲ ಮುನ್ನೂರು ರೂಪಾಯಿ ಹಣ ಅದಾಯವಿಲ್ಲದ ಹದಿನಾರು ಎಕರೆ ಹೊಲ ಮಾತ್ರದ ಜೊತೆಗೆ ನಾನೂರಕ್ಕೂ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಅದಾಗಲೇ ವಿದ್ಯಾಭ್ಯಾಸ ಮಾಡುತ್ತಿದ್ದರು. ತಮ್ಮ ಒಳಗಣ್ಣು ತೆರೆದ ಮಹಾಸ್ವಾಮಿಗಳ ಕಣ್ಣಿಗೆ ನಿತ್ಯ ಬಡತನದ ಜೊತೆಗೆ ನಯವಂಚಕರ ಜಾಲಕ್ಕೆ ಸಿಲುಕಿ ಇರುವುದನ್ನು ಕಳೆದುಕೊಳ್ಳುತ್ತಿರುವ ಬಡತನದ ರೇಖೆಗಿಂತ ಕೆಳಗಿರುವ ಜನಗಳೇ ಕಾಣುತ್ತಾರೆ. ಸ್ವಾಮಿಗಳು ಯಾರನ್ನೂ ಪ್ರತಿಭಟಿಸಲು ತೆರೆಳದೆ ತಮ್ಮ ಪಾಡಿಗೆ ತಾವು ಬಡ ಮಕ್ಕಳ ಹೊಟ್ಟೆ ಬಟ್ಟೆಯ ಜೊತೆಗೆ ಖಾಲಿ ಇರುವ ತಲೆಯ ಬಗ್ಗೆ ಅದರಲ್ಲಿ ತುಂಬಬೇಕಾದ ವಿದ್ಯೆಯ ಬಗ್ಗೆ ಹಗಲಿರುಳು ಕನವರಿಸಿದರು. ಕನಸನ್ನು ನನಸು ಮಾಡುತ್ತಲೇ ಲೋಕ ಪ್ರಸಿದ್ದಿಯಾದರು ಎಂದು ಯಾರಿಂದಲೂ ಏನನ್ನೂ ಸ್ವಹಿತಕ್ಕಾಗಿ ಬಯಸದ ಮಹಾಸ್ವಾಮಿಗಳು ಕಡೆ ಕಡೆಗೆ ಕೈಯೆತ್ತಿ ಬೇಡುವ ಪ್ರಸಂಗ ಬರಲೇ ಇಲ್ಲ. ಪ್ರತಿವರ್ಷ ವಿದ್ಯಾಭ್ಯಾಸಕ್ಕಾಗಿ ಮಠದಲ್ಲಿ ಇರುವ ಮಕ್ಕಳ ಅಸನ ವಸನಕ್ಕೆಂದು ಉದಾರವಾಗಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಯಿತು. ಹಾಗೆಂದು ಸ್ವಾಮಿಗಳು ಪ್ರತಿ ಊರಿಗೆ ಹೋದರೂ ಊರಿನಲ್ಲಿ ಇರುವ ವಿದ್ಯಾಭ್ಯಾಸ ರಹಿತ ಬಡ ಮಕ್ಕಳ ಬಗ್ಗೆ ಮಾತ್ರ ಕೇಳಿದರು ಜಾತಿ ಮತ ಭೇಧವಿಲ್ಲದೆ ಎಲ್ಲರನ್ನೂ ಕೈಬೀಸಿ ಕರೆತಂದು ಮಠದೊಳಗೆ ತುಂಬಿಸಿಕೊಂಡರು. ಆ ಮೂಲಕ ಸರಕಾರದ ಕಣ್ಣಿಗೂ ಕಿಸುರಾದರೂ ಬಡವರ ಪಾಲಿಗೆ ನಡೆದಾಡುವ ದೇವರಾದರು.
ವೈ.ಕೊ. ವೈಲೇಶ ಪಿ ಎಸ್ ಕೊಡಗು
೨೭/೨/೨೦೧೯
@@@@@@
18.
👏ನುಡಿದಂತೆ ನಡೆದ ಶ್ರೀಗಳು👏
ಬಸವಣ್ಣನವರ ಮಾತು ಪಾಲಿಸಿದ ಅನ್ನದಾತರಾದ ಗುರುಗಳಿಗೆ ನಮನ
ನೂರಾರು ಮಕ್ಕಳಿಗೆ ತಂದೆ ತಾಯಿಯಾಗಿ, ಗುರುವಾಗಿ, ಬೆಳೆಸಿದ ನಮ್ಮ ಸಿದ್ಧಗಂಗಾ ಸ್ವಾಮಿಗಳು
ಕಾವಿ ಬಣ್ಣದ ಮಾಲೆ ಧರಿಸಿ ಕೈಯಲ್ಲೊಂದು ಕೋಲು ಹಿಡಿದು ಕೇಸರಿ ಪೇಟ ತೊಟ್ಟು ನಡೆದು ಭೂಮಿಯ ಮೇಲೆ ನಡೆದಾಡುವ ದೇವರಾದಿರಿ
ತಮ್ಮ ಅಗಲಿಕೆ ಎಲ್ಲರಿಗೂ ನೋವು ತಂದು ಕಣ್ಣಲ್ಲಿ ಕಂಬನಿ ತಂದಿದೆ. ದೇವರೇ ದೇವರೇ ಮತ್ತೊಮ್ಮೆ ಹುಟ್ಟಿ ಬನ್ನಿ
ಸುಶ್ರಾವ್ಯ ಎಂ
ಜೆ ಎಸ್ ಎಸ್ ಪಬ್ಲಿಕ್ ಶಾಲೆ ಆರನೇ ತರಗತಿ,
ಎಸ್ ಜೆ ಸಿ ಕ್ಯಾಂಪಸ್ ಮೈಸೂರು
@@@@@@@
19. ನಡೆದಾಡಿದ ದೇವರು
ನಡೆ ನುಡಿಗಳ ಸಂಗಮ
ಕಾಯಕಯೋಗಿ ಜಂಗಮ
ಹುಟ್ಟು ಲಿಂಗವಂತರಲ್ಲ
ಆದರೂ ಲಿಂಗವೂ ಮೆಚ್ಚಿ
ಅಹುದಹುದು ಎಂದಿತಲ್ಲಾ
ಪಾರದರ್ಶಕ ಪ್ರಾಮಾಣಿಕತೆ
ಸತ್ಯನಿಷ್ಠೆ ತತ್ವ ಸೇವೆಗಳದೇ ಕತೆ
ಬೆಟ್ಟ ಗುಡ್ಡಗಳ ಸಿದ್ಧಗoಗೆ
ತಮ್ಮಿoದಾಯಿತು ಜೀವರಸಗoಗೆ
ನೂರಾ ಹನ್ನೊoದು ವರ್ಷಗಳ
ಅದ್ಭುತ ಸಾರ್ಥಕ ಜೀವನ
ಆಯಿತು ನಿಮ್ಮ ಜನ್ಮ ಪಾವನ
-ಎಂ ವಿ ರೇವಣಸಿದ್ದಯ್ಯ
MVR Office Address
M.V.Revanasiddaiah,
Advocate
Bengaluru
@@@@@
20.
ಮಾಡಿದರಿವರು ತ್ರಿವಿಧ ದಾಸೋಹ ಕಾಯಕ
ಇವರ ಜೀವನತತ್ವಗಳೆಂದಿಗೂ ಸರ್ವಕಾಲಿಕ
ಇವರೆಂದಿಗೂ ಎಲ್ಲರಿಗೂ ಸ್ಪೂರ್ತಿದಾಯಕ
ಇವರ ಕೆಲಸಗಳ ನೆನೆಯುವುದೇ ಹರ್ಷದಾಯಕ
ಇರುವುದು ಇವರ ಹೆಸರು ಈ ಜಗವಿರುವತನಕ
ವಿಜಯ
ಅಕ್ಕನ ಬಳಗ, ಕೊಳ್ಳೇಗಾಲ
@@@@@@
21.
Magnanimous Sri shivkumaraswamiji swamiji
Holiness simplicity saint
His love for animals and mankind
Gave food for many and
Education for millions
The love of God is visible
In this saint
Who loved all and hated none
We are blessed to be alive with.his period
Bliss was in the dawn of swamiji whose.sun will.never set.in the sky
Vivekanandha
Lecturer
Kolar
@@@@@
22.
26.
ಗುರು ಬ್ರಹ್ಮ ಗುರೂ ವಿಷ್ಣು ಗುರು ದೇವೊ ಮಹೇಶ್ವರಾ ಗುರು ಸಾಕ್ಷತ್ ಪರಬ್ರಹ್ಮ ತಸ್ಮಯ ಶ್ರೀ ಗುರುವೇ ನಮಃ
ಲೋಕದ ದಾಸೋಹಗಳಲ್ಲಿ ಶ್ರೇಷ್ಠ ದಾಸೋಹಗಳೆಂದರೆ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹ ಅದರಲ್ಲಿ ಅನ್ನ ದಾಸೋಹ ಮಾನವನ ಕ್ಷಣ ಹಸಿವಿಗಾಗಿ ಮಾತ್ರ ಆದರೆ ಅದರ ಜೊತೆಗೆ ಅಕ್ಷರ ದಾಸೋಹ ಮಾಡಿದರೆ ಅದು ಮಾನವನ ಜೀವನ ಪರ್ಯಂತ ಯಾರ ಹಂಗಿಲ್ಲದೆ ಬದುಕಲು ಸಾಧ್ಯವಾಗಿಸುತ್ತದಲ್ಲವೇ? ಇಂತಹ ದಾಸೋಹ ಗಳನ್ನು ತಮ್ಮ ಬದುಕಿನುದ್ದಕ್ಕು ನಿರ್ವಹಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಹಸಿರಾಗಿಸಿರುವ ನಮ್ಮ ನಿಮ್ಮೆಲ್ಲರ ಆರಾಧ್ಯ ದೈವರಾದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಶ್ರೀ ಮ.ಪ್ರ.ಸ್ವರೂಪಿ ಶಿವಕುಮಾರ ಸ್ವಾಮೀಜಿಗಳ ಪಾದ ಕಮಲಗಳಗೆ ನನ್ನ ಈ ಅನಿಸಿಕೆ
ಸಮರ್ಪಣೆ
ಶ್ರೀ ಮಹಾಂತೇಶ ಎಸ್ ಬಡಿಗೇರ ಶಿಕ್ಷಕರು GLPS ಸಂಕಧಾಳ ಹಾಗೂ ಪ್ರಧಾನ ಕಾರ್ಯದರ್ಶಿಗಳು KGRPSTA ತಾಲ್ಲೂಕು ಲಕ್ಷ್ಮೇಶ್ವರ
@@@@@@@
27.
ಬಾಲ್ಯದಿಂದಲೂ
ಶರಣನೆಂಬುದ ಕೇಳಿದ್ದೇ
ನೋಡಿರಲಿಲ್ಲ,
ಸೇವೆ
ಎನ್ಮುವುದನ್ನ
ಹುಡುಕುತ್ತಿದ್ದೇ ಆದರೇ
ಅರಿವಾಗಿರಲಿಲ್ಲ,
ದಾಸೋಹ
ಎನ್ನುವುದು
ಎಲ್ಲರ ಮಾತನಲ್ಲಿತ್ತು
ತಿಳಿದಿರಲಿಲ್ಲ
ಹತ್ತಾರು ಮಕ್ಕಳ
ಹಡೆದವರ ಪ್ರೀತಿ
ಕಂಡಿದ್ದೆ
ಹತ್ತುಸಾವಿರ ಪ್ರೀತಿಯ ಮಕ್ಕಳ
ಗುರುವನ್ನ ನಾ ಕಂಡಿರಲಿಲ್ಲ,
ಇವೆಲ್ಲದರ ಅರಿವಿಗೆ
ಒಂದೇ ಹೆಸರು
ನನ್ನ ಗುರು
ಆರಾಧ್ಯ ದೈವ ಶ್ರೀ ಶಿವಕುಮಾರಸ್ವಾಮಿಗಳು
ಎಂ.ಕುಮಾರಸ್ವಾಮಿ ಕಣ್ಣೂರು
@@@@@@@
28.
ನಡೆದಾಡುವ ದೇವರಾದ ಶ್ರೀಗಳು ಎಂದಿಗೂ ಆದರ್ಶಮಯ, ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಹೊಂದುವಂತಹವು.
ತ್ರಿವಿಧ ದಾಸೋಹಿಗಳು ಲಕ್ಷಾಂತರ ಜನರ ಬಾಳಿಗೆ ಬೆಳಕಿನ ಬುಗ್ಗೆ ಚಿಮ್ಮಿಸಿದವರು. ಅವರ ಅಗಲಿಕೆ ಚಿರಕಾಲ ಭರಿಸಲಾಗದ ನಷ್ಟ. ಅವರು ದೈಹಿಕವಾಗಿ ನಮ್ಮನ್ನಗಲಿದ್ದಾರೆ ಹೊರತು ಮಾನಸಿಕವಾಗಿ ಅವರ ಬೋಧನೆಗಳು ನಮ್ಮೊಟ್ಟಿಗಿವೆ. ತಂತ್ರಜ್ಞಾನ ಮುಂದುವರೆದಿದೆ, ಎಲ್ಲರ ಕೈಬೆರಳಲ್ಲೆ ಮಾಹಿತಿ ಹರಿದಾಡುತ್ತಿದೆ. ಅಂತಹುದರಲ್ಲಿ ಶ್ರೀಗಳ ಬಗ್ಗೆ ಆಪ್ ಮಾಡುವುದರ ಮೂಲಕ ನಮನ ಸಲ್ಲಿಸುತ್ತಿರುವುದು ಪ್ರಶಂಸಾರ್ಹ.
ಶರಣು ವಿಶ್ವವಚನ ಫೌಂಡೇಶನ್ ಈ ಪ್ರಯತ್ನ ಯಶಸ್ವಿಯಾಗಲಿ.
ಗೌರಿ.ಭೀ.ಕಟ್ಟಿಮನಿ
ಹುಬ್ಬಳ್ಳಿ
@@@@@@
29.
@@@@@@
30.
🙏ಶ್ರೀಗಳೇ ಅನರ್ಘ್ಯ ರತ್ನ🙏
ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಗಳನ್ನು ನನ್ನ ಹೃದಯ ಕಮಲದಲ್ಲಿ ಅವರನ್ನು ಸದಾ ನೆನೆಯುತ್ತಾ .
ಬೃಹ್ಮ ಪದವಿಯನೊಲ್ಲೆ ,
ವಿಷ್ಣು ಪದವಿಯನೊಲ್ಲೆ ,
ರುದ್ರ ಪದವಿಯನೊಲ್ಲೆ ,
ನಾನು ಮತ್ತಾವ ಪದವಿಯನೊಲ್ಲೆನಯ್ಯಾ
ಕೂಡಲ ಸಂಗಮದೇವ.
ನಿಮ್ಮ ಸದ್ಭಕ್ತರ ಪಾದವನ್ನು
ಅರಿದಿಪ್ಪ ಮಹಾ ಪದವಿಯ ಕರುಣಿಸಯ್ಯಾ .
. ಎಂಬ ಬಸವಣ್ಣನವರ ವಚನ ನಮ್ಮ ಶ್ರೀ ಗಳಿಗೆ ಅನ್ವಯಿಸುತ್ತದೆ.
ಶ್ರೀ ಗಳು ಯಾವತ್ತೂ ಏನನ್ನು ಬಯಸಿದವರಲ್ಲ . ಅವರು ಬಯಸಿದ್ದು ಲೋಕ ಕಲ್ಯಾಣ.
ಎಲ್ಲರೂ ಶ್ರೀ ಗಳಿಗೆ ಭಾರತರತ್ನ ಕೊಡಬೇಕು ಎಂದು ಹೇಳಿದರು. ಆದರೆ ನಾನು ಭಾರತರತ್ನ ಬೇಡ ಎಂದು ಹೇಳುತ್ತೆನೆ . ಭಾರತಕ್ಕೆ ಅವರೇ ಒಂದು ರತ್ನ ಇದ್ದಂತೆ .ಈಗಾಗಲೇ ಭಾರತರತ್ನ ಪ್ರಶಸ್ತಿ ತೆಗೆದುಕೊಂಡ ಜನರನ್ನು ನೋಡಿದ್ದೇವೆ .ಅಂತವರ ಸಾಲಿಗೆ ನಮ್ಮ ದೇವರನ್ನು ನಿಲ್ಲಿಸುವುದು ಸರಿಯಲ್ಲ. ಅವರು ಬಹು ಎತ್ತರ ಆಕಾಶದೆತ್ತರಕ್ಕೆ ಹೋದ ಕೀರ್ತಿ.
೧೨ ನೇ ಶತಮಾನದ ಬಸವಾದಿ ಪ್ರಮಥರಿಗೆ ಮುಂದೆ ಇಂತಹ ಸುಮ ಈ ನಾಡಿನಲ್ಲಿ ಅರಳುತ್ತದೆ ಎಂದು ಗೊತ್ತಿತ್ತು ಎನ್ನುವ ಹಾಗೆ ಸುಮಾರು ವಚನಗಳು ಶ್ರೀ ಗಳಿಗೆ ಅನ್ವಯಿಸುವ ಹಾಗೆ ಇವೆ.೧೨ ಶತಮಾನದಲ್ಲಿ ಬಸವಣ್ಣ ವಚನಗಳು ರಚಿಸಿದರು .ಅದರಂತೆಯೇ ಬದುಕಿ ತೋರಿಸಿದರು ನಮ್ಮ ದೇವರು .
ಅವರು ಯಾವ ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ನನ್ನವರು ಎಂದು ಸಲಹಿದವರು.
ನಾವು ಎಷ್ಟು ಪುಣ್ಯವಂತರು ಶ್ರೀ ಗಳು ನೆಡೆದಾಡಿದ ಭೂಮಿಯಲ್ಲಿ ನಾವು ಇದ್ದೇವೆ ಅವರನ್ನು ಕಣ್ಣು ತುಂಬಾ ನೋಡಿ ಅವರನ್ನು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದಿದ್ದೆವೆ .ಎಷ್ಟೋ ಪುಣ್ಯಕ್ಷೇತ್ರ ಗಳಿಗೆ ಹೋದರು ಇಂತಹ ಸಮಾಧಾನ ಆಗುವುದಿಲ್ಲ. ಅಂತಹ ಪುಣ್ಯಕ್ಷೇತ್ರ ಸಿದ್ದಗಂಗಾ ಮಠ .
ಅವರು ನಮ್ಮ ನಾಡಿನ ಸಂಪತ್ತು, ಕಾಮಧೇನು, ಕಲ್ಪ ವೃಕ್ಷ ವರ್ಣನೆಗೆ ಶಬ್ದಗಳೆ ಇಲ್ಲ ಎಷ್ಟು ಹೇಳಿದರು ಸಮಾಧಾನ ವಾಗದು.
ಅವರ ಭಕ್ತರ ತಂಡ ಸಾಗರವಾಗಿ ಹರಿದು ಬಂದದ್ದು ಕಂಡಿದ್ದೇವೆ .ಅವರು ಸದಾ ನಮ್ಮೊಂದಿಗೆ ಇದ್ದಾರೆ ಆದರೂ ಅವರಿಲ್ಲದ ನಾಡು ಬರಡು ಎಂದು ಎನಿಸದೆ ಇರದು.
ಅವರಿಗೆ ನನ್ನ ನುಡಿ - ನಮನದ ಸಾಲುಗಳು ಮಡಿಪು .
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ನಿಮ್ಮನ್ನು ಹಂಬಲಿಸಿ ನಾ ಇಲ್ಲೆ ಕಾಯುತಿರುವೆ
ದೀನ ದಲಿತರ ಬಂಧುವೆ
ಜ್ಞಾನ ತೋರಿದ ನಿಧಿಯೆ
ಅಕ್ಷರ ಕಲಿಸಿದ ಗುರುವೆ
ಅನ್ನವ ನೀಡುವ ಧಣಿಯೆ
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ನಡೆದಾಡುವ ದೇವರೆ
ಕಾಯಕ ಯೋಗಿ ಬಸವನೆ
ಶತಮಾನದ ಸಂತನೆ
ಎಲ್ಲರ ಬಾಳಿನ ದೈವವೆ
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ತ್ರಿವಿಧ ದಾಸೋಹದ ಚಿಲುಮೆಯೆ
ನಮ್ಮ ನಾಡಿನ ಕಲ್ಪವೃಕ್ಷವೆ
ಶಿವನಿಗೆ ನೋಡಲು ಕಾತುರವೆ
ಭಕ್ತರ ಪರಂಜೋತಿಯೆ
ಲಿಂಗ ಪೂಜೆಯ ಮುಗಿಸಿ ನೀ ಎಲ್ಲಿಗೆ ಹೋಗುತಿರುವೆ
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ನಿಮ್ಮನ್ನು ಹಂಬಲಿಸಿ ನಾ ಇಲ್ಲೆ ಕಾಯುತಿರುವೆ.
ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕರು ವಚನ ಕುಮಾರ ಸ್ವಾಮಿ ಮತ್ತು ಅವರ ಧರ್ಮಪತ್ನಿ ರೂಪಾ ಕುಮಾರ ಸ್ವಾಮಿ ಈ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿರುವ ಒಂದು ಒಳ್ಳೆಯ ಉದ್ದೇಶ ಇಂತಹ ಶರಣ ಸಂತರ ವಿಚಾರ ಎಲ್ಲರಿಗೂ ಮುಟ್ಟುವ ನಿಟ್ಟಿನಲ್ಲಿ ಯಶಸ್ವಿಯಾಗಿ ಆ ದಂಪತಿಗಳಿಗೆ ಬಸವಾದಿ ಪ್ರಮಥರು ಆರೋಗ್ಯ ಕೊಟ್ಟು ಇನ್ನೂ ಇಂತಹ ಹೆಚ್ಚು, ಹೆಚ್ಚು ಕೆಲಸ ಮಾಡುವ ಶಕ್ತಿ ದಯಪಾಲಿಸಲಿ.
ಅವರಿಗೆ ನನ್ನ ಶರಣು ಶರಣಾರ್ಥಿಗಳು .
ಅಕ್ಕಮಹಾದೇವಿ ಮರಮ್ಕಲ್
ಮೈಸೂರು
🙏🙏🙏🙏🙏🙏🙏🙏🙏🙏
@@@@
31.
ದೇವರು ಎಂದರೆ ದೇಹದಲ್ಲಿರುವ ಶಕ್ತಿಯನ್ನು ವರವಾಗಿ ಪರಿವರ್ತಿಸಿ ರುದ್ರನನ್ನು ಕೈಲಾಸದಿಂದ ದರೆಗಿಳಿಸಿದವರು. ಹೋಮ ಮಾಡಲಿಲ್ಲ ಹವನ ಮಾಡಲಿಲ್ಲ ಮಂತ್ರ ಪಠಿಸಲಿಲ್ಲ ತಂತ್ರ ಮಾಡಲಿಲ್ಲ ವಾಸ್ತು ಕಥೆ ಹೇಳಲಿಲ್ಲ ಜ್ಯೋತಿಷ್ಯದ ಬುರುಡೆ ಬಿಡಲಿಲ್ಲ ಡೋಂಗಿ ಪವಾಡದಿಂದ ದೇವರಾಗಲಿಲ್ಲ ಜ್ಞಾನವೇ ಯಜ್ಞವೆಂದರು ಅನ್ನವೇ ದೇವರೆಂದರು ವಿದ್ಯೆಯೇ ಮಂತ್ರವೆಂದರು ಅವರ ಬದುಕೇ ಪವಾಡ ವನ್ನಾಗಿಸಿದರು ನಮ್ಮ ಸಿದ್ದ ಗಂಗಾ ಕ್ಷೇತ್ರದ ನಡೆದಾಡುವ ದೇವರು.
ಆಹಾರ, ಅಕ್ಷರ ಹಾಗು ಆಶ್ರಯವೆಂಬ ತ್ರಿ ವಿಧ ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ ದಾರ್ಶನಿಕರು ಹಾಗು ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯ ವೈಕರಿಗಳ ಮೂಲಕ ಸೇವಾ ಕಾಶಿಯಾಗಿ ಶ್ರೀ ಸಿದ್ದ ಗಂಗಾ ಮಠವನ್ನು ಪರಿವರ್ತಿಸಿದ ಮಹಾ ತಪಸ್ವಿ ನಮ್ಮ ಶ್ರೀ ಶಿವಕುಮಾರ ಸ್ವಾಮೀಜಿಯವರು.
ವಿರಕ್ತ ಮಠದ ಪರಂಪರೆಗೆ ಚ್ಯುತಿಬರದ ಹಾಗೆ ಕಾಯಕದ ಮೂಲಕ ಜಗತ್ತಿಗೆ ಸೇವಾ ತತ್ಪರತೆಯನ್ನು ಸಾರಿದ ಕೆಲವೇ ಕೆಲವು ವಿಶ್ವ ವಂದಿತ ಸ್ವಾಮಿಜಿಗಳಲ್ಲಿ ಮುಂಚೂಣಿಯಲ್ಲಿ ಸಾಗಿ ಇತರರಿಗೆ ದಾರಿ ದೀಪವಾದವರು.
ದಿನಾಂಕ 01-04-1907 ರಲ್ಲಿ ಮಾಗಡಿ ತಾಲೂಕಿನಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ಸಾಮಾನ್ಯ ವ್ಯಕ್ತಿಯಿಂದ ಅಸಾಮಾನ್ಯರಾದ ಸ್ವಾಮೀಜಿ ಅತ್ಯಂತ ದೀರ್ಘ ಕಾಲ ಸಿದ್ದ ಗಂಗಾ ಮಠವನ್ನು ಮುನ್ನೆಡಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ವನ್ನು ಉಣಬಡಿಸಿ ಅವರನ್ನು ಸಜ್ಜನರನ್ನಗಿಸಿ ರೂಪಿಸಿದ ಕೀರ್ತಿ ಸ್ವಾಮೀಜಿಗಳಿಗೆ ಸಲ್ಲುತ್ತದೆ.
ಶ್ರೀ ಮಠವನ್ನು ಸುಮಾರು 88 ವರ್ಷಗಳು ಕಾಯಕ ದಾಸೋಹದ ಮೂಲಕ ಪ್ರತಿಯೊಬ್ಬರ ಮನ ಮನೆಗಳಲ್ಲಿ ನೆಲೆಸಿ ಸರಳ ಸಜ್ಜನಿಕೆಯ ಛಾಪನ್ನು ಬಿಟ್ಟು ಶ್ರೀಗಳು ದಿನಾಂಕ 21ನೇ ಜನವರಿ 2019 ರಂದು ಬೆಳಗ್ಗೆ 11:44 ಗಂಟೆಗೆ ಅಪಾರ ಭಕ್ತ ವೃಂದವನ್ನು ಅನಾಥರನ್ನಾಗಿಸಿ ತಮ್ಮ 111 ನೇ ವಯಸ್ಸಿಗೆ ಭೂಲೋಕದಿಂದ ಕೈಲಾಸದೆಡೆಗೆ ಪ್ರಯಾಣ ಬೆಳೆಸಿದರು.
ಶ್ರೀ ಗಳ ದಿವ್ಯಚರಣಗಳಿಗೆ ಕೋಟಿ ಕೋಟಿ ಪ್ರಣಾಮಗಳು.
ಶ್ರೀಕಂಠ ಮೂರ್ತಿ
ಗೌರವಾಧ್ಯಕ್ಷರು
ಶರಣು ವಿಶ್ವವಚನ ಫೌಂಡೇಷನ್
ಮೈಸೂರು ಜಿಲ್ಲೆ
@@@@@@@
32.
ದೇವರೊಬ್ಬನೇ ನಾಮ ಹಲವು ....
ಶ್ರೀ ಶ್ರೀ ಶ್ರೀ ಸಿದ್ದಗಂಗಾ ಸ್ವಾಮಿಗಳು ಕಾಯಕಯೋಗಿಯಾಗಿ, ಸರ್ವಧರ್ಮಿಯಾಗಿ ಅನ್ನ ,ಅಕ್ಷರ ಹಾಗೂ ಆಶ್ರಯ ದಾಸೋಹ ನೀಡಿ ಅಜರಾಮರಾದವರು. ಶ್ರೀಗಳು ಒಂದೊಂದು ಬಂಡೆಗಲ್ಲನ್ನು ಕಡೆದು ಸ್ಥಾಪಿಸಿದ ಸಂಸ್ಥೆ ಈಗ ದೊಡ್ಡ ಹೆಮ್ಮರವಾಗಿ ಬೆಳೆದು ವಿಶ್ವದಗಲಕ್ಕೂ ಖ್ಯಾತಿಯನ್ನು ಪಡೆದಿದೆ. ತ್ಯಾಗಮಯಿ ಶ್ರೀ ಸಿದ್ದಗಂಗಾ ಶ್ರೀಗಳು ನೀಡಿದ ದಾಸೋಹದಿಂದ, ಶಿಸ್ತು, ಸಂಯಮ, ಸಂಸ್ಕಾರಗಳ ಪಾಠಗಳಿಂದ ಹಾಗೂ ಉಣಬಡಿಸಿದ ಬಸವತತ್ವಗಳಿಂದ ಸಾಕಷ್ಟು ಅನಾಥ ಹಾಗೂ ಬಡ ಮಕ್ಕಳು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ನೆಲೆಸಿದ್ದಾರೆ . ವಿವಿಧ ಕ್ಷೇತ್ರದ ಗಣ್ಯರು ಹಾಗೂ ಮಠಾಧೀಶರು ಶ್ರೀಗಳಿಗೆ ಸಾಕಷ್ಟು ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ಅವುಗಳಲ್ಲಿ ಕೆಲವೇ ಕೆಲವುಗಳನ್ನು ನಿಮ್ಮ ಮುಂದೆ ಪ್ರಸ್ತಾಪಿಸಿದ್ದೇನೆ . 1 ಶತಮಾನದ ಸಂತ 2 ನಡೆದಾಡುವ ದೇವರು 3 ಕಾಯಕ ಯೋಗಿ 4 ತ್ರಿವಿಧ ದಾಸೋಹಿ 5 ಶೈಕ್ಷಣಿಕ ಕ್ರಾಂತಿಯ ಪ್ರೇರಕ-ಸಾಧಕ 4 ಭಾರತದ ಅನರ್ಘ್ಯ ರತ್ನ 5 ಸಿದ್ಧಿಪುರುಷ 6 ಕರ್ನಾಟಕ ರತ್ನ 7 ಜಗದೋದ್ಧಾರಕ 8 ಆಧುನಿಕ ಬಸವಣ್ಣ 9 ಪರಮ ತಪಸ್ವಿ 10 ವೀರ ವಿರಾಗಿ 11 ಜ್ಞಾನಕೋಶ 12 ಸದಾ ಹಸನ್ಮುಖಿ 13 ಸಮನ್ವಯ ಯೋಗಿ 14 ಅಂತರ್ಮುಖಿ 15 ದಿವ್ಯ ಸ್ವರೂಪಿ 16 ದಾಸೋಹ ನಿಧಿ 17 ಮಹಾನ್ ಚೇತನ 18 ವಾತ್ಸಲ್ಯ ಮೂರ್ತಿ 19 ಧೀಮಂತ ಚೇತನ 20 ಮಂಗಳಮೂರ್ತಿ 21ಸದಾ ತೇಜಸ್ವಿ 22 ಬಸವ ಕಿರಣ 23 ಸಿದ್ದಗಂಗೆಯ ಮುಕುಟಮಣಿ 24 ಸರಳ ಸಜ್ಜನಿಕೆಯ ಸಾಕಾರ ಮೂರ್ತಿ 25 ಶರಣ ಚಿಂತಕ 26 ಅಮೋಘ ವ್ಯಕ್ತಿತ್ವ 27 ಶ್ರೇಷ್ಠ ಧಾರ್ಮಿಕ ನಾಯಕ 28 ಸಾಮಾಜಿಕ ಅಭಿವೃದ್ಧಿಕಾರ 29 ಮಾರ್ಗದರ್ಶಕ 30 ಪಾವನ ಮೂರ್ತಿ 31 ಗಂಗಾ ಸಂಗಮ 32 ಅನುಗ್ರಹ ಸಮರ್ಥ 33 ಧರ್ಮ ದೀಪ 34 ಕ್ರೀಯಾ ಮೂರ್ತಿ 35 ತತ್ವರೂವಾರಿ 36 ಪಾವನಾತ್ಮ 37 ಜಂಗಮ ಶ್ರೇಷ್ಠ 38 ದೀನದಲಿತರ ದಾರಿದೀಪ 39 ದಾನ ಮಾನವ 40 ದೇವ ದೀವಿಗೆ 41 ಕನ್ನಡದ ಬುದ್ಧ 42 ವಿಶ್ವಪ್ರೇಮಿ 43 ಮಂಗಳಮೂರ್ತಿ 44 ಚಿದ್ಭಾವ ಮೂರ್ತಿ 45 ಗುರಿ ಮುಟ್ಟಿದ ಅನುಭವ ಮೂರ್ತಿ 46 ಪ್ರಸನ್ನ ಜ್ಯೋತಿ 47 ಅನುಭವದ ಸಿರಿ 48 ದೂರದರ್ಶಿ 49 ಜ್ಞಾನದೇಗುಲ 50 ಅಪ್ರತಿಮ 51 ದಣಿವರಿಯದ ಚೇತನ 52 ಪರಮ ಪೂಜ್ಯ 53 ಸಂಕಲ್ಪ ಗಂಗೋತ್ರಿ 54 ನಡೆದಾಡುವ ದೈವ 55 ಬಡವರ ಬಂಧು 54 ಆಶಾ ಕಿರಣ 55 ಲೋಕ ಜಂಗಮ 56 ಪ್ರತ್ಯಕ್ಷ ದೇವರು 57 ಜ್ಞಾನ ಜ್ಯೋತಿ 58 ಲೋಕ ಜೀವಿ 59 ಅನಾಥ ರಕ್ಷಕ 60 ದೀನರ ಬಂಧು 61 ವಿಶ್ವದ ಪುಣ್ಯ ಪುರುಷ 62 ಅಕ್ಷರ ದಾಸೋಹಿ 63 ಆಶ್ರಯ ದಾಸೋಹಿ 64 ಅನ್ನ ದಾಸೋಹಿ 65 ವಿದ್ಯಾ ದಾಸೋಹಿ 66 ಜ್ಞಾನ ದಾಸೋಹಿ 67 ಅಕ್ಷಯ್ ನಿಧಿ 68 ಸದಾ ಸ್ಮರಣೀಯ 69 ಯುಗದ ಸಂತ 70 ಶಿಕ್ಷಣ ದಾತ 71 ದಿವ್ಯ ಶಕ್ತಿ 72 ನೈತಿಕ ಮೇರು ಶಿಖರ 73 ಪಾಂಡಿತ್ಯಪೂರ್ಣ 74 ಕ್ರಾಂತಿಪುರುಷ 75 ಬಡ ವಿದ್ಯಾರ್ಥಿಗಳ ಕಾಮಧೇನು 76 ಅನಾಥರ ತಂದೆ 77 ಮಹಾಯೋಗಿ 78 ಸಿದ್ದಗಂಗಾಶ್ರೀ 79 ಧರ್ಮಾತೀತ 80 ಪೂಜನೀಯ 81 ಶರಣ ಸಿದ್ಧರಾಮ 82 ದೈವ ರೂಪದ ದಿನಕರ 83 ಜಂಗಮ ಯೋಗಿ 84 ಮಹಾನ್ ಸಾಧಕ 85 ತ್ಯಾಗಜೀವಿ 86 ಮಹಾನ್ ವಿರಕ್ತ 87 ತ್ರಿಕರಣ ಶುದ್ಧ 88 ಆರಾಧ್ಯ ದೈವ 89 ಪದ್ಮಭೂಷಣ 90 ಜಗತ್ತು ಕಂಡ ಜ್ಞಾನ ಭಂಡಾರ 91 ಸ್ವಯಂ ಸೇವಕ 92 ಆದರ್ಶ ಪೀಠಾಧಿಪತಿ 93 ಪೂರ್ಣಾ ಧಿಕಾರಿ 94 ಅಗ್ರ ಮಠಾಧಿಪತಿ 95 ಗೌರವಾನ್ವಿತ ಅನುಯಾಯಿ 96 ಪೂಜ್ಯ ವ್ಯಕ್ತಿ 97 ಜಂಗಮ ಮೂರ್ತಿ 98 ವೀರಾಪುರದ ಪ್ರೀತಿಯ ಬಾಲಕ 99 ಗುರುಲಿಂಗ ಜಂಗಮ ಭಕ್ತ 100 ಸಾಧು ಸಂತ 101 ಸಂಸ್ಕಾರ ಜೀವಿ 102 ಮಹಿಮಾ ಮೂರ್ತಿ 103 ದಾಸೋಹ ವಿಕ್ರಮ 104 ಸರ್ವಧರ್ಮಿಯ 105 ಯೋಗ್ಯ ಉತ್ತರಾಧಿಕಾರಿ 106 ಮಾನವಿಯತೆಯ ಸಾಕಾರಮೂರ್ತಿ 107 ಏಕಮೇವಾದ್ವಿತೀಯ 108 ಅಖಂಡ ದಾಸೋಹಿ 109 ಋಜುಮಾರ್ಗದ ಪರಿಚಕ 110 ಲೋಕ ಪೂಜ್ಯ 111 ಸದಾ ತೇಜಸ್ವಿ 112 ಜಗದ ಯೋಗಿ 113 ಭಾರತೀಯ ಆಧ್ಯಾತ್ಮಿಕ ನಾಯಕ 114 ಮಾಗಡಿ ತಾಲೂಕಿನ ಹೆಮ್ಮೆಯ ಪುತ್ರ
ಕರುಣ
ಬೆಂಗಳೂರು
@@@@@@
33.
@@@@@@
34.
ನಾನು ಕಂಡ ಶ್ರೀ ಸಿದ್ದಗಂಗಾಶಿವಕುಮಾರ ಜಗದ್ಗುರುಗಳು ನಮ್ಮ ಭಾರತ ದೇಶದ ವಜ್ರ ಅವರು.
ಅವರನ್ನು ಕಳೆದುಕೊಂಡಿದ್ದು ತುಂಬಾ ದುಖಃ ತಂದಿದೆ ಅವರ ಕಾರ್ಯಸಾಧನೆಗಳಿಂದ ಇಗಲು ಅಮರರು ಅವರು. ಲಕ್ಷಾಂತರನಾಡಿನ ಜನತೆಗೆ ಬಡವ ಶ್ರಿಮಂತ ಜಾತಿಯತಿ ಮಾಡದೆ ಎಲ್ಲ್ರಿಗೂ ಶಿಕ್ಷಣ,ಅನ್ನ ,ವಸತಿ ದಾಸೊಗ ತ್ರೀವಿಧ ದಾಸೊಗ ಮಾಡಿದ ದೇವರು ಅವರು.ಮನುಷ್ಯ ರುಪದಲ್ಲಿ ಜನಿಸಿದ ದೇವರು ಅವರು.ಮಾನವರ ಉದ್ದಾರಕ್ಕಾಗಿ ಧರೆಗೆ ಇಳಿದ ಯಡೇಯುರ ಸಿದ್ದಲಿಂಗೇಶ್ವರ ಸ್ವಾಮಿ ರುಪ ಅವರು. ದೇವರಿಗೆ ಸಾವಿಲ್ಲ ಅದಕ್ಕಾಗಿ ಅವರು ಅಮರರು.ನಮ್ಮ ಸರ್ಕಾರ ಅವರಿಗೆ ಭಾರತ ರತ್ನ ಪುರಸ್ಕಾರ ನಿಡದಿರುವದು ನಮ್ಮ ದೇಶ ನಡೆಸುವ ನಾಯಕರಿಗೆ ಅವಮಾನದು.ದೇವರನ್ನು ತಿಳಿದಿಕೊಳ್ಳುವ ಯೊಗ್ಯತೆ ದೇಶನಡೆಸುವರಿಗೆ ಇಲ್ಲದ್ದು ದುಖಃದ ಸಂಗತಿ. ನಮ್ಮ ದೇವರನ್ನು ಅಳತೆ ಮಾಡಲು ಆಗದು.ನೊಬೆಲ್ ಪುರಸ್ಕಾರ ವು ಅವರ ಇದರಿಗೆ ಸಣ್ಣದು.ಮತ್ತೆ ನಮ್ಮ ನಾಡು ದೇಶ ಉದ್ದರಿಸಲು ಅವತಾರ ಪುರಶರಾಗಿ ಬರುವರು ನಮ್ಮ ದೇವರು. ಶ್ರೀ ಜಗದ್ಗುರು ಬಸವಣ್ಣನವರ ಪ್ರತಿರುಪ ಇವರು.
ಅವರ ಕೆಲಸ, ಅವರ ಪ್ರವಚನಗಳು ಈಗಲೂ ನಮ್ಮ ಕಣ್ಣ ಮುಂದೆ ಇವೆ.
ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಿದ್ದಗಂಗಾ ಶ್ರೀಗಳು ಸಾರಿದರು.
ಚನ್ನಬಸವಣ್ಣ ಶೆಟ್ಟರ
ರಾಜ್ಯಾಧ್ಯಕ್ಷರು.ಕರ್ನಾಟಕ ವೀರಕನ್ನಡಿಗರ ರಕ್ಷಣಾ ವೇದಿಕೆ.
ಮೇಲಗಿರಿ ಪ್ಲಾಟ ೧ ನೇ ರಸ್ತೆ.ಬ್ಯಾಡಗಿ -೫೮೧೧೦೬.ಜಿಲ್ಲೆ ಹಾವೇರಿ.ಕರ್ನಾಟಕ
ಕರ್ನಾಟಕ ವೀರಕನ್ನಡಿಗರ ರಕ್ಷಣಾ ವೇದಿಕೆ .
ದಿನಾಂಕ -೩೧-೧-೨೦೧೯.
0000000000
35.
ಜಗಕೆ ದಾರಿ ದೀಪ......
ತಂದೆ ತಾಯಿಗೆ ದೇವರಾಗಿ ಹುಟ್ಟಿರಲಿಲ್ಲ..
ಅರಮನೆಗೆ ರಾಜನಾಗಿರಲಿಲ್ಲ...
ಕೋಟೆ ಕಟ್ಟಿ ಯುದ್ಧ ಸಾರಲಿಲ್ಲ..
ಶರಣು ಶರಣು ಎಂದು ಬೇಡಿ
ಶಿವಭಕ್ತನಾದೆ..!
ಕೋಟಿ ಮಕ್ಕಳಿಗೆ ಅನ್ನದ ಕಣಜ ಕಟ್ಟಿದೆ..
ಮಾನವಿಯತೆಯ ಮಮಕಾರ ನುಡಿದೆ..
ಅರಸಿ ಬಂದವರಿಗೆ ಸದ್ಗುಣ ಭಕ್ತನಾದೆ...
ಕೇಳದವರಿಗೆಲ್ಲ ಕೊಟ್ಟು ದೇವಲೋಕದ ಮಗನಾದೆ..!
ಶ್ರದ್ದಾ ಭಕ್ತಿ ನಡೆದ ದಾರಿಯಲ್ಲಿ..
ಕುಶಲತೆಯ ಹೃದಯ ದೇಹದಲ್ಲಿ...
ವಿಶ್ವದ ಗಡಿ ಮುಟ್ಟಿ ಭಾರತಕ್ಕೆ ರತ್ನವಾದ ಕನ್ನಡದ ಸೊಬಗು ನೀನು..
ಲಾಭಕ್ಕಾಗಿ ಶ್ರಮಿಸಲಿಲ್ಲ , ಮಾಡಿದ ಕೆಲಸ ಮರೆಯಲಾಗುವುದಿಲ್ಲ...!
ಸರ್ವಕುಲಕು ದಿವ್ಯಾ ಜ್ಯೋತಿ ನಿನ್ನ ನುಡಿಗಳು...
ಭಕ್ತರಿಗೆ ಕಂಡ ಪ್ರತ್ಯಕ್ಷ ದೇವರ ರೂಪ ನಿನ್ನದು....
ಪ್ರತಿಯೊಬ್ಬ ಮಕ್ಕಳಲ್ಲೂ ಮರುಜನ್ಮ ತಾಳಿದೆ...
ಸಾಗಿದ ಪಯಣದಲ್ಲಿ ಸಾವಿಲ್ಲದ ಅಂತ್ಯಾ ಕಂಡು ಮಿನುಗುವ ಮೃತ್ಯುಂಜಯನಾದೆ...!
ಎಂತಾ ಲೋಕ ಇದು ಮಾನವ...
ಸಮುದ್ರದ ದಡದಲ್ಲಿ ನಿಂತು ಜಿಗಿಯುವ ಮುನ್ನ .....
ತಲೆ ಎತ್ತಿ ನೋಡಿದರೆ ಎಷ್ಟು ಚೆನ್ನ ಶ್ರೀಸಿದ್ದಗಂಗಾ.....
ಮರೆತು ನರಕ ಸೇರಬೇಡ....
ಬದುಕಿ ಸಾಧಿಸು
ನೀನಿರುವುದು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸನ್ನಿಧಿಯಲ್ಲಿ.........
( ಗೌತಮ್ ಗಿರಿಶಾಂತ ಗುಬ್ಬಿ )
00000000000
36.
"ತಾಯಿಯಾದೆ ತಂದೆಯಾದೆ"
ತಾಯಿಯಾದೆ ತಂದೆಯಾದೆ
ಬಂಧುವಾದೆ ಗುರುವಾದೆ
ಯೇಸುವಾದೆ ಅಲ್ಲಾ ಆದೆ
ಬುದ್ಧನಾದೆ ದೇವರ ಮಕ್ಕಳಿಗೆ.....
ತ್ರಿವಿಧದ ದಾಸೋಹ ನಡೆಸಿದೆ ನೀ ಬಸವಣ್ಣನಾಗಿ.
ಬೇಡಲಿಲ್ಲ ಬಯಸಲಿಲ್ಲ ತನು ಮನ ಧನ ನಿನಗಾಗಿ.
ನಿಮ್ಮ ಹೆಸರು ನೆನೆವರು ಅವರವರ ಭಾವಕ್ಕಾಗಿ...
ನಿನ್ನ ಭಾಗ್ಯ ಧಾರೆ ಎರೆದೆ ಬಡ ಬಲ್ಲಿದರ ಜೀವನಕ್ಕೆ.......
ಭಕ್ತಿ ಶಕ್ತಿ ಯುಕ್ತಿ ಕಲಿಸಿ
ದೈವತ್ವದ ಪಾಠ ಪಠಿಸಿ
ಹೋಗಲಿಲ್ಲ ಎಲ್ಲೂ ನೀನು
ನಮ್ಮೊಳಗಾದೆ ಎಂದೂ ಒಂದು.
ಮಾಹಾಮಾನವನ ಆಸ್ತಿಯಂತೆ
ಅನಿಕೇತನದ ಪ್ರಾಪ್ತಿಯಾದೆ
ಚೈತನ್ಯದ ಮಹಾ ಚೇತನನಂತೆ
ಬದುಕು ಕಳೆದು ಬವಣೆ ತಿಳಿದು
ಸನ್ಮಾರ್ಗವ ತೋರಿದೆ
ಓ ಶಿವಕುಮಾರ ಸ್ವಾಮಿ ಜಿ...
ನಿಮಗೆ ಅನಂತ ವಂದನೆಗಳು.
ಸಮಾಜ ನಿಮಗೆ ಋಣಿಯಾಗಿರುಹುದು.
ನಿಮ್ಮ ಮಾರ್ಗ ಅನುಸರಿಸುತ್ತ, ಜನರ ಜೀವನದ ಭಾಗವಾಗಿರುವಿರಿ
ಎಲ್ಲರಲ್ಲೂ ನೀವು ಒಂದಾಗಿರುವಿರಿ.
ಡಾ.ಜಗನ್ನಾಥ ಕೆ ಡಾಂಗೆ
ಪ್ರಾಧ್ಯಾಪಕ
ಕುವೆಂಪು ವಿಶ್ವವಿದ್ಯಾಲಯ
ಶಂಕರಘಟ್ಟ
00000000000
37.
ಓಂ ಶ್ರೀ ಗುರುಬಸವಲಿಂಗಾಯ ನಮಃ
***ನಡೆದಾಡುವ ದೇವರು***
ಗುಡಿಯಲ್ಲಿರುವ ದೇವರು ಮಾತನಾಡುವುದಿಲ್ಲ .ಆದರೆ ಈ ಮರ್ತ್ಯದಲ್ಲಿ ಜನಿಸಿ ತಮ್ಮ ಪೂರ್ಣ ಬದುಕನ್ನು ಮನುಕುಲದ ಉದ್ಧಾರಕ್ಕಾಗಿ ಮೀಸಲಿಟ್ಟು ಜಾತಿ ಮತ ವರ್ಣ ಭೇದಗಳನೆಣಿಸದೇ "ಇವನಾರವ ಇವನಾರವ ಎಂದೆನಿಸದೇ ಇವನಮ್ಮವ ಇವನಮ್ಮವ"ಎಂದು ಒಪ್ಪಿ ಅಪ್ಪಿಕೊಂಡ ಜಗದ ನಂಟ ಬಸವಣ್ಣ,ಚೋಳರಾಜನಿಗೆ ಜ್ಞಾನೋದಯದ ಕಣ್ಣು ತೆರೆಸಿದ ಮಹಾತಪಸ್ವಿ ಶಿವರಾತ್ರೀಶ್ವರರು, ಮಹಾಯಾತ್ರಿಕ ಮಲೆಯ ಮಹದೇಶ್ವರರು,ಯಡಿಯೂರು ಸಿದ್ಧಲಿಂಗೇಶ್ವರರು,ದಾಸೋಹ ಚಕ್ರವರ್ತಿ ಗುರುಮಲ್ಲೇಶ್ವರರು ಇವರೆಲ್ಲಾ ಮಾತನಾಡಿದ ದೇವರುಗಳು.ಮಾನವರ ಬದುಕನ್ನು ಹಸನಾಗಿಸಲು ಮಾರ್ಗದರ್ಶನ ನೀಡಿದ ಮಹನೀಯರು. ತಮ್ಮ ನಡೆನುಡಿಯಿಂದಲೇ ಲೋಕಕ್ಕೆ ಬೆಳಕಾಗಿ ದೈವತ್ವವನ್ನು ಪಡೆದು ಕೊಂಡವರು.ಅಲ್ಲಮರು ಹೇಳಿರುವ
"ನಾ ದೇವನಲ್ಲದೇ ನೀ ದೇವನೇ
ನೀ ದೇವನಾದಡೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೇ
ಹಸಿವಾದಾಗ ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ "
ಎಂಬ ವಚನದಂತೆ ಅಕ್ಷರಷಃ ಬಾಳಿದವರು. ಇಂತಹ ಶರಣರ ಪರಂಪರೆಯನ್ನು ಬಳಿವಿಡಿದುಕೊಂಡು ಬಂದಂತಹ ಪರಮಪೂಜ್ಯ ಪದ್ಮಭೂಷಣ,ಕರ್ನಾಟಕರತ್ನ, ಡಾ. ಶಿವಕುಮಾರಮಹಾಸ್ವಾಮಿಗಳವರು ಕಾಯಕಯೋಗಿ,ಮನದಲ್ಲಿ ಭಕ್ತಿ,ಮಾತಿನಲ್ಲಿ ಲಿಂಗಕಳೆ,ನಿರುಪಮ ಜ್ಞಾನಿ,ಅನುಭಾವಿ,ಮಾಯ ಮುಟ್ಟದ ತನು,ಮೋಹಸೋಂಕದ ಹೃದಯ, ಮರೆವಿಲ್ಲದ ಮತಿ,ದೇಹದೇವಾಲಯ,ಪ್ರಾಣದೇವ,ಯೋಗಸಿದ್ಧಿಸಾಧಕ,ಮಂತ್ರದಲ್ಲಿ ಪ್ರಣವ ಸಿದ್ಧ,ಧ್ಯಾನದಲ್ಲಿ ಅನಿಮಿಷ,ಲಿಂಗಮಾರ್ಗದಲ್ಲಿ ಶಿವಯೋಗಿ,ಕಣ್ಣಿನಲ್ಲಿ ಕಾರುಣ್ಯ,ನಡೆಯಲ್ಲಿ ನಿಶ್ಚಿಂತತೆ,ಪ್ರಸನ್ನತೆಯೇ ಮೂರ್ತಿಗೊಂಡ ಮಹಂತರು.ಬಸವಣ್ಣನವರು ಹೇಳಿರುವ
"ಕಲ್ಲು ದೇವರು ದೇವರಲ್ಲ ಮರದ ದೇವರು ದೇವರಲ್ಲ
ಕಂಚು ಹಿತ್ತಾಳೆ ತಾಮ್ರಗಳಿಂದ ಮಾಡಿದ ದೇವರು ದೇವರಲ್ಲ
ತನ್ನ ತಾನರಿತು ತಾನಾರೆಂದು ತಿಳಿದಡೆ ತಾನೇ ದೇವರು ಕಾಣಾ
ಕೂಡಲಸಂಗಮದೇವ"
ಎಂಬ ವಚನದಂತೆ ಶ್ರೀಗಳು ತಮ್ಮನ್ನು ತಾವು ಅರಿತು ದೈವತ್ವವನ್ನು ಗಳಿಸಿಕೊಂಡವರು. ಅಧ್ಯಾತ್ಮಚಿಂತನೆಯ ನಿರುಪಮ ಜ್ಞಾನಿ ನಿಜಗುಣ ಶಿವಯೋಗಿಗಳು ಹೇಳಿದ "ಆರುನಾನೆಂದು ವಿಚಾರಿಸು"ಎಂಬ ಮೌಲ್ಯಯುತ ಸಂದೇಶವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದವರು. ಕಥೆಯಾಗಿ ಇಳೆಯಲ್ಲಿ ನೆಲೆಗೊಂಡ ಪುಣ್ಯಾತ್ಮರು, ದಾರ್ಶನಿಕರು.ಬಸವತತ್ವವನ್ನು ತಮ್ಮ ಉಸಿರಾಗಿಸಿಕೊಂಡಿದ್ದ ಮಹಾನುಭಾವರು.ಪೂಜ್ಯರ ಭಕ್ತವೃಂದ ಶ್ರೀಗಳ ಕಾಯಕನಿಷ್ಠೆ, ಸೇವಾಕೈಂಕರ್ಯ,ಸಾಧನೆಯನ್ನು ಕೊಂಡಾಡುವುದರ ಮೂಲಕ ಶ್ರೀಗಳಿಗೆ ನೀಡಿದ ಅಭಿಧಾನಗಳು ಲೆಕ್ಕಕ್ಕೆ ಸಿಗದಷ್ಟು. ಅವುಗಳಲ್ಲಿ ಕೆಲವನ್ನು ಹೆಸರಿಸುತ್ತೇನೆ.
ಚರಜಂಗಮ ಮೂರ್ತಿ,ತ್ರಿವಿಧದಾಸೋಹಮೂರ್ತಿ,ಅಭಿನವ ಬಸವಣ್ಣ,ನಡೆದಾಡುವ ದೇವರು,ಶತಮಾನದ ಶಿವಯೋಗಿ,ಸಿದ್ಧಗಂಗೆಯ ಕೀರ್ತಿಕಲಶ
ಹೀಗೆ ಭಕ್ತವೃಂದ ಪ್ರೀತಿಯಿಂದ,ಅಭಿಮಾನದಿಂದ ಮನದುಂಬಿ ಕರೆದ ಅನಭಿಧಾನಗಳನ್ನು ಶ್ರೀಗಳು ತಮ್ಮ ಕಾಯಕನಿಷ್ಠೆ,ಅನ್ನದಾಸೋಹ,ಜ್ಞಾನ ದಾಸೋಹ,ಆಶ್ರಯ ದಾಸೋಹದಂತಹ ಕೈಂಕರ್ಯಗಳಿಂದ ಸಾರ್ಥಕಪಡಿಸಿಕೊಂಡಿದ್ದಾರೆ.ಸಾಧನೆಯ ಶಿಖರವನ್ನೇರಿದ ಪರಮಪೂಜ್ಯರು ನಿಜಲಿಂಗದೊಳೊಡವೆರೆದು ದೈವತ್ವವನ್ನು ಪಡೆದುಕೊಂಡವರು .ಶ್ರೀಗಳು ಭೌತಿಕವಾಗಿ ನಮ್ಮಿಂದ ಮರೆಯಾಗಿದ್ದರೂ, ಮಾನಸಿಕವಾಗಿ ಎಲ್ಲರ ಆಂತರ್ಯದಲ್ಲಿ ನೆಲೆಯಾಗಿದ್ದಾರೆ. ಶ್ರೀಕ್ಷೇತ್ರದಲ್ಲಿ ಚಿಜ್ಜ್ಯೋತಿಯಾಗಿ ಪ್ರಕಾಶಿಸುತ್ತಿದ್ದಾರೆ.
ಶರಣು ಶರಣಾರ್ಥಿ
*ಮುಡಿಗುಂಡ ಎಸ್.ಪುಟ್ಟಪ್ಪ*
00000000000
38.
ಅವರು ಅಬೋಧ ಮನಸುಗಳಲ್ಲಿ ಅಕ್ಷರ ಪ್ರತಿಷ್ಠಾಪನೆ ಮಾಡಿದ ದಿವ್ಯಚೇತನ!
ಅವರು ಎಲ್ಲ ರೀತಿಯಲ್ಲಿಯೂ ಸಿದ್ದಿಪುರುಷ. ಇದು ಕಲಿಯುಗ, ಇಲ್ಲಿ ಬರೀ ಕೆಟ್ಟದ್ದೇ ಮೆರೆದಾಡುತ್ತದೆ ಎಂಬ ಗೊಣಗಾಟಗಳ ನಡುವಲ್ಲಿಯೂ ಸಾಕ್ಷಾತ್ ದೇವರಂತೆಯೇ ಬದುಕಿದವರು. ಅವರು ಉಪದೇಶ ಕೊಡಲಿಲ್ಲ. ಹೀಗೆಯೇ ಬದುಕಬೇಕೆಂಬ ಪ್ರವಚನಕ್ಕೆ ತಮ್ಮ ಸಮಯವನ್ನ ವ್ಯರ್ಥ ಮಾಡಿಕೊಳ್ಳಲಿಲ್ಲ. ಬಹುಶಃ ಹಾಗಿದ್ದುದರಿಂದಲೇ ಅವರ ಬದುಕಿನ ರೀತಿಯೇ ಮಾದರಿಯಾಗಿ, ಬರೀ ಒಳಿತಿನ ಪಾಠವಾಗುಳಿಯಿತು. ಹೇಳುತ್ತಾ ಹೋದರೆ ಪದಗಳೇ ಸೋತು ಆ ದಿವ್ಯ ಚೇತದನ ಪ್ರಭೆಯ ಮುಂದೆ ಜಡವಾಗಬಹುದೇನೋ... ಇಂಥಾ ದೈವೀಕ ಶಕ್ತಿಯೊಂದರ ಮೂರ್ತರೂಪದೊಂದಿಗೆ ನಮ್ಮೊಂದಿಗೇ ಉಸಿರಾಡುತ್ತಾ ನಮ್ಮೆಲ್ಲರಿಗೂ ಮಾದರಿಯಾಗಿ ಉಳಿದು ಭೌತಿಕವಾಗಿಯಷ್ಟೇ ಮರೆಯಾದವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ...
ಕಾಯಕವೇ ಕೈಲಾಸ ಎಂಬ ಬಸವಣ್ಣನ ತತ್ವ ಶಿವಕುಮಾರ ಸ್ವಾಮೀಜಿಗಳ ನಾಲಗೆಯಲ್ಲಿ ನಲಿದಾಡಲಿಲ್ಲ. ಅದು ಅವರ ಉಸಿರಾಟದಲ್ಲಿಯೇ ಬೆರೆತು ಹೋಗಿತ್ತು. ನಿಜ, ಶಿವಕುಮಾರ ಸ್ವಾಮೀಜಿಯ ಪ್ರಭೆಯನ್ನು ಯಾವುದೇ ಒಂದು ಪರಿಧಿಗೆ ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ. ಅದು ಸರ್ವಾಂತರ್ಯಾಮಿ. ಈ ಬದುಕಿನ ಉದ್ದಗಲಕ್ಕೂ ಚಾಚಿಕೊಳ್ಳುವಷ್ಟು ತೀವ್ರವಾದ ಸ್ಫೂರ್ತಿ ಅವರ ಜೀವನದ ಪುಸ್ತಕದಲ್ಲಿದೆ. ಅದರಲ್ಲಿ ಖುದ್ದು ಶ್ರೀಗಳೇ ಪ್ರಧಾನವಾಗಿ ಪರಿಗಣಿಸಿದ್ದು ಅಕ್ಷರ ದಾಸೋಹವನ್ನು ಎಂಬುದಿಲ್ಲಿ ಉಲ್ಲೇಖಿಸಲೇ ಬೇಕಾದ ವಿಶೇಷ.
ಅಕ್ಷರಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ ಎಂಬ ತತ್ವವನ್ನು ಕಾಯಕದಲ್ಲಿಯೇ ಅಳವಡಿಸಿಕೊಂಡಿದ್ದ ಶಿವಕುಮಾರಸ್ವಾಮೀಜಿ ಶಿಕ್ಷಣ ರಂಗದ ಮೌನಕ್ರಾಂತಿಯೊಂದರ ಪ್ರವರ್ತಕರೆಂಬುದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಒಂದು ಮಠದ ಸ್ವಾಮೀಜಿಯಾಗಿದ್ದುಕೊಂಡು ನಿಜಕ್ಕೂ ಮಾಡಬೇಕಾದ ತುರ್ತಿನ ಕೆಲಸ ಯಾವುದೆಂಬುದಕ್ಕೆ ಶ್ರೀಗಳ ಜೀವನ ಕ್ರಮಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಸ್ಪರ್ಧಾತ್ಮಕ ಜಗತ್ತಿನ ಕಾಸಿನಾಟದಲ್ಲಿ ಗೆಲ್ಲಲಾಗದೆ ಯಾರದ್ದೋ ಹೊಲದಲ್ಲಿ ಕೂಲಿನಾಲಿ ಮಾಡಬೇಕಾಗಿದ್ದ ಅದೆಷ್ಟೋ ಜೀವಗಳು ಶ್ರೀಗಳ ನೆರಳಲ್ಲಿ ಅಕ್ಷರ ಕಲಿತಿವೆ. ಶ್ರೀಮಠದ ಶಿಕ್ಷಣ ಸಂಸ್ಥೆಗಳಿಂದ ಅದೆಷ್ಟೋ ಲಕ್ಷ ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ. ಇಂಥಾ ಎಲ್ಲ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಅಕ್ಷರ ದಾಸೋಹದಲ್ಲಿಯೇ ಸಾರ್ಥಕ್ಯ ಕಂಡ ಶಿವಕುಮಾರ ಸ್ವಾಮೀಜಿ ನಿಜವಾದ ಅಕ್ಷರಬ್ರಹ್ಮ.
ಸ್ವಾಮೀಜಿ ಒಂದು ಅನಿರೀಕ್ಷಿತ ಘಳಿಗೆಯಲ್ಲಿ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ನೇಮಕ ಗೊಂಡವರು. ತದ ನಂತರ ಇಡೀ ಮಠದ ಜವಾಬ್ದಾರಿ ಅವರ ಎಳೇಢ ಹೆಗಲ ಮೇಲೆ ಬಿದ್ದಾಗ ಆ ಕಾಲದಲ್ಲಿ ಮಠದ ಸಾಂಗತ್ಯದಲ್ಲಿದ್ದವರಿಗೆ ಒಂದು ಥರದ ಅನುಮಾನ ಕಾಡಿತ್ತಂತೆ. ಎಳೇ ವಯಸ್ಸಿನ ಶ್ರೀಗಳು ಈ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂಬುದರ ಬಗ್ಗೆಯೇ ಅನುಮಾನವಿತ್ತಂತೆ. ಹೇಳಿಕೇಳಿ ಮಠಕ್ಕಿದ್ದ ಭೂಮಿಯೂ ಮಳೆಯಾಧಾರಿತವಾದದ್ದು. ಇಂಥಾ ಕಾಲಘಟ್ಟದಲ್ಲಿ ಭಕ್ತರ ಮನೆಗಳಿಗೆ ನಡೆದೇ ವತೆರಳಿ ದವಸ ಧಾನ್ಯಗಳನ್ನು ಸಂಗ್ರಹಿಸಿ ತಂದು ಅಕ್ಷರ ಕ್ರಾಂತಿಗೆ ಶ್ರೀಕಾರ ಹಾಡಿದ್ದು ಶ್ರೀಗಳ ಹೆಗ್ಗಳಿಕೆ.
ಇಂಜಿನಿಯರಿಂಗ್, ವಿಜ್ಞಾನ, ಕಲೆ ಸೇರಿದಂತೆ ಶ್ರೀಗಳು ನೋಡ ನೋಡುತ್ತಲೇ ನೂರಾರು ವಿದ್ಯಾಸಂಸ್ಥೆಗಳಿಗೆ ಚಾಲನೆ ನೀಡಿದರು. ಅದೆಷ್ಟೋ ಲಕ್ಷ ವಿದ್ಯಾರ್ಥಿಗಳ ಹಣೆಬರಹವೇ ಬದಲಾಗುವಂತೆ ನೋಡಿಕೊಂಡರು. ಅದೆಷ್ಟೇ ಬುದ್ಧಿವಂತಿಕೆ ಇದ್ದರೂ ಕೂಡಾ ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯಲ್ಲಿ ನಿಲ್ಲಲಾಗದ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರಿದ್ದಾರೆ. ಅಂಥವರಿಗೆಲ್ಲ ಆಶಾಕಿರಣವಾಗಿ ಇಂದು ಸಿದ್ದಗಂಗಾ ಮಠದ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಬ್ಬರ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಧಾರ್ಮಿಕ ವಲಯದ್ದೊಂದು ಪಾತ್ರವಿದೆ. ಅದನ್ನು ಎಷ್ಟು ಬೇಕೋ ಅಷ್ಟು ಸದಾ ಬೆಳಕಾಗಿರುವಂತೆ ಪ್ರತೀ ವಿದ್ಯಾರ್ಥಿಗಳ ಎದೆಯಲ್ಲಿಯೂ ಅಕ್ಷರ ಜ್ಯೋತಿಯನ್ನ ಹಚ್ಚಿಟ್ಟಿದ್ದು ಶ್ರೀಗಳ ಹೆಗ್ಗಳಿಕೆ. ಈ ಜ್ಯೋತಿ ಅದೆಷ್ಟೋ ಜನರ ಬದುಕು ಬೆಳಗುತ್ತಿದೆ. ಸ್ಫೂರ್ತಿಯಾಗ ಉದ್ದಗಲಕ್ಕೂ ಹರಡಿಕೊಳ್ಳುತ್ತಿವೆ.
ಶಿಕ್ಷಣ ಅಂದರೆ ವ್ಯಾಪಾರವಲ್ಲ. ಅದು ಬದುಕು ಬೆಳಗಿಸೋ ಪವಿತ್ರ ಕಾಯಕ ಎಂಬುದನ್ನ ಶ್ರೀಗಳು ಬದುಕಿನ ಕ್ರಮವಾಗಿಸಿಕೊಂಡಿದ್ದರು. ಅವರು ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಡೇಯವರೆಗೂ ಕಣ್ಣಲ್ಲಿ ಕಣ್ಣಿಟ್ಟು ಸಲಹಿದರು. ಪ್ರತೀ ವಿದ್ಯಾರ್ಥಿಗಳ ಅನ್ನ, ಅಕ್ಷರ ದಾಸೋಹವೇ ನಿಜವಾದ ಧರ್ಮ ಎಂಬುದನ್ನು ಮನಗಂಡು ಅದರಂತೆಯೇ ಜೀವಿಸಿದರು. ಅವರ ದೇಖಾರೇಖಿಯಲ್ಲಿ ಮುನ್ನಡೆದ ಮಠದ ಶಿಕ್ಷಣ ಸಂಸ್ಥೆಗಳೆಲ್ಲವೂ ಎಲ್ಲ ಕಾಲಕ್ಕೂ ಮಾದರಿ. ಅವ ಉಗಳೊಳಗೆ ಅಕ್ಷರ ದಾಸೋಹದ ಪಾವಿತ್ರ್ಯಕ್ಕೆ ಸಜೀವ ಉದಾಹರಣೆಗಳಿವೆ. ಶಿಕ್ಷಣ ನೀಡುವುದೂ ಕೂಡಾ ಒಂದು ದೈವೀಕವಾದ ಕಾಯಕ ಎಂಬುದಕ್ಕೆ ಶ್ರೀಗಳ ಹೆಜ್ಜೆ ಗುರುತುಗಳಲ್ಲಿಯೇ ಸ್ಪಷ್ಟವಾದ ಸಂದೇಶಗಳಿವೆ.
ಅವರೆಂದೂ ತಾವು ಮಾಡೋ ಕೆಲಸದ ಬಗ್ಗೆ ಮಾತಾಡಲಿಲ್ಲ. ತಮ್ಮ ಶಿಕ್ಷಣ ಸಂಸ್ಥೆಗಳ ಅನುದಾನಕ್ಕಾಗಿ ಕಾಯಲೂ ಇಲ್ಲ. ಭಕ್ತಗಣದ ಭಯ ಭಕ್ತಿಯಿಂದ ಕೊಟ್ಟ ಎಲ್ಲ ರೂಪದ ಕಾಣಿಕೆಯನ್ನೂ ಕೂಡಾ ಅಕ್ಷರ ದಾಸೋಹದ ಮೂಲವಾಗಿಸಿಕೊಂಡರು. ಪುಟ್ಟ ಮನಸುಗಳ ಅಬೋಧ ಚಿತ್ತದಲ್ಲಿ ಅಕ್ಷರಗಳನ್ನು ಪ್ರತಿಷ್ಠಾಪಿಸುವುದನ್ನೇ ಪೂಜೆಯಂದುಕೊಂಡರು. ನೂರಾ ಹನ್ನೊಂದು ವರ್ಷಗಳ ಅವರ ಸಂಪೂರ್ಣ ಜೀವನ ಈ ಅನ್ನ, ಅಕ್ಷರ ದಾಸೋಹಗಳಿಂದಲೇ ಸಂಪನ್ನವಾಗಿದೆ. ಅದು ಯಾವತ್ತಿಗೂ ಅಸೀಮ ಸ್ಫೂರ್ತಿಯಾಗಿ ತಲೆಮಾರುಗಳಾಚೆಗೂ ಜೀವಂತವಾಗಿರುತ್ತದೆ.
ಶಿಸ್ತು, ಸ್ವಾರ್ಥರಹಿತ ಜೀವನ ಕ್ರಮಗಳಿಂದಲೇ ಸಾರ್ಥಕವಾಗಿ ಬದುಕಿದ್ದ ಶ್ರೀಗಳು ನಮ್ಮ ಕಾಲ ಘಟ್ಟದಲ್ಲಿ ಇದ್ದರೆಂಬುದೇ ನಾವೆಲ್ಲ ಹೆಮ್ಮೆ ಪಡುವಂಥಾ ವಿಚಾರ. ಅಕ್ಷರ ಕಲಿಸೋ ಶಿಕ್ಷಕ ವೃತ್ತಿಗೆ, ಶಿಕ್ಷಣ ರಂಗಕ್ಕಂತೂ ಅವರು ಅಜರಾಮರ ಚೇತನ. ಅವರ ಬಗ್ಗೆ ಮಾತಾಡುವುದಕ್ಕಿಂತಲೂ ನಮ್ಮ ನಮ್ಮ ಮಿತಿಯಲ್ಲಿಯೇ ಅವರು ಹಚ್ಚಿಟ್ಟ ಅಕ್ಷರದ ಹಣತೆಯನ್ನು ಸಾಧ್ಯವಾದಷ್ಟು ವಿಸ್ತಾವಾಗಿಸಲು ಪ್ರಯತ್ನಿಸುವುದೇ ಶ್ರೀಗಳಿಗೆ ಸಲ್ಲಿಸಬಹುದಾದ ನಿಜವಾದ ಗೌರವ.
-ಸವಿತಾ ಬಾಗಿಲಗದ್ದೆ
ಕನ್ನಡ ಭಾಷಾ ಸಹಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಹುಡ್ಕೋ ಬನ್ನಿಮಂಟಪ ಮೈಸೂರು.
000000000000000
39.
ಸಿದ್ಧಗಂಗೆ
ಸಿದ್ಧಗಂಗೆ ಇದು ಒಂದು ಶುದ್ಧಗಂಗೆ. ದಶಕಗಳಿಂದ ಉರಿಯುತ್ತಿರುವ ಅಡುಗೆಯ ಒಲೆ ಆರಿಲ್ಲ. ಬೆಳಗುತ್ತಿರುವ ಜ್ಞಾನಜ್ಯೋತಿ ನಂದಿಲ್ಲ, ದುಡಿಯುವ ಕೈಗಳು ಕೆಲಸ ನಿಲ್ಲಿಸಿಲ್ಲ. ಅಹಂಕಾರ, ಸ್ವಜಾತಿಪ್ರೇಮ, ಸ್ವಪ್ರತಿಷ್ಠೆಗಳಿಲ್ಲದ ಇದೊಂದು ಮಹಾಮನೆ. ದಾಸೋಹದ ಅರ್ಥವನ್ನು ಕಾರ್ಯರೂಪಕ್ಕೆ ತಂದಿರುವ ಪುಣ್ಯಭೂಮಿ. ಪ್ರಸ್ತುತ ಈ ಕ್ಷೇತ್ರ ಧರ್ಮಕ್ಷೇತ್ರ, ಅನ್ನಕ್ಷೇತ್ರ, ಪುಣ್ಯಕ್ಷೇತ್ರವಾಗಿದೆ ಮತ್ತು ಅಕ್ಷರದಾಸೋಹದ ತಾಣ. ಈ ಪುಣ್ಯಕ್ಷೇತ್ರದ ರೂವಾರಿ ತ್ರಿವಿಧ ದಾಸೋಹಿ, ಕರ್ನಾಟಕರತ್ನ, ಪದ್ಮಭೂಷಣ, ನಡೆದಾಡುವ ದೇವರು, ಶತಾಯುಷಿ ಡಾ|| ಶ್ರೀ ಶ್ರೀ ಶಿವಕುಮಾರಮಹಾಸ್ವಾಮಿಗಳು. ಸಂನ್ಯಾಸದ ಅರ್ಥವನ್ನು ಮುಗಿಲೆತ್ತರಕ್ಕೆ ತಲುಪಿಸಿದ ಮಹಾಪುರುಷರು. ಸೇವೆಯೇ ಪೂಜೆ, ಮಾನವ ಕಲ್ಯಾಣವೇ ಮಂತ್ರ, ಹೃದಯ ಶ್ರೀಮಂತಿಕೆ, ಅರ್ಪಣಾ ಮನೋಭಾವ ಮತ್ತು ಶುದ್ಧ ಕಾಯಕದ ಮಹಾತಪಸ್ವಿಗಳು.
ಎಪ್ಪತ್ತೇಳು ವರ್ಷ ವಯಸ್ಸಿನ ರಾಜಶೇಖರಯ್ಯನಾದ ನಾನು ಈ ಪುಣ್ಯಕ್ಷೇತ್ರದ 1961ರ ಇಸವಿಯ ಹಳೆಯವಿದ್ಯಾರ್ಥಿ. ಗುರುಗಳ ದರ್ಶನ, ಸ್ಪರ್ಶ, ಮಾರ್ಗದರ್ಶನ ಪಡೆದ ನಾನೇ ಪುಣ್ಯವಂತ. ಅಷ್ಟೇ ಏಕೆ ಈ ತ್ರಿವಿಧ ದಾಸೋಹದಿಂದ ಇಡೀ ನನ್ನ ಕುಟುಂಬವೇ ಆರೋಗ್ಯ ಮತ್ತು ನೆಮ್ಮದಿಯ ಜೀವನ ನಡೆಸುತ್ತಿದೆ. ಹತ್ತಾರು ಜನಕ್ಕೆ ದಾಸೋಹ ನೀಡುವ ಶಕ್ತಿಯನ್ನು ಕೊಟ್ಟಿದೆ. ಸಂಸ್ಕಾರವನ್ನು ನೀಡಿದೆ, ಕಾಯಕದ ಅರ್ಥವನ್ನು ತಿಳಿಸಿದೆ. ನಿಸ್ವಾರ್ಥ, ಪರೋಪಕಾರ, ಗೌರವ, ಶ್ರದ್ಧೆ, ಭಕ್ತಿ, ಸಂಯಮ ಇತ್ಯಾದಿ ಮಾನವ ದೈನಂದಿನ ಜೀವನದ ಮಾರ್ಗಗಳನ್ನು ತಿಳಿಸಿದೆ. ನನ್ನ ಪ್ರಕಾರ ಈ ಮಠವು
ಉದರ ತಣಿಸಿ ಮಿದುಳ ಬೆಳಸಿ
ಮಲಿನ ಮನದ ಮುಸುಕ ಹರಿಸಿ
ಜಾತಿಯಳಿಸಿ ಜನತೆ ಹರಸಿ
ಜ್ಯೋತಿಯಾಗಿ ಬೆಳಗುತಿದೆ ಸಿದ್ಧಗಂಗೆ
ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಂತೋಷವಾಗುತ್ತದೆ. ಪೂಜ್ಯಶ್ರೀಗಳು ಪಂಚಾಭರಣದ ಪುಣ್ಯಜೀವಿಗಳು. ಕಾವಿ, ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗ ಮತ್ತು ಪಾದರಕ್ಷೆಗಳನ್ನು ಬಿಟ್ಟರೆ ಮತ್ಯಾವ ಬೆಲೆಬಾಳುವ ಲೋಹಗಳಿಲ್ಲ. ಸಪ್ಪೆಊಟ, ಬೇವಿನ ಕಷಾಯ, ನೀರು ಮಜ್ಜಿಗೆ ಇವರಿಗೆ ಬಲುಪ್ರಿಯ. ಮಠದ ಮಕ್ಕಳೇ ಇವರಿಗೆ ದೇವರು. ಮಕ್ಕಳು ಊಟ ಮಾಡುವುದನ್ನು ನೋಡಿ ಬಹುಸಂತೋಷಪಡುವ ಏಕೈಕ ತಂದೆ ಶ್ರೀ ಶಿವಕುಮಾರಸ್ವಾಮಿಗಳು.
ಶ್ರೀಗಳು ಮಠಕ್ಕಾಗಿ ಬೇಸಾಯ ಮಾಡಿದ್ದಾರೆ, ಸೌದೆ ಹೊಡೆದಿದ್ದಾರೆ, ಕಣದ ಕೆಲಸ ಮಾಡಿದ್ದಾರೆ, ಅಡುಗೆ ಮಾಡಿ ಮಕ್ಕಳಿಗೆ ಬಡಿಸಿದ್ದಾರೆ, ಕಾಲ್ನಡಿಗೆಯಲ್ಲಿ ಭಕ್ತರ ಮನೆಯಲ್ಲಿ ಪೂಜೆ ಮಾಡಿದ್ದಾರೆ, ಬಾಯ್ಬಿಟ್ಟು ಸಹಾಯವನ್ನು ಕೇಳಿಲ್ಲ, ಮಠಕ್ಕೆ ಯಾರೇ ಬಂದರೂ ಪ್ರಸಾದ ಮಾಡಿ ಎಂದು ಹೇಳುವುದನ್ನು ಬಿಟ್ಟಿಲ್ಲ. ಎರಡಂಕಿಯ ಮಕ್ಕಳ ಸಂಖ್ಯೆಯಿಂದ ಪ್ರಾರಂಭವಾದ ಇಂದು ಐದಂಕಿಯವರೆಗೆ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ಕಾರಣ ಅವರ ಗುರುಗಳ ಆಶೀರ್ವಾದ. ಶ್ರೀಗಳ ದೈವಶಕ್ತಿ, ಕಾಯಕನಿಷ್ಠೆಯ ಪೂಜಾಫಲ.
ಗ್ರಾಮೀಣ ಮಕ್ಕಳು ವಿದ್ಯಾವಂತರಾಗಬೇಕು, ಜನರಲ್ಲಿ ದೈವಭಕ್ತಿ ಉಂಟಾಗಬೇಕು, ಹೆಣ್ಣುಮಕ್ಕಳು ಶಿಕ್ಷಿತರಾಗಬೇಕು. ದಾಸೋಹ ಬರೀ ಶಬ್ದವಾಗದೆ ಕಾರ್ಯರೂಪಕ್ಕೆ ಬರಬೇಕು ಎಂಬುದನ್ನು ಮಾಡಿ ತೋರಿಸಿದ ಶ್ರೀಗಳು 111 ವರ್ಷ ಬದುಕಿ ಸಾರ್ಥಕಪಡಿಸಿದ್ದಾರೆ. ಮಠಕ್ಕೆ ಯಾವುದೇ ಕೊರತೆಯಿಲ್ಲ. ಎಲ್ಲವನ್ನೂ ಕಲ್ಪಿಸಿದ್ದಾರೆ. ಇಂತಹ ಮಠವನ್ನು ನಾವು ಬೆಳೆಸಬೇಕು, ಬಳಸಬೇಕು ಮತ್ತು ಉತ್ತರೋತ್ತರ ಮಠದ ಏಳಿಗೆಗಾಗಿ ಸಹಕರಿಸಬೇಕು. ಶ್ರೀ ಶಿವಕುಮಾರಮಹಾಸ್ವಾಮಿಗಳು ಮಾನವರೂಪದ ದೇವರು. ಆಧುನಿಕ ಬಸವಣ್ಣ, ನುಡಿದಂತೆ ನಡೆದಿದ್ದಾರೆ, ನಡೆದಂತೆ ನುಡಿಯಬೇಕೆಂದು ಶ್ರೀವಾಣಿಗಳನ್ನು ಕೊಟ್ಟಿದ್ದಾರೆ. ತಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋದವರನ್ನು ಕ್ಷಮಿಸಿದ್ದಾರೆ. ಅರಿವಿನ ಗುರುವಾಗಿದ್ದಾರೆ.
`ಧರೆಯಲ್ಲಿ ಹರಿಯಲಿ ಬಸವ ತತ್ವಗಳು
ಮನದಲ್ಲಿ ಅರಳಲಿ ವಚನದರ್ಥಗಳು’
ಎಂಬಂತೆ ನಡೆದಿದ್ದಾರೆ. ಶ್ರೀಗಳು ಪಾದವಿಟ್ಟ ಮನೆಮಂದಿರಗಳು ಇಂದಿಗೂ ಸುಖ, ಶಾಂತಿ, ನೆಮ್ಮದಿಯಿಂದ ಬೆಳೆಯುತ್ತಿವೆ. ಇಂದು ಶ್ರೀಕ್ಷೇತ್ರದ ಹಳೆಯ ವಿದ್ಯಾರ್ಥಿಗಳು ವಿಶ್ವದ ಎಲ್ಲಾ ಭಾಗಗಳಲ್ಲೂ ಇದ್ದಾರೆ. ಉನ್ನತ ಸ್ಥಾನದವರೂ ಪಡೆಯದವರೂ ವರ್ಷಕ್ಕೊಂದು ಬಾರಿ ಕ್ಷೇತ್ರಕ್ಕೆ ಬಂದು ತವರಿನ, ಬೆವರಿಗೆ ರುಚಿಯನ್ನು ಪಡೆಯುತ್ತಿದ್ದಾರೆ. ದಾಸೋಹಕ್ಕೆ ದಾನದ ಹೊಳೆಯನ್ನೇ ಹರಿಸುತ್ತಿದ್ದಾರೆ. ಒಮ್ಮೊಮ್ಮೆ ಶ್ರೀಗಳೇ ಹೇಳುತ್ತಾರೆ ಮಠದ ಕಾರ್ಯಗಳು ಹೇಗೆ ನಡೆಯುತ್ತವೆ ಎಂಬುದನ್ನು ಕ್ಷೇತ್ರದ ಆದಿದೈವ ಶ್ರೀ ಸಿದ್ಧಲಿಂಗೇಶ್ವರನಿಗೆ ಮಾತ್ರ ಗೊತ್ತು. ಶ್ರೀಕ್ಷೇತ್ರದ ಫಲಾನುಭವಿಗಳಲ್ಲಿ ಈ ಗುಣಗಳನ್ನು ಕಾಣಬಹುದು.
ಎಲೆಯಲ್ಲಿ ಅಥವಾ ತಟ್ಟೆಯಲ್ಲಿ ಪ್ರಸಾದ(ಊಟ) ಬಿಟ್ಟಿರುವುದಿಲ್ಲ.
ತಮ್ಮ ಗಳಿಕೆಯಲ್ಲಿ ಕೊಂಚವಾದರೂ ಮಠಕ್ಕೆ ಕೊಡುತ್ತಾರೆ.
ಶ್ರೀಗಳಿಗೆ ದುಃಖ, ಸಂಕಟ, ನೋವು ಉಂಟಾದರೆ ತಾವೂ ಅನುಭವಿಸುತ್ತಾರೆ.
ಹಸಿದು ಬಂದವರಿಗೆ ಅನ್ನ ನೀಡುವ ಗುಣ ಹೊಂದಿರುತ್ತಾರೆ.
ಸೇವಾಮನೋಭಾವ ಹೊಂದಿರುತ್ತಾರೆ.
ಈ ಮೇಲಿನ ಐದು ಗುಣಗಳು ಯಾರಲ್ಲಿ ಕಾಣುತ್ತೇವೋ ಅವರು ಶ್ರೀ ಸಿದ್ಧಗಂಗೆಯ ಫಲಾನುಭವಿಗಳು ಎಂದು ಸಂಕೋಚವಿಲ್ಲದೆ ಹೇಳಬಹುದು. ಕ್ಷೇತ್ರದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳಲು ಕ್ಷೇತ್ರದ ಪುಸ್ತಕಮಳಿಗೆಯಲ್ಲಿ `ಶ್ರೀ ಸಿದ್ಧಗಂಗಾ ಸಂಕ್ಷಿಪ್ತ ಪರಿಚಯ ಮತ್ತು ಶ್ರೀಗಳವರ ಸಾಧನೆಗಳು’ ಲೇಖಕರು : ರಾಜಶೇಖರಯ್ಯ ಎಂಬ ಪುಸ್ತಕದಲ್ಲಿ ದೊರೆಯುತ್ತದೆ.
`ಹುಟ್ಟು ಖಚಿತ, ಸಾವು ಖಚಿತ’ ಎಂಬಂತೆ ಶ್ರೀಗಳು 111 ವರ್ಷ ಸಾರ್ಥಕ ಜೀವನ ನಡೆಸಿ, ಸಮಾಜಕ್ಕೆ ಮಾದರಿಯಾಗಿ, ಗುರುಗಳಾಗಿ, ದೇವರಾಗಿ ದಿನಾಂಕ 21-01-2019ರಂದು ಲಿಂಗೈಕ್ಯರಾಗಿರುವುದು ಲಕ್ಷಾಂತರ ಮಂದಿಗೆ ನೋವುಂಟಾಗಿದೆ. ಆದರೆ ಭಕ್ತರೆಲ್ಲರ ಮನೆಯಲ್ಲಿ, ಮನದಲ್ಲಿ ಪೂಜ್ಯರ ಕೃಪಾಶೀರ್ವಾದ ಜ್ಯೋತಿಯಾಗಿ ಬೆಳಗುತ್ತಿರುವುದನ್ನು ನಾವೆಲ್ಲರೂ ಮರೆಯುವಂತಿಲ್ಲ. ಪೂಜ್ಯರು ದೇವರಾಗಿದ್ದಾರೆ ಎಂಬುದಕ್ಕೆ ಜನಪದ ಗ್ರಾಮೀಣ ಭಾಷೆಯ ಈ ಕವನದಲ್ಲಿ ಕಾಣಬಹುದು
ದೇವ್ರೈತೆ ನೋಡ್ಬನ್ರಿ ಸಿದ್ಗಂಗೇಲಿ
ಬಿಡುವಿಲ್ದೆ ದುಡಿತಿತ್ತು ಜನ್ರಿಗಾಗಿ
ಜೋಳಿಗೆ ಹಿಡ್ದು ಭಿಕ್ಷಾನ ಮಾಡಿ
ಲಕ್ಷಾಂತ್ರ ಮಕ್ಳಿಗೆ ವಿದ್ಯಾನ ಕಲ್ಸಿ
ಭೇದಾವ್ನ ಮಾಡ್ದೆ ಜಾತೀಯ ಎಣಿಸ್ದೆ
ದಿಕ್ಕಿಲ್ದ ಮಕ್ಳಿಗೆ ದೇವ್ರಾಗಿತ್ತು
ಪದವಿಯ ಪಡೆದು ಬೇಸಾಯ ಮಾಡಿ
ಓದೋಕೆ ಭವನ್ಗಳ್ನ ಕಟ್ಸೈತ್ರಿ
ಸಂನ್ಯಾಸಿಯಾದ್ರೂ ಶಾಲೆಗಳ್ನ ತೆರ್ದು
ತರತರಾ ಶಿಕ್ಷಣ ಹರಡೈತ್ರಿ
ಮಂತ್ರಾವ್ನ ಹಾಕ್ತಿತ್ತು ಯಂತ್ರಾವ್ನ ಕಟ್ತಿತ್ತು
ಬಂದಂತ ಜನ್ರಿಗೆ ನೆಮ್ದಿನಾ ಕೊಟ್ತಿತ್ತು
ಜಾತ್ರೆನಾ ಮಾಡ್ಸಿ ಉತ್ಸಾವ್ನ ನಡ್ಸಿ
ದಾಸೋಹದರ್ಥವಾ ತಿಳಿಸಿದ್ರು
ನೂರನ್ನೊಂದರ ಈ ನಮ್ಮಪ್ಪ
ಗದ್ಗೇಲಿ ಚಿರಶಾಂತಿ ಪಡಿತೈತ್ರಿ
ದರ್ಶನಾ ಮಾಡ್ಬನ್ನಿ ಕಣ್ತುಂಬ ನೋಡ್ಬನ್ನಿ
ಈ ಭಾಗ್ಯ ಇನ್ನೆಂದೂ ಸಿಗದಿಲ್ರಿ.
ಶ್ರೀಕ್ಷೇತ್ರದ ಉತ್ತರಾಧಿಕಾರಿಯಾಗಿರುವ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿಯವರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಅಣತಿಯಂತೆ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ. ಇರುವ ಕಿರಿಯ ಶ್ರೀಗಳಲ್ಲಿ ಹಿರಿಯ ಶ್ರೀಗಳನ್ನು ಕಂಡು ಮನ ತಣಿಸಿಕೊಳ್ಳೋಣ. ತ್ರಿವಿಧ ದಾಸೋಹ ಎಂದಿನಂತೆ ಮುಂದುವರಿಯಲಿ. ಸಹಾಯ ಸಹಕಾರ ನೀಡೋಣ. ಸಮಾಜಕ್ಕೆ ನಿರಂತರ ಆಶೀರ್ವಾದ ಕೃಪಾಕಟಾಕ್ಷವಿರಲೆಂದು ಕ್ಷೇತ್ರನಾಥ ಶ್ರೀ ಸಿದ್ಧಲಿಂಗೇಶ್ವರನಲ್ಲಿ ಪ್ರಾರ್ಥಿನೆ ಸಲ್ಲಿಸೋಣ.
ರಾಜಶೇಖರಯ್ಯ
ನಿವೃತ್ತ ಪ್ರಾಂಶುಪಾಲರು, ನಂ. 1128, 36ನೇ ಕ್ರಾಸ್,
ಎಸ್.ಐ.ಟಿ. ಮುಖ್ಯರಸ್ತೆ, ತುಮಕೂರು-572 103.
೦೦೦೦೦೦೦೦೦೦೦
40.
ಕಾಯಕಯೋಗಿ ಡಾ. ಶಿವಕುಮಾರ ಶ್ರೀಗಳು
(1908----2019)
ಕರ್ನಾಟಕ ರತ್ನ, ನಡೆದಾಡುವ ದೇವರು, ತ್ರೀವಿಧ ದಾಸೋಹಿ, ಕಾಯಕ ಮೂರ್ತಿ,, ಶರಣ ಸಂಸ್ಕೃತಿಯ ಚೇತನ, ದೇಶ, ರಾಜ್ಯ ಸುಭಿಕ್ಷೆ ಚಿಂತಕರು, ಬಸವ ತತ್ವ ಪರಿಪಾಲಕರು,ಆದ, ಪೂಜ್ಯ ಶ್ರೀ, ಶ್ರೀ ಶಿವಕುಮಾರ, ಮಹಾಸ್ವಾಮಿಗಳು,ಹನ್ನೆರಡನೇಯ ಶತಮಾನದಲ್ಲಿ ವಚನ ಕ್ರಾಂತಿಯ ಹರಿಕಾರ , ಧಮ೯ಗುರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಘನ ಸಂದೇಶವನ್ನು ನಿರಂತರವಾಗಿ ತಮ್ಮ ಜೀವನದಲ್ಲಿ ಕಾಯಕ ನಿತ್ಯಸತ್ಯದಂತೆ ಅಳವಡಿಸಿಕೊಂಡವರು. ಸಮಾಜದಲ್ಲಿಶಿಸ್ತುಬದ್ದ ಜೀವನ ಬದ್ದತೆಯ ಬದುಕು ಬದುಕಿನ ಬೆಳಕು. ಸ್ವಾಥ೯ರಹಿತ ಸೇವೆ ಮಾಡುವ ಮನುಷ್ಯನನ್ನು ದೇವರೆಂದು ಕರೆಯಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪೂರ ಎಂಬ ಪುಟ್ಟ ಗ್ರಾಮದಲ್ಲಿ ತಂದೆಹೊನ್ನಪ್ಪ ಮತ್ತು ತಾಯಿ ಗಂಗಮ್ಮ ಅವರ ಪುಣ್ಯ ಗಭ೯ದಲ್ಲಿ ಜನಿಸಿದವರೇ
ಶ್ರೀ ಗಳ ಹಿನ್ನೆಲೆ--
(1907ರ ಏಪ್ರಿಲ್ 1ರಂದು ಹೊನ್ನೆಗೌಡ --ಗಂಗಮ್ಮ ದಂಪತಿಯ, ಹದಿಮೂರನೇ ಮಗನಾಗಿ ಜನಸಿದರು.) 1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆ.
1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ. & 1930 : ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾದ ಶಿವಣ್ಣ -1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ. ಗುರುಗಳ ಪೂರ್ವಾನುಗ್ರಹ ಹಾಗೂ ಶಿವಕುಮಾರ ಸ್ವಾಮಿಗಳೆಂದು ನೂತನ ನಾಮಧೇಯ.
1941: ಜ.11ರಂದು ಶ್ರೀ ಉದ್ಧಾನಶಿವಯೋಗಿ ಸ್ವಾಮೀಜಿ ಲಿಂಗೈಕ್ಯರಾದ ನಂತರ ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.,1941ರಲ್ಲಿ ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದಾಗ ಮಠದಲ್ಲಿ ಕೇವಲ 300 ರೂಪಾಯಿ, 16 ಎಕರೆ ಖುಷ್ಕಿ ಜಮೀನುಮಾತ್ರವಿತ್ತು, ಆದರೆ ಇಂದು ಮಠದ ಸಾರ್ವಜನಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. (ಇದರಲ್ಲಿ ಶ್ರೀಗಳ ಶ್ರಮ ಅನನ್ಯ.)
ಮಠದಲ್ಲಿ --
ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆ ತಪ್ಪದೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ಇಷ್ಟಲಿಂಗ ಪೂಜೆಯನ್ನು ತಪ್ಪಸ್ಸಿನಂತೆ ಮಾಡಿಕೊಂಡು ಬರುತ್ತಿದ್ದರು.-ಇತಿ ಮಿತಿ ಆಹಾರ ಸೇವನೆ ಮೂಲಕ ಸ್ವಸ್ಥ ಆರೋಗ್ಯ ಶ್ರೀಗಳು ಕಾಪಾಡಿಕೊಂಡಿದ್ದರು.-ಪ್ರತಿನಿತ್ಯ ಚಾಚೂತಪ್ಪದೆ ಬರಿಗಣ್ಣಿನಿಂದ ದಿನಪತ್ರಿಕೆ ಓದುತ್ತಿದ್ದರು. ಪ್ರಾಪಂಚಿಕ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳುವ ಹಸಿವನ್ನು ಸಿದ್ದಗಂಗಾ ಶ್ರೀಗಳು ಹೊಂದಿದ್ದರು.
ಯಾವುದೇ ಪದವಿಗಳಿಂದ ಬದಲಾಗದ ಸಂತ ಶ್ರೇಷ್ಠ ಎಂದರೆ ಲಿಂಗೈಕ್ಯ ಶಿವಕುಮಾರ ಶ್ರೀಗಳು, ಜಾತಿ , ಮತ , ಪಂಥ ಕುಲವೆನ್ನದೇ ಸವ೯ರನ್ನೂ ಪ್ರೀತಿಸುವ ಮಠವೆಂದರೆ ಕನ್ನಡ ನಾಡಿನಲ್ಲಿ ಅನೇಕ ಮಠಮಾನ್ಯಗಳಿವೆ ಅಂತಹ ಮಠಗಳಲ್ಲಿತುಮಕೂರಿನ ಸಿದ್ದಗಂಗಾ ಸಂಸ್ಥಾನ ಮಠವು ಒಂದು. ಪ್ರತಿದಿನ ನಿತ್ಯ ತಾವು ಮಾಡುವ ಕಾಯಕದಲ್ಲಿ ಭಗವಂತನನ್ನು ಕಾಣುವರು. ಉನ್ನತ ವಿದ್ಯಾಭ್ಯಾಸಕ್ಕಿಂತ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಆದತ್ಯೆ ನೀಡಿ ಬಡ , ಮಧ್ಯಮ , ವಗ೯ದಸಾವಿರಾರು ವಿದ್ಯಾಥಿ೯ಗಳಿಗೆ ಅನ್ನ ದಾಸೋಹ ವಿದ್ಯೆಯನ್ನು ನೀಡಿದ್ದಾರೆ. ಸಾಗರದಂತೆ ಬದುಕಿನುಕ್ಕೂ ಅಪಾರವಾದ ಜ್ಞಾನವನ್ನು ಹೊಂದಿದವರು. ಸಮಾಜದಲ್ಲಿ ಸಕಲರನ್ನು ಸ್ವಾತಿಕ ಬದುಕಿನ ಬೆಳಕಿಗೆ ಆಕಷಿ೯ಸುತ್ತಿರುವ ಯೋಗಿ ಎಂದರೆ ಲಿಂಗೈಕ್ಯಶಿವಕುಮಾರ ಶಿವಯೋಗಿಗಳು. ದಣಿವರಿಯದ ಸಮಾಜಮುಖಿ ಚೇತನ. ಲಕ್ಷಾಂತರ ಭಕ್ತರಿಗೆ ವಿದ್ಯಾಥಿ೯ಗಳಿಗೆ, ಬಾಳಿನ ಬೆಳಕಾಗಿದ್ದಾರೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ಸಿದ್ಧಾಂತಗಳನ್ನು ಮರೆಯದೆ ಅದನ್ನು ಬದುಕಿನಲ್ಲಿಅಳವಡಿಸಿಕೊಂಡ ಪೂಜ್ಯ ಶ್ರೀ. ಶಿವಕುಮಾರ ಸ್ವಾಮಿಜಿಗಳು ಕಾಯಕ ಮತ್ತು ದಾಸೋಹ ತತ್ವಗಳ ಮರೆಯದೆ ಮುನ್ನಡೆಸಿಕೊಂಡ …ಜಗತ್ತೀಗೆ ಸಾಕ್ಷಿಯಾದರು. ಇದು ಯಾರ ಆಶೀರ್ವಾದದಿಂದ, ಮಂತ್ರ ಶಕ್ತಿಯಿಂದ ಆದುದಲ್ಲ. ಯಾವ ವೇದ ಶಾಸ್ತ್ರಆಗಮಗಳ ಬಲದಿಂದಲ್ಲ. ತನ್ನಂತರಾತ್ಮದಿಂದ ಬಂದ ಬಸವ ವಾಣಿಯಿಂದ ಇದೆಲ್ಲ ಸಾಧ್ಯವಾಯಿತು.
ಬಸವಣ್ಣನವರ ಆಶಯದಂತೆ ಜೀವನ ಸಾಗಿಸಿದ ಶ್ರೀ ಗಳು, ಬಸವಣ್ಣನವರ ಒಂದು ವಚನದಲ್ಲಿ ಹೀಗೆ ತಿಳಿಸಿದ್ದಾರೆ...
“ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ಹೋದಿರೇ ನೀವು, ಕುಂಕುಮ ಕಸ್ತೂರಿಯ ಹೂಸಿಕೊಂಡು ,ಹೋದಿರೇ ಅಣ್ಣಾ ! ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ ! ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ ಕೂಡಲಸಂಗಮದೇವನರಿಯದೆ.ನರಕಕ್ಕೆ ಭಾಜನವಾದಿರಲ್ಲಾ” !
ಎಂಬ ವಚನದ ಸಾಲಿನಂತೆ ಬಹಳಷ್ಟು ಜನ ಗುರು ಪರಂಪರೆಯವರು, ಸನಾತನವಾದಿಗಳು ಸತ್ಯವನರಿಯದೆ ಅಹಂಕಾರವೆಂಬ ಸದಮದ ಗಜವೇರಿ ಹೋಗಿದ್ದಾರೆ. ಇನ್ನೂ ಹಲವರು ಆ ಆನೆ ಕುದುರೆ ಒಂಟೆ, ಹೆಚ್ಚಾಗಿ ಅಡ್ಡಾ- ಉದ್ದಾ ಪಲ್ಲಕ್ಕಿಯಲ್ಲಿ ಏರಿಕೊಂಡು ಹೋಗುತೀದ್ದಾರೆ. ಈ ಮಹಾಶಯರು ಸತ್ಯವನ್ನು ತಿಳಿಯುವ ಪ್ರಯತ್ನ ಮಾಡದೇ, ಇವರಿಂದ ಸತ್ಯವ ಬಿತ್ತಿ ಬೆಳೆಯಲು ಸಾಧ್ಯವೆ ? ಇಂತಹ ಸ್ವಾರ್ಥ ಸಾಧಿಸುವ ವ್ಯಕ್ತಿ ಗಳಿಂದ.. ಯಾವ ಸತ್ಯ ನೀರಿಕ್ಷೇ ಮಾಡಲು ಸಾಧ್ಯ....ಅನ್ನುವ ಬಸವಣ್ಣನವರ ಆಶಯ....... ಅದರಂತೆಯೇ ಸಿದ್ದಗಂಗಾ ಶ್ರೀಗಳು
ಇಂತಹ ಸತ್ಯದ ವೈಚಾರಿಕ ವಿಚಾರಗಳನ್ನು ಅವರ ಜೀವನದಲ್ಲಿ ಚಾಚ್ಚು ತಪ್ಪದೇ ಪಾಲಿಸಿಕೂಢ ಕೀರ್ತಿ ಇವರಿಗಿದೆ ಸಲ್ಲುತ್ತದೆ.
.
ಶಿಕ್ಷಣ ಕ್ಕಾಗಿ ಶ್ರೀ ಗಳ ಕೊಡುಗೆ.
1944: ತುಮಕೂರು ನಗರದಲ್ಲಿ ಸಿದ್ದಗಂಗಾ ಪ್ರೌಢ ಶಾಲೆ ಆರಂಭ.,1956 : ಸಿದ್ದಗಂಗಾ ಉಪಧ್ಯಾಯ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪನೆ.-1960 : ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.-1962 : ಶ್ರೀ ಸಿದ್ಧಗಂಗಾವಿದ್ಯಾಸಂಸ್ಥೆಯ ಸ್ಥಾಪನೆ.,1963 : ಜಾತ್ರೆಯಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜು
ಸ್ಥಾಪನೆ & ತುಮಕೂರಿನಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭ.,
1966ತುಮಕೂರಿನಲ್ಲಿ ಸಿದ್ದಗಂಗಾ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು ಸ್ಥಾಪನೆ.,
1972: ಮೇ.28 ಉಚಿತ ವಿದ್ಯಾರ್ಥಿ ನಿಲಯ.,1982: ಶ್ರೀಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ. with 1982 ಕುಣಿಗಲ್ ನಲ್ಲಿ ಕರ್ನಾಟಕ ನವಚೈತನ್ಯ ಎಂಬ ಅಂಧಮಕ್ಕಳ ಶಾಲೆಯನ್ನು ಶ್ರೀಗಳು ತೆರೆದಿದ್ದರು., ದಿನಂಪ್ರತಿ 10 ಸಾವಿರ ವಿದ್ಯಾರ್ಥಿಗಳಿಗೆ ಮತ್ತು 3, ಸಾವಿರ ಭಕ್ತಾಧಿಗಳಿಗೆ ಅನ್ನದಾಸೋಹ.& ಇದುವರೆಗೆ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವಿಧ ದಾಸೋಹದ ಅನುಕೂಲ ಪಡೆದು ದೇಶವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.. ಹೀಗೆ ಹತ್ತು ಹಲವಾರು ಶಿಕ್ಷಣ ಸಂಸ್ಥೆಗಳು ಪ್ರಾರಂಭಿಸಿ ,ಬಡ ಮಕ್ಕಳ ಬದುಕಿನ ಆಶಾಕಿರಣರಾಗಿ..ಜಗ ಮೆಚ್ಚುವ ಕಾಯಕ ಮಾಡಿದ್ದಾರೆ.
ಶ್ರೀಗಳು ಬಸವಣ್ಣನವರ ನವರಿಗಾಗಿ....
ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ಯೇ ಸಾಗಿದ ಶ್ರೀ ಗಳು.
ಬಸವ ಜಯಂತಿ ಆಚರಣೆಯನ್ನು ಮಾಡಬೇಕೆಂಬ ಸಂಕಲ್ಪ ತೋಟ್ಟು,
1978 : ಗ್ರಾಮಾಂತರ ಬಸವಜಯಂತಿ ಯೋಜನೆ ಆರಂಭ. & 1995 : ತಮಿಳುನಾಡು ಧರ್ಮಪುರಿ ಜಿಲ್ಲೆ ಡೆಂಕಟಣ ಕೋಟೆ ತಾಲೂಕು ಮೊಳ್ಳಳ್ಳಿ ಗ್ರಾಮದಲ್ಲಿ ವಿಶ್ವ ಬಸವ ಜಯಂತಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ, ತಮಿಳುನಾಡಿನಲ್ಲಿ ಬಸವ ತತ್ತ್ವವನ್ನು ಬಿತ್ತಿ ದರು.ಅಲ್ಲದೆ ತಮಿಳುನಾಡಿನಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಸಾವಿರಾರು ಮಂದಿ ನಿರಾಶ್ರಿತರಿಗೆ ಮಠದಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು. ಇಂತಹ ಅನೇಕ ಸಾಮಾಜಿಕ ಕಾರ್ಯದ ಮುಲಕ ... ಬಸವಾದಿ ಶರಣರ ಆಶಯಗಳಂತೆ ತಮ್ಮ ನಡೆ ನುಡಿಗಳಲ್ಲಿ ಒಂದಾಗಿಸಿ, ಇಂದಿನ ಸ್ವಾಮಿ ಜೀಗಳಿಗೆ ಮತ್ತು ಬಸವ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.
ಉತ್ತರ ರಾಧಿಕಾರಿ ನೇಮಕ.....
ಶ್ರೀಗಳ ನೆಚ್ಚಿನ ಶಿಷ್ಯ ಹಾಗೂ ನಾಡಿಗಾಗಿ, ಸಾಮಾಜಕಾಗಿ ದುಡಿಯುವ ಮನಸ್ಸುಳ್ಳ ಮೇಧಾವಿ ಪುರುಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು 1988 : ಮಾ.30 ಉತ್ತರಾಧಿಕಾರಿಯಾಗಿ ಶ್ರೀ ಸಿದ್ಧಲಿಂಗಸ್ವಾಮೀಜಿ ನೇಮಕ. ಹಾಗೂ 2011 : ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಶ್ರೀಮಠದ ಅಧ್ಯಕ್ಷ ಪದವಿಯ ಸಂಪೊರ್ಣವಾಗಿ ವರ್ಗಾವಣೆ ಮಾಡಿದರು.
ಶ್ರೀ ಗಳ ಸಾಮಾಜ ಮುಖಿ ಕಾಯಕ...
1995: ಫೆ.2 ಸಿದ್ದಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.,2009 : ಕೃಷಿ ಸಮಾವೇಶ ಹಾಗೂ ಮಹಿಳಾ ಸಮಾವೇಶ., 2017: ಸಿದ್ದಗಂಗಾ ಆಸ್ಪತ್ರೆ ಆರಂಭ... ಇತ್ಯಾದಿ ಹಲವಾರು ಸಂಸ್ಥೆಗಳು ಪ್ರಾರಂಭಿಸಿ, ಬಡವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ ಸಂತ ಇವರು.
ಶ್ರೀ ಗಳಿಗೆ ಸಂಧ ಪ್ರಶಸ್ತಿಗಳು...
1965: ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ .,2007 : ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ. ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ & ) 2010: ಶ್ರೀಗಳಿಗೆ ಬಸವಶ್ರೀ ಪುರಸ್ಕಾರದ ಗೌರವ., 2013 :ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.& 2015: ಜುಲೈನಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ.,
2017. : ಕರ್ನಾಟಕ ಸರ್ಕಾರದ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ.. ಇನ್ನು ಹತ್ತು ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಶ್ರೀ ಗಳು ಗೋವುಗಳ ಸಂರಕ್ಷಣೆ ಕಾಯಕ...
ತುಮಕೂರು ನಲ್ಲಿ ನಡೆಯುವ ಪ್ರತಿ ವರ್ಷ ಜಾನುವಾರು ಜಾತ್ರೆಯಲ್ಲಿ ವಿಶೇಷ ಗೋವುಗಳಿಗೆ ಬಹುಮಾನ ಘೋಷಣೆ ಪರಿಪಾಠ. ಗರಿಷ್ಟ 5 ಲಕ್ಷ ರೂ.ವರೆಗೆ ಬಹುಮಾನ ನೀಡುತ್ತೀದರು. ಜಾನುವಾರುಗಳ ಮೇಲೆ ಶ್ರೀಗಳಿಗೆ ವಿಶೇಷವಾದ ಮಮತೆ.ಮಠದಲ್ಲಿ ಸಾವಿರಾರು ಜಾನುವಾರುಗಳಿದ್ದು, ಇವುಗಳು ನೀಡುವ ಹಾಲನ್ನು ಮಠದ ಮಕ್ಕಳಿಗೆ ಬಳಕೆ ಮಾಡಲಾಗುತ್ತದೆ.- ವಿಶಿಷ್ಟವಾಗಿ ಗೋ ಸಗಣಿಯಿಂದ ವಿಭೂತಿ ತಯಾರಿಸುವ ಕೇಂದ್ರವನ್ನು ಶ್ರೀಗಳು ಪ್ರಾರಂಭಿಸಿದ್ದರು.
ರಾಜಕೀಯ ಪಕ್ಷಗಳ ನಿಲುವು, ಆಡಳಿತ ನಿರ್ವಹಣೆ ಮತ್ತು ಮಂತ್ರಿ ಮಂಡಲದ ರಚನೆಯಂಥ ಪ್ರಮುಖ ವಿಷಯಗಳಲ್ಲಿ ರಾಜ್ಯದ ಅನೇಕ ಸ್ವಾಮೀಜಿಗಳು ಪ್ರಭಾವ ಬೀರಿರುವ ಮತ್ತು ಬೀರುತ್ತಿರುವ ಈ ಹೊತ್ತಿನಲ್ಲಿ ಯಾವ ಬಣವನ್ನೂ ಪ್ರತಿನಿಧಿಸದೇ ಮತ್ತು ಯಾವ ನಿರ್ದಿಷ್ಟ ರಾಜಕೀಯ ಪಕ್ಷವನ್ನೂ ಬೆಂಬಲಿಸದೇ ಜನರ ಸ್ವಾಮೀಜಿಯಾಗಿ ಉಳಿದವರು ಸಿದ್ದಗಂಗಾ ಶ್ರೀಗಳು. ಅವರು ಆಡುವ ಭಾಷೆಯಲ್ಲಿ ರಾಜಕೀಯ ಇರಲಿಲ್ಲ. ದ್ವೇಷ, ಮತ್ಸರ, ವ್ಯಂಗ್ಯ, ಕುಹಕ ಇತ್ಯಾದಿ, ಇತ್ಯಾದಿ ಇವತ್ತು ಢಾಳಾಗಿ ಕಾಣುವ ದುರ್ಗುಣಗಳಿರಲಿಲ್ಲ. ಸಂತೆಯ ನಡುವೆಯಿದ್ದೂ ಮೌನವನ್ನು ಆಸ್ವಾದಿಸಿದವರು ಅವರು. ಹೊಟ್ಟೆಯ ಹಸಿವು ಮತ್ತು ಮೆದುಳಿನ ಹಸಿವು- ಇವೆರಡಕ್ಕೂ ಏಕಪ್ರಕಾರ ಪರಿಹಾರವಾಗಿ ಮೂಡಿಬಂದವರು. ಸಮಾಜವನ್ನು - ವಿಭಜಿಸುವುದೇ ಧರ್ಮಸೇವೆ ಎಂದು ನಂಬುವಂಥ ಸ್ಥಿತಿಯಿರುವ ಮತ್ತು ಅದಕ್ಕೆ ಪೂರಕವಾಗಿ ಮಾತು- ಕೃತಿಗಳು ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಸಿದ್ದಗಂಗಾ ಶ್ರೀಗಳು ಇದಕ್ಕೆ ಅಪವಾದದಂತೆ ಬದುಕಿದರು. ಅವರು ಜನರನ್ನು ಬರಿಯ ಜನರಂತೆಯೇ ಕಂಡರು.. "ಮಕ್ಕಳಎದುರಿಗೆ ಕಾಣುವ ದೇವರನ್ನು ಬಿಟ್ಟು ಕಾಣದ ದೇವರನ್ನು ಹುಡುಕಿಕೊಂಡು ಎಲ್ಲಿ ಹೋಗಲಿ ಅಯ್ಯಾ?". ಮಕ್ಕಳಲ್ಲಿ ದೇವರು ಕಂಡ ಮಹಾನ್ ಕಾಯಕ ಯೋಗಿಗೆ ಸಾವಿರದ ಶರಣು.
--ಸಂಗಮೇಶ ಜವಾದಿ ಕೊಡಂಬಲ ಬೀದರ್
ಯುವ ಸಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತ
೦೦೦೦೦೦೦೦೦೦೦೦೦೦೦
41.
ದರಿದ್ರ ನಾರಾಯಣ ದೇವೋ ಭವ ಎಂದರಂತೆ. ಅದೇ ರೀತಿಯಲ್ಲಿ ದೀನರಲ್ಲಿ ದರಿದ್ರರಲ್ಲಿ ಮಕ್ಕಳಲ್ಲಿ ದೇವರನ್ನು ಕಾಣುತ್ತಿರುವ ಶ್ರೀಗಳು ಅಕ್ಷರಶಃ ವಚನಕಾರರ ಕಾಯಕತತ್ವದ ಆದ್ಯ ಪ್ರವರ್ಥಕರು.
ಮೃಗತ್ವದಿಂದ ಮಾನವತ್ವದೆಡೆಗೆ
ಮಾನವತ್ವದಿಂದ ಮನುಷ್ಯತ್ವದೆಡೆಗೆ
ಮನುಷ್ಯತ್ವದಿಂದ ದೈವತ್ವದೆಡೆಗೆ
ದೈವತ್ವದಿಂದ ಅಮರತ್ವದೆಡೆಗೆ
ಸಾಗುವುದೇ ಮಾನವನ ನಿಜವಾದ ಗುರಿ.ಅದನ್ನು ನಿಜತಹ
ಸಾಧಿಸಿ ತೋರಿಸಿದ್ದಾರೆ ಸಿದ್ಧಗಂಗಾ ಶ್ರೀಗಳು.
ನೆರೆ ಕೆನ್ನೆಗೆ ತೆರೆಗಲ್ಲಕೆ, ಶರೀರ ಗೊಡು ಹೋಗದ ಮುಂ ಆ,ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ. ಕಾಲಮೇಲೆ ಕೈಯನೊರಿ ಕೋಲು ಹಿಡಿಯದ ಮುನ್ನ,ಪೂಜಿಸು ಕೂ ದಲಸಂಗಮನ ಎಂಬ ವಚನದ ಆಶಯದಂತೆ ನಾವುನೀವು ಈ ಕಾಯಕ ಯೋಗಿಯ ನಡೆನುಡಿ ಆಚಾರವಿಚಾರಗಳನ್ನು ನಮ್ಮನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಆಚರಣೆಗೆ ತರುವುದೇ ನಾವು ಅವರಿಗೆ ಸಲ್ಲಿಸಬಹುದಾದ ಬಹು ದೊಡ್ಡ ಭಕ್ತಿಯ ಸಮರ್ಪಣೆ.
ಕೆ ಎನ್ ದೇವರಾಜು
ಉಪಾಧ್ಯಕ್ಷರು. ಶ್ರೀಬಸವ ಬಳಗ,ಸಹಕಾರನಗರ
2046 ,ಸಿ ಬ್ಲಾಕ್ ಸಹಕಾರನಗರ.
ಬೆಂಗಳೂರು 92.
...............
42.
:ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ..........: ಕವಿ ಜಿ.ಎಸ್.ಶಿವರುದ್ರಪ್ಪನವರ ಈ ಸಾಲುಗಳು ನಾಗಾಲೋಟದ ಧಾವಂತದಲ್ಲಿರುವ ನಮ್ಮೆಲ್ಲರ ಯಾಂತ್ರಿಕ ಬದುಕಿಗೆ ಕನ್ನಡಿ ಹಿಡಿದಿದೆ... ಮನುಜ ಮನುಜರ ನಡುವೆ ಪ್ರೀತಿ ,ಸಹಕಾರ,ಸಹಬಾಳ್ವೆ, ಸೌಜನ್ಯ ಇಲ್ಲದ ಇವತ್ತಿನ ದಿನಮಾನದಲ್ಲಿ ನಮ್ಮ ಮಧ್ಯೆಯೇ ಒಂದು ಅಭೂತಪೂರ್ವ ಅಧಮ್ಯ ಚೇತನವೊಂದು ಆದರ್ಶದ ದೀಪ ಹಚ್ಚಿ ಆಗಿಹೋಯಿತು...
೨೦ನೇ ಶತಮಾನದಲ್ಲಿ ಭುವಿಬೆಳಗಿದ ಬೆಳ್ಳಿಗೆರೆ, ಜಗತ್ತು ಕಂಡ ಮಹಾನ್ ದಾಸೋಹಿಗಳಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನಿಜಕ್ಕೂ ನಿಜದೈವ...
ಓ ನಡೆದಾಡುವ ದೇವರೇ ನಿನ್ನ ಪಾದಾರವಿಂದಗಳ ಸ್ಪರ್ಶದಿಂದಲೇ ಕೇಡುಗಾಲದ ಕಲಿಯುಗವೂ ಉಳಿಯಿತು
ಓ ಕಾಯಕಯೋಗಿಯೇ ನಿನ್ನ ಹೃದಯಕಮಲದ ಪ್ರೀತಿ ಕಂಪಿನಿಂದಲೇ ಅದೆಷ್ಟೋ ಬಡಮಕ್ಕಳಿಗೆ ಉಸಿರಾಯಿತು..
ಓ ದಿವ್ಯಚೇತನವೇ ಸರಸ್ವತಿಯ ಸಾಕಾರರೂಪವಾದ ನೀವು ಅದೆಷ್ಟೋ ಜ್ಞಾನದಾಹಿಗಳಿಗೆ ಅಕ್ಷರಧಾರೆಯೆರೆದಿರಿ....
ಓ ಭೂಮಂಡಲದ ಆರದ ದೀಪವೇ ಹಚ್ಚಿದ ಒಲೆ ಆರದಂತೆ ಅನ್ನದಾಸೋಹ ಕೈಗೊಂಡ ಪರಂಜ್ಯೋತಿ ನೀವು...
ಓ ಅಧಮ್ಯಶಕ್ತಿಯೇ ಅನಾಥರಿಗೆ,ದೀನರಿಗೆ ಬಂಧುವಾಗಿ ಆಶ್ರಯ ನೀಡಿ ಮಾತೃಸ್ವರೂಪಿಯಾದಿರಿ.....
ಕರುನಾಡು ಕಂಡ, ಹಿಂದೆಂದೂ ಕಂಡು ಕೇಳರಿಯದ ಕಲಿಯುಗದಲ್ಲಿ ದೈವವಾದ, ನಮ್ಮ ನಿಮ್ಮೆಲ್ಲರಿಗೂನಡೆದಾಡುವ ದೇವರು ಎನಿಸಿದ ಮುಗಿಲಮಲ್ಲಿಗೆಯ ಒಲವಕಿರಣಕ್ಕೆ....ನ ಭೂತೋ ನ ಭವಿಷ್ಯತ್ ಎಂಬಂತೆ ಇತಿಹಾಸ ಬರೆದ ತ್ರಿವಿಧದಾಸೋಹಿಯ ಪಾದಪುಷ್ಪಗಳಿಗೆ ನನ್ನ ನುಡಿ ನಮನ.....
*ರಶ್ಮಿ.ಬಿ.ವಿ.*
*ಶಿಕ್ಷಕರು*
*ಟಬಿ.ಜಿ.ಪುರ
ಮಳವಳ್ಳಿ ತಾಲುಕು
ಮಂಡ್ಯ ಜಿಲ್ಲೆ
.................
43.
ಸಸ್ಯ ಸೇವೆ ಶಿವಪೂಜೆಯಷ್ಟೇ ಶ್ರೇಷ್ಠ
ಕೋಟಿಗೊಬ್ಬ ಶರಣ ಸಂತನ ಹಸಿರುಪ್ರೇಮ ಅಮರ
`ಸಸಿಗಳನ್ನು ನೆಟ್ಟರೆ ಸಾಲದು ಅವುಗಳ ಪಾಲನೆ ಪೋಷಣೆ ಶಿವಪೂಜೆಯಷ್ಟೇ ನಿಷ್ಠೆಯಿಂದ ಕೂಡಿರಬೇಕು. ಬಸವಣ್ಣನವರು ಹೇಳಿದ ಹಾಗೆ ಕೃಷಿಕಾಯಕ ಶ್ರೇಷ್ಠವಾದದ್ದು ಪರಿಸರದ ಬಗ್ಗೆ ಕಾಳಜಿಯಷ್ಟೇ ಕಾರ್ಯತತ್ಪರತೆಯೂ ಮುಖ್ಯ ಹೀಗೆಂದು ತಮ್ಮೊಳಗಿನ ಕೃಷಿ ಹಾಗೂ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿ ಹಸಿರೀಕರಣದ ಸೇವೆಗೆ ನನ್ನನ್ನು ಹುರಿದುಂಬಿಸಿ ಆಶೀರ್ವದಿಸಿದವರು ಲಿಂಗೈಕ್ಯ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರಮಹಾಸ್ವಾಮೀಜಿಯವರು.
ಅಂದು ಮುಂಜಾನೆ (25.3.2014) ರಂದು ನಮ್ಮ ಕಾಯಕಯೋಗಿ ಸಂಸ್ಥೆಯ ಪರಿಸರ ಸ್ನೇಹಿ ಗೆಳೆಯರೊಂದಿಗೆ ಪುಣ್ಯಕ್ಷೇತ್ರ ಶ್ರೀಸಿದ್ದಗಂಗಾಮಠಕ್ಕೆ ತೆರಳಿ ದೊಡ್ಡಬುದ್ದಿಯವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡ ಪುಣ್ಯ ಕ್ಷಣದ ಬಳಿಕ ಪೂಜ್ಯರಿಗೆ `ಬುದ್ದಿ ತಮ್ಮ ಹೆಸರಲ್ಲಿ ಮಂಡ್ಯದ ಪ್ರವೇಶದ್ವಾರದಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ತಾವು ದಯಮಾಡಿಸಿ ಆಶೀರ್ವದಿಸಬೇಕು, ನಿಮ್ಮ ಅಮೃತ ಹಸ್ತದಲ್ಲಿ ಸಸಿಯೊಂದನ್ನು ನೆಡಿಸಬೇಕೆಂಬ ಮಹದಾಸೆ ಮಂಡ್ಯದ ಜನತೆಯದ್ದಾಗಿದೆ ಎಂದು ಹರಕೆ ಮಾಡಿ ಉದ್ಯಾನವನದ ಪೋಟೋಗಳನ್ನು ತೋರಿಸಿದಾಗ ತಮ್ಮ ಜ್ಞಾನಮೌನವನ್ನು ಮುರಿದು ತುಂಬು ಹೃದಯದಿಂದ ಆಶೀರ್ವದಿಸಿದ ಶತಮಾನದ ಸಂತ ನುಡಿದ `ಸಸ್ಯ ಸೇವೆ ಶಿವಪೂಜೆಯಷ್ಟೇ ಶ್ರೇಷ್ಠ ಎಂಬ ಮಾತು ಇನ್ನೂ ಕಿವಿಯಲ್ಲಿ ಮಾರ್ದನಿಸುತ್ತಿದೆ, ಹಸಿರಿನ ಕಾಯಕಕ್ಕೆ ಮಾರ್ಗದರ್ಶನ ನೀಡಿದೆ, ನೀಡುತ್ತಲೇ ಬರುತ್ತಿದೆ.
ಬುದ್ದಿಯವರ ಕೈಯಲ್ಲಿ ಮಂಡ್ಯದ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರಮಹಾಸ್ವಾಮೀಜಿಯವರ ಉದ್ಯಾನವನದಲ್ಲಿ ಸಸಿ ನೆಡಿಸಬೇಕೆಂಬ ನನ್ನ ಹಾಗೂ ಕಾಯಕಯೋಗಿ ಸಂಸ್ಥೆಯ ಬಂಧುಗಳೆಲ್ಲರ ಆಶಯ ಹಾಗೆಯೇ ಉಳಿದು ಹೋಗಿದೆಯಾದರೂ ಅವರ ಆಶೀರ್ವಾದ ನಮ್ಮನ್ನು ಹಸಿರು ಸೇವೆಗೆ ಅಣಿಗೊಳಿಸಿದೆ.
ಉದ್ಯಾನವನಕ್ಕೆ ತಾವು ಪಾದಾರ್ಪಣೆ ಮಾಡಬೇಕೆಂದು ಪರಿಪರಿಯಾಗಿ ಕೋರಿದ್ದಾಗ ಬುದ್ದಿಯವರಿಗೆ ನೂರಾರು ವರ್ಷಗಳು ತುಂಬಿದ್ದವು. ಮಠದಿಂದ ಯಾವ ಸಮಾರಂಭಕ್ಕೂ ಹೋಗಬಾರದೆಂಬ ಭಕ್ತರ ಆಶಯಕ್ಕೆ ಮಣಿದಿದ್ದ ಸ್ವಾಮೀಜಿಯವರು ತಮ್ಮ ಹೆಸರಲ್ಲೇ ಮಾಡಿದ್ದ ಮಂಡ್ಯದ ಸುಂದರ ಉದ್ಯಾನವನಕ್ಕೆ ಆಗಮಿಸಲಿಲ್ಲ. ಆದರೆ, ಅವರ ದಿವ್ಯಾಶೀರ್ವಾದದೊಂದಿಗೆ ನೂರಾರು ಸಸಿಗಳನ್ನು ಉದ್ಯಾನವನದಲ್ಲಿ ನೆಟ್ಟು ಇಂದಿಗೂ ಪೂಜ್ಯರ ಹೆಸರು ಸದಾ ಹಸಿರಾಗಿರುವಂತೆ ಕಾಯಕಯೋಗಿ ಸಂಸ್ಥೆ ತನ್ನ ಹಸಿರಿನ ಕಾಯಕವನ್ನು ಮುನ್ನಡೆಸಿಕೊಂಡು ಬಂದಿದೆ.
`ಕೋಟಿಗೊಬ್ಬ ಶರಣ ಶಿವಕುಮಾರಾಭರಣ' ಎಂಬ ವಿಶ್ವಗುರುವಿನ ಮಾನವಬಂಧುತ್ವದ ಸಮಾನತಾ ಸಮಾಜ ನಿರ್ಮಾಣದ ಕನಸನ್ನು ನನಸುಗೊಳಿಸುವ ಹತ್ತಾರು ಕಾರ್ಯಕ್ರಮಗಳನ್ನು ಕಾಯಕಯೋಗಿ ಸಂಸ್ಥೆ ಹಮ್ಮಿಕೊಂಡು ಪೂಜ್ಯರ ತ್ರಿವಿಧ ದಾಸೋಹದ ಮಹತ್ವ, ಸಮಾನತೆ, ಭಾತೃತ್ವ, ಬಸವಾದಿಶರಣರ ಆಶಯಗಳನ್ನು ಆಚರಣಾಕ್ರಾಂತಿಯನ್ನಾಗಿಸಲು ಪೂಜ್ಯರ ಮಾತುಗಳು ಪ್ರೇರೇಪಣೆಯಾಗಿವೆ.
ಪೂಜ್ಯ ಶ್ರೀಗಳ ಉದ್ಯಾನವನ್ನು ಸರ್ಕಾರದಿಂದ ದತ್ತು ಪಡೆದು ನಿರ್ವಹಿಸುತ್ತಿರುವ ಕಾಯಕಯೋಗಿ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಪೂಜ್ಯರ ಆಶಯಗಳನ್ನು ಅನುಷ್ಠಾನಗೊಳಿಸುವ ಕಾಯಕದಲ್ಲಿ ನಿರತವಾಗಿದೆ. ಉದ್ಯಾನವನದಲ್ಲಿ ಬುದ್ದಿಯವರ ಆಳೆತ್ತರದ ಪುತ್ಥಳಿಯೊಂದನ್ನು ನಿರ್ಮಿಸಿ ಪೂಜ್ಯರ ಶ್ರೀವಾಣಿಯನ್ನು ಉದ್ಯಾನವನದ ಸುತ್ತಾ ಅಳವಡಿಸುವ ಯೋಜನೆಯನ್ನು ಕೈಗೆತ್ತುಕೊಂಡಿದೆ.
ಅನ್ನದಾತರಿಗೆ ಆಸರೆ :
ಮಂಡ್ಯಜಿಲ್ಲೆಯ ರೈತರ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡಿದ್ದ ಪರಮಪೂಜ್ಯರು ಈ ಭಾಗದ ಯಾರೇ ಮಠಕ್ಕೆ ಹೋದರೂ ಮೊದಲು ಪ್ರಸಾದ ಮಾಡಿ ಎಂದು ಪ್ರೀತಿಯಿಂದ ಉಣಬಡಿಸುತ್ತಿದ್ದ ಸ್ವಾಮೀಜಿ `ಕನ್ನಂಬಾಡಿ ಕಟ್ಟೆ ತುಂಬಿದೆಯಾ, ಮಳೆ-ಬೆಳೆ ಹೇಗಿದೆ, ಕಬ್ಬಿಗೆ ಒಳ್ಳೆಯ ಬೆಲೆ ಸಿಗುತ್ತಿದೆಯಾ ಎಂದು ರೈತರ ಪರಿಸ್ಥಿತಿಯನ್ನು ಕೂಲಂಕುಷುವಾಗಿ ತಿಳಿದು ಜನರ ಸಮಸ್ಯೆ ಪರಿಹರಿಸಲು ಸ್ಪಂದಿಸುತ್ತಿದ್ದರು.
ಆಳುವ ಸರ್ಕಾರಗಳು ಅನ್ನದಾತನನ್ನು ನಿರ್ಲಕ್ಷಿಸಬಾರದು. ರೈತರ ಸಮಸ್ಯೆಯನ್ನು ಅರಿತು ಆಡಳಿತ ಮಾಡಬೇಕೆಂದು ರಾಜಕಾರಣಿಗಳಿಗೆ ಕಿವಿಹಿಂಡಿ ಬುದ್ದಿ ಹೇಳುತ್ತಿದ್ದ ಪರಮಪೂಜ್ಯರು ಶ್ರೀಮಠಕ್ಕೆ ಭೇಟಿ ನೀಡುವ ಮಂತ್ರಿ ಮಹೋದಯರಿಗೆ ಕೃಷಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಅನೇಕ ಪತ್ರಗಳನ್ನು ಬರೆದ ಉದಾಹರಣೆಗಳು ಸಾಕಷ್ಟಿವೆ. ಬೆಳೆದ ಬೆಳೆಗೆ ಬೆಲೆ ಇಲ್ಲವೆಂದು ತರಕಾರಿ, ಕಾಯಿಪಲ್ಯಗಳು, ಆಹಾರ ಧಾನ್ಯಗಳನ್ನು ಶ್ರೀಮಠದ ದಾಸೋಹಕ್ಕೆ ಪುಗಸಟ್ಟೆಯಾಗಿ ಕೊಡಲು ಬಂದ ನೊಂದ ರೈತರಿಗೆ ಹಣವನ್ನು ಕೊಟ್ಟು ಸಾಂತ್ವಾನ ಹೇಳುತ್ತಿದ್ದ ಪರಮಪೂಜ್ಯರ ಮನದಲ್ಲಿ ಪರೋಪಕಾರ ಮನೋಭಾವ ಸದಾ ಜಾಗೃತವಾಗಿತ್ತು.
ಸಕ್ಕರೆ ನಾಡಿನೊಂದಿಗೂ ನಂಟು :
ಮಂಡ್ಯ ಜಿಲ್ಲೆಯ ಸಾವಿರಾರು ಮಂದಿ ಮಕ್ಕಳು ಶ್ರೀಮಠದಲ್ಲಿ ಅಧ್ಯಯನ ಮಾಡಿ ಬದುಕು ಕಂಡುಕೊಂಡಿದ್ದಾರೆ.
ಸಕ್ಕರೆ ಜಿಲ್ಲೆಯ ಬಗ್ಗೆ ಅಕ್ಕರೆ ಹೊಂದಿದ್ದ ಪರಮಪೂಜ್ಯರು ಮಠದ ವತಿಯಿಂದ ನಡೆಯುವ ಶ್ರೀಜಗಜ್ಯೋತಿ ಬಸವೇಶ್ವರ ನಾಟಕವನ್ನು ಕೆ.ಆರ್.ಪೇಟೆ, ಮಳವಳ್ಳಿ, ಪಾಂಡವಪುರ, ಮಂಡ್ಯ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರದರ್ಶಿಸಿ ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯ, ದಾಸೋಹದ ಅರಿವು ಮೂಡಿಸಿ ಬಸವಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.
ಕಳೆದ ಅರವತ್ತು ವರ್ಷಗಳಿಂದಲೂ ಮಂಡ್ಯಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಸಂಚರಿಸಿ ಧಾರ್ಮಿಕ ಜಾಗೃತಿ ಮೂಡಿಸಿದ್ದ ಶ್ರೀಗಳ ಸೇವೆ ಅವಿಸ್ಮರಣೀಯವಾದದ್ದು. ಈ ಜಿಲ್ಲೆಯ ಶಿಕ್ಷಣದ ಅವಕಾಶವಂಚಿತರಿಗೆ ತಾವೇ ಶ್ರೀಮಠದಲ್ಲಿ ಆಸರೆ ನೀಡಿ ಸನ್ಮಾರ್ಗದ ಬದುಕು ರೂಪಿಸಿದ್ದಾರೆ. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಬೆಂಗಳೂರು ವಿ.ವಿ.ವಿಶ್ರಾಂತ ಕುಲಪತಿ ಪ್ರೊ.ತಿಮ್ಮೇಗೌಡ ಸೇರಿದಂತೆ ಅನೇಕ ಗಣ್ಯರು ಶ್ರೀಮಠದ ವಿದ್ಯಾರ್ಥಿಗಳು.
3.2.1952ರ ಭಾನುವಾರ ಮಂಡ್ಯದಲ್ಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಬೃಹತ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಮಪೂಜ್ಯರು ಅಪಾರ ಭಕ್ತಸಮೂಹವನ್ನು ಅಂದೇ ಸಂಪಾದಿಸಿದ್ದರು. 13.2.1954ರ ಶನಿವಾರ ಮಂಡ್ಯ ಜಿಲ್ಲಾ ಹೇಮಗಿರಿ ಜಾತ್ರೆಯಲ್ಲಿ ನಡೆದ ಹಿಂದೂ ಸಂಸ್ಕøತಿಯ ಉತ್ಸವದಲ್ಲಿ ಸರ್ವರೂ ಸಮಾನರು ದೇವನೊಬ್ಬ ನಾಮ ಹಲವು ಎಂಬ ಸಮಾನತೆಯ ತತ್ವವನ್ನು ಬೋದಿಸುವ ಮೂಲಕ ಎಲ್ಲರನ್ನೂ ಪ್ರೀತಿಸಿ-ಬೆಳೆಸಿ-ಬೆಳೆಯುವ ಭಾವವನ್ನು ಮೂಡಿಸಿದ್ದರು.
ಗುರುಗಳಿಗೆ ಶರಣುಸಮರ್ಪಣೆ :
ಪರಮಪೂಜ್ಯರು ನೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ 16.1.2011ರಲ್ಲಿ ಮಂಡ್ಯದ ಬಾಲಭವನದಲ್ಲಿ ಮಾಜಿ ಸಂಸದ ಜಿ.ಮಾದೇಗೌಡರ ಅಧ್ಯಕ್ಷತೆ ಹಾಗೂ ಕಾಯಕಯೋಗಿ ಸಂಸ್ಥೆ ಅಧ್ಯಕ್ಷ ಎಂ.ಶಿವಕುಮಾರ್ ಸಾರಥ್ಯದಲ್ಲಿ ನಡೆದ ಐತಿಹಾಸಿಕ ಬೃಹತ್ `ಗುರುವಂದನಾ ಸಮಾರಂಭ ಅವಿಸ್ಮರಣೀಯ.
ಪರಮಪೂಜ್ಯ ಸಿದ್ದಗಂಗಾಶ್ರೀಗಳು ಹಾಗೂ ಶ್ರೀಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥಸ್ವಾಮೀಜಿಯವರಿಗೆ ಸಹಸ್ರಾರು ಮಂದಿ ಭಕ್ತರ ಸಮ್ಮುಖದಲ್ಲಿ ಮಾಡಿದ `ಶರಣುಸಮರ್ಪಣೆ ಅವರ್ಣನೀಯ.
ಈ ನಾಡಿಗೆ ಅಪೂರ್ವ ಸೇವೆಗೈದ ಸಿದ್ದಗಂಗಾಶ್ರೀ-ಚುಂಚಶ್ರೀಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸಿ ಶರಣುಸಮರ್ಪಿಸಿದ ಭಕ್ತಿಭಾವದ ಸ್ಮರಣೆ ಇಂದಿಗೂ ಅವಿಸ್ಮರಣೀಯವಾಗಿ ಉಳಿದಿದೆ. ನಗರಸಭೆಯ ಮಾಜಿ ಅಧ್ಯಕ್ಷ ದಿವಂಗತ ಹೊಸಹಳ್ಳಿ ಬೋರೇಗೌಡರ ಆಶಯದಂತೆ ಸಿದ್ದಗಂಗಾಶ್ರೀಗಳು ಕಾರಸವಾಡಿರಸ್ತೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತವನ್ನು ಸಹ ಇದೇ ಸಂದರ್ಭದಲ್ಲಿ ಉದ್ಘಾಟನೆ ಮಾಡಿ ನಗರಸಭೆಯಿಂದ ನಾಗರೀಕ ಸನ್ಮಾನವನ್ನು ಸ್ವೀಕರಿಸಿ ಆಶೀರ್ವದಿಸಿದ್ದರು.
ಎಂ.ಶಿವಕುಮಾರ್, ಪತ್ರಕರ್ತರು
ಅಧ್ಯಕ್ಷರು : ಕಾಯಕಯೋಗಿ ಸಮೂಹ ಸಂಸ್ಥೆ, ಮಂಡ್ಯ.
......................
44.
ಸದ್ದುಗದ್ದಲವಿಲ್ಲದೆ ಗದ್ದುಗೆ ಏರಿದ ಸಾದನೆಗೆ ಭಾರತ ರತ್ನ ಪ್ರಶಸ್ತಿ ಕೋರಿ
1908 ಎಪ್ರಿಲ್ 1 ರoದು ಮಾಗಡಿ ತಾ|| ವೀರಪುರದಲ್ಲಿ ಜನಿಸಿ ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಯು 13ನೇ ಕಿರಿಯ ಪುತ್ರರಾದ ಶಿವಕುಮಾರಸ್ವಾಮಿ ಯವರು ಕಿರಿಯ ವಯಸಿನಲ್ಲಿ
ತಮ್ಮ ತಾಯಿ ಕಳೆದುಕೊoಡು ಸ್ವಾರ್ಥರಹಿತ ಸೇವೆ ಮಾಡುತ್ತಿರುವ ಪ್ರಪoಚದಲ್ಲೆ ಅoಸಖ್ಯಾತ ಭಕ್ತಾದಿಗಳ್ಳನ್ನು ಹೊoದಿರುವ
ಬಸವತತ್ವ ಮತ್ತು ಆದರ್ಶ್ ಗಳನ್ನು ಒಳಗೊoಡತ್ತೆ ಹಜೇಹಾಕಿ ಬಸವಾದಿ ಸೇವಯ ಮಾನವಿಯ ಗುಣಗಳನ್ನು ಅಳವಡಿಸಿಕೊoಡ ಬಾಲ್ಯ ಜೀವನಗಳ 10.000 ಸಾವಿರ ವಿದ್ಯಾರ್ಥಿಗಳಿಗೆ ತ್ರಿವಿಧ ಅನ್ನ, ಅಕ್ಷರ, ಜ್ಞಾನ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು. ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು
ಸೇವೆಯೊಂದೆ ಪರಮ ಕೆಲಸ ವಾಗಿ ಮಾಡಿದ ಮಹಾನ್ ಸಾದನೆ ಮತ್ತು ಈ ವಿಶ್ವಚೇತನಿಗೆ .22ನೇ ಶತಮಾನದ ಯುಗಪುರುಷನಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆನ್ನುವುದು ನಮ್ಮ ಒತ್ತಾಯ.
ನಿಜಗುಣ
ಬಿದರಹಳ್ಳಿ ಕಸಬ ಹೋಬಳಿ
ಶ್ರೀ ರಂಗ ಪಟ್ಟಣ ತಾ"
ಮಂಡ್ಯ ಜಿಲ್ಲೆ ೫೭೧೪೧೫
.............
45.
🙏ಶರಣರಿಗೆ ಶರಣು 🙏 ಶರಣಾರ್ಥಿ 🙏
ಹೇ ಗುರುವೆ. ಅನ್ನ ಅನ್ನ ಕೋಟ್ಟರೆ ಅರುಗುವವರೆಗೆ. ಆಸ್ತಿ ಕೋಟ್ಟರೆ ಕರುಗುವವರೆಗೆ. ನೀವು ನಿಡಿದ ಮಹಾ ವಿದ್ಯಾ ಈ ಜೀವವಿರುವರೆ ಓ ನನ್ನ ಶ್ರೀ ಸಿದ್ಧಗಂಗಾ ಪ್ರಭುವೆ. ಪರಮ ಪೂಜ್ಯ ಡಾ// ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಬೇಗನೆ ಭಾರತ ರತ್ನ ಪ್ರಶಸ್ತಿ ಸಿಗಲೆಂದು ಮತ್ತು ಶ್ರೀಗಳ ಹೆಸರಲ್ಲಿ ವಿಶ್ವ ರತ್ನ ಶ್ರೀ ಸಿದ್ಧಗಂಗಾ ದಾಸೋಹ ಮಹಾ ಮನೆ ಎಂಬುವುದು ಮತ್ತು ಪ್ರತಿಯೊಂದು ಪಡಿತರ ಚೀಟಿಯ ಮೇಲೆ ಶ್ರೀ ಗಳ ದಾಸೋಹ ಕಾರ್ಯ ನಡೆಸುತ್ತಿರುವ ಭಾವಚಿತ್ರ ಈ ದೇಶದ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಉಚಿತ ಪ್ರಸಾದನಿಲಯ ಎಂಬುದು ಜಾರಿಯಾಗುವಂತೆ ತೆಗಿಯಬೆಕೆಂದು. ಈ ಶ್ರೀ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಮತ್ತು ಹಿತಹಿಷಿಗಳವರೇಲ್ಲಿಯೂ ಮತ್ತು ಬೀದರ್ ಜಿಲ್ಲೆಯ ಮತ್ತು ಭಾಲ್ಕಿ ತಾಲ್ಲೂಕಿನಲ್ಲಿರುವ ವಿದ್ಯಾರ್ಥಿ ಮತ್ತು ಹಿತಹಿಷಿಗಳವರಲ್ಲಿ ಮತ್ತು ದೇಶದ ಮತ್ತು ರಾಜ್ಯದ ಜನಾಭಾಂಧವರಲ್ಲಿ ನಿಮ್ಮಲ್ಲಿ ಪರಿಚಯವಿರುವವರೆಲ್ಲರಿಗೂ ಮತ್ತು ಎಲ್ಲಾ ಬಂದು ಭಾಂಧವರಲ್ಲಿಯೂ ವಿನಂತಿಸಿಕೋಳ್ಳುವುದೇನೆಂದರೆ ದೂರದರ್ಶನ ಮತ್ತು ಮಾಧ್ಯಮ ವರ್ಗದವರಲಿಯೂ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದವರು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಆಲಸ್ಯ ಮಾಡಿರುವುದರ ಬಗ್ಗೆಗೆ ಈ ಮೇಲಿನ ಮೂರು (ತ್ರಿವಿಧ ಕಾಯಕ ಸೇವಾ) ಕಾರ್ಯಗಳು ಜಾರಿಯಾಗುವಂತೆಯು ಮಾಡಬೇಕು. ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ. ಘೋಷಣೆ ಮಾಡಲೆಬೆಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯದಾದ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆ, ರಾಲ್ಯಿಯನ್ನು ಮಾಡಬೇಕಾಗುತ್ತದೆ. ಸರ್ಕಾರ ಇನ್ನೂ ಇದರ ಬಗ್ಗೆ ಯೋಚನೆ ಮಾಡಬಾರದು. ಹೇ ಗುರುವೆ. ಅನ್ನ ಅನ್ನ ಕೋಟ್ಟರೆ ಅರುಗುವವರೆಗೆ. ಆಸ್ತಿ ಕೋಟ್ಟರೆ ಕರುಗುವವರೆಗೆ. ನೀವು ನಿಡಿದ ಮಹಾ ವಿದ್ಯಾ ಈ ಜೀವವಿರುವರಗೆ ಓ ನನ್ನ ಶ್ರೀ ಸಿದ್ಧಗಂಗಾ ಪ್ರಭುವೆ. ಪರಮ ಪೂಜ್ಯ ಡಾ// ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರಲ್ಲಿ ವಿಶ್ವ ರತ್ನ ಪ್ರಶಸ್ತಿ ಪದವಿ ಮತ್ತು ಪ್ರತಿಯೊಂದು ಪಡಿತರ ಚೀಟಿಯ ಮೇಲೆ ಶ್ರೀ ಗಳ ದಾಸೋಹ ಕಾರ್ಯ ನಡೆಸುತ್ತಿರುವ ಭಾವಚಿತ್ರವಿರುವುದನ್ನು ಮತ್ತು ಶ್ರೀ ಸಿದ್ಧಗಂಗಾ ದಾಸೋಹ ಮಹಾ ಮನೆ ಮತ್ತು ಜಾರಿಗೆ ಬೆಗನೆ ತರಲೆಂದು ಹೃದಯಪೂರ್ವಕದಿಂದ ಕೇಳಿಕೋಳ್ಳುತ್ತೆನೆ.
ರೇವಪ್ಪಯ್ಯಾ ಸ್ವಾಮಿ
ಬೀದರ ಜಿಲ್ಲೆಯ ಹಳೇಯ ವಿದ್ಯಾರ್ಥಿ
...............
46.
*ನಾ ಕಂಡ ಸಿದ್ದಗಂಗೆಯ ಕರ್ಮಯೋಗಿ*
(ಮರ ಕಡಿದಿದ್ದಕ್ಕೆ ಪ್ರಸಾದ ತ್ಯಜಿಸಿದ ಶ್ರೀಗಳು)
ಅದು ತೊಂಬತ್ತರ ದಶಕ ನಾವು ವಿದ್ಯಾರ್ಥಿಗಳೆಲ್ಲರೂ ರಾತ್ರಿ ವೇಳೆಯಲ್ಲಿ ಹಳೇಮಠದ ದ್ವಾರ ಬಾಗಿಲಿನ ಎರಡು ಬದಿಗಳಲ್ಲಿ ಕುಳಿತು ಓದಬೇಕಿತ್ತು. ಇದು ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರ ಆಜ್ಞೆ. ಪ್ರತಿದಿನ ಅವರು ಬರುವ ಸಂದರ್ಭದಲ್ಲಿ ಅಂದಂದಿನ ದಿನಚರಿಯ ವರದಿಯನ್ನು ಬುದ್ದಿಯವರಿಗೆ ಒಪ್ಪಿಸಬೇಕಿತ್ತು.ಅದು ಅಲ್ಲಿನ ಅಲಿಖಿತ ನಿಯಮ. ನಮ್ಮ ಓದು,ಕೆಲಸ,ಊಟ ಇದರ ಬಗ್ಗೆ ತುಂಬಾ ಕಾಳಜಿಯಿಂದ ಕೇಳುತ್ತಿದ್ದ ಅವರು ಮಾತೃ ಹೃದಯದ ಸಂತ. ಅಂದು ಮಧ್ಯ ವಾರ್ಷಿಕ ಪರೀಕ್ಷೆಯ ಅಂಕವನ್ನು ಕೇಳುತ್ತಾರೆ ಎನ್ನುವುದು ಖಾತ್ರಿಯಾಗಿ ಆಂಗ್ಲಭಾಷೆಯಲ್ಲಿ ಅನುತ್ತೀರ್ಣನಾಗಿದ್ದ ನಾನು ಆತಂಕಗೊಂಡು ಅವರು ಬಂದ ತಕ್ಷಣ ಮೌನವಾಗಿ ತಲೆ ತಗ್ಗಿಸಿ ನಿಂತಿದ್ದೆ. ಎಲ್ಲರ ಸರದಿಯ ನಂತರ ನಾನು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕೇಳಿದರು. ನನ್ನ ಬಳಿ ಬಂದವರೆ ನಿನ್ನ ಅಂಕಗಳು ಎಷ್ಟು, ಯಾವ ವಿಷಯದಲ್ಲಿ ಕಡಿಮೆ ಬಂದಿದೆ ಎಂದು ಕೇಳಿದರು. ಇಂಗ್ಲಿಷ್ ಫೇಲ್ ಬುದ್ದಿ ಒಂಬತ್ತು ಅಂಕ ಬಂದಿದೆ ಎಂದು ಯಾಂತ್ರಿಕವಾಗಿ ನನ್ನ ದೇಹ ಧೈನ್ಯತೆಯಿಂದ ಕುಬ್ಜಗೊಂಡು ಅಪರಾಧ ಭಾವನೆಯಿಂದ ಧ್ವನಿ ಹೊರಬಂತು. ನನ್ನ ಕಿವಿ ಹಿಂಡಿದ ಶ್ರೀಗಳು "ಸೋಮಾರಿ ಊಟ ಮಾಡಿ ಬರೆ ಆಟವಾಡಿ ಕಾಲ ಕಳಿತಿಯಾ" ಎಂದು ಪ್ರೀತಿಯಿಂದ ಕಾಳಜಿಯಿಂದ ಹೇಳಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ. ಆ ವರ್ಷ ಆಸಕ್ತಿಯಿಂದ, ಕಷ್ಟಪಟ್ಟು ಓದಿ ಹತ್ತನೆ ತರಗತಿಯಲ್ಲಿ ಉತ್ತಮ ಅಂಕಗಳೊಡನೆ ಪಾಸಾದೆ.
ಹೀಗೆ ಪ್ರತಿಯೊಬ್ಬರ ಮೇಲೂ ಇದೇ ಮಮತೆ ವಾತ್ಸಲ್ಯ ತೋರುತ್ತಿದ್ದ ಕರುಣಾಮೂರುತಿ ಸಿದ್ದಗಂಗೆಯ ಸಿದ್ದಿ ಪುರುಷ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಇಂದು ನಾಡಿನ ತುಂಬೆಲ್ಲಾ ಶ್ರೀಗಳ ಸೇವಾ ತತ್ಪರತೆ ಹಾಗೂ ಅವರ ಮೌಲ್ಯಯುತ ಬದುಕಿನದ್ದೆ ಮಾತು. ಧರ್ಮಾತೀತ, ಜಾತ್ಯತೀತವಾಗಿ ಅಲ್ಲದೆ ಪಕ್ಷಾತೀತವಾಗಿ ಮಿಡಿದ ಜನಮನಕ್ಕೆ ಜಗತ್ತೆ ಬೆರಗಾಗಿದೆ. ಈ ಯುಗಮಾನದ ಸಂತನಿಗೆ ನಾಡು ಮರುಗಿದೆ.ಕಂಬನಿಗೆರಗಿದೆ.
ಇಂತಹ ಮಹಾಮಹಿಮರು ಒಮ್ಮೆ ಮಧ್ಯಾಹ್ನದ ಪೂಜೆಗೆ ಹಳೇಮಠಕ್ಕೆ ದಯಮಾಡಿಸಿದ್ದರು. ಅಲ್ಲಿ ಯಾವುದೊ ಉದ್ದೇಶಕ್ಕಾಗಿ ಮಠದ ಸಿಬ್ಬಂದಿಗಳು ಒಂದು ಹಳೆಯ ನಂದಿ ಬಟ್ಟಲು ಹೂವಿನ ಮರವನ್ನು ಕಡಿದುಹಾಕಿದ್ದರು. ಬಂದು ನೋಡಿದ ಪೂಜ್ಯರು ಮರ ಇಲ್ಲದಿರುವುದು ಅವರ ಕಣ್ಣಿಗೆ ಗೋಚರಿಸಿತು. ಇಲ್ಲಿದ್ದ ಮರ ಏನಾಯ್ತು ಎಂದು ಶಿಷ್ಯರನ್ನು ಕೇಳಿದರು. 'ಕಡಿದುಹಾಕಲಾಗಿದೆ ಬುದ್ದಿ' ಎಂದು ಹೇಳಿದರು. ಗುರುಗಳಿಗೆ ತುಂಬಾ ಬೇಸರವಾಯ್ತು. ಅಸಮಧಾನದಿಂದಲೇ ಅಲ್ಲಿಂದ ತೆರಳಿ ಸ್ನಾನ ಪೂಜೆ ಮುಗಿಸಿ ಪ್ರಸಾದ ಸ್ವೀಕರಿಸದೆ ಕಛೇರಿಗೆ ತೆರಳಿದರು. ಎಲ್ಲರಿಗೂ ಆತಂಕ ಶುರುವಾಯ್ತು. ಏನು ಮಾಡುವುದು ಈಗ ಎನ್ನುವ ಗೊಂದಲಕ್ಕೆ ಎಲ್ಲರೂ ಒಳಗಾದರು. ಕಛೇರಿಗೆ ಹೋಗಿ ಎಲ್ಲರೂ ನಿವೇದಿಸಿಕೊಂಡರೂ ಬುದ್ದಿಯವರು ದಯಮಾಡಿಸಲಿಲ್ಲ. ಮತ್ತೆ ರಾತ್ರಿ ಎಂದಿನಂತೆ ಬಂದು ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಸ್ನಾನ ಪೂಜೆಗೆ ಹೊರಟರು. ಪೂಜೆ ಮುಗಿದ ನಂತರ ಪ್ರಸಾದಕ್ಕೆ ಅಣಿಗೊಳಿಸಿಕೊಂಡಿದ್ದ ಶಿಷ್ಯರು ಪ್ರಸಾದ ಬಡಿಸಲು ಸಿದ್ದರಾದರು. ಆದರೆ ಸ್ವಾಮೀಜಿ ಪ್ರಸಾದ ಸ್ವೀಕರಿಸದೆ ಪೂಜೆ ಮನೆಯಿಂದ ಹೊರಬಂದೇ ಬಿಟ್ಟರು. ಆವಾಗ ಮತ್ತಷ್ಟು ಆತಂಕಗೊಂಡ ಶಿಷ್ಯರು ಬುದ್ದಿಯವರ ಕೋಣೆಗೆ ಹೋಗಿ 'ಮರ ಕಡಿದದ್ದು ತಪ್ಪಾಯ್ತು ಬುದ್ದಿ ಇನ್ನು ಮುಂದೆ ಈ ರೀತಿಯಲ್ಲಿ ಯಾವ ಮರವನ್ನು ಕಡಿಯುವುದಿಲ್ಲ ದಯಮಾಡಿ ಪ್ರಸಾದ ಸ್ವೀಕರಿಸಿ' ಎಂದು ಕೆಲವು ಮಠಗಳ ಪೂಜ್ಯರುಗಳು ಪ್ರಾರ್ಥಿಸಿಕೊಂಡಾಗ ರಾತ್ರಿ ಹನ್ನೊಂದು ಗಂಟೆಯಲ್ಲಿ ಬಂದು ಪ್ರಸಾದ ಸ್ವೀಕರಿಸಿದ್ದು ಇಂದಿಗೂ ನನ್ನ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿದಿದೆ. ಈ ಮೂಲಕ ಬಡ ಮಕ್ಕಳನ್ನು ಪ್ರೀತಿಸುವಷ್ಟೇ ಆಸ್ಥೆಯಿಂದ ಗಿರಮರಗಳನ್ನು ಕಾಪಾಡುತ್ತಿದ್ದರು ಎನ್ನುವುದು ಅವರಿಗೆ ಪರಿಸರದ ಬಗ್ಗೆ ಇದ್ದ ಕಾಳಜಿಯನ್ನು ತೋರಿಸುತ್ತದೆ. ಮರ ಕಡಿದ ವಿಚಾರಕ್ಕೆ ತುಂಬಾ ಬೇಸರಪಟ್ಟುಕೊಂಡ ನಿಷ್ಕಾಮ ಕರ್ಮಯೋಗಿ ಅವರು. ಸಕಲ ಜೀವಾತ್ಮರಿಗೂ ಲೇಸನ್ನೆ ಬಯಸುತ್ತಿದ್ದ ಅಂತಹ ಪೂಜ್ಯರು ಭೌತಿಕವಾಗಿ ನಮ್ಮನ್ನಗಲಿದರೂ ಜನ ಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈ ಒಂದು ಘಟನೆ ಮಠದ ಮಕ್ಕಳಲ್ಲಿ, ನೌಕರರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವಂತೆ ಮಾಡಿತು. ಇಂತಹ ಆದರ್ಶ ನಡೆಕಲಿಸಿದ ನಡೆದಾಡುವ ದೇವರು ಶ್ರೀ ಶಿವಕುಮಾರ ಯತಿಗಳು.
ಅವರು ಹುಟ್ಟುತ್ತಲೇ ಸಿದ್ದರಾದವರಲ್ಲ, ಅಥವಾ ಲೀಲೆಗಾಗಿ ಅವತರಿಸಿದವರಲ್ಲ. ನಾವು ಪರಮಪೂಜ್ಯರಲ್ಲಿ ಕಾಣುವ ಶಕ್ತಿಯೆಲ್ಲಾ ತನ್ನ ಸ್ವಸಾಮರ್ಥ್ಯದಿಂದ ಸಾಧಿಸಿ ಗಳಿಸಿಕೊಂಡ ಆಧ್ಯಾತ್ಮಿಕ ತೇಜಸ್ಸಿನಿಂದ ಲಭ್ಯವಾದುದು. ತಮ್ಮನ್ನು ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿಕೊಂಡು ನಿಸ್ವಾರ್ಥ ಸೇವೆಗೈದು ದೈವತ್ವಕ್ಕೇರಿದ ಸೀಮಾಪುರುಷ. ನಮ್ಮ ಕಾಲಘಟ್ಟದಲ್ಲಿದ್ದು ಬಾಳಿ ಬದುಕಿ ಈ ಬದುಕಿನ ಮೂಲಕವೇ ಇದರಾಚೆಯ ಚಿರಂತನವಾದ ಬದುಕನ್ನು ಕಂಡುಕೊಂಡವರು. ವ್ಯಕ್ತದಲ್ಲಿಯೇ ನಿಂತು ಅವ್ಯಕ್ತದಾಚೆಯ ಅಂಚಿನಲ್ಲಿ ವ್ಯಾಪ್ತರಾದವರು. ಶುದ್ದ ಕಾಯಕದ ಮೂಲಕ ಕಾಯಕ ಯೋಗಿ ಎನಿಸಿಕೊಂಡಲ್ಲದೆ ಇಡೀ ಮಾನವ ಸಮಾಜವನ್ನೇ ತಮ್ಮ ಹಾದಿಯಲ್ಲಿ ಕೊಂಡೊಯ್ಯಲು ಹವಣಿಸಿದ ಜಗದ ಜಂಗಮ.
ನಾನು ನನ್ನದು ಎಲ್ಲವನ್ನು ಕಳಚಿಟ್ಟು ಇಹ ಪರಗಳನ್ನು ತಮ್ಮ ಕಾಯಕದ ಮೂಲಕ ತೋರ್ಪಡಿಸಿದ ಸಿದ್ದಿ ಪುರುಷ. ಶ್ರೀ ಶಿವಕುಮಾರ ಶಿವಯೋಗಿಗಳ ಭಾವ ನಿರಾಳ, ನಿಷ್ಕಾಮ, ನಿರ್ವ್ಯಾಮೋಹ, ನೀಲಾಕಾಶ.
ಪರಮ ನಿರಪೇಕ್ಷೆಯಲಿ ದಿನವೂ ಸೇವೆಗಾಗಿ ಹಂಬಲಿಸಿದ ಮನವೇ ಮತ್ತೆ ಅವತರಿಸಿ ಬಾ ಸಿದ್ದಗಂಗಾ ಗುರುವೆ..
ಸಿದ್ದಮಲ್ಲಿಕಾರ್ಜುನಸ್ವಾಮಿ.ಹೆಚ್.ಎಸ್.
ಹುಂಡೀಪುರ. ಗುಂಡ್ಲುಪೇಟೆ..
..............
47.
ಗುರು ಸಿದ್ದಲಿಂಗ ಶಿವಕುಮಾರ ಸ್ವಾಮಿಗಳು
ಗು - ಗುರಿ ಇಲ್ಲದೆ ನಾನಿದ್ದೆ
ರು - ರುದ್ರಾಕ್ಷಿಯ ಧರಿಸಿ
ಸಿ - ಸಿರಿವಂತನಾದಾಗ
ದ - ದರಿದ್ರವು ಓಡಿಹೋಗಿ
ಲಿಂ - ಲಿಂಗ ಪೂಜೆಗೆ
ಗ - ಗಮನವಿಟ್ಟು
ಶಿ - ಶಿವ ಧ್ಯಾನದಲ್ಲಿ
ವ - ವಚನ ಹಾಡುತ
ಕು - ಕುಣಿದಾಡಿ
ಮ - ಮಾದ್ದಪ್ಪನ ನೆನೆದು
ರ - ರಂಗನ ಕೊಂಡಾಡಿ
ಸ್ವಾ – ಸ್ವಾರ್ಥವ ತೊರೆದು ದಾನವ ಮಾಡಲು
ಮೀ - ಮೀನಾ-ಮೇಷ ಎಣಿಸದೆ
ಗ - ಘರ್ವವನು ಬಿಟ್ಟು
ಳು - ಬಾಳುವೆನು
ಶ್ರೀ ಶಿವಕುಮಾರ ಸ್ವಾಮಿಗಳು
ಶ್ರೀ - ಶ್ರೀಮಂತರು ಗುಣದಲಿ ನೀವು
ಶಿ - ಶಿವನ ಕೃಪೆಯಿಂದ ಶಿವನೆಡೆಗೆ ಹೋದಿರಿ
ವ - ವಯಸ್ಸು ನೂರಾಹನ್ನೊಂದು ಆದರೂ
ಕುಮಾ- ಕುಮಾರರಾಗಿಯೇ ಇದ್ದು
ರ - ರವಿಯೆಂತ್ತೆ ಬೆಳಗಿ
ಸ್ವಾ - ಸ್ವಾರ್ಥವ ಬಿಟ್ಟು
ಮೀ - ಮಿನುಗು ತಾರೆಯಾಗಿ
ಗಳು - ಗಗನವಾಗಿ ಬೆಳೆದು ಮತ್ತೆ ಬಂದು ಎಲ್ಲರ ಬೆಳಗಿಸು ಬಾ ಗುರುವೇ ..
ಮಹದೇವಸ್ವಾಮಿ . ಎಸ್ ಮೋಹನ್
...............
48.
ಸಿದ್ಧಗಂಗಾ ಶ್ರೀಗಳು
ಸಿದ್ಧಗಂಗೆಯ ಸಿದ್ಧಿಪುರುಷರು
ಸದ್ಧಿಲ್ಲದೆ ಗದ್ಧುಗೆಯ ಏರಿದವರು
ಬಡವರಿಗೆ ಬಾಳ ದೀವಿಗೆಯು
ಅನಾಥರಿಗೆ ಆತ್ಮ ಬಂಧುವು ನೀವು.
ತ್ರಿವಿಧ ದಾಸೋಹಿಯು
ಜ್ಞಾನ ಗಂಗೆ ಶರಣರ ಸಂತ
ನಿಸ್ವಾರ್ಥ ಭಾವೈಕ್ಯದ ಸಂಕೇತ ನೀವು.
ತ್ಯಾಗದ ಕಾರುಣ್ಯ ಮೂರ್ತಿಯು
ವಿಶ್ವಕ್ಕೆಲ್ಲ ಭಾರತರತ್ನವು
ಕರುನಾಡ ಕಾಯಕ ಪುತ್ರರು
ಅಧ್ಯಾತ್ಮ ದ ಬೆಳಕು ನೀವು.
ಶತಮಾನದ ಸಂತರು
ಅನ್ನ ಅಕ್ಷರ ಆಶ್ರಯದಾತರು
ಕಲಿಯುಗ ಕರ್ಮಯೋಗಿಯೂ
ನೆಡೆದಾಡುವ ವಿಶ್ವ ವಿದ್ಯಾಲಯನೀವು.
ಹರಸಿರಿ ,ನೆಡೆಸಿರಿ ನಮ್ಮನು
ನಿಮ್ಮ ಬಾಳ ದಾರಿಯಲಿ
ನೆಡೆಯುವೆವು ನಾವು
ಶರಣು ಶರನೆಂಬೆವು ನಾವು.
ಎಚ್ ,ಎಸ್ ಭವಾನಿ ಜಿ ಉಪಾಧ್ಯ
ಕುಂಜಿಬೆಟ್ಟು ,ಉಡುಪಿ.
............
49.
” ಶತಮಾನದ ಮೇಲೆ ೧೧ ವರ್ಷ ಕಂಡ; ೨೧ ನೆ ಶತಮಾನದ ಬಸವತತ್ವದ ಶ್ರೇಷ್ಠ ಶಿವಯೋಗಿ”
೧೨ ನೆ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ೭೭೦ ಅಮರಗಣಂಗಳಿದ್ದರು, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಬಸವನುಯಾಯಿಗಳಿದ್ದರು. ಎಲ್ಲ ಜಾತಿ, ವರ್ಗದಿಂದ ಬಂದಂತಹ ಎಲ್ಲ ಸಮುದಾಯದ ಸಾಧಕ/ಸಾಧಕಿಯರಿದ್ದರು. ಉದಾಹರಣೆಯಾಗಿ ಸಮಗಾರ, ನೇಕಾರ, ಗಾಣಿಗ, ಮಾದಾರ, ಮೇದಾರ, ಡೋಹಾರ, ಕೊರವ, ಅಂಬಿಗರು, ಹೂಗಾರ, ಮಡಿವಾಳ ಹೀಗೆ ಎಲ್ಲ ಕಾಯಕಗಳನ್ನು ಮಾಡುತ್ತಿದ್ದ ಜನರು ಕಲ್ಯಾಣಕ್ಕೆ ಬಂದರು. ಕರ್ನಾಟಕದಲ್ಲಿದ್ದವರಷ್ಟೇ ಅಲ್ಲದೆ ಹೊರ ರಾಜ್ಯ, ಹೊರ ದೇಶಗಳಿಂದಲೂ ಬಸವಕೀರ್ತಿಯ ಕೇಳಿ ಬಂದವರಿದ್ದಾರೆ. ಇಸ್ಲಾಂರೂ ಬಂದರು. ಹಾಗೆ ಸರ್ವರೂ ಕಲ್ಯಾಣದ ಅನುಭವ ಮಂಟಪಕ್ಕೆ ಬರುವ ಕಾರಣ ಬಸವಣ್ಣನವರ ಕಾರ್ಯ.
ಲೋಕರೂಢಿಯಲ್ಲಿ ಹೇಳಬೇಕಾದರೆ ಬಸವಣ್ಣನವರು ನಟುವರ ಜಾತಿಯ ಅಲ್ಲಮಪ್ರಭುದೇವರನ್ನು ಅನುಭವ ಮಂಟಪದ ಮೊದಲ ಶೂನ್ಯಪೀಠದ ಅಧ್ಯಕ್ಷರನ್ನಾಗಿ (ಜಾತಿಯನ್ನು ಹುಡುಕದೆ) ನೇಮಿಸುತ್ತಾರೆ. ಎರಡನೇ ಅಧ್ಯಕ್ಷರಾಗಿ ಚೆನ್ನಬಸವಣ್ಣನವರು, ಮೂರನೆಯವರಾಗಿ ಸಿದ್ಧರಾಮದೇವರು ಹೀಗೆ ಆ ಶೂನ್ಯಪೀಠದ ಪರಂಪರೆ ಈಗಲೂ ಮುಂದುವರೆದಿದೆ. ೧೩ ರಿಂದ ೧೫ ನೆ ಶತಮಾನದವರೆಗೂ ಎಡೆಯೋರ ಸಿದ್ಧಲಿಂಗೇಶ್ವರರು ಮುಖ್ಯವಾಗಿ ೧೦೧ ವಿರಕ್ತ (ಚರಜಂಗಮ ಮೂರ್ತಿಗಳು) ಮಠಾಧೀಶರುಗಳು ಅದೇ ಶೂನ್ಯಪೀಠದಲ್ಲಿದ್ದು ಬಸವಾದಿ ಶರಣರ ವಚನಗಳನ್ನು ಮತ್ತು ಅವರ ಸಂದೇಶಗಳನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಮಹತ್ವವಾದ ಪಾತ್ರ ವಹಿಸಿದ್ದಾರೆ. ಹಾಗೂ ಹದಿನೈದನೆಯ ಶತಮಾನವು ಹನ್ನೆರಡನೆ ಶತಮಾನದ ಮುಂದುವರೆದ ಭಾಗವೆಂದು ಹೇಳಿದರೆ ತಪ್ಪಾಗದು.
೧೦೧ ವಿರಕ್ತ ಪರಂಪರೆಯಲ್ಲಿ ಬರುವ ಗೋಸಲ ಸಿದ್ದೇಶ್ವರ ಸ್ವಾಮಿಗಳೂ ಒಬ್ಬರಾಗಿದ್ದಾರೆ. ಎಲ್ಲ ವಿರಕ್ತ ಮಠಾಧೀಶರು ಬಸವತತ್ವದ ಪ್ರಚಾರಕ್ಕಾಗಿ ೭೦೦ ಕ್ಕೂ ಹೆಚ್ಚು ಲಿಂಗಾಯತ ಮಠಗಳನ್ನು ಸ್ಥಾಪಿಸಿದರು. ಅದರಲ್ಲಿ ತುಮಕೂರಿನ ನಮ್ಮ ಸಿದ್ಧಗಂಗಾ ಮಠವೂ ಒಂದು. ಗೋಸಲ ಸಿದ್ದೇಶ್ವರ ಸ್ವಾಮಿಗಳು ಪ್ರಾರಂಭದಲ್ಲಿ ತುಮಕೂರಿಗೆ ಬಂದಾಗ ತಮ್ಮ ಶಿಷ್ಯರೊಬ್ಬರಿಗೆ ನೀರಡಿಕೆಯಾಗುತ್ತದೆಯಂತೆ ಅವಾಗ ಒಂದು ಕಲ್ಲುಬಂಡೆಯಿಂದ ನೀರನ್ನು ಉದ್ಭವಿಸಿದರೆಂಬುದು ನಂಬಿಕೆ. ಅಂದಿನಿಂದ; ತುಮಕೂರಿನಿಂದ ನಾಲ್ಕೈದು ಕಿ.ಮೀ. ದೂರವಿರುವ ಆ ಊರಿಗೆ ಸಿದ್ದಗಂಗೆ ಎಂದು ಬಂದಿರಬಹುದು.
೧೫ ನೆ ಶತಮಾನದ ಅನಂತರ ಪ್ರಭುದೇವರ ಶೂನ್ಯಪೀಠವಾದ ಸಿದ್ಧಗಂಗಾ ಮಠಕ್ಕೆ ಯಾರು ಬಂದರು, ಏನಾಯಿತೆಂಬುದು ಸರಿಯಾಗಿ ತಿಳಿದುಬಂದಿಲ್ಲ. ೧೮೬೦ ರ ನಂತರ ಮಠಕ್ಕೆ ಗುಬ್ಬಿಯಿಂದ ಆಗಮಿಸಿದ ಅಟವಿ ಸ್ವಾಮಿಗಳು ಬಂದು ದಾಸೋಹದ ಕೈಂಕರ್ಯವ ಕೈಗೊಂಡು ಈ ಮಠದಲ್ಲಿ ಹತ್ತಿಸಿದ ಒಲೆ ಯಾವತ್ತಿಗೂ ಆರದಂತೆ ಶ್ರೀ ಎಡಯೋರ ಸಿದ್ಧಲಿಂಗೇಶ್ವರರಲ್ಲಿ ಬೇಡಿಕೊಂಡರೆಂಬ ಅಭಿಪ್ರಾಯವಿದೆ. ರುದ್ರಪ್ಪ ಎಂಬಾತರು ತಮ್ಮ ಮನೆಯ ಮೇಕೆಯನ್ನು ಮಾರಿದ್ದಕ್ಕಾಗಿ ಮನೆಯವರ ಕೋಪಕ್ಕೆ ಕಾರಣವಾಗಿ, ಮನೆಬಿಟ್ಟು ಸಿದ್ಧಗಂಗೆಗೆ ಬಂದು ಅಟವಿಸ್ವಾಮಿಗಳ ಶಿಷ್ಯರಾಗಿ ಗುರುಕಾರುಣ್ಯದಿಂದ ರುದ್ರಪ್ಪನವರೇ ಉದ್ದಾನ ಸ್ವಾಮಿಗಳಾಗಿ ಬೆಳೆಯುತ್ತಾರೆ. ೧೯೦೧ ರಲ್ಲಿ ಅಟವಿ ಸ್ವಾಮಿಗಳು ಲಿಂಗೈಕ್ಯರಾಗುತ್ತಾರೆ. ಉದ್ದಾನ ಶಿವಯೋಗಿಗಳು ಕಾಯಕ ಸದ್ಭಾವಿಗಳಾಗಿ, ಶಿವಯೋಗ ಸಾಧನೆಯ ಕಳಸವಾದರು. ಇವರು ಓದಿದ್ದು ಕಡಿಮೆಯಾಗಿದ್ದರೂ ಅರಿತದ್ದು ಜಾಸ್ತಿಯಾಗಿತ್ತು.
'ಉದ್ದಾನ ಶಿವಯೋಗಿಗಳು ಸಿದ್ಧಗಂಗೆಯ ಕ್ಷೇತ್ರಾಧಿಪತಿಗಳಾಗಿದ್ದ ಸಮಯದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ಧಗಂಗಾ ಮಠದೊಂದಿಗೆ ಒಳ್ಳೆಯ ಒಡನಾಟವಿದ್ದು ಮಠಕ್ಕೆ ಭೇಟಿ ನೀಡುತ್ತಿದ್ದರು.' ಶಿವಕುಮಾರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ಶಿವಣ್ಣ ಇವರು ಹುಟ್ಟಿದ್ದು ೧೯೦೮ ಎಪ್ರಿಲ್ ೧ ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಶ್ರೀ ಹೊನ್ನೇಗೌಡ ಮತ್ತು ಗಂಗಮ್ಮನವರ ಪುಣ್ಯಗರ್ಭದಿಂದ ೧೩ ನೆ ಮಗನಾಗಿ ದೇಹ ಧರಿಸಿ ಭುವಿಗೆ ಬರುತ್ತಾರೆ. ಮನೆಯಲ್ಲಿ ಕಿರಿಯರಾಗಿದ್ದ ಶಿವಣ್ಣನೆಂದರೆ ತಂದೆ-ತಾಯಿಗಳಿಗೆ ಪಂಚಪ್ರಾಣ. ಶಿವಣ್ಣನವರು ವೀರಾಪುರದಲ್ಲಿದ್ದ ಕೂಲಿಮಠದಲ್ಲಿ ಮರಳ ಮೇಲೆ ಅಕ್ಷರ ಬರೆಯುವ ಮೂಲಕ ತಮ್ಮ ಶೈಕ್ಷಣಿಕ ಕ್ಷೇತ್ರಕ್ಕೆ ಕಾಲಿಡುತ್ತಾರೆ. ನಂತರ ನಾಗವಲ್ಲಿ ಎಂಬ ಊರಿನ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ತೇರ್ಗಡೆಯಾದಮೇಲೆ ಸಿದ್ಧಗಂಗಾ ಮಠದ ಕಿರಿಯ ಉತ್ತರಾಧಿಕಾರಿಗಳಾಗಿದ್ದ ಮರುಳಾಧ್ಯರ ಮುಖಾಂತರ ಶ್ರೀ ಉದ್ದಾನ ಶಿವಯೋಗಿಗಳ ಪರಿಚಯವಾಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಹೋದರೂ ಸಿದ್ಧಗಂಗಾ ಮಠವನ್ನು ಮರೆಯದೆ ಅದರ ಹಿತವನ್ನು ಬಯಸುತ್ತಾರೆ. ತುಮಕೂರು ಜಿಲ್ಲೆಗೆ ಪ್ಲೇಗ್ ರೋಗ ಬಂದರೂ ಕೂಡಾ ಎಂದಿನಂತೆ ಶಿವಣ್ಣನವರ ಒಡನಾಟವಿತ್ತು. ಇದ್ದಕ್ಕಿದ್ದಂತೆ ಮರುಳಾಧ್ಯರು ಲಿಂಗೈಕ್ಯವಾಗುತ್ತಾರೆ.
ಮರುಳಾಧ್ಯರ ಕ್ರಿಯಾ ಸಮಾಧಿಯ ಸಮಯದಲ್ಲಿ ಬಂದಿದ್ದ ಶಿವಣ್ಣನವರನ್ನು ನೋಡಿ ಉದ್ದಾನ ಶಿವಯೋಗಿಗಳು ಎಲ್ಲರ ಸಮ್ಮುಖದಲ್ಲಿ ಈ ಮಠದ ಉತ್ತರಾಧಿಕಾರಿಯೆಂದು ಘೋಷಿಸಿ ಶಿವಕುಮಾರ ಸ್ವಾಮಿಗಳು ಎಂದು ನಾಮಕರಣ ಮಾಡುತ್ತಾರೆ. ಅವರು ಯಾವತ್ತೂ ನಾನು ಸ್ವಾಮಿಯಾಗಬೇಕೆಂಬ ಬಯಕೆಯಿಂದಿದ್ದವರಲ್ಲ ಅವರಿಗೆ ಬಯಸದೆ ಬಂದ ಲಿಂಗಭೋಗವದು. ಶಿವಕುಮಾರ ಸ್ವಾಮಿಗಳು ಸನ್ಯಾಸವ ಸ್ವೀಕರಿಸಿದ ನಂತರವೂ ಎಂದಿನಂತೆ ತಮ್ಮ ಓದಿನಲ್ಲಿ ತೊಡಗಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾಗಿ ವಾಪಸ್ ತುಮಕೂರಿಗೆ ಬರುತ್ತಾರೆ. ಉದ್ದಾನ ಶಿವಯೋಗಿಗಳು ೧೯೧೭ ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ೧೧/೧/೧೯೪೧ ರಂದು ಲಿಂಗೈಕ್ಯರಾಗುವ ಮುನ್ನ ತಮ್ಮ ದೃಷ್ಠಿಯಿಂದ ಶಿವಕುಮಾರ ಸ್ವಾಮಿಗಳನ್ನು ನೋಡಿ ಬಯಲಿನಲ್ಲಿ ಬಯಲಾಗುತ್ತಾರೆ. ನಂತರದಲ್ಲಿ ಎಲ್ಲ ಜವಾಬ್ದಾರಿಯೂ ಶಿವಕುಮಾರ ಸ್ವಾಮಿಗಳಿಗೆ ಹಸ್ತಾಂತರವಾಗುತ್ತದೆ.
ಸಿದ್ಧಗಂಗಾ ಶ್ರೀಗಳು ಈ ಮಠಕ್ಕೆ ಬರುವುದಕ್ಕಿಂತ ಮೊದಲು ಅತೀ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳಿದ್ದರು. ಇಂದು ವಿದ್ಯಾರ್ಥಿಗಳ ಸಂಖ್ಯೆ ಹತ್ತು ಸಾವಿರಕ್ಕೇರಿದೆ. ಎಲ್ಲ ಜಾತಿ, ಧರ್ಮಗಳಿಂದ ಬಂದ ವಿದ್ಯಾರ್ಥಿಗಳಿದ್ದಾರೆ. ಹಿಂದಿನ ಶ್ರೀಗಳ ಮಾರ್ಗದರ್ಶನದಂತೆಯೇ ಸಿದ್ಧಗಂಗಾ ಶ್ರೀಗಳು ಮುನ್ನಡೆದು ಬಸವಣ್ಣನವರು ರೂಪಿಸಿದ ಕಾಯಕ-ದಾಸೋಹ ತತ್ವಗಳನ್ನು ಪಾಲಿಸಿ, ಪ್ರತಿಪಾದಿಸಿದವರು. ಅನುಭವ ಮಂಟಪದಲ್ಲಿ ಯಾವ ರೀತಿಯಾಗಿ ಸರ್ವರಿಗೂ ಸಮಾನ ಅವಕಾಶವಿತ್ತೊ ಅದೇ ರೀತಿಯಾಗಿ ಸಿದ್ಧಗಂಗೆಯ ಮಠದಲ್ಲಿ ಎಲ್ಲ ಸಮುದಾಯ ದ ಮಕ್ಕಳನ್ನು, ಮುಸಲ್ಮಾನ ಮಕ್ಕಳನ್ನೂ ನಾವು ಕಾಣಬಹುದು. ಶ್ರೀ ಗಳು ಜಾತಿ, ಮತ, ವರ್ಗ, ಕುಲ, ಲಿಂಗಭೇದಗಳನ್ನು ಮಾಡದಿರಲು ಬಸವಾದಿ ಶರಣರು ಮತ್ತು ಅವರ ವಚನಗಳು ಕಾರಣವೆನ್ನಬಹುದು.
ಸಿದ್ಧಗಂಗಾ ಮಠದಲ್ಲಿ ದಿನದಿಂದ ದಿನಕ್ಕೆ ದಾಸೋಹದ ವೆಚ್ಚ ಹೆಚ್ಚುತ್ತಾ ಹೋಯಿತು. ಆಗ ಶ್ರೀಗಳು ಇಲ್ಲಿ ದಾಸೋಹವು ಅನುಚಾನವಾಗಿ ನಡೆಯಲೆಂಬ ಸಂಕಲ್ಪದಿಂದ ನಡೆದುಕೊಂಡೇ ಹೋಗಿ ಭಕ್ತರ ಮನೆಯಿಂದ ದವಸ, ಧಾನ್ಯಗಳನ್ನು ತರುತ್ತಿದ್ದರು. ಈ ಮಠಕ್ಕಾಗಿ ಅಂದರೆ ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿದಿದ್ದಾರೆ. ಸ್ವತಃ ತಾವೇ ಒಲೆಯ ಮುಂದೆ ನಿಂತು ಕಟ್ಟಿಗೆಗಳನ್ನು ಹೊಂದಿಸಲು ಮುಂದಾಗುತ್ತಿದ್ದರು. ಶ್ರೀಗಳಿಗೆ ಬಸವಣ್ಣನವರ "ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ" ಎನ್ನುವ ಅವರ ದಾಸೋಹದಲ್ಲಿ ಅಷ್ಟೊಂದು ಶ್ರದ್ಧೆಯಿತ್ತು. ಭೂತ, ಭವಿಷತ್ತಿನ ಪರಿಸ್ಥಿತಿಗಳ ಅರಿತಿದ್ದ ಶ್ರಿಗಳು ಬಡತನದ ಬೇಗೆಯಲಿ ಬಳಲುತ್ತಿದ್ದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದರು. ನಾನು ದೇವರನ್ನು ಕಂಡಿದ್ದೇನೆ ಹೌದು! ನನ್ನ ಮಠದಲ್ಲಿರುವ ೧೦ ಸಾವಿರ ಮಕ್ಕಳೇ ನನಗೆ ದೇವರು ಎಂದು ಮಕ್ಕಳಲ್ಲಿ ದೇವರನ್ನು ಕಂಡ ಮಹಾ ಮಹಿಮರಿವರು. ಅನ್ನ, ಅರಿವು, ಆಶ್ರಯಕ್ಕೆ ಅನುಕೂಲವಾಗಿ ಬಸವತತ್ವದ ತ್ರಿವಿಧ ಪರಮ ದಾಸೋಹಿಗಳಾಗಿದ್ದರು. ಎಲ್ಲ ವಿದ್ಯಾರ್ಥಿಗಳ ಕುರಿತು; ಚೆನ್ನಾಗಿ ಓದಿರಿ, ಚೆನ್ನಾಗಿ ಊಟ ಮಾಡಿರೆಂದು ಕಾಳಜಿ ಮಾಡುತ್ತಿದ್ದರು. ಪ್ರಶಸ್ತಿ ಪದವಿಗಳನ್ನು ಬಯಸದ ನಿಸ್ವಾರ್ಥಿಗಳು. ಸದ್ದಿಲ್ಲದೆ ಸಾಧನೆ ಮಾಡಿದ ಶಿವಯೋಗಿಗಳು ನಮ್ಮ ಸಮಾಜಕ್ಕಾಗಿ ದುಡಿದವರು. ಅಂತಹ ಕಾಯಕ ಯೋಗಿಗಳಿಗೆ ಭಾರತರತ್ನವಲ್ಲ ಅವರೇ ಈ ಭಾರತಕ್ಕೆ ರತ್ನವಾಗಿದ್ದರೆಂದರೆ ತಪ್ಪಾಗದು. ಶಿವಕುಮಾರ ಸ್ವಾಮಿಗಳು ೧ ಶತಮಾನದ ಮೇಲೆ ೧೧ ವರ್ಷ ಕಂಡ, ೨೧ ನೆ ಶತಮಾನದ ಬಸವತತ್ವದ ಶ್ರೇಷ್ಠ ಶಿವಯೋಗಿಗಳಾಗಿದ್ದಾರೆ.
ಸಿದ್ಧಗಂಗಾ ಶ್ರೀಗಳು ಬಸವಣ್ಣನವರು ಕರುಣಿಸಿದ ಇಷ್ಟಲಿಂಗವನ್ನು ಯಾವುದೇ ಸ್ಥಿತಿಯಲ್ಲಿಯೂ ಬಿಡುತ್ತಿರಲಿಲ್ಲ. ಎಂಥಹ ಪರಿಸ್ಥಿರಿಯಲ್ಲಿಯೂ ವಿಭೂತಿಯನ್ನು ಮರೆತೂ ಇರುತ್ತಿರಲಿಲ್ಲ. ಅಪ್ಪಟ ಬಸವತತ್ವದ ಪರಿಪಾಲಕ, ಪ್ರತಿಪಾದಕರಾಗಿದ್ದರು. ದಿನನಿತ್ಯ ೪ ಘಂಟೆಗೆ ಎದ್ದು ಧ್ಯಾನ, ಶಿವಯೋಗವನ್ನು ಮಾಡುತ್ತಿದ್ದರು. ಅವರು ಇಚ್ಛಾಮರಣಿಗಳೆಂದರೆ ತಪ್ಪಾಗದು. ೧೧೧ ವರ್ಷಗಳ ಕಾಲ ಅವರ ಶರೀರ ಅವರ ಜೊತೆಯಾಗಿ ಯಾವುದೇ ಬೇಸರವಿಲ್ಲದೆ ಇದ್ದ ಮುಖ್ಯಕಾರಣವೆಂದರೆ; ಇಷ್ಟಲಿಂಗ. ನಿರಂತರ ಶಿವಯೋಗ ಸಾಧನೆಯಿಂದ ಆಯುಷ್ಯವೃದ್ಧಿ, ನೆನೆಪಿನಶಕ್ತಿ ಹೆಚ್ಚಾಗುವುದು, ಅಕ್ಷರಜ್ಞಾನ ಹೆಚ್ಚುವುದು. ಅದಕ್ಕಾಗಿಯೇ ಶ್ರೀಗಳ ಕಣ್ಣಿನ ದೃಷ್ಟಿಯೂ ಅಷ್ಟೊಂದು ಚೆನ್ನಾಗಿತ್ತು ಶ್ರೀಗಳು ಕನ್ನಡಕವ ಬಳಸದೆ ಪತ್ರಿಕೆಗಳನ್ನು ಓದುತ್ತಿದ್ದರು.
"ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ" ಎಂಬ ಶಿವಯೋಗಿ ಸಿದ್ಧರಾಮದೇವರ ವಚನದ ಸಾಲಿನಂತೆ ಸಿದ್ಧಾಗಂಗೆಯ ಶಿವಯೋಗಿಗಳವರು ಹೆಣ್ಣು-ಗಂಡೆಂಬ ಭೇದವ ಮಾಡಿದವರಲ್ಲ. ಒಮ್ಮೆ ಸುಷ್ಮಾರಾವ್ ಎಂವವರು ತಮ್ಮ ೧೩ ನೆ ವಯಸ್ಸಿನಲ್ಲಿ ಸಿದ್ಧಗಂಗೆಗೆ ಪ್ರವಾಸಕ್ಕೆಂದು ಹೋದಾಗ ಊಟಕ್ಕೆಂದು ಮಠದ ಆವರಣದಲ್ಲಿ ಕುಳಿತಿರುವುದನ್ನು ಕಂಡು ಶ್ರೀಗಳು ನೀವು ಹುಡಿಗಿಯರು ಯ್ಯಾಕೆ ಹೊರಗಡೆ ನಿಂತಿದ್ದೀರೆಂದು ಕೇಳಲು; ಆ ಹೆಣ್ಣು ಮಗಳು, ಇಲ್ಲ ನಾವು ಮುಟ್ಟಾಗಿರುವುದರಿಂದ ಬೇರೆಡೆ ಕೂರಲು ಹೇಳಿದರು ಅಂದರಂತೆ! ಅದಕ್ಕೆ ಶ್ರೀಗಳಿಗೆ ದುಖಃವೆನಿಸಿ ಇದೆಲ್ಲವೂ ನೈಸರ್ಗಿಕ ಪ್ರಕ್ರಿಯೆ ಇದಕ್ಕೆ ಮುಜುಗರ ಬೇಡ, ನೈಸರ್ಗಿಕ ಪ್ರಕ್ರಿಯೆಯ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಡಿ, ನಿಮ್ಮ ದೇಹ ನಿಮ್ಮ ಹೆಮ್ಮೆ ಎಂದು ಅಲ್ಲಿ ಬಂದಿದ್ದ ಹೆಣ್ಮಕ್ಕಳಿಗೂ ಎಲ್ಲರ ಜೊತೆಯಾಗಿ ಪ್ರಸಾದ ಸ್ವೀಕರಿಸಲು ಅನುಕೂಲ ಮಾಡಿದರಂತೆ.
ಇಂತಹ ಲಿಂಗಾಯತ ಪರಂಪರೆಯಲ್ಲಿ ಬಂದ ಶೂನ್ಯಪೀಠದ ಸಿದ್ಧಗಂಗಾ ಶಿವಯೋಗಿಗಳು ಲಿಂಗೈಕ್ಯರಾಗಿದ್ದು ೨೧ ಜನೆವರಿ ೨೦೧೯ ರಂದು. ಬಸವಾದಿ ಪ್ರಮಥರು ಪ್ರತಿಪಾದಿಸಿದ ”ಕಾಯಕವೇ ಕೈಲಾಸ" ವೆಂಬ ತತ್ವ, ಲಿಂಗವ್ಯಸನ, ದಾಸೋಹ ಪ್ರೇಮವು ಅವರಲ್ಲಿ ತುಂಬಿತ್ತು. ಸಕಲ ಜೀವಾತ್ಮರಿಗೂ ಲೇಸ ಬಯಸುವ ದಯಾಗುಣ, ಕರುಣೆ, ಜಾತಿ-ಮತವ ಎಣಿಸದೆ ಸರ್ವರೂ ಸಮಾನರೆಂಬ ಸಮತಾಭಾವ, ಹಸಿದವನಿಗೆ ಅನ್ನ ನೀಡುವುದು ಧರ್ಮವೆಂದು ಜೀವದಯಾಪರವಾದ ಬಸವಧರ್ಮದ ಶರಣತತ್ವದಲ್ಲಿಯೇ ನಡೆದು, ಸಾರ್ಥಕ ಬದುಕನ್ನು ಬದುಕಿದ ಶ್ರೀಗಳು ಕಾಲ್ಪನಿಕ ಲೋಕಕ್ಕೆ ಜಾರದೆ ಬಸವಣ್ಣನವರ ಐತಿಹಾಸಿಕ "ಬಸವ ಬೆಳಗು" ಎಂಬ ನಾಟಕವನ್ನು ಬರೆದರು.
ಬಸವಾದಿ ಪ್ರಮಥರ ಅಪ್ಪಣೆಯಂತೆ ಭುವಿಗೆ ಬಂದು, ಶರಣ ಮಾರ್ಗದಲ್ಲಿ ನಡೆದು ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳನ್ನು ಆಚರಿಸಿ, ವಾಮಮಾರ್ಗ ಖಂಡಿಸಿ ಸಹಜ ಬದುಕನ್ನು ಸಾಗಿಸಿದ ಲಿಂಗವಂತ ಧರ್ಮದ ಬಸವರತ್ನವಾಗಿದ್ದ, ಬಸವತತ್ವದಲ್ಲಿಯೇ ನಡೆದ ಶಿವಕುಮಾರ ಸ್ವಾಮಿಗಳ ಅಂತ್ಯಸಂಸ್ಕಾರವನ್ನು ಬಸವತತ್ವದಂತೆ ಮಾಡದೆ ಶರಣ ವಿರೋಧವಾಗಿ; ಅಂತಹ ಪರಮ ಪವಿತ್ರವಾಗಿದ್ದ ಶ್ರೀಗಳ ಶರೀರವನ್ನು ಅರ್ಥವಿಲ್ಲದ ಪರಂಪರೆಗೆ ಅಂಟಿಕೊಂಡ ಕೆಲವು ಸಂಪ್ರದಾಯವಾದಿಗಳು ಹಲವಾರು ಜಲದಿಂದ ಶುದ್ಧೀಕರಣಗೊಳಿಸಿ, ಪಂಚಕಳಶಗಳನ್ನು ಹೂಡಿ, ಅಂತ್ಯ ಸಂಸ್ಕಾರದ ಕೆಲವು ಅರ್ಥಹೀನ ವಿಧಿ-ವಿಧಾನಗಳನ್ನು ನೆರವೇರಿಸಿ ಬಸವತತ್ವವನ್ನು ಮರೆಮಾಚಿ ಶ್ರೀಗಳಿಗೆ ಅವಮಾನ ಮಾಡುವ ಪ್ರಯತ್ನ ನಡೆಯಿತು. ಬಹುಶಃ ಶ್ರೀಗಳು ಇದ್ದಿದ್ದರೆ ಅದಕ್ಕೆ ಒಪ್ಪಿಗೆ ನೀಡುತ್ತಿರಲಿಲ್ಲ ಅನಿಸುತ್ತದೆ. ಕಾರಣ ಅವರು ಶರಣ ಸಂಸ್ಕೃತಿಯಲ್ಲಿದ್ದರು.
ಇನ್ನು ಮುಂದಾದರೂ ನಾವೆಲ್ಲ ಜಾಗೃತರಾಗಿ ಲಿಂಗಾಯತ ಧರ್ಮಕ್ಕಾಗಿ ದುಡಿದ ಎಲ್ಲ ವಿರಕ್ತ ಮಠಗಳಲ್ಲಿ ಆ ರೀತಿಯ ಅರ್ಥಹೀನ, ಶರಣವಿರೋಧಿ ಅಚರಣೆಗಳು ಇಂದಿಗೂ ನಡೆಯುತ್ತಿವೆ. ಅವೆಲ್ಲವು ಆ ರೀತಿ ಆಗದಂತೆ ನಾವೆಲ್ಲ ಎಚ್ಚರ ವಹಿಸಿ ಇಂತಹ ಶ್ರೇಷ್ಠ ಶಿವಯೋಗಿಗಳ ಆತ್ಮಕ್ಕೆ ನಿಜವಾದ ಶಾಂತಿ ಸಿಗುವಂತೆ ಮಾಡಬೇಕಾಗಿದೆ. ಮತ್ತು ಶ್ರೀಗಳು ಲಿಂಗೈಕ್ಯರಾದಾಗ ದೇವಲೋಕಕ್ಕೆ ಹೋದರು ಎನ್ನುವ ವೀರಶೈವ ಮತ್ತು ವೈದಿಕರಲ್ಲಿರುವ ಕಾಲ್ಪನಿಕ ಕತೆಗಳನ್ನು ಜನರ ತಲೆಯಲ್ಲಿ ತುಂಬಿದ್ದಾರೆ. ಲಿಂಗವಂತ ಧರ್ಮದಲ್ಲಿ ದೇವಲೋಕ ಮರ್ತ್ಯಲೋಕ ಬೇರಿಲ್ಲ ಅದಕ್ಕಾಗಿ ಸಿದ್ಧಗಂಗಾ ಶ್ರೀಗಳು ಕಾಣದ ಯಾವ ಲೋಕಕ್ಕೂ ಹೋಗಿಲ್ಲ. ಅವರು ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲಾದವರು. ಬೆಳಗಿನೊಳಗಣ ಮಹಾಬೆಳಗಾದವರವರು. ಮರಣ ಬಂದರೆ ಸಿಟ್ಟು ನಮಗಿಲ್ಲ ಎಂಬ ಕಡಕೋಳ ಮಡಿವಾಳಪ್ಪನವರ ವಾಣಿಯಂತೆ, ನಾಳೆ ಬಪ್ಪುದು ನಮಗಿಂದೇ ಬರಲಿ ಎಂಬ ಬಸವವಾಣಿಯಂತೆ ಶ್ರೀಗಳು ಮರಣಕ್ಕೆ ಅಂಜಿದವರಲ್ಲ ಮರಣವೇ ಮಹಾನವಮಿ ಎಂಬಂತೆ ಇಚ್ಛಾಮರಣಿಗಳಾಗಿದ್ದರು. ಅವರ ಶರೀರ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಯಾವಾಗಲೂ ನಮ್ಮೊಳಗೆ ಶಕ್ತಿಯಾಗಿ ನಮ್ಮನ್ನು ಸನ್ಮಾರ್ಗದ, ಸತ್ಯದ ಕಡೆಗೆ, ಶರಣ ಮಾರ್ಗದ ಕಡೆಗೆ, ಬಸವಣ್ಣನವರ ಕಾಯಕ, ದಾಸೋಹದ ಸಿದ್ಧಾಂತದ ಕಡೆಗೆ ನಮ್ಮನ್ನೆಲ್ಲ ನಡೆಸುತ್ತಾರೆ. ಅವರು ದಣಿವರಿಯದೆ ನಿಸ್ವಾರ್ಥ ಸೇವೆ ಮಾಡಿದವರು. ಅಂತಹ ಆ ದಿವ್ಯಚೇತನಕ್ಕೆ ಶರಣಾರ್ಥಿಗಳು.
-ಶರಣಪ್ಪ ಗೊಲ್ಲರ.
ಸಾ|| ಸಂಶಿ.
.............
50.
ಶಿವನ ಸಿರಿಮುಡಿಗೆ
ಬಡ ಮಕ್ಕಳಿಗೆ ವಿದ್ಯೆ ನೀಡಿದ ಮಹಾಗುರುವೆ
ಲಕ್ಷಾಂತರ ಜನರ ಬಾಳಿಗೆ ಬೆಳಕಾದ ಕಲ್ಪತರುವೆ
ಶರಣರಾ ಹಾದಿಯಲಿ ನಡೆದು ಏರಿದಿರಿ ದೈವತ್ವದೆಡೆಗೆ
ಅನಘ್ರ್ಯರತ್ನವಾಗಿ ಸೇರಿದಿರಿ ಪರಶಿವನ ಸಿರಿಮುಡಿಗೆ
ಪಿ.ಎಸ್.ಚಂದ್ರಣ್ಣ
ಸೂಪರಿಂಟೆಂಡಿಂಗ್ ಎಂಜಿನಿಯರ್ (ನಿ)
....................
3

ವೈಲೇಶ ಪಿ ಎಸ್ ಕೊಡಗು
೨೭/೨/೨೦೧೯
4
ದಾಸೋಹ ಕುಲಕ್ಕೆ ಸಿದ್ಧಗಂಗಾ ಶ್ರೀಗಳು ಮಹಾ ಕಲಶ
ಸಾಮಾನ್ಯ ಬಡ ಕುಟುಂಬವೊಂದರಿಂದ ಬಂದಶ್ರೀಗಳು ಅಸಾಮಾನ್ಯರಾಗಿ ಜಗತ್ತಿಗೆ ಬೆಳಕಾಗಿದ್ದು ಈಶತಮಾನದ ಭಾಗ್ಯ. ಶಿಕ್ಷಣ, ಆರೋಗ್ಯ, ಧರ್ಮದಏಳಿಗೆಗೆ ಶ್ರೀಗಳು ತಮ್ಮ ಇಡೀ ಜೀವನವನ್ನುಮುಡಿಪಾಗಿರಿಸಿದವರು. ಜಾತಿ,
ಬೇಧವಿಲ್ಲದೆ ತಮ್ಮ ಮಠದಲ್ಲಿ ಸರ್ವಧರ್ಮಿಯರಿಗೂಆಶ್ರಯ ನೀಡಿದ ಸಿದ್ಧಗಂಗಾ ಮಠದ ಕೀರ್ತಿ ಪತಾಕೆ
ಡಾ.ಶಿವಕುಮಾರಸ್ವಾಮಿಗಳ ಕಾರಣದಿಂದಲೇ ಇಂದುವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ಶ್ರೀಗಳು ಮಠದಸಂಪೂರ್ಣ
ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿಮಠದ ಆದಾಯ ತುಂಬಾ ಕಡಿಮೆ ಇತ್ತು ಎಂಬಮಾತು ಇದೆ .
ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದುವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನುನಡೆಸುವುದು
ಸುಲಭದ ಮಾತಲ್ಲ . ಮಠದ ಭೂಮಿಯೆಲ್ಲಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿಅತಿವೃಷ್ಟಿ,
ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳಕಷ್ಟವಾಗುತ್ತಿತ್ತು ಎಂಬ ಪರಿಸ್ಥಿತಿಯಲ್ಲಿ ಸ್ವಾಮೀಜಿಅವರ ತಪಸ್ಸು
ಕಾಣಿಸುತ್ತದೆ, ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದಆದ್ಯತೆಗಳ
ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣಸಂಸ್ಥೆಗಳ
ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆಭಕ್ತರ ಹಾಗು ಗಣ್ಯರ
ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು.ಆರಂಭದ
ದಿನಗಳಲ್ಲಿ 'ಶ್ರೀಗಳು ಇವನ್ನೆಲ್ಲ ನಿಭಾಯಿಸಲುಸಾಧ್ಯವಿಲ್ಲ' ಎಂಬ ಆಡು ನುಡಿಗಳೂಕೇಳಿಬಂದಿದ್ದವು ಎಂದು ಮಠದ ಹತ್ತಿರ ಸಂಪರ್ಕಇದ್ದವರ ಅಬಿಪ್ರಾಯ . ಇದ್ಯಾವುದಕ್ಕೂ ಧೃತಿಗೆಡದಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ.
ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಒಬ್ಬಪ್ರಬುದ್ಧ ವ್ಯಕ್ತಿ ಅವರದು ಸಮಾಜ ಪರ ಚಿಂತನೆ ಮತ್ತುನೆಡೆ.
ಇದ್ದೇ ವಿಚಾರ ಸ್ವಾಮಿಜಿ ಅವರನ್ನು ಅಷ್ಟು ಮೇಲಕ್ಕೆಏರಿಸಿದ್ದು. ಹೌದು..... ಎಲ್ಲರು ಒಳ್ಳೆ ಚಿಂತನೆ ಮತ್ತುಒಳ್ಳೆಯ
ಆಶಯವನ್ನು ಹೊಂದಿರುತ್ತಾರೆ ಆದರೆ ಅದರ ತಕ್ಕಂತೆಅವರ ನೆಡೆ ಬೆಳೆಸಿ ಕೊಳ್ಳಬೇಕು ಎಂಬ ಪ್ರಜ್ಞೆಇರುವುದಿಲ್ಲ.
ಸ್ವಾಮೀಜಿ ಅವರು ಎಲ್ಲರ ಅನುಭವಕ್ಕೆ ಬಂದವರುಅವರು ಎಲ್ಲರ ಮೇಲೆ ಬೇಗ ಪ್ರಭಾವ ಬೀರುವ ಶಕ್ತಿಇತ್ತು ....
ಈಗಲೂ ಚಾಲ್ತಿಯಲ್ಲಿದೆ. ಇದರಿಂದ ಲಕ್ಷ -ಲಕ್ಛ ಮಂದಿಭಕ್ತರು ಅಂದಿನಿಂದ ಇಂದಿನವರೆಗೆ ನಿತ್ಯವೂ ಪೂಜ್ಯರಪ್ರಭಾವಕ್ಕೆ
ಒಳಗಾಗಿರುತ್ತರೆ. ಸ್ವಾಮಿಜಿ ಅವರು ಎಲ್ಲ ವರ್ಗದಜನರಿಗೆ, ಎಲ್ಲ ಕಾಯಕ ಧರ್ಮಕ್ಕೆಹೊಂದಿಕೊಂಡಿರುವ ಮಹಾ
ಚೇತನ. ಶ್ರೀಗಳ ನಿಷ್ಠೆ, ಪ್ರಾಮಾಣಿಕತೆ, ತತ್ವ ಯಾರುಬೇಕಾದರೂ ಅಳವಡಿಸಿ ಆಚರಣೆಗೆ ತರಬಹುದು.ಸ್ವಾಮಿಜಿ
ಅವರ ಆದರ್ಶ ಒಮ್ಮೆ ಯೋಚಿಸಿ ನೋಡಿ!ಮೇಲ್ವರ್ಗದ ಜನರ ಸಹಾಯದಿಂದ ಕೆಳ ವರ್ಗದಅನಾನುಕೂಲ ಹೊಂದಿದ
ಜನರಿಗೆ ಅನ್ನ, ಅಕ್ಷರ, ಕಾಯಕ ಎಂಬ ತ್ರಿವಿಧದಾಸೋಹ ಮಾಡುತ್ತಿದ್ದಾರೆ. ಮೇಲ್ವರ್ಗದ ಜನರಿಗೆಧರ್ಮಪ್ರಜ್ಞೆ
ಮೂಡಿಸುತ್ತಾ, ಇತ್ತ ಕೆಳ ವರ್ಗದ ಜನರಿಗೆ ಸರ್ವಸವಲತ್ತುಗಳನ್ನು ಪಡೆದು ಅಭಿವೃದ್ಧಿ ಹೊಂದಲುಪೂರಕ ವಾತಾವರಣ
ನಿರ್ಮಾಣ ಮಾಡುತ್ತ ಸಮಾಜವನ್ನು ಒಂದೇ ಸ್ಥಿತಿಗೆನಿರ್ಮಾಣ ಮಾಡುವ ಶ್ರೇಷ್ಠ ಚಿಂತನೆ ಶ್ರೀಗಳದ್ದು.
ಸನಾತನ ಹಿಂದೂ ಧರ್ಮ ಇದೆ ರೀತಿಪ್ರತಿಪಾದನೆಯನ್ನು ಆಚರಿಸಿಕೊಂಡು ಬಂದಿದ್ದು ಇದರಅನುಯಾಯಿಯಾಗಿದ್ದರೆ. ಸ್ವಾಮಿಜಿ ಅವರು ಎಲ್ಲರಮೇಲೆ ಬೇಗ ಪ್ರಭಾವ ಬೀರುವ ಮಹಾ ಚೇತನ ,ಇಂದು ಅವರ ಪ್ರಭಾವ ನದಿ ನದಿಗಳ ಮೀರಿ, ಸಾಗರಸಾಗರಗಳ ಮೀರಿ ವ್ಯಾಪಿಸಿವೆ.
ನಾನು ಸ್ವಾಮಿಜಿ ಅವರ ಪ್ರಭಾವಕ್ಕೆ ಒಳಗಾಗಿ ಬಂದವ್ಯಕ್ತಿ . ಅವರ ನೆಡೆ, ನುಡಿ, ವರ್ತನೆ, ಶೈಲಿ, ಮಾತುಎಲ್ಲವೂ
ನನಗೆ ಮಹಾ ಪ್ರೇರಣೆ. ಅವರ ದರ್ಶನ ನನಗೆ ದಶಕದಮಹಾ ಭಾಗ್ಯ ಅವರ ಕೃಪೆ ಯಿಂದ ನನಗೆ ವಿದ್ಯಾ,ಅನ್ನ, ಅಕ್ಷರ
ಎಲ್ಲವೂ ದೊರೆತು ಒಂದು ಕೆಲಸ ಸಿಗುವ ವರೆಗೂಅವರು ನನ್ನ ಸಾಕಿ ಸಲುಹಿದ್ದಾರೆ. ಅವರ ಒಂದುಮಾತು ನನ್ನ
ಜೀವನಕ್ಕೆ ಬೀಜಾಕ್ಷರ ಮಂತ್ರ ಇದಂತೆ. ಪೂಜ್ಯರ ಭಿಕ್ಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಾನು ಮುಂದೆಪ್ರೌಢ
ಶಿಕ್ಷಣವನ್ನು ಶ್ರೀಗಳ ರಜತ ಮಹೋತ್ಸವ ಶಾಲೆಯಲ್ಲಿಮುಗಿಸಿದೆ , ಅಲ್ಲಿಯವರೆಗೆ ನಾನು ಶ್ರೀಗಳ ಪ್ರಭಾವಕ್ಕೆ
ಒಳಗಾಗಿ ಬಿಟ್ಟಿದ್ದೆ . ನನ್ನ ಶಾಲೆಯ ಪ್ರಾಧ್ಯಾಪಕರು “ವಿದ್ಯೆ ಕಡಿಮೆ ಇದ್ದರೂ ನಡತೆ ಶುದ್ಧವಾಗಿ ಇರಬೇಕು “ ಎಂಬ
ಮಾತನ್ನು ಹೇಳುತ್ತಿದ್ದರು. ಆ ಮತ್ತು ಪೂಜ್ಯ ಸ್ವಾಮಿಜಿಅವರ ಆಶೀರ್ವಚನ ಆಗಿತ್ತು. ನಾನು ಆ ಮಾತನ್ನುನನ್ನ
ಜೀವನದ ಮಹಾ ಮಂತ್ರ ಎಂಬಂತೆ ಅದರ ಆಚರಣೆಗೆನಿಂತೆ.
ಕನಿಷ್ಟ ಅಂಕ ಪಡೆಯಲು ಯೋಗ್ಯತೆ ಇಲ್ಲದ ನನಗೆಅಂದು ಎಸ್. ಎಸ್. ಎಲ್. ಸಿ. ಪಾಸ್ ಆಗುವುದುಕಷ್ಟ ಅನ್ನುವುದು ಗೊತ್ತಿತ್ತು, ಆದರೆ ನಾನು ಪಾಸ್ಆಗದೆ ಇದ್ದರು ಚಿಂತೆ ಇಲ್ಲ ನನ್ನ ನಡತೆ ಶುದ್ಧವಾಗಿಇರಬೇಕು ಎಂಬ ನಿಯಮ ನನ್ನ ಒಳಗಡೆ ಬೆಳೆಯಲುಪ್ರಾರಂಭವಾಯಿತು. ಆದರೆ ನನಗೆ ನಡತೆ ಎಂಬಪದದ ಅರ್ಥ ಅಷ್ಟು ಗೊತ್ತಿರಲಿಲ್ಲ. ಪ್ರೌಢ ವಯಸುಪ್ರೀತಿ, ಪ್ರೇಮ ಈ ರೀತಿ ವಿಚಾರಗಳಿಗೆ ಮನಸುಕೊಡದೆ ಇರುವುದೇ ಉತ್ತಮ ನಡೆತೆ ಎಂದುಭಾವಿಸಿದೆ, ಒಂದು ಬಗೆಯ ಸನ್ಯಾಸ ನನ್ನು ಕರೆಯಲುಶುರುವಾಯಿತು. ಶ್ರೀಗಳ ಅಂಗಿಯ ಬಣ್ಣ, ಅವರ ಶಿವಪೂಜೆ, ವೇದ ಮ೦ತ್ರಗಳ ಪರಿ, ಪ್ರಸಾದ, ಶ್ರೀಗಳಆಪ್ತರ ಒಡನಾಟ ಇವೆಲ್ಲವೂ ನನ್ನ ಮೇಲೆ ಪ್ರಭಾವಬೀರಿದೆ. ದೇಶಕ್ಕೆ ಒಬ್ಬ ಉತಮ ಪ್ರಜೇಯಾಗಬೆಕು, `ಜೀವನದಲ್ಲಿ ಒಂದು ಉತ್ತಮ ಸಾಧನೆ ಮಾಡಬೇಕು,ಯಾರ ಹಂಗು ಇಲ್ಲದ ಸ್ವತಂತ್ರ ಜೀವನ ಸಾಗಿಸಬೇಕು,ಲೌಕಿಕ ಸುಖಕ್ಕೆ ಮನಸು ಕೊಡದೆ ಅಲೌಕಿಕ ಮಾರ್ಗಇರಬೇಕು ಈ ರೀತಿ ಚಿಂತನೆಗಳು ಬೆಳೆಯಲುಕಾರಣವಾಯಿತು. ಇಲ್ಲಿ ಸಿದ್ಧಗಂಗಾ ಶ್ರೀ ಗಳಿಂದಾಗಿಕಲಿತ ಒಂದು ವಿಶೇಷ ಅನುಭವ ಇದೆ . ಜೀವನದಲ್ಲಿಒಂದು ಉತ್ತಮ ಸಾಧನೆ ಮಾಡಬೇಕು, ಯಾರ ಹಂಗುಇಲ್ಲದ ಸ್ವತಂತ್ರ ಜೀವನ ಸಾಗಿಸಬೇಕು, ಲೌಕಿಕ ಸುಖಕ್ಕೆಮನಸು ಕೊಡದೆ ಅಲೌಕಿಕ ಮಾರ್ಗ ಇರಬೇಕು ಎಲ್ಲವೂ ಸರಿ ಆದರೆ ಇವೆಲ್ಲ ಇದು ಇಲ್ಲದಂತೆ ಸೇವೆಆಗಬೇಕು ಎಂದು ಅವರು ಹೇಳಿದ್ದಾರೆ. ಸಮಾಜಕ್ಕೆಶ್ರೇಗಳ ದಾಸೋಹ ತತ್ವ ಪ್ರಮುಖ ಪಾತ್ರ ವಹಿಸುತ್ತದೆ. 12 ನೇ ಶತಮಾನದಲ್ಲಿ ಶರಣರ ಮಹಾ ಕ್ರಂತಿ ಎಂದರೆಅದು ದಾಸೋಹ ….ದಾಸೋಹ ….ದಾಸೋಹ….ಎಲ್ಲವನ್ನು ಸ್ವಹಾss ಎನ್ನದೆ ದಾಸೋಹ ಎಂಬುದು ಮಹಾ ಮನೆಯೆ ಶರಣ ಧರ್ಮ ಪರಿಕ್ಪನೆ .
ಪ್ರಾಯಶಃ ಒಬ್ಬ ದಿನಗೂಲಿ ಶರಣ ಮಾರಯ್ಯಅಂದಿನ ಬಹುದೊಡ್ಡ ರಾಜ್ಯದ ಪ್ರಧಾನ ಮಂತ್ರಿಪದವಿಯಲ್ಲಿದ್ದ
ಬಸವಣ್ಣನವರಿಗೆ ಈ ರೀತಿಯಾಗಿ ಪ್ರಶ್ನಿಸಿ ತಾನುಗಳಿಸಿದ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯನ್ನುಹಿಂದಿರುಗಿಸಿದ ಅತ್ಯಂತ
ವಿರಳ ಘಟನೆ ನೋಡಿದರೆ ಕಾಯಕ ಮತ್ತುದಾಸೋಹಕ್ಕೆ ಎಷ್ಟು ಮಹತ್ವವನ್ನು ಶರಣರುನೀಡಿದ್ದರು ಎಂದು
ಗೊತ್ತಾಗುತ್ತದೆ. ಸಿಧ್ದಗಂಗೆಯ ಸಮಾಜ ಸೇವೆಯಲ್ಲಿದಾಸೋಹ ಮಹತ್ವದ ಹೆಜ್ಜೆ . ಮನುಷ್ಯನಿಗೆ ತೃಪ್ತಿಆಗುವ ಒಂದೆ
ಒಂದು ವಿಚಾರ ಎಂದರೆ ಅದು ಅನ್ನ ,
ಅಖಿಲೇಶ್ ಟಿ ಎಮ್
ತುಮಕೂರು
@@@@@@@
5.
1999 ರ ಇಸವಿ ನಾನು ಒಂಭತ್ತನೇ ತರಗತಿಯಲ್ಲಿದ್ದೆ ಶಾಲೆಯಿಂದ ಪ್ರವಾಸ ಹೊರಟಿದ್ದೆವು ತುಮಕೂರಿನತ್ತ ಅಲ್ಲಿ ಎಲ್ಲಾ ಪ್ರವಾಸ ಮುಗಿಸಿ ಕೊನೆಗೆ ಸಂಜೆ ವೇಳೆಗೆ ಸಿದ್ದಗಂಗೆಯ ಪವಿತ್ರವಾದ ಸ್ಥಳಕ್ಕೆ ಬಂದು ತಲುಪಿದೆವು ಎಲ್ಲರೂ ಬಸ್ಸಿನಿಂದ ಇಳಿದು ಕೈಕಾಲು ಮುಖ ತೊಳೆದು ವಿಭೂತಿ ಧಾರಣೆ ಮಾಡಿ ಪೂಜ್ಯರ ದರುಶನ ಪಡೆಯಲು ಸಾಲಾಗಿ ನಿಂತೆವು ಮಠದ ಮಕ್ಕಳೊಂದಿಗೆ ಕೂಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಂತರ ದೇವರ ದರ್ಶನ ಪಡೆದೆವು ನಂತರ ಪ್ರಸಾದ ಸ್ವೀಕರಿಸಿ ಹೊರಡಲು ಸಜ್ಜಾದೇವು ಬಸ್ಸು ಹತ್ತಲು ಬಂದಾಗ ತಿಳಿಯಿತು ಪಂಚರ್ ಆಗಿದೆ ಎಂದು ಆಗಲೇ ರಾತ್ರಿ10 ರ ಸಮಯವಾಗಿತ್ತು ಅದರಿಂದ ಅಲ್ಲೇ ಉಳಿಯುವ ವ್ಯವಸ್ಥೆ ಮಾಡಲು ಶಿಕ್ಷಕರು ಹೊರಟರು ಅಲ್ಲಿ 20 ವರುಷಗಳ ಹಿಂದೆ ಅಷ್ಟೇನೂ ವ್ಯವಸ್ಥೆ ಇರದ ಕಾರಣ ನಮಗೆ ಮಲಗಲು ಕೋಣೆ ಸಿಗಲಿಲ್ಲ ಎಲ್ಲರನ್ನೂ ಕರೆದುಕೊಂಡು ಮಠದ ಮುಂಬಾಗದಲ್ಲಿ ಟಾರ್ಪಲ್ ಹಾಸಿ ಎಲ್ಲರನ್ನೂ ಮಲಗುವ ವ್ಯವಸ್ಥೆ ಮಾಡಿದರು ಡಿಸೆಂಬರ್ ತಿಂಗಳು ಅದಾದ ಕಾರಣ ತುಂಬಾ ಚಳಿ ಇತ್ತು ನಾವೆಲ್ಲ ವಾಪಸ್ ಬರುವೆವು ಎಂದೂ ಏನನ್ನು ತೆಗೆದುಕೊಂಡು ಹೋಗಿರಲಿಲ್ಲ ಮಧ್ಯರಾತ್ರಿ ಕಳೆಯುತ್ತಿದ್ದ ಹಾಗೇ ಚಳಿ ಜಾಸ್ತಿ ಆಯಿತು ಆ ಸಮಯದಲ್ಲಿ ನಮ್ಮ ನಡೆದಾಡುವ ದೈವವು ಆ ಮಾರ್ಗವಾಗಿ ಸಂಚರಿಸುತ್ತ ಬಂದರು ಅಂತಹ ಚಳಿಯಲ್ಲಿ ನಡುಗುತ್ತಾ ಮಲಗಿರುವ ಮಕ್ಕಳನ್ನು ಕಂಡು ಮರುಗಿದ ನಮ್ಮ ದೇವರು ಕೂಡಲೇ ಮಠದ ಮುಂಬಾಗ ಸೌದೆಗಳನ್ನು ತಂದು ಬೆಂಕಿ ಹಾಕಿಸಿ ಬೆಳಗಿನ ವರೆಗೂ ಉರಿಯುತ್ತಿರಬೇಕೆಂದು ಮಠದ ಸಿಬ್ಬಂದಿಗೆ ಸೂಚನೆ ಕೊಟ್ಟರು ಅದರಂತೆ ಆ ಬೆಂಕಿಯ ಶಾಖದಿಂದ ನಮ್ಮ ಚಳಿ ಮಾಯಾವಾಗಿ ಅಮ್ಮನ ಮಡಿಲಲ್ಲಿ ಮಲಗಿದ್ದ ಭಾಸವಾಗಿ ಅಂದಿನ ರಾತ್ರಿ ನೆಮ್ಮದಿಯ ನಿದ್ದೆ ಮಾಡಿದೇವು ಬೆಳಗಾಗುತ್ತಿದ್ದ ಹಾಗೇ ಸೂರ್ಯನ ಕಿರಣಗಳು ಮೈ ಮೇಲೆ ಬೀಳಾಲಾರಂಬಿಸಿದವು ಎಲ್ಲರು ಕಣ್ಣು ಬಿಟ್ಟು ನೋಡಿದೆವು ನಮ್ಮ ಮುಂದೆ ಸಾಕ್ಷಾತ್ ಭಗವಂತನ ಸ್ವರೂಪವಾದ ಶಿವಕುಮಾರ ಸ್ವಾಮಿಗಳು ನಿಂತಿದ್ದರು ಮಠದ ಮುಂದೆಲ್ಲ ಉರಿದು ಬೂದಿಯಾದ ಸೌದೆ ರಾಶಿ ಕಂಡೆವು ದೇವರು ಕೇಳಿದರು ನಮ್ಮನ್ನು ಮಕ್ಕಳೇ ನಿದ್ದೆ ಚೆನ್ನಾಗಿ ಬಂತೆ ಎಂದೂ ಎಲ್ಲರನ್ನೂ ಪ್ರೀತಿಯಿಂದ ಆಲಂಗಿಸಿ ನಮ್ಮ ಮಠದ ವತಿಯಿಂದ ನಿಮಗೆ ಮಲಗುವ ವ್ಯವಸ್ಥೆ ನೀಡಲಾಗದ್ದಕ್ಕೆ ಕ್ಷಮೆಯಿರಲಿ ಎನ್ನುವುದೆ ನಮಗಂತೂ ಏನು ಮಾತಾಡುವುದು ತಿಳಿಯಲಿಲ್ಲ ತಕ್ಷಣ ಎಲ್ಲರೂ ಕೈ ಮುಗಿದು ಅವರಲ್ಲಿ ಸಾಕ್ಷಾತ್ ತಾಯಿಯ ಮಮತೆ ವಾತ್ಸಲ್ಯ ಪ್ರೀತಿಯ ಕಂಡೆವು ಎಲ್ಲರೂ ಶುಚಿಯಾಗಿ ಬಂದು ಫಲಹಾರ ಸ್ವೀಕರಿಸಿ ಎಂದೂ ಹೇಳಿ ಅವರ ಕಾಯಕಕ್ಕೆ ನಡೆದಾಡುತ್ತ ಹೊರಟರು ಅಂತಹ ಕರುಣಮಯಿಯನ್ನು ಕಂಡು ಅವರ ಪ್ರೀತಿಯನ್ನು ಪಡೆದ ನಾವುಗಳೇ ಪುಣ್ಯವಂತರು ಅವರ ಹೊಗಳಲು ಪದಗಳೇ ಇಲ್ಲಾ 😢😢😢
ನನ್ನ ಮಗನಿಗೇ ಇಷ್ಟ ಲಿಂಗವನ್ನು ಅವರ ಅಮೃತ ಹಸ್ತದಿಂದ ಪಡೆದದ್ದೆ ನಮ್ಮ ಪೂರ್ವಜನ್ಮದ ಪುಣ್ಯ ಎಂದೂ ನನ್ನ ಮನದಾಳದ ಮಾತು
ಇಂದಿಗೂ ನಾನು ಮುಂಜಾನೆ ಎದ್ದಾಗ ಕಾಣುವ ಮೊದಲ ದೈವ ಅವರೇ ಈ ಶತಮಾನ ಕಂಡ ಮಹಾನ್ ಚೇತನ ನಮ್ಮ ದೇವರು
ಮಹಾಮಹಿಮ,ಪರಮನಿರಂಜನ,ತ್ರಿವಿಧ ದಾಸೋಹಿ,ಜಗಜ್ಯೋತಿ ಬಸವಣ್ಣನವರ ಅನುಯಾಯಿ,ಕಾರುಣ್ಯ ಗಂಗೆಯ ಜನಕ,ಈ ಶತಮಾನದ ತೇಜೋಮಯಯವಾದ ಮಕ್ಕಳ ಪ್ರೀತಿಯ ಅಮೃತಮಯಿ,ಕಾಯಕವೇ ಕೈಲಾಸ ಎಂದ ಬಸವಣ್ಣನವರ ನುಡಿಯಂತೆ ನಡೆದರು ನಮ್ಮ ದೇವರು ಸಿದ್ದಗಂಗೆಯ ಪೂಜ್ಯರು
ಊರೂರ ತಿರುಗಿ ಭಿಕ್ಷೆಯ ಬೇಡಿ ಬಂದು ದಾಸೋಹವನ್ನು ಉಸಿರಾಗಿಸಿಕೊಂಡ ದೇವತಾಮನುಷ್ಯ ಇವರಿಗೆ ನಮ್ಮ ಶತಕೋಟಿ ನಮನಗಳು🙏🙏🙏🙏🙏
ದಾಸೋಹಕ್ಕೆ ಅಂದು ಹಚ್ಚಿದ ಓಲೆಯು ಇಂದಿಗೂ ಜಗ ಜಗನೇ ಉರಿಯುತ್ತ ಎಲ್ಲರ ಹಸಿವ ನೀಗಿಸುತಲಿದೆ
ಹೊಟ್ಟೆ ಹಸಿವು ಅದರ ಜೊತೆಗೆ ಜ್ಜಾನದ ಹಸಿವನ್ನು ಕೂಡ ತಣಿಸಿದ ಗುರುವು ಈಗ ನಮ್ಮ ಕಣ್ಣ ಮುಃದಿಲ್ಲ ಎನ್ನುವುದು ವಿಷಾಧಕರ ಸಂಗತಿ😢😢😢
ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತಿರುವ ನಮ್ಮ ದೇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಬಾಳಿನ ದಾರಿಯಲ್ಲಿ ಜ್ಞಾನದ ದೀವೀಗೆ ಹಚ್ಚೋಣ ಶರಣು ಶರಣಾರ್ಥಿಗಳು
🙏🙏🙏🙏🙏
ಪುಷ್ಪಲತಾ ಕುಮಾರಸ್ವಾಮಿ
.............
@@@@@@
6.
ಮೂರು ಜೋಳಿಗೆಯ ಜಂಗಮನಿಗೆ ನುಡಿ ಮಾಲೆ
ಸಿದ್ದಗಂಗೆಯ ಸಿರಿಯು,ಉದ್ದಾನ ಶಿವಯೋಗಿಯ ಕರುಣೆಯು,ಮರುಳರಾಧ್ಯರ ಕಂದನು ಶ್ರೀ ಶಿವಕುಮಾರ ಸ್ವಾಮಿಗಳು,
ವೀರಾಪುರದಲ್ಲಿ ಕಂದನಾಗಿ ಜನಿಸಿ ಜಗ ಬೆಳಗುವ ಜ್ಯೋತಿಯಾಗಿ ಕಾಯಕವ ಮಾಡಿ ಮಹಾದೇವನಾದರು ನಾನೆಂಬ ಅಹಂಕಾರವನ್ನೇ ಅರಿಯದ ಅರಸನು ಈ ಗುರುವು,ಮಕ್ಕಳಿಗಾಗಿ ತನ್ನೊಕ್ಕಲನ್ನೆ ಲೆಕ್ಕಿಸದೆ ಲೋಕದ ಸೇವೆಗಾಗಿ ತನ್ನನ್ನೇ ತೊಡಗಿಸಿಕೊಂಡು ಮಕ್ಕಳಿಗಾಗಿ ಮಠ ಕಟ್ಟಿ,ಅರಸಿ ಬಂದವರಿಗೆ ಸೂರು ನೀಡಿದ ಸಿರಿವಂತ ಹಾಗೂ ಶಿವನ ಅಂಗಾರವೇ ಬಂಗಾರವೆಂದು ಜ್ಞಾನವೇ ಜೀವನಕ್ಕೆ ದೀಪ,ಕಾಯಕವೇ ದೇವರಿರುವ ತಾಣ,ಸಮಾಜ ಸೇವೆಯೇ ಸೌಭಾಗ್ಯ ಎಂದು ನಡತೆಯಲ್ಲಿ ತೋರಿ ನಡೆದಾಡುವ ದೇವರಾದ ನಿರಂಜನ,ನಿರಾಭರಣ ಗುರುಗಳು ಇವರು, ನಾ ಸಾಹಿತ್ಯದಿ ಅಲ್ಪ ಬೆಳೆಯಲು ದಾರಿ ದೀಪವಾದ ಧೀಮಂತನು ದಯೆಯ ಮೂರುತಿ ಈ ತುಮಕೂರಿನ ಸಿದ್ದಗಂಗೆಯ ಸಿದ್ದ ಪುರುಷ,
ಅನ್ನಾಕ್ಷರದ ಒಡೆಯನು ಈ ಅರಸನು
ಬೇಡಿ ಬಂದವರಿಗೆ ತುಸು ನಕ್ಕು ಆಶೀರ್ವಾದಿಸುವ ಜಂಗಮನು *ಮೂರು ಜೊಳಿಗೆಯ ಮಹಿಮನು*, ತ್ರಿವಿಧದ ಒಡೆಯನು ಈ ಭುವಿಯ ಭಗವಂತನು,
ಆರದ ಅಗ್ನಿ,ಅಳಿಯದ ಅಕ್ಷರ,ಸವೆಯದ ಸೂರು ಇಲ್ಲಿ ಅಕ್ಷಯವಾಗಿದೆ ಸಿದ್ದಗಂಗೆಯ ಸಿರಿನಾಡು
ಧಣಿದು ಬಂದ ಮನಕ್ಕೆ ತಣಿಸುವ ತಂಗಾಳಿಯಾಗಿ ಸಾಮಾನ್ಯರಲ್ಲಿ ಬೆರೆತು ಬಡವರ ಸಿರಿಯಾದನು
ಅನ್ನವಿಟ್ಟು ಅರಸನಾದನು,ಅಕ್ಷರ ತಿದ್ದಿಸಿ ಗುರುವಾದನು,ಸೂರನ್ನು ಕೊಟ್ಟು ಆಸರೆಯಾಗಿ ಆಲದ ಮರದಂತೆ ನೆರಳಾದ ನಿತ್ಯ ನಿರಂಜನ ಈ ಶಿವಕುಮಾರ ಗುರುವು,
ಕಾಯಕವ ಮಾಡಿ ಗದ್ದುಗೆಯ ಗುಡಿ ಸೇರಿದ ಗುರುವೇ, ನಮಗೆಲ್ಲಾ ದೇವರು ನೀನೆ
ಎನ್ನ ಮನದ ಹೃದಯದ ಗುಡಿಯಲ್ಲಿ ನೆಲೆಸಿದ ದೇವರು ನೀನು ನಿನ್ನ ಪಾದಡಿಯಲ್ಲಿ ಮಣಿದ ನನ್ನ ಕಣ್ಮನಗಳೇ ಧನ್ಯ,
*"ನಾ ಹೋದರು ಹಸಿವ ನೀಗಿಸಿ ಎಂದ ದೇವರು ನೀನು",*
ಪುಣ್ಯವಾಯ್ತು ಈ ನೆಲವು ಕಾಯ ಹೋದರು ಕಾಯಕದ ನೀತಿಯನ್ನು ಅರುಹಿ ಗದ್ದುಗೆಯಲ್ಲಡಗಿ ಶಿವನಾದೆ ನೀನು,
ನೀ ನಡೆಯುವ ನಡೆ ಚಂದ ಗುರುವೇ
ನೀ ನುಡಿಯುವ ಮಾತು ವೇದಾಂತ ಗುರುವೇ
ನಿನ್ನ ಪಾದದ ದನಿಯು ಚೈತನ್ಯದ ಚಿಲುಮೆ ಓ ಚಿನ್ಮಯನೇ,
ಸದ್ದಿಲ್ಲದೆ ಕಾಯಕವ ಮಾಡಿ ಶರಣರ ಹೆಸರಿಗೆ ಗರಿಯಾಗಿ ಸಾರ್ಥಕತೆಗೆ ಮುನ್ನುಡಿಯಾಗಿ ಜಗಕ್ಕೆ ದೀಪವಾದ ನೀನು ಹುಣ್ಣುಮೆ ಬೆಳಕಲ್ಲಿ ಲೀನವಾಗಿ ಶಿವಸಾಯುಜ್ಯವ ಪಡೆದೆ,
ಇಹಲೋಕವ ತೊರೆದು ದೇವಲೋಕದಿ ದಾಸೋಹಿಯಾಗಲೋದೆಯ ಧೀಮಂತನೇ, ಅರಿವಿನ ಗುರುವೇ ಅವತರಿಸು ಬಾ ಮತ್ತೊಮ್ಮೆ,ಸದ್ದಿಲ್ಲದೆ ಎದ್ದು ಬಾ ಗುರುವೇ ನೀ ಸಮಾಜದ ಸಿರಿಯು,
ಗದ್ದುಗೆಯ ಸದ್ದಿಲ್ಲದೆ ಏರು ಬಾ ನಿನ್ನ ನೆನೆಯುವ ಈ ಮನವು ಮನಬಾಗಿ ನುಡಿ ಮಾಲೆಯ ನಿನಗರ್ಪಿಸಿ ನಾ ಶರಣೆಂದು ನಮಿಸುವೇ ಸಿದ್ದಗಂಗೆಯ ಸಿದ್ದನೇ, ಶರಣು ಶರಣಯ್ಯ...
ಶ್ರೀಹರಿ ದ್ರಾವಿಡ್(ಲೇಖಯೋಗಿ)
ನಾಯಕನಹಟ್ಟಿ
ಚಿತ್ರದುರ್ಗ ಜಿಲ್ಲೆ-577536
..........................
7.
ಪರಮ ಪೂಜ್ಯ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ
ಶ್ರೀ ಶಿವಕುಮಾರಸ್ವಾಮಿಗಳು ಅಥಣಿ ಮುರುಘೇಂದ್ರ ಶಿವಯೋಗಿಗಳು ಹೇಳುತಿದ್ದ ಮಡಿವಾಳ ಮಾಚಯ್ಯ, ಅರಳಯ್ಯ, ಅಪ್ಪಣ್ಣ, ಚನ್ನಯ್ಯ, ಕಕ್ಕಯ್ಯ ತಂದೆಗಳ ಕಾಯಕವ ನಾನು ಮಾಡುವೆ, ಆಯಾಯ ಕಾಯಕದಲ್ಲಿ ಬಸವೇಶ ಇರುತಿಹನು.
ಎಲ್ಲ ಶರಣ ಶರಣೆಯರ ಭಕ್ತಿ, ನುಡಿದಂತೆ ನಡೆಯುತಿದ್ದುದ್ದನ್ನು ವಚನಗಳ ಉದಾಹರಿಸಿ ಶರಣರು ಹೀಗೆ ಹೇಳಿಬಿಟ್ಟಿದ್ದಾರೆ ಎಂದು ತಮ್ಮ ಆಶೀರ್ವಚನಗಳಲ್ಲಿ ಹೇಳಿ ನಾವೆಲ್ಲ ಶರಣ ಪಥದಾಲ್ಲಿ ನಡೆಯಲು ಆಶೀರ್ವದಿಸಿದ್ದಾರೆ.
ಶ್ರೀ ಮಠದ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿಂದ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಕೋರಿಕೆಯಂತೆ ಭಕ್ತರ ಊರುಗಳಲ್ಲಿ ರಾತ್ರಿಯಿಡೀ ಎಲ್ಲ ನಾಟಕಗಳನ್ನು ಶ್ರೀಗಳು ನೋಡುತ್ತಿದ್ದು, ಮರು ದಿನ ತಮ್ಮ ಕಚೇರಿಯಲ್ಲಿ ಕಾಯಕ, ದರ್ಶನದಲ್ಲಿ ತೊಡಗುತ್ತಿದ್ದದ್ದು "ಪವಾಡವೇ" ಸರಿ!
ಶ್ರೀಗಳು ತಮಗೆ ೧೦೦ ವರ್ಷಗಳಾದರೂ ಒಂದು ಗಂಟೆಗೂ ಹೆಚ್ಚು ಕಾಲ ನಿಂತೆಯೇ ಆಶೀರ್ವಚನ ಮಾಡುತ್ತಿದ್ದರು!
ಶ್ರೀಗಳು ಭಿನ್ನಹ ಒಪ್ಪಿಕೊಂಡ ಪೂಜೆ, ಸಾರ್ವಜನಿಕ ಸಮಾರಂಭಗಳಿಗೆ ಸರಿಯಾಗಿ ತಪ್ಪದೆ ದಯಮಾಡುತಿದ್ದುದ್ದು ವಿಶೇಷ.
ಶ್ರೀಗಳ ಜೀವನವನ್ನು ಅಧ್ಯಯನ ಮಾಡಿದವರು ಬೆಕ್ಕಸ ಬೆರಗಾಗುವರು!
ಭಕ್ತರಿಗೆ ನಡೆದಾಡುವ ದೇವರು ಆಗಿದ್ದ ಶ್ರೀಗಳು ಪ್ರತಿದಿನ ಮೂರು ಸಾರಿ ಇಷ್ಟ ಲಿಂಗವನ್ನು ಪೂಜಿಸಿ ಮಹಾ ಲಿಂಗವೇ ಆಗಿ, ಸಿದ್ದ ಗಂಗೆಯನ್ನು ಭೂಕೈಲಾಸ ಮಾಡಿ ತಮ್ಮ ಗುರುಗಳಾದ ಉದ್ದಾನ ಮಹಾ ಶಿವಯೋಗಿಗಳ ಕೃಪೆಯಿಂದ ಅಕ್ಕಮಹಾದೇವಿ ಅವರ ವಚನ : ಗುರುವಿನ ಕರುಣೆಯಿಂದ ಲಿಂಗವ ಕಂಡೆ
ಗುರುವಿನ ಕರುಣೆಯಿಂದ ಪಾದೋದಕ ಕಂಡೆ
ಗುರುವಿನ ಕರುಣೆಯಿಂದ ಪ್ರಸಾದವ ಕಂಡೆ
ಗುರುವಿನ ಕರುಣೆಯಿಂದ ಜಂಗಮರ ಕಂಡೆ
ಗುರುವಿನ ಕರುಣೆಯಿಂದ ಶರಣರ ಕಂಡೆ ಚನ್ನ ಮಲ್ಲಿಕಾರ್ಜುನಾ.
ಶ್ರೀಗಳು ತಮ್ಮ ಗುರುಗಳನ್ನು (ಶಿಷ್ಯ ಗುರುಗಳನ್ನು ಮೀರಿಸುವಂತೆ)ಮೀರಿಸಿದ್ದಾರೆ.
ಬಸವಣ್ಣನವರ ವಚನ :
ಜಗದಗಲ
ಮುಗಿಲಗಲ
ಮಿಗೆಯಗಲ
ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.
ನಮ್ಮೆಲ್ಲರ ನಡೆದಾಡುವ ದೇವರು ಸಿದ್ದಗಂಗಾಮಠದ ಗದ್ದುಗೆಯಲ್ಲಿ ಕಾಯವನ್ನು ಬಿಟ್ಟು ಮಹಾ ಲಿಂಗವೇ ಆಗಿ ಅಗೋಚರವಾಗಿದ್ದಾರೆ.
ಶರಣಾರ್ಥಿಗಳು,
ಗುರುಪಾದಸ್ವಾಮಿ
ಬಿಲಿಗೆರೆ ಹುಂಡಿ
ಕಿರಗಸೂರು ಅಂಚೆ
ಟಿ ನರಸೀಪುರ ತಾಲೂಕು
ಮೈಸೂರು ಜಿಲ್ಲೆ
571124
@@@@@@@
8.
@@@@@@@
9.
🙏ಭಾರತಕ್ಕೆ ರತ್ನ🙏
ದೇವರಿಗೆ ಸಾವಿಲ್ಲ, ದೇವರು ನಡೆದ ದಾರಿಗೆ ಕೊನೆಯಿಲ್ಲ ,ದೇವರು ಜೀವಿಸಿದ ಪ್ರತಿ ಕ್ಷಣವೂ ಅಮೂಲ್ಯವಾಗಿ,ಕೋಟ್ಯಂತರ ಭಕ್ತರಿಗೆ ದಾರಿ ದೀಪವಾದ ಮಹಾ ಚೇತನ ಶ್ರೀಗಳ ಎಂದಿಗೂ ಮರೆಯಾಗುವುದಿಲ್ಲ.
ಮಹಾಚೇತನ ಶ್ರೀಗಳನ್ನು ಆವರಿಸಿರುವ ಉಪ್ಪು,ಪತ್ರ,ಭಸ್ಮ ನಾವೇ ಧನ್ಯ ಎನ್ನುತಿವೆ. ಇದನ್ನು ಕಂಡ ಭಕ್ತರು ದುಃಖದಲ್ಲಿ ಮುಳಿಗಿದ್ದಾರೆ.
ಇಷ್ಟಲಿಂಗ ಪೂಜೆಯ ಮಹತ್ವವನ್ನು ಜಗತ್ತಿನ ಜನರಿಗೆ ಸಾರಿದ ಕಾಯಕ ಯೋಗಿ ನಡೆದಾಡುವ ದೇವರಿಗೆ ಭಕ್ತರ ಕೋಟಿ ಕೋಟಿ ನಮನಗಳು.
ನಿಮಗೆ ಭಾರತ ರತ್ನವಲ್ಲ......ಭಾರತಕ್ಕೆ ನೀವು ರತ್ನ...
ನೇತ್ರ ನಟರಾಜು
ತೇರಿನ ಬೀದಿ ಕೆಂಪನಪಾಳ್ಯ
ಕೊಳ್ಳೇಗಾಲ ತಾಲೂಕು ಚಾಮರಾಜನಗರ ಜಿಲ್ಲೆ
@@@@@@@
10.
🙏ಸರ್ವರ ಬೆಳಕು🙏
ನಡೆದಾಡುವ ದೇವರು ಎನ್ನುವ ಬಿರಿದು 'ಭಾರತರತ್ನ' ಕ್ಕಿಂತಲೂ ದೊಡ್ಡದು ಭಾರತರತ್ನವನ್ನು ಈ ಹಿಂದೆ ಹಲವಾರು ಪಡೆದಿದ್ದಾರೆ, ಮುಂದೆ ಹಲವರು ಪಡೆಯಲೂ ಬಹುದು ಆದರೆ #ನಡೆದಾಡುವ_ದೇವರು ಎನ್ನುವ ಬಿರುದನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಮಾತ್ರ ಪ್ರಪಂಚದ ಜನ ನೀಡಿದ್ದಾರೆ.
ಭಕ್ತರನ್ನ ಮೂಢರಾಗಿಸಲಿಲ್ಲ ನನ್ನ ಗುರುದೇವ, ಸರ್ವಶಕ್ತನಾಗಿಸಿದರೂ..
ಹಸಿವು ಬಾಯಾರಿಕೆಯಿಂದ ಬಂದವರಿಗೆ ಅನ್ನ ನೀರು ನೀಡಿದ ದೇವರು ನನ್ನ ಗುರುದೇವ..
ಅನಾಥ ಮಕ್ಕಳ ಪಾಲಿನ ತಂದೆ ತಾಯಿ ಗುರುವಗಿದ್ದರೂ ನನ್ನ ಗುರುದೇವ...
ಅಂಧ ಮಕ್ಕಳ ಬಾಳಿನ ಬೆಳಕಾಗಿದ್ದರೂ ನನ್ನ ಗುರುದೇವ...
ಬಸವಣ್ಣನ ಕಾಯಕ ತತ್ವದ ಪರಿಪಾಲಕರಾಗಿದ್ದರೂ ನನ್ನ ಗುರುದೇವ...
ಗುರುದೇವ ನಿಮಗಿದೋ ಕೋಟಿ ವಂದನೆಗಳು...
ಶರಣು ಶರಣಾರ್ಥಿ
ಕಾಂತರಾಜು
ಗುಂಡ್ಲುಪೇಟೆ
@@@@@@
11.
@@@@@@@12.
🙏ಸರ್ವ ಧರ್ಮದ ಸಾಕಾರಮೂರ್ತಿ🙏
ನಡೆದಾಡುವ ದೇವರು ಸರ್ವಧರ್ಮದ ತ್ಯಾಗಮಯಿ ಕರುಣಮಯಿ
ಕಲಿಯುಗದ ಬಸವಣ್ಣ
ತ್ರಿವಿದ ದಾಸೋಹಿಗಳು .ಉಚಿತ ವಿದ್ಯಾಭ್ಯಾಸ ಕೊಟ್ಟು ಉಪನ್ಯಾಸ ಮಾಡಿದರು ಮಕ್ಕಳಿಗೆ ಮಕ್ಕಳಾದವರು
ಸೌಹಾರ್ದತೆಗಾಗಿ ಸರ್ವಶ್ರೇಷ್ಠತೆಯ
ಕಾಯಕವೇ ಕೈಲಾಸ ವೆಂದು ಜಗಕೆ ಸಾರಿದ ಗುರುಗಳು
ಜಗದ ಸಕಲಜೀವಿಗಳಿಗೆ ಉಸಿರಿಗಾಗಿ ಬದುಕಿನಲ್ಲಿ. ಬದುಕನ್ನು ಕಂಡವರು
ನಡೆದಾಡುವ ದೇವರು ನುಡಿದಂತೆ ನೆಡೆ ನುಡಿ ನುಡಿದು ಪ್ರಸಾದ ಕೊಟ್ಟು ನಮಗೆ
ದಾರಿ ದೀಪವಾದವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಗುರುಗಳಿಗೆ ನನ್ನ ನುಡಿ ನಮನ
ಕಾಂತರಾಜು ವೈಬಿ ಸಾಲುಮರದ ಪೊಲೀಸ್ ಯಲಗುಂದ
@@@@@@@
13.
*ಶರಣರ ಪಾಲಿನ ಧೀಶಕ್ತಿ ಶ್ರೀ ಸಿದ್ಧಗಂಗಾ ಶ್ರೀ*
ನುಡಿಯೆಂಬುದು ನಡೆಯೊಳಡಗಿರುವ *ಧೀಶಕ್ತಿ* ಅರಿವೆಂಬುದು ಆಂತರ್ಯದಲ್ಲಡಗಿರುವ *ಜ್ಞಾನ ದೀವಿಗೆ* ಈ ಸತ್ವಯುತ, ಶಕ್ತಿಯುತ ಮಾತುಗಳಿಗೆ ಪ್ರೇರಣೆಯಾದವರು ಸಿದ್ಧಗಂಗಾ ಶ್ರೀ. ಅಭಿನವ ಬಸವಣ್ಣರೆಂದು ಅಸಂಖ್ಯಾತ ಜನರಿಂದ ಕರೆಸಿಕೊಂಡ ಶ್ರೀಗಳು ತಮ್ಮ ಜೀವನದುದ್ದಕ್ಕೂ ಕಳಂಕ ರಹಿತರಾಗಿ ಬದುಕಿದರು. ಜನಸಾಮಾನ್ಯರಿಂದ ಹಿಡಿದು ಅತ್ಯುನ್ನತ ಅಧಿಕಾರದಲ್ಲಿರುವ ವ್ಯಕ್ತಿಗಳನ್ನು ಒಂದೇ ಸಮನಾಗಿ ಕಂಡ ಅದಮ್ಯ ಚೇತನ ಸಿದ್ಧಗಂಗಾ ಶ್ರೀ. ವ್ಯಕ್ತಿಗೆ ವ್ಯಕ್ತಿತ್ವವೇ ಶ್ರೀರಕ್ಷೆ ಎಂಬುದನ್ನು ಸಾಬೀತು ಮಾಡಿದ ಮಹಾನ್ ಚೇತನರು ಶ್ರೀ ಸಿದ್ಧಗಂಗಾ ಶ್ರೀ. ಸ್ವಚ್ಛಂದ ಮನಸ್ಸಿನ ಸತ್ ಚಾರಿತ್ರ್ಯ ಪಾಲಕರು, ಸಾಮಾಜಿಕ ಕ್ಷೇತ್ರದ ಅಸಾಮಾನ್ಯ ಸಾಧಕರು ಸಿದ್ಧಗಂಗಾ ಶ್ರೀ. ಜ್ಞಾನಕುಸುಮಗಳ ಬಾಳಿನ ಭವ್ಯ ಜ್ಯೋತಿ ಸಿದ್ಧಗಂಗಾ ಶ್ರೀ. ತಮ್ಮ ನೆನಪಿನ ಕುರುಹು ನಮ್ಮ ಬದುಕಿಗೆ ತಿರುವು ಎಂಬುದ ಅರಿತು ನಾವು ನಡೆಯುವೆವು ತಮಗಿದೋ ನನ್ನ ಅನಂತ ಅನಂತ ನಮನಗಳು.
✍ *ಶೆಟ್ಟಹಳ್ಳಿ ಮಹಾಂತೇಶ್*
ಕನ್ನಡ ಅಧ್ಯಾಪಕ
ಪರಿವರ್ತನ ಶಾಲೆ & ಕಾಲೇಜು, ಶ್ರೀರಂಗಪಟ್ಟಣ.
@@@@@@@@
14.
🙏ನಾ ಕಂಡ ದೈವ ನನ್ನೊಲವ ದೇವ🙏
*ಬಯಸಿದ್ದೆಲ್ಲವ ಪಡೆಯಲು ಬೇಕು ಪರಿಶ್ರಮ,ಯಾವ ಬಯಕೆಗಳಿಲ್ಲದಿದ್ದರೂ ಸೆಳೆದರು ಎಲ್ಲರ ಮನೆ-ಮನ*
*ಪಡೆದರು ತ್ರಿವಿಧ ದಾಸೋಹಿ,ನಡೆದಾಡುವ ದೇವರೆಂಬ ಬೆಲೆಕಟ್ಟಲಾಗದ ಬಿರುದು ಸನ್ಮಾನ ಇವರಿಗಿಂತ ಬೇಕೇ ನಮಗೆ ಜೀವನದ ನಿಜ ದರ್ಶನ*
*ಅವರ ಪ್ರಾಮಾಣಿಕತೆಯೇ ನಮಗೆ ಚೇತನ*
*ಅವರ ಕಂಡ ನಮ್ಮ ಬದುಕಾಗಿದೆ ಸುಗಮ*
"ಗೌರವ ಪೂರ್ವಕ ಸಾಷ್ಟಾಂಗ ನಮನದೊಂದಿಗೆ ಭಕ್ತಿಯಿಂದ ಸದಾ ನಿಮ್ಮ ಹಾದಿಯಲ್ಲಿ ಬದುಕಲು ಪ್ರಯತ್ನಿಸುವ ಹಸುಗೂಸು"
ಗೀತಾ.ಎಂ.ಶ್ಯಾನುಭೋಗ್*
ದೇವಲಾಪುರ
ವರುಣಾ ಹೋಬಳಿ, ಮೈಸೂರು ತಾಲ್ಲೂಕು
ಮತ್ತು ಜಿಲ್ಲೆ ೫೭೧೩೧೧.
@@@@@@@
15.
"ನಡೆದಾಡುವ -ದೇವರು"
ಶ್ರೀ-ಎಂಬ ಗೌರವ.
ಸಂಬೋಧನೆಯೊಂದಿಗೆ.
ಶಿ-ವನ ಸ್ವರೂಪಿಯಾಗಿ
ಸಾವಿರಾರು ಬಡಮಕ್ಕಳಿಗೆ
ವ-ರದಾನವಾಗಿ
ಸಿದ್ದಗಂಗಾಮಠವು ಅತಿಥಿಗಳ
ಕು- ಶಲೋಪರಿಸುವ
ಸಂಪ್ರದಾಯ ರೂಢಿ
ಮಾ- ಡಿ ಶಿಷ್ಯಕೋಟಿಯಲ್ಲಿ
ಸಂಸ್ಕಾ
ರ---ವನ್ನು ಬೆಳಸಿ ಉಳಿಸುವ
ಹಾದಿಯಲ್ಲಿ ನಿ
ಸ್ವಾ-ರ್ಥದಿಂದ ಎಲ್ಲರನ್ನೂ
ಒಂದೇ ಭಾವನೆಯಲ್ಲಿ
ಮಿ-ಂದೆದ್ದು ದಿನವು ಅನ್ನ
ದಾಸೋಹಕ್ಕೆ ತಮ್ಮ
ಜೀ- ವವನ್ನು ಮುಡಿಪಾಗಿಸಿದ್ದ
ನಡೆದಾಡುವ ದೇವರು..
ಕಾಯಕ ಯೋಗಿ ...
ನಿತ್ಯದಾಸೋಹಿ...ಎಂದೆ
ಪ್ರಸಿದ್ಧರಾಗಿದ್ದ ಶ್ರೀ..ಶ್ರೀ.ಶಿವಕುಮಾರಸ್ವಾಮಿಜೀ
ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ 🙏🏼🙏🏼🙏🏼🙏🏼🙏🏼🌹🌹🌹🌹🌹🌹🌹
ಸತೀಶ್. ಎಸ್.ದಳವಾಯಿ
ನಂಜನಗೂಡು ....
@@@@@@@
16.
🙏ಮಾನವೀಯತೆಯ ಆಗರ ಶಿವಕುಮಾರಶ್ರೀಗಳು🙏
ತ್ರಿವಿಧ ದಾಸೋಹಿ ನಡೆದಾಡುವ ದೇವರು ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮಿಗಳು ದಿನಾಂಕ 21-01-2019 ರಂದು ಶಿವೈಕ್ಯರಾದರು. ಸಾವಿನಲ್ಲೂ ಮಹಾನ್ ಸದ್ಗುಣ ಮಾನವೀಯತೆ ಮೆರೆದ ಮಹಾನ್ ಪುರುಷ ಅವರು ಪೂರ್ವಾಹ್ನ 11:44ಕ್ಕೆ ಪ್ರಾಣ ಪಕ್ಷಿ ಹಾರಿ ಹೋಗಿದ್ದರು ಮಕ್ಕಳು ಮದ್ಯಾಹ್ನದ ಊಟ ಮಾಡಿದ ತರುವಾಯ ವಿಷಯ ತಿಳಿಸಿ ಎಂದಿರುವುದು ಒಬ್ಬ ಮಹಾನ್ ಮಾನವತಾವಾದಿಯ ಸದ್ಗುಣವಾಗಿದೆ. ಯಾವುದೇ ಜಾತಿ ಧರ್ಮದ ಭೇದ ವಿಲ್ಲದೆ ಬಡವರ ಮಕ್ಕಳಿಗೆ ವಸತಿಸಹಿತ ಶಿಕ್ಷಣ ನೀಡಿದ ಆಧುನಿಕ ಸಾಮಾಜಿಕ ನ್ಯಾಯದ ಹರಿಕಾರ ಅವರೂ. ಇಂತಹ ಆಧುನಿಕ ದೈವ ಪುರುಷ ದೇಶದಲ್ಲಿಯೇ ಅತೀ ಹೆಚ್ಚು ವರ್ಷ ಬದುಕಿ ಬಾಳಿ ಸಾರ್ಥಕತೆ ತೋರಿದ್ದೂ ದೇಶದ ನಾಡಿನ ಹೆಮ್ಮೆಯ ವಿಷಯ. ಇಂತಹ ಮಹಾನ್ ಪುರಷರು ಮತ್ತೆ ಹುಟ್ಟಿ ಬರಲಿ ಎಂದು ಎಲ್ಲರು ಪ್ರಾರ್ಥಿಸೋಣ
ಯಶೋಧ ತೇಜೇಂದ್ರ, ಸಿ
ಶಿಕ್ಷಕರು , ಮೈಸೂರು
@@@@@@@@
17.
ನಡೆದಾಡುವ ದೇವರು
~~~~~~~~~~~~
ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನಿಸಿ ಅಸಾಮಾನ್ಯರಾಗಿ ಬದುಕಿ ಅಸ್ತಂಗತರಾದ ಅಸಾಧಾರಣ ವ್ಯಕ್ತಿತ್ವದ ಶ್ರೀಗಳ ಬಗ್ಗೆ ಬರೆಯುವಷ್ಟು ಹಿರಿಯ ನಾನಲ್ಲವೆಂದು ಇಷ್ಟು ದಿನ ಸುಮ್ಮನೆ ಇದ್ದೆ. ಆದರೆ ನಿಜಕ್ಕೂ ಏನನ್ನೂ ಬರೆಯದೆ ಹೋದರೆ ನನ್ನ ಈ ಜನ್ಮವೇ ವ್ಯರ್ಥ ಎನಿಸುವಂತಹ ಭಾವನೆ ಇಂದು ನನ್ನನ್ನು ತೀವ್ರವಾಗಿ ಕಾಡುತ್ತಿದೆ.
ಪರಮಪೂಜ್ಯ ಡಾ|| ಶಿವಕುಮಾರ ಮಹಾಸ್ವಾಮಿಗಳು ೧೯೦೭ ರಲ್ಲಿ ಸಾಮಾನ್ಯ ಕುಟುಂಬದಲ್ಲಿ ೧೩ ನೆಯ ಪುತ್ರನಾಗಿ ಜನಿಸಿ ತಮ್ಮ ಎಳೆತನದ ವಯಸ್ಸಿನಲ್ಲಿ ಸಹ ಮಠ ಮಾನ್ಯಗಳಲ್ಲಿಯೆ ತಮ್ಮ ವಿದ್ಯಾಭ್ಯಾಸದ ಹಂತದಲ್ಲಿಯೇ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಸಂಪರ್ಕವನ್ನು ಹೊಂದಿದ್ದರು ಎಂದು ಡಾ|| ಶಿವಕುಮಾರ ಮಹಾಸ್ವಾಮಿಗಳು ಲಿಂಗ ಧಾರಣೆಗೊಂಡು ಸ್ವಾಮೀಜಿಗಳಾಗಿ ಗದ್ದುಗೆಯೇರುವ ಮೊದಲೇ ಮಹಾ ಸ್ವಾಮೀಜಿಗಳ ಗುರುಗಳಾಗಿದ್ದ ಉದ್ದಾನ ಶಿವಯೋಗಿಗಳು ಅಥವಾ ಮರುಳಾರಾಧ್ಯ ಸ್ವಾಮಿಗಳು ಶಿವಕುಮಾರ ಸ್ವಾಮಿಗಳ ಆಯುಷ್ಯದ ಕುರಿತು ಅವರ ಮಹಾನ್ ಕಾರ್ಯದ ಕುರಿತು ಭವಿಷ್ಯ ನುಡಿದಿದ್ದರೆಂದು ಎಲ್ಲಿಯೋ ಓದಿದ ನೆನಪು. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಮಹಾಸ್ವಾಮಿಗಳ ಭವಿಷ್ಯವನ್ನು ಆ ಮಹಾ ಗುರು ಸ್ವಾಮಿಗಳು ಅದಾವ ರೀತಿಯಲ್ಲಿ ಕಂಡುಕೊಂಡರು ಎಂಬುದು ನಮ್ಮ ಯೋಗ್ಯತೆಗೆ ನಿಲುಕದ ವಿಚಾರ.
ಆದರೆ ಅವರ ಎರಡೂ ಮಾತುಗಳನ್ನು ನಿಜಗೊಳಿಸಿದ ಕೀರ್ತಿ ಮಾತ್ರ ಡಾ|| ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಸಲ್ಲಬೇಕು. ಸ್ವಾತಂತ್ರ್ಯ ಪೂರ್ವ ರಾಜಮನೆತನದ ಆಳ್ವಿಕೆಯ ಕಾಲ ಆಗಲೂ ಅನ್ನ ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇದ್ದ ಜನಗಳು ಸತ್ಯ ಧರ್ಮ ನಾಲ್ಕು ಕಾಲಿನಲ್ಲಿ ನಡೆಯುತ್ತಿತ್ತು ಎನ್ನಬಹುದು. ಸಾಲದೆಂದು ಅನೇಕ ಕಂದಾಚಾರಗಳ ಜೊತೆಗೆ ಮೂಢನಂಬಿಕೆ ಜಾತಿ ಪದ್ಧತಿ ಸ್ವಾಮೀಜಿಯಾದರೇನು ಜಾತಿ ಧರ್ಮಗಳಿಗೆ ಮಿಗಿಲಾದವರಲ್ಲವೆಂಬ ಕರ್ಮಠವಾದಿಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇದ್ದ ಕಾಲದಲ್ಲಿ ಏಕಾಂಗಿಯಾಗಿ ಅದೆಷ್ಟೋ ಕಡೆಗೆ ಒಬ್ಬಂಟಿಯಾಗಿ ಪ್ರಯಾಣ ಬೆಳಸಿ ಮಾನಾವಮಾನಗಳನ್ನು ಅವಡುಗಚ್ಚಿ ಸಹಿಸಿ ಮಠದ ಮಕ್ಕಳಿಗಾಗಿ ಹಗಲಿರುಳು ಶ್ರಮಿಸಿದ ಆ ದಿನಗಳು ಹೇಗಿದ್ದಿರಬಹುದು ಕಲ್ಪಿಸಿಕೊಳ್ಳಲು ಸಹ ಅಸಾಧ್ಯ ಎನಿಸುತ್ತದೆ.
ಸ್ವಾಮೀಜಿಯವರು ಮಠಾಧೀಶರಾಗುವ ವೇಳೆಗೆ ಕೇವಲ ಮುನ್ನೂರು ರೂಪಾಯಿ ಹಣ ಅದಾಯವಿಲ್ಲದ ಹದಿನಾರು ಎಕರೆ ಹೊಲ ಮಾತ್ರದ ಜೊತೆಗೆ ನಾನೂರಕ್ಕೂ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಅದಾಗಲೇ ವಿದ್ಯಾಭ್ಯಾಸ ಮಾಡುತ್ತಿದ್ದರು. ತಮ್ಮ ಒಳಗಣ್ಣು ತೆರೆದ ಮಹಾಸ್ವಾಮಿಗಳ ಕಣ್ಣಿಗೆ ನಿತ್ಯ ಬಡತನದ ಜೊತೆಗೆ ನಯವಂಚಕರ ಜಾಲಕ್ಕೆ ಸಿಲುಕಿ ಇರುವುದನ್ನು ಕಳೆದುಕೊಳ್ಳುತ್ತಿರುವ ಬಡತನದ ರೇಖೆಗಿಂತ ಕೆಳಗಿರುವ ಜನಗಳೇ ಕಾಣುತ್ತಾರೆ. ಸ್ವಾಮಿಗಳು ಯಾರನ್ನೂ ಪ್ರತಿಭಟಿಸಲು ತೆರೆಳದೆ ತಮ್ಮ ಪಾಡಿಗೆ ತಾವು ಬಡ ಮಕ್ಕಳ ಹೊಟ್ಟೆ ಬಟ್ಟೆಯ ಜೊತೆಗೆ ಖಾಲಿ ಇರುವ ತಲೆಯ ಬಗ್ಗೆ ಅದರಲ್ಲಿ ತುಂಬಬೇಕಾದ ವಿದ್ಯೆಯ ಬಗ್ಗೆ ಹಗಲಿರುಳು ಕನವರಿಸಿದರು. ಕನಸನ್ನು ನನಸು ಮಾಡುತ್ತಲೇ ಲೋಕ ಪ್ರಸಿದ್ದಿಯಾದರು ಎಂದು ಯಾರಿಂದಲೂ ಏನನ್ನೂ ಸ್ವಹಿತಕ್ಕಾಗಿ ಬಯಸದ ಮಹಾಸ್ವಾಮಿಗಳು ಕಡೆ ಕಡೆಗೆ ಕೈಯೆತ್ತಿ ಬೇಡುವ ಪ್ರಸಂಗ ಬರಲೇ ಇಲ್ಲ. ಪ್ರತಿವರ್ಷ ವಿದ್ಯಾಭ್ಯಾಸಕ್ಕಾಗಿ ಮಠದಲ್ಲಿ ಇರುವ ಮಕ್ಕಳ ಅಸನ ವಸನಕ್ಕೆಂದು ಉದಾರವಾಗಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಯಿತು. ಹಾಗೆಂದು ಸ್ವಾಮಿಗಳು ಪ್ರತಿ ಊರಿಗೆ ಹೋದರೂ ಊರಿನಲ್ಲಿ ಇರುವ ವಿದ್ಯಾಭ್ಯಾಸ ರಹಿತ ಬಡ ಮಕ್ಕಳ ಬಗ್ಗೆ ಮಾತ್ರ ಕೇಳಿದರು ಜಾತಿ ಮತ ಭೇಧವಿಲ್ಲದೆ ಎಲ್ಲರನ್ನೂ ಕೈಬೀಸಿ ಕರೆತಂದು ಮಠದೊಳಗೆ ತುಂಬಿಸಿಕೊಂಡರು. ಆ ಮೂಲಕ ಸರಕಾರದ ಕಣ್ಣಿಗೂ ಕಿಸುರಾದರೂ ಬಡವರ ಪಾಲಿಗೆ ನಡೆದಾಡುವ ದೇವರಾದರು.
ವೈ.ಕೊ. ವೈಲೇಶ ಪಿ ಎಸ್ ಕೊಡಗು
೨೭/೨/೨೦೧೯
@@@@@@
18.
👏ನುಡಿದಂತೆ ನಡೆದ ಶ್ರೀಗಳು👏
ಬಸವಣ್ಣನವರ ಮಾತು ಪಾಲಿಸಿದ ಅನ್ನದಾತರಾದ ಗುರುಗಳಿಗೆ ನಮನ
ನೂರಾರು ಮಕ್ಕಳಿಗೆ ತಂದೆ ತಾಯಿಯಾಗಿ, ಗುರುವಾಗಿ, ಬೆಳೆಸಿದ ನಮ್ಮ ಸಿದ್ಧಗಂಗಾ ಸ್ವಾಮಿಗಳು
ಕಾವಿ ಬಣ್ಣದ ಮಾಲೆ ಧರಿಸಿ ಕೈಯಲ್ಲೊಂದು ಕೋಲು ಹಿಡಿದು ಕೇಸರಿ ಪೇಟ ತೊಟ್ಟು ನಡೆದು ಭೂಮಿಯ ಮೇಲೆ ನಡೆದಾಡುವ ದೇವರಾದಿರಿ
ತಮ್ಮ ಅಗಲಿಕೆ ಎಲ್ಲರಿಗೂ ನೋವು ತಂದು ಕಣ್ಣಲ್ಲಿ ಕಂಬನಿ ತಂದಿದೆ. ದೇವರೇ ದೇವರೇ ಮತ್ತೊಮ್ಮೆ ಹುಟ್ಟಿ ಬನ್ನಿ
ಸುಶ್ರಾವ್ಯ ಎಂ
ಜೆ ಎಸ್ ಎಸ್ ಪಬ್ಲಿಕ್ ಶಾಲೆ ಆರನೇ ತರಗತಿ,
ಎಸ್ ಜೆ ಸಿ ಕ್ಯಾಂಪಸ್ ಮೈಸೂರು
@@@@@@@
19. ನಡೆದಾಡಿದ ದೇವರು
ನಡೆ ನುಡಿಗಳ ಸಂಗಮ
ಕಾಯಕಯೋಗಿ ಜಂಗಮ
ಹುಟ್ಟು ಲಿಂಗವಂತರಲ್ಲ
ಆದರೂ ಲಿಂಗವೂ ಮೆಚ್ಚಿ
ಅಹುದಹುದು ಎಂದಿತಲ್ಲಾ
ಪಾರದರ್ಶಕ ಪ್ರಾಮಾಣಿಕತೆ
ಸತ್ಯನಿಷ್ಠೆ ತತ್ವ ಸೇವೆಗಳದೇ ಕತೆ
ಬೆಟ್ಟ ಗುಡ್ಡಗಳ ಸಿದ್ಧಗoಗೆ
ತಮ್ಮಿoದಾಯಿತು ಜೀವರಸಗoಗೆ
ನೂರಾ ಹನ್ನೊoದು ವರ್ಷಗಳ
ಅದ್ಭುತ ಸಾರ್ಥಕ ಜೀವನ
ಆಯಿತು ನಿಮ್ಮ ಜನ್ಮ ಪಾವನ
-ಎಂ ವಿ ರೇವಣಸಿದ್ದಯ್ಯ
MVR Office Address
M.V.Revanasiddaiah,
Advocate
Bengaluru
@@@@@
20.
ಮಾಡಿದರಿವರು ತ್ರಿವಿಧ ದಾಸೋಹ ಕಾಯಕ
ಇವರ ಜೀವನತತ್ವಗಳೆಂದಿಗೂ ಸರ್ವಕಾಲಿಕ
ಇವರೆಂದಿಗೂ ಎಲ್ಲರಿಗೂ ಸ್ಪೂರ್ತಿದಾಯಕ
ಇವರ ಕೆಲಸಗಳ ನೆನೆಯುವುದೇ ಹರ್ಷದಾಯಕ
ಇರುವುದು ಇವರ ಹೆಸರು ಈ ಜಗವಿರುವತನಕ
ವಿಜಯ
ಅಕ್ಕನ ಬಳಗ, ಕೊಳ್ಳೇಗಾಲ
@@@@@@
21.
Magnanimous Sri shivkumaraswamiji swamiji
Holiness simplicity saint
His love for animals and mankind
Gave food for many and
Education for millions
The love of God is visible
In this saint
Who loved all and hated none
We are blessed to be alive with.his period
Bliss was in the dawn of swamiji whose.sun will.never set.in the sky
Vivekanandha
Lecturer
Kolar
@@@@@
22.
@@@@@@
23.
@@@@@@
24.
@@@@@@@
25.
@@@@@@@
ಗುರು ಬ್ರಹ್ಮ ಗುರೂ ವಿಷ್ಣು ಗುರು ದೇವೊ ಮಹೇಶ್ವರಾ ಗುರು ಸಾಕ್ಷತ್ ಪರಬ್ರಹ್ಮ ತಸ್ಮಯ ಶ್ರೀ ಗುರುವೇ ನಮಃ
ಲೋಕದ ದಾಸೋಹಗಳಲ್ಲಿ ಶ್ರೇಷ್ಠ ದಾಸೋಹಗಳೆಂದರೆ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹ ಅದರಲ್ಲಿ ಅನ್ನ ದಾಸೋಹ ಮಾನವನ ಕ್ಷಣ ಹಸಿವಿಗಾಗಿ ಮಾತ್ರ ಆದರೆ ಅದರ ಜೊತೆಗೆ ಅಕ್ಷರ ದಾಸೋಹ ಮಾಡಿದರೆ ಅದು ಮಾನವನ ಜೀವನ ಪರ್ಯಂತ ಯಾರ ಹಂಗಿಲ್ಲದೆ ಬದುಕಲು ಸಾಧ್ಯವಾಗಿಸುತ್ತದಲ್ಲವೇ? ಇಂತಹ ದಾಸೋಹ ಗಳನ್ನು ತಮ್ಮ ಬದುಕಿನುದ್ದಕ್ಕು ನಿರ್ವಹಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಹಸಿರಾಗಿಸಿರುವ ನಮ್ಮ ನಿಮ್ಮೆಲ್ಲರ ಆರಾಧ್ಯ ದೈವರಾದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಶ್ರೀ ಮ.ಪ್ರ.ಸ್ವರೂಪಿ ಶಿವಕುಮಾರ ಸ್ವಾಮೀಜಿಗಳ ಪಾದ ಕಮಲಗಳಗೆ ನನ್ನ ಈ ಅನಿಸಿಕೆ
ಸಮರ್ಪಣೆ
ಶ್ರೀ ಮಹಾಂತೇಶ ಎಸ್ ಬಡಿಗೇರ ಶಿಕ್ಷಕರು GLPS ಸಂಕಧಾಳ ಹಾಗೂ ಪ್ರಧಾನ ಕಾರ್ಯದರ್ಶಿಗಳು KGRPSTA ತಾಲ್ಲೂಕು ಲಕ್ಷ್ಮೇಶ್ವರ
@@@@@@@
27.
ಬಾಲ್ಯದಿಂದಲೂ
ಶರಣನೆಂಬುದ ಕೇಳಿದ್ದೇ
ನೋಡಿರಲಿಲ್ಲ,
ಸೇವೆ
ಎನ್ಮುವುದನ್ನ
ಹುಡುಕುತ್ತಿದ್ದೇ ಆದರೇ
ಅರಿವಾಗಿರಲಿಲ್ಲ,
ದಾಸೋಹ
ಎನ್ನುವುದು
ಎಲ್ಲರ ಮಾತನಲ್ಲಿತ್ತು
ತಿಳಿದಿರಲಿಲ್ಲ
ಹತ್ತಾರು ಮಕ್ಕಳ
ಹಡೆದವರ ಪ್ರೀತಿ
ಕಂಡಿದ್ದೆ
ಹತ್ತುಸಾವಿರ ಪ್ರೀತಿಯ ಮಕ್ಕಳ
ಗುರುವನ್ನ ನಾ ಕಂಡಿರಲಿಲ್ಲ,
ಇವೆಲ್ಲದರ ಅರಿವಿಗೆ
ಒಂದೇ ಹೆಸರು
ನನ್ನ ಗುರು
ಆರಾಧ್ಯ ದೈವ ಶ್ರೀ ಶಿವಕುಮಾರಸ್ವಾಮಿಗಳು
ಎಂ.ಕುಮಾರಸ್ವಾಮಿ ಕಣ್ಣೂರು
@@@@@@@
28.
ನಡೆದಾಡುವ ದೇವರಾದ ಶ್ರೀಗಳು ಎಂದಿಗೂ ಆದರ್ಶಮಯ, ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಹೊಂದುವಂತಹವು.
ತ್ರಿವಿಧ ದಾಸೋಹಿಗಳು ಲಕ್ಷಾಂತರ ಜನರ ಬಾಳಿಗೆ ಬೆಳಕಿನ ಬುಗ್ಗೆ ಚಿಮ್ಮಿಸಿದವರು. ಅವರ ಅಗಲಿಕೆ ಚಿರಕಾಲ ಭರಿಸಲಾಗದ ನಷ್ಟ. ಅವರು ದೈಹಿಕವಾಗಿ ನಮ್ಮನ್ನಗಲಿದ್ದಾರೆ ಹೊರತು ಮಾನಸಿಕವಾಗಿ ಅವರ ಬೋಧನೆಗಳು ನಮ್ಮೊಟ್ಟಿಗಿವೆ. ತಂತ್ರಜ್ಞಾನ ಮುಂದುವರೆದಿದೆ, ಎಲ್ಲರ ಕೈಬೆರಳಲ್ಲೆ ಮಾಹಿತಿ ಹರಿದಾಡುತ್ತಿದೆ. ಅಂತಹುದರಲ್ಲಿ ಶ್ರೀಗಳ ಬಗ್ಗೆ ಆಪ್ ಮಾಡುವುದರ ಮೂಲಕ ನಮನ ಸಲ್ಲಿಸುತ್ತಿರುವುದು ಪ್ರಶಂಸಾರ್ಹ.
ಶರಣು ವಿಶ್ವವಚನ ಫೌಂಡೇಶನ್ ಈ ಪ್ರಯತ್ನ ಯಶಸ್ವಿಯಾಗಲಿ.
ಗೌರಿ.ಭೀ.ಕಟ್ಟಿಮನಿ
ಹುಬ್ಬಳ್ಳಿ
@@@@@@
29.
@@@@@@
30.
🙏ಶ್ರೀಗಳೇ ಅನರ್ಘ್ಯ ರತ್ನ🙏
ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಗಳನ್ನು ನನ್ನ ಹೃದಯ ಕಮಲದಲ್ಲಿ ಅವರನ್ನು ಸದಾ ನೆನೆಯುತ್ತಾ .
ಬೃಹ್ಮ ಪದವಿಯನೊಲ್ಲೆ ,
ವಿಷ್ಣು ಪದವಿಯನೊಲ್ಲೆ ,
ರುದ್ರ ಪದವಿಯನೊಲ್ಲೆ ,
ನಾನು ಮತ್ತಾವ ಪದವಿಯನೊಲ್ಲೆನಯ್ಯಾ
ಕೂಡಲ ಸಂಗಮದೇವ.
ನಿಮ್ಮ ಸದ್ಭಕ್ತರ ಪಾದವನ್ನು
ಅರಿದಿಪ್ಪ ಮಹಾ ಪದವಿಯ ಕರುಣಿಸಯ್ಯಾ .
. ಎಂಬ ಬಸವಣ್ಣನವರ ವಚನ ನಮ್ಮ ಶ್ರೀ ಗಳಿಗೆ ಅನ್ವಯಿಸುತ್ತದೆ.
ಶ್ರೀ ಗಳು ಯಾವತ್ತೂ ಏನನ್ನು ಬಯಸಿದವರಲ್ಲ . ಅವರು ಬಯಸಿದ್ದು ಲೋಕ ಕಲ್ಯಾಣ.
ಎಲ್ಲರೂ ಶ್ರೀ ಗಳಿಗೆ ಭಾರತರತ್ನ ಕೊಡಬೇಕು ಎಂದು ಹೇಳಿದರು. ಆದರೆ ನಾನು ಭಾರತರತ್ನ ಬೇಡ ಎಂದು ಹೇಳುತ್ತೆನೆ . ಭಾರತಕ್ಕೆ ಅವರೇ ಒಂದು ರತ್ನ ಇದ್ದಂತೆ .ಈಗಾಗಲೇ ಭಾರತರತ್ನ ಪ್ರಶಸ್ತಿ ತೆಗೆದುಕೊಂಡ ಜನರನ್ನು ನೋಡಿದ್ದೇವೆ .ಅಂತವರ ಸಾಲಿಗೆ ನಮ್ಮ ದೇವರನ್ನು ನಿಲ್ಲಿಸುವುದು ಸರಿಯಲ್ಲ. ಅವರು ಬಹು ಎತ್ತರ ಆಕಾಶದೆತ್ತರಕ್ಕೆ ಹೋದ ಕೀರ್ತಿ.
೧೨ ನೇ ಶತಮಾನದ ಬಸವಾದಿ ಪ್ರಮಥರಿಗೆ ಮುಂದೆ ಇಂತಹ ಸುಮ ಈ ನಾಡಿನಲ್ಲಿ ಅರಳುತ್ತದೆ ಎಂದು ಗೊತ್ತಿತ್ತು ಎನ್ನುವ ಹಾಗೆ ಸುಮಾರು ವಚನಗಳು ಶ್ರೀ ಗಳಿಗೆ ಅನ್ವಯಿಸುವ ಹಾಗೆ ಇವೆ.೧೨ ಶತಮಾನದಲ್ಲಿ ಬಸವಣ್ಣ ವಚನಗಳು ರಚಿಸಿದರು .ಅದರಂತೆಯೇ ಬದುಕಿ ತೋರಿಸಿದರು ನಮ್ಮ ದೇವರು .
ಅವರು ಯಾವ ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ನನ್ನವರು ಎಂದು ಸಲಹಿದವರು.
ನಾವು ಎಷ್ಟು ಪುಣ್ಯವಂತರು ಶ್ರೀ ಗಳು ನೆಡೆದಾಡಿದ ಭೂಮಿಯಲ್ಲಿ ನಾವು ಇದ್ದೇವೆ ಅವರನ್ನು ಕಣ್ಣು ತುಂಬಾ ನೋಡಿ ಅವರನ್ನು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದಿದ್ದೆವೆ .ಎಷ್ಟೋ ಪುಣ್ಯಕ್ಷೇತ್ರ ಗಳಿಗೆ ಹೋದರು ಇಂತಹ ಸಮಾಧಾನ ಆಗುವುದಿಲ್ಲ. ಅಂತಹ ಪುಣ್ಯಕ್ಷೇತ್ರ ಸಿದ್ದಗಂಗಾ ಮಠ .
ಅವರು ನಮ್ಮ ನಾಡಿನ ಸಂಪತ್ತು, ಕಾಮಧೇನು, ಕಲ್ಪ ವೃಕ್ಷ ವರ್ಣನೆಗೆ ಶಬ್ದಗಳೆ ಇಲ್ಲ ಎಷ್ಟು ಹೇಳಿದರು ಸಮಾಧಾನ ವಾಗದು.
ಅವರ ಭಕ್ತರ ತಂಡ ಸಾಗರವಾಗಿ ಹರಿದು ಬಂದದ್ದು ಕಂಡಿದ್ದೇವೆ .ಅವರು ಸದಾ ನಮ್ಮೊಂದಿಗೆ ಇದ್ದಾರೆ ಆದರೂ ಅವರಿಲ್ಲದ ನಾಡು ಬರಡು ಎಂದು ಎನಿಸದೆ ಇರದು.
ಅವರಿಗೆ ನನ್ನ ನುಡಿ - ನಮನದ ಸಾಲುಗಳು ಮಡಿಪು .
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ನಿಮ್ಮನ್ನು ಹಂಬಲಿಸಿ ನಾ ಇಲ್ಲೆ ಕಾಯುತಿರುವೆ
ದೀನ ದಲಿತರ ಬಂಧುವೆ
ಜ್ಞಾನ ತೋರಿದ ನಿಧಿಯೆ
ಅಕ್ಷರ ಕಲಿಸಿದ ಗುರುವೆ
ಅನ್ನವ ನೀಡುವ ಧಣಿಯೆ
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ನಡೆದಾಡುವ ದೇವರೆ
ಕಾಯಕ ಯೋಗಿ ಬಸವನೆ
ಶತಮಾನದ ಸಂತನೆ
ಎಲ್ಲರ ಬಾಳಿನ ದೈವವೆ
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ತ್ರಿವಿಧ ದಾಸೋಹದ ಚಿಲುಮೆಯೆ
ನಮ್ಮ ನಾಡಿನ ಕಲ್ಪವೃಕ್ಷವೆ
ಶಿವನಿಗೆ ನೋಡಲು ಕಾತುರವೆ
ಭಕ್ತರ ಪರಂಜೋತಿಯೆ
ಲಿಂಗ ಪೂಜೆಯ ಮುಗಿಸಿ ನೀ ಎಲ್ಲಿಗೆ ಹೋಗುತಿರುವೆ
ಸಿದ್ದಗಂಗಾ ಗುರುವೆ ನೀ ಎಲ್ಲಿಗೆ ಹೋಗುತಿರುವೆ
ನಿಮ್ಮನ್ನು ಹಂಬಲಿಸಿ ನಾ ಇಲ್ಲೆ ಕಾಯುತಿರುವೆ.
ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕರು ವಚನ ಕುಮಾರ ಸ್ವಾಮಿ ಮತ್ತು ಅವರ ಧರ್ಮಪತ್ನಿ ರೂಪಾ ಕುಮಾರ ಸ್ವಾಮಿ ಈ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿರುವ ಒಂದು ಒಳ್ಳೆಯ ಉದ್ದೇಶ ಇಂತಹ ಶರಣ ಸಂತರ ವಿಚಾರ ಎಲ್ಲರಿಗೂ ಮುಟ್ಟುವ ನಿಟ್ಟಿನಲ್ಲಿ ಯಶಸ್ವಿಯಾಗಿ ಆ ದಂಪತಿಗಳಿಗೆ ಬಸವಾದಿ ಪ್ರಮಥರು ಆರೋಗ್ಯ ಕೊಟ್ಟು ಇನ್ನೂ ಇಂತಹ ಹೆಚ್ಚು, ಹೆಚ್ಚು ಕೆಲಸ ಮಾಡುವ ಶಕ್ತಿ ದಯಪಾಲಿಸಲಿ.
ಅವರಿಗೆ ನನ್ನ ಶರಣು ಶರಣಾರ್ಥಿಗಳು .
ಅಕ್ಕಮಹಾದೇವಿ ಮರಮ್ಕಲ್
ಮೈಸೂರು
🙏🙏🙏🙏🙏🙏🙏🙏🙏🙏
@@@@
31.
ದೇವರು ಎಂದರೆ ದೇಹದಲ್ಲಿರುವ ಶಕ್ತಿಯನ್ನು ವರವಾಗಿ ಪರಿವರ್ತಿಸಿ ರುದ್ರನನ್ನು ಕೈಲಾಸದಿಂದ ದರೆಗಿಳಿಸಿದವರು. ಹೋಮ ಮಾಡಲಿಲ್ಲ ಹವನ ಮಾಡಲಿಲ್ಲ ಮಂತ್ರ ಪಠಿಸಲಿಲ್ಲ ತಂತ್ರ ಮಾಡಲಿಲ್ಲ ವಾಸ್ತು ಕಥೆ ಹೇಳಲಿಲ್ಲ ಜ್ಯೋತಿಷ್ಯದ ಬುರುಡೆ ಬಿಡಲಿಲ್ಲ ಡೋಂಗಿ ಪವಾಡದಿಂದ ದೇವರಾಗಲಿಲ್ಲ ಜ್ಞಾನವೇ ಯಜ್ಞವೆಂದರು ಅನ್ನವೇ ದೇವರೆಂದರು ವಿದ್ಯೆಯೇ ಮಂತ್ರವೆಂದರು ಅವರ ಬದುಕೇ ಪವಾಡ ವನ್ನಾಗಿಸಿದರು ನಮ್ಮ ಸಿದ್ದ ಗಂಗಾ ಕ್ಷೇತ್ರದ ನಡೆದಾಡುವ ದೇವರು.
ಆಹಾರ, ಅಕ್ಷರ ಹಾಗು ಆಶ್ರಯವೆಂಬ ತ್ರಿ ವಿಧ ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ ದಾರ್ಶನಿಕರು ಹಾಗು ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯ ವೈಕರಿಗಳ ಮೂಲಕ ಸೇವಾ ಕಾಶಿಯಾಗಿ ಶ್ರೀ ಸಿದ್ದ ಗಂಗಾ ಮಠವನ್ನು ಪರಿವರ್ತಿಸಿದ ಮಹಾ ತಪಸ್ವಿ ನಮ್ಮ ಶ್ರೀ ಶಿವಕುಮಾರ ಸ್ವಾಮೀಜಿಯವರು.
ವಿರಕ್ತ ಮಠದ ಪರಂಪರೆಗೆ ಚ್ಯುತಿಬರದ ಹಾಗೆ ಕಾಯಕದ ಮೂಲಕ ಜಗತ್ತಿಗೆ ಸೇವಾ ತತ್ಪರತೆಯನ್ನು ಸಾರಿದ ಕೆಲವೇ ಕೆಲವು ವಿಶ್ವ ವಂದಿತ ಸ್ವಾಮಿಜಿಗಳಲ್ಲಿ ಮುಂಚೂಣಿಯಲ್ಲಿ ಸಾಗಿ ಇತರರಿಗೆ ದಾರಿ ದೀಪವಾದವರು.
ದಿನಾಂಕ 01-04-1907 ರಲ್ಲಿ ಮಾಗಡಿ ತಾಲೂಕಿನಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ಸಾಮಾನ್ಯ ವ್ಯಕ್ತಿಯಿಂದ ಅಸಾಮಾನ್ಯರಾದ ಸ್ವಾಮೀಜಿ ಅತ್ಯಂತ ದೀರ್ಘ ಕಾಲ ಸಿದ್ದ ಗಂಗಾ ಮಠವನ್ನು ಮುನ್ನೆಡಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ವನ್ನು ಉಣಬಡಿಸಿ ಅವರನ್ನು ಸಜ್ಜನರನ್ನಗಿಸಿ ರೂಪಿಸಿದ ಕೀರ್ತಿ ಸ್ವಾಮೀಜಿಗಳಿಗೆ ಸಲ್ಲುತ್ತದೆ.
ಶ್ರೀ ಮಠವನ್ನು ಸುಮಾರು 88 ವರ್ಷಗಳು ಕಾಯಕ ದಾಸೋಹದ ಮೂಲಕ ಪ್ರತಿಯೊಬ್ಬರ ಮನ ಮನೆಗಳಲ್ಲಿ ನೆಲೆಸಿ ಸರಳ ಸಜ್ಜನಿಕೆಯ ಛಾಪನ್ನು ಬಿಟ್ಟು ಶ್ರೀಗಳು ದಿನಾಂಕ 21ನೇ ಜನವರಿ 2019 ರಂದು ಬೆಳಗ್ಗೆ 11:44 ಗಂಟೆಗೆ ಅಪಾರ ಭಕ್ತ ವೃಂದವನ್ನು ಅನಾಥರನ್ನಾಗಿಸಿ ತಮ್ಮ 111 ನೇ ವಯಸ್ಸಿಗೆ ಭೂಲೋಕದಿಂದ ಕೈಲಾಸದೆಡೆಗೆ ಪ್ರಯಾಣ ಬೆಳೆಸಿದರು.
ಶ್ರೀ ಗಳ ದಿವ್ಯಚರಣಗಳಿಗೆ ಕೋಟಿ ಕೋಟಿ ಪ್ರಣಾಮಗಳು.
ಶ್ರೀಕಂಠ ಮೂರ್ತಿ
ಗೌರವಾಧ್ಯಕ್ಷರು
ಶರಣು ವಿಶ್ವವಚನ ಫೌಂಡೇಷನ್
ಮೈಸೂರು ಜಿಲ್ಲೆ
@@@@@@@
32.
ದೇವರೊಬ್ಬನೇ ನಾಮ ಹಲವು ....
ಶ್ರೀ ಶ್ರೀ ಶ್ರೀ ಸಿದ್ದಗಂಗಾ ಸ್ವಾಮಿಗಳು ಕಾಯಕಯೋಗಿಯಾಗಿ, ಸರ್ವಧರ್ಮಿಯಾಗಿ ಅನ್ನ ,ಅಕ್ಷರ ಹಾಗೂ ಆಶ್ರಯ ದಾಸೋಹ ನೀಡಿ ಅಜರಾಮರಾದವರು. ಶ್ರೀಗಳು ಒಂದೊಂದು ಬಂಡೆಗಲ್ಲನ್ನು ಕಡೆದು ಸ್ಥಾಪಿಸಿದ ಸಂಸ್ಥೆ ಈಗ ದೊಡ್ಡ ಹೆಮ್ಮರವಾಗಿ ಬೆಳೆದು ವಿಶ್ವದಗಲಕ್ಕೂ ಖ್ಯಾತಿಯನ್ನು ಪಡೆದಿದೆ. ತ್ಯಾಗಮಯಿ ಶ್ರೀ ಸಿದ್ದಗಂಗಾ ಶ್ರೀಗಳು ನೀಡಿದ ದಾಸೋಹದಿಂದ, ಶಿಸ್ತು, ಸಂಯಮ, ಸಂಸ್ಕಾರಗಳ ಪಾಠಗಳಿಂದ ಹಾಗೂ ಉಣಬಡಿಸಿದ ಬಸವತತ್ವಗಳಿಂದ ಸಾಕಷ್ಟು ಅನಾಥ ಹಾಗೂ ಬಡ ಮಕ್ಕಳು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ನೆಲೆಸಿದ್ದಾರೆ . ವಿವಿಧ ಕ್ಷೇತ್ರದ ಗಣ್ಯರು ಹಾಗೂ ಮಠಾಧೀಶರು ಶ್ರೀಗಳಿಗೆ ಸಾಕಷ್ಟು ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ಅವುಗಳಲ್ಲಿ ಕೆಲವೇ ಕೆಲವುಗಳನ್ನು ನಿಮ್ಮ ಮುಂದೆ ಪ್ರಸ್ತಾಪಿಸಿದ್ದೇನೆ . 1 ಶತಮಾನದ ಸಂತ 2 ನಡೆದಾಡುವ ದೇವರು 3 ಕಾಯಕ ಯೋಗಿ 4 ತ್ರಿವಿಧ ದಾಸೋಹಿ 5 ಶೈಕ್ಷಣಿಕ ಕ್ರಾಂತಿಯ ಪ್ರೇರಕ-ಸಾಧಕ 4 ಭಾರತದ ಅನರ್ಘ್ಯ ರತ್ನ 5 ಸಿದ್ಧಿಪುರುಷ 6 ಕರ್ನಾಟಕ ರತ್ನ 7 ಜಗದೋದ್ಧಾರಕ 8 ಆಧುನಿಕ ಬಸವಣ್ಣ 9 ಪರಮ ತಪಸ್ವಿ 10 ವೀರ ವಿರಾಗಿ 11 ಜ್ಞಾನಕೋಶ 12 ಸದಾ ಹಸನ್ಮುಖಿ 13 ಸಮನ್ವಯ ಯೋಗಿ 14 ಅಂತರ್ಮುಖಿ 15 ದಿವ್ಯ ಸ್ವರೂಪಿ 16 ದಾಸೋಹ ನಿಧಿ 17 ಮಹಾನ್ ಚೇತನ 18 ವಾತ್ಸಲ್ಯ ಮೂರ್ತಿ 19 ಧೀಮಂತ ಚೇತನ 20 ಮಂಗಳಮೂರ್ತಿ 21ಸದಾ ತೇಜಸ್ವಿ 22 ಬಸವ ಕಿರಣ 23 ಸಿದ್ದಗಂಗೆಯ ಮುಕುಟಮಣಿ 24 ಸರಳ ಸಜ್ಜನಿಕೆಯ ಸಾಕಾರ ಮೂರ್ತಿ 25 ಶರಣ ಚಿಂತಕ 26 ಅಮೋಘ ವ್ಯಕ್ತಿತ್ವ 27 ಶ್ರೇಷ್ಠ ಧಾರ್ಮಿಕ ನಾಯಕ 28 ಸಾಮಾಜಿಕ ಅಭಿವೃದ್ಧಿಕಾರ 29 ಮಾರ್ಗದರ್ಶಕ 30 ಪಾವನ ಮೂರ್ತಿ 31 ಗಂಗಾ ಸಂಗಮ 32 ಅನುಗ್ರಹ ಸಮರ್ಥ 33 ಧರ್ಮ ದೀಪ 34 ಕ್ರೀಯಾ ಮೂರ್ತಿ 35 ತತ್ವರೂವಾರಿ 36 ಪಾವನಾತ್ಮ 37 ಜಂಗಮ ಶ್ರೇಷ್ಠ 38 ದೀನದಲಿತರ ದಾರಿದೀಪ 39 ದಾನ ಮಾನವ 40 ದೇವ ದೀವಿಗೆ 41 ಕನ್ನಡದ ಬುದ್ಧ 42 ವಿಶ್ವಪ್ರೇಮಿ 43 ಮಂಗಳಮೂರ್ತಿ 44 ಚಿದ್ಭಾವ ಮೂರ್ತಿ 45 ಗುರಿ ಮುಟ್ಟಿದ ಅನುಭವ ಮೂರ್ತಿ 46 ಪ್ರಸನ್ನ ಜ್ಯೋತಿ 47 ಅನುಭವದ ಸಿರಿ 48 ದೂರದರ್ಶಿ 49 ಜ್ಞಾನದೇಗುಲ 50 ಅಪ್ರತಿಮ 51 ದಣಿವರಿಯದ ಚೇತನ 52 ಪರಮ ಪೂಜ್ಯ 53 ಸಂಕಲ್ಪ ಗಂಗೋತ್ರಿ 54 ನಡೆದಾಡುವ ದೈವ 55 ಬಡವರ ಬಂಧು 54 ಆಶಾ ಕಿರಣ 55 ಲೋಕ ಜಂಗಮ 56 ಪ್ರತ್ಯಕ್ಷ ದೇವರು 57 ಜ್ಞಾನ ಜ್ಯೋತಿ 58 ಲೋಕ ಜೀವಿ 59 ಅನಾಥ ರಕ್ಷಕ 60 ದೀನರ ಬಂಧು 61 ವಿಶ್ವದ ಪುಣ್ಯ ಪುರುಷ 62 ಅಕ್ಷರ ದಾಸೋಹಿ 63 ಆಶ್ರಯ ದಾಸೋಹಿ 64 ಅನ್ನ ದಾಸೋಹಿ 65 ವಿದ್ಯಾ ದಾಸೋಹಿ 66 ಜ್ಞಾನ ದಾಸೋಹಿ 67 ಅಕ್ಷಯ್ ನಿಧಿ 68 ಸದಾ ಸ್ಮರಣೀಯ 69 ಯುಗದ ಸಂತ 70 ಶಿಕ್ಷಣ ದಾತ 71 ದಿವ್ಯ ಶಕ್ತಿ 72 ನೈತಿಕ ಮೇರು ಶಿಖರ 73 ಪಾಂಡಿತ್ಯಪೂರ್ಣ 74 ಕ್ರಾಂತಿಪುರುಷ 75 ಬಡ ವಿದ್ಯಾರ್ಥಿಗಳ ಕಾಮಧೇನು 76 ಅನಾಥರ ತಂದೆ 77 ಮಹಾಯೋಗಿ 78 ಸಿದ್ದಗಂಗಾಶ್ರೀ 79 ಧರ್ಮಾತೀತ 80 ಪೂಜನೀಯ 81 ಶರಣ ಸಿದ್ಧರಾಮ 82 ದೈವ ರೂಪದ ದಿನಕರ 83 ಜಂಗಮ ಯೋಗಿ 84 ಮಹಾನ್ ಸಾಧಕ 85 ತ್ಯಾಗಜೀವಿ 86 ಮಹಾನ್ ವಿರಕ್ತ 87 ತ್ರಿಕರಣ ಶುದ್ಧ 88 ಆರಾಧ್ಯ ದೈವ 89 ಪದ್ಮಭೂಷಣ 90 ಜಗತ್ತು ಕಂಡ ಜ್ಞಾನ ಭಂಡಾರ 91 ಸ್ವಯಂ ಸೇವಕ 92 ಆದರ್ಶ ಪೀಠಾಧಿಪತಿ 93 ಪೂರ್ಣಾ ಧಿಕಾರಿ 94 ಅಗ್ರ ಮಠಾಧಿಪತಿ 95 ಗೌರವಾನ್ವಿತ ಅನುಯಾಯಿ 96 ಪೂಜ್ಯ ವ್ಯಕ್ತಿ 97 ಜಂಗಮ ಮೂರ್ತಿ 98 ವೀರಾಪುರದ ಪ್ರೀತಿಯ ಬಾಲಕ 99 ಗುರುಲಿಂಗ ಜಂಗಮ ಭಕ್ತ 100 ಸಾಧು ಸಂತ 101 ಸಂಸ್ಕಾರ ಜೀವಿ 102 ಮಹಿಮಾ ಮೂರ್ತಿ 103 ದಾಸೋಹ ವಿಕ್ರಮ 104 ಸರ್ವಧರ್ಮಿಯ 105 ಯೋಗ್ಯ ಉತ್ತರಾಧಿಕಾರಿ 106 ಮಾನವಿಯತೆಯ ಸಾಕಾರಮೂರ್ತಿ 107 ಏಕಮೇವಾದ್ವಿತೀಯ 108 ಅಖಂಡ ದಾಸೋಹಿ 109 ಋಜುಮಾರ್ಗದ ಪರಿಚಕ 110 ಲೋಕ ಪೂಜ್ಯ 111 ಸದಾ ತೇಜಸ್ವಿ 112 ಜಗದ ಯೋಗಿ 113 ಭಾರತೀಯ ಆಧ್ಯಾತ್ಮಿಕ ನಾಯಕ 114 ಮಾಗಡಿ ತಾಲೂಕಿನ ಹೆಮ್ಮೆಯ ಪುತ್ರ
ಕರುಣ
ಬೆಂಗಳೂರು
@@@@@@
33.
@@@@@@
34.
ನಾನು ಕಂಡ ಶ್ರೀ ಸಿದ್ದಗಂಗಾಶಿವಕುಮಾರ ಜಗದ್ಗುರುಗಳು ನಮ್ಮ ಭಾರತ ದೇಶದ ವಜ್ರ ಅವರು.
ಅವರನ್ನು ಕಳೆದುಕೊಂಡಿದ್ದು ತುಂಬಾ ದುಖಃ ತಂದಿದೆ ಅವರ ಕಾರ್ಯಸಾಧನೆಗಳಿಂದ ಇಗಲು ಅಮರರು ಅವರು. ಲಕ್ಷಾಂತರನಾಡಿನ ಜನತೆಗೆ ಬಡವ ಶ್ರಿಮಂತ ಜಾತಿಯತಿ ಮಾಡದೆ ಎಲ್ಲ್ರಿಗೂ ಶಿಕ್ಷಣ,ಅನ್ನ ,ವಸತಿ ದಾಸೊಗ ತ್ರೀವಿಧ ದಾಸೊಗ ಮಾಡಿದ ದೇವರು ಅವರು.ಮನುಷ್ಯ ರುಪದಲ್ಲಿ ಜನಿಸಿದ ದೇವರು ಅವರು.ಮಾನವರ ಉದ್ದಾರಕ್ಕಾಗಿ ಧರೆಗೆ ಇಳಿದ ಯಡೇಯುರ ಸಿದ್ದಲಿಂಗೇಶ್ವರ ಸ್ವಾಮಿ ರುಪ ಅವರು. ದೇವರಿಗೆ ಸಾವಿಲ್ಲ ಅದಕ್ಕಾಗಿ ಅವರು ಅಮರರು.ನಮ್ಮ ಸರ್ಕಾರ ಅವರಿಗೆ ಭಾರತ ರತ್ನ ಪುರಸ್ಕಾರ ನಿಡದಿರುವದು ನಮ್ಮ ದೇಶ ನಡೆಸುವ ನಾಯಕರಿಗೆ ಅವಮಾನದು.ದೇವರನ್ನು ತಿಳಿದಿಕೊಳ್ಳುವ ಯೊಗ್ಯತೆ ದೇಶನಡೆಸುವರಿಗೆ ಇಲ್ಲದ್ದು ದುಖಃದ ಸಂಗತಿ. ನಮ್ಮ ದೇವರನ್ನು ಅಳತೆ ಮಾಡಲು ಆಗದು.ನೊಬೆಲ್ ಪುರಸ್ಕಾರ ವು ಅವರ ಇದರಿಗೆ ಸಣ್ಣದು.ಮತ್ತೆ ನಮ್ಮ ನಾಡು ದೇಶ ಉದ್ದರಿಸಲು ಅವತಾರ ಪುರಶರಾಗಿ ಬರುವರು ನಮ್ಮ ದೇವರು. ಶ್ರೀ ಜಗದ್ಗುರು ಬಸವಣ್ಣನವರ ಪ್ರತಿರುಪ ಇವರು.
ಅವರ ಕೆಲಸ, ಅವರ ಪ್ರವಚನಗಳು ಈಗಲೂ ನಮ್ಮ ಕಣ್ಣ ಮುಂದೆ ಇವೆ.
ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಿದ್ದಗಂಗಾ ಶ್ರೀಗಳು ಸಾರಿದರು.
ಚನ್ನಬಸವಣ್ಣ ಶೆಟ್ಟರ
ರಾಜ್ಯಾಧ್ಯಕ್ಷರು.ಕರ್ನಾಟಕ ವೀರಕನ್ನಡಿಗರ ರಕ್ಷಣಾ ವೇದಿಕೆ.
ಮೇಲಗಿರಿ ಪ್ಲಾಟ ೧ ನೇ ರಸ್ತೆ.ಬ್ಯಾಡಗಿ -೫೮೧೧೦೬.ಜಿಲ್ಲೆ ಹಾವೇರಿ.ಕರ್ನಾಟಕ
ಕರ್ನಾಟಕ ವೀರಕನ್ನಡಿಗರ ರಕ್ಷಣಾ ವೇದಿಕೆ .
ದಿನಾಂಕ -೩೧-೧-೨೦೧೯.
0000000000
35.
ಜಗಕೆ ದಾರಿ ದೀಪ......
ತಂದೆ ತಾಯಿಗೆ ದೇವರಾಗಿ ಹುಟ್ಟಿರಲಿಲ್ಲ..
ಅರಮನೆಗೆ ರಾಜನಾಗಿರಲಿಲ್ಲ...
ಕೋಟೆ ಕಟ್ಟಿ ಯುದ್ಧ ಸಾರಲಿಲ್ಲ..
ಶರಣು ಶರಣು ಎಂದು ಬೇಡಿ
ಶಿವಭಕ್ತನಾದೆ..!
ಕೋಟಿ ಮಕ್ಕಳಿಗೆ ಅನ್ನದ ಕಣಜ ಕಟ್ಟಿದೆ..
ಮಾನವಿಯತೆಯ ಮಮಕಾರ ನುಡಿದೆ..
ಅರಸಿ ಬಂದವರಿಗೆ ಸದ್ಗುಣ ಭಕ್ತನಾದೆ...
ಕೇಳದವರಿಗೆಲ್ಲ ಕೊಟ್ಟು ದೇವಲೋಕದ ಮಗನಾದೆ..!
ಶ್ರದ್ದಾ ಭಕ್ತಿ ನಡೆದ ದಾರಿಯಲ್ಲಿ..
ಕುಶಲತೆಯ ಹೃದಯ ದೇಹದಲ್ಲಿ...
ವಿಶ್ವದ ಗಡಿ ಮುಟ್ಟಿ ಭಾರತಕ್ಕೆ ರತ್ನವಾದ ಕನ್ನಡದ ಸೊಬಗು ನೀನು..
ಲಾಭಕ್ಕಾಗಿ ಶ್ರಮಿಸಲಿಲ್ಲ , ಮಾಡಿದ ಕೆಲಸ ಮರೆಯಲಾಗುವುದಿಲ್ಲ...!
ಸರ್ವಕುಲಕು ದಿವ್ಯಾ ಜ್ಯೋತಿ ನಿನ್ನ ನುಡಿಗಳು...
ಭಕ್ತರಿಗೆ ಕಂಡ ಪ್ರತ್ಯಕ್ಷ ದೇವರ ರೂಪ ನಿನ್ನದು....
ಪ್ರತಿಯೊಬ್ಬ ಮಕ್ಕಳಲ್ಲೂ ಮರುಜನ್ಮ ತಾಳಿದೆ...
ಸಾಗಿದ ಪಯಣದಲ್ಲಿ ಸಾವಿಲ್ಲದ ಅಂತ್ಯಾ ಕಂಡು ಮಿನುಗುವ ಮೃತ್ಯುಂಜಯನಾದೆ...!
ಎಂತಾ ಲೋಕ ಇದು ಮಾನವ...
ಸಮುದ್ರದ ದಡದಲ್ಲಿ ನಿಂತು ಜಿಗಿಯುವ ಮುನ್ನ .....
ತಲೆ ಎತ್ತಿ ನೋಡಿದರೆ ಎಷ್ಟು ಚೆನ್ನ ಶ್ರೀಸಿದ್ದಗಂಗಾ.....
ಮರೆತು ನರಕ ಸೇರಬೇಡ....
ಬದುಕಿ ಸಾಧಿಸು
ನೀನಿರುವುದು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸನ್ನಿಧಿಯಲ್ಲಿ.........
( ಗೌತಮ್ ಗಿರಿಶಾಂತ ಗುಬ್ಬಿ )
00000000000
36.
"ತಾಯಿಯಾದೆ ತಂದೆಯಾದೆ"
ತಾಯಿಯಾದೆ ತಂದೆಯಾದೆ
ಬಂಧುವಾದೆ ಗುರುವಾದೆ
ಯೇಸುವಾದೆ ಅಲ್ಲಾ ಆದೆ
ಬುದ್ಧನಾದೆ ದೇವರ ಮಕ್ಕಳಿಗೆ.....
ತ್ರಿವಿಧದ ದಾಸೋಹ ನಡೆಸಿದೆ ನೀ ಬಸವಣ್ಣನಾಗಿ.
ಬೇಡಲಿಲ್ಲ ಬಯಸಲಿಲ್ಲ ತನು ಮನ ಧನ ನಿನಗಾಗಿ.
ನಿಮ್ಮ ಹೆಸರು ನೆನೆವರು ಅವರವರ ಭಾವಕ್ಕಾಗಿ...
ನಿನ್ನ ಭಾಗ್ಯ ಧಾರೆ ಎರೆದೆ ಬಡ ಬಲ್ಲಿದರ ಜೀವನಕ್ಕೆ.......
ಭಕ್ತಿ ಶಕ್ತಿ ಯುಕ್ತಿ ಕಲಿಸಿ
ದೈವತ್ವದ ಪಾಠ ಪಠಿಸಿ
ಹೋಗಲಿಲ್ಲ ಎಲ್ಲೂ ನೀನು
ನಮ್ಮೊಳಗಾದೆ ಎಂದೂ ಒಂದು.
ಮಾಹಾಮಾನವನ ಆಸ್ತಿಯಂತೆ
ಅನಿಕೇತನದ ಪ್ರಾಪ್ತಿಯಾದೆ
ಚೈತನ್ಯದ ಮಹಾ ಚೇತನನಂತೆ
ಬದುಕು ಕಳೆದು ಬವಣೆ ತಿಳಿದು
ಸನ್ಮಾರ್ಗವ ತೋರಿದೆ
ಓ ಶಿವಕುಮಾರ ಸ್ವಾಮಿ ಜಿ...
ನಿಮಗೆ ಅನಂತ ವಂದನೆಗಳು.
ಸಮಾಜ ನಿಮಗೆ ಋಣಿಯಾಗಿರುಹುದು.
ನಿಮ್ಮ ಮಾರ್ಗ ಅನುಸರಿಸುತ್ತ, ಜನರ ಜೀವನದ ಭಾಗವಾಗಿರುವಿರಿ
ಎಲ್ಲರಲ್ಲೂ ನೀವು ಒಂದಾಗಿರುವಿರಿ.
ಡಾ.ಜಗನ್ನಾಥ ಕೆ ಡಾಂಗೆ
ಪ್ರಾಧ್ಯಾಪಕ
ಕುವೆಂಪು ವಿಶ್ವವಿದ್ಯಾಲಯ
ಶಂಕರಘಟ್ಟ
00000000000
37.
ಓಂ ಶ್ರೀ ಗುರುಬಸವಲಿಂಗಾಯ ನಮಃ
***ನಡೆದಾಡುವ ದೇವರು***
ಗುಡಿಯಲ್ಲಿರುವ ದೇವರು ಮಾತನಾಡುವುದಿಲ್ಲ .ಆದರೆ ಈ ಮರ್ತ್ಯದಲ್ಲಿ ಜನಿಸಿ ತಮ್ಮ ಪೂರ್ಣ ಬದುಕನ್ನು ಮನುಕುಲದ ಉದ್ಧಾರಕ್ಕಾಗಿ ಮೀಸಲಿಟ್ಟು ಜಾತಿ ಮತ ವರ್ಣ ಭೇದಗಳನೆಣಿಸದೇ "ಇವನಾರವ ಇವನಾರವ ಎಂದೆನಿಸದೇ ಇವನಮ್ಮವ ಇವನಮ್ಮವ"ಎಂದು ಒಪ್ಪಿ ಅಪ್ಪಿಕೊಂಡ ಜಗದ ನಂಟ ಬಸವಣ್ಣ,ಚೋಳರಾಜನಿಗೆ ಜ್ಞಾನೋದಯದ ಕಣ್ಣು ತೆರೆಸಿದ ಮಹಾತಪಸ್ವಿ ಶಿವರಾತ್ರೀಶ್ವರರು, ಮಹಾಯಾತ್ರಿಕ ಮಲೆಯ ಮಹದೇಶ್ವರರು,ಯಡಿಯೂರು ಸಿದ್ಧಲಿಂಗೇಶ್ವರರು,ದಾಸೋಹ ಚಕ್ರವರ್ತಿ ಗುರುಮಲ್ಲೇಶ್ವರರು ಇವರೆಲ್ಲಾ ಮಾತನಾಡಿದ ದೇವರುಗಳು.ಮಾನವರ ಬದುಕನ್ನು ಹಸನಾಗಿಸಲು ಮಾರ್ಗದರ್ಶನ ನೀಡಿದ ಮಹನೀಯರು. ತಮ್ಮ ನಡೆನುಡಿಯಿಂದಲೇ ಲೋಕಕ್ಕೆ ಬೆಳಕಾಗಿ ದೈವತ್ವವನ್ನು ಪಡೆದು ಕೊಂಡವರು.ಅಲ್ಲಮರು ಹೇಳಿರುವ
"ನಾ ದೇವನಲ್ಲದೇ ನೀ ದೇವನೇ
ನೀ ದೇವನಾದಡೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೇ
ಹಸಿವಾದಾಗ ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ "
ಎಂಬ ವಚನದಂತೆ ಅಕ್ಷರಷಃ ಬಾಳಿದವರು. ಇಂತಹ ಶರಣರ ಪರಂಪರೆಯನ್ನು ಬಳಿವಿಡಿದುಕೊಂಡು ಬಂದಂತಹ ಪರಮಪೂಜ್ಯ ಪದ್ಮಭೂಷಣ,ಕರ್ನಾಟಕರತ್ನ, ಡಾ. ಶಿವಕುಮಾರಮಹಾಸ್ವಾಮಿಗಳವರು ಕಾಯಕಯೋಗಿ,ಮನದಲ್ಲಿ ಭಕ್ತಿ,ಮಾತಿನಲ್ಲಿ ಲಿಂಗಕಳೆ,ನಿರುಪಮ ಜ್ಞಾನಿ,ಅನುಭಾವಿ,ಮಾಯ ಮುಟ್ಟದ ತನು,ಮೋಹಸೋಂಕದ ಹೃದಯ, ಮರೆವಿಲ್ಲದ ಮತಿ,ದೇಹದೇವಾಲಯ,ಪ್ರಾಣದೇವ,ಯೋಗಸಿದ್ಧಿಸಾಧಕ,ಮಂತ್ರದಲ್ಲಿ ಪ್ರಣವ ಸಿದ್ಧ,ಧ್ಯಾನದಲ್ಲಿ ಅನಿಮಿಷ,ಲಿಂಗಮಾರ್ಗದಲ್ಲಿ ಶಿವಯೋಗಿ,ಕಣ್ಣಿನಲ್ಲಿ ಕಾರುಣ್ಯ,ನಡೆಯಲ್ಲಿ ನಿಶ್ಚಿಂತತೆ,ಪ್ರಸನ್ನತೆಯೇ ಮೂರ್ತಿಗೊಂಡ ಮಹಂತರು.ಬಸವಣ್ಣನವರು ಹೇಳಿರುವ
"ಕಲ್ಲು ದೇವರು ದೇವರಲ್ಲ ಮರದ ದೇವರು ದೇವರಲ್ಲ
ಕಂಚು ಹಿತ್ತಾಳೆ ತಾಮ್ರಗಳಿಂದ ಮಾಡಿದ ದೇವರು ದೇವರಲ್ಲ
ತನ್ನ ತಾನರಿತು ತಾನಾರೆಂದು ತಿಳಿದಡೆ ತಾನೇ ದೇವರು ಕಾಣಾ
ಕೂಡಲಸಂಗಮದೇವ"
ಎಂಬ ವಚನದಂತೆ ಶ್ರೀಗಳು ತಮ್ಮನ್ನು ತಾವು ಅರಿತು ದೈವತ್ವವನ್ನು ಗಳಿಸಿಕೊಂಡವರು. ಅಧ್ಯಾತ್ಮಚಿಂತನೆಯ ನಿರುಪಮ ಜ್ಞಾನಿ ನಿಜಗುಣ ಶಿವಯೋಗಿಗಳು ಹೇಳಿದ "ಆರುನಾನೆಂದು ವಿಚಾರಿಸು"ಎಂಬ ಮೌಲ್ಯಯುತ ಸಂದೇಶವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದವರು. ಕಥೆಯಾಗಿ ಇಳೆಯಲ್ಲಿ ನೆಲೆಗೊಂಡ ಪುಣ್ಯಾತ್ಮರು, ದಾರ್ಶನಿಕರು.ಬಸವತತ್ವವನ್ನು ತಮ್ಮ ಉಸಿರಾಗಿಸಿಕೊಂಡಿದ್ದ ಮಹಾನುಭಾವರು.ಪೂಜ್ಯರ ಭಕ್ತವೃಂದ ಶ್ರೀಗಳ ಕಾಯಕನಿಷ್ಠೆ, ಸೇವಾಕೈಂಕರ್ಯ,ಸಾಧನೆಯನ್ನು ಕೊಂಡಾಡುವುದರ ಮೂಲಕ ಶ್ರೀಗಳಿಗೆ ನೀಡಿದ ಅಭಿಧಾನಗಳು ಲೆಕ್ಕಕ್ಕೆ ಸಿಗದಷ್ಟು. ಅವುಗಳಲ್ಲಿ ಕೆಲವನ್ನು ಹೆಸರಿಸುತ್ತೇನೆ.
ಚರಜಂಗಮ ಮೂರ್ತಿ,ತ್ರಿವಿಧದಾಸೋಹಮೂರ್ತಿ,ಅಭಿನವ ಬಸವಣ್ಣ,ನಡೆದಾಡುವ ದೇವರು,ಶತಮಾನದ ಶಿವಯೋಗಿ,ಸಿದ್ಧಗಂಗೆಯ ಕೀರ್ತಿಕಲಶ
ಹೀಗೆ ಭಕ್ತವೃಂದ ಪ್ರೀತಿಯಿಂದ,ಅಭಿಮಾನದಿಂದ ಮನದುಂಬಿ ಕರೆದ ಅನಭಿಧಾನಗಳನ್ನು ಶ್ರೀಗಳು ತಮ್ಮ ಕಾಯಕನಿಷ್ಠೆ,ಅನ್ನದಾಸೋಹ,ಜ್ಞಾನ ದಾಸೋಹ,ಆಶ್ರಯ ದಾಸೋಹದಂತಹ ಕೈಂಕರ್ಯಗಳಿಂದ ಸಾರ್ಥಕಪಡಿಸಿಕೊಂಡಿದ್ದಾರೆ.ಸಾಧನೆಯ ಶಿಖರವನ್ನೇರಿದ ಪರಮಪೂಜ್ಯರು ನಿಜಲಿಂಗದೊಳೊಡವೆರೆದು ದೈವತ್ವವನ್ನು ಪಡೆದುಕೊಂಡವರು .ಶ್ರೀಗಳು ಭೌತಿಕವಾಗಿ ನಮ್ಮಿಂದ ಮರೆಯಾಗಿದ್ದರೂ, ಮಾನಸಿಕವಾಗಿ ಎಲ್ಲರ ಆಂತರ್ಯದಲ್ಲಿ ನೆಲೆಯಾಗಿದ್ದಾರೆ. ಶ್ರೀಕ್ಷೇತ್ರದಲ್ಲಿ ಚಿಜ್ಜ್ಯೋತಿಯಾಗಿ ಪ್ರಕಾಶಿಸುತ್ತಿದ್ದಾರೆ.
ಶರಣು ಶರಣಾರ್ಥಿ
*ಮುಡಿಗುಂಡ ಎಸ್.ಪುಟ್ಟಪ್ಪ*
00000000000
38.
ಅವರು ಅಬೋಧ ಮನಸುಗಳಲ್ಲಿ ಅಕ್ಷರ ಪ್ರತಿಷ್ಠಾಪನೆ ಮಾಡಿದ ದಿವ್ಯಚೇತನ!
ಅವರು ಎಲ್ಲ ರೀತಿಯಲ್ಲಿಯೂ ಸಿದ್ದಿಪುರುಷ. ಇದು ಕಲಿಯುಗ, ಇಲ್ಲಿ ಬರೀ ಕೆಟ್ಟದ್ದೇ ಮೆರೆದಾಡುತ್ತದೆ ಎಂಬ ಗೊಣಗಾಟಗಳ ನಡುವಲ್ಲಿಯೂ ಸಾಕ್ಷಾತ್ ದೇವರಂತೆಯೇ ಬದುಕಿದವರು. ಅವರು ಉಪದೇಶ ಕೊಡಲಿಲ್ಲ. ಹೀಗೆಯೇ ಬದುಕಬೇಕೆಂಬ ಪ್ರವಚನಕ್ಕೆ ತಮ್ಮ ಸಮಯವನ್ನ ವ್ಯರ್ಥ ಮಾಡಿಕೊಳ್ಳಲಿಲ್ಲ. ಬಹುಶಃ ಹಾಗಿದ್ದುದರಿಂದಲೇ ಅವರ ಬದುಕಿನ ರೀತಿಯೇ ಮಾದರಿಯಾಗಿ, ಬರೀ ಒಳಿತಿನ ಪಾಠವಾಗುಳಿಯಿತು. ಹೇಳುತ್ತಾ ಹೋದರೆ ಪದಗಳೇ ಸೋತು ಆ ದಿವ್ಯ ಚೇತದನ ಪ್ರಭೆಯ ಮುಂದೆ ಜಡವಾಗಬಹುದೇನೋ... ಇಂಥಾ ದೈವೀಕ ಶಕ್ತಿಯೊಂದರ ಮೂರ್ತರೂಪದೊಂದಿಗೆ ನಮ್ಮೊಂದಿಗೇ ಉಸಿರಾಡುತ್ತಾ ನಮ್ಮೆಲ್ಲರಿಗೂ ಮಾದರಿಯಾಗಿ ಉಳಿದು ಭೌತಿಕವಾಗಿಯಷ್ಟೇ ಮರೆಯಾದವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ...
ಕಾಯಕವೇ ಕೈಲಾಸ ಎಂಬ ಬಸವಣ್ಣನ ತತ್ವ ಶಿವಕುಮಾರ ಸ್ವಾಮೀಜಿಗಳ ನಾಲಗೆಯಲ್ಲಿ ನಲಿದಾಡಲಿಲ್ಲ. ಅದು ಅವರ ಉಸಿರಾಟದಲ್ಲಿಯೇ ಬೆರೆತು ಹೋಗಿತ್ತು. ನಿಜ, ಶಿವಕುಮಾರ ಸ್ವಾಮೀಜಿಯ ಪ್ರಭೆಯನ್ನು ಯಾವುದೇ ಒಂದು ಪರಿಧಿಗೆ ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ. ಅದು ಸರ್ವಾಂತರ್ಯಾಮಿ. ಈ ಬದುಕಿನ ಉದ್ದಗಲಕ್ಕೂ ಚಾಚಿಕೊಳ್ಳುವಷ್ಟು ತೀವ್ರವಾದ ಸ್ಫೂರ್ತಿ ಅವರ ಜೀವನದ ಪುಸ್ತಕದಲ್ಲಿದೆ. ಅದರಲ್ಲಿ ಖುದ್ದು ಶ್ರೀಗಳೇ ಪ್ರಧಾನವಾಗಿ ಪರಿಗಣಿಸಿದ್ದು ಅಕ್ಷರ ದಾಸೋಹವನ್ನು ಎಂಬುದಿಲ್ಲಿ ಉಲ್ಲೇಖಿಸಲೇ ಬೇಕಾದ ವಿಶೇಷ.
ಅಕ್ಷರಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ ಎಂಬ ತತ್ವವನ್ನು ಕಾಯಕದಲ್ಲಿಯೇ ಅಳವಡಿಸಿಕೊಂಡಿದ್ದ ಶಿವಕುಮಾರಸ್ವಾಮೀಜಿ ಶಿಕ್ಷಣ ರಂಗದ ಮೌನಕ್ರಾಂತಿಯೊಂದರ ಪ್ರವರ್ತಕರೆಂಬುದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಒಂದು ಮಠದ ಸ್ವಾಮೀಜಿಯಾಗಿದ್ದುಕೊಂಡು ನಿಜಕ್ಕೂ ಮಾಡಬೇಕಾದ ತುರ್ತಿನ ಕೆಲಸ ಯಾವುದೆಂಬುದಕ್ಕೆ ಶ್ರೀಗಳ ಜೀವನ ಕ್ರಮಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಸ್ಪರ್ಧಾತ್ಮಕ ಜಗತ್ತಿನ ಕಾಸಿನಾಟದಲ್ಲಿ ಗೆಲ್ಲಲಾಗದೆ ಯಾರದ್ದೋ ಹೊಲದಲ್ಲಿ ಕೂಲಿನಾಲಿ ಮಾಡಬೇಕಾಗಿದ್ದ ಅದೆಷ್ಟೋ ಜೀವಗಳು ಶ್ರೀಗಳ ನೆರಳಲ್ಲಿ ಅಕ್ಷರ ಕಲಿತಿವೆ. ಶ್ರೀಮಠದ ಶಿಕ್ಷಣ ಸಂಸ್ಥೆಗಳಿಂದ ಅದೆಷ್ಟೋ ಲಕ್ಷ ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ. ಇಂಥಾ ಎಲ್ಲ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಅಕ್ಷರ ದಾಸೋಹದಲ್ಲಿಯೇ ಸಾರ್ಥಕ್ಯ ಕಂಡ ಶಿವಕುಮಾರ ಸ್ವಾಮೀಜಿ ನಿಜವಾದ ಅಕ್ಷರಬ್ರಹ್ಮ.
ಸ್ವಾಮೀಜಿ ಒಂದು ಅನಿರೀಕ್ಷಿತ ಘಳಿಗೆಯಲ್ಲಿ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ನೇಮಕ ಗೊಂಡವರು. ತದ ನಂತರ ಇಡೀ ಮಠದ ಜವಾಬ್ದಾರಿ ಅವರ ಎಳೇಢ ಹೆಗಲ ಮೇಲೆ ಬಿದ್ದಾಗ ಆ ಕಾಲದಲ್ಲಿ ಮಠದ ಸಾಂಗತ್ಯದಲ್ಲಿದ್ದವರಿಗೆ ಒಂದು ಥರದ ಅನುಮಾನ ಕಾಡಿತ್ತಂತೆ. ಎಳೇ ವಯಸ್ಸಿನ ಶ್ರೀಗಳು ಈ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂಬುದರ ಬಗ್ಗೆಯೇ ಅನುಮಾನವಿತ್ತಂತೆ. ಹೇಳಿಕೇಳಿ ಮಠಕ್ಕಿದ್ದ ಭೂಮಿಯೂ ಮಳೆಯಾಧಾರಿತವಾದದ್ದು. ಇಂಥಾ ಕಾಲಘಟ್ಟದಲ್ಲಿ ಭಕ್ತರ ಮನೆಗಳಿಗೆ ನಡೆದೇ ವತೆರಳಿ ದವಸ ಧಾನ್ಯಗಳನ್ನು ಸಂಗ್ರಹಿಸಿ ತಂದು ಅಕ್ಷರ ಕ್ರಾಂತಿಗೆ ಶ್ರೀಕಾರ ಹಾಡಿದ್ದು ಶ್ರೀಗಳ ಹೆಗ್ಗಳಿಕೆ.
ಇಂಜಿನಿಯರಿಂಗ್, ವಿಜ್ಞಾನ, ಕಲೆ ಸೇರಿದಂತೆ ಶ್ರೀಗಳು ನೋಡ ನೋಡುತ್ತಲೇ ನೂರಾರು ವಿದ್ಯಾಸಂಸ್ಥೆಗಳಿಗೆ ಚಾಲನೆ ನೀಡಿದರು. ಅದೆಷ್ಟೋ ಲಕ್ಷ ವಿದ್ಯಾರ್ಥಿಗಳ ಹಣೆಬರಹವೇ ಬದಲಾಗುವಂತೆ ನೋಡಿಕೊಂಡರು. ಅದೆಷ್ಟೇ ಬುದ್ಧಿವಂತಿಕೆ ಇದ್ದರೂ ಕೂಡಾ ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯಲ್ಲಿ ನಿಲ್ಲಲಾಗದ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರಿದ್ದಾರೆ. ಅಂಥವರಿಗೆಲ್ಲ ಆಶಾಕಿರಣವಾಗಿ ಇಂದು ಸಿದ್ದಗಂಗಾ ಮಠದ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಬ್ಬರ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಧಾರ್ಮಿಕ ವಲಯದ್ದೊಂದು ಪಾತ್ರವಿದೆ. ಅದನ್ನು ಎಷ್ಟು ಬೇಕೋ ಅಷ್ಟು ಸದಾ ಬೆಳಕಾಗಿರುವಂತೆ ಪ್ರತೀ ವಿದ್ಯಾರ್ಥಿಗಳ ಎದೆಯಲ್ಲಿಯೂ ಅಕ್ಷರ ಜ್ಯೋತಿಯನ್ನ ಹಚ್ಚಿಟ್ಟಿದ್ದು ಶ್ರೀಗಳ ಹೆಗ್ಗಳಿಕೆ. ಈ ಜ್ಯೋತಿ ಅದೆಷ್ಟೋ ಜನರ ಬದುಕು ಬೆಳಗುತ್ತಿದೆ. ಸ್ಫೂರ್ತಿಯಾಗ ಉದ್ದಗಲಕ್ಕೂ ಹರಡಿಕೊಳ್ಳುತ್ತಿವೆ.
ಶಿಕ್ಷಣ ಅಂದರೆ ವ್ಯಾಪಾರವಲ್ಲ. ಅದು ಬದುಕು ಬೆಳಗಿಸೋ ಪವಿತ್ರ ಕಾಯಕ ಎಂಬುದನ್ನ ಶ್ರೀಗಳು ಬದುಕಿನ ಕ್ರಮವಾಗಿಸಿಕೊಂಡಿದ್ದರು. ಅವರು ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಡೇಯವರೆಗೂ ಕಣ್ಣಲ್ಲಿ ಕಣ್ಣಿಟ್ಟು ಸಲಹಿದರು. ಪ್ರತೀ ವಿದ್ಯಾರ್ಥಿಗಳ ಅನ್ನ, ಅಕ್ಷರ ದಾಸೋಹವೇ ನಿಜವಾದ ಧರ್ಮ ಎಂಬುದನ್ನು ಮನಗಂಡು ಅದರಂತೆಯೇ ಜೀವಿಸಿದರು. ಅವರ ದೇಖಾರೇಖಿಯಲ್ಲಿ ಮುನ್ನಡೆದ ಮಠದ ಶಿಕ್ಷಣ ಸಂಸ್ಥೆಗಳೆಲ್ಲವೂ ಎಲ್ಲ ಕಾಲಕ್ಕೂ ಮಾದರಿ. ಅವ ಉಗಳೊಳಗೆ ಅಕ್ಷರ ದಾಸೋಹದ ಪಾವಿತ್ರ್ಯಕ್ಕೆ ಸಜೀವ ಉದಾಹರಣೆಗಳಿವೆ. ಶಿಕ್ಷಣ ನೀಡುವುದೂ ಕೂಡಾ ಒಂದು ದೈವೀಕವಾದ ಕಾಯಕ ಎಂಬುದಕ್ಕೆ ಶ್ರೀಗಳ ಹೆಜ್ಜೆ ಗುರುತುಗಳಲ್ಲಿಯೇ ಸ್ಪಷ್ಟವಾದ ಸಂದೇಶಗಳಿವೆ.
ಅವರೆಂದೂ ತಾವು ಮಾಡೋ ಕೆಲಸದ ಬಗ್ಗೆ ಮಾತಾಡಲಿಲ್ಲ. ತಮ್ಮ ಶಿಕ್ಷಣ ಸಂಸ್ಥೆಗಳ ಅನುದಾನಕ್ಕಾಗಿ ಕಾಯಲೂ ಇಲ್ಲ. ಭಕ್ತಗಣದ ಭಯ ಭಕ್ತಿಯಿಂದ ಕೊಟ್ಟ ಎಲ್ಲ ರೂಪದ ಕಾಣಿಕೆಯನ್ನೂ ಕೂಡಾ ಅಕ್ಷರ ದಾಸೋಹದ ಮೂಲವಾಗಿಸಿಕೊಂಡರು. ಪುಟ್ಟ ಮನಸುಗಳ ಅಬೋಧ ಚಿತ್ತದಲ್ಲಿ ಅಕ್ಷರಗಳನ್ನು ಪ್ರತಿಷ್ಠಾಪಿಸುವುದನ್ನೇ ಪೂಜೆಯಂದುಕೊಂಡರು. ನೂರಾ ಹನ್ನೊಂದು ವರ್ಷಗಳ ಅವರ ಸಂಪೂರ್ಣ ಜೀವನ ಈ ಅನ್ನ, ಅಕ್ಷರ ದಾಸೋಹಗಳಿಂದಲೇ ಸಂಪನ್ನವಾಗಿದೆ. ಅದು ಯಾವತ್ತಿಗೂ ಅಸೀಮ ಸ್ಫೂರ್ತಿಯಾಗಿ ತಲೆಮಾರುಗಳಾಚೆಗೂ ಜೀವಂತವಾಗಿರುತ್ತದೆ.
ಶಿಸ್ತು, ಸ್ವಾರ್ಥರಹಿತ ಜೀವನ ಕ್ರಮಗಳಿಂದಲೇ ಸಾರ್ಥಕವಾಗಿ ಬದುಕಿದ್ದ ಶ್ರೀಗಳು ನಮ್ಮ ಕಾಲ ಘಟ್ಟದಲ್ಲಿ ಇದ್ದರೆಂಬುದೇ ನಾವೆಲ್ಲ ಹೆಮ್ಮೆ ಪಡುವಂಥಾ ವಿಚಾರ. ಅಕ್ಷರ ಕಲಿಸೋ ಶಿಕ್ಷಕ ವೃತ್ತಿಗೆ, ಶಿಕ್ಷಣ ರಂಗಕ್ಕಂತೂ ಅವರು ಅಜರಾಮರ ಚೇತನ. ಅವರ ಬಗ್ಗೆ ಮಾತಾಡುವುದಕ್ಕಿಂತಲೂ ನಮ್ಮ ನಮ್ಮ ಮಿತಿಯಲ್ಲಿಯೇ ಅವರು ಹಚ್ಚಿಟ್ಟ ಅಕ್ಷರದ ಹಣತೆಯನ್ನು ಸಾಧ್ಯವಾದಷ್ಟು ವಿಸ್ತಾವಾಗಿಸಲು ಪ್ರಯತ್ನಿಸುವುದೇ ಶ್ರೀಗಳಿಗೆ ಸಲ್ಲಿಸಬಹುದಾದ ನಿಜವಾದ ಗೌರವ.
-ಸವಿತಾ ಬಾಗಿಲಗದ್ದೆ
ಕನ್ನಡ ಭಾಷಾ ಸಹಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಹುಡ್ಕೋ ಬನ್ನಿಮಂಟಪ ಮೈಸೂರು.
000000000000000
39.
ಸಿದ್ಧಗಂಗೆ
ಸಿದ್ಧಗಂಗೆ ಇದು ಒಂದು ಶುದ್ಧಗಂಗೆ. ದಶಕಗಳಿಂದ ಉರಿಯುತ್ತಿರುವ ಅಡುಗೆಯ ಒಲೆ ಆರಿಲ್ಲ. ಬೆಳಗುತ್ತಿರುವ ಜ್ಞಾನಜ್ಯೋತಿ ನಂದಿಲ್ಲ, ದುಡಿಯುವ ಕೈಗಳು ಕೆಲಸ ನಿಲ್ಲಿಸಿಲ್ಲ. ಅಹಂಕಾರ, ಸ್ವಜಾತಿಪ್ರೇಮ, ಸ್ವಪ್ರತಿಷ್ಠೆಗಳಿಲ್ಲದ ಇದೊಂದು ಮಹಾಮನೆ. ದಾಸೋಹದ ಅರ್ಥವನ್ನು ಕಾರ್ಯರೂಪಕ್ಕೆ ತಂದಿರುವ ಪುಣ್ಯಭೂಮಿ. ಪ್ರಸ್ತುತ ಈ ಕ್ಷೇತ್ರ ಧರ್ಮಕ್ಷೇತ್ರ, ಅನ್ನಕ್ಷೇತ್ರ, ಪುಣ್ಯಕ್ಷೇತ್ರವಾಗಿದೆ ಮತ್ತು ಅಕ್ಷರದಾಸೋಹದ ತಾಣ. ಈ ಪುಣ್ಯಕ್ಷೇತ್ರದ ರೂವಾರಿ ತ್ರಿವಿಧ ದಾಸೋಹಿ, ಕರ್ನಾಟಕರತ್ನ, ಪದ್ಮಭೂಷಣ, ನಡೆದಾಡುವ ದೇವರು, ಶತಾಯುಷಿ ಡಾ|| ಶ್ರೀ ಶ್ರೀ ಶಿವಕುಮಾರಮಹಾಸ್ವಾಮಿಗಳು. ಸಂನ್ಯಾಸದ ಅರ್ಥವನ್ನು ಮುಗಿಲೆತ್ತರಕ್ಕೆ ತಲುಪಿಸಿದ ಮಹಾಪುರುಷರು. ಸೇವೆಯೇ ಪೂಜೆ, ಮಾನವ ಕಲ್ಯಾಣವೇ ಮಂತ್ರ, ಹೃದಯ ಶ್ರೀಮಂತಿಕೆ, ಅರ್ಪಣಾ ಮನೋಭಾವ ಮತ್ತು ಶುದ್ಧ ಕಾಯಕದ ಮಹಾತಪಸ್ವಿಗಳು.
ಎಪ್ಪತ್ತೇಳು ವರ್ಷ ವಯಸ್ಸಿನ ರಾಜಶೇಖರಯ್ಯನಾದ ನಾನು ಈ ಪುಣ್ಯಕ್ಷೇತ್ರದ 1961ರ ಇಸವಿಯ ಹಳೆಯವಿದ್ಯಾರ್ಥಿ. ಗುರುಗಳ ದರ್ಶನ, ಸ್ಪರ್ಶ, ಮಾರ್ಗದರ್ಶನ ಪಡೆದ ನಾನೇ ಪುಣ್ಯವಂತ. ಅಷ್ಟೇ ಏಕೆ ಈ ತ್ರಿವಿಧ ದಾಸೋಹದಿಂದ ಇಡೀ ನನ್ನ ಕುಟುಂಬವೇ ಆರೋಗ್ಯ ಮತ್ತು ನೆಮ್ಮದಿಯ ಜೀವನ ನಡೆಸುತ್ತಿದೆ. ಹತ್ತಾರು ಜನಕ್ಕೆ ದಾಸೋಹ ನೀಡುವ ಶಕ್ತಿಯನ್ನು ಕೊಟ್ಟಿದೆ. ಸಂಸ್ಕಾರವನ್ನು ನೀಡಿದೆ, ಕಾಯಕದ ಅರ್ಥವನ್ನು ತಿಳಿಸಿದೆ. ನಿಸ್ವಾರ್ಥ, ಪರೋಪಕಾರ, ಗೌರವ, ಶ್ರದ್ಧೆ, ಭಕ್ತಿ, ಸಂಯಮ ಇತ್ಯಾದಿ ಮಾನವ ದೈನಂದಿನ ಜೀವನದ ಮಾರ್ಗಗಳನ್ನು ತಿಳಿಸಿದೆ. ನನ್ನ ಪ್ರಕಾರ ಈ ಮಠವು
ಉದರ ತಣಿಸಿ ಮಿದುಳ ಬೆಳಸಿ
ಮಲಿನ ಮನದ ಮುಸುಕ ಹರಿಸಿ
ಜಾತಿಯಳಿಸಿ ಜನತೆ ಹರಸಿ
ಜ್ಯೋತಿಯಾಗಿ ಬೆಳಗುತಿದೆ ಸಿದ್ಧಗಂಗೆ
ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಂತೋಷವಾಗುತ್ತದೆ. ಪೂಜ್ಯಶ್ರೀಗಳು ಪಂಚಾಭರಣದ ಪುಣ್ಯಜೀವಿಗಳು. ಕಾವಿ, ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗ ಮತ್ತು ಪಾದರಕ್ಷೆಗಳನ್ನು ಬಿಟ್ಟರೆ ಮತ್ಯಾವ ಬೆಲೆಬಾಳುವ ಲೋಹಗಳಿಲ್ಲ. ಸಪ್ಪೆಊಟ, ಬೇವಿನ ಕಷಾಯ, ನೀರು ಮಜ್ಜಿಗೆ ಇವರಿಗೆ ಬಲುಪ್ರಿಯ. ಮಠದ ಮಕ್ಕಳೇ ಇವರಿಗೆ ದೇವರು. ಮಕ್ಕಳು ಊಟ ಮಾಡುವುದನ್ನು ನೋಡಿ ಬಹುಸಂತೋಷಪಡುವ ಏಕೈಕ ತಂದೆ ಶ್ರೀ ಶಿವಕುಮಾರಸ್ವಾಮಿಗಳು.
ಶ್ರೀಗಳು ಮಠಕ್ಕಾಗಿ ಬೇಸಾಯ ಮಾಡಿದ್ದಾರೆ, ಸೌದೆ ಹೊಡೆದಿದ್ದಾರೆ, ಕಣದ ಕೆಲಸ ಮಾಡಿದ್ದಾರೆ, ಅಡುಗೆ ಮಾಡಿ ಮಕ್ಕಳಿಗೆ ಬಡಿಸಿದ್ದಾರೆ, ಕಾಲ್ನಡಿಗೆಯಲ್ಲಿ ಭಕ್ತರ ಮನೆಯಲ್ಲಿ ಪೂಜೆ ಮಾಡಿದ್ದಾರೆ, ಬಾಯ್ಬಿಟ್ಟು ಸಹಾಯವನ್ನು ಕೇಳಿಲ್ಲ, ಮಠಕ್ಕೆ ಯಾರೇ ಬಂದರೂ ಪ್ರಸಾದ ಮಾಡಿ ಎಂದು ಹೇಳುವುದನ್ನು ಬಿಟ್ಟಿಲ್ಲ. ಎರಡಂಕಿಯ ಮಕ್ಕಳ ಸಂಖ್ಯೆಯಿಂದ ಪ್ರಾರಂಭವಾದ ಇಂದು ಐದಂಕಿಯವರೆಗೆ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ಕಾರಣ ಅವರ ಗುರುಗಳ ಆಶೀರ್ವಾದ. ಶ್ರೀಗಳ ದೈವಶಕ್ತಿ, ಕಾಯಕನಿಷ್ಠೆಯ ಪೂಜಾಫಲ.
ಗ್ರಾಮೀಣ ಮಕ್ಕಳು ವಿದ್ಯಾವಂತರಾಗಬೇಕು, ಜನರಲ್ಲಿ ದೈವಭಕ್ತಿ ಉಂಟಾಗಬೇಕು, ಹೆಣ್ಣುಮಕ್ಕಳು ಶಿಕ್ಷಿತರಾಗಬೇಕು. ದಾಸೋಹ ಬರೀ ಶಬ್ದವಾಗದೆ ಕಾರ್ಯರೂಪಕ್ಕೆ ಬರಬೇಕು ಎಂಬುದನ್ನು ಮಾಡಿ ತೋರಿಸಿದ ಶ್ರೀಗಳು 111 ವರ್ಷ ಬದುಕಿ ಸಾರ್ಥಕಪಡಿಸಿದ್ದಾರೆ. ಮಠಕ್ಕೆ ಯಾವುದೇ ಕೊರತೆಯಿಲ್ಲ. ಎಲ್ಲವನ್ನೂ ಕಲ್ಪಿಸಿದ್ದಾರೆ. ಇಂತಹ ಮಠವನ್ನು ನಾವು ಬೆಳೆಸಬೇಕು, ಬಳಸಬೇಕು ಮತ್ತು ಉತ್ತರೋತ್ತರ ಮಠದ ಏಳಿಗೆಗಾಗಿ ಸಹಕರಿಸಬೇಕು. ಶ್ರೀ ಶಿವಕುಮಾರಮಹಾಸ್ವಾಮಿಗಳು ಮಾನವರೂಪದ ದೇವರು. ಆಧುನಿಕ ಬಸವಣ್ಣ, ನುಡಿದಂತೆ ನಡೆದಿದ್ದಾರೆ, ನಡೆದಂತೆ ನುಡಿಯಬೇಕೆಂದು ಶ್ರೀವಾಣಿಗಳನ್ನು ಕೊಟ್ಟಿದ್ದಾರೆ. ತಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋದವರನ್ನು ಕ್ಷಮಿಸಿದ್ದಾರೆ. ಅರಿವಿನ ಗುರುವಾಗಿದ್ದಾರೆ.
`ಧರೆಯಲ್ಲಿ ಹರಿಯಲಿ ಬಸವ ತತ್ವಗಳು
ಮನದಲ್ಲಿ ಅರಳಲಿ ವಚನದರ್ಥಗಳು’
ಎಂಬಂತೆ ನಡೆದಿದ್ದಾರೆ. ಶ್ರೀಗಳು ಪಾದವಿಟ್ಟ ಮನೆಮಂದಿರಗಳು ಇಂದಿಗೂ ಸುಖ, ಶಾಂತಿ, ನೆಮ್ಮದಿಯಿಂದ ಬೆಳೆಯುತ್ತಿವೆ. ಇಂದು ಶ್ರೀಕ್ಷೇತ್ರದ ಹಳೆಯ ವಿದ್ಯಾರ್ಥಿಗಳು ವಿಶ್ವದ ಎಲ್ಲಾ ಭಾಗಗಳಲ್ಲೂ ಇದ್ದಾರೆ. ಉನ್ನತ ಸ್ಥಾನದವರೂ ಪಡೆಯದವರೂ ವರ್ಷಕ್ಕೊಂದು ಬಾರಿ ಕ್ಷೇತ್ರಕ್ಕೆ ಬಂದು ತವರಿನ, ಬೆವರಿಗೆ ರುಚಿಯನ್ನು ಪಡೆಯುತ್ತಿದ್ದಾರೆ. ದಾಸೋಹಕ್ಕೆ ದಾನದ ಹೊಳೆಯನ್ನೇ ಹರಿಸುತ್ತಿದ್ದಾರೆ. ಒಮ್ಮೊಮ್ಮೆ ಶ್ರೀಗಳೇ ಹೇಳುತ್ತಾರೆ ಮಠದ ಕಾರ್ಯಗಳು ಹೇಗೆ ನಡೆಯುತ್ತವೆ ಎಂಬುದನ್ನು ಕ್ಷೇತ್ರದ ಆದಿದೈವ ಶ್ರೀ ಸಿದ್ಧಲಿಂಗೇಶ್ವರನಿಗೆ ಮಾತ್ರ ಗೊತ್ತು. ಶ್ರೀಕ್ಷೇತ್ರದ ಫಲಾನುಭವಿಗಳಲ್ಲಿ ಈ ಗುಣಗಳನ್ನು ಕಾಣಬಹುದು.
ಎಲೆಯಲ್ಲಿ ಅಥವಾ ತಟ್ಟೆಯಲ್ಲಿ ಪ್ರಸಾದ(ಊಟ) ಬಿಟ್ಟಿರುವುದಿಲ್ಲ.
ತಮ್ಮ ಗಳಿಕೆಯಲ್ಲಿ ಕೊಂಚವಾದರೂ ಮಠಕ್ಕೆ ಕೊಡುತ್ತಾರೆ.
ಶ್ರೀಗಳಿಗೆ ದುಃಖ, ಸಂಕಟ, ನೋವು ಉಂಟಾದರೆ ತಾವೂ ಅನುಭವಿಸುತ್ತಾರೆ.
ಹಸಿದು ಬಂದವರಿಗೆ ಅನ್ನ ನೀಡುವ ಗುಣ ಹೊಂದಿರುತ್ತಾರೆ.
ಸೇವಾಮನೋಭಾವ ಹೊಂದಿರುತ್ತಾರೆ.
ಈ ಮೇಲಿನ ಐದು ಗುಣಗಳು ಯಾರಲ್ಲಿ ಕಾಣುತ್ತೇವೋ ಅವರು ಶ್ರೀ ಸಿದ್ಧಗಂಗೆಯ ಫಲಾನುಭವಿಗಳು ಎಂದು ಸಂಕೋಚವಿಲ್ಲದೆ ಹೇಳಬಹುದು. ಕ್ಷೇತ್ರದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳಲು ಕ್ಷೇತ್ರದ ಪುಸ್ತಕಮಳಿಗೆಯಲ್ಲಿ `ಶ್ರೀ ಸಿದ್ಧಗಂಗಾ ಸಂಕ್ಷಿಪ್ತ ಪರಿಚಯ ಮತ್ತು ಶ್ರೀಗಳವರ ಸಾಧನೆಗಳು’ ಲೇಖಕರು : ರಾಜಶೇಖರಯ್ಯ ಎಂಬ ಪುಸ್ತಕದಲ್ಲಿ ದೊರೆಯುತ್ತದೆ.
`ಹುಟ್ಟು ಖಚಿತ, ಸಾವು ಖಚಿತ’ ಎಂಬಂತೆ ಶ್ರೀಗಳು 111 ವರ್ಷ ಸಾರ್ಥಕ ಜೀವನ ನಡೆಸಿ, ಸಮಾಜಕ್ಕೆ ಮಾದರಿಯಾಗಿ, ಗುರುಗಳಾಗಿ, ದೇವರಾಗಿ ದಿನಾಂಕ 21-01-2019ರಂದು ಲಿಂಗೈಕ್ಯರಾಗಿರುವುದು ಲಕ್ಷಾಂತರ ಮಂದಿಗೆ ನೋವುಂಟಾಗಿದೆ. ಆದರೆ ಭಕ್ತರೆಲ್ಲರ ಮನೆಯಲ್ಲಿ, ಮನದಲ್ಲಿ ಪೂಜ್ಯರ ಕೃಪಾಶೀರ್ವಾದ ಜ್ಯೋತಿಯಾಗಿ ಬೆಳಗುತ್ತಿರುವುದನ್ನು ನಾವೆಲ್ಲರೂ ಮರೆಯುವಂತಿಲ್ಲ. ಪೂಜ್ಯರು ದೇವರಾಗಿದ್ದಾರೆ ಎಂಬುದಕ್ಕೆ ಜನಪದ ಗ್ರಾಮೀಣ ಭಾಷೆಯ ಈ ಕವನದಲ್ಲಿ ಕಾಣಬಹುದು
ದೇವ್ರೈತೆ ನೋಡ್ಬನ್ರಿ ಸಿದ್ಗಂಗೇಲಿ
ಬಿಡುವಿಲ್ದೆ ದುಡಿತಿತ್ತು ಜನ್ರಿಗಾಗಿ
ಜೋಳಿಗೆ ಹಿಡ್ದು ಭಿಕ್ಷಾನ ಮಾಡಿ
ಲಕ್ಷಾಂತ್ರ ಮಕ್ಳಿಗೆ ವಿದ್ಯಾನ ಕಲ್ಸಿ
ಭೇದಾವ್ನ ಮಾಡ್ದೆ ಜಾತೀಯ ಎಣಿಸ್ದೆ
ದಿಕ್ಕಿಲ್ದ ಮಕ್ಳಿಗೆ ದೇವ್ರಾಗಿತ್ತು
ಪದವಿಯ ಪಡೆದು ಬೇಸಾಯ ಮಾಡಿ
ಓದೋಕೆ ಭವನ್ಗಳ್ನ ಕಟ್ಸೈತ್ರಿ
ಸಂನ್ಯಾಸಿಯಾದ್ರೂ ಶಾಲೆಗಳ್ನ ತೆರ್ದು
ತರತರಾ ಶಿಕ್ಷಣ ಹರಡೈತ್ರಿ
ಮಂತ್ರಾವ್ನ ಹಾಕ್ತಿತ್ತು ಯಂತ್ರಾವ್ನ ಕಟ್ತಿತ್ತು
ಬಂದಂತ ಜನ್ರಿಗೆ ನೆಮ್ದಿನಾ ಕೊಟ್ತಿತ್ತು
ಜಾತ್ರೆನಾ ಮಾಡ್ಸಿ ಉತ್ಸಾವ್ನ ನಡ್ಸಿ
ದಾಸೋಹದರ್ಥವಾ ತಿಳಿಸಿದ್ರು
ನೂರನ್ನೊಂದರ ಈ ನಮ್ಮಪ್ಪ
ಗದ್ಗೇಲಿ ಚಿರಶಾಂತಿ ಪಡಿತೈತ್ರಿ
ದರ್ಶನಾ ಮಾಡ್ಬನ್ನಿ ಕಣ್ತುಂಬ ನೋಡ್ಬನ್ನಿ
ಈ ಭಾಗ್ಯ ಇನ್ನೆಂದೂ ಸಿಗದಿಲ್ರಿ.
ಶ್ರೀಕ್ಷೇತ್ರದ ಉತ್ತರಾಧಿಕಾರಿಯಾಗಿರುವ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿಯವರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಅಣತಿಯಂತೆ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ. ಇರುವ ಕಿರಿಯ ಶ್ರೀಗಳಲ್ಲಿ ಹಿರಿಯ ಶ್ರೀಗಳನ್ನು ಕಂಡು ಮನ ತಣಿಸಿಕೊಳ್ಳೋಣ. ತ್ರಿವಿಧ ದಾಸೋಹ ಎಂದಿನಂತೆ ಮುಂದುವರಿಯಲಿ. ಸಹಾಯ ಸಹಕಾರ ನೀಡೋಣ. ಸಮಾಜಕ್ಕೆ ನಿರಂತರ ಆಶೀರ್ವಾದ ಕೃಪಾಕಟಾಕ್ಷವಿರಲೆಂದು ಕ್ಷೇತ್ರನಾಥ ಶ್ರೀ ಸಿದ್ಧಲಿಂಗೇಶ್ವರನಲ್ಲಿ ಪ್ರಾರ್ಥಿನೆ ಸಲ್ಲಿಸೋಣ.
ರಾಜಶೇಖರಯ್ಯ
ನಿವೃತ್ತ ಪ್ರಾಂಶುಪಾಲರು, ನಂ. 1128, 36ನೇ ಕ್ರಾಸ್,
ಎಸ್.ಐ.ಟಿ. ಮುಖ್ಯರಸ್ತೆ, ತುಮಕೂರು-572 103.
೦೦೦೦೦೦೦೦೦೦೦
40.
ಕಾಯಕಯೋಗಿ ಡಾ. ಶಿವಕುಮಾರ ಶ್ರೀಗಳು
(1908----2019)
ಕರ್ನಾಟಕ ರತ್ನ, ನಡೆದಾಡುವ ದೇವರು, ತ್ರೀವಿಧ ದಾಸೋಹಿ, ಕಾಯಕ ಮೂರ್ತಿ,, ಶರಣ ಸಂಸ್ಕೃತಿಯ ಚೇತನ, ದೇಶ, ರಾಜ್ಯ ಸುಭಿಕ್ಷೆ ಚಿಂತಕರು, ಬಸವ ತತ್ವ ಪರಿಪಾಲಕರು,ಆದ, ಪೂಜ್ಯ ಶ್ರೀ, ಶ್ರೀ ಶಿವಕುಮಾರ, ಮಹಾಸ್ವಾಮಿಗಳು,ಹನ್ನೆರಡನೇಯ ಶತಮಾನದಲ್ಲಿ ವಚನ ಕ್ರಾಂತಿಯ ಹರಿಕಾರ , ಧಮ೯ಗುರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಘನ ಸಂದೇಶವನ್ನು ನಿರಂತರವಾಗಿ ತಮ್ಮ ಜೀವನದಲ್ಲಿ ಕಾಯಕ ನಿತ್ಯಸತ್ಯದಂತೆ ಅಳವಡಿಸಿಕೊಂಡವರು. ಸಮಾಜದಲ್ಲಿಶಿಸ್ತುಬದ್ದ ಜೀವನ ಬದ್ದತೆಯ ಬದುಕು ಬದುಕಿನ ಬೆಳಕು. ಸ್ವಾಥ೯ರಹಿತ ಸೇವೆ ಮಾಡುವ ಮನುಷ್ಯನನ್ನು ದೇವರೆಂದು ಕರೆಯಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪೂರ ಎಂಬ ಪುಟ್ಟ ಗ್ರಾಮದಲ್ಲಿ ತಂದೆಹೊನ್ನಪ್ಪ ಮತ್ತು ತಾಯಿ ಗಂಗಮ್ಮ ಅವರ ಪುಣ್ಯ ಗಭ೯ದಲ್ಲಿ ಜನಿಸಿದವರೇ
ಶ್ರೀ ಗಳ ಹಿನ್ನೆಲೆ--
(1907ರ ಏಪ್ರಿಲ್ 1ರಂದು ಹೊನ್ನೆಗೌಡ --ಗಂಗಮ್ಮ ದಂಪತಿಯ, ಹದಿಮೂರನೇ ಮಗನಾಗಿ ಜನಸಿದರು.) 1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆ.
1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ. & 1930 : ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾದ ಶಿವಣ್ಣ -1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ. ಗುರುಗಳ ಪೂರ್ವಾನುಗ್ರಹ ಹಾಗೂ ಶಿವಕುಮಾರ ಸ್ವಾಮಿಗಳೆಂದು ನೂತನ ನಾಮಧೇಯ.
1941: ಜ.11ರಂದು ಶ್ರೀ ಉದ್ಧಾನಶಿವಯೋಗಿ ಸ್ವಾಮೀಜಿ ಲಿಂಗೈಕ್ಯರಾದ ನಂತರ ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.,1941ರಲ್ಲಿ ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದಾಗ ಮಠದಲ್ಲಿ ಕೇವಲ 300 ರೂಪಾಯಿ, 16 ಎಕರೆ ಖುಷ್ಕಿ ಜಮೀನುಮಾತ್ರವಿತ್ತು, ಆದರೆ ಇಂದು ಮಠದ ಸಾರ್ವಜನಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. (ಇದರಲ್ಲಿ ಶ್ರೀಗಳ ಶ್ರಮ ಅನನ್ಯ.)
ಮಠದಲ್ಲಿ --
ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆ ತಪ್ಪದೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ಇಷ್ಟಲಿಂಗ ಪೂಜೆಯನ್ನು ತಪ್ಪಸ್ಸಿನಂತೆ ಮಾಡಿಕೊಂಡು ಬರುತ್ತಿದ್ದರು.-ಇತಿ ಮಿತಿ ಆಹಾರ ಸೇವನೆ ಮೂಲಕ ಸ್ವಸ್ಥ ಆರೋಗ್ಯ ಶ್ರೀಗಳು ಕಾಪಾಡಿಕೊಂಡಿದ್ದರು.-ಪ್ರತಿನಿತ್ಯ ಚಾಚೂತಪ್ಪದೆ ಬರಿಗಣ್ಣಿನಿಂದ ದಿನಪತ್ರಿಕೆ ಓದುತ್ತಿದ್ದರು. ಪ್ರಾಪಂಚಿಕ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳುವ ಹಸಿವನ್ನು ಸಿದ್ದಗಂಗಾ ಶ್ರೀಗಳು ಹೊಂದಿದ್ದರು.
ಯಾವುದೇ ಪದವಿಗಳಿಂದ ಬದಲಾಗದ ಸಂತ ಶ್ರೇಷ್ಠ ಎಂದರೆ ಲಿಂಗೈಕ್ಯ ಶಿವಕುಮಾರ ಶ್ರೀಗಳು, ಜಾತಿ , ಮತ , ಪಂಥ ಕುಲವೆನ್ನದೇ ಸವ೯ರನ್ನೂ ಪ್ರೀತಿಸುವ ಮಠವೆಂದರೆ ಕನ್ನಡ ನಾಡಿನಲ್ಲಿ ಅನೇಕ ಮಠಮಾನ್ಯಗಳಿವೆ ಅಂತಹ ಮಠಗಳಲ್ಲಿತುಮಕೂರಿನ ಸಿದ್ದಗಂಗಾ ಸಂಸ್ಥಾನ ಮಠವು ಒಂದು. ಪ್ರತಿದಿನ ನಿತ್ಯ ತಾವು ಮಾಡುವ ಕಾಯಕದಲ್ಲಿ ಭಗವಂತನನ್ನು ಕಾಣುವರು. ಉನ್ನತ ವಿದ್ಯಾಭ್ಯಾಸಕ್ಕಿಂತ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಆದತ್ಯೆ ನೀಡಿ ಬಡ , ಮಧ್ಯಮ , ವಗ೯ದಸಾವಿರಾರು ವಿದ್ಯಾಥಿ೯ಗಳಿಗೆ ಅನ್ನ ದಾಸೋಹ ವಿದ್ಯೆಯನ್ನು ನೀಡಿದ್ದಾರೆ. ಸಾಗರದಂತೆ ಬದುಕಿನುಕ್ಕೂ ಅಪಾರವಾದ ಜ್ಞಾನವನ್ನು ಹೊಂದಿದವರು. ಸಮಾಜದಲ್ಲಿ ಸಕಲರನ್ನು ಸ್ವಾತಿಕ ಬದುಕಿನ ಬೆಳಕಿಗೆ ಆಕಷಿ೯ಸುತ್ತಿರುವ ಯೋಗಿ ಎಂದರೆ ಲಿಂಗೈಕ್ಯಶಿವಕುಮಾರ ಶಿವಯೋಗಿಗಳು. ದಣಿವರಿಯದ ಸಮಾಜಮುಖಿ ಚೇತನ. ಲಕ್ಷಾಂತರ ಭಕ್ತರಿಗೆ ವಿದ್ಯಾಥಿ೯ಗಳಿಗೆ, ಬಾಳಿನ ಬೆಳಕಾಗಿದ್ದಾರೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ಸಿದ್ಧಾಂತಗಳನ್ನು ಮರೆಯದೆ ಅದನ್ನು ಬದುಕಿನಲ್ಲಿಅಳವಡಿಸಿಕೊಂಡ ಪೂಜ್ಯ ಶ್ರೀ. ಶಿವಕುಮಾರ ಸ್ವಾಮಿಜಿಗಳು ಕಾಯಕ ಮತ್ತು ದಾಸೋಹ ತತ್ವಗಳ ಮರೆಯದೆ ಮುನ್ನಡೆಸಿಕೊಂಡ …ಜಗತ್ತೀಗೆ ಸಾಕ್ಷಿಯಾದರು. ಇದು ಯಾರ ಆಶೀರ್ವಾದದಿಂದ, ಮಂತ್ರ ಶಕ್ತಿಯಿಂದ ಆದುದಲ್ಲ. ಯಾವ ವೇದ ಶಾಸ್ತ್ರಆಗಮಗಳ ಬಲದಿಂದಲ್ಲ. ತನ್ನಂತರಾತ್ಮದಿಂದ ಬಂದ ಬಸವ ವಾಣಿಯಿಂದ ಇದೆಲ್ಲ ಸಾಧ್ಯವಾಯಿತು.
ಬಸವಣ್ಣನವರ ಆಶಯದಂತೆ ಜೀವನ ಸಾಗಿಸಿದ ಶ್ರೀ ಗಳು, ಬಸವಣ್ಣನವರ ಒಂದು ವಚನದಲ್ಲಿ ಹೀಗೆ ತಿಳಿಸಿದ್ದಾರೆ...
“ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ಹೋದಿರೇ ನೀವು, ಕುಂಕುಮ ಕಸ್ತೂರಿಯ ಹೂಸಿಕೊಂಡು ,ಹೋದಿರೇ ಅಣ್ಣಾ ! ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ ! ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ ಕೂಡಲಸಂಗಮದೇವನರಿಯದೆ.ನರಕಕ್ಕೆ ಭಾಜನವಾದಿರಲ್ಲಾ” !
ಎಂಬ ವಚನದ ಸಾಲಿನಂತೆ ಬಹಳಷ್ಟು ಜನ ಗುರು ಪರಂಪರೆಯವರು, ಸನಾತನವಾದಿಗಳು ಸತ್ಯವನರಿಯದೆ ಅಹಂಕಾರವೆಂಬ ಸದಮದ ಗಜವೇರಿ ಹೋಗಿದ್ದಾರೆ. ಇನ್ನೂ ಹಲವರು ಆ ಆನೆ ಕುದುರೆ ಒಂಟೆ, ಹೆಚ್ಚಾಗಿ ಅಡ್ಡಾ- ಉದ್ದಾ ಪಲ್ಲಕ್ಕಿಯಲ್ಲಿ ಏರಿಕೊಂಡು ಹೋಗುತೀದ್ದಾರೆ. ಈ ಮಹಾಶಯರು ಸತ್ಯವನ್ನು ತಿಳಿಯುವ ಪ್ರಯತ್ನ ಮಾಡದೇ, ಇವರಿಂದ ಸತ್ಯವ ಬಿತ್ತಿ ಬೆಳೆಯಲು ಸಾಧ್ಯವೆ ? ಇಂತಹ ಸ್ವಾರ್ಥ ಸಾಧಿಸುವ ವ್ಯಕ್ತಿ ಗಳಿಂದ.. ಯಾವ ಸತ್ಯ ನೀರಿಕ್ಷೇ ಮಾಡಲು ಸಾಧ್ಯ....ಅನ್ನುವ ಬಸವಣ್ಣನವರ ಆಶಯ....... ಅದರಂತೆಯೇ ಸಿದ್ದಗಂಗಾ ಶ್ರೀಗಳು
ಇಂತಹ ಸತ್ಯದ ವೈಚಾರಿಕ ವಿಚಾರಗಳನ್ನು ಅವರ ಜೀವನದಲ್ಲಿ ಚಾಚ್ಚು ತಪ್ಪದೇ ಪಾಲಿಸಿಕೂಢ ಕೀರ್ತಿ ಇವರಿಗಿದೆ ಸಲ್ಲುತ್ತದೆ.
.
ಶಿಕ್ಷಣ ಕ್ಕಾಗಿ ಶ್ರೀ ಗಳ ಕೊಡುಗೆ.
1944: ತುಮಕೂರು ನಗರದಲ್ಲಿ ಸಿದ್ದಗಂಗಾ ಪ್ರೌಢ ಶಾಲೆ ಆರಂಭ.,1956 : ಸಿದ್ದಗಂಗಾ ಉಪಧ್ಯಾಯ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪನೆ.-1960 : ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.-1962 : ಶ್ರೀ ಸಿದ್ಧಗಂಗಾವಿದ್ಯಾಸಂಸ್ಥೆಯ ಸ್ಥಾಪನೆ.,1963 : ಜಾತ್ರೆಯಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜು
ಸ್ಥಾಪನೆ & ತುಮಕೂರಿನಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭ.,
1966ತುಮಕೂರಿನಲ್ಲಿ ಸಿದ್ದಗಂಗಾ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು ಸ್ಥಾಪನೆ.,
1972: ಮೇ.28 ಉಚಿತ ವಿದ್ಯಾರ್ಥಿ ನಿಲಯ.,1982: ಶ್ರೀಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ. with 1982 ಕುಣಿಗಲ್ ನಲ್ಲಿ ಕರ್ನಾಟಕ ನವಚೈತನ್ಯ ಎಂಬ ಅಂಧಮಕ್ಕಳ ಶಾಲೆಯನ್ನು ಶ್ರೀಗಳು ತೆರೆದಿದ್ದರು., ದಿನಂಪ್ರತಿ 10 ಸಾವಿರ ವಿದ್ಯಾರ್ಥಿಗಳಿಗೆ ಮತ್ತು 3, ಸಾವಿರ ಭಕ್ತಾಧಿಗಳಿಗೆ ಅನ್ನದಾಸೋಹ.& ಇದುವರೆಗೆ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವಿಧ ದಾಸೋಹದ ಅನುಕೂಲ ಪಡೆದು ದೇಶವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.. ಹೀಗೆ ಹತ್ತು ಹಲವಾರು ಶಿಕ್ಷಣ ಸಂಸ್ಥೆಗಳು ಪ್ರಾರಂಭಿಸಿ ,ಬಡ ಮಕ್ಕಳ ಬದುಕಿನ ಆಶಾಕಿರಣರಾಗಿ..ಜಗ ಮೆಚ್ಚುವ ಕಾಯಕ ಮಾಡಿದ್ದಾರೆ.
ಶ್ರೀಗಳು ಬಸವಣ್ಣನವರ ನವರಿಗಾಗಿ....
ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ಯೇ ಸಾಗಿದ ಶ್ರೀ ಗಳು.
ಬಸವ ಜಯಂತಿ ಆಚರಣೆಯನ್ನು ಮಾಡಬೇಕೆಂಬ ಸಂಕಲ್ಪ ತೋಟ್ಟು,
1978 : ಗ್ರಾಮಾಂತರ ಬಸವಜಯಂತಿ ಯೋಜನೆ ಆರಂಭ. & 1995 : ತಮಿಳುನಾಡು ಧರ್ಮಪುರಿ ಜಿಲ್ಲೆ ಡೆಂಕಟಣ ಕೋಟೆ ತಾಲೂಕು ಮೊಳ್ಳಳ್ಳಿ ಗ್ರಾಮದಲ್ಲಿ ವಿಶ್ವ ಬಸವ ಜಯಂತಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ, ತಮಿಳುನಾಡಿನಲ್ಲಿ ಬಸವ ತತ್ತ್ವವನ್ನು ಬಿತ್ತಿ ದರು.ಅಲ್ಲದೆ ತಮಿಳುನಾಡಿನಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಸಾವಿರಾರು ಮಂದಿ ನಿರಾಶ್ರಿತರಿಗೆ ಮಠದಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು. ಇಂತಹ ಅನೇಕ ಸಾಮಾಜಿಕ ಕಾರ್ಯದ ಮುಲಕ ... ಬಸವಾದಿ ಶರಣರ ಆಶಯಗಳಂತೆ ತಮ್ಮ ನಡೆ ನುಡಿಗಳಲ್ಲಿ ಒಂದಾಗಿಸಿ, ಇಂದಿನ ಸ್ವಾಮಿ ಜೀಗಳಿಗೆ ಮತ್ತು ಬಸವ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.
ಉತ್ತರ ರಾಧಿಕಾರಿ ನೇಮಕ.....
ಶ್ರೀಗಳ ನೆಚ್ಚಿನ ಶಿಷ್ಯ ಹಾಗೂ ನಾಡಿಗಾಗಿ, ಸಾಮಾಜಕಾಗಿ ದುಡಿಯುವ ಮನಸ್ಸುಳ್ಳ ಮೇಧಾವಿ ಪುರುಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು 1988 : ಮಾ.30 ಉತ್ತರಾಧಿಕಾರಿಯಾಗಿ ಶ್ರೀ ಸಿದ್ಧಲಿಂಗಸ್ವಾಮೀಜಿ ನೇಮಕ. ಹಾಗೂ 2011 : ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಶ್ರೀಮಠದ ಅಧ್ಯಕ್ಷ ಪದವಿಯ ಸಂಪೊರ್ಣವಾಗಿ ವರ್ಗಾವಣೆ ಮಾಡಿದರು.
ಶ್ರೀ ಗಳ ಸಾಮಾಜ ಮುಖಿ ಕಾಯಕ...
1995: ಫೆ.2 ಸಿದ್ದಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.,2009 : ಕೃಷಿ ಸಮಾವೇಶ ಹಾಗೂ ಮಹಿಳಾ ಸಮಾವೇಶ., 2017: ಸಿದ್ದಗಂಗಾ ಆಸ್ಪತ್ರೆ ಆರಂಭ... ಇತ್ಯಾದಿ ಹಲವಾರು ಸಂಸ್ಥೆಗಳು ಪ್ರಾರಂಭಿಸಿ, ಬಡವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ ಸಂತ ಇವರು.
ಶ್ರೀ ಗಳಿಗೆ ಸಂಧ ಪ್ರಶಸ್ತಿಗಳು...
1965: ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ .,2007 : ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ. ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ & ) 2010: ಶ್ರೀಗಳಿಗೆ ಬಸವಶ್ರೀ ಪುರಸ್ಕಾರದ ಗೌರವ., 2013 :ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.& 2015: ಜುಲೈನಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ.,
2017. : ಕರ್ನಾಟಕ ಸರ್ಕಾರದ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ.. ಇನ್ನು ಹತ್ತು ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಶ್ರೀ ಗಳು ಗೋವುಗಳ ಸಂರಕ್ಷಣೆ ಕಾಯಕ...
ತುಮಕೂರು ನಲ್ಲಿ ನಡೆಯುವ ಪ್ರತಿ ವರ್ಷ ಜಾನುವಾರು ಜಾತ್ರೆಯಲ್ಲಿ ವಿಶೇಷ ಗೋವುಗಳಿಗೆ ಬಹುಮಾನ ಘೋಷಣೆ ಪರಿಪಾಠ. ಗರಿಷ್ಟ 5 ಲಕ್ಷ ರೂ.ವರೆಗೆ ಬಹುಮಾನ ನೀಡುತ್ತೀದರು. ಜಾನುವಾರುಗಳ ಮೇಲೆ ಶ್ರೀಗಳಿಗೆ ವಿಶೇಷವಾದ ಮಮತೆ.ಮಠದಲ್ಲಿ ಸಾವಿರಾರು ಜಾನುವಾರುಗಳಿದ್ದು, ಇವುಗಳು ನೀಡುವ ಹಾಲನ್ನು ಮಠದ ಮಕ್ಕಳಿಗೆ ಬಳಕೆ ಮಾಡಲಾಗುತ್ತದೆ.- ವಿಶಿಷ್ಟವಾಗಿ ಗೋ ಸಗಣಿಯಿಂದ ವಿಭೂತಿ ತಯಾರಿಸುವ ಕೇಂದ್ರವನ್ನು ಶ್ರೀಗಳು ಪ್ರಾರಂಭಿಸಿದ್ದರು.
ರಾಜಕೀಯ ಪಕ್ಷಗಳ ನಿಲುವು, ಆಡಳಿತ ನಿರ್ವಹಣೆ ಮತ್ತು ಮಂತ್ರಿ ಮಂಡಲದ ರಚನೆಯಂಥ ಪ್ರಮುಖ ವಿಷಯಗಳಲ್ಲಿ ರಾಜ್ಯದ ಅನೇಕ ಸ್ವಾಮೀಜಿಗಳು ಪ್ರಭಾವ ಬೀರಿರುವ ಮತ್ತು ಬೀರುತ್ತಿರುವ ಈ ಹೊತ್ತಿನಲ್ಲಿ ಯಾವ ಬಣವನ್ನೂ ಪ್ರತಿನಿಧಿಸದೇ ಮತ್ತು ಯಾವ ನಿರ್ದಿಷ್ಟ ರಾಜಕೀಯ ಪಕ್ಷವನ್ನೂ ಬೆಂಬಲಿಸದೇ ಜನರ ಸ್ವಾಮೀಜಿಯಾಗಿ ಉಳಿದವರು ಸಿದ್ದಗಂಗಾ ಶ್ರೀಗಳು. ಅವರು ಆಡುವ ಭಾಷೆಯಲ್ಲಿ ರಾಜಕೀಯ ಇರಲಿಲ್ಲ. ದ್ವೇಷ, ಮತ್ಸರ, ವ್ಯಂಗ್ಯ, ಕುಹಕ ಇತ್ಯಾದಿ, ಇತ್ಯಾದಿ ಇವತ್ತು ಢಾಳಾಗಿ ಕಾಣುವ ದುರ್ಗುಣಗಳಿರಲಿಲ್ಲ. ಸಂತೆಯ ನಡುವೆಯಿದ್ದೂ ಮೌನವನ್ನು ಆಸ್ವಾದಿಸಿದವರು ಅವರು. ಹೊಟ್ಟೆಯ ಹಸಿವು ಮತ್ತು ಮೆದುಳಿನ ಹಸಿವು- ಇವೆರಡಕ್ಕೂ ಏಕಪ್ರಕಾರ ಪರಿಹಾರವಾಗಿ ಮೂಡಿಬಂದವರು. ಸಮಾಜವನ್ನು - ವಿಭಜಿಸುವುದೇ ಧರ್ಮಸೇವೆ ಎಂದು ನಂಬುವಂಥ ಸ್ಥಿತಿಯಿರುವ ಮತ್ತು ಅದಕ್ಕೆ ಪೂರಕವಾಗಿ ಮಾತು- ಕೃತಿಗಳು ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಸಿದ್ದಗಂಗಾ ಶ್ರೀಗಳು ಇದಕ್ಕೆ ಅಪವಾದದಂತೆ ಬದುಕಿದರು. ಅವರು ಜನರನ್ನು ಬರಿಯ ಜನರಂತೆಯೇ ಕಂಡರು.. "ಮಕ್ಕಳಎದುರಿಗೆ ಕಾಣುವ ದೇವರನ್ನು ಬಿಟ್ಟು ಕಾಣದ ದೇವರನ್ನು ಹುಡುಕಿಕೊಂಡು ಎಲ್ಲಿ ಹೋಗಲಿ ಅಯ್ಯಾ?". ಮಕ್ಕಳಲ್ಲಿ ದೇವರು ಕಂಡ ಮಹಾನ್ ಕಾಯಕ ಯೋಗಿಗೆ ಸಾವಿರದ ಶರಣು.
--ಸಂಗಮೇಶ ಜವಾದಿ ಕೊಡಂಬಲ ಬೀದರ್
ಯುವ ಸಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತ
೦೦೦೦೦೦೦೦೦೦೦೦೦೦೦
41.
ದರಿದ್ರ ನಾರಾಯಣ ದೇವೋ ಭವ ಎಂದರಂತೆ. ಅದೇ ರೀತಿಯಲ್ಲಿ ದೀನರಲ್ಲಿ ದರಿದ್ರರಲ್ಲಿ ಮಕ್ಕಳಲ್ಲಿ ದೇವರನ್ನು ಕಾಣುತ್ತಿರುವ ಶ್ರೀಗಳು ಅಕ್ಷರಶಃ ವಚನಕಾರರ ಕಾಯಕತತ್ವದ ಆದ್ಯ ಪ್ರವರ್ಥಕರು.
ಮೃಗತ್ವದಿಂದ ಮಾನವತ್ವದೆಡೆಗೆ
ಮಾನವತ್ವದಿಂದ ಮನುಷ್ಯತ್ವದೆಡೆಗೆ
ಮನುಷ್ಯತ್ವದಿಂದ ದೈವತ್ವದೆಡೆಗೆ
ದೈವತ್ವದಿಂದ ಅಮರತ್ವದೆಡೆಗೆ
ಸಾಗುವುದೇ ಮಾನವನ ನಿಜವಾದ ಗುರಿ.ಅದನ್ನು ನಿಜತಹ
ಸಾಧಿಸಿ ತೋರಿಸಿದ್ದಾರೆ ಸಿದ್ಧಗಂಗಾ ಶ್ರೀಗಳು.
ನೆರೆ ಕೆನ್ನೆಗೆ ತೆರೆಗಲ್ಲಕೆ, ಶರೀರ ಗೊಡು ಹೋಗದ ಮುಂ ಆ,ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ. ಕಾಲಮೇಲೆ ಕೈಯನೊರಿ ಕೋಲು ಹಿಡಿಯದ ಮುನ್ನ,ಪೂಜಿಸು ಕೂ ದಲಸಂಗಮನ ಎಂಬ ವಚನದ ಆಶಯದಂತೆ ನಾವುನೀವು ಈ ಕಾಯಕ ಯೋಗಿಯ ನಡೆನುಡಿ ಆಚಾರವಿಚಾರಗಳನ್ನು ನಮ್ಮನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಆಚರಣೆಗೆ ತರುವುದೇ ನಾವು ಅವರಿಗೆ ಸಲ್ಲಿಸಬಹುದಾದ ಬಹು ದೊಡ್ಡ ಭಕ್ತಿಯ ಸಮರ್ಪಣೆ.
ಕೆ ಎನ್ ದೇವರಾಜು
ಉಪಾಧ್ಯಕ್ಷರು. ಶ್ರೀಬಸವ ಬಳಗ,ಸಹಕಾರನಗರ
2046 ,ಸಿ ಬ್ಲಾಕ್ ಸಹಕಾರನಗರ.
ಬೆಂಗಳೂರು 92.
...............
42.
:ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ..........: ಕವಿ ಜಿ.ಎಸ್.ಶಿವರುದ್ರಪ್ಪನವರ ಈ ಸಾಲುಗಳು ನಾಗಾಲೋಟದ ಧಾವಂತದಲ್ಲಿರುವ ನಮ್ಮೆಲ್ಲರ ಯಾಂತ್ರಿಕ ಬದುಕಿಗೆ ಕನ್ನಡಿ ಹಿಡಿದಿದೆ... ಮನುಜ ಮನುಜರ ನಡುವೆ ಪ್ರೀತಿ ,ಸಹಕಾರ,ಸಹಬಾಳ್ವೆ, ಸೌಜನ್ಯ ಇಲ್ಲದ ಇವತ್ತಿನ ದಿನಮಾನದಲ್ಲಿ ನಮ್ಮ ಮಧ್ಯೆಯೇ ಒಂದು ಅಭೂತಪೂರ್ವ ಅಧಮ್ಯ ಚೇತನವೊಂದು ಆದರ್ಶದ ದೀಪ ಹಚ್ಚಿ ಆಗಿಹೋಯಿತು...
೨೦ನೇ ಶತಮಾನದಲ್ಲಿ ಭುವಿಬೆಳಗಿದ ಬೆಳ್ಳಿಗೆರೆ, ಜಗತ್ತು ಕಂಡ ಮಹಾನ್ ದಾಸೋಹಿಗಳಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನಿಜಕ್ಕೂ ನಿಜದೈವ...
ಓ ನಡೆದಾಡುವ ದೇವರೇ ನಿನ್ನ ಪಾದಾರವಿಂದಗಳ ಸ್ಪರ್ಶದಿಂದಲೇ ಕೇಡುಗಾಲದ ಕಲಿಯುಗವೂ ಉಳಿಯಿತು
ಓ ಕಾಯಕಯೋಗಿಯೇ ನಿನ್ನ ಹೃದಯಕಮಲದ ಪ್ರೀತಿ ಕಂಪಿನಿಂದಲೇ ಅದೆಷ್ಟೋ ಬಡಮಕ್ಕಳಿಗೆ ಉಸಿರಾಯಿತು..
ಓ ದಿವ್ಯಚೇತನವೇ ಸರಸ್ವತಿಯ ಸಾಕಾರರೂಪವಾದ ನೀವು ಅದೆಷ್ಟೋ ಜ್ಞಾನದಾಹಿಗಳಿಗೆ ಅಕ್ಷರಧಾರೆಯೆರೆದಿರಿ....
ಓ ಭೂಮಂಡಲದ ಆರದ ದೀಪವೇ ಹಚ್ಚಿದ ಒಲೆ ಆರದಂತೆ ಅನ್ನದಾಸೋಹ ಕೈಗೊಂಡ ಪರಂಜ್ಯೋತಿ ನೀವು...
ಓ ಅಧಮ್ಯಶಕ್ತಿಯೇ ಅನಾಥರಿಗೆ,ದೀನರಿಗೆ ಬಂಧುವಾಗಿ ಆಶ್ರಯ ನೀಡಿ ಮಾತೃಸ್ವರೂಪಿಯಾದಿರಿ.....
ಕರುನಾಡು ಕಂಡ, ಹಿಂದೆಂದೂ ಕಂಡು ಕೇಳರಿಯದ ಕಲಿಯುಗದಲ್ಲಿ ದೈವವಾದ, ನಮ್ಮ ನಿಮ್ಮೆಲ್ಲರಿಗೂನಡೆದಾಡುವ ದೇವರು ಎನಿಸಿದ ಮುಗಿಲಮಲ್ಲಿಗೆಯ ಒಲವಕಿರಣಕ್ಕೆ....ನ ಭೂತೋ ನ ಭವಿಷ್ಯತ್ ಎಂಬಂತೆ ಇತಿಹಾಸ ಬರೆದ ತ್ರಿವಿಧದಾಸೋಹಿಯ ಪಾದಪುಷ್ಪಗಳಿಗೆ ನನ್ನ ನುಡಿ ನಮನ.....
*ರಶ್ಮಿ.ಬಿ.ವಿ.*
*ಶಿಕ್ಷಕರು*
*ಟಬಿ.ಜಿ.ಪುರ
ಮಳವಳ್ಳಿ ತಾಲುಕು
ಮಂಡ್ಯ ಜಿಲ್ಲೆ
.................
43.
ಸಸ್ಯ ಸೇವೆ ಶಿವಪೂಜೆಯಷ್ಟೇ ಶ್ರೇಷ್ಠ
ಕೋಟಿಗೊಬ್ಬ ಶರಣ ಸಂತನ ಹಸಿರುಪ್ರೇಮ ಅಮರ
`ಸಸಿಗಳನ್ನು ನೆಟ್ಟರೆ ಸಾಲದು ಅವುಗಳ ಪಾಲನೆ ಪೋಷಣೆ ಶಿವಪೂಜೆಯಷ್ಟೇ ನಿಷ್ಠೆಯಿಂದ ಕೂಡಿರಬೇಕು. ಬಸವಣ್ಣನವರು ಹೇಳಿದ ಹಾಗೆ ಕೃಷಿಕಾಯಕ ಶ್ರೇಷ್ಠವಾದದ್ದು ಪರಿಸರದ ಬಗ್ಗೆ ಕಾಳಜಿಯಷ್ಟೇ ಕಾರ್ಯತತ್ಪರತೆಯೂ ಮುಖ್ಯ ಹೀಗೆಂದು ತಮ್ಮೊಳಗಿನ ಕೃಷಿ ಹಾಗೂ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿ ಹಸಿರೀಕರಣದ ಸೇವೆಗೆ ನನ್ನನ್ನು ಹುರಿದುಂಬಿಸಿ ಆಶೀರ್ವದಿಸಿದವರು ಲಿಂಗೈಕ್ಯ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರಮಹಾಸ್ವಾಮೀಜಿಯವರು.
ಅಂದು ಮುಂಜಾನೆ (25.3.2014) ರಂದು ನಮ್ಮ ಕಾಯಕಯೋಗಿ ಸಂಸ್ಥೆಯ ಪರಿಸರ ಸ್ನೇಹಿ ಗೆಳೆಯರೊಂದಿಗೆ ಪುಣ್ಯಕ್ಷೇತ್ರ ಶ್ರೀಸಿದ್ದಗಂಗಾಮಠಕ್ಕೆ ತೆರಳಿ ದೊಡ್ಡಬುದ್ದಿಯವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡ ಪುಣ್ಯ ಕ್ಷಣದ ಬಳಿಕ ಪೂಜ್ಯರಿಗೆ `ಬುದ್ದಿ ತಮ್ಮ ಹೆಸರಲ್ಲಿ ಮಂಡ್ಯದ ಪ್ರವೇಶದ್ವಾರದಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ತಾವು ದಯಮಾಡಿಸಿ ಆಶೀರ್ವದಿಸಬೇಕು, ನಿಮ್ಮ ಅಮೃತ ಹಸ್ತದಲ್ಲಿ ಸಸಿಯೊಂದನ್ನು ನೆಡಿಸಬೇಕೆಂಬ ಮಹದಾಸೆ ಮಂಡ್ಯದ ಜನತೆಯದ್ದಾಗಿದೆ ಎಂದು ಹರಕೆ ಮಾಡಿ ಉದ್ಯಾನವನದ ಪೋಟೋಗಳನ್ನು ತೋರಿಸಿದಾಗ ತಮ್ಮ ಜ್ಞಾನಮೌನವನ್ನು ಮುರಿದು ತುಂಬು ಹೃದಯದಿಂದ ಆಶೀರ್ವದಿಸಿದ ಶತಮಾನದ ಸಂತ ನುಡಿದ `ಸಸ್ಯ ಸೇವೆ ಶಿವಪೂಜೆಯಷ್ಟೇ ಶ್ರೇಷ್ಠ ಎಂಬ ಮಾತು ಇನ್ನೂ ಕಿವಿಯಲ್ಲಿ ಮಾರ್ದನಿಸುತ್ತಿದೆ, ಹಸಿರಿನ ಕಾಯಕಕ್ಕೆ ಮಾರ್ಗದರ್ಶನ ನೀಡಿದೆ, ನೀಡುತ್ತಲೇ ಬರುತ್ತಿದೆ.
ಬುದ್ದಿಯವರ ಕೈಯಲ್ಲಿ ಮಂಡ್ಯದ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರಮಹಾಸ್ವಾಮೀಜಿಯವರ ಉದ್ಯಾನವನದಲ್ಲಿ ಸಸಿ ನೆಡಿಸಬೇಕೆಂಬ ನನ್ನ ಹಾಗೂ ಕಾಯಕಯೋಗಿ ಸಂಸ್ಥೆಯ ಬಂಧುಗಳೆಲ್ಲರ ಆಶಯ ಹಾಗೆಯೇ ಉಳಿದು ಹೋಗಿದೆಯಾದರೂ ಅವರ ಆಶೀರ್ವಾದ ನಮ್ಮನ್ನು ಹಸಿರು ಸೇವೆಗೆ ಅಣಿಗೊಳಿಸಿದೆ.
ಉದ್ಯಾನವನಕ್ಕೆ ತಾವು ಪಾದಾರ್ಪಣೆ ಮಾಡಬೇಕೆಂದು ಪರಿಪರಿಯಾಗಿ ಕೋರಿದ್ದಾಗ ಬುದ್ದಿಯವರಿಗೆ ನೂರಾರು ವರ್ಷಗಳು ತುಂಬಿದ್ದವು. ಮಠದಿಂದ ಯಾವ ಸಮಾರಂಭಕ್ಕೂ ಹೋಗಬಾರದೆಂಬ ಭಕ್ತರ ಆಶಯಕ್ಕೆ ಮಣಿದಿದ್ದ ಸ್ವಾಮೀಜಿಯವರು ತಮ್ಮ ಹೆಸರಲ್ಲೇ ಮಾಡಿದ್ದ ಮಂಡ್ಯದ ಸುಂದರ ಉದ್ಯಾನವನಕ್ಕೆ ಆಗಮಿಸಲಿಲ್ಲ. ಆದರೆ, ಅವರ ದಿವ್ಯಾಶೀರ್ವಾದದೊಂದಿಗೆ ನೂರಾರು ಸಸಿಗಳನ್ನು ಉದ್ಯಾನವನದಲ್ಲಿ ನೆಟ್ಟು ಇಂದಿಗೂ ಪೂಜ್ಯರ ಹೆಸರು ಸದಾ ಹಸಿರಾಗಿರುವಂತೆ ಕಾಯಕಯೋಗಿ ಸಂಸ್ಥೆ ತನ್ನ ಹಸಿರಿನ ಕಾಯಕವನ್ನು ಮುನ್ನಡೆಸಿಕೊಂಡು ಬಂದಿದೆ.
`ಕೋಟಿಗೊಬ್ಬ ಶರಣ ಶಿವಕುಮಾರಾಭರಣ' ಎಂಬ ವಿಶ್ವಗುರುವಿನ ಮಾನವಬಂಧುತ್ವದ ಸಮಾನತಾ ಸಮಾಜ ನಿರ್ಮಾಣದ ಕನಸನ್ನು ನನಸುಗೊಳಿಸುವ ಹತ್ತಾರು ಕಾರ್ಯಕ್ರಮಗಳನ್ನು ಕಾಯಕಯೋಗಿ ಸಂಸ್ಥೆ ಹಮ್ಮಿಕೊಂಡು ಪೂಜ್ಯರ ತ್ರಿವಿಧ ದಾಸೋಹದ ಮಹತ್ವ, ಸಮಾನತೆ, ಭಾತೃತ್ವ, ಬಸವಾದಿಶರಣರ ಆಶಯಗಳನ್ನು ಆಚರಣಾಕ್ರಾಂತಿಯನ್ನಾಗಿಸಲು ಪೂಜ್ಯರ ಮಾತುಗಳು ಪ್ರೇರೇಪಣೆಯಾಗಿವೆ.
ಪೂಜ್ಯ ಶ್ರೀಗಳ ಉದ್ಯಾನವನ್ನು ಸರ್ಕಾರದಿಂದ ದತ್ತು ಪಡೆದು ನಿರ್ವಹಿಸುತ್ತಿರುವ ಕಾಯಕಯೋಗಿ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಪೂಜ್ಯರ ಆಶಯಗಳನ್ನು ಅನುಷ್ಠಾನಗೊಳಿಸುವ ಕಾಯಕದಲ್ಲಿ ನಿರತವಾಗಿದೆ. ಉದ್ಯಾನವನದಲ್ಲಿ ಬುದ್ದಿಯವರ ಆಳೆತ್ತರದ ಪುತ್ಥಳಿಯೊಂದನ್ನು ನಿರ್ಮಿಸಿ ಪೂಜ್ಯರ ಶ್ರೀವಾಣಿಯನ್ನು ಉದ್ಯಾನವನದ ಸುತ್ತಾ ಅಳವಡಿಸುವ ಯೋಜನೆಯನ್ನು ಕೈಗೆತ್ತುಕೊಂಡಿದೆ.
ಅನ್ನದಾತರಿಗೆ ಆಸರೆ :
ಮಂಡ್ಯಜಿಲ್ಲೆಯ ರೈತರ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡಿದ್ದ ಪರಮಪೂಜ್ಯರು ಈ ಭಾಗದ ಯಾರೇ ಮಠಕ್ಕೆ ಹೋದರೂ ಮೊದಲು ಪ್ರಸಾದ ಮಾಡಿ ಎಂದು ಪ್ರೀತಿಯಿಂದ ಉಣಬಡಿಸುತ್ತಿದ್ದ ಸ್ವಾಮೀಜಿ `ಕನ್ನಂಬಾಡಿ ಕಟ್ಟೆ ತುಂಬಿದೆಯಾ, ಮಳೆ-ಬೆಳೆ ಹೇಗಿದೆ, ಕಬ್ಬಿಗೆ ಒಳ್ಳೆಯ ಬೆಲೆ ಸಿಗುತ್ತಿದೆಯಾ ಎಂದು ರೈತರ ಪರಿಸ್ಥಿತಿಯನ್ನು ಕೂಲಂಕುಷುವಾಗಿ ತಿಳಿದು ಜನರ ಸಮಸ್ಯೆ ಪರಿಹರಿಸಲು ಸ್ಪಂದಿಸುತ್ತಿದ್ದರು.
ಆಳುವ ಸರ್ಕಾರಗಳು ಅನ್ನದಾತನನ್ನು ನಿರ್ಲಕ್ಷಿಸಬಾರದು. ರೈತರ ಸಮಸ್ಯೆಯನ್ನು ಅರಿತು ಆಡಳಿತ ಮಾಡಬೇಕೆಂದು ರಾಜಕಾರಣಿಗಳಿಗೆ ಕಿವಿಹಿಂಡಿ ಬುದ್ದಿ ಹೇಳುತ್ತಿದ್ದ ಪರಮಪೂಜ್ಯರು ಶ್ರೀಮಠಕ್ಕೆ ಭೇಟಿ ನೀಡುವ ಮಂತ್ರಿ ಮಹೋದಯರಿಗೆ ಕೃಷಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಅನೇಕ ಪತ್ರಗಳನ್ನು ಬರೆದ ಉದಾಹರಣೆಗಳು ಸಾಕಷ್ಟಿವೆ. ಬೆಳೆದ ಬೆಳೆಗೆ ಬೆಲೆ ಇಲ್ಲವೆಂದು ತರಕಾರಿ, ಕಾಯಿಪಲ್ಯಗಳು, ಆಹಾರ ಧಾನ್ಯಗಳನ್ನು ಶ್ರೀಮಠದ ದಾಸೋಹಕ್ಕೆ ಪುಗಸಟ್ಟೆಯಾಗಿ ಕೊಡಲು ಬಂದ ನೊಂದ ರೈತರಿಗೆ ಹಣವನ್ನು ಕೊಟ್ಟು ಸಾಂತ್ವಾನ ಹೇಳುತ್ತಿದ್ದ ಪರಮಪೂಜ್ಯರ ಮನದಲ್ಲಿ ಪರೋಪಕಾರ ಮನೋಭಾವ ಸದಾ ಜಾಗೃತವಾಗಿತ್ತು.
ಸಕ್ಕರೆ ನಾಡಿನೊಂದಿಗೂ ನಂಟು :
ಮಂಡ್ಯ ಜಿಲ್ಲೆಯ ಸಾವಿರಾರು ಮಂದಿ ಮಕ್ಕಳು ಶ್ರೀಮಠದಲ್ಲಿ ಅಧ್ಯಯನ ಮಾಡಿ ಬದುಕು ಕಂಡುಕೊಂಡಿದ್ದಾರೆ.
ಸಕ್ಕರೆ ಜಿಲ್ಲೆಯ ಬಗ್ಗೆ ಅಕ್ಕರೆ ಹೊಂದಿದ್ದ ಪರಮಪೂಜ್ಯರು ಮಠದ ವತಿಯಿಂದ ನಡೆಯುವ ಶ್ರೀಜಗಜ್ಯೋತಿ ಬಸವೇಶ್ವರ ನಾಟಕವನ್ನು ಕೆ.ಆರ್.ಪೇಟೆ, ಮಳವಳ್ಳಿ, ಪಾಂಡವಪುರ, ಮಂಡ್ಯ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರದರ್ಶಿಸಿ ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯ, ದಾಸೋಹದ ಅರಿವು ಮೂಡಿಸಿ ಬಸವಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.
ಕಳೆದ ಅರವತ್ತು ವರ್ಷಗಳಿಂದಲೂ ಮಂಡ್ಯಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಸಂಚರಿಸಿ ಧಾರ್ಮಿಕ ಜಾಗೃತಿ ಮೂಡಿಸಿದ್ದ ಶ್ರೀಗಳ ಸೇವೆ ಅವಿಸ್ಮರಣೀಯವಾದದ್ದು. ಈ ಜಿಲ್ಲೆಯ ಶಿಕ್ಷಣದ ಅವಕಾಶವಂಚಿತರಿಗೆ ತಾವೇ ಶ್ರೀಮಠದಲ್ಲಿ ಆಸರೆ ನೀಡಿ ಸನ್ಮಾರ್ಗದ ಬದುಕು ರೂಪಿಸಿದ್ದಾರೆ. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಬೆಂಗಳೂರು ವಿ.ವಿ.ವಿಶ್ರಾಂತ ಕುಲಪತಿ ಪ್ರೊ.ತಿಮ್ಮೇಗೌಡ ಸೇರಿದಂತೆ ಅನೇಕ ಗಣ್ಯರು ಶ್ರೀಮಠದ ವಿದ್ಯಾರ್ಥಿಗಳು.
3.2.1952ರ ಭಾನುವಾರ ಮಂಡ್ಯದಲ್ಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಬೃಹತ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಮಪೂಜ್ಯರು ಅಪಾರ ಭಕ್ತಸಮೂಹವನ್ನು ಅಂದೇ ಸಂಪಾದಿಸಿದ್ದರು. 13.2.1954ರ ಶನಿವಾರ ಮಂಡ್ಯ ಜಿಲ್ಲಾ ಹೇಮಗಿರಿ ಜಾತ್ರೆಯಲ್ಲಿ ನಡೆದ ಹಿಂದೂ ಸಂಸ್ಕøತಿಯ ಉತ್ಸವದಲ್ಲಿ ಸರ್ವರೂ ಸಮಾನರು ದೇವನೊಬ್ಬ ನಾಮ ಹಲವು ಎಂಬ ಸಮಾನತೆಯ ತತ್ವವನ್ನು ಬೋದಿಸುವ ಮೂಲಕ ಎಲ್ಲರನ್ನೂ ಪ್ರೀತಿಸಿ-ಬೆಳೆಸಿ-ಬೆಳೆಯುವ ಭಾವವನ್ನು ಮೂಡಿಸಿದ್ದರು.
ಗುರುಗಳಿಗೆ ಶರಣುಸಮರ್ಪಣೆ :
ಪರಮಪೂಜ್ಯರು ನೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ 16.1.2011ರಲ್ಲಿ ಮಂಡ್ಯದ ಬಾಲಭವನದಲ್ಲಿ ಮಾಜಿ ಸಂಸದ ಜಿ.ಮಾದೇಗೌಡರ ಅಧ್ಯಕ್ಷತೆ ಹಾಗೂ ಕಾಯಕಯೋಗಿ ಸಂಸ್ಥೆ ಅಧ್ಯಕ್ಷ ಎಂ.ಶಿವಕುಮಾರ್ ಸಾರಥ್ಯದಲ್ಲಿ ನಡೆದ ಐತಿಹಾಸಿಕ ಬೃಹತ್ `ಗುರುವಂದನಾ ಸಮಾರಂಭ ಅವಿಸ್ಮರಣೀಯ.
ಪರಮಪೂಜ್ಯ ಸಿದ್ದಗಂಗಾಶ್ರೀಗಳು ಹಾಗೂ ಶ್ರೀಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥಸ್ವಾಮೀಜಿಯವರಿಗೆ ಸಹಸ್ರಾರು ಮಂದಿ ಭಕ್ತರ ಸಮ್ಮುಖದಲ್ಲಿ ಮಾಡಿದ `ಶರಣುಸಮರ್ಪಣೆ ಅವರ್ಣನೀಯ.
ಈ ನಾಡಿಗೆ ಅಪೂರ್ವ ಸೇವೆಗೈದ ಸಿದ್ದಗಂಗಾಶ್ರೀ-ಚುಂಚಶ್ರೀಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸಿ ಶರಣುಸಮರ್ಪಿಸಿದ ಭಕ್ತಿಭಾವದ ಸ್ಮರಣೆ ಇಂದಿಗೂ ಅವಿಸ್ಮರಣೀಯವಾಗಿ ಉಳಿದಿದೆ. ನಗರಸಭೆಯ ಮಾಜಿ ಅಧ್ಯಕ್ಷ ದಿವಂಗತ ಹೊಸಹಳ್ಳಿ ಬೋರೇಗೌಡರ ಆಶಯದಂತೆ ಸಿದ್ದಗಂಗಾಶ್ರೀಗಳು ಕಾರಸವಾಡಿರಸ್ತೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತವನ್ನು ಸಹ ಇದೇ ಸಂದರ್ಭದಲ್ಲಿ ಉದ್ಘಾಟನೆ ಮಾಡಿ ನಗರಸಭೆಯಿಂದ ನಾಗರೀಕ ಸನ್ಮಾನವನ್ನು ಸ್ವೀಕರಿಸಿ ಆಶೀರ್ವದಿಸಿದ್ದರು.
ಎಂ.ಶಿವಕುಮಾರ್, ಪತ್ರಕರ್ತರು
ಅಧ್ಯಕ್ಷರು : ಕಾಯಕಯೋಗಿ ಸಮೂಹ ಸಂಸ್ಥೆ, ಮಂಡ್ಯ.
......................
44.
ಸದ್ದುಗದ್ದಲವಿಲ್ಲದೆ ಗದ್ದುಗೆ ಏರಿದ ಸಾದನೆಗೆ ಭಾರತ ರತ್ನ ಪ್ರಶಸ್ತಿ ಕೋರಿ
1908 ಎಪ್ರಿಲ್ 1 ರoದು ಮಾಗಡಿ ತಾ|| ವೀರಪುರದಲ್ಲಿ ಜನಿಸಿ ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಯು 13ನೇ ಕಿರಿಯ ಪುತ್ರರಾದ ಶಿವಕುಮಾರಸ್ವಾಮಿ ಯವರು ಕಿರಿಯ ವಯಸಿನಲ್ಲಿ
ತಮ್ಮ ತಾಯಿ ಕಳೆದುಕೊoಡು ಸ್ವಾರ್ಥರಹಿತ ಸೇವೆ ಮಾಡುತ್ತಿರುವ ಪ್ರಪoಚದಲ್ಲೆ ಅoಸಖ್ಯಾತ ಭಕ್ತಾದಿಗಳ್ಳನ್ನು ಹೊoದಿರುವ
ಬಸವತತ್ವ ಮತ್ತು ಆದರ್ಶ್ ಗಳನ್ನು ಒಳಗೊoಡತ್ತೆ ಹಜೇಹಾಕಿ ಬಸವಾದಿ ಸೇವಯ ಮಾನವಿಯ ಗುಣಗಳನ್ನು ಅಳವಡಿಸಿಕೊoಡ ಬಾಲ್ಯ ಜೀವನಗಳ 10.000 ಸಾವಿರ ವಿದ್ಯಾರ್ಥಿಗಳಿಗೆ ತ್ರಿವಿಧ ಅನ್ನ, ಅಕ್ಷರ, ಜ್ಞಾನ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು. ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು
ಸೇವೆಯೊಂದೆ ಪರಮ ಕೆಲಸ ವಾಗಿ ಮಾಡಿದ ಮಹಾನ್ ಸಾದನೆ ಮತ್ತು ಈ ವಿಶ್ವಚೇತನಿಗೆ .22ನೇ ಶತಮಾನದ ಯುಗಪುರುಷನಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆನ್ನುವುದು ನಮ್ಮ ಒತ್ತಾಯ.
ನಿಜಗುಣ
ಬಿದರಹಳ್ಳಿ ಕಸಬ ಹೋಬಳಿ
ಶ್ರೀ ರಂಗ ಪಟ್ಟಣ ತಾ"
ಮಂಡ್ಯ ಜಿಲ್ಲೆ ೫೭೧೪೧೫
.............
45.
🙏ಶರಣರಿಗೆ ಶರಣು 🙏 ಶರಣಾರ್ಥಿ 🙏
ಹೇ ಗುರುವೆ. ಅನ್ನ ಅನ್ನ ಕೋಟ್ಟರೆ ಅರುಗುವವರೆಗೆ. ಆಸ್ತಿ ಕೋಟ್ಟರೆ ಕರುಗುವವರೆಗೆ. ನೀವು ನಿಡಿದ ಮಹಾ ವಿದ್ಯಾ ಈ ಜೀವವಿರುವರೆ ಓ ನನ್ನ ಶ್ರೀ ಸಿದ್ಧಗಂಗಾ ಪ್ರಭುವೆ. ಪರಮ ಪೂಜ್ಯ ಡಾ// ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಬೇಗನೆ ಭಾರತ ರತ್ನ ಪ್ರಶಸ್ತಿ ಸಿಗಲೆಂದು ಮತ್ತು ಶ್ರೀಗಳ ಹೆಸರಲ್ಲಿ ವಿಶ್ವ ರತ್ನ ಶ್ರೀ ಸಿದ್ಧಗಂಗಾ ದಾಸೋಹ ಮಹಾ ಮನೆ ಎಂಬುವುದು ಮತ್ತು ಪ್ರತಿಯೊಂದು ಪಡಿತರ ಚೀಟಿಯ ಮೇಲೆ ಶ್ರೀ ಗಳ ದಾಸೋಹ ಕಾರ್ಯ ನಡೆಸುತ್ತಿರುವ ಭಾವಚಿತ್ರ ಈ ದೇಶದ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಉಚಿತ ಪ್ರಸಾದನಿಲಯ ಎಂಬುದು ಜಾರಿಯಾಗುವಂತೆ ತೆಗಿಯಬೆಕೆಂದು. ಈ ಶ್ರೀ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಮತ್ತು ಹಿತಹಿಷಿಗಳವರೇಲ್ಲಿಯೂ ಮತ್ತು ಬೀದರ್ ಜಿಲ್ಲೆಯ ಮತ್ತು ಭಾಲ್ಕಿ ತಾಲ್ಲೂಕಿನಲ್ಲಿರುವ ವಿದ್ಯಾರ್ಥಿ ಮತ್ತು ಹಿತಹಿಷಿಗಳವರಲ್ಲಿ ಮತ್ತು ದೇಶದ ಮತ್ತು ರಾಜ್ಯದ ಜನಾಭಾಂಧವರಲ್ಲಿ ನಿಮ್ಮಲ್ಲಿ ಪರಿಚಯವಿರುವವರೆಲ್ಲರಿಗೂ ಮತ್ತು ಎಲ್ಲಾ ಬಂದು ಭಾಂಧವರಲ್ಲಿಯೂ ವಿನಂತಿಸಿಕೋಳ್ಳುವುದೇನೆಂದರೆ ದೂರದರ್ಶನ ಮತ್ತು ಮಾಧ್ಯಮ ವರ್ಗದವರಲಿಯೂ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದವರು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಆಲಸ್ಯ ಮಾಡಿರುವುದರ ಬಗ್ಗೆಗೆ ಈ ಮೇಲಿನ ಮೂರು (ತ್ರಿವಿಧ ಕಾಯಕ ಸೇವಾ) ಕಾರ್ಯಗಳು ಜಾರಿಯಾಗುವಂತೆಯು ಮಾಡಬೇಕು. ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ. ಘೋಷಣೆ ಮಾಡಲೆಬೆಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯದಾದ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆ, ರಾಲ್ಯಿಯನ್ನು ಮಾಡಬೇಕಾಗುತ್ತದೆ. ಸರ್ಕಾರ ಇನ್ನೂ ಇದರ ಬಗ್ಗೆ ಯೋಚನೆ ಮಾಡಬಾರದು. ಹೇ ಗುರುವೆ. ಅನ್ನ ಅನ್ನ ಕೋಟ್ಟರೆ ಅರುಗುವವರೆಗೆ. ಆಸ್ತಿ ಕೋಟ್ಟರೆ ಕರುಗುವವರೆಗೆ. ನೀವು ನಿಡಿದ ಮಹಾ ವಿದ್ಯಾ ಈ ಜೀವವಿರುವರಗೆ ಓ ನನ್ನ ಶ್ರೀ ಸಿದ್ಧಗಂಗಾ ಪ್ರಭುವೆ. ಪರಮ ಪೂಜ್ಯ ಡಾ// ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರಲ್ಲಿ ವಿಶ್ವ ರತ್ನ ಪ್ರಶಸ್ತಿ ಪದವಿ ಮತ್ತು ಪ್ರತಿಯೊಂದು ಪಡಿತರ ಚೀಟಿಯ ಮೇಲೆ ಶ್ರೀ ಗಳ ದಾಸೋಹ ಕಾರ್ಯ ನಡೆಸುತ್ತಿರುವ ಭಾವಚಿತ್ರವಿರುವುದನ್ನು ಮತ್ತು ಶ್ರೀ ಸಿದ್ಧಗಂಗಾ ದಾಸೋಹ ಮಹಾ ಮನೆ ಮತ್ತು ಜಾರಿಗೆ ಬೆಗನೆ ತರಲೆಂದು ಹೃದಯಪೂರ್ವಕದಿಂದ ಕೇಳಿಕೋಳ್ಳುತ್ತೆನೆ.
ರೇವಪ್ಪಯ್ಯಾ ಸ್ವಾಮಿ
ಬೀದರ ಜಿಲ್ಲೆಯ ಹಳೇಯ ವಿದ್ಯಾರ್ಥಿ
46.
*ನಾ ಕಂಡ ಸಿದ್ದಗಂಗೆಯ ಕರ್ಮಯೋಗಿ*
(ಮರ ಕಡಿದಿದ್ದಕ್ಕೆ ಪ್ರಸಾದ ತ್ಯಜಿಸಿದ ಶ್ರೀಗಳು)
ಅದು ತೊಂಬತ್ತರ ದಶಕ ನಾವು ವಿದ್ಯಾರ್ಥಿಗಳೆಲ್ಲರೂ ರಾತ್ರಿ ವೇಳೆಯಲ್ಲಿ ಹಳೇಮಠದ ದ್ವಾರ ಬಾಗಿಲಿನ ಎರಡು ಬದಿಗಳಲ್ಲಿ ಕುಳಿತು ಓದಬೇಕಿತ್ತು. ಇದು ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರ ಆಜ್ಞೆ. ಪ್ರತಿದಿನ ಅವರು ಬರುವ ಸಂದರ್ಭದಲ್ಲಿ ಅಂದಂದಿನ ದಿನಚರಿಯ ವರದಿಯನ್ನು ಬುದ್ದಿಯವರಿಗೆ ಒಪ್ಪಿಸಬೇಕಿತ್ತು.ಅದು ಅಲ್ಲಿನ ಅಲಿಖಿತ ನಿಯಮ. ನಮ್ಮ ಓದು,ಕೆಲಸ,ಊಟ ಇದರ ಬಗ್ಗೆ ತುಂಬಾ ಕಾಳಜಿಯಿಂದ ಕೇಳುತ್ತಿದ್ದ ಅವರು ಮಾತೃ ಹೃದಯದ ಸಂತ. ಅಂದು ಮಧ್ಯ ವಾರ್ಷಿಕ ಪರೀಕ್ಷೆಯ ಅಂಕವನ್ನು ಕೇಳುತ್ತಾರೆ ಎನ್ನುವುದು ಖಾತ್ರಿಯಾಗಿ ಆಂಗ್ಲಭಾಷೆಯಲ್ಲಿ ಅನುತ್ತೀರ್ಣನಾಗಿದ್ದ ನಾನು ಆತಂಕಗೊಂಡು ಅವರು ಬಂದ ತಕ್ಷಣ ಮೌನವಾಗಿ ತಲೆ ತಗ್ಗಿಸಿ ನಿಂತಿದ್ದೆ. ಎಲ್ಲರ ಸರದಿಯ ನಂತರ ನಾನು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕೇಳಿದರು. ನನ್ನ ಬಳಿ ಬಂದವರೆ ನಿನ್ನ ಅಂಕಗಳು ಎಷ್ಟು, ಯಾವ ವಿಷಯದಲ್ಲಿ ಕಡಿಮೆ ಬಂದಿದೆ ಎಂದು ಕೇಳಿದರು. ಇಂಗ್ಲಿಷ್ ಫೇಲ್ ಬುದ್ದಿ ಒಂಬತ್ತು ಅಂಕ ಬಂದಿದೆ ಎಂದು ಯಾಂತ್ರಿಕವಾಗಿ ನನ್ನ ದೇಹ ಧೈನ್ಯತೆಯಿಂದ ಕುಬ್ಜಗೊಂಡು ಅಪರಾಧ ಭಾವನೆಯಿಂದ ಧ್ವನಿ ಹೊರಬಂತು. ನನ್ನ ಕಿವಿ ಹಿಂಡಿದ ಶ್ರೀಗಳು "ಸೋಮಾರಿ ಊಟ ಮಾಡಿ ಬರೆ ಆಟವಾಡಿ ಕಾಲ ಕಳಿತಿಯಾ" ಎಂದು ಪ್ರೀತಿಯಿಂದ ಕಾಳಜಿಯಿಂದ ಹೇಳಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ. ಆ ವರ್ಷ ಆಸಕ್ತಿಯಿಂದ, ಕಷ್ಟಪಟ್ಟು ಓದಿ ಹತ್ತನೆ ತರಗತಿಯಲ್ಲಿ ಉತ್ತಮ ಅಂಕಗಳೊಡನೆ ಪಾಸಾದೆ.
ಹೀಗೆ ಪ್ರತಿಯೊಬ್ಬರ ಮೇಲೂ ಇದೇ ಮಮತೆ ವಾತ್ಸಲ್ಯ ತೋರುತ್ತಿದ್ದ ಕರುಣಾಮೂರುತಿ ಸಿದ್ದಗಂಗೆಯ ಸಿದ್ದಿ ಪುರುಷ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಇಂದು ನಾಡಿನ ತುಂಬೆಲ್ಲಾ ಶ್ರೀಗಳ ಸೇವಾ ತತ್ಪರತೆ ಹಾಗೂ ಅವರ ಮೌಲ್ಯಯುತ ಬದುಕಿನದ್ದೆ ಮಾತು. ಧರ್ಮಾತೀತ, ಜಾತ್ಯತೀತವಾಗಿ ಅಲ್ಲದೆ ಪಕ್ಷಾತೀತವಾಗಿ ಮಿಡಿದ ಜನಮನಕ್ಕೆ ಜಗತ್ತೆ ಬೆರಗಾಗಿದೆ. ಈ ಯುಗಮಾನದ ಸಂತನಿಗೆ ನಾಡು ಮರುಗಿದೆ.ಕಂಬನಿಗೆರಗಿದೆ.
ಇಂತಹ ಮಹಾಮಹಿಮರು ಒಮ್ಮೆ ಮಧ್ಯಾಹ್ನದ ಪೂಜೆಗೆ ಹಳೇಮಠಕ್ಕೆ ದಯಮಾಡಿಸಿದ್ದರು. ಅಲ್ಲಿ ಯಾವುದೊ ಉದ್ದೇಶಕ್ಕಾಗಿ ಮಠದ ಸಿಬ್ಬಂದಿಗಳು ಒಂದು ಹಳೆಯ ನಂದಿ ಬಟ್ಟಲು ಹೂವಿನ ಮರವನ್ನು ಕಡಿದುಹಾಕಿದ್ದರು. ಬಂದು ನೋಡಿದ ಪೂಜ್ಯರು ಮರ ಇಲ್ಲದಿರುವುದು ಅವರ ಕಣ್ಣಿಗೆ ಗೋಚರಿಸಿತು. ಇಲ್ಲಿದ್ದ ಮರ ಏನಾಯ್ತು ಎಂದು ಶಿಷ್ಯರನ್ನು ಕೇಳಿದರು. 'ಕಡಿದುಹಾಕಲಾಗಿದೆ ಬುದ್ದಿ' ಎಂದು ಹೇಳಿದರು. ಗುರುಗಳಿಗೆ ತುಂಬಾ ಬೇಸರವಾಯ್ತು. ಅಸಮಧಾನದಿಂದಲೇ ಅಲ್ಲಿಂದ ತೆರಳಿ ಸ್ನಾನ ಪೂಜೆ ಮುಗಿಸಿ ಪ್ರಸಾದ ಸ್ವೀಕರಿಸದೆ ಕಛೇರಿಗೆ ತೆರಳಿದರು. ಎಲ್ಲರಿಗೂ ಆತಂಕ ಶುರುವಾಯ್ತು. ಏನು ಮಾಡುವುದು ಈಗ ಎನ್ನುವ ಗೊಂದಲಕ್ಕೆ ಎಲ್ಲರೂ ಒಳಗಾದರು. ಕಛೇರಿಗೆ ಹೋಗಿ ಎಲ್ಲರೂ ನಿವೇದಿಸಿಕೊಂಡರೂ ಬುದ್ದಿಯವರು ದಯಮಾಡಿಸಲಿಲ್ಲ. ಮತ್ತೆ ರಾತ್ರಿ ಎಂದಿನಂತೆ ಬಂದು ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಸ್ನಾನ ಪೂಜೆಗೆ ಹೊರಟರು. ಪೂಜೆ ಮುಗಿದ ನಂತರ ಪ್ರಸಾದಕ್ಕೆ ಅಣಿಗೊಳಿಸಿಕೊಂಡಿದ್ದ ಶಿಷ್ಯರು ಪ್ರಸಾದ ಬಡಿಸಲು ಸಿದ್ದರಾದರು. ಆದರೆ ಸ್ವಾಮೀಜಿ ಪ್ರಸಾದ ಸ್ವೀಕರಿಸದೆ ಪೂಜೆ ಮನೆಯಿಂದ ಹೊರಬಂದೇ ಬಿಟ್ಟರು. ಆವಾಗ ಮತ್ತಷ್ಟು ಆತಂಕಗೊಂಡ ಶಿಷ್ಯರು ಬುದ್ದಿಯವರ ಕೋಣೆಗೆ ಹೋಗಿ 'ಮರ ಕಡಿದದ್ದು ತಪ್ಪಾಯ್ತು ಬುದ್ದಿ ಇನ್ನು ಮುಂದೆ ಈ ರೀತಿಯಲ್ಲಿ ಯಾವ ಮರವನ್ನು ಕಡಿಯುವುದಿಲ್ಲ ದಯಮಾಡಿ ಪ್ರಸಾದ ಸ್ವೀಕರಿಸಿ' ಎಂದು ಕೆಲವು ಮಠಗಳ ಪೂಜ್ಯರುಗಳು ಪ್ರಾರ್ಥಿಸಿಕೊಂಡಾಗ ರಾತ್ರಿ ಹನ್ನೊಂದು ಗಂಟೆಯಲ್ಲಿ ಬಂದು ಪ್ರಸಾದ ಸ್ವೀಕರಿಸಿದ್ದು ಇಂದಿಗೂ ನನ್ನ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿದಿದೆ. ಈ ಮೂಲಕ ಬಡ ಮಕ್ಕಳನ್ನು ಪ್ರೀತಿಸುವಷ್ಟೇ ಆಸ್ಥೆಯಿಂದ ಗಿರಮರಗಳನ್ನು ಕಾಪಾಡುತ್ತಿದ್ದರು ಎನ್ನುವುದು ಅವರಿಗೆ ಪರಿಸರದ ಬಗ್ಗೆ ಇದ್ದ ಕಾಳಜಿಯನ್ನು ತೋರಿಸುತ್ತದೆ. ಮರ ಕಡಿದ ವಿಚಾರಕ್ಕೆ ತುಂಬಾ ಬೇಸರಪಟ್ಟುಕೊಂಡ ನಿಷ್ಕಾಮ ಕರ್ಮಯೋಗಿ ಅವರು. ಸಕಲ ಜೀವಾತ್ಮರಿಗೂ ಲೇಸನ್ನೆ ಬಯಸುತ್ತಿದ್ದ ಅಂತಹ ಪೂಜ್ಯರು ಭೌತಿಕವಾಗಿ ನಮ್ಮನ್ನಗಲಿದರೂ ಜನ ಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈ ಒಂದು ಘಟನೆ ಮಠದ ಮಕ್ಕಳಲ್ಲಿ, ನೌಕರರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವಂತೆ ಮಾಡಿತು. ಇಂತಹ ಆದರ್ಶ ನಡೆಕಲಿಸಿದ ನಡೆದಾಡುವ ದೇವರು ಶ್ರೀ ಶಿವಕುಮಾರ ಯತಿಗಳು.
ಅವರು ಹುಟ್ಟುತ್ತಲೇ ಸಿದ್ದರಾದವರಲ್ಲ, ಅಥವಾ ಲೀಲೆಗಾಗಿ ಅವತರಿಸಿದವರಲ್ಲ. ನಾವು ಪರಮಪೂಜ್ಯರಲ್ಲಿ ಕಾಣುವ ಶಕ್ತಿಯೆಲ್ಲಾ ತನ್ನ ಸ್ವಸಾಮರ್ಥ್ಯದಿಂದ ಸಾಧಿಸಿ ಗಳಿಸಿಕೊಂಡ ಆಧ್ಯಾತ್ಮಿಕ ತೇಜಸ್ಸಿನಿಂದ ಲಭ್ಯವಾದುದು. ತಮ್ಮನ್ನು ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿಕೊಂಡು ನಿಸ್ವಾರ್ಥ ಸೇವೆಗೈದು ದೈವತ್ವಕ್ಕೇರಿದ ಸೀಮಾಪುರುಷ. ನಮ್ಮ ಕಾಲಘಟ್ಟದಲ್ಲಿದ್ದು ಬಾಳಿ ಬದುಕಿ ಈ ಬದುಕಿನ ಮೂಲಕವೇ ಇದರಾಚೆಯ ಚಿರಂತನವಾದ ಬದುಕನ್ನು ಕಂಡುಕೊಂಡವರು. ವ್ಯಕ್ತದಲ್ಲಿಯೇ ನಿಂತು ಅವ್ಯಕ್ತದಾಚೆಯ ಅಂಚಿನಲ್ಲಿ ವ್ಯಾಪ್ತರಾದವರು. ಶುದ್ದ ಕಾಯಕದ ಮೂಲಕ ಕಾಯಕ ಯೋಗಿ ಎನಿಸಿಕೊಂಡಲ್ಲದೆ ಇಡೀ ಮಾನವ ಸಮಾಜವನ್ನೇ ತಮ್ಮ ಹಾದಿಯಲ್ಲಿ ಕೊಂಡೊಯ್ಯಲು ಹವಣಿಸಿದ ಜಗದ ಜಂಗಮ.
ನಾನು ನನ್ನದು ಎಲ್ಲವನ್ನು ಕಳಚಿಟ್ಟು ಇಹ ಪರಗಳನ್ನು ತಮ್ಮ ಕಾಯಕದ ಮೂಲಕ ತೋರ್ಪಡಿಸಿದ ಸಿದ್ದಿ ಪುರುಷ. ಶ್ರೀ ಶಿವಕುಮಾರ ಶಿವಯೋಗಿಗಳ ಭಾವ ನಿರಾಳ, ನಿಷ್ಕಾಮ, ನಿರ್ವ್ಯಾಮೋಹ, ನೀಲಾಕಾಶ.
ಪರಮ ನಿರಪೇಕ್ಷೆಯಲಿ ದಿನವೂ ಸೇವೆಗಾಗಿ ಹಂಬಲಿಸಿದ ಮನವೇ ಮತ್ತೆ ಅವತರಿಸಿ ಬಾ ಸಿದ್ದಗಂಗಾ ಗುರುವೆ..
ಸಿದ್ದಮಲ್ಲಿಕಾರ್ಜುನಸ್ವಾಮಿ.ಹೆಚ್.ಎಸ್.
ಹುಂಡೀಪುರ. ಗುಂಡ್ಲುಪೇಟೆ..
..............
47.
ಗುರು ಸಿದ್ದಲಿಂಗ ಶಿವಕುಮಾರ ಸ್ವಾಮಿಗಳು
ಗು - ಗುರಿ ಇಲ್ಲದೆ ನಾನಿದ್ದೆ
ರು - ರುದ್ರಾಕ್ಷಿಯ ಧರಿಸಿ
ಸಿ - ಸಿರಿವಂತನಾದಾಗ
ದ - ದರಿದ್ರವು ಓಡಿಹೋಗಿ
ಲಿಂ - ಲಿಂಗ ಪೂಜೆಗೆ
ಗ - ಗಮನವಿಟ್ಟು
ಶಿ - ಶಿವ ಧ್ಯಾನದಲ್ಲಿ
ವ - ವಚನ ಹಾಡುತ
ಕು - ಕುಣಿದಾಡಿ
ಮ - ಮಾದ್ದಪ್ಪನ ನೆನೆದು
ರ - ರಂಗನ ಕೊಂಡಾಡಿ
ಸ್ವಾ – ಸ್ವಾರ್ಥವ ತೊರೆದು ದಾನವ ಮಾಡಲು
ಮೀ - ಮೀನಾ-ಮೇಷ ಎಣಿಸದೆ
ಗ - ಘರ್ವವನು ಬಿಟ್ಟು
ಳು - ಬಾಳುವೆನು
ಶ್ರೀ ಶಿವಕುಮಾರ ಸ್ವಾಮಿಗಳು
ಶ್ರೀ - ಶ್ರೀಮಂತರು ಗುಣದಲಿ ನೀವು
ಶಿ - ಶಿವನ ಕೃಪೆಯಿಂದ ಶಿವನೆಡೆಗೆ ಹೋದಿರಿ
ವ - ವಯಸ್ಸು ನೂರಾಹನ್ನೊಂದು ಆದರೂ
ಕುಮಾ- ಕುಮಾರರಾಗಿಯೇ ಇದ್ದು
ರ - ರವಿಯೆಂತ್ತೆ ಬೆಳಗಿ
ಸ್ವಾ - ಸ್ವಾರ್ಥವ ಬಿಟ್ಟು
ಮೀ - ಮಿನುಗು ತಾರೆಯಾಗಿ
ಗಳು - ಗಗನವಾಗಿ ಬೆಳೆದು ಮತ್ತೆ ಬಂದು ಎಲ್ಲರ ಬೆಳಗಿಸು ಬಾ ಗುರುವೇ ..
ಮಹದೇವಸ್ವಾಮಿ . ಎಸ್ ಮೋಹನ್
...............
48.
ಸಿದ್ಧಗಂಗಾ ಶ್ರೀಗಳು
ಸಿದ್ಧಗಂಗೆಯ ಸಿದ್ಧಿಪುರುಷರು
ಸದ್ಧಿಲ್ಲದೆ ಗದ್ಧುಗೆಯ ಏರಿದವರು
ಬಡವರಿಗೆ ಬಾಳ ದೀವಿಗೆಯು
ಅನಾಥರಿಗೆ ಆತ್ಮ ಬಂಧುವು ನೀವು.
ತ್ರಿವಿಧ ದಾಸೋಹಿಯು
ಜ್ಞಾನ ಗಂಗೆ ಶರಣರ ಸಂತ
ನಿಸ್ವಾರ್ಥ ಭಾವೈಕ್ಯದ ಸಂಕೇತ ನೀವು.
ತ್ಯಾಗದ ಕಾರುಣ್ಯ ಮೂರ್ತಿಯು
ವಿಶ್ವಕ್ಕೆಲ್ಲ ಭಾರತರತ್ನವು
ಕರುನಾಡ ಕಾಯಕ ಪುತ್ರರು
ಅಧ್ಯಾತ್ಮ ದ ಬೆಳಕು ನೀವು.
ಶತಮಾನದ ಸಂತರು
ಅನ್ನ ಅಕ್ಷರ ಆಶ್ರಯದಾತರು
ಕಲಿಯುಗ ಕರ್ಮಯೋಗಿಯೂ
ನೆಡೆದಾಡುವ ವಿಶ್ವ ವಿದ್ಯಾಲಯನೀವು.
ಹರಸಿರಿ ,ನೆಡೆಸಿರಿ ನಮ್ಮನು
ನಿಮ್ಮ ಬಾಳ ದಾರಿಯಲಿ
ನೆಡೆಯುವೆವು ನಾವು
ಶರಣು ಶರನೆಂಬೆವು ನಾವು.
ಎಚ್ ,ಎಸ್ ಭವಾನಿ ಜಿ ಉಪಾಧ್ಯ
ಕುಂಜಿಬೆಟ್ಟು ,ಉಡುಪಿ.
49.
” ಶತಮಾನದ ಮೇಲೆ ೧೧ ವರ್ಷ ಕಂಡ; ೨೧ ನೆ ಶತಮಾನದ ಬಸವತತ್ವದ ಶ್ರೇಷ್ಠ ಶಿವಯೋಗಿ”
೧೨ ನೆ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ೭೭೦ ಅಮರಗಣಂಗಳಿದ್ದರು, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಬಸವನುಯಾಯಿಗಳಿದ್ದರು. ಎಲ್ಲ ಜಾತಿ, ವರ್ಗದಿಂದ ಬಂದಂತಹ ಎಲ್ಲ ಸಮುದಾಯದ ಸಾಧಕ/ಸಾಧಕಿಯರಿದ್ದರು. ಉದಾಹರಣೆಯಾಗಿ ಸಮಗಾರ, ನೇಕಾರ, ಗಾಣಿಗ, ಮಾದಾರ, ಮೇದಾರ, ಡೋಹಾರ, ಕೊರವ, ಅಂಬಿಗರು, ಹೂಗಾರ, ಮಡಿವಾಳ ಹೀಗೆ ಎಲ್ಲ ಕಾಯಕಗಳನ್ನು ಮಾಡುತ್ತಿದ್ದ ಜನರು ಕಲ್ಯಾಣಕ್ಕೆ ಬಂದರು. ಕರ್ನಾಟಕದಲ್ಲಿದ್ದವರಷ್ಟೇ ಅಲ್ಲದೆ ಹೊರ ರಾಜ್ಯ, ಹೊರ ದೇಶಗಳಿಂದಲೂ ಬಸವಕೀರ್ತಿಯ ಕೇಳಿ ಬಂದವರಿದ್ದಾರೆ. ಇಸ್ಲಾಂರೂ ಬಂದರು. ಹಾಗೆ ಸರ್ವರೂ ಕಲ್ಯಾಣದ ಅನುಭವ ಮಂಟಪಕ್ಕೆ ಬರುವ ಕಾರಣ ಬಸವಣ್ಣನವರ ಕಾರ್ಯ.
ಲೋಕರೂಢಿಯಲ್ಲಿ ಹೇಳಬೇಕಾದರೆ ಬಸವಣ್ಣನವರು ನಟುವರ ಜಾತಿಯ ಅಲ್ಲಮಪ್ರಭುದೇವರನ್ನು ಅನುಭವ ಮಂಟಪದ ಮೊದಲ ಶೂನ್ಯಪೀಠದ ಅಧ್ಯಕ್ಷರನ್ನಾಗಿ (ಜಾತಿಯನ್ನು ಹುಡುಕದೆ) ನೇಮಿಸುತ್ತಾರೆ. ಎರಡನೇ ಅಧ್ಯಕ್ಷರಾಗಿ ಚೆನ್ನಬಸವಣ್ಣನವರು, ಮೂರನೆಯವರಾಗಿ ಸಿದ್ಧರಾಮದೇವರು ಹೀಗೆ ಆ ಶೂನ್ಯಪೀಠದ ಪರಂಪರೆ ಈಗಲೂ ಮುಂದುವರೆದಿದೆ. ೧೩ ರಿಂದ ೧೫ ನೆ ಶತಮಾನದವರೆಗೂ ಎಡೆಯೋರ ಸಿದ್ಧಲಿಂಗೇಶ್ವರರು ಮುಖ್ಯವಾಗಿ ೧೦೧ ವಿರಕ್ತ (ಚರಜಂಗಮ ಮೂರ್ತಿಗಳು) ಮಠಾಧೀಶರುಗಳು ಅದೇ ಶೂನ್ಯಪೀಠದಲ್ಲಿದ್ದು ಬಸವಾದಿ ಶರಣರ ವಚನಗಳನ್ನು ಮತ್ತು ಅವರ ಸಂದೇಶಗಳನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಮಹತ್ವವಾದ ಪಾತ್ರ ವಹಿಸಿದ್ದಾರೆ. ಹಾಗೂ ಹದಿನೈದನೆಯ ಶತಮಾನವು ಹನ್ನೆರಡನೆ ಶತಮಾನದ ಮುಂದುವರೆದ ಭಾಗವೆಂದು ಹೇಳಿದರೆ ತಪ್ಪಾಗದು.
೧೦೧ ವಿರಕ್ತ ಪರಂಪರೆಯಲ್ಲಿ ಬರುವ ಗೋಸಲ ಸಿದ್ದೇಶ್ವರ ಸ್ವಾಮಿಗಳೂ ಒಬ್ಬರಾಗಿದ್ದಾರೆ. ಎಲ್ಲ ವಿರಕ್ತ ಮಠಾಧೀಶರು ಬಸವತತ್ವದ ಪ್ರಚಾರಕ್ಕಾಗಿ ೭೦೦ ಕ್ಕೂ ಹೆಚ್ಚು ಲಿಂಗಾಯತ ಮಠಗಳನ್ನು ಸ್ಥಾಪಿಸಿದರು. ಅದರಲ್ಲಿ ತುಮಕೂರಿನ ನಮ್ಮ ಸಿದ್ಧಗಂಗಾ ಮಠವೂ ಒಂದು. ಗೋಸಲ ಸಿದ್ದೇಶ್ವರ ಸ್ವಾಮಿಗಳು ಪ್ರಾರಂಭದಲ್ಲಿ ತುಮಕೂರಿಗೆ ಬಂದಾಗ ತಮ್ಮ ಶಿಷ್ಯರೊಬ್ಬರಿಗೆ ನೀರಡಿಕೆಯಾಗುತ್ತದೆಯಂತೆ ಅವಾಗ ಒಂದು ಕಲ್ಲುಬಂಡೆಯಿಂದ ನೀರನ್ನು ಉದ್ಭವಿಸಿದರೆಂಬುದು ನಂಬಿಕೆ. ಅಂದಿನಿಂದ; ತುಮಕೂರಿನಿಂದ ನಾಲ್ಕೈದು ಕಿ.ಮೀ. ದೂರವಿರುವ ಆ ಊರಿಗೆ ಸಿದ್ದಗಂಗೆ ಎಂದು ಬಂದಿರಬಹುದು.
೧೫ ನೆ ಶತಮಾನದ ಅನಂತರ ಪ್ರಭುದೇವರ ಶೂನ್ಯಪೀಠವಾದ ಸಿದ್ಧಗಂಗಾ ಮಠಕ್ಕೆ ಯಾರು ಬಂದರು, ಏನಾಯಿತೆಂಬುದು ಸರಿಯಾಗಿ ತಿಳಿದುಬಂದಿಲ್ಲ. ೧೮೬೦ ರ ನಂತರ ಮಠಕ್ಕೆ ಗುಬ್ಬಿಯಿಂದ ಆಗಮಿಸಿದ ಅಟವಿ ಸ್ವಾಮಿಗಳು ಬಂದು ದಾಸೋಹದ ಕೈಂಕರ್ಯವ ಕೈಗೊಂಡು ಈ ಮಠದಲ್ಲಿ ಹತ್ತಿಸಿದ ಒಲೆ ಯಾವತ್ತಿಗೂ ಆರದಂತೆ ಶ್ರೀ ಎಡಯೋರ ಸಿದ್ಧಲಿಂಗೇಶ್ವರರಲ್ಲಿ ಬೇಡಿಕೊಂಡರೆಂಬ ಅಭಿಪ್ರಾಯವಿದೆ. ರುದ್ರಪ್ಪ ಎಂಬಾತರು ತಮ್ಮ ಮನೆಯ ಮೇಕೆಯನ್ನು ಮಾರಿದ್ದಕ್ಕಾಗಿ ಮನೆಯವರ ಕೋಪಕ್ಕೆ ಕಾರಣವಾಗಿ, ಮನೆಬಿಟ್ಟು ಸಿದ್ಧಗಂಗೆಗೆ ಬಂದು ಅಟವಿಸ್ವಾಮಿಗಳ ಶಿಷ್ಯರಾಗಿ ಗುರುಕಾರುಣ್ಯದಿಂದ ರುದ್ರಪ್ಪನವರೇ ಉದ್ದಾನ ಸ್ವಾಮಿಗಳಾಗಿ ಬೆಳೆಯುತ್ತಾರೆ. ೧೯೦೧ ರಲ್ಲಿ ಅಟವಿ ಸ್ವಾಮಿಗಳು ಲಿಂಗೈಕ್ಯರಾಗುತ್ತಾರೆ. ಉದ್ದಾನ ಶಿವಯೋಗಿಗಳು ಕಾಯಕ ಸದ್ಭಾವಿಗಳಾಗಿ, ಶಿವಯೋಗ ಸಾಧನೆಯ ಕಳಸವಾದರು. ಇವರು ಓದಿದ್ದು ಕಡಿಮೆಯಾಗಿದ್ದರೂ ಅರಿತದ್ದು ಜಾಸ್ತಿಯಾಗಿತ್ತು.
'ಉದ್ದಾನ ಶಿವಯೋಗಿಗಳು ಸಿದ್ಧಗಂಗೆಯ ಕ್ಷೇತ್ರಾಧಿಪತಿಗಳಾಗಿದ್ದ ಸಮಯದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ಧಗಂಗಾ ಮಠದೊಂದಿಗೆ ಒಳ್ಳೆಯ ಒಡನಾಟವಿದ್ದು ಮಠಕ್ಕೆ ಭೇಟಿ ನೀಡುತ್ತಿದ್ದರು.' ಶಿವಕುಮಾರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ಶಿವಣ್ಣ ಇವರು ಹುಟ್ಟಿದ್ದು ೧೯೦೮ ಎಪ್ರಿಲ್ ೧ ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಶ್ರೀ ಹೊನ್ನೇಗೌಡ ಮತ್ತು ಗಂಗಮ್ಮನವರ ಪುಣ್ಯಗರ್ಭದಿಂದ ೧೩ ನೆ ಮಗನಾಗಿ ದೇಹ ಧರಿಸಿ ಭುವಿಗೆ ಬರುತ್ತಾರೆ. ಮನೆಯಲ್ಲಿ ಕಿರಿಯರಾಗಿದ್ದ ಶಿವಣ್ಣನೆಂದರೆ ತಂದೆ-ತಾಯಿಗಳಿಗೆ ಪಂಚಪ್ರಾಣ. ಶಿವಣ್ಣನವರು ವೀರಾಪುರದಲ್ಲಿದ್ದ ಕೂಲಿಮಠದಲ್ಲಿ ಮರಳ ಮೇಲೆ ಅಕ್ಷರ ಬರೆಯುವ ಮೂಲಕ ತಮ್ಮ ಶೈಕ್ಷಣಿಕ ಕ್ಷೇತ್ರಕ್ಕೆ ಕಾಲಿಡುತ್ತಾರೆ. ನಂತರ ನಾಗವಲ್ಲಿ ಎಂಬ ಊರಿನ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ತೇರ್ಗಡೆಯಾದಮೇಲೆ ಸಿದ್ಧಗಂಗಾ ಮಠದ ಕಿರಿಯ ಉತ್ತರಾಧಿಕಾರಿಗಳಾಗಿದ್ದ ಮರುಳಾಧ್ಯರ ಮುಖಾಂತರ ಶ್ರೀ ಉದ್ದಾನ ಶಿವಯೋಗಿಗಳ ಪರಿಚಯವಾಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಹೋದರೂ ಸಿದ್ಧಗಂಗಾ ಮಠವನ್ನು ಮರೆಯದೆ ಅದರ ಹಿತವನ್ನು ಬಯಸುತ್ತಾರೆ. ತುಮಕೂರು ಜಿಲ್ಲೆಗೆ ಪ್ಲೇಗ್ ರೋಗ ಬಂದರೂ ಕೂಡಾ ಎಂದಿನಂತೆ ಶಿವಣ್ಣನವರ ಒಡನಾಟವಿತ್ತು. ಇದ್ದಕ್ಕಿದ್ದಂತೆ ಮರುಳಾಧ್ಯರು ಲಿಂಗೈಕ್ಯವಾಗುತ್ತಾರೆ.
ಮರುಳಾಧ್ಯರ ಕ್ರಿಯಾ ಸಮಾಧಿಯ ಸಮಯದಲ್ಲಿ ಬಂದಿದ್ದ ಶಿವಣ್ಣನವರನ್ನು ನೋಡಿ ಉದ್ದಾನ ಶಿವಯೋಗಿಗಳು ಎಲ್ಲರ ಸಮ್ಮುಖದಲ್ಲಿ ಈ ಮಠದ ಉತ್ತರಾಧಿಕಾರಿಯೆಂದು ಘೋಷಿಸಿ ಶಿವಕುಮಾರ ಸ್ವಾಮಿಗಳು ಎಂದು ನಾಮಕರಣ ಮಾಡುತ್ತಾರೆ. ಅವರು ಯಾವತ್ತೂ ನಾನು ಸ್ವಾಮಿಯಾಗಬೇಕೆಂಬ ಬಯಕೆಯಿಂದಿದ್ದವರಲ್ಲ ಅವರಿಗೆ ಬಯಸದೆ ಬಂದ ಲಿಂಗಭೋಗವದು. ಶಿವಕುಮಾರ ಸ್ವಾಮಿಗಳು ಸನ್ಯಾಸವ ಸ್ವೀಕರಿಸಿದ ನಂತರವೂ ಎಂದಿನಂತೆ ತಮ್ಮ ಓದಿನಲ್ಲಿ ತೊಡಗಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾಗಿ ವಾಪಸ್ ತುಮಕೂರಿಗೆ ಬರುತ್ತಾರೆ. ಉದ್ದಾನ ಶಿವಯೋಗಿಗಳು ೧೯೧೭ ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ೧೧/೧/೧೯೪೧ ರಂದು ಲಿಂಗೈಕ್ಯರಾಗುವ ಮುನ್ನ ತಮ್ಮ ದೃಷ್ಠಿಯಿಂದ ಶಿವಕುಮಾರ ಸ್ವಾಮಿಗಳನ್ನು ನೋಡಿ ಬಯಲಿನಲ್ಲಿ ಬಯಲಾಗುತ್ತಾರೆ. ನಂತರದಲ್ಲಿ ಎಲ್ಲ ಜವಾಬ್ದಾರಿಯೂ ಶಿವಕುಮಾರ ಸ್ವಾಮಿಗಳಿಗೆ ಹಸ್ತಾಂತರವಾಗುತ್ತದೆ.
ಸಿದ್ಧಗಂಗಾ ಶ್ರೀಗಳು ಈ ಮಠಕ್ಕೆ ಬರುವುದಕ್ಕಿಂತ ಮೊದಲು ಅತೀ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳಿದ್ದರು. ಇಂದು ವಿದ್ಯಾರ್ಥಿಗಳ ಸಂಖ್ಯೆ ಹತ್ತು ಸಾವಿರಕ್ಕೇರಿದೆ. ಎಲ್ಲ ಜಾತಿ, ಧರ್ಮಗಳಿಂದ ಬಂದ ವಿದ್ಯಾರ್ಥಿಗಳಿದ್ದಾರೆ. ಹಿಂದಿನ ಶ್ರೀಗಳ ಮಾರ್ಗದರ್ಶನದಂತೆಯೇ ಸಿದ್ಧಗಂಗಾ ಶ್ರೀಗಳು ಮುನ್ನಡೆದು ಬಸವಣ್ಣನವರು ರೂಪಿಸಿದ ಕಾಯಕ-ದಾಸೋಹ ತತ್ವಗಳನ್ನು ಪಾಲಿಸಿ, ಪ್ರತಿಪಾದಿಸಿದವರು. ಅನುಭವ ಮಂಟಪದಲ್ಲಿ ಯಾವ ರೀತಿಯಾಗಿ ಸರ್ವರಿಗೂ ಸಮಾನ ಅವಕಾಶವಿತ್ತೊ ಅದೇ ರೀತಿಯಾಗಿ ಸಿದ್ಧಗಂಗೆಯ ಮಠದಲ್ಲಿ ಎಲ್ಲ ಸಮುದಾಯ ದ ಮಕ್ಕಳನ್ನು, ಮುಸಲ್ಮಾನ ಮಕ್ಕಳನ್ನೂ ನಾವು ಕಾಣಬಹುದು. ಶ್ರೀ ಗಳು ಜಾತಿ, ಮತ, ವರ್ಗ, ಕುಲ, ಲಿಂಗಭೇದಗಳನ್ನು ಮಾಡದಿರಲು ಬಸವಾದಿ ಶರಣರು ಮತ್ತು ಅವರ ವಚನಗಳು ಕಾರಣವೆನ್ನಬಹುದು.
ಸಿದ್ಧಗಂಗಾ ಮಠದಲ್ಲಿ ದಿನದಿಂದ ದಿನಕ್ಕೆ ದಾಸೋಹದ ವೆಚ್ಚ ಹೆಚ್ಚುತ್ತಾ ಹೋಯಿತು. ಆಗ ಶ್ರೀಗಳು ಇಲ್ಲಿ ದಾಸೋಹವು ಅನುಚಾನವಾಗಿ ನಡೆಯಲೆಂಬ ಸಂಕಲ್ಪದಿಂದ ನಡೆದುಕೊಂಡೇ ಹೋಗಿ ಭಕ್ತರ ಮನೆಯಿಂದ ದವಸ, ಧಾನ್ಯಗಳನ್ನು ತರುತ್ತಿದ್ದರು. ಈ ಮಠಕ್ಕಾಗಿ ಅಂದರೆ ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿದಿದ್ದಾರೆ. ಸ್ವತಃ ತಾವೇ ಒಲೆಯ ಮುಂದೆ ನಿಂತು ಕಟ್ಟಿಗೆಗಳನ್ನು ಹೊಂದಿಸಲು ಮುಂದಾಗುತ್ತಿದ್ದರು. ಶ್ರೀಗಳಿಗೆ ಬಸವಣ್ಣನವರ "ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ" ಎನ್ನುವ ಅವರ ದಾಸೋಹದಲ್ಲಿ ಅಷ್ಟೊಂದು ಶ್ರದ್ಧೆಯಿತ್ತು. ಭೂತ, ಭವಿಷತ್ತಿನ ಪರಿಸ್ಥಿತಿಗಳ ಅರಿತಿದ್ದ ಶ್ರಿಗಳು ಬಡತನದ ಬೇಗೆಯಲಿ ಬಳಲುತ್ತಿದ್ದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದರು. ನಾನು ದೇವರನ್ನು ಕಂಡಿದ್ದೇನೆ ಹೌದು! ನನ್ನ ಮಠದಲ್ಲಿರುವ ೧೦ ಸಾವಿರ ಮಕ್ಕಳೇ ನನಗೆ ದೇವರು ಎಂದು ಮಕ್ಕಳಲ್ಲಿ ದೇವರನ್ನು ಕಂಡ ಮಹಾ ಮಹಿಮರಿವರು. ಅನ್ನ, ಅರಿವು, ಆಶ್ರಯಕ್ಕೆ ಅನುಕೂಲವಾಗಿ ಬಸವತತ್ವದ ತ್ರಿವಿಧ ಪರಮ ದಾಸೋಹಿಗಳಾಗಿದ್ದರು. ಎಲ್ಲ ವಿದ್ಯಾರ್ಥಿಗಳ ಕುರಿತು; ಚೆನ್ನಾಗಿ ಓದಿರಿ, ಚೆನ್ನಾಗಿ ಊಟ ಮಾಡಿರೆಂದು ಕಾಳಜಿ ಮಾಡುತ್ತಿದ್ದರು. ಪ್ರಶಸ್ತಿ ಪದವಿಗಳನ್ನು ಬಯಸದ ನಿಸ್ವಾರ್ಥಿಗಳು. ಸದ್ದಿಲ್ಲದೆ ಸಾಧನೆ ಮಾಡಿದ ಶಿವಯೋಗಿಗಳು ನಮ್ಮ ಸಮಾಜಕ್ಕಾಗಿ ದುಡಿದವರು. ಅಂತಹ ಕಾಯಕ ಯೋಗಿಗಳಿಗೆ ಭಾರತರತ್ನವಲ್ಲ ಅವರೇ ಈ ಭಾರತಕ್ಕೆ ರತ್ನವಾಗಿದ್ದರೆಂದರೆ ತಪ್ಪಾಗದು. ಶಿವಕುಮಾರ ಸ್ವಾಮಿಗಳು ೧ ಶತಮಾನದ ಮೇಲೆ ೧೧ ವರ್ಷ ಕಂಡ, ೨೧ ನೆ ಶತಮಾನದ ಬಸವತತ್ವದ ಶ್ರೇಷ್ಠ ಶಿವಯೋಗಿಗಳಾಗಿದ್ದಾರೆ.
ಸಿದ್ಧಗಂಗಾ ಶ್ರೀಗಳು ಬಸವಣ್ಣನವರು ಕರುಣಿಸಿದ ಇಷ್ಟಲಿಂಗವನ್ನು ಯಾವುದೇ ಸ್ಥಿತಿಯಲ್ಲಿಯೂ ಬಿಡುತ್ತಿರಲಿಲ್ಲ. ಎಂಥಹ ಪರಿಸ್ಥಿರಿಯಲ್ಲಿಯೂ ವಿಭೂತಿಯನ್ನು ಮರೆತೂ ಇರುತ್ತಿರಲಿಲ್ಲ. ಅಪ್ಪಟ ಬಸವತತ್ವದ ಪರಿಪಾಲಕ, ಪ್ರತಿಪಾದಕರಾಗಿದ್ದರು. ದಿನನಿತ್ಯ ೪ ಘಂಟೆಗೆ ಎದ್ದು ಧ್ಯಾನ, ಶಿವಯೋಗವನ್ನು ಮಾಡುತ್ತಿದ್ದರು. ಅವರು ಇಚ್ಛಾಮರಣಿಗಳೆಂದರೆ ತಪ್ಪಾಗದು. ೧೧೧ ವರ್ಷಗಳ ಕಾಲ ಅವರ ಶರೀರ ಅವರ ಜೊತೆಯಾಗಿ ಯಾವುದೇ ಬೇಸರವಿಲ್ಲದೆ ಇದ್ದ ಮುಖ್ಯಕಾರಣವೆಂದರೆ; ಇಷ್ಟಲಿಂಗ. ನಿರಂತರ ಶಿವಯೋಗ ಸಾಧನೆಯಿಂದ ಆಯುಷ್ಯವೃದ್ಧಿ, ನೆನೆಪಿನಶಕ್ತಿ ಹೆಚ್ಚಾಗುವುದು, ಅಕ್ಷರಜ್ಞಾನ ಹೆಚ್ಚುವುದು. ಅದಕ್ಕಾಗಿಯೇ ಶ್ರೀಗಳ ಕಣ್ಣಿನ ದೃಷ್ಟಿಯೂ ಅಷ್ಟೊಂದು ಚೆನ್ನಾಗಿತ್ತು ಶ್ರೀಗಳು ಕನ್ನಡಕವ ಬಳಸದೆ ಪತ್ರಿಕೆಗಳನ್ನು ಓದುತ್ತಿದ್ದರು.
"ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ" ಎಂಬ ಶಿವಯೋಗಿ ಸಿದ್ಧರಾಮದೇವರ ವಚನದ ಸಾಲಿನಂತೆ ಸಿದ್ಧಾಗಂಗೆಯ ಶಿವಯೋಗಿಗಳವರು ಹೆಣ್ಣು-ಗಂಡೆಂಬ ಭೇದವ ಮಾಡಿದವರಲ್ಲ. ಒಮ್ಮೆ ಸುಷ್ಮಾರಾವ್ ಎಂವವರು ತಮ್ಮ ೧೩ ನೆ ವಯಸ್ಸಿನಲ್ಲಿ ಸಿದ್ಧಗಂಗೆಗೆ ಪ್ರವಾಸಕ್ಕೆಂದು ಹೋದಾಗ ಊಟಕ್ಕೆಂದು ಮಠದ ಆವರಣದಲ್ಲಿ ಕುಳಿತಿರುವುದನ್ನು ಕಂಡು ಶ್ರೀಗಳು ನೀವು ಹುಡಿಗಿಯರು ಯ್ಯಾಕೆ ಹೊರಗಡೆ ನಿಂತಿದ್ದೀರೆಂದು ಕೇಳಲು; ಆ ಹೆಣ್ಣು ಮಗಳು, ಇಲ್ಲ ನಾವು ಮುಟ್ಟಾಗಿರುವುದರಿಂದ ಬೇರೆಡೆ ಕೂರಲು ಹೇಳಿದರು ಅಂದರಂತೆ! ಅದಕ್ಕೆ ಶ್ರೀಗಳಿಗೆ ದುಖಃವೆನಿಸಿ ಇದೆಲ್ಲವೂ ನೈಸರ್ಗಿಕ ಪ್ರಕ್ರಿಯೆ ಇದಕ್ಕೆ ಮುಜುಗರ ಬೇಡ, ನೈಸರ್ಗಿಕ ಪ್ರಕ್ರಿಯೆಯ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಡಿ, ನಿಮ್ಮ ದೇಹ ನಿಮ್ಮ ಹೆಮ್ಮೆ ಎಂದು ಅಲ್ಲಿ ಬಂದಿದ್ದ ಹೆಣ್ಮಕ್ಕಳಿಗೂ ಎಲ್ಲರ ಜೊತೆಯಾಗಿ ಪ್ರಸಾದ ಸ್ವೀಕರಿಸಲು ಅನುಕೂಲ ಮಾಡಿದರಂತೆ.
ಇಂತಹ ಲಿಂಗಾಯತ ಪರಂಪರೆಯಲ್ಲಿ ಬಂದ ಶೂನ್ಯಪೀಠದ ಸಿದ್ಧಗಂಗಾ ಶಿವಯೋಗಿಗಳು ಲಿಂಗೈಕ್ಯರಾಗಿದ್ದು ೨೧ ಜನೆವರಿ ೨೦೧೯ ರಂದು. ಬಸವಾದಿ ಪ್ರಮಥರು ಪ್ರತಿಪಾದಿಸಿದ ”ಕಾಯಕವೇ ಕೈಲಾಸ" ವೆಂಬ ತತ್ವ, ಲಿಂಗವ್ಯಸನ, ದಾಸೋಹ ಪ್ರೇಮವು ಅವರಲ್ಲಿ ತುಂಬಿತ್ತು. ಸಕಲ ಜೀವಾತ್ಮರಿಗೂ ಲೇಸ ಬಯಸುವ ದಯಾಗುಣ, ಕರುಣೆ, ಜಾತಿ-ಮತವ ಎಣಿಸದೆ ಸರ್ವರೂ ಸಮಾನರೆಂಬ ಸಮತಾಭಾವ, ಹಸಿದವನಿಗೆ ಅನ್ನ ನೀಡುವುದು ಧರ್ಮವೆಂದು ಜೀವದಯಾಪರವಾದ ಬಸವಧರ್ಮದ ಶರಣತತ್ವದಲ್ಲಿಯೇ ನಡೆದು, ಸಾರ್ಥಕ ಬದುಕನ್ನು ಬದುಕಿದ ಶ್ರೀಗಳು ಕಾಲ್ಪನಿಕ ಲೋಕಕ್ಕೆ ಜಾರದೆ ಬಸವಣ್ಣನವರ ಐತಿಹಾಸಿಕ "ಬಸವ ಬೆಳಗು" ಎಂಬ ನಾಟಕವನ್ನು ಬರೆದರು.
ಬಸವಾದಿ ಪ್ರಮಥರ ಅಪ್ಪಣೆಯಂತೆ ಭುವಿಗೆ ಬಂದು, ಶರಣ ಮಾರ್ಗದಲ್ಲಿ ನಡೆದು ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳನ್ನು ಆಚರಿಸಿ, ವಾಮಮಾರ್ಗ ಖಂಡಿಸಿ ಸಹಜ ಬದುಕನ್ನು ಸಾಗಿಸಿದ ಲಿಂಗವಂತ ಧರ್ಮದ ಬಸವರತ್ನವಾಗಿದ್ದ, ಬಸವತತ್ವದಲ್ಲಿಯೇ ನಡೆದ ಶಿವಕುಮಾರ ಸ್ವಾಮಿಗಳ ಅಂತ್ಯಸಂಸ್ಕಾರವನ್ನು ಬಸವತತ್ವದಂತೆ ಮಾಡದೆ ಶರಣ ವಿರೋಧವಾಗಿ; ಅಂತಹ ಪರಮ ಪವಿತ್ರವಾಗಿದ್ದ ಶ್ರೀಗಳ ಶರೀರವನ್ನು ಅರ್ಥವಿಲ್ಲದ ಪರಂಪರೆಗೆ ಅಂಟಿಕೊಂಡ ಕೆಲವು ಸಂಪ್ರದಾಯವಾದಿಗಳು ಹಲವಾರು ಜಲದಿಂದ ಶುದ್ಧೀಕರಣಗೊಳಿಸಿ, ಪಂಚಕಳಶಗಳನ್ನು ಹೂಡಿ, ಅಂತ್ಯ ಸಂಸ್ಕಾರದ ಕೆಲವು ಅರ್ಥಹೀನ ವಿಧಿ-ವಿಧಾನಗಳನ್ನು ನೆರವೇರಿಸಿ ಬಸವತತ್ವವನ್ನು ಮರೆಮಾಚಿ ಶ್ರೀಗಳಿಗೆ ಅವಮಾನ ಮಾಡುವ ಪ್ರಯತ್ನ ನಡೆಯಿತು. ಬಹುಶಃ ಶ್ರೀಗಳು ಇದ್ದಿದ್ದರೆ ಅದಕ್ಕೆ ಒಪ್ಪಿಗೆ ನೀಡುತ್ತಿರಲಿಲ್ಲ ಅನಿಸುತ್ತದೆ. ಕಾರಣ ಅವರು ಶರಣ ಸಂಸ್ಕೃತಿಯಲ್ಲಿದ್ದರು.
ಇನ್ನು ಮುಂದಾದರೂ ನಾವೆಲ್ಲ ಜಾಗೃತರಾಗಿ ಲಿಂಗಾಯತ ಧರ್ಮಕ್ಕಾಗಿ ದುಡಿದ ಎಲ್ಲ ವಿರಕ್ತ ಮಠಗಳಲ್ಲಿ ಆ ರೀತಿಯ ಅರ್ಥಹೀನ, ಶರಣವಿರೋಧಿ ಅಚರಣೆಗಳು ಇಂದಿಗೂ ನಡೆಯುತ್ತಿವೆ. ಅವೆಲ್ಲವು ಆ ರೀತಿ ಆಗದಂತೆ ನಾವೆಲ್ಲ ಎಚ್ಚರ ವಹಿಸಿ ಇಂತಹ ಶ್ರೇಷ್ಠ ಶಿವಯೋಗಿಗಳ ಆತ್ಮಕ್ಕೆ ನಿಜವಾದ ಶಾಂತಿ ಸಿಗುವಂತೆ ಮಾಡಬೇಕಾಗಿದೆ. ಮತ್ತು ಶ್ರೀಗಳು ಲಿಂಗೈಕ್ಯರಾದಾಗ ದೇವಲೋಕಕ್ಕೆ ಹೋದರು ಎನ್ನುವ ವೀರಶೈವ ಮತ್ತು ವೈದಿಕರಲ್ಲಿರುವ ಕಾಲ್ಪನಿಕ ಕತೆಗಳನ್ನು ಜನರ ತಲೆಯಲ್ಲಿ ತುಂಬಿದ್ದಾರೆ. ಲಿಂಗವಂತ ಧರ್ಮದಲ್ಲಿ ದೇವಲೋಕ ಮರ್ತ್ಯಲೋಕ ಬೇರಿಲ್ಲ ಅದಕ್ಕಾಗಿ ಸಿದ್ಧಗಂಗಾ ಶ್ರೀಗಳು ಕಾಣದ ಯಾವ ಲೋಕಕ್ಕೂ ಹೋಗಿಲ್ಲ. ಅವರು ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲಾದವರು. ಬೆಳಗಿನೊಳಗಣ ಮಹಾಬೆಳಗಾದವರವರು. ಮರಣ ಬಂದರೆ ಸಿಟ್ಟು ನಮಗಿಲ್ಲ ಎಂಬ ಕಡಕೋಳ ಮಡಿವಾಳಪ್ಪನವರ ವಾಣಿಯಂತೆ, ನಾಳೆ ಬಪ್ಪುದು ನಮಗಿಂದೇ ಬರಲಿ ಎಂಬ ಬಸವವಾಣಿಯಂತೆ ಶ್ರೀಗಳು ಮರಣಕ್ಕೆ ಅಂಜಿದವರಲ್ಲ ಮರಣವೇ ಮಹಾನವಮಿ ಎಂಬಂತೆ ಇಚ್ಛಾಮರಣಿಗಳಾಗಿದ್ದರು. ಅವರ ಶರೀರ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಯಾವಾಗಲೂ ನಮ್ಮೊಳಗೆ ಶಕ್ತಿಯಾಗಿ ನಮ್ಮನ್ನು ಸನ್ಮಾರ್ಗದ, ಸತ್ಯದ ಕಡೆಗೆ, ಶರಣ ಮಾರ್ಗದ ಕಡೆಗೆ, ಬಸವಣ್ಣನವರ ಕಾಯಕ, ದಾಸೋಹದ ಸಿದ್ಧಾಂತದ ಕಡೆಗೆ ನಮ್ಮನ್ನೆಲ್ಲ ನಡೆಸುತ್ತಾರೆ. ಅವರು ದಣಿವರಿಯದೆ ನಿಸ್ವಾರ್ಥ ಸೇವೆ ಮಾಡಿದವರು. ಅಂತಹ ಆ ದಿವ್ಯಚೇತನಕ್ಕೆ ಶರಣಾರ್ಥಿಗಳು.
-ಶರಣಪ್ಪ ಗೊಲ್ಲರ.
ಸಾ|| ಸಂಶಿ.
.............
50.
ಶಿವನ ಸಿರಿಮುಡಿಗೆ
ಬಡ ಮಕ್ಕಳಿಗೆ ವಿದ್ಯೆ ನೀಡಿದ ಮಹಾಗುರುವೆ
ಲಕ್ಷಾಂತರ ಜನರ ಬಾಳಿಗೆ ಬೆಳಕಾದ ಕಲ್ಪತರುವೆ
ಶರಣರಾ ಹಾದಿಯಲಿ ನಡೆದು ಏರಿದಿರಿ ದೈವತ್ವದೆಡೆಗೆ
ಅನಘ್ರ್ಯರತ್ನವಾಗಿ ಸೇರಿದಿರಿ ಪರಶಿವನ ಸಿರಿಮುಡಿಗೆ
ಪಿ.ಎಸ್.ಚಂದ್ರಣ್ಣ
ಸೂಪರಿಂಟೆಂಡಿಂಗ್ ಎಂಜಿನಿಯರ್ (ನಿ)
....................

No comments:
Post a Comment