ಶರಣ
ಕಥಾ ಮಂಜರಿ
ಎಸ್
ವಿದ್ಯಾಶಂಕರರವರ ಸಂಪಾದನೆಯ ಶರಣ ಮಂಜರಿ. ಇದು ಹರಿಹರ ಕವಿಯ ರಗಳೆಗಳಿಂದ ಆಯ್ದ ಕೆಲವು ರಗಳೆಗಳ ಸಂಕಲನ.
ಹರಿಹರನ ಎಲ್ಲಾ ರಗಳೆಗಳನ್ನು ಓದಲಾಗದವರು ಈ ಪುಸ್ತಕ ಓದಿದರೆ ಹರಿಹರನ ಕಾವ್ಯ ಸ್ವಾರಸ್ಯ ಮತ್ತು ಮಹತ್ವ
ಮನದಟ್ಟಾಗುತ್ತದೆ.
ಮನಮುಟ್ಟುವ
ಸಾಲುಗಳು
ತೋಟದಲ್ಲಿ
ಸುತ್ತಾಡುತ್ತ ಬರುವಾಗ ನಳನಳಿಸಿ ಬೆಳೆದು ಮಗಮಗಿಸುತ್ತಲಿರುವ ಇರವಂತಿಕೆಯನ್ನು ಕಂಡ ಆ ಭಕ್ತ “ಪರಮನಿಗೆ
ನೀನೀವ ಪೂವನೀಯೌ” ಎಂದು ಬೇಡಿ ಅದನ್ನು ಪಡೆಯುವನು. ಮುಂದೆ ಸಂಪಗೆಯ ಮರವನ್ನು ನೋಡಿ ಕುಕಿಲಿರಿವುತ್ತ
ಕುಣಿದಾಡುತ್ತಾ ಬಂದು “ ಏನವ್ವ ಸಂಪಿಗೆಯೆ ಶಿವನ ಸಿರಿಮುಡಿಗೆ ನೀನೀವ ಪೊಸ ಕುಸಮಮಂ ನೀಡು” ಅಳಿಮನಸ್ಸಿನ
ರೀತಿಯೆಂದು ನೀನು ಬಗೆಯದಿರು ಹೊಸ ಹೂಗಳನ್ನು ನೀಡವ್ವ……….
1.
ಬಸವರಾಜದೇವರ
ರಗಳೆ
2.
ಮಹಾದೇವಿಯಕ್ಕನ
ರಗಳೆ
3.
ಪ್ರಭುದೇವರ
ರಗಳೆ
4.
ಪುಷ್ಪ
ರಗಳೆ
5.
ತಿರುನೀಲಕಂಠರು
6.
ಗುಂಡಯ್ಯನ
ರಗಳೆ
7.
ಇಳೆಯಾಂಡ
ಗುಡಿಮಾರರು
8.
ಕಣ್ಣಪ್ಪ
ದೇವರು
9.
ತಿರುನಾಳ್
ಪೋವರು
10.
ತಿರುಕುರುಪ್ಪೆಯ
ತೊಂಡರು
11.
ನಂಬಿಯಣ್ಣನ
ರಗಳೆ
12.
ಮಲುಹಣದೇವ
ಚರಿತೆ
ಹೀಗೆ
12 ಮಂದಿ ಶಿವಶರಣರ ಬಗ್ಗೆ ಕಥೆ ಹಾಗೂ ಗಧ್ಯ ರೂಪದ ಸಾಹಿತ್ಯ ಒಳಗೊಂಡಿದೆ. ಹಂ.ಪ ನಾಗರಾಜಯ್ಯರವರು ಈ
ಕೃತಿಗೆ ಮುನ್ನುಡಿ ಬರೆದಿದ್ದು, ಡಾ. ಜಿ.ಎಸ್. ಶಿವರುದ್ರಪ್ಪರವರೊಂದಿಗೆ ಚರ್ಚಿಸಿ ಈ ಕೃತಿಯನ್ನು
ಹೊರತಂದಿರುತ್ತಾರೆ. 160 ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ
ಇದನ್ನು 1993 ರಲ್ಲಿ ಪ್ರಕಟಿಸಿದೆ. ಪುಸ್ತಕದ ಬೆಲೆ ರೂ 150. ಪುಸ್ತಕ ಬೇಕಾದರೆ ಕೆಳಕಂಡ ನಂಬರ್ ಗೆ
ವಾಟ್ಸ್ ಆ್ಯಪ್ ಮಾಡಿ.
9980393469
ಪುಸ್ತಕ ಪರಿಚಯಿಸುತ್ತಿರುವವರು
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು


No comments:
Post a Comment