Tuesday, October 13, 2020
ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ
ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ ಪಡೆದರೆ ಪ್ರತೀ ವರ್ಷ ವಚನಾಧಾರಿತ ಶರಣು ದಿನಚರಿ ಹಾಗೂ ಬಸವಭಾನು ಸಂಚಿಕೆಯನ್ನು ರಿಜಿಸ್ಟರ್ ಪಾರ್ಸಲ್ ಮೂಲಕ ತಮ್ಮ ವಿಳಾಸಕ್ಕೆ ಕಳಿಸಲಾಗುತ್ತದೆ.
ಬಸವಭಾನು ಸಂಚಿಕೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪರವರು ಹಾಗೂ ಕನಕಪುರ ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮಿಗಳು ಶುಭ ಸಂದೇಶ ನೀಡಿದ್ದು, ಖ್ಯಾತ ಸಾಹಿತಿಗಳಾದ ರಂಜಾನ್ ದರ್ಗಾ, ಡಾ. ವೀರಣ್ಣ ರಾಜೂರ, ಡಾ. ಪ್ರದೀಪ್ ಕುಮಾರ್ ಹೆಬ್ರಿ, ಪ್ರೊ. ಸಿದ್ದಣ್ಣ ಲಂಗೋಟಿ ಮುಂತಾದವರ ಲೇಖನಗಳನ್ನು ಒಳಗೊಂಡಿದ್ದು, 2019ರ ಶರಣು ವಿಶ್ವವಚನ ಫೌಂಡೇಷನ್ ಕಾರ್ಯಚಟುವಟಿಕೆಗಳು ಹಾಗೂ ದತ್ತಿ ಸದಸ್ಯರು ಮತ್ತು ಆಜೀವ ಸದಸ್ಯರ ವಿವರ ಒಳಗೊಂಡಿದೆ.
ಶರಣು ದಿನಚರಿಯಲ್ಲಿ ಪ್ರತಿ ಪುಟದಲ್ಲಿ ಶರಣರ ನುಡಿಗಡಣಗಳಿವೆ, ಶರಣರ ಶರಣೋತ್ಸವಗಳ ಮಾಹಿತಿ ಇದೆ.
ಎತ್ತಣ ಅಲ್ಲಮ ಮತ್ತು ಎತ್ತಣ ರಮಣ ಕೃತಿಯನ್ನು ಡಾ ಪ್ರಸನ್ನ ಸಂತೆಕಡೂರುರವರು ಬರೆದಿದ್ದು, ಅಲ್ಲಮ ಪ್ರಭುಗಳು ರಮಣ ಮಹರ್ಷಿಗಳ ಮೇಲೆ ಬೀರಿದ ಪ್ರಭಾವವನ್ನು ಉತ್ತಮವಾಗಿ ಬರೆದುಕೊಂಡು ಹೋಗಿದ್ದಾರೆ. ಈ ಕೃತಿ 92 ಪುಟಗಳನ್ನು ಒಳಗೊಂಡಿದೆ.
ಹನ್ನೆರಡನೆಯ ಶತಮಾನದ ಹಾವಿನಹಾಳ ಕಲ್ಲಯ್ಯರವರ ಜೀವನ ಚರಿತ್ರಯನ್ನು 54 ಪುಟಗಳಲ್ಲಿ ಡಾ. ಪ್ರದೀಪ್ ಕುಮಾರ್ ಹೆಬ್ರಿರವರು ಬರೆದಿದ್ದಾರೆ.
ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ವಚನಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ ಮನೆಗೆ ಉಚಿತವಾಗಿ ನೀಡಲು ಡಾ. ವಚನ ಕುಮಾರಸ್ವಾಮಿರವರು 25 ವಚನಕಾರರ ವಚನಗಳನ್ನು ನಿರ್ವಚನ ಮಾಡಿದ್ದಾರೆ.
ನಗರ್ಲೆ ಶಿವಕುಮಾರರವರು 84 ಪುಟಗಳಲ್ಲಿ ಬಸವಣ್ಣನವರ ಬಾಲ್ಯದಿಂದ ಐಕ್ಯದವರೆಗೆ ಉತ್ತಮವಾಗಿ ನಿರೂಪಿಸಿರುತ್ತಾರೆ.
ಸಂಸ್ಥೆಯ ಸದಸ್ಯರಾದವರಿಗೆ ಈ ಪುಸ್ತಕಗಳನ್ನು ಉಚಿತವಾಗಿ ಕಳಿಸಲಾಗುತ್ತದೆ.
ಪ್ರಕಟವಾಗಲಿರುವ ಕೃತಿಗಳು
ನಿಜಸುಖಿ ಹಡಪದ ಅಪ್ಪಣ್ಣ
ಅಕ್ಕನ ನೂರೆಂಟು ವಚನಗಳು
ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವದ ವಿವರ
ಮೂರು ವರ್ಷ ರೂ 1000
ಆರು ವರ್ಷ ರೂ 2000
ಆಜೀವ ಸದಸ್ಯತ್ವ ರೂ 5000
ಶಾಲೆಗಳೆಡೆಗೆ ವಚನಗಳೆಡೆಗೆ ದತ್ತಿ ರೂ 10000
ವಚನಗ್ರಾಮ ದತ್ತಿ ರೂ 25000
ಮೂರು ವರ್ಷದ ಸದಸ್ಯತ್ವ
ಮೂರು ವರ್ಷ ಸದಸ್ಯರಾದರೆ ಮೂರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ.
ಆರು ವರ್ಷದ ಸದಸ್ಯತ್ವ
ಆರು ವರ್ಷ ಸದಸ್ಯತ್ವ ಪಡೆದರೆ ಆರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ.
ಆಜೀವ ಸದಸ್ಯತ್ವ
ಆಜೀವ ಸದಸ್ಯತ್ವ ಪಡೆದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ಆಜೀವ ಸದಸ್ಯರ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ.
ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ
ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ ನೀಡಿದರೆ ಪ್ರತೀ ವರ್ಷ ದತ್ತಿ ಸದಸ್ಯರು ತಿಳಿಸುವ ಶಾಲೆಗಳಲ್ಲಿ ಅವರ ಹೆಸರಿನಲ್ಲಿ ವಚನ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಗಳಲ್ಲಿ ವಚನ ಹೇಳುವ ಎಲ್ಲಾ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಗುತ್ತದೆ.ಹಾಗೂ ಪ್ರತೀ ವರ್ಷ ನಡೆಯುವ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ದತ್ತಿ ನೀಡಿದ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ.
ವಚನಗ್ರಾಮ ದತ್ತಿ
ವಚನಗ್ರಾಮ ದತ್ತಿ ನೀಡಿದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ದಂಪತಿಗಳ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ. ಹಾಗೂ ಪ್ರತೀ ವರ್ಷ ದತ್ತಿ ನೀಡಿದವರು ಹೇಳುವ ಗ್ರಾಮಗಳಲ್ಲಿ ವಚನಗ್ರಾಮ ಕಾರ್ಯಕ್ರಮ ಏರ್ಪಡಿಸಿ ಗ್ರಾಮದ ಪ್ರತೀ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮದ ಮಠ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಯಕ್ರಮ ಏರ್ಪಡಿಸಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಏರ್ಪಡಿಸಿ ನಂತರ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಲಾಗುತ್ತದೆ ನಂತರ ದತ್ತಿ ನೀಡಿದ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ಸಂಸ್ಥೆಯ ಸದಸ್ಯರಾಗ ಬಯಸುವವರು ಕೆಳಗಿನ ಖಾತೆಗೆ ಹಣ ಜಮಾ ಮಾಡಿ ತಮ್ಮ ವಿಳಾಸ ಕಳಿಸಿದರೆ ವಚನ ಪುಸ್ತಕಗಳನ್ನು ಕಳಿಸಲಾಗುತ್ತದೆ.
SHARANU VISHWA VACHANA FOUNDATION
A/C NO. 5192000100032101
IFSC CODE KARB0000519
KARNATAKA BANK BOGADI BRANCH, MYSORE
ಗೂಗಲ್ ಪೇ ಅಥವಾ ಪೋನ್ ಪೇ ನಂಬರ್ 8217081644
ಹೆಚ್ಚಿನ ಮಾಹಿತಿಗಾಗಿ
ಶರಣು ವಿಶ್ವವಚನ ಫೌಂಡೇಷನ್
ನಂ. 431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ
ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ
ಮೈಸೂರು – 570026
ಮೊಬೈಲ್ ನಂಬರ್ 8217081644
ತಮ್ಮ ಸದಸ್ಯತ್ವದ ವಿವರವನ್ನು ಕೆಳಗಿನ ಗೂಗಲ್ ಲಿಂಕ್ ಬಳಸಿ ಭರ್ತಿ ಮಾಡಬಹುದು.
https://forms.gle/yCYqnXFQcTWnubAf9
ಸದಸ್ಯತ್ವ ಪಡೆದರೆ ದೊರೆಯುವ ಪ್ರಯೋಜನಗಳು
ಅಂತರ್ಜಾಲ ಪ್ರವಚನ
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತೀ ಭಾನುವಾರ ಗೂಗಲ್ ಮೀಟ್ ನಲ್ಲಿ ಗುರುಗಳು ಹಾಗೂ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನವಿರುವ ಅನುಭಾವಿಗಳಿಂದ ಪ್ರವಚನ ಇರುತ್ತದೆ ಅದನ್ನು ವೀಕ್ಷಿಸಬಹುದು ಹಾಗೂ ಆ ಕಾರ್ಯಕ್ರಮದಲ್ಲಿ ತಾವೂ ಕೂಡಾ ವಚನಗೀತೆ ಹಾಡಬಹುದು. ಸ್ವಾಗತ ಮತ್ತು ವಂದನಾರ್ಪಣೆ ಮಾಡಬಹುದು. ಇದುವರೆಗೆ 20 ಪ್ರವಚನಗಳು ಆಗಿರುತ್ತವೆ.
*ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನಗಳ ಪತ್ರಿಕಾ ಸುದ್ಧಿ*
https://sharanuvishwa.blogspot.com/2020/08/blog-post_31.html
ವಚನ ಮಾಧುರ್ಯ
ಪ್ರತೀ ಗುರುವಾರ ವಚನ ಮಾಧುರ್ಯ ಕಾರ್ಯಕ್ರಮ ಇರುತ್ತದೆ. ಇದು ವಾರದಿಂದ ವಾರಕ್ಕೆ ವಿಭಿನ್ನವಾಗಿರುತ್ತದೆ ಇದುವರೆಗೆ
1. ಮಹಿಳೆಯರಿಂದ ವಚನ ಮಾಧುರ್ಯ
2. ಖ್ಯಾತ ಗಾಯಕರು ಮತ್ತು ವಿಮರ್ಶಕರಿಂದ ವಚನ ಮಾಧುರ್ಯ
3. ಚಿಣ್ಣರಿಂದ ವಚನ ಮಾಧುರ್ಯ
4. ವಿಶೇಷ ಚೇತನರಿಂದ ವಚನ ಮಾಧುರ್ಯ
5. ಮೂರು ತಲೆ ಮಾರಿನವರಿಂದ ವಚನ ಮಾಧುರ್ಯ
6. ದಂಪತಿಗಳಿಂದ ವಚನ ಮಾಧುರ್ಯ
7. ಶಿಕ್ಷಕರಿಂದ ವಚನ ಮಾಧುರ್ಯ
8. ವಚನ ನೃತ್ಯ
9. ವಿದೇಶದಲ್ಲಿರುವ ಕನ್ನಡಿಗರಿಂದ ವಚನ ಮಾಧುರ್ಯ
10. ಜನಪ್ರತಿನಿಧಿಗಳಿಂದ ವಚನ ಮಾಧುರ್ಯ
11. ವಕೀಲರಿಂದ ವಚನ ಮಾಧುರ್ಯ
12. ರೈತರಿಂದ ವಚನ ಮಾಧುರ್ಯ
13. ಆರಕ್ಷಕರಿಂದ ವಚನ ಮಾಧುರ್ಯ
14. ವೈದ್ಯರಿಂದ ವಚನ ಮಾಧುರ್ಯ
ಈ ಕಾರ್ಯಕ್ರಮಗಳಲ್ಲಿ ತಾವೂ ಭಾಗಿಯಾಗಬಹುದು. ಜೊತೆಗೆ ಕಾರ್ಯಕ್ರಮದ ಒಂದು ಭಾಗವಾಗಿ ತಾವು ವಚನಗೀತೆ ಹಾಡಬಹುದು. ಸ್ವಾಗತ ಅಥವಾ ವಂದನಾರ್ಪಣೆ ಮಾಡಬಹುದು.
*ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ವಚನ ಮಾಧುರ್ಯ ಕಾರ್ಯಕ್ರಮಗಳ ಪತ್ರಿಕಾ ವರದಿ ನೋಡಲು ಕೆಳಗಿನ ಲಿಂಕ್ ಪ್ರೆಸ್ ಮಾಡಿ*
https://sharanuvishwa.blogspot.com/2020/08/blog-post_2.html
ವಿವಾಹ ವಧುವರರ ವೇದಿಕೆ
ಸಂಸ್ಥೆಯ ಸದಸ್ಯತ್ವ ಪಡೆದರೆ ವಧು ವರರು ಇದ್ದರೆ ಅವರು ತಮ್ಮ ಪ್ರೊಫೈಲ್ ಕಳಿಸಿದರೆ ಅದನ್ನು ನಮ್ಮ ಸಂಸ್ಥೆಯಲ್ಲಿರುವ ಇತರ ಸದಸ್ಯರಿಗೆ ಕಳಿಸಿ ವಿವಾಹವಾಗಲು ಸಹಾಯ ಮಾಡಲಾಗುತ್ತದೆ. ಇದು ಉಚಿತವಾಗಿರುತ್ತದೆ.











No comments:
Post a Comment