ತೋಂಟದ ಸಿದ್ಧಲಿಂಗಯತಿಗಳ
ಷಟ್ಸ್ಥಲ ಜ್ಞಾನಸಾರಾಮೃತ ವ್ಯಾಖ್ಯಾನ
ಹನ್ನೆರಡನೆಯ ಶತಮಾನದಲ್ಲಿ
ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಕ್ರಾಂತಿಯ ನಂತರ ವಚನ ರಚನೆ ನಿಂತು ಹೋಯಿತು. ಆ ನಂತರ ಸುಮಾರು
ಮೂರು ಶತಮಾನಗಳ ನಂತರ ವಚನಗಳ ರಚನೆ ಪ್ರಾರಂಭವಾದುದು ಶ್ರೀ ಸಿದ್ಧಲಿಂಗ ಶಿವಯೋಗಿಗಳು ಮತ್ತು ಅವರ ಶಿಷ್ಯ
ಪರಂಪರೆಯಿಂದ
ಡಾ. ಎನ್.ಜಿ.ಮಹಾದೇವಪ್ಪರವರು
ಸಿದ್ಧಲಿಂಗೇಶ್ವರರ 701 ವಚನಗಳಿಗೆ ವ್ಯಾಖ್ಯಾನ ಮಾಡಿರುವುದರ
ಜೊತೆಗೆ ಅವರ ಸಂಕ್ಷಿಪ್ತ ಪರಿಚಯ ಮಾಡಿದ್ದಾರೆ.
ಒಂದು ವಚನದ ತಾತ್ಪರ್ಯ
ಇಂತಿದೆ.
ನಿರವಯಂ
ನಿರಾಮಯಂ ನಿರಾಕುಳಂ
ನಿರ್ದ್ವಂದ್ವಂ
ನಿರ್ಮಳ ನಿಜಸ್ವರೂಪಂ
ನಿರ್ಭಾವ
ನಿಃಪುರುಷ ನಿರಂಜನ ನಿಕಾರಂ
ನಿರಾವರಣ
ನಿರುಪಮ ನಿರ್ಗುಣ ನಿರಾಧಾರ ನಿರಾಲಂಬಂ
ಸರ್ವಾಧಾರ
ಸದಾಶಿವಂ ಅತ್ಯತಿಷ್ಠದ್ದಶಾಂಗುಲಂ ನಿತ್ಯನಿಶ್ಚಿತಂ
ನಿರ್ಮಲ
ನಿರ್ಮಾಯ ನಿರಾಳಕಂ
ಹರ ಹರಾ ಶಿವಶಿವಾ ಜಯ
ಜಯಾ ಜಯತು
ಶರಣ
ಕರುಣಾಕರ ತ್ರಾಹಿಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು
ಶಿವಸಿದ್ಧೇಶ್ವರ ಪ್ರಭುವೆ
ಭಾವ
: ಸಿದ್ಧಲಿಂಗಯತಿಗಳು ಪರಶಿವನ ಸ್ವಭಾವವನ್ನು ಸ್ತುತಿಸುತ್ತಿದ್ದಾರೆ. ಪರಶಿವನು ನಿರವಯ ಅಂದರೆ ಅವನಿಗೆ
ಯಾವ ಅಂಗಗಳೂ ಇಲ್ಲ. ನಿರಾಮಯ ಅಂದರೆ ಯಾವ ವ್ಯಾಧಿಯೂ ಇಲ್ಲದವನು. ನಿರಾಕುಳ ಅಂದರೆ ವ್ಯಾಕುಲವೂ ಇಲ್ಲದವನು.
ಇರುವವನು ಅವನೊಬ್ಬನೇ ಆದುದರಿಂದ ಅವನು ನಿರ್ದ್ವಂದ್ವ: ನಿರ್ಮಲ ಅಂದರೆ ಪವಿತ್ರನಾದವನು. ನಿಜಸ್ವರೂಪ
ಅಂದರೆ ಮೂಲದಲ್ಲಿ ಪ್ರಣವ ಸ್ವರೂಪಿಯಾದವನು. ನಿರ್ಭಾವ ಅವನು ಪುರುಷನಲ್ಲ. ಏಕೆಂದರೆ ಸಾಂಖ್ಯ ಮತ್ತು
ಯೋಗದರ್ಶನಗಳ ಪ್ರಕಾರ ಪುರುಷ ಅಂದರೆ ಪ್ರತ್ಯೇಕ ಆತ್ಮ. ಜೀವಭಾವ ಉಳ್ಳ ಆತ್ಮ. ಪರಶಿವ ಜೀವಾತ್ಮನಲ್ಲ.
ನಿರಂಜನ ಅವನಿಗೆ ಯಾವುದೇ ಸ್ಪಷ್ಟ ಆಕಾರವಿಲ್ಲದುದರಿಂದ ಅವನು ನಿರಾಕಾರ. ಅವನನ್ನು ಆವರಿಸಿಕೊಳ್ಳುವಷ್ಟು
ವಿಶಾಲವಾದುದು ಯಾವುದೂ ಇಲ್ಲವಾದುದರಿಂದ ಅವನು ನಿರಾವರಣ. ಅವನನ್ನು ಹೋಲುವ ವ್ಯಕ್ತಿ ಮತ್ತೊಬ್ಬ ಇಲ್ಲವಾದುದರಿಂದ
ನಿರುಪಮ. ಅವನು ನಿರ್ಗುಣ ಅಂದರೆ ಸತ್ವ. ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳಿಲ್ಲದವನು. ಅವನಿಗೆ
ಯಾವ ಆಧಾರವೂ ಇಲ್ಲ. ಅವನು ಏನನ್ನೂ ಅವಲಂಬಿಸಿಲ್ಲವಾದುದರಿಂದ ಅವನು ನಿರಾಧಾರ, ನಿರಾಲಂಭ; ಅವನೇ ಎಲ್ಲಕ್ಕೂ
ಆಧಾರ. ಒಳಿತಿನ ಮೂರ್ತಿ, ಎಲ್ಲವನ್ನೂ ಮೀರಿದವನು. ಅವನಿಗೆ ಯಾವ ಚಿಂತೆಯೂ ಇಲ್ಲ. ಮಾಯೆಗೆ ಒಳಗಾಗದವನು.
ಪ್ರಾಕೃತಿಕ ಗುಣಗಳಿಲ್ಲದವನು.
ಈ
ಕೃತಿಯು ವಚನಗಳ ಆಕಾರಾದಿಯನ್ನು ಹೊಂದಿದ್ದು ಕಠಿಣ ಪದಕೋಶ ಹಾಗೂ ಪಾರಿಭಾಷಿಕ ಪದಕೋಶಗಳನ್ನು ಹೊಂದಿರುತ್ತದೆ.666
ಪುಟಗಳನ್ನು ಹೊಂದಿರುವ ಈ ಹೊತ್ತಿಗೆಯನ್ನು ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ
ಹೊರತಂದಿದ್ದು ಇದರ ಮುಖಬೆಲೆ ರೂ 300. ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ
9980393469
ಪುಸ್ತಕ ಪರಿಚಯಿಸುತ್ತಿರುವವರು
ಡಾ.
ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು
ವಿಶ್ವವಚನ ಫೌಂಡೇಷನ್, ಮೈಸೂರು


No comments:
Post a Comment