*ಶ್ರೀ ಗುರು ಬಸವಲಿಂಗಾಯ ನಮಃ*
ಇದು ಧರ್ಮಗುರು ಬಸವಣ್ಣ ಮತ್ತು ಪರಮಾತ್ಮನ ನಾಮ ಹೊಂದಿರುವ ಮಂತ್ರವಾಗಿದೆ
ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಏಕದಶಾಕ್ಷರ ಮಂತ್ರ ಆರಂಭದಲ್ಲಿ ಹೇಳಿದ ನಂತರವೇ ಸಾಹಿತ್ಯ, ಸಂಸ್ಕಾರಗಳು ಆರಂಭವಾಗುತ್ತದೆ.....
*ಪದ ಮಂತ್ರಗೋಪ್ಯ(ಇ. ಸ. ೧೧೬೦)*
*ಇದಕ್ಕೆ ಎರಡನೆಯ ಚೆನ್ನಬಸವ ಸ್ವಾಮಿಗಳು (೧೫೧೦) ಬರೆದ ಒಂದು ವಿವರಣೆಯಿದ್ದುಅದನ್ನು ಇಲ್ಲಿ ಕೊಡಲಾಗಿದೆ.*
*ಶ್ರೀ* = ಜ್ಞಾನವುಳ್ಳ;
*ಗುರು*=ಮುಕ್ತಿ ಪ್ರದಾಯಕನಾದಂಥ;
*ಬಸವ* = ಚಿನ್ನಾದ ಚಿದ್ಬಿಂದು ಚಿತ್ಕಲಾ ಸ್ವರೂಪನಾದಂಥ ;
*ಲಿಂಗಾಯ* = ಲಯ ಗಮನಂಗಳಿಗೆ ಕಾರಣವಾದಂಥ ವಸ್ತುವಿಗೋಸ್ಕರ;
*ನಮಃ* = ನಮಸ್ಕಾರವೆಂದು ಶಾಸ್ತ್ರ ಪ್ರಾರಂಭದಲ್ಲಿ ನಮಸ್ಕರಿಸುತ್ತಿರ್ದಪರೆಂಬುದೀಗ *ಶ್ರೀಗುರು ಬಸವ ಲಿಂಗಾಯನಮಃ* ಎಂಬುದರ್ಥ.
No comments:
Post a Comment