Sunday, September 20, 2020

ಸ್ವಲೀಲ ಮಹಾತ್ಮ

 


ಸ್ವಲೀಲ ಮಹಾತ್ಮ

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಉಳಿಸಿ, ಬೆಳೆಸುವ ಮಹಾಮಣಿಹದ ಮಹಾಕಾರ್ಯವನ್ನು ಹೊತ್ತುಕೊಂಡು ಹಗಲಿರುಳೆನ್ನದೆ ಮೈಸೂರು ಪ್ರಾಂತ್ಯದ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಸಾವಿರಾರು ಭಿಕ್ಷದ ಮಠಗಳನ್ನು ಸ್ಥಾಪಿಸಿ, ತಮ್ಮ ಕಾಯವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಜ್ಞಾನದ ಬೆಳಕನ್ನು ಭಕ್ತರಿಗೆ ನೀಡಿದವರು ಶ್ರೀ ಗುರುಮಲ್ಲೇಶ್ವರರು.

ಅಂತಹ ಪೂಜ್ಯ ಗುರುಮಲ್ಲೇಶ್ವರರ ದಿವ್ಯ ಚರಿತೆಯನ್ನು ತುರಗನೂರು ಗುರುಬಸವಣ್ಣ ಯೋಗಕಮ್ಮಟದ ಶ್ರೀ ವಿಜಯಣ್ಣರವರು ಏಕಾಗ್ರತೆಯಿಂದ ತಮ್ಮ ಅಂತರಂಗದ ಕಣ್ಣನ್ನು ತೆರೆದು ಮನಮಟ್ಟುವಂತೆ, ಭಕ್ತಿ ಮೂಡುವಂತೆ ಬರೆದಿದ್ದಾರೆ.

ಸ್ವಲೀಲ ಮಹಾತ್ಮ ಹೊತ್ತಿಗೆಗೆ ತುರಗನೂರು ಗುರುಬಸವಣ್ಣ ಯೋಗಕಮ್ಮಟದ  ಕಮಲಕ್ಕರವರು ‘ನವ್ಯ ದರ್ಶನ ಎಂಬ  ಶೀರ್ಷಿಕೆಯಲ್ಲಿ ಮುನ್ನುಡಿ ಬರೆದಿದ್ದು, ಪ್ರತಿಯೊಂದು ಸಾಲುಗಳು ಕಣ್ಣಿಗೆ ಸದ್ಭಕ್ತಿ ಹಾಗೂ ಮನಸ್ಸಿಗೆ ಸದ್ಭಾವವನ್ನು ನೀಡುತ್ತದೆ.

ಪ್ರಾರಂಭದಲ್ಲಿ ‘ದಿವ್ಯದರ್ಶನ’ ಎಂಬ ಶೀರ್ಷಿಕೆಯಡಿಯಲ್ಲಿ ಇಡೀ ಪುಸ್ತಕದ ಪರಿಚಯವನ್ನು ಕೆಲವು ಪುಟಗಳಲ್ಲಿ ಮಾಡಿಕೊಟ್ಟಿದ್ದು, ಅಂತರಂಗದ ಹೃದಯ ತೆರೆದು ನೋಡಿದರೆ ಗುರುಮಲ್ಲೇಶ್ವರರ ಸದ್ಭಕ್ತಿ ಹೊಳೆಯಾಗಿ ಹರಿಯುತ್ತದೆ ಎಂಬ ಅವರ ಸಾಲುಗಳು ಗುರುಮಲ್ಲೇಶ್ವರರ ದಿವ್ಯ ದರ್ಶನವನ್ನು ,ಮಾಡಿಸುತ್ತದೆ.

ಒಟ್ಟು 58 ಅಧ್ಯಾಯಗಳನ್ನು ಹೊಂದಿರುವ 224 ಪುಟಗಳ ಕೃತಿಯನ್ನು ಗುರುಬಸವಣ್ಣ ಯೋಗಕಮ್ಮಟದಿಂದ ಹೊರತಂದಿರುತ್ತಾರೆ. ಅಧ್ಯಾಗಳ ಹೆಸರು


1.      ಮುಂಬೆಳಗು

2.     ಕಾರುಣ್ಯದ ಬೆಳಕು

3.     ಸೇವಾ ಮನೋಭಾವ

4.    ಸಂಗಮ

5.     ಹಾಗಲಕಾಯಿ

6.    ರೋಗದಿಂದ ಮುಕ್ತಿ

7.     ನಶ್ವರ ದೇಹ

8.     ಕರುಳಿನ ಪವಾಡ

9.    ಮೊಸರನ್ನ

10.   ಗಾಬರಿಯಾಗಬೇಡ

11.    ಮಹಾನವಮಿ

12.   ಪುನರ್ಜನ್ಮ

13.   ಶಿವಯೋಗದೆಡೆಗೆ

14.   ಸರಳತೆಯ ದರ್ಶನ

15.   ದೇವನೂರಿನತ್ತ

16.   ಬ್ರಹ್ಮಪಿಶಾಚಿ

17.    ನಾಲ್ಕಾಣೆ

18.   ಉರಿಯುಂಡ ಕರ್ಪೂರ

19.   ಜೋಳದ ಬಿತ್ತನೆ

20.  ನೀನೊಬ್ಬನೇ ಬಾ

21.   ಭ್ರಮಾಲೋಕ

22.  ಮೌಲಾನಾ ಪೀರ

 ರಕ್ತದ ಹೋಳಿಗೆ

ಹೀಗೇ 58 ಅಧ್ಯಾಯಗಳನ್ನು ಹೊಂದಿದ್ದು ಪ್ರತೀ ಆಧ್ಯಾಯವು ಒಂದೊಂದು ವಚನವನ್ನು ಹೊಂದಿದ್ದು ಸಾಹಿತ್ಯಾಭಿಮಾನಿಗಳಿಗೆ ಹಾಗೂ ವಚನಾಭಿಮಾನಿಗಳಿಗೆ ರಸದೌತಣವನ್ನು ನೀಡುತ್ತದೆ.

ಶರಣು ವಿಶ್ವವಚನ ಫೌಂಡೇಷನ್ ಶ್ರೀ ಗುರುಮಲ್ಲೇಶ್ವರರ ಜೀವನ ಚರಿತ್ರೆ ಎಂಬ ಹೆಸರಿನಲ್ಲಿ 60 ಎಪಿಸೋಡ್ ಗಳ ಚಲನಚಿತ್ರ ಮಾಡಿದ್ದು ಕೆಳಗಿನ ಲಿಂಕ್ ಪ್ರೆಸ್ ಮಾಡಿ ನೋಡಬಹುದು.

https://www.youtube.com/playlist?list=PLCR1-sYQLBYlI40ICG7E7OVn62jNwxjZy

ಓದುಗರನ್ನು ಭಕ್ತಿಯ ಲೋಕಕ್ಕೆ ಕೊಂಡೊಯ್ಯುವ ಈ ಹೊತ್ತಿಗೆಯ ಬೆಲೆ ರೂ 150 ಆಸಕ್ತರು ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಬಹುದು.

9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು

 


 

No comments:

Post a Comment