ದಂಪತಿಗಳಿಗಾಗಿ ವಚನ ಮಾಧುರ್ಯ - 6

- ಶರಣ ಧರ್ಮ ಸಂಸಾರಿಗಳ ಧರ್ಮ ಎಂದು ಬೆಂಗಳೂರು ಬಸವವಾಹಿನಿಯ ನಿರ್ದೇಶಕ ಹಾಗೂ ಮಾಜಿ ನಗರಸಭೆ ಸದಸ್ಯ ಈ ಕೃಷ್ಣಪ್ಪ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಂತರ್ಜಾಲದಲ್ಲಿ ನಡೆದ ದಂಪತಿಗಳಿಗಾಗಿ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣ ಸಾಹಿತ್ಯವನ್ನು ಪ್ರತಿ ಮನೆಮನೆಗೆ ಮತ್ತು ಮನಮನಕ್ಕೆ ತಲುಪಿಸುವ ಅನಿವಾರ್ಯತೆ ಇದ್ದು ಅದನ್ನು ಶರಣು ವಿಶ್ವವಚನ ಫೌಂಡೇಷನ್ ಪ್ರತೀ ವಾರ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಿ ವಿಶ್ವದ ಎಲ್ಲಾ ಜನರನ್ನು ವಚನ ಸಾಹಿತ್ಯದ ಕಡೆಗೆ ಆಕರ್ಷಿತರಾಗುವಂತೆ ಮಾಡುತ್ತಿರುವುದು ಸ್ತುತ್ಯಾರ್ಹ ವಿಷಯ. ಮಹಿಳೆಯರು, ಖ್ಯಾತ ಗಾಯಕರು, ವಿಶೇಷ ಚೇತನರು, ಚಿಣ್ಣರು, ಮೂರು ತಲೆಮಾರಿನವರಿಗಾಗಿ ಇದುವರೆಗೆ ಕಾರ್ಯಕ್ರಮ ಆಯೋಜಿಸಿದ್ದು ಇಂದು ಸತಿಪತಿಗಳಿಂದ ವಚನ ಗಾಯನ ಮಾಡಿಸುತ್ತಿರುವುದು ಇಡೀ ಕುಟುಂಬವೇ ಸಂಸ್ಕಾರದತ್ತ ಮುಖ ಮಾಡಲು ಸಹಕಾರಿಯಾಗಿದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಮಾತನಾಡಿ ಕಣ್ಣುಗಳು ಎರಡಾದರೂ ನೋಟ ಒಂದೇ ಇರುವ ಹಾಗೆ ಸತಿ ಪತಿ ಬೇರೆಬೇರೆಯಾದರೂ ಒಂದೇ ರೀತಿಯ ಚಿಂತನೆ ಮೂಡಲು ಸಹಾಯಕವಾಗುವ ಸದುದ್ದೇಶದಿಂದ ದಂಪತಿಗಳಿಂದ ವಚನಗಳನ್ನು ಹಾಡಿಸಿ ಅದರಂತೆ ನಡೆದು ಸುಖೀ ಕುಟುಂಬ ನಿರ್ಮಾಣವಾಗಬೇಕೆಂಬುದೇ ಸಂಸ್ಥೆಯ ಉದ್ದೇಶ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಸಾಹಿತ್ಯ ಪ್ರಕಾರ ವಚನ ಸಾಹಿತ್ಯವಾಗಿದ್ದು, ವಚನ ಎಂದರೆ ಪ್ರಮಾಣ, ಕೊಟ್ಟ ಮಾತು ಎಂದರ್ಥ. ವಚನದಂತೆ ನಡೆದುಕೊಂಡರೆ ಇಡೀ ರಾಜ್ಯ ಸುಖೀ ರಾಜ್ಯವಾಗುತ್ತದೆ ಎಂದರು. ನಂತರ ನಡೆದ ವಚನ ಮಾಧುರ್ಯ ಕಾರ್ಯಕ್ರಮದಲ್ಲಿ ಆನಂದ ಗುಡಸ, ಶೀಲಾ ಆನಂದ ಗುಡಸ, ರಾಮಣ್ಣ, ಸರಸ್ವತಿ ರಾಮಣ್ಣ, ಕೆ. ವಿ ನಾಗರಾಜ್, ಎಂ. ಪಿ. ನೀಲಾಂಬಿಕಾದೇವಿ ನಾಗರಾಜ್, ಕಿರಣ್, ಕವಿತಾ ಕಿರಣ್, ಶಿವಾನಂದ ಪಾಟೀಲ್, ಹೇಮಾ ಎಸ್ ಪಾಟೀಲ್, ಪ್ರಭುಸ್ವಾಮಿ, ಇಂದ್ರಾಣಿ ಪ್ರಭುಸ್ವಾಮಿ, ಶಿವಪುತ್ರಪ್ಪ, ಜಯಶ್ರೀ, ಶರಣ ಪ್ರಸಾದ, ರೂಪ ಶರಣ ಪ್ರಸಾದ, ಚೆನ್ನಬಸಪ್ಪ, ಮಂಜುಳ ಶರಣರ ವಿವಿಧ ವಚನಗಳನಗನ್ನು ಗಾಯನ ಮಾಡಿದರು. ಸಂಪೂರ್ಣ ಕಾರ್ಯಕ್ರಮವನ್ನು ಯಶೋಧಮ್ಮ ಕೃಷ್ಣಪ್ಪ, ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ಅನಿಲ್ ಕುಮಾರ್ ವಾಜಂತ್ರಿ, ವಿ.ರಾಘವೇಂದ್ರಸ್ವಾಮಿ, ಸಿ. ಭಾನು ರಾಘವೇಂದ್ರಸ್ವಾಮಿ, ಬಿ.ಎಸ್.ಯೋಗೀಶ್, ಎಸ್.ಪಿ. ಯಶೋಧ ದಂಪತಿಗಳು ನಿರ್ವಹಿದರು. ಕಾರ್ಯಕ್ರಮದಲ್ಲಿ ಸುಧಾ ಮೃತ್ಯುಂಜಯಪ್ಪ, ಸುಮಂಗಳ, ಶೋಭ ಜಯಪ್ರಕಾಶ್, ಉಷಾ ನಾಗೇಶ್, ಸುನಿತಾ ಅಂಗಡಿ ಕೊಡೇಕಲ್, ಶಿವರಾಜ್ ಪಾಟೀಲ್, ಅಲ್ಲಮಪ್ರಭು ಉಪಸ್ಥಿತರಿದ್ದರು.
No comments:
Post a Comment