Sunday, August 30, 2020

ರಾಜೇಂದ್ರ ಶ್ರೀಗಳ ಸ್ಮರಣೆ



ಗ್ರಾಮಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ರಾಜೇಂದ್ರ ಶ್ರೀಗಳು ಎಂದು ಸರಗೂರು ತಾಲ್ಲೂಕು ದಡದಹಳ್ಳಿ ಗುರುಮಲ್ಲೇಶ್ವರ ಮಠದ ಶ್ರೀ ಷಡಕ್ಷರಸ್ವಾಮಿಗಳು ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಡೆದ ಅಂತರ್ಜಾಲದಲ್ಲಿ ನಡೆದ ರಾಜೇಂದ್ರ ಶ್ರೀಗಳ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೈಸೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಉನ್ನತ ಶಿಕ್ಷಣ ಮಾಡಲು ಅವಕಾಶ ಕಲ್ಪಿಸಿ ಉತ್ತಮ ಉದ್ಯೋಗ ಪಡೆಯಲು ಕಾರಣೀಭೂತರಾದರು. ಮಾತೃ ಹೃದಯಿಗಳಾದ ಅವರು  ಬಡವ, ಬಲ್ಲಿದ, ಮೇಲು, ಕೀಳು ಎನ್ನದೇ ಪ್ರತಿಯೊಬ್ಬರನ್ನೂ ಸಮಾನತೆಯಿಂದ ಕಾಣುವ ಮನೋಭಾವ ಹೊಂದಿದ್ದರು ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ರಾಜೇಂದ್ರ ಶ್ರೀಗಳ ಹೆಸರಿನಲ್ಲಿರುವ ಶಿವರಾತ್ರಿ ಎಂಬ ಪದವು ಎಚ್ಚರಗೊಂಡಿರುವುದು ಎಂದರ್ಥ. ಅವರು ಸದಾ ಎಚ್ಚರವಾಗಿರುವುದರ ಜೊತೆಗೆ ಎಲ್ಲರನ್ನೂ ಎಚ್ಚರಿಸುತ್ತಿದ್ದರು. ಅಕ್ಷರ, ಅನ್ನ, ಅರಿವುಗಳನ್ನು ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿ ಎಲ್ಲರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು. ನಂತರ ನಡೆದ ಸ್ಮರಣೆ ಕಾರ್ಯಕ್ರಮದಲ್ಲಿ ವಸತಿ ಸಚಿವರ ವಿಶೇಷ ಅಧಿಕಾರಿ ಎಂ.ಕೆ.ಸ್ವಾಮಿ, ಮೈಸೂರಿನ ನಿವೃತ್ತ ಪ್ರಾಂಶುಪಾಲ ಕೆ.ಜಿ. ಮಹದೇವಸ್ವಾಮಿ, ವಿಶ್ರಾಂತ ಪ್ರಾಧ್ಯಾಪಕ ಎಸ್.ಜಿ. ಶಿವಶಂಕರ್, ಎಚ್.ಡಿ.ಕೋಟೆಯ ಮಾಜಿ ಜಿ.ಪಂ.ಸದಸ್ಯ ಬಿ.ವಿ.ಬಸವರಾಜು, ನಂಜನಗೂಡು ಅನುರಾಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ್, ಶಿಕ್ಷಕ ರಾಜಶೇಖರ್, ಪಿರಿಯಾಪಟ್ಟಣ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಬಿ.ಸಿ. ಮಹದೇವಪ್ಪ ಶ್ರೀಗಳ ಸಾಧನೆಗಳನ್ನು ಸ್ಮರಿಸಿದರು. ಶಿಕ್ಷಕಿ ಸುಮಂಗಳ ಆರ್. ಮತ್ತು ಸುನಿತಾ ಅಂಗಡಿ ಕೊಡೇಕಲ್ ಶ್ರೀಗಳ ಬಗ್ಗೆ ಕವಿತಾ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಯು.ಎಂ. ಉಮಾ ಮಹಾದೇವಸ್ವಾಮಿ, ನೀಲಾಬಿಂಕಾದೇವಿ ನಾಗರಾಜು, ದೀಪಾ ತೊಲಗಿ, ನೀಲಾಂಬಿಕಾ, ಅನಿತಾ ನಾಗರಾಜು, ಸರಸ್ವತಿ ರಾಮಣ್ಣ ಉಪಸ್ಥಿತರಿದ್ದರು. 

No comments:

Post a Comment