1
🌹ದಿನಕ್ಕೊಂದು ಕಥೆ🌹
ಸರಕಾರಿ ರಂಗದ ಇಲ್ಲವೇ ಖಾಸಗಿ ಸೇವಾ ರಂಗದ ಉದ್ಯೋಗಗಳಿಗೆ ಸುಯೋಗ್ಯ ವ್ಯಕ್ತಿಗಳನ್ನು ಆರಿಸಿಕೊಳ್ಳುವುದಕ್ಕಾಗಿ ನಾಡಿನಾದ್ಯಂತ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿ ಅರ್ಜಿಗಳನ್ನು ಆಹ್ವಾನಿಸುತ್ತಾರೆ. ಆಗ ನಿರುದ್ಯೋಗಿಗಳೂ, ಉತ್ತಮ-ಉದ್ಯೋಗಾಕಾಂಕ್ಷಿಗಳೂ ಸಾಕಷ್ಟು ಅರ್ಜಿಗಳನ್ನು ಹಾಕುತ್ತಾರೆ. ಅಂತಹ ಉಮೇದುವಾರರನ್ನು ಆಯ್ಕೆ ಮಾಡುವುದಕ್ಕಾಗಿ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಗಳೆರಡನ್ನೂ ನಡೆಸಲಾಗುತ್ತದೆ. ಹಾಗೆ ಪರೀಕ್ಷೆಗಳನ್ನು ನಡೆಸುವಾಗ, ಸುಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅರ್ಹತೆಗಳೇನು? ಎಂಬುದನ್ನು ನಿರೂಪಿಸುವ ಒಂದು ಉದಾಹರಣೆಯ ಪ್ರಸಂಗ ಇಲ್ಲಿದೆ. ಒಂದು ಸುಪ್ರಸಿದ್ಧ ಖಾಸಗಿ ರಂಗದ ವಾಣಿಜ್ಯ ಸಂಸ್ಥೆಯಲ್ಲಿ ಉನ್ನತ ಹುದ್ದೆಗಾಗಿ ಸುಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಲೆಂದು ಲಿಖಿತ ಪರೀಕ್ಷೆಯ ಬಳಿಕ, ಅಂತಿಮ ಸಂದರ್ಶನದ ಪರೀಕ್ಷೆಗಾಗಿ 50 ಮಂದಿಯನ್ನು ಕರೆಯಲಾಗಿತ್ತು. ಸ್ವತಃ ಕಂಪನಿಯ ಅಧ್ಯಕ್ಷ ರು ಮತ್ತು ಆಡಳಿತ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮಿತ್ರರೊಬ್ಬರು ಪರೀಕ್ಷ ಕರಾಗಿದ್ದರು. ಅನೇಕ ಮಂದಿ ಸಂದರ್ಶನದ ಸಂದರ್ಭ ದೊಡ್ಡ-ದೊಡ್ಡ ತಜ್ಞ ಅಧಿಕಾರಿಗಳಿಂದ, ರಾಜಕೀಯ ಪುಢಾರಿಗಳಿಂದ ಶಿಫಾರಸು ಪತ್ರಗಳನ್ನು ತಂದು ಪ್ರಭಾವ ಬೀರಲೆಂದು ಪ್ರಯತ್ನ ನಡೆಸಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಸಂದರ್ಶನ, ಪರೀಕ್ಷೆಯ ಬಳಿಕ ಒಬ್ಬ ಸರಳ, ಸಜ್ಜನಿಕೆಯ ಕ್ರಿಯಾಶೀಲ ತರುಣನ ಆಯ್ಕೆ ನಡೆಯಿತು. ವೈಭವ, ಆಡಂಬರದ ವೇಷಭೂಷಣ, ಶಿಫಾರಸು ಪತ್ರದವರನ್ನು ತಿರಸ್ಕರಿಸಲಾಯಿತು. ಕಾರಣವೇನೆಂದು ವಿಚಾರಿಸಿದಾಗ ಕಂಪನಿಯ ಅಧ್ಯಕ್ಷ ರು ಸ್ವತಃ ಆಡಳಿತ ವಿಜ್ಞಾನದ ತಜ್ಞರಾಗಿದ್ದು, ಕಾರಣ ವಿಷದಪಡಿಸಿದರು. 'ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸುವಾಗ ಅಲ್ಲಿದ್ದ ಡೋರ್ ಮ್ಯಾಟ್ನಲ್ಲಿ ಕಾಲು ಒರೆಸಿಕೊಂಡು ಆತ ಒಳಗೆ ಬಂದ. ಇನ್ನೊಬ್ಬ ಉಮೇದುವಾರನಿಗೆ ತನ್ನ ಪಕ್ಕದಲ್ಲೇ ಕುಳಿತುಕೊಳ್ಳಲು ಅವಕಾಶವಿತ್ತ. ಫ್ಯಾನಿನ ಗಾಳಿಗೆ ಮೇಜಿನ ಮೇಲಿನ ಹೂದಾನಿ ಕೆಳಗೆ ಬಿದ್ದಾಗ, ಉಳಿದವರೆಲ್ಲರೂ ಸುಮ್ಮನಿದ್ದರೆ, ಈತ ಅದನ್ನೆತ್ತಿ ಮೇಜಿನ ಮೇಲಿರಿಸಿದ. ನೂರಾರು ಶಿಫಾರಸು ಪತ್ರ ತಂದವರೆಲ್ಲರೂ ಸುಮ್ಮನಿದ್ದರು. ಅವನ ಸಭ್ಯತೆ, ಸದಾಚಾರ ಅವನ ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ಹತ್ತೇ ಮಿನಿಟುಗಳಲ್ಲಿ ಗುರುತಿಸಿಬಿಟ್ಟಿದ್ದೆ. ಹಾಗಾಗಿ ಆತನೇ ಆಯ್ಕೆಗೆ ಅರ್ಹನೆನಿಸಿದ್ದ' ಎಂದು ನುಡಿದರು. ಪದವಿ, ಪಾಂಡಿತ್ಯ, ವಿದ್ವತ್ತು, ಶಿಫಾರಸು ಪತ್ರಗಳಿದ್ದರೂ ಸರಳತೆ, ಸೌಜನ್ಯ, ಮಾನವೀಯತೆಗಳ ಅಭಾವದಿಂದಾಗಿ ಕೆಲವೊಮ್ಮೆ ಜನರು ಹಿಂದೆ ಬೀಳುತ್ತಾರೆ. ಸಾಕಷ್ಟು ಪ್ರತಿಭೆ, ಕ್ರಿಯಾಶೀಲತೆ, ಪಾಂಡಿತ್ಯಗಳ ಜತೆಗೆ ಮಾನವೀಯತೆ, ಸೌಜನ್ಯಗಳಿದ್ದರೆ ಸುಂದರ ಕುಸುಮಕ್ಕೆ ಸುಗಂಧ ಬಂದಂತೆ ವ್ಯಕ್ತಿಯು ಮನ್ನಣೆ ಪಡೆಯುತ್ತಾನೆ.
ನಿಮಗೆ ಈ ಕಥೆ ಇಷ್ಟವಾದರೆ ಬೇರೆಯವರ ಜೊತೆ ಹಂಚಿ ಕೊಳ್ಳಿ ಮತ್ತು ಪ್ರತಿಕ್ರಿಯಿಸಿ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
ಇದಕ್ಕೆ ಸಿದ್ಧರಾಮೇಶ್ವರ ಶರಣರ ಕೆಳಕಂಡ ವಚನ ಸೂಕ್ತ ಎನಿಸುತ್ತದೆ.
ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ;
ವಚಿಸಿ ಅನುಭವಿಯಾದವ ಪಂಡಿತನಯ್ಯಾ.
ವಿದ್ಯೆಯೆಂಬುದು ಅಭ್ಯಾಸಿಕನ ಕೈವಶ.
ಅವಿದ್ಯೆಯೆಂಬುದು ಸರ್ವರಲ್ಲಿ ವಶ.
ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ,
ಮಹಾಪಂಡಿತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
ವಿದ್ಯೆ ಕಲಿತು ವಿನಯವಂತಿಕೆ ರೂಢಿಸಿಕೊಂಡರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ.
🌎ಶರಣು ವಿಶ್ವವಚನ ಫೌಂಡೇಷನ್🌎
≠======≠======================
15
*🌻ದಿನಕ್ಕೊಂದು ಕಥೆ🌻*
*ದೃಷ್ಟಿ ಬದಲಾದರೆ ದೃಶ್ಯವೂ ಬದಲು*
ಶಾಲಾ ಶಿಕ್ಷಕರೊಬ್ಬರಿಗೆ ಪ್ರತಿದಿನವೂ ದಿನಚರಿ ಬರೆಯುವ ಅಭ್ಯಾಸವಿತ್ತು. ಅದು ಹೊಸವರ್ಷದ ಮೊದಲ ದಿನ. ಹಿಂದಿನ ದಿನವಷ್ಟೇ ಅವರು ವೃತ್ತಿಯಿಂದ ನಿವೃತ್ತಿ ಹೊಂದಿದ್ದರು. ಹೀಗಾಗಿ, ಏನನ್ನೋ ಕಳಕೊಂಡವರಂತೆ ಮನೆಯ ಕೋಣೆಯಲ್ಲಿ ಬೇಸರದಲ್ಲಿ ಕುಳಿತಿದ್ದರು. ಹಾಗೆಯೇ ಒಂದು ಹಾಳೆಯ ಮೇಲೆ ಹೀಗೆ ಬರೆಯಲಾರಂಭಿಸಿದರು: ‘ಕಳೆದ ವರ್ಷ ನನ್ನ ಪಾಲಿಗೆ ಕೆಟ್ಟವರ್ಷವೆಂದೇ ಹೇಳಬೇಕು. ಕಾರಣ, ಈ ಅವಧಿಯಲ್ಲಿ ನನಗೆ ಶಸ್ತ್ರಚಿಕಿತ್ಸೆಯಾಗಿ ಜಠರದಲ್ಲಿದ್ದ ಹುಣ್ಣನ್ನು ತೆಗೆದರು. ಈ ಶಸ್ತ್ರಚಿಕಿತ್ಸೆಯಿಂದಾಗಿ ನಾನು ಬಹಳ ದಿನ ಹಾಸಿಗೆಯಲ್ಲೇ ಇರುವಂತಾಯಿತು. 95 ವರ್ಷ ವಯಸ್ಸಿನ ನನ್ನ ತಂದೆಯವರು ನಿಧನರಾಗಿದ್ದೂ ಕಳೆದ ವರ್ಷವೇ. ಅಪ್ಪ ನಿಧನರಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಕೂಡ ತೀರಿಕೊಂಡರು. ಈ ಮಧ್ಯೆ ಬೈಕ್ ಸವಾರಿ ಮಾಡುತ್ತಿದ್ದ ನನ್ನ ಮಗನಿಗೆ ಅಪಘಾತವಾಗಿ, ಆತ ವಾರ್ಷಿಕ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವಂತಾಯಿತು. ಸಾಲದ್ದಕ್ಕೆ ನನಗೆ ಕೆಲಸದಿಂದ ನಿವೃತ್ತಿಯೂ ಆಯಿತು. ಒಟ್ಟಿನಲ್ಲಿ, ಕಳೆದ ವರ್ಷವಿಡೀ ನನ್ನ ಪಾಲಿಗೆ ಕೆಟ್ಟದಾಗಿತ್ತು…’. ಪತಿಯು ಹೀಗೆ ಕೋಣೆಯಲ್ಲಿ ಒಬ್ಬರೇ ಕಣ್ಣುಮುಚ್ಚಿ ಕುಳಿತು ಚಿಂತಾಕ್ರಾಂತರಾಗಿ ಮನದಲ್ಲೇ ರೋದಿಸುತ್ತಿರುವುದು ಪತ್ನಿಗೆ ಗೋಚರಿಸಿತು. ‘ಇವರೇನು ಮಾಡುತ್ತಿರಬಹುದು?’ ಎಂದುಕೊಂಡು ಸದ್ದಿಲ್ಲದೆ ಪತಿಯ ಕೋಣೆ ಪ್ರವೇಶಿಸಿದ ಆಕೆ, ಹಾಳೆಯ ಮೇಲೆ ಬರೆದಿಟ್ಟಿದ್ದನ್ನು ಸದ್ದಿಲ್ಲದೆ ಓದಿಕೊಂಡರು. ಜತೆಗೆ ಇನ್ನೊಂದು ಹಾಳೆಯಲ್ಲಿ ‘ಒಂದಿಷ್ಟು’ ಬರೆದು ಪತಿಯ ಮುಂದಿಟ್ಟು ಸದ್ದಿಲ್ಲದೆ ಅಡುಗೆ ಕೋಣೆಗೆ ತೆರಳಿದರು.
ಹಾಳೆಯಲ್ಲಿ ಪತ್ನಿ ಬರೆದಿದ್ದು ಹೀಗಿತ್ತು: ‘ಕಳೆದ ವರ್ಷ ಕೊನೆಗೂ ನನ್ನ ಜಠರದ ಹುಣ್ಣಿಗೆ ಶಸ್ತ್ರಚಿಕಿತ್ಸೆ ಆಯಿತು. ಆ ಹುಣ್ಣು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಸಂಭವ ಈ ಮೂಲಕ ತಪ್ಪಿತು ಹಾಗೂ ವರ್ಷಗಳಿಂದ ಅನುಭವಿಸುತ್ತಿದ್ದ ಬೇನೆಗೆ ಅಂತ್ಯ ಹಾಡಿದಂತಾಯಿತು. ಸುದೀರ್ಘ ಬದುಕು ಸಾಗಿಸಿದ, 95 ವರ್ಷ ವಯಸ್ಸಿನ ತಮ್ಮ ತಂದೆ ದೈವಾಧೀನರಾದರು; ಹೆಚ್ಚೇನೂ ನರಳದೆ ಮರೆಯಾದ ಅವರದು ಸುಖಮರಣವೆಂದೇ ಹೇಳಬೇಕು. ಇದಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಕೂಡ ತೀರಿಕೊಂಡರು; ಗಂಡನಿಲ್ಲದೆ ಒಂಟಿಯಾಗಿ ಬಾಳುವ ಪ್ರಮೇಯವನ್ನು ಅಮ್ಮ ತಪ್ಪಿಸಿಕೊಂಡರು. ಬೈಕ್ ಸವಾರಿಗೆ ತೆರಳಿದ್ದ ಮಗನಿಗೆ ಅಪಘಾತವೇನೋ ಆಯಿತು, ಆದರೆ ಅವನು ಬದುಕುಳಿದುಕೊಂಡನಲ್ಲ, ಅಂಗವೈಕಲ್ಯ ಬಾಧಿಸಲಿಲ್ಲವಲ್ಲ ಎಂಬುದು ಅದೆಂಥ ಸಮಾಧಾನ! ನನಗೆ ವೃತ್ತಿಯಿಂದ ನಿವೃತ್ತಿಯಾಯಿತು, ಇದರಿಂದಾಗಿ ಇನ್ನೊಬ್ಬರಿಗೆ ಆ ಸ್ಥಾನವನ್ನು ತುಂಬುವ ಅವಕಾಶ ಸಿಕ್ಕಂತಾಯಿತು. ಅಂತೆಯೇ ನಾನು ನಿವೃತ್ತನಾಗಿದ್ದು ವೃತ್ತಿಯಿಂದಲೇ ಹೊರತು, ಪ್ರವೃತ್ತಿಗಳಿಂದ ಅಲ್ಲವಲ್ಲ! ಇನ್ನು ನನ್ನ ಅಭಿರುಚಿಗೊಪು್ಪವ ಪ್ರವೃತ್ತಿಗಳನ್ನು ಸಂತೋಷದಿಂದ ಪ್ರಾರಂಭಿಸಬಹುದು! ಒಟ್ಟಾರೆ ಹೇಳುವುದಾದರೆ, ಕಳೆದ ವರ್ಷದಲ್ಲಿ ದೇವರ ಅಪಾರ ಕರುಣೆ ನನ್ನ ಮೇಲಿತ್ತು. ವರ್ಷ ಸರಿದಿದ್ದೇ ಗೊತ್ತಾಗಲಿಲ್ಲ ಎನ್ನುವಷ್ಟರ ಮಟ್ಟಿಗೆ ಚೆನ್ನಾಗೇ ಕಳೆಯಿತು ಎನ್ನಬಹುದು…’.
ಈ ಒಕ್ಕಣೆಯನ್ನು ಓದಿದ ಪತಿ, ಮಡದಿಯಿದ್ದಲ್ಲಿಗೆ ತೆರಳಿ ‘ನಿನ್ನ ಗ್ರಹಿಕೆ ನಿಜ’ ಎನ್ನುವ ಧಾಟಿಯಲ್ಲಿ ಮೌನವಾಗಿ ತಲೆಯಾಡಿಸಿ ಮುಗುಳ್ನಗೆ ಬೀರಿದರು. ತಾತ್ಪರ್ಯ ಇಷ್ಟೆ- ಭರವಸೆಯಿಂದ ಬದುಕನ್ನು ಮುನ್ನಡೆಸುವುದಕ್ಕೆ ಸಕಾರಾತ್ಮಕ ಧೋರಣೆಯೇ ಮೂಲಮಂತ್ರ. ಯಾವುದೇ ಸಮಸ್ಯೆ-ಸಂಕಟಗಳನ್ನು ನಾವು ನೋಡುವ ದೃಷ್ಟಿ ಬದಲಾದಂತೆ, ದೃಶ್ಯವೂ ಬದಲಾಗುತ್ತಿರುತ್ತದೆ. ಸಮಾಧಾನದ ಕಿರಣವೂ ಹೊರಹೊಮ್ಮುತ್ತಿರುತ್ತದೆ.
ಈ ಕಥೆ ಓದಿದಾಗ ಕೆಳಕಂಡ ವಚನ ನೆನಪಾಗುತ್ತದೆ
ಭೋಗಕ್ಕೆ ಸಾಧನದ್ರವ್ಯ ಬಂದರೆ ಬೇಗ ಬೇಗ ಸಂಭ್ರಮಿಸುವರು,
ಬಾರದಿರ್ದರೆ ಕಂದುವರು ಕುಂದುವರು.
ಈ [ಉ]ಭಯದ ಸಂದಿನಲ್ಲಿ ಸಿಕ್ಕಿ ದಂದುಗಕ್ಕೊಳಗಾಗಿ
ಸಂದ[ಣಿ]ಗೊಂಬಾತಗೆಂದೆಂದಿಗೂ ಸಂಸಾರ ಬಿಡದು.
ಬೆಂದೊಡಲಿಗೇಕೆ ಈಸು ಸಡಗರವೆಂದಾತ ನಮ್ಮಂಬಿಗರ ಚೌಡಯ್ಯ
🌹ಸಂಗ್ರಹ🌹
🌎ಶರಣು ವಿಶ್ವವಚನ ಫೌಂಡೇಷನ್🌎
-----------------------------------------+------++-++
16
🌹ದಿನಕ್ಕೊಂದು ಕಥೆ🌹
☘ಕಲೆಯ ಬೆಲೆ☘
ಒಮ್ಮೆ ಶ್ರೀಮಂತನೊಬ್ಬ ಪ್ಯಾಬ್ಲೊ ಪಿಕಾಸೋ ಬಳಿ ಬಂದು ತನ್ನ ಚಿತ್ರ ಬಿಡಿಸುವಂತೆ ಹೇಳಿದ. ಜಗತ್ಪ್ರಸಿದ್ಧ ಕಲಾವಿದ ಪಿಕಾಸೋ ಹೇಳಿದ -‘ನಿನ್ನ ಚಿತ್ರ ಬಿಡಿಸಬಲ್ಲೆ. ಆದರೆ ಬಹಳ ದುಬಾರಿಯಾಗುತ್ತದೆ’.ಪಿಕಾಸೋನ ಮಾತು ಕೇಳಿ ಶ್ರೀಮಂತನಿಗೆ ತಲೆ ‘ಧಿಮ್’ಎಂದಿತು. ‘ಅದೆಷ್ಟೇ ಖರ್ಚಾಗಲಿ ನೀನು ತಲೆ ಕೆಡಿಸಿಕೊಳ್ಳಬೇಡ. ಅದು ನನಗೆ ಬಿಟ್ಟಿದ್ದು. ನೀನು ನಿನ್ನ ಹಾಗೇ ಯೋಚಿಸಬೇಡ. ನನ್ನ ಯೋಗ್ಯತೆಯೇನೆಂಬುದು ನಿನಗೇನು ಗೊತ್ತು? ಹೀಗಾಗಿ ಹಣದ ಮಾತಾಡಬೇಡ. ನೀನು ಎಷ್ಟು ಬೇಕಾದರೂ ಕೇಳು, ಕೊಡುತ್ತೇನೆ. ನನ್ನ ಸುಂದರ ಚಿತ್ರ ಬಿಡಿಸಿಕೊಡುವುದಷ್ಟೇ ನಿನ್ನ ಕೆಲಸ’ ಎಂದ ಶ್ರೀಮಂತ ಧಿಮಾಕಿನಿಂದ. ಪಿಕಾಸೋಗೆ ಆತನ ಮಾತು ಕೇಳಿ ಕಿರಿಕಿರಿಯಾಯಿತು. ಆದರೆ ತೋರಿಸಿಕೊಳ್ಳಲಿಲ್ಲ. ‘ಆಯಿತು ನಿಮ್ಮ ಚಿತ್ರ ಬಿಡಿಸಿಕೊಡುತ್ತೇನೆ. ಅದಕ್ಕೆ ಹತ್ತು ಲಕ್ಷ ಡಾಲರ್ ಆಗುತ್ತದೆ. ಆಗಬಹುದೇ?’ಎಂದು ಕೇಳಿದ ಪಿಕಾಸೋ.
ಪಿಕಾಸೋನ ಮಾತು ಕೇಳಿ ಶ್ರೀಮಂತ ಒಂದು ಕ್ಷಣ ಅವಕ್ಕಾದ. ಆತನ ಬಾಯಿಂದ ಮಾತೇ ಹೊರಡಲಿಲ್ಲ. ‘ನೀನು ಜೋಕ್ ಮಾಡುತ್ತಿಲ್ಲವಷ್ಟೇ. ಖಾಲಿ ಕ್ಯಾನ್ವಾಸ್ ಮೇಲೆ ಹತ್ತಾರು ಬಣ್ಣಗಳಿಂದ ನನ್ನ ಚಿತ್ರ ಬಿಡಿಸಲು ಹತ್ತು ಲಕ್ಷ ಡಾಲರ್ ಖರ್ಚಾಗುವುದೇ? ನಿನಗೇನು ಬುದ್ಧಿ ನೆಟ್ಟಗಿದೆಯಾ? ನನ್ನನ್ನು ಏನಂಥ ಭಾವಿಸಿದ್ದೀಯಾ? ಹಣ ಮಾಡಲಿಕ್ಕೆ ಒಂದು ಮಿತಿ ಇಲ್ಲವಾ?’ಎಂದು ಶ್ರೀಮಂತ ದಬಾಯಿಸಲಾರಂಭಿಸಿದ. ಪಿಕಾಸೋ ಮಾತಾಡಲಿಲ್ಲ. ಆತ ಹೇಳುವುದನ್ನೇ ಕೇಳುತ್ತಿದ್ದ. ಸುಮಾರು ಇಪ್ಪತ್ತು ನಿಮಿಷ ಬಡಬಡಾಯಿಸಿದ ಬಳಿಕ ಶ್ರೀಮಂತನೂ ಸುಮ್ಮನಾದ. ಆಗ ಪಿಕಾಸೋ ಹೇಳಿದ- ‘ನನ್ನ ಚಿತ್ರ ನೋಡದೇ ನೀನು ಅದಕ್ಕೆ ಬೆಲೆ ಕಟ್ಟಬೇಡ. ಚಿತ್ರ ನೋಡಿದ ಬಳಿಕವೂ ನಿನ್ನ ಅಭಿಪ್ರಾಯ ಇದೇ ಆಗಿದ್ದರೆ ಅಭ್ಯಂತರವಿಲ್ಲ. ಆದರೆ ನಾನು ಮಾತ್ರ ನಿಮ್ಮ ಬೆಲೆ ಎಷ್ಟು, ಯೋಗ್ಯತೆ ಎಷ್ಟು ಎಂಬುದನ್ನು ನಿರ್ಧರಿಸಿದೆ’.
ಶ್ರೀಮಂತನಿಗೆ ತನ್ನ ತಪ್ಪಿನ ಅರಿವಾಯಿತು. ಪಿಕಾಸೋನ ಕ್ಷಮೆ ಯಾಚಿಸಿದ. ‘ನೀನು ಕಲಾವಿದ ಮಾತ್ರ ಅಲ್ಲ, ಹೃದಯವಂತ ಕೂಡ ಹೌದು’ಎಂದ ಶ್ರೀಮಂತ. ಅದಕ್ಕೆ ಪಿಕಾಸೋ ಹೇಳಿದ-‘ಹೃದಯವಂತನಾಗದಿದ್ದರೆ ಕಲಾವಿದನಾಗಲು ಸಾಧ್ಯವಿಲ್ಲ’.ಅದಾದ ಬಳಿಕ ಪಿಕಾಸೋ ಶ್ರೀಮಂತನ ಚಿತ್ರ ಬಿಡಿಸಿದ. ಆ ಚಿತ್ರ ನೋಡಿ ಶ್ರೀಮಂತನಿಗೆ ಅತೀವ ಆನಂದವಾಯಿತು. ಪಿಕಾಸೋ ಎಂಥ ಸೊಗಸಾದ ಕಲಾವಿದನೆಂಬುದು ಅವನಿಗೆ ಮನವರಿಕೆಯಾಯಿತು. ಖುಷಿಯಿಂದ ಹಣ ತೆಗೆದುಕೊಂಡು ಬರಲು ಒಳಮನೆಗೆ ಹೋದ. ಶ್ರೀಮಂತ ಹೊರ ಬರುವಷ್ಟರಲ್ಲಿ ಪಿಕಾಸೋ ಹೊರಟು ಹೋಗಿದ್ದ!
ನಿಮಗೆ ಈ ಕಥೆ ಇಷ್ಟವಾದರೆ ಬೇರೆಯವರ ಜೊತೆ ಹಂಚಿ ಕೊಳ್ಳಿ ಮತ್ತು ಪ್ರತಿಕ್ರಿಯಿಸಿ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
ಈ ಕಥೆ ಓದಿದರೆ ಅಲ್ಲಮಪ್ರಭುದೇವರ ಈ ವಚನ ನೆನಪಾಯಿತು
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ
ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು.
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ.
🌎ಶರಣು ವಿಶ್ವವಚನ ಫೌಂಡೇಷನ್🌎
...............................................
17
🌹ದಿನಕ್ಕೊಂದು ಕಥೆ🌹
☘ಬದುಕಿಗೂ ಸಾವಿಗೂ ಎನಿತು ಅಂತರವಿದೆ ಹೇಳಿ ನೋಡೋಣ?☘
ಕುತೂಹಲಕಾರಿಯಾದ ಪ್ರಶ್ನೆ! ಬದುಕಿಗೂ ಸಾವಿಗೂ ಎಷ್ಟು ಅಂತರ ಗೊತ್ತೇ? ನಮ್ಮ-ನಿಮ್ಮ ಉತ್ತರವೇನೇ ಇರಲಿ. ಪ್ರಖ್ಯಾತ ಕಾದಂಬರಿಕಾರ ವಿಲ್ಲಿಯಮ್ ಕ್ಲಾರ್ಕ್ ಸ್ಟೈರನ್ ಅವರ ಪ್ರಕಾರ ಆ ಅಂತರ ಕೆಲವೇ ನಿಮಿಷಗಳು! ಆ ಕೆಲವು ನಿಮಿಷಗಳಲ್ಲಿ ವ್ಯಕ್ತಿ ಸಾವಿನತ್ತ ಸರಿಯಬಹುದು ಅಥವಾ ಬದುಕಿಗೆ ಮರಳಬಹುದು. ಇದಕ್ಕವರು ತಮ್ಮದೇ ಬದುಕಿನ ಘಟನೆಯನ್ನು ವಿವರಿಸುತ್ತಾರೆ. 1925ರಲ್ಲಿ ಜನಿಸಿದ ಸ್ಟೈರನ್ ಅವರು ತಮ್ಮ 25ನೆ ವಯಸ್ಸಿನಲ್ಲಿ ಮೊದಲ ಕಾದಂಬರಿ ‘ಲೈ ಡೌನ್ ಇನ್ ಡಾರ್ಕ್ನೆಸ್’ಬರೆದರು. ಅದು ಬಹಳ ಜನಪ್ರಿಯವಾಯಿತು.
ಒಳ್ಳೆಯ ಹೆಸರು, ಹಣ ತಂದುಕೊಟ್ಟಿತು. ಆನಂತರ ಅವರು ಅನೇಕ ಕಾದಂಬರಿಗಳನ್ನು ಬರೆದರು. ಪ್ರಶಸ್ತಿಗಳನ್ನೂ, ಪ್ರಖ್ಯಾತಿಯನ್ನೂ ಪಡೆದರು. ರೋಸ್ ಬರ್ಗಂಡರ್ ಎಂಬಾಕೆಯನ್ನು ಮದುವೆಯಾಗಿದ್ದ ಅವರಿಗೆ ಸುಖಸಂಸಾರವಿತ್ತು. ಸಾಕಷ್ಟು ಸಿರಿ-ಸಂಪತ್ತುಗಳಿದ್ದವು. ಬೇಕಾದಷ್ಟು ಕೀರ್ತಿಯೂ ಇತ್ತು. ಆದರೆ ಇದ್ದಕ್ಕಿದ್ದಂತೆ ಅವರಿಗೆ ಮಾನಸಿಕ ತಳಮಳ ಆರಂಭವಾಯಿತು. ನಾನಿನ್ನು ಬದುಕಿನಲ್ಲಿ ಸಾಧಿಸುವುದೇನಿದೆ? ಬದುಕೆಂಬುದು ಅರ್ಥಹೀನವಾದ ಇಲಿಗಳ ಓಟದ ಸ್ಪರ್ಧೆ ಎನಿಸಹತ್ತಿತು. ತೀವ್ರ ಖಿನ್ನತೆಗೆ ಒಳಗಾದರು. ಖಿನ್ನತೆಯ ಆಳಕ್ಕಿಳಿಯುತ್ತ ಹೋದರು. ಯಾವುದೋ ಆಳವಾದ ಬಾವಿಯಲ್ಲಿ ಬಿದ್ದಂತೆ ಅನಿಸುತ್ತಿತ್ತು. ಬಿಡುಗಡೆ ಬೇಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಮಾರ್ಗ ಎಂಬ ಯೋಚನೆ ಅವರನ್ನು ಕಾಡತೊಡಗಿತು. ಊಟ-ನಿದ್ರೆ -ಸಂಸಾರಗಳಲ್ಲಿ ಆಸಕ್ತಿ ಕಡಿಮೆಯಾಯಿತು.
ಕೊನೆಗೊಂದು ಡಿಸೆಂಬರಿನ ಚಳಿಗಾಲದ ರಾತ್ರಿ ಮಡದಿ-ಮಕ್ಕಳೊಂದಿಗೆ ಮಲಗಿದ್ದಾಗ ಅವರನ್ನು ಈ ಅನಿಸಿಕೆ ಎಷ್ಟು ಕಾಡಿತೆಂದರೆ ಆತ್ಮಹತ್ಯಾ ಪತ್ರ ಬರೆದಿಡಬೇಕೆನಿಸಿತು. ಉರುಳು ಹಾಕಿಕೊಳ್ಳುವುದು, ವಿಷಾನಿಲ ಸೇವನೆ ಅಥವಾ ರೈಲಿಗೋ-ಬಸ್ಸಿಗೋ ತಲೆಯೊಡ್ಡುವುದು ಮುಂತಾದ ಆತ್ಮಹತ್ಯಾ ಮಾರ್ಗಗಳು ಅವರ ಮನಸ್ಸಿಗೆ ಬರತೊಡಗಿದವು. ಅವರು ನಿಶ್ಶಬ್ದವಾಗಿ ಎದ್ದು ಮಲಗುವ ಕೋಣೆಯ ಬಾಗಿಲಲ್ಲಿ ಬಂದು ನಿಂತರು. ಒಳಗೆ ಅವರ ಪ್ರೀತಿಯ ಮಡದಿ-ಮುದ್ದಾದ ಮಕ್ಕಳು ಮುಗ್ಧರಾಗಿ ಮಲಗಿದ್ದರು. ಆಗ ಅವರ ಮನಸ್ಸಿನ ಪರದೆಯ ಮೇಲೆ ಮನೆಯಲ್ಲಿ, ಹಜಾರದಲ್ಲಿ ನಡೆದ ಎಲ್ಲ ಘಟನೆಗಳು ಹಾದುಹೋದವು. ಶುಭಸಮಾರಂಭಗಳು ಪ್ರೀತಿ-ಪ್ರೇಮದ ಮೋಜಿನ ದಿನಗಳು, ಮಕ್ಕಳ ಮುದ್ದಾಟ, ಅಭಿಮಾನಿಗಳ ಮಾತುಗಳು ಹಾದುಹೋದವು.
ಹಾಗೆಯೇ ಇಂದು ಆತ್ಮಹತ್ಯೆ ಮಾಡಿಕೊಂಡರೆ ಮುಂದೆ ಕುಟುಂಬದವರು ಪಡುವ ಪರಿಪಾಟಲುಗಳು, ಸಮಾಜದ ಅವಹೇಳನಗಳು ಮನಸ್ಸಿನಲ್ಲಿ ಹೊಳೆದವು. ತನ್ನೊಂದು ನಿರ್ಧಾರದಿಂದ ಮಡದಿ-ಮಕ್ಕಳು ಈ ಕಷ್ಟವನ್ನನುಭವಿಸಬೇಕೆ? ಎನಿಸಿತು. ತಕ್ಷಣ ಅದೆಲ್ಲ ಬೇಡ, ತಾನು ಬದುಕಬೇಕೆಂಬ ತೀರ್ಮಾನಕ್ಕೆ ಬಂದರು. ಅವರ ಮಾತಿನಲ್ಲೇ ಹೇಳುವುದಾದರೆ ‘ನಾನು ಸಾವಿನಿಂದ ಬದುಕಿನತ್ತ ಬಂದದ್ದು ಕೆಲವೇ ನಿಮಿಷಗಳಲ್ಲಿ!’.ಮರುದಿನ ಬೆಳಗ್ಗೆ ವೈದ್ಯರ ಬಳಿ ಹೋದರು. ಆಗ ಅವರಿಗೆ ತಮ್ಮನ್ನು ಕಾಡುತ್ತಿದ್ದ ಮಾನಸಿಕ ನೋವಿನ ಹೆಸರು ‘ತೀವ್ರ ಖಿನ್ನತೆ’(ಡಿಪ್ರೆಷನ್) ಎಂದೂ, ಅದಕ್ಕೆ ಚಿಕಿತ್ಸೆ ಇದೆಯೆಂದೂ ಗೊತ್ತಾಯಿತು. 2 ತಿಂಗಳ ಕಾಲ ಸೂಕ್ತ ಚಿಕಿತ್ಸೆ ಪಡೆದರು. ಖಿನ್ನತೆಯಿಂದ ಹೊರಬಂದರು. ಆನಂತರ ಅವರು ಮತ್ತೆ ಮೊದಲಿಗಿಂತ ಹೆಚ್ಚು ಯಶಸ್ವಿಯಾದರು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದರು. ಅವರ ಇತರ ಕಾದಂಬರಿಗಳೆಂದರೆ ಸೋಫೀಸ್ ಚಾಯ್ಸ್, ಕನ್ಫೆಷ್ಸ್ ಆಫ್ ನ್ಯಾಟ್ ಟರ್ನರ್ ಇತ್ಯಾದಿ. 2006ರ ನವೆಂಬರ್ವರೆಗೂ ಸಾರ್ಥಕ ಬದುಕು ನಡೆಸಿದರು.
ಈಗ ಬದುಕಿಗೂ ಸಾವಿಗೂ ಎನಿತು ಅಂತರ ಎಂಬ ಪ್ರಶ್ನೆಗೆ ಕೆಲವೇ ನಿಮಿಷಗಳೆಂಬ ಉತ್ತರ ಗೊತ್ತಾಯಿತಲ್ಲವೇ? ಮತ್ತೊಂದು ವಿಷಯವೇನು ಗೊತ್ತೇ? ಇಂಥ ವೈದ್ಯಕೀಯ ಖಿನ್ನತೆ ಎಂಥ ಆರೋಗ್ಯವಂತರಿಗೂ ಬರಬಹುದಂತೆ! ವಿಶ್ವಾದ್ಯಂತ 350 ದಶಲಕ್ಷ ಜನರು ಒಂದಲ್ಲಾ ಒಂದು ಕಾರಣದಿಂದ ಖಿನ್ನತೆಗೆ ಒಳಗಾಗುತ್ತಾರಂತೆ. ಆದರೆ ಅದಕ್ಕೆ ಗಾಬರಿಯಾಗ ಬೇಕಿಲ್ಲ. ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಮನಸ್ಸಿಗೆ ನಾವೇ ಬುದ್ಧಿ ಹೇಳಿಯೋ, ವೈದ್ಯರನ್ನು ಕಂಡು ಆಪ್ತಸಲಹೆ, ಚಿಕಿತ್ಸೆ ಪಡೆದು ಸಾರ್ಥಕ ಬದುಕನ್ನು ಮುಂದುವರಿಸಬಹುದು!
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
ಈ ಕಥೆ ಓದಿದಾಗ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮರವರ ಈ ವಚನ ನೆನಪಿಗೆ ಬರುತ್ತದೆ
ಈ ಪರಂಜ್ಯೋತಿ ಪ್ರಕಾಶವಾದ ಬೆಳಗ
ನೋಡಿ ನೋಟವ ಮರೆದೆ, ಕೂಡಿ ಕೂಟವ ಮರೆದೆ.
ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ನಾನು ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
🌎ಶರಣು ವಿಶ್ವವಚನ ಫೌಂಡೇಷನ್🌎
........................................................................

ದಿನಕ್ಕೊಂದು ಕಥೆ
ಪಾರ್ಸಲ್ಲು ಬಂದಿದೆ, ಹನುಮಪ್ಪನೇ ಕಳುಹಿಸಿದ ಪಾರ್ಸಲ್ಲು.
ಏನಿದು ಪಾರ್ಸಲ್? ಹನುಮಪ್ಪ ಏಕೆ ಪಾರ್ಸಲ್ ಕಳುಹಿಸಿದರು ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಇಲ್ಲಿರುವ ಕುತೂಹಲಕಾರಿ ಕಾಲ್ಪನಿಕ ಕತೆ ಓದಬೇಕು! ಒಂದು ಬಡ ಸಂಸಾರ. ಅಪ್ಪ, ಅಮ್ಮ ಮತ್ತು ಆರು ಜನ ಹೆಣ್ಣುಮಕ್ಕಳು. ಕೂಲಿ ಕೆಲಸ. ಸಣ್ಣ ಗುಡಿಸಿಲಿನಲ್ಲಿ ವಾಸ. ಕೂಲಿಯಿಲ್ಲದ ದಿನ ಎಲ್ಲರೂ ಉಪವಾಸ. ಐದು ವರ್ಷದ ಅಮ್ಮಿ ಕೊನೆಯ ಹೆಣ್ಣುಮಗಳು. ತುಂಬಾ ಚೂಟಿ. ಒಂದು ರಾತ್ರಿ ಅಪ್ಪ, ಅಮ್ಮನ ಮಾತು ಕೇಳಿಸಿತು. ಅಮ್ಮ ‘ನಾಳೆಯೋ, ನಾಡಿದ್ದೋ ನನಗೆ ಹೆರಿಗೆಯಾಗುತ್ತೆ. ಇದಾದರೂ ಗಂಡು ಮಗುವಾದರೆ, ಆಪರೇಶನ್ ಮಾಡಿಸಿಕೊಂಡು ಬಿಡಬೇಕು. ಹೆಣ್ಣಾದರೆ ಬಟ್ಟೆಬರೆ ಯೋಚನೆಯಿಲ್ಲ.
ಹಳೇ ಬಟ್ಟೆಗಳಿವೆ. ಗಂಡಾದರೆ ನಮ್ಹತ್ರ ಗಂಡುಮಕ್ಕಳ ಬಟ್ಟೆಗಳಿಲ್ಲ. ಗಂಡು ಮಗೂಗೆ ಇನ್ನೂ ಏನೇನು ಬೇಕೋ? ನಮ್ಹತ್ರ ಏನೂ ಇಲ್ಲ’ ಎಂದಾಗ, ಅಪ್ಪ ‘ಚಿಂತೆ ಮಾಡ್ಬೇಡ. ಗುಡ್ಡದ ಹನುಮಂತರಾಯನ್ನ ಕೇಳಿಕೊಳ್ಳೋಣ’ ಎಂದರು. ಇದೆಲ್ಲವನ್ನು ಕೇಳಿಸಿಕೊಂಡ ಅಮ್ಮಿ ಮುಂಜಾನೆಯೇ ಎದ್ದಳು. ಊರ ಹತ್ತಿರವೇ ಒಂದು ಗುಡ್ಡ. ಅದರ ಮೇಲೊಂದು ಕಲ್ಲಿನ ಮಂಟಪ. ಅದರೊಳಗೆ ಹನುಮಂತನ ಚಿತ್ರ ಬರೆದಿದ್ದ ಒಂದು ಕಲ್ಲು ಚಪ್ಪಡಿ. ಜನ ಅದನ್ನೇ ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಅಮ್ಮಿ ಬಡಬಡನೆ ಗುಡ್ಡವೇರಿದಳು. ಅಷ್ಟು ಹೊತ್ತಿನಲ್ಲಿ ಅಲ್ಲಿ ಯಾರೂ ಕಾಣಲಿಲ್ಲ. ಆಕೆ ದೇವರ ಮುಂದೆ ಹೋಗಿ ಕೈಮುಗಿದುಕೊಂಡು ಕಣ್ಣು ಮುಚ್ಚಿಕೊಂಡು ‘ಹನುಮಂತಪ್ಪ! ನಾಳೆ ನಾಡಿದ್ದರಲ್ಲಿ ನಮ್ಮನೇಗೆ ಒಂದು ಗಂಡುಮಗು ಬರುತ್ತಂತೆ.
ಅದಕ್ಕೆ ಒಳ್ಳೆಯ ಬಟ್ಟೆಗಳು ಮತ್ತು ಇನ್ನೂ ಏನೇನೋ ಬೇಕಂತೆ. ಅವ್ಯಾಾವೂ ನಮ್ಮನೇಲಿಲ್ಲವಂತೆ. ನಿನ್ನನ್ನು ಕೇಳಿಕೋಬೇಕು ಅಂತ ನಮ್ಮಪ್ಪ ಹೇಳುತ್ತಿದ್ದರು. ನಮ್ಮ ಗುಡಿಸಿಲು ಗುಡ್ಡದ ಪಕ್ಕದಲ್ಲಿದೆ. ನಮ್ಮಪ್ಪನ ಹೆಸರು ಕೂಲಿಯಪ್ಪ. ದಯವಿಟ್ಟು ಬೇಗ ಕಳ್ಸಿಕೊಡು’ ಎಂದು ಪ್ರಾರ್ಥಿಸಿ ಕೆಳಗಿಳಿದು ಬಂದಳು. ಅಮ್ಮಿ ದಿನವೆಲ್ಲ ಗುಡಿಸಿಲಿನಲ್ಲೇ ಕುಳಿತಿದ್ದಳು. ರಸ್ತೆಯ ಕಡೆಯೇ ಗಮನ. ಮಧ್ಯಾಹ್ನವಾಯಿತು. ಸಾಯಂಕಾಲವೂ ಆಯಿತು. ಏನೂ ಬರಲಿಲ್ಲ. ಅಮ್ಮಿಗೆ ನಿರಾಸೆ. ‘ನಮ್ಮ ಗುಡಿಸಿಲು ಗುಡ್ಡದಪ್ಪನಿಗೆ ಗೊತ್ತಾಗಲಿಲ್ಲವೇನೋ’ ಎಂದು ಚಿಂತಿಸುತ್ತಿದ್ದಳು. ಅಷ್ಟರಲ್ಲಿ ಯಾರೋ ಬಂದು ಕೂಲಿಯಪ್ಪನನ್ನು ಕರೆದು ‘ನಿಮಗೆ ಯಾರೋ ಹನುಮಂತಪ್ಪ ಅನ್ನೋರು ಪಾರ್ಸಲ್ ಕಳಿಸಿದ್ದಾರೆ ತೆಗೊಳ್ಳಿ’ ಎಂದರು.
ಕೂಲಿಯಪ್ಪ ‘ಯಾರೋ ಪಾರ್ಸಲ್ ಕಳಿಸುವಷ್ಟು ದೊಡ್ಡೋರು ನಾವಲ್ಲ. ಯಾವ ಹನುಮಂತರಾಯರೂ ನಮಗೆ ಗೊತ್ತಿಲ್ಲ. ನಮಗಿದು ಬೇಡ’ ಎಂದಾಗ, ಅಮ್ಮಿ ಓಡಿ ಬಂದು ನೀವದನ್ನು ಈಸ್ಕೊಳ್ಳಿ ಎಂದು ದುಂಬಾಲು ಬಿದ್ದಳು. ಕೂಲಿಯಪ್ಪ ಅಮ್ಮಿಯತ್ತ ವಿಚಿತ್ರವಾಗಿ ನೋಡಿ ಪಾರ್ಸಲ್ ಪಡೆದುಕೊಂಡ. ಒಡೆದು ನೋಡಿದ. ಒಳಗೆ ಗಂಡುಮಗುವಿನ ಬಟ್ಟೆಗಳು, ಟೋಪಿ, ಕಾಲ್ಚೀಲಗಳು, ಮಕ್ಕಳ ಪೌಡರ್ ಮುಂತಾದವೆಲ್ಲ ಇದ್ದವು. ಮನೆಯವರೆಲ್ಲರೂ ಇದನ್ನು ಕಳಿಸಿದವರು ಯಾರಂತ ಗೊತ್ತಾಗಲಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದಾಗ, ಅಮ್ಮಿ ಮಾತನಾಡಲಿಲ್ಲ. ಏಕೆಂದರೆ ಪಾರ್ಸಲ್ ಕಳಿಸಿದವರು ಯಾರೆಂದು ಅವಳಿಗೆ ಮಾತ್ರ ಗೊತ್ತಿತ್ತು. ಆದರೆ ನಿಜವಾಗಿ ಕಳಿಸಿದವರು ಅಮ್ಮಿ ಅಂದುಕೊಂಡವರಲ್ಲ!
ಬೆಳಗ್ಗೆ ಅಮ್ಮಿ ಹನುಮಂತನ ಮುಂದೆ ಕಣ್ಮುಚ್ಚಿ ಬೇಡಿಕೊಳ್ಳುತ್ತಿದ್ದಾಗ ಅಲ್ಲಿಗೆ ಶ್ರೀಮಂತರೊಬ್ಬರು ಬೆಳಗಿನ ವಾಯು ವಿಹಾರಕ್ಕೆಂದು ಬಂದಿದ್ದರು. ಎಲ್ಲವನ್ನೂ ಕೇಳಿಸಿಕೊಂಡಿದ್ದರು. ಅಮ್ಮಿ ಅವರನ್ನು ಗಮನಿಸಿರಲಿಲ್ಲ. ಅವರು ಆಕೆಯ ಮುಗ್ಧನಂಬಿಕೆಯನ್ನು ಕಂಡು ಮಗುವಿನ ನಂಬಿಕೆ ಸುಳ್ಳಾಗಬಾರದೆಂದು ಪಾರ್ಸಲನ್ನು ಹನುಮಂತರಾಯನ ಹೆಸರಿನಲ್ಲಿ ಕಳಿಸಿದ್ದರು! ಅವರಿಗೆ ಹಣದ ಶ್ರೀಮಂತಿಕೆಯೊಂದಿಗೆ ಹೃದಯ ಶ್ರೀಮಂತಿಕೆಯೂ ಇತ್ತು! ಬದುಕಿನಲ್ಲಿ ನಮಗೆ ಮುಗ್ಧನಂಬಿಕೆ ಇರಬೇಕು! ಅಥವ ಹೃದಯ ಶ್ರೀಮಂತಿಕೆ ಇರಬೇಕು! ದೇವರು ಇವೆರಡನ್ನೂ ಒಂದು ಕಡೆ ಸೇರಿಸಬೇಕು! ಆಗ ಪವಾಡ ನಡೆಯಲೇಬೇಕು!
---------------------
ದಿನಕ್ಕೊಂದು ಕಥೆ
ಪಾತ್ರಧಾರಿಯ ದ್ವಂದ್ವ
ಇದು ಸಮೀರಣ ಕ್ಷೇತ್ರಿಯವರು ಬರೆದ ಅದ್ಭುತ ನೇಪಾಳೀ ಕಥೆ. ಸಿಕ್ಕಿಂನ ಬಜಾರಿನಲ್ಲಿ ರಾಮಲೀಲಾ ನಡೆಯುತ್ತಿತ್ತು. ಬಿದಿರಿನ ಕಂಬಗಳಿಗೆ ತೂಗುಹಾಕಿದ ಪೆಟ್ರೋಮ್ಯಾಕ್ಸ್ ದೀಪದ ಬೆಳಕಿನಲ್ಲಿ ನಾಟಕ ಅದ್ಭುತವಾಗಿ ಕಾಣುತ್ತಿತ್ತು. ರಂಗದ ಸುತ್ತಮುತ್ತ ನೂರಾರು ಜನ ಕುಳಿತಿದ್ದಾರೆ. ಗಂಡಸರು, ಹೆಂಗಸರು ಆಗಾಗ ಬಾಯಿಯಲ್ಲಿ ತಂಬಾಕು ತುಂಬಿಕೊಳ್ಳುತ್ತಾರೆ. ಪಕ್ಕದ ಭಟ್ಟಿಯ ಅಂಗಡಿಯಲ್ಲಿ ತಿನಿಸುಗಳ ಮಾರಾಟ ಭರಾಟೆಯಿಂದ ನಡೆದಿದೆ. ರಾಮಲೀಲಾ ನಡೆದು ತಿಂಗಳು ಮೇಲಾಯಿತು. ಮಿಂಚುವ ಬೆಳಕಿನಲ್ಲಿ ಪಾತ್ರಧಾರಿಗಳ ಬಟ್ಟೆಗಳು ಇನ್ನಷ್ಟು ಮಿಂಚುತ್ತಿದ್ದವು.
ಆಯೋಧ್ಯೆಯಲ್ಲಿ ರಾಮ ಗಂಭೀರವಾಗಿ ಕುಳಿತಿದ್ದಾನೆ, ಭರತ, ಶತ್ರುಘ್ನರು ಅಳುತ್ತಿದ್ದಾರೆ. ಲಕ್ಷ್ಮಣ ಎದೆ ಬಡಿದುಕೊಂಡು ಅತ್ತು ಎಚ್ಚರ ತಪ್ಪಿ ಬೀಳುತ್ತಾನೆ. ಹನುಮಂತ ಹೋರಾಡಿ ಅಳುತ್ತಾನೆ. ಇನ್ನೊಂದೆಡೆಗೆ ಸೀತಾಮಾತೆ ಕಾಡಿನಲ್ಲಿ ಒಬ್ಬಳೇ ಕುಳಿತು ಅಳುತ್ತಾಳೆ, ವಿರಹ ಗೀತೆ ಹಾಡುತ್ತಾಳೆ. ಅಗಸನ ಮಾತು ಕೇಳಿ ಸೀತಾಮಾತೆಯನ್ನು ಕಾಡಿಗೆ ಕಳುಹಿಸಿದ ರಾಮನನ್ನು ಜನ ಶಪಿಸುತ್ತಾರೆ. ಸೀತೆಯ ದುಃಖ ಎಲ್ಲರನ್ನು ತಟ್ಟುತ್ತಿದೆ. ಸೀತೆಯ ಆಲಾಪದಲ್ಲಿ ಆರ್ತತೆ ಇದೆ. ಆಕೆಯನ್ನು ರಂಗದ ಮೇಲೆ ನೋಡಿದೊಡನೆ ಎಲ್ಲರೂ ಇದ್ದಲ್ಲಿಂದಲೇ ನಮಸ್ಕರಿಸುತ್ತಾರೆ.
ನಾಟಕ ಮುಗಿದ ಮೇಲೆ ಸೀತೆಯ ಪಾತ್ರಧಾರಿ ಶಿವಪೂಜನ ಕೆಳಗೆ ಬಂದೊಡನೆ ಅವನನ್ನು ನೂರಾರು ಮಹಿಳೆಯರು ಮುತ್ತಿಕೊಳ್ಳುತ್ತಾರೆ. ಪ್ರತಿಯೊಬ್ಬ ಮಹಿಳೆ ಬಂದು ಶಿವಪೂಜನನ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಆಗ ಅತ ತನ್ನ ಕ್ಷತ್ರಿಮ ಬೈತಲೆಗೆ ಹಚ್ಚಿಕೊಂಡಿದ್ದ ಕುಂಕುಮವನ್ನು ಮುಟ್ಟಿ ಮಹಿಳೆಯ ಹಣೆಗೆ ಹಚ್ಚಿ, ಒಳ್ಳೆಯದಾಗಲಿ ಎನ್ನುತ್ತಾನೆ. ಅವರಿಗೆ ಧನ್ಯತೆಯ ಭಾವ. ಮೊದಮೊದಲು ಶಿವಪೂಜನನಿಗೆ ಇದು ತುಂಬ ಇಷ್ಟವಾಗುತ್ತಿತ್ತು. ಮಹಿಳೆಯರು ಇವನನ್ನು ತಾಯಿಯೆಂದು ನಂಬಿದಂತೆ ತಾನೂ ದೇವಿಯೆಂದೇ ತಿಳಿಯುತ್ತಿದ್ದ. ಆದರೆ ಇತ್ತೀಚಿಗೆ ಅವನಿಗೆ ಬಹಳ ಇರುಸುಮುರಿಸಾಗುತ್ತಿತ್ತು.
ಶಿವಪೂಜನ ರಾಮಲೀಲಾ ಮಂಡಳಿಗೆ ಸೇರಿದ್ದು ಪಾತ್ರೆ ತೊಳೆಯಲಿಕ್ಕೆ. ಹುಡುಗಿಯ ತರವೇ ಮುಖವಿದ್ದ ಈತ ನಾಟಕನೋಡಿ ನೋಡಿ ಸೀತೆಯ ಎಲ್ಲ ಹಾಡುಗಳನ್ನು ಕಂಠಪಾಠ ಮಾಡಿಕೊಂಡಿದ್ದ. ಪಾತ್ರೆ ತೊಳೆಯುವಾಗ ಅವುಗಳನ್ನು ಹಾಡಿಕೊಳ್ಳುತ್ತಿದ್ದ. ಇದನ್ನು ಕೇಳಿಸಿಕೊಂಡ ಮಾಲಿಕ ಇವನಿಗೆ ಪ್ರಮೋಶನ್ ಕೊಟ್ಟು ಸೀತೆಯನ್ನಾಗಿ ಮಾಡಿದ್ದ.
ನಾಟಕದ ಸೀತೆ ಶಿವಪೂಜನನಲ್ಲಿ ಎಷ್ಟು ಆವಾಹನೆ ಮಾಡಿದಳೆಂದರೆ ಇವನು ಸದಾಕಾಲ ಮಾತನಾಡಿದರೂ ಸೀತೆಯ ದುಃಖದ ಹಾಡುಗಳೇ ಬರುತ್ತಿದ್ದವು. ಬಾಲಿ ಎಂಬ ಹುಡುಗಿ ಈತನನ್ನು ಮದುವೆಯಾದಳು. ಆದರೆ ಒಂದು ತಿಂಗಳು ಕೂಡ ಇವನೊಡನೆ ಬದುಕಲಾಗಲಿಲ್ಲ. ಆಕೆ ಇವನನ್ನು ಅಪ್ಪಿಕೊಂಡಾಗಲೆಲ್ಲ ಇವನ ಬಾಯಿಂದ ಬಂದ ವಿರಹಗೀತೆಗಳು ಅವಳಿಗೆ ಭಾರೀ ಸಿಟ್ಟು ತರಿಸುತ್ತಿದ್ದವು. ಒಂದು ದಿನ ಆಕೆ ರೋಷದಿಂದ ನೀನು ಗಂಡಸೇ ಅಲ್ಲ ಎಂದು ಹೇಳಿ ಬಳೆ ಒಡೆದುಕೊಂಡು ಹೋಗಿಯೇ ಬಿಟ್ಟಳು. ಪಾತ್ರ ಮಾಡುವ ಸೀತೆ ಹಾಗೂ ಗಂಡಸಾಗಿದ್ದ ಶಿವಪೂಜನನ ನಡುವೆ ಪ್ರತಿಕ್ಷಣ ಸಂಘರ್ಷ ನಡೆದು ಕೊನೆಗೆ ಸೀತೆಯೇ ಗೆಲ್ಲುತ್ತಿದ್ದಳು.
ಒಂದು ದಿನ ನಾಟಕ ಮುಗಿಸಿ ಹೊರಗೆ ಬಂದು ಬಟ್ಟೆ ಬಿಚ್ಚಿ ಬೀಡಿ ಸೇದುತ್ತಾ ಕುಳಿತಾಗ ಮಹಿಳೆಯರಿಬ್ಬರು ಬಂದರು. ಒಬ್ಬಳು ಹಿರಿಯಳು ಮತ್ತೊಬ್ಬಳು ಸುಂದರ ತರುಣಿ. ಇವನ ಕಾಲು ಮುಟ್ಟಿ ನಮಸ್ಕಾರ ಮಾಡಿದಾಗ ಎಂದಿನಂತೆ ಹುಡುಗಿಯ ಹಣೆಗೆ ಕುಂಕುಮ ಹಚ್ಚಲು ಹೋದಾಗ ಹಿರಿಯಳು, ಬೇಡ, ಆಕೆ ವಿಧವೆ ಎಂದಳು. ಮದುವೆಯಾದ ಮರುದಿನವೇ ಗಂಡ ಸತ್ತ ಹುಡುಗಿ. ಯಾರೂ ಆಕೆಯನ್ನು ಮದುವೆಯಾಗುವುದಿಲ್ಲವಂತೆ. ಶಿವಪೂಜನನಿಗೆ ತನ್ನ ದ್ವಂದ್ವಮಯವಾದ ಬದುಕಿನ ಬಗ್ಗೆ ಹೇಸಿಗೆ ಬಂದಿತು. ಹೋಗಿ ಯಜಮಾನನಿಗೆ ಹೇಳಿದ, ನನಗೆ ಸೀತೆಯ ಪಾತ್ರ ಸಾಕು. ಅಲ್ಲಿಂದ ಹೊರಟು ಆ ವಿಧವೆ ಹುಡುಗಿಯ ಮನೆಗೆ ಹೋದ. ಈ ಬಾರಿ ಖಂಡಿತವಾಗಿಯೂ ಆಕೆಯನ್ನು ಮದುವೆಯಾಗಿ ಗಂಡನಂತೇ ಬದುಕುತ್ತೇನೆ ಎಂದು ನಿರ್ಧಾರ ಮಾಡಿದ.
ಆಕೆಯ ಮನೆಗೆ ಹೋದಾಗ ಆಕೆಗೆ ಬಲು ಸಂಭ್ರಮ. ಬಂದು ಕಾಲು ಮುಟ್ಟಿದಳು. ಮನೆಗೆ ತಾಯಿ ಬಂದಿದ್ದಾಳೆಂದು ಊರ ಮಹಿಳೆಯರೆಲ್ಲ ಬಂದರು. ಈತನಿಗೆ ಆ ಹುಡುಗಿಯ ಹತ್ತಿರ ಮಾತನಾಡಲೂ ಸಾಧ್ಯವಿಲ್ಲ. ಕೊನೆಗೆ ತಡೆಯಲಾರದೆ ಆಕೆಯನ್ನು ಬದಿಗೆ ಕರೆದು ಹೇಳಿದ, ಹುಡುಗಿ, ನಾನು ನಿನ್ನನ್ನು ಮದುವೆಯಾಗುತ್ತೇನೆ. ಕ್ಷಣಮಾತ್ರದಲ್ಲಿ ಆಕೆ ಕಣ್ಣು ಮುಚ್ಚಿ, ತಾವು ಹಾಗೆ ಹೇಳಬಾರದು. ತಾವು ತಾಯಿ, ಜಗನ್ಮಾತೆ ಎಂದು ಮತ್ತೊಮ್ಮೆ ಕಾಲು ಮುಟ್ಟಿದಳು. ಮೊಟ್ಟ ಮೊದಲ ಬಾರಿಗೆ ಶಿವಪೂಜನನಿಗೆ ಸೀತೆಯ ಬಗ್ಗೆ ರೋಷ ಬಂದಿತು. ಮುಂದೆಂದೂ ಆತ ರಾಮಲೀಲೆ ನಡೆಯುವ ಸ್ಥಳಕ್ಕೂ ಹೋಗದೇ, ದೂರ ಎಲ್ಲಿಯೋ ಹೋಗಿಬಿಟ್ಟ.
ನಮ್ಮ ಬದುಕಿನಲ್ಲಿ ಯಾವುದೋ ಕೆಲಸವನ್ನು ತುಂಬ ಪ್ರೀತಿಯಿಂದ, ಅನನ್ಯತೆಯಿಂದ, ತಾದಾತ್ಮ್ಯತೆಯಿಂದ ಮಾಡುತ್ತ, ಮಾಡುತ್ತ ನಮಗೆ ಬೇರೆ ವ್ಯಕ್ತಿತ್ವವೇ ಇಲ್ಲದಂತೆ ಭ್ರಮೆಗೊಳಗಾಗುತ್ತೇವೆ. ಕೆಲಸ ಬೇರೆ, ನಮ್ಮ ವ್ಯಕ್ತಿತ್ವ ಬೇರೆ ಎಂಬ ಅರಿವು ಸದಾ ಇರಬೇಕು. ಇಲ್ಲದೇ ಹೋದಾಗ ಕರ್ತವ್ಯದ ಪಾತ್ರ ನಮ್ಮ ವಿಶಿಷ್ಟವಾದ ವ್ಯಕ್ತಿತ್ವವನ್ನು ಅರಗಿಸಿ ಕುಡಿದು ಬಿಡುತ್ತದೆ. ನಟ ಕೇವಲ ಪಾತ್ರದಲ್ಲಿ ಮಾತ್ರ ನಟ. ಅಧಿಕಾರಿ, ಅಧಿಕಾರ ಕ್ಷೇತ್ರದಲ್ಲಿ ಮಾತ್ರ ಅಧಿಕಾರಿ. ಹಾಗೆ ತಿಳಿದಾಗ ಮಾತ್ರ ವೈಯಕ್ತಿಕ ಜೀವನ ಕಳೆದು ಹೋಗುವುದಿಲ್ಲ.
---------ಸ್ವಾಮೀಜ+++++++
ದಿನಕ್ಕೊಂದು ಕಥೆ
ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಹೋಗಿದ್ದಾರಾ?
ಛೇ! ಇದೆಂತಹ ಪ್ರಶ್ನೆ? ಹೀಗೆ ಕೇಳಬಹುದೇ? ಗಾಬರಿ ಆಗಬೇಡಿ! ಈ ಪ್ರಶ್ನೆಯನ್ನು ಕೇಳಿದವರು ಪ್ರಖ್ಯಾತ ಲೇಖಕ ನಾರ್ಮನ್ ವಿನ್ಸೆಂಟ್ ಪೀಲೆ (೧೮೯೮ – ೧೯೯೩). ಸಕಾರಾತ್ಮಕ ಚಿಂತನೆಯ ಪ್ರಯೋಜನಗಳ ಬಗ್ಗೆ ಅನೇಕ ಗ್ರಂಥಗಳನ್ನು ಬರೆದಿದ್ದ ಅವರು ಉತ್ತಮ ಪ್ರವಚನಕಾರರೂ ಆಗಿದ್ದರು. ಅಸಂಖ್ಯಾತ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಒಮ್ಮೆ ಅವರ ಬಳಿ ಯುವಕನೊಬ್ಬ ಬಂದನು. ಬಹಳ ಚಿಂತಾಕ್ರಾಂತನಾಗಿದ್ದನು. ಏಕೆಂದು ಕೇಳಿದಾಗ ‘ನಾನು ನನ್ನ ವ್ಯವಹಾರದಲ್ಲಿ ಸೋತಿದ್ದೇನೆ. ಹಣವನ್ನು ಕಳೆದುಕೊಂಡುಬಿಟ್ಟಿದ್ದೇನೆ. ಬರಿಗೈಯವನಾಗಿಬಿಟ್ಟಿದ್ದೇನೆ. ಮುಂದೇನು ಮಾಡಲೂ ತೋಚಲಿಲ್ಲ. ದೇಶಾಂತರ ಹೋಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಸ್ಥಿತಿಯಲ್ಲಿದ್ದೇನೆ. ದಿಕ್ಕು ತೋಚದಂತಾಗಿದೆ. ಏನು ಮಾಡಲಿ?’ ಎಂದು ಗೋಳಾಡಿದನು. ನಾರಮನ್ನರು ನಗುನಗುತ್ತಲೇ ಆತನ ವ್ಯವಹಾರದ ಬಗ್ಗೆ ವಿಚಾರಿಸಿದರು. ವಿದ್ಯಾವಂತನಂತೆ, ಬುದ್ಧಿವಂತನಂತೆ ಕಾಣುತ್ತಿದ್ದ ಆತ ಪ್ರಶ್ನೆಗಳಿಗೆಲ್ಲ ಉತ್ತರಿಸಿದನು. ಆನಂತರ ನಾರಮನ್ನರು ‘ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತಿದೆ. ನೀವು ವ್ಯವಹಾರಸ್ಥರು. ವ್ಯವಹಾರದಲ್ಲಿ ಬ್ಯಾಲೆನ್ಸ ಶೀಟ್ ತಯಾರಿಸುತ್ತೀರಲ್ಲವೇ? ನೀವು ಕಳೆದುಕೊಂಡಿರುವ ಮತ್ತು ಉಳಿಸಿಕೊಂಡಿರುವ ವಿಷಯಗಳ ಪಟ್ಟಿ ಮಾಡೋಣ. ಆನಂತರ ದೇಶಾಂತರವೋ, ಆತ್ಮಹತ್ಯೆಯೋ ಎಂಬುದನ್ನು ತೀರ್ಮಾ ನಿಸಿದರಾಯಿತು. ಒಪ್ಪಿಗೆಯೇ?’ ಎಂದು ಕೇಳಿದರು. ಯುವಕ ಒಪ್ಪಿಕೊಂಡ.
ನಾರಾಮನ್ನರು ಕಾಗದವೊಂದನ್ನು ಯುವಕನ ಕೈಗಿತ್ತರು. ಕಾಗ ದದ ಮಧ್ಯೆ ಗೆರೆಯೊಂದನ್ನು ಎಳೆಸಿದರು. ಆನಂತರ ಆತ ಕಳೆದುಕೊಂಡಿರುವುದನ್ನೆಲ್ಲ ಎಡ ಭಾಗದಲ್ಲಿ ಬರೆಯಲು ಹೇಳಿದರು.
ಆತ ತನ್ನ ಮೂಲ ಬಂಡವಾಳ, ಬ್ಯಾಂಕ್ ಸಾಲದ ಹಣ, ತಯಾರಿಕೆಯಲ್ಲಿನ ನಷ್ಟ ಮುಂತಾದವನ್ನೆಲ್ಲ ಬರೆಯುವಂತೆ ನಾರ್ಮನ್ನರು ಹೇಳಿದಾಗ, ಆತ ಇಲ್ಲಿ ಬರೆಯಲು ಏನೂ ಉಳಿದಿಲ್ಲ ಎಂದುಬಿಟ್ಟ. ಆತನ ಉತ್ತರವನ್ನು ನಿರೀಕ್ಷಿಸಿದ್ದವರಂತೆ ಕಂಡ ನಾರಾಮನ್ನರು ಮುಗುಳ್ನಕ್ಕು ‘ಚಿಂತೆಯಿಲ್ಲ! ಈಗ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಪ್ರತಿ, ಸರಿ ಉತ್ತರಕ್ಕೂ ಪ್ಲಸ್ ಎಂದು ಬಲಗಡೆ ಬರೆಯಿರಿ.
ಮೊದಲನೆಯದಾಗಿ ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಓಡಿಹೋಗಿದ್ದಾರೆಯೇ?’ ಎಂದು ಕೇಳಿದರು. ಯುವಕ ತಕ್ಷಣ ‘ಇಲ್ಲ ಆಕೆ ನನ್ನೊಂದಿಗೆ ಇದ್ದಾಳೆ’ ಎಂದರು. ನಾರಾಮನ್ನರು
‘ಹಾಗಿದ್ದರೆ ಬಲಗಡೆ ಪ್ಲಸ್ ಒಂದನ್ನು ಬರೆಯಿರಿ. ನಿಮ್ಮ ಮಕ್ಕಳು ಸೆರೆಮನೆಯಲ್ಲಿದ್ದಾರೆಯೇ? ಇಲ್ಲದಿದ್ದರೆ ಮತ್ತೆ ಪ್ಲಸ್ಸನ್ನು ಬರೆಯಿರಿ. ನಿಮ್ಮ ವಿದ್ಯಾಭ್ಯಾಸದ ಡಿಗ್ರಿ ಮುಂತಾದ ಅರ್ಹತಾ ಪತ್ರಗಳನ್ನು ಕಳೆದುಕೊಂಡಿದ್ದೀರಾ ಅಥವಾ ಅವು ಉಳಿದಿವೆಯೇ? ನಿಮ್ಮ ಅನುಭವ ಕಳೆದುಹೋಗಿದೆಯೇ? ಉಳಿದಿದೆಯೇ? ಉಳಿದಿದ್ದರೆ ಪ್ಲಸ್ ಬರೆಯಿರಿ’ ಎನ್ನುತ್ತ ಕೇಳತೊಡಗಿದರು. ಯುವಕ ಬರೆ ಯುತ್ತ ಹೋದ. ಕೆಲವೇ ನಿಮಿಷಗಳಲ್ಲಿ ಆತನ ಮುಖ ಹೊಳೆ ಯತೊಡಗಿತು. ಸ್ವಲ್ಪ ಹೊತ್ತಿನ ನಂತರ ಆತನೇ ಬರೆಯುವುದನ್ನು ನಿಲ್ಲಿಸಿ ‘ಸರ್! ನಿಮ್ಮ ಮಾತು ನನಗೆ ಅರ್ಥವಾಗುತ್ತಿದೆ. ನಾನು ಕೇವಲ ಹಣವನ್ನು ಕಳೆದುಕೊಂಡಿದ್ದೇನೆ. ಆದರೆ ಹಣದಿಂದ ಅಳೆ ಯಲಾಗದ ಎಷ್ಟೋ ವಿಷಯಗಳು ನನ್ನಲ್ಲಿನ್ನೂ ಉಳಿದಿವೆ.
ಆರೋಗ್ಯವಿದೆ, ಉತ್ಸಾಹವಿದೆ, ಪ್ರೋತ್ಸಾಹಿಸುವ ಸಂಸಾರವಿದೆ. ಗೆಳೆಯರಿದ್ದಾರೆ. ನಾನು ಅವನ್ನೆಲ್ಲ ಮರೆತುಬಿಟ್ಟಿದೆ. ಕಷ್ಟನಷ್ಟಗಳೇ ದೊಡ್ಡದಾಗಿ ಕಾಣುತ್ತಿದ್ದವು. ಈಗ ನನ್ನ ಕಣ್ಣು ಸ್ಪಷ್ಟವಾಗಿ ಕಾಣತೊಡಗಿದೆ. ಮತ್ತೆ ಹೊಸ ಪ್ರಾರಂಭವನ್ನು ಮಾಡುತ್ತೇನೆ’ ಎಂದು ಹೇಳಿಹೋದನಂತೆ.
ನಾವೀಗ ನಾರ್ಮನ್ ವಿನ್ಸೆಂಟ್ ಪೀಲೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಬಹುದು. ನಮ್ಮೆಲ್ಲರ ಬದುಕಿನಲ್ಲೂ ಆ ಯುವಕ ಎದುರಿಸಿದ್ದಂತಹ ಪರಿಸ್ಥಿತಿ ಎದುರಾಗಿರಬಹುದಲ್ಲವೇ? ಆಗ ನಾವು ಪೀಲೆ ಮಾಡಿದಂತೆ ಬದುಕಿನ ಲೆಕ್ಕಾಚಾರ ಹಾಕಬಹುದೇ? ನಮ್ಮ ಬದುಕಿನಲ್ಲಿ ಪ್ಲಸ್, ಮೈನಸ್ಸುಗಳನ್ನು ಲೆಕ್ಕ ಹಾಕಿಕೊಂಡು ಬದುಕನ್ನು ಬದಲಾಯಿಸಿಕೊಳ್ಳಬಹುದೇ?
_----------++++++++++++++
ದಿನಕ್ಕೊಂದು ಕಥೆ
ನಮ್ಮ ತಪ್ಪಿಗೆ ನಾವೇ ಜವಾಬ್ದಾರರು
ಬಜಗನ್ ಎಂಬ ಸೂಫೀ ಸಂಪ್ರದಾಯ ಮಧ್ಯ ಏಷ್ಯಾದಲ್ಲಿ ಬೆಳೆದು ಭಾರತ ಉಪಖಂಡದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹದಿನಾಲ್ಕನೇ ಶತಮಾನದ ಅಂತ್ಯಭಾಗದಲ್ಲಿದ್ದ ಖಾಜಾ ಬಹಾವುದ್ದೀನ್ ನಕ್ಷಾಬಂದ್ ಈ ಪಂಥದ ಒಬ್ಬ ಮಹಾನ್ ವ್ಯಕ್ತಿ. ಅವನ ಕಾಲಾನಂತರ ಈ ಪಂಥವನ್ನು ನಕ್ಷಾಬಂದೀ ಪಂಥ ಎಂದೇ ಕರೆಯಲಾಯಿತು. ನಕ್ಷಾಬಂದೀ ಪರಂಪರೆಯ ಸೂಫೀ ಸಂತರ ಕಥನ ಕಲೆ ವಿಶೇಷವಾದದ್ದು. ಆ ಕಥೆಯ ಕೊನೆಗೆ ಒಂದು ಸಂದೇಶವನ್ನು ನೀಡುವುದು ಅವರ ಕಲೆ. ಇಂಥ ಒಂದು ಪುಟ್ಟ ಕಥೆ ಹೀಗಿದೆ.
ಒಂದು ರಾತ್ರಿ ಒಬ್ಬ ಕಳ್ಳ ಹೊಂಚುಹಾಕಿ ಒಂದು ಮನೆಯಲ್ಲಿ ಕಳ್ಳತನ ಮಾಡಲು ಯೋಜನೆ ಹಾಕಿಕೊಂಡಿದ್ದ. ರಾತ್ರಿಯಾದ ಮೇಲೆ, ಮನೆಯ ದೀಪಗಳೆಲ್ಲ ಆರಿದ ಮೇಲೆ ಆತ ನಿಧಾನವಾಗಿ ಮನೆಯ ಗೋಡೆಯನ್ನೇರಿ ಕಿಟಕಿಯಿಂದ ಒಳಗೆ ಹೋಗಲು ಪ್ರಯತ್ನಿಸಿದ. ಅವನು ಕಿಟಕಿಯ ಚೌಕಟ್ಟನ್ನು ಹಿಡಿದುಕೊಂಡು ಅದರ ಬಾಗಿಲುಗಳನ್ನು ಒಳಗೆ ತಳ್ಳಲು ನೋಡಿದಾಗ ಆ ಚೌಕಟ್ಟೇ ಸಡಿಲವಾಗಿ ಕಳಚಿಕೊಂಡಿತು. ಆಗ ಕಳ್ಳ ಬಿಚ್ಚಿಬಿದ್ದ ಚೌಕಟ್ಟಿನೊಡನೆ ನೆಲದ ಮೇಲೆ ಧೂಪ್ಪನೇ ಬಿದ್ದ.
ಅವನ ಬಲಗಾಲು ಮುರಿಯಿತು. ಮರುದಿನ ಆತ ರಾಜನ ಕಡೆಗೆ ದೂರು ಒಯ್ದ. ‘ಮಹಾಸ್ವಾಮಿ, ಕಳ್ಳತನ ನನ್ನ ಹೊಟ್ಟೆ ಹೊರೆಯುವ ಉದ್ಯೋಗ. ಆದರೆ ಈ ಮನೆಯ ಕಿಟಕಿಯ ಚೌಕಟ್ಟನ್ನು ಮಾಡಿದ ಬಡಗಿ ಸರಿಯಾಗಿ ಕೆಲಸ ಮಾಡಿದ್ದರೆ ನನ್ನ ಕಾಲು ಮುರಿಯುತ್ತಿರಲಿಲ್ಲ. ಆದ್ದರಿಂದ ಅವನಿಗೆ ಶಿಕ್ಷೆ ನೀಡಿ ನನಗೆ ನ್ಯಾಯ ಒದಗಿಸಬೇಕು’. ರಾಜ ಬಡಗಿಯನ್ನು ಕರೆಸಿ ಕೇಳಿದ. ಅದಕ್ಕೆ ಆತ, ‘ಪ್ರಭೂ, ಇದು ನನ್ನ ತಪ್ಪಲ್ಲ. ನಾನು ಚೌಕಟ್ಟನ್ನು ಸರಿಯಾಗಿಯೇ ಮಾಡಿದ್ದೆ. ಆದರೆ, ಗಾರೆಯವನು ಅದನ್ನು ಕೂಡ್ರಿಸುವಾಗ ಸರಿಯಾಗಿ ಗಾರೆ ಹಾಕಿ ಭದ್ರಪಡಿಸಿಲ್ಲ. ಆದ್ದರಿಂದ ಶಿಕ್ಷೆಯಾಗಬೇಕಾದರೆ ಅದು ಗಾರೆಯವನಿಗೆ ಆಗಬೇಕು’ ಎಂದ. ರಾಜನಿಗೆ ಸರಿ ಎನ್ನಿಸಿತು.
ಗಾರೆಯವನನ್ನು ಕರೆದು ‘ನಿನಗೆ ಯಾಕೆ ಶಿಕ್ಷೆ ನೀಡಬಾರದು’ ಎಂದು ಸಮಜಾಯಿಷಿ ಕೇಳಿದ. ಆತ ಗಾಬರಿಯಾಗಿ ತನ್ನ ವಾದವನ್ನು ಮಂಡಿಸಿದ. ‘ಮಹಾರಾಜ, ದಯವಿಟ್ಟು ನನ್ನ ಮಾತು ಕೇಳಿ. ನಾನು ಸಂಪೂರ್ಣ ನಿರಪರಾಧಿ. ನಾನು ಕಿಟಕಿಯ ಚೌಕಟ್ಟನ್ನು ಕೂಡ್ರಿಸುವಾಗ ರಸ್ತೆಯಲ್ಲಿ ಒಬ್ಬ ಅತ್ಯಂತ ಸುಂದರಳಾದ ತರುಣಿ ನಿಂತಿದ್ದಳು. ಆಕೆಯನ್ನು ನೋಡುತ್ತ ಮೈಮರೆತು ಚೌಕಟ್ಟನ್ನು ಸರಿಯಾಗಿ ಕೂಡ್ರಿಸಲಿಲ್ಲ’. ರಾಜನಿಗೆ ಅದೂ ಸರಿಯೇ ಎನ್ನಿಸಿತು. ಆ ತರುಣಿಯನ್ನು ಹುಡುಕಿಸಿ ಕರೆಸಿದರು.
ಈ ಮನುಷ್ಯ ಕಾಲು ಮುರಿದುಕೊಂಡದ್ದಕ್ಕೆ ಜವಾಬ್ದಾರಿ ನೀನೇ ಎಂದು ಆಪಾದನೆ ಮಾಡಿದಾಗ ಆಕೆ ಅಳುತ್ತ, ‘ಸ್ವಾಮಿ, ತಪ್ಪು ನನ್ನದು ಅಲ್ಲವೇ ಅಲ್ಲ. ನನ್ನ ಗಂಡ ತಂದುಕೊಟ್ಟ ಹೊಸ ಬಣ್ಣಬಣ್ಣದ ಸೀರೆಯನ್ನು ಅಂದು ಉಟ್ಟುಕೊಂಡಿದ್ದರಿಂದ ನಾನು ಚೆನ್ನಾಗಿ ಕಂಡಿರಬೇಕು. ಯಾಕೆಂದರೆ ನನ್ನನ್ನು ಯಾರೂ ಸಾಮಾನ್ಯವಾಗಿ ಗಮನಿಸುವುದೇ ಇಲ್ಲ. ಇದೆಲ್ಲ ಸೀರೆಯದೇ ತಪ್ಪು. ಅದನ್ನು ತಂದುಕೊಟ್ಟ ಗಂಡನ ತಪ್ಪು’ ಎಂದಳು. ‘ನಿನ್ನ ಗಂಡ ಸೀರೆಯನ್ನು ತಂದದ್ದು ಎಲ್ಲಿಂದ?’ ಕೇಳಿದ ರಾಜ.
ಆಕೆ, ‘ನನಗೆ ತಿಳಿಯದು ಸ್ವಾಮಿ. ಆತ ವೃತ್ತಿಯಿಂದ ಕಳ್ಳನಾಗಿದ್ದರಿಂದ ಎಲ್ಲಿಂದ ತಂದ ಎನ್ನುವುದನ್ನು ಅವನೇ ಹೇಳಬೇಕು’ ಎಂದಳು. ‘ಅವನನ್ನು ಹಿಡಿದು ತನ್ನಿ’ ಎಂದು ರಾಜ ಆಜ್ಞೆ ಮಾಡಿದ. ಸೈನಿಕರು ಬಹಳ ದೂರ ಹೋಗಬೇಕಿರಲಿಲ್ಲ. ಎರಡೇ ನಿಮಿಷದಲ್ಲಿ ಕುಂಟುತ್ತಿದ್ದ ಕಳ್ಳನನ್ನು ಎಳೆದು ತಂದರು. ಅವನೇ ಕಿಟಕಿಯ ಚೌಕಟ್ಟನ್ನು ಹಿಡಿದುಕೊಂಡು ಕೆಳಗೆ ಬಿದ್ದು ದೂರು ತಂದವನು.
ರಾಜ ಹೇಳಿದ, ‘ನಿನ್ನ ಕಾಲು ಮುರಿಯಲು ನೀನೇ ಕಾರಣ. ನಿನಗೆ ಕಾಲು ಮುರಿದದ್ದಷ್ಟೇ ಶಿಕ್ಷೆಯಲ್ಲ. ಮತ್ತೊಬ್ಬರ ಮನೆಯ ಕಿಟಕಿಯನ್ನು ಹಾಳುಮಾಡಿದ್ದಕ್ಕೆ ಮತ್ತು ಯಾರದೋ ಮನೆಯ ಸೀರೆ ಕದ್ದದ್ದಕ್ಕೆ ನಾಲ್ಕು ತಿಂಗಳು ಜೈಲು ಶಿಕ್ಷೆ ನಿನಗೆ’ ಎಂದು ಹೇಳಿ ಜೈಲಿಗೆ ತಳ್ಳಿದ. ನಾವು ನಮ್ಮ ತಪ್ಪಿಗೆ ಯಾರನ್ನೋ ಹೊರೆ ಮಾಡಲು ನೋಡುತ್ತೇವೆ. ಆದರೆ ಅದು ನಮ್ಮನ್ನೇ ಸುತ್ತಿಕೊಳ್ಳುತ್ತದೆ. ನಕ್ಷಾಬಂದ್ ಹೇಳುತ್ತಾನೆ. ‘ನಾವು ಮಾಡಿದ ತಪ್ಪಿಗೆ ನಾವೇ ಹೊಣೆಗಾರರು. ನಾವು ಎಷ್ಟೇ ತಪ್ಪಿಸಿಕೊಳ್ಳಲು ನೋಡಿದರೂ ಅದು ಸುತ್ತಿ, ಸುತ್ತಿ ಕೊನೆಗೆ ಅದು ನಮ್ಮನ್ನೇ ಶೂಲಕ್ಕೇರಿಸುತ್ತದೆ’. ನಾವು ಕಲಿಯಬಹುದಾದ ಬಹುದೊಡ್ಡ ಪಾಠ ಇದೆ.
--------++++++++
ದಿನಕ್ಕೊಂದು ಕಥೆ
ನಾವೇ ಭಾಗ್ಯವಂತರು! ನಾವೇ ತೀರ್ಮಾನಿಸುವವರು.
ನಾವೇ ಭಾಗ್ಯವಂತರು ಎಂದು ಹೇಳಿಕೊಳ್ಳುವುದರ ಜತೆಗೆ ತೀರ್ಮಾನ ಮಾಡುವವರೂ ನಾವೇ! ಅದರ ಬಗ್ಗೆಯೇ ಇರುವ ಇಲ್ಲಿರುವ ಕುತೂಹಲಕಾರಿ ಪ್ರಸಂಗವನ್ನು ಹೇಳಿದವರು ರಿಸರ್ವ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮತ್ತು ಒಳ್ಳೆಯ ವ್ಯಕ್ತಿತ್ವ ವಿಕಸನದ ಉಪನ್ಯಾಸರೂ ಆದ ವೈ.ವಿ.ಗುಂಡೂರಾವ್ ಅವರು. ಆ ಪ್ರಸಂಗ ಹೀಗಿದೆ.
ಒಮ್ಮೆ ಸೂಟು–ಬೂಟು–ಹ್ಯಾಟ್ ಧರಿಸಿದ್ದ ವ್ಯಕ್ತಿಯೊಬ್ಬ ಏರ್ಪೋರ್ಟಿಗೆ ಹೋಗಲು ಟ್ಯಾಕ್ಸಿ ಹತ್ತಿದನಂತೆ. ಟ್ಯಾಕ್ಸಿಯಲ್ಲಿ ಗಂಭೀರವಾಗಿ ಕುಳಿತಿದ್ದ ಅವರನ್ನು ಗಮನಿಸಿದ ಟ್ಯಾಕ್ಸಿ ಡ್ರೈವರ್ ‘ನೀವೇನೋ ಚಿಂತೆಯಲ್ಲಿರುವಂತಿದೆ. ಏರೋಪ್ಲೇನಿನಲ್ಲಿ ಹಾರಾಡುವ ನಿಮಗೇತರ ಚಿಂತೆ ಸಾರ್?’ ಎಂದ. ಆ ‘ವಿಮಾನ ಹಾರಾಟದ ಕಷ್ಟ ಅನುಭವಿಸಿದವರಿಗೇ ಗೊತ್ತು. ನೆಲದ ಮೇಲಿನಿಂದ ನಲವತ್ತು ಸಾವಿರ ಅಡಿಗಳ ಎತ್ತರದಲ್ಲಿ ವಿಮಾನ ಹಾರುತ್ತದೆ. ಅಲ್ಲಿ ಏನಾದರೂ ಆದರೆ ಎಲುಬೂ ಸಿಕ್ಕುವುದಿಲ್ಲ. ಕೆಳಗಿಳಿದು ಬಂದರೆ ಮತ್ತೊಂದು ಪುನರ್ಜನ್ಮ. ವಿಮಾನದೊಳಗಡೆ ಹವಾನಿಯಂತ್ರಿತ ವಾತಾವರಣ. ಉಸಿರಾಡಿದ ಗಾಳಿಯನ್ನೇ ಮತ್ತೆ ಮತ್ತೆ ಉಸಿರಾಡಿ ತಲೆಯೆಲ್ಲ ಬಿಸಿಯಾಗುತ್ತದೆ. ವಿಮಾನ ಪ್ರಯಾಣಿಕರಲ್ಲಿ ಬಹಳ ಜನ ತಾವು ಅಸಮಾನರು ಎಂಬ ಅಹಮ್ಮಿನಲ್ಲಿರುತ್ತಾರೆ. ಗಂಟುಮುಖದವರು. ಕಷ್ಟಪಟ್ಟು ನಗುತ್ತಾರೆ. ಸದಾ ನಗುವ ಗಗನ ಸಖಿಯರದ್ದು ಪ್ಲ್ಯಾಸ್ಟಿಕ್ ನಗೆ. ಅಲ್ಲಿ ಕೊಡುವ ಊಟವೋ ಶ್ರೀಮಂತರ ಪುಷ್ಕಳ ಊಟ. ದಿನಾ ಅದನ್ನೇ ತಿನ್ನುವುದು ಕಷ್ಟ!’ ಎನ್ನುತ್ತ ತೊಂದರೆಗಳ ಸರಮಾಲೆಯನ್ನು ಪೇರಿಸಿದರು.
ಡ್ರೈವರ್ ಅವರನ್ನು ಸಹಾನುಭೂತಿಯಿಂದ ನೋಡುತ್ತ ‘ಹಾಗಿದ್ದರೆ ವಿಮಾನದಲ್ಲೇ ಏಕೆ ಪ್ರಯಾಣಿಸುತ್ತೀರಿ? ರೈಲು–ಬಸ್ಸು–ಕಾರುಗಳಲ್ಲಿ ಹೋಗಬಹುದಲ್ಲ!’ ಎಂದು ಪ್ರಶ್ನಿಸಿದ. ಆತ ನಿಟ್ಟುಸಿರಿನೊಂದಿಗೆ ‘ವಿಮಾನದಲ್ಲೇ ಏಕೆ ಪ್ರಯಾಣಿಸುತ್ತೇನೆಂದರೆ ನಾನು ವೃತ್ತಿನಿರತ ವಿಮಾನದ ಪೈಲಟ್!’ ಎಂದ.
ಇದನ್ನು ಕೇಳಿ ಡ್ರೈವರಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಆತ ‘ಇಷ್ಟೆಲ್ಲ ಬೇಸರಗಳಿದ್ದರೆ ಪೈಲಟ್ ವೃತ್ತಿಯೇ ಏಕೆ?’ ಎಂದು ಅವರು ‘ಕೈತುಂಬ ಸಂಬಳ, ದೇಶವಿದೇಶಗಳನ್ನು ನೋಡುವ ಅವಕಾಶ, ಒಳ್ಳೆಯ ಯೂನಿಫಾರಂ, ಬಂಧು–ಬಳಗದಲ್ಲಿ ಘನತೆ–ಗೌರವ ಮತ್ತೆಲ್ಲಿ ಸಿಗುತ್ತದೆ? ಅದಕ್ಕಾಗಿ ಈ ವೃತ್ತಿ!’ ಎಂದರು.
ಡ್ರೈವರ್ ‘ತಾವು ತಪ್ಪು ತಿಳಿಯದಿದ್ದರೆ ತಮಗೊಂದು ಮಾತು ಹೇಳಲೇ? ಕೆಲಸಕ್ಕೆ ಹೊರಟಾಗ ಕೈತುಂಬ ಸಂಬಳ, ದೇಶವಿದೇಶಗಳನ್ನು ನೋಡುವ ಅವಕಾಶ ಮುಂತಾದವುಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳಿ. ‘ನಲವತ್ತು ಸಾವಿರ ಅಡಿ ಎತ್ತರ, ಕೃತಕ ನಗೆ, ಉಸಿರುಗಟ್ಟಿಸುವ ವಾತಾವರಣ ಕುರಿತು ಚಿಂತಿಸಬೇಡಿ. ನಾನು ನಿಮಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ. ಆದರೆ ನಾನು ಕಲಿತ ಪಾಠ. ನನ್ನದು ಟ್ಯಾಕ್ಸಿ ಓಡಿಸುವ ಕೆಲಸ. ಟ್ಯಾಕ್ಸಿಗೆ ನಾನೇ ಮಾಲೀಕ. ನಾನೇ ಚಾಲಕ. ನಾನು ಕೆಲಸಕ್ಕೂ ಹೋಗುತ್ತೇನೆ. ಮಕ್ಕಳೊಂದಿಗೆ ಕಾಲವನ್ನೂ ಕಳೆಯುತ್ತೇನೆ. ಬೆಂಗಳೂರು ಮತ್ತು ವಿಮಾನ ನಿಲ್ದಾಣ ಇವೆರಡೂ ಬಿಟ್ಟು ನಾನು ಮತ್ತೇನೂ ನೋಡಿಲ್ಲ. ನನ್ನ ತಿಂಗಳ ಸಂಪಾದನೆ ನಿಮ್ಮ ಒಂದು ದಿನದ ಸಂಪಾದನೆ ಇರಬಹುದು. ಆದರೆ ನಾನು ನಿಮಗಿಂತ ಆನಂದವಾಗಿದ್ದೇನೆ ಎನಿಸುತ್ತದೆ’ ಎಂದು ಹೇಳುವಷ್ಟರಲ್ಲಿ ಅವರು ವಿಮಾನ ನಿಲ್ದಾಣವನ್ನು ಮುಟ್ಟಿದರು.
ಆತ ಟ್ಯಾಕ್ಸಿಯಿಂದಿಳಿದು ಡ್ರೈವರಿಗೆ ರೂಪಾಯಿ ಟಿಪ್ಸ್ ಕೊಟ್ಟು ‘ನನಗೆ ನಿನ್ನ ಮಾತು ಹಿಡಿಸಿತು. ನೀನು ಹೇಳಿದುದನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತೇನೆ. ಭಗವಂತನ ದಯೆಯಿದ್ದರೆ ಮತ್ಯಾವಾಗಲಾದರೂ ಸಿಗೋಣ’ ಎಂದು ಹೇಳಿ ದಡಬಡ ಹೊರಟುಹೋದರು. ಈ ಪ್ರಸಂಗವನ್ನು ಹೇಳಿದ ಉತ್ತಮ ವಾಕ್ಪಟುಗಳಾದ ಗುಂಡೂರಾಯರಿಗೆ ಧನ್ಯವಾದಗಳು.
ನಾವು ಡ್ರೈವರೋ, ಪೈಲಟ್ಟೋ ಅಲ್ಲದಿರಬಹುದು. ಆದರೆ ನಮಗೊಂದು ಉದ್ಯೋಗವಿದೆ. ಬಿಡುವು ಸಿಕ್ಕಾಗ ನಮ್ಮ ಉದ್ಯೋಗದ ಅನುಕೂಲಗಳ ಅನಾನುಕೂಲಗಳ ಪಟ್ಟಿ ಮಾಡಿಕ್ಳೊಬಹುದು. ಅನುಕೂಲಗಳ ಪಟ್ಟಿ ದೊಡ್ಡದಿದ್ದರೆ ನಾವೇ ಭಾಗ್ಯವಂತರೆಂದು ತೀರ್ಮಾನಿಸಿಕೊಳ್ಳಬಹುದು. ಅನಾನುಕೂಲಗಳ ಪಟ್ಟಿ ನಿಧಾನವಾಗಿ ಮತ್ತೊಂದು ಕೆಲಸ ಹುಡುಕಿಕೊಳ್ಳಬಹುದು!
----------+++++++++++++
ದಿನಕ್ಕೊಂದು ಕಥೆ
ನಷ್ಟ ಜೀವನದಾಸೆ
ರಷ್ಯಾದ ಮಹಾನ್ ದಾರ್ಶನಿಕ ಹಾಗೂ ಲೇಖಕ ಲಿಯೊ ಟಾಲ್ಸ್ಟಾಯ್ನ ಅನೇಕ ಕಥೆಗಳು ಮನೋಜ್ಞವಾದವುಗಳು. ಅವುಗಳಲ್ಲಿ ಒಂದು ಹೀಗಿದೆ.
ಒಂದು ಊರಿನಲ್ಲಿ ಜಮೀನುದಾರನಿದ್ದ. ಅವನಿಗೆ ತುಂಬು ಪರಿವಾರ. ಅರಮನೆಯಂಥ ಮನೆ. ಇವನ ಇಷ್ಟಾನಿಷ್ಟಗಳನ್ನು ಪೂರೈಸಲು ಅನೇಕ ಸೇವಕರಿದ್ದರು. ಅವನ ನೂರಾರು ಎಕರೆ ಭೂಮಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಅವನನ್ನು ಪ್ರತಿವರ್ಷ ಹೆಚ್ಚು ಶ್ರೀಮಂತನನ್ನಾಗಿ ಮಾಡುತ್ತಿದ್ದವು. ಆದರೂ ಅವನಲ್ಲಿ ಏನೋ ಅತೃಪ್ತಿ, ದುಃಖ ಮನೆಮಾಡಿದ್ದವು. ಅವನಿಗೆ ತನ್ನ ಶ್ರೀಮಂತಿಕೆ ಸಾಲದೆಂಬ ಚಿಂತೆ. ತನ್ನ ಊರಿನಲ್ಲೇ ಇನ್ನೂ ಎಷ್ಟೊಂದು ಜಮೀನು ಖಾಲಿ ಇದೆ. ಅದೆಲ್ಲ ತನ್ನದಾದರೆ ಎಷ್ಟು ಚೆಂದ! ಶ್ರೀಮಂತ ಚಿಂತಿಸಿ ರಾಜನ ಬಳಿಗೆ ಹೋದ. ಆ ರಾಜ ಮತ್ತು ತಾನು ಇಬ್ಬರೂ ಒಂದೇ ಶಾಲೆಯಲ್ಲಿ ಓದಿದವರು, ಆಗ ತುಂಬ ಆತ್ಮೀಯ ಸ್ನೇಹಿತರಾಗಿದ್ದವರು. ಈಗಲೂ ಆ ಸ್ನೇಹ ಹಾಗೆಯೇ ಉಳಿದುಕೊಂಡಿತ್ತು. ಆ ಧೈರ್ಯದ ಮೇಲೆಯೇ ಶ್ರೀಮಂತ ರಾಜನ ಕಡೆಗೆ ಹೋದಾಗ ಅವನೂ ತುಂಬ ಸಲುಗೆ ತೋರಿಸಿದ. ಆ ಮಾತು, ಈ ಮಾತು ಮುಗಿದ ಮೇಲೆ ರಾಜ ಬಂದ ವಿಷಯ ಕೇಳಿದ. ಆಗ ಶ್ರೀಮಂತ ತನ್ನ ಬಯಕೆಯನ್ನು ತಿಳಿಸಿದ. ರಾಜ ನಕ್ಕ, ಆಗಬಹುದು ಎಂದ. ಆದರೆ ಅದಕ್ಕೊಂದು ಷರತ್ತಿದೆ ಎಂದ. ನೆಲದ ಆಸೆಗೆ ಮನತೆತ್ತ ಶ್ರೀಮಂತ ಯಾವ ಷರತ್ತಿಗೂ ತಯಾರಿದ್ದ.
ರಾಜ ಹೇಳಿದ, ‘ನೀನು ಬೇಕಾದಷ್ಟು ಭೂಮಿಯನ್ನು ಪಡೆದುಕೋ. ಅದು ನಿನ್ನ ಶಕ್ತಿಯನ್ನು ಅವಲಂಬಿಸಿದೆ. ನಾಳೆ ಬೆಳಿಗ್ಗೆ ನಮ್ಮ ನಗರದ ಹೊರಭಾಗಕ್ಕೆ ಬಾ. ಸರಿಯಾಗಿ ಆರು ಗಂಟೆಗೆ ಅಲ್ಲಿಂದ ನೀನು ಹೊರಡಬೇಕು. ನೀನು ಎಷ್ಟು ದೂರ ನಡೆದರೂ, ಓಡಿದರೂ ಸರಿಯೇ. ಮರಳಿ ಸರಿಯಾಗಿ ಸಂಜೆ ಆರು ಗಂಟೆಗೆ ಅದೇ ಸ್ಥಳವನ್ನು ಸೇರಬೇಕು. ಅದೆಷ್ಟು ದೂರವನ್ನು ನೀನು ಕ್ರಮಿಸುತ್ತೀಯೋ ಅದೆಲ್ಲ ನಿನ್ನದೇ ಎಂದು ಶಾಸನ ಮಾಡುತ್ತೇವೆ’. ಶ್ರೀಮಂತನ ಸಂತೋಷಕ್ಕೆ ಪಾರವೇ ಇಲ್ಲ. ಅಂದು ರಾತ್ರಿ ಸಂಭ್ರಮದಿಂದ ನಿದ್ರೆಯೇ ಬರಲಿಲ್ಲ. ಬೆಳಿಗ್ಗೆ ಐದೂವರೆಗೇ ಹೋಗಿ ನಿಶ್ಚಯವಾದ ಜಾಗದಲ್ಲಿ ನಿಂತ. ಸರಿಯಾದ ಸಮಯಕ್ಕೆ ರಾಜ ಬಂದ. ಆರು ಹೊಡೆದೊಡನೆ ಶ್ರೀಮಂತನ ನಡಿಗೆ ಪ್ರಾರಂಭವಾಯಿತು. ನಡೆದ ನೆಲವೆಲ್ಲ ತನ್ನದೇ ಎಂಬ ಸಂತೋಷ ಉಕ್ಕಿ ಬಂತು. ಆದಷ್ಟು ನೆಲವನ್ನು ತನ್ನದಾಗಿಸಿಕೊಳ್ಳಬೇಕೆಂಬ ಉತ್ಸಾಹ ಗರಿಗೆದರಿತು. ಹೀಗೆ ನಡೆದರೆ ಸಾಲದೆಂದು ಓಡತೊಡಗಿದ. ಓಡಿದ, ಓಡಿದ, ಉಸಿರು ಎದೆಗೆ ಅಡರಿತು, ನಾಲಿಗೆ ಒಣಗಿತ್ತು.
ಅವನೇನು ಸಣ್ಣ ಹುಡುಗನೇ? ಓಡುವ ಅಭ್ಯಾಸವಿದೆಯೇ? ಆದರೂ ಹೆಚ್ಚು ನೆಲವನ್ನು ಪಡೆಯುವ ಹುಚ್ಚು ಅವನನ್ನು ಓಡಿಸುತ್ತಿತ್ತು. ಅವನು ಲೆಕ್ಕ ಹಾಕಿದ. ತನಗಿರುವುದು ಒಟ್ಟು ಹನ್ನೆರಡು ತಾಸು. ಆದ್ದರಿಂದ ಆದಷ್ಟು ವೇಗವಾಗಿ ಆರು ತಾಸು ಓಡಿ ಹೆಚ್ಚು ನೆಲವನ್ನು ಆಕ್ರಮಿಸಬೇಕು, ನಂತರ ಅಷ್ಟೇ ವೇಗದಲ್ಲಿ ಮರಳಿ ಓಡಿ ಪ್ರಾರಂಭದ ಸ್ಥಳವನ್ನು ತಲುಪಬೇಕು. ಬಿಸಿಲೇರುತ್ತಿದೆ, ಶಕ್ತಿ ಕುಂದುತ್ತಿದೆ. ಆದರೂ ಮಧ್ಯಾಹ್ನ ಹನ್ನೊಂದರವರೆಗೆ ಓಡಿದ. ನಂತರ ಮರಳಿ ಓಡತೊಡಗಿದ. ಕಾಲು ನಡುಗತೊಡಗಿದವು, ಹೊಟ್ಟೆಯ ನರಗಳು ಎದ್ದಂತಾಗಿ ಸೆಳೆತ ಪ್ರಾರಂಭವಾಯಿತು. ನೀರಡಿಕೆ ಪ್ರಾಣ ಹೀರುತ್ತಿತ್ತು. ಆದರೆ ತಾನು ರಾಜ ನಿಂತಿದ್ದ ಸ್ಥಾನ ಮುಟ್ಟದಿದ್ದರೆ ಇಷ್ಟೆಲ್ಲ ಓಡಿದ್ದು ವ್ಯರ್ಥವಾಗುತ್ತದಲ್ಲ ಎಂದು ಸಂಕಟಪಟ್ಟು ಓಡಿದ. ಕಣ್ಣು ಮಂಜಾದವು, ತಲೆ ಮಂಕಾಯಿತು. ಆದರೂ ಆಸೆಯ ಬಲದಿಂದ ಇದ್ದಬಿದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಓಡಿದ.
ಸಮಯ ಆರು ಗಂಟೆಯ ಹತ್ತಿರ ಬಂದಾಗ ರಾಜ ಮತ್ತು ಅವನ ಪರಿವಾರ ನಿಂತದ್ದು ಮಂಜಾಗಿ ಕಂಡಿತು. ಆ ಗೆರೆ ಮುಟ್ಟಿದರೆ ಸಾಕು, ತಾನು ತಿರುಗಾಡಿದ್ದೆಲ್ಲ ತನ್ನದೇ. ಎದೆ ಬಡಿತ ವಿಪರೀತವಾಯಿತು. ಆತ ರಾಜ ನಿಂತಿದ್ದ ಗೆರೆಯ ಹತ್ತಿರ ಬಂದ. ಶಕ್ತಿಯೆಲ್ಲ ಬಸವಳಿದು ಕುಸಿದು ಬಿದ್ದ. ಮತ್ತೆ ಏಳಲೇ ಇಲ್ಲ. ಅವನು ಹೌಹಾರಿ ಓಡಾಡಿದ್ದೇ ಬಂತು, ನೆಲ ದಕ್ಕಲಿಲ್ಲ. ಚೆನ್ನಾಗಿಯೇ ಬದುಕಿದ್ದ ಮನುಷ್ಯ ದುರಾಸೆಗೆ ಬಲಿಯಾಗಿದ್ದ. ಅದಕ್ಕೇ ದಾಸರು ನಮ್ಮ ಬದುಕಿನ ಬಗ್ಗೆ ಹೇಳಿದರು. ‘ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ, ಅಷ್ಟು ದೊರಕಿದರು ಮತ್ತಷ್ಟರಾಸೆ. ಕಷ್ಟ ಬೇಡೆಂಬಾಸೆ, ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರ ವಿಠಲ’. ಈ ಅತಿ ಆಸೆ, ಮತ್ತಷ್ಟರಾಸೆ ನಿಜವಾಗಿಯೂ ನಷ್ಟ ಜೀವನದ ಆಸೆಯೇ ಸರಿ, ಯಾಕೆಂದರೆ ಅದು ಸುಖೀ ಜೀವನವನ್ನು ನಷ್ಟ ಮಾಡುತ್ತದೆ.ವಚನ
--------+++++++++++++++
No comments:
Post a Comment