Saturday, December 19, 2020
Saturday, December 12, 2020
ರೂಪ ಕುಮಾರಸ್ವಾಮಿ ಪರಿಚಯ
ರೂಪ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್
ಶ್ರೀಮತಿ ರೂಪಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಶ್ರೀಮತಿ ನಾಗರತ್ನ ಮತ್ತು ಶ್ರೀ ಬಸವರಾಜುರವರ ಸುಪುತ್ರಿಯಾಗಿ 8.1.1985ರಲ್ಲಿ ಬೆಂಗಳೂರಿನ ಉದಯನಗರದಲ್ಲಿ ಜನಿಸಿದರು. ಬೆಂಗಳೂರಿನ ಇಂದಿರಾನಗರದ ಐ.ಎನ್.ಪಿ.ಎಸ್ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರಾಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಮುಗಿಸಿ, ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಚಾಮನಹಳ್ಳಿ ಹುಂಡಿ ಗ್ರಾಮದ ಡಾ. ವಚನಕುಮಾರಸ್ವಾಮಿಯವರನ್ನು ವಿವಾಹವಾಗುತ್ತಾರೆ. ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಆಂಗ್ಲ ವಿಷಯದಲ್ಲಿ ಎಂ.ಎ., ಸ್ನಾತಕೋತ್ತರ ಪದವಿ ಪಡೆದು ಮೈಸೂರು ಮತ್ತು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ, ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪತಿಯವರೊಡಗೂಡಿ ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ಸ್ಥಾಪಿಸಿ, ಅದರ ಮುಖಾಂತರ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಲು ಶಾಲೆಗಳೆಡೆಗೆ ವಚನಗಳ ನಡಿಗೆ, ವಚನಗ್ರಾಮ, ಸಸ್ಯೋತ್ಸವ,ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ, ಅನಾಥಾಶ್ರಮಗಳೆಡೆಗೆ ವಚನಗಳ ನಡಿಗೆ, ಕಾಲೇಜಿನೆಡೆಗೆ ವಚನಗಳ ನಡಿಗೆ ಮುಂತಾದ ಹತ್ತು ಹಲವು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಹದಿನೈದು ದೇಶ ಹಾಗೂ ಹತ್ತು ರಾಜ್ಯಗಳಿಗೆ ಶರಣ ಸಾಹಿತ್ಯವನ್ನು ಅಂತರ್ಜಾಲದ ಮೂಲಕ ತಲುಪಿಸುತ್ತಿದ್ದಾರೆ. ಇದುವರೆಗೆ ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿರುತ್ತಾರೆ. ಇದುವರೆಗೆ ದೇವನೂರು ಶ್ರೀ ಗುರುಮಲ್ಲೇಶ್ವರರು, ಗದ್ಧಿಗೆ ಶ್ರೀ ಕೆಂಡಗಣ್ಣಸ್ವಾಮಿಗಳು ಮತ್ತು ಶ್ರೀ ಮಲೆ ಮಹದೇಶ್ವರರ ಸಾಕ್ಷ್ಯಚಿತ್ರ ಹೊರತಂದಿದ್ದು ಲಕ್ಷಾಂತರ ಜನರಿಗೆ ಶರಣರ ಜೀವನ ಚರಿತ್ರೆ ತರಲು ಕಾರಣರಾಗಿರುತ್ತಾರೆ. ಅಮೇರಿಕಾದ ವಿ.ಎಸ್.ಎನ್.ಎ ನಡೆಸಿದ ವಿಶ್ವ ಬಸವಜಯಂತಿ ಕಾಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ THE PIONEER OF THE ERA BASAVANNA ಎಂಬ ಸಾಕ್ಷ್ಯಚಿತ್ರವನ್ನು ಆಂಗ್ಲಭಾಷೆಯಲ್ಲಿ ನೀಡಿರುತ್ತಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು
ವಚನ ಜ್ಞಾನೋದಯ
ಕರುನಾಡಿನ ಪುಣ್ಯಸ್ತ್ರೀಯರು
ಬಸವಭಾನು
ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಕೂಡಲ ಸಂಗಮ ಕ್ಷೇತ್ರದ ಜಗದ್ಗುರು ಲಿಂಗೈಕ್ಯ ಪೂಜ್ಯ ಮಾತೆ ಮಹಾದೇವಿಯವರು ‘ಶರಣ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿರುತ್ತಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಸರಗೂರಿನ ಹೊಸಮಠದಿಂದ ಕಾಯಕರತ್ನ ಎಂಬ ಪ್ರಶಸ್ತಿ ನೀಡಿರುತ್ತಾರೆ.
ಅಲ್ಲದೆ ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿರುತ್ತವೆ.
ರೂಪ ಕುಮಾರಸ್ವಾಮಿಯವರ ವಚನ ಜ್ಞಾನೋದಯ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರಿನ ಹಿರಿಯ ಸಾಹಿತಿಗಳಾದ ಸಿ.ಪಿ.ಕೆ ರವರು ವಚನ ರೂಪಾ ಎಂದೇ ತಮ್ಮ ಹೆಸರು ಪ್ರಚಲಿತವಾಗಲಿ ಎಂದು ಹರಸಿರುತ್ತಾರೆ.
ಪ್ರಸ್ತುತ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾಗಿರುವ ಇವರಿಗೆ ಸಿ.ಕೆ ಗಿರಿಜೇಶ್ ಮತ್ತು ಸಿ.ಕೆ.ವಚನ ಎಂಬ ಮಕ್ಕಳಿದ್ದಾರೆ. ವಚನ ಸಾಹಿತ್ಯ ಪ್ರಸಾರಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿರುವ ಇವರು ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮೂಲಕ 49 ಅಂತರರಾಷ್ಷ್ರೀಯ ಅಂತರ್ಜಾಲ ಪ್ರವಚನ, 45 ಅಂತರ್ಜಾಲ ವಚನ ಮಾಧುರ್ಯ, 4 ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಜನಮಾನಸಕ್ಕೆ ಪ್ರವಚನದ ಸವಿಯನ್ನು ಉಣಬಡಿಸಿರುತ್ತಾರೆ.
ವಿಶ್ವಮಟ್ಟದಲ್ಲಿ ವಚನ ಸಾಹಿತ್ಯವನ್ನು ಪಸರಿಸುತ್ತಿರುವ ಇವರ ಸೇವಾ ಕೈಂಕರ್ಯ ಹೀಗೆ ಸಾಗಲಿ ಎಂದು ಮನತುಂಬಿ ಹಾರೈಸುತ್ತೇವೆ.
ಶರಣು ದಿನಚರಿ 2021
ಕನ್ನಡಪ್ರಭ ಪತ್ರಿಕೆ
Thursday, December 10, 2020
ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ
ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ ಪಡೆದರೆ ಪ್ರತೀ ವರ್ಷ ವಚನಾಧಾರಿತ ಶರಣು ದಿನಚರಿ ಹಾಗೂ ಬಸವಭಾನು ಸಂಚಿಕೆ ಹಾಗೂ ವಚನ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಮೂಲಕ ತಮ್ಮ ವಿಳಾಸಕ್ಕೆ ಕಳಿಸಲಾಗುತ್ತದೆ.
ಶರಣು ದಿನಚರಿ - 2021
ಶರಣು ವಿಶ್ವವಚನ ಫೌಂಡೇಷನ್ ೨೦೧೬ ರಿಂದ ವಚನಾಧಾರಿತ ಶರಣು ದಿನಚರಿಯನ್ನು ಹೊರತರುತ್ತಿದ್ದು, ಇದುವರೆಗೆ ಸಿದ್ಧಗಂಗೆ ಶ್ರೀಗಳು, ಸುತ್ತೂರು ಶ್ರೀಗಳು, ದೇವನೂರು ಶ್ರೀಗಳು, ಸಂಗಮ ತಾತ, ಶ್ರೀ ಕೆಂಡಗಣ್ಣೇಶ್ವರಸ್ವಾಮಿರವರಿಗೆ ಅರ್ಪಣೆ ಮಾಡಲಾಗಿದ್ದು, ಈ ವರ್ಷ ಶ್ರೀ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರಿಗೆ ಅರ್ಪಣೆಯಾಗಿದೆ. ೨೦೨೧ರ ಶರಣು ದಿನಚರಿಯಲ್ಲಿ ೨೫ ಶಿವಶರಣೆಯರ ಪರಿಚಯ ಹಾಗೂ ಅವರ ವಚನಗಳು, ಶರಣರ ದಿನಾಚರಣೆ ಮತ್ತು ಸಂಸ್ಮರಣೋತ್ಸವ ಹಾಗೂ ದತ್ತಿ, ಆಜೀವ ಸದಸ್ಯರ ವಿವರವನ್ನು ಅಡಕಗೊಳಿಸಲಾಗಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿರವರು ಸಂಪಾದಿಸಿದ್ದಾರೆ. ಬೆಲೆ ರೂ. 150
ಬಸವಭಾನು ವಾರ್ಷಿಕ ಸಂಚಿಕೆ
ಬಸವಭಾನು ವಾರ್ಷಿಕ ಸಂಚಿಕೆಯನ್ನು ೨೦೨೦ ರಿಂದ ಹೊರತರುತ್ತಿದ್ದು, ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಿದೆ. ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ಮತ್ತು ಛಾಯ ಚಿತ್ರಗಳ ಸಂಚಿಕೆಯನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿಯವರು ಸಂಪಾದಿಸಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ಮಠದ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮತ್ತು ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಶ್ರೀ ಸೋಮಣ್ಣರವರು ಶುಭಸಂದೇಶ ನೀಡಿದ್ದಾರೆ. ರೂ. 150
ಅಕ್ಕನ ನೂರೆಂಟು ವಚನಗಳು
ಕನ್ನಡದ ಮೊಟ್ಟಮೊದಲ ಮಹಿಳಾ ಕವಯತ್ರಿ ಅಕ್ಕಮಹಾದೇವಿಯವರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ಅವರ ೧೦೮ ವಚನಗಳನ್ನು ಶರಣ ಸಂಸ್ಕೃತಿಗಳ ಆರಾಧಕರಾದ ಶ್ರೀಮತಿ ಅಕ್ಕಮಹಾದೇವಿ ಮರಮ್ಕಲ್‌ರವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಅನುಭವಮಂಟಪದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಮುಂತಾದ ಶರಣರ ನಡುವೆ ನಡೆಯುವ ಸಂಭಾಷಣೆಯನ್ನು ಕೊಡಲಾಗಿದೆ. ಬೆಲೆ ರೂ. 50
Wednesday, October 14, 2020
Tuesday, October 13, 2020
ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ
Monday, October 12, 2020
Tuesday, October 6, 2020
ನೂರಕ್ಕೂ ಹೆಚ್ಚು ಶರಣ ಶರಣೆಯರ ವಚನಗಳ ನಿರ್ವಚನ ಪುಸ್ತಕಗಳು
*ನೂರಕ್ಕೂ ಹೆಚ್ಚು ಶರಣ ಶರಣೆಯರ ವಚನಗಳ ನಿರ್ವಚನ ಪುಸ್ತಕಗಳು*
ಉರಿಲಿಂಗಪೆದ್ದಿ
ಮೋಳಿಗೆ ಮಹಾದೇವಿ
ಚಂದಿಮರಸ
ಜಗಳಗಂಟರಾಮಣ್ಣ
ಜೇಡರ ದಾಸಿಮಯ್ಯ
ಜೋದರ ಮಾಯಣ್ಣ
ಡಕ್ಕೆಯ ಬೊಮ್ಮಣ್ಣ
ಡೋಹರ ಕಕ್ಕಯ್ಯ
೩೩ ಶರಣೆಯರ ಆಯ್ದ ವಚನಗಳ ವ್ಯಾಖ್ಯಾನ
೨೩ ಶರಣರ ಆಯ್ದ ವಚನಗಳ ವ್ಯಾಖ್ಯಾನ
೨೪ ಶರಣರ ಆಯ್ದ ವಚನಗಳ ವ್ಯಾಖ್ಯಾನ
೩೦ ಶರಣರ ಆಯ್ದ ವಚನಗಳ ವ್ಯಾಖ್ಯಾನ
೯ ಶರಣರ ಆಯ್ದ ವಚನಗಳ ವ್ಯಾಖ್ಯಾನ
೧೦ ಶರಣರ ಆಯ್ದ ವಚನಗಳ ವ್ಯಾಖ್ಯಾನ
ಹೀಗೆ ವಿವಿಧ ಶರಣರ ವಚನಗಳ ವ್ಯಾಖ್ಯಾನಗಳನ್ನು ಒಳಗೊಂಡ 9 ಪುಸ್ತಕಗಳು ವಚನಗಳ ಭಾವಾರ್ಥವನ್ನು ತಿಳಿಸಲು ಸಫಲವಾಗಿದ್ದು, ಸಾಂದರ್ಭಿಕ ಕಥೆಗಳು, ಕಠಿಣ ಶಬ್ದಗಳು, ವಿಶೇಷ ಪದಸೂಚಿ, ವಚನಗಳ ಆಕಾರಾದಿ ಒಳಗೊಂಡಿದೆ.
ಜೆ.ಎಸ್.ಎಸ್. ಸಂಸ್ಥೆ ಪ್ರಕಾಶನದ ಈ ಪುಸ್ತಕಗಳು ತಮಗೆ ಬೇಕಾದಲ್ಲಿ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.
9980393469
ಪುಸ್ತಕ ಪರಿಚಯಿಸುತ್ತಿರುವವರು
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು












































