ಮೈಸೂರು:- ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತನ್ನ ಕುಟುಂಬವನ್ನೇ ತೊರೆದು ಇಡೀ ಮಹಿಳಾ ಕುಲಕ್ಕೆ ಮಾದರಿಯಾದ ಮಹಿಳೆ ಅಕ್ಕಮಹಾದೇವಿ ಎಂದು ಸಾಹಿತಿ ನಗರ್ಲೆ ಶಿವಕುಮಾರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ನಗರದ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಅಕ್ಕ ಕೌಷಿಕ ಮಹಾರಾಜನಿಗೆ ವಿಧಿಸಿದ್ದ ಷರತ್ತುಗಳನ್ನು ಮೀರಿದಾಗ ತನ್ನ ಪತಿ ರಾಜನಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಅನ್ಯಾಂiÀiದ ವಿರುದ್ಧ ಧ್ವನಿ ಎತ್ತಿದ ಪ್ರಥಮ ಮಹಿಳೆಯಾಗಿ ಗೋಚರಿಸುತ್ತಾಳೆ.ಅನಂತರ ಅವಳು ಬಸವಕಲ್ಯಾಣದ ಅನುಭವ ಮಂಟಪಕ್ಕೆ ಹೋದಾಗ ಅಲ್ಲಿ ಅಲ್ಲಮಪ್ರಭು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರಿಸಿ ಅದರ ಸದಸ್ಯಳಾಗಿ ಸೇರ್ಪಡೆಯಾಗುತ್ತಾಳೆ.ಅಲ್ಲಿ 434 ವಚನಗಳನ್ನು ರಚಿಸಿ ಕನ್ನಡದ ಪ್ರಥಮ ಕವಯತ್ರಿಯಾಗಿ ಕನ್ನಡ ಸಾಹಿತ್ಯದಲ್ಲಿ ಸ್ಥಾನ ಪಡೆದಳು.ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯರಾದರು. ನಂತರ ಮಾತನಾಡಿದ ಸಾಹಿತಿ ಎಂ.ಎ.ನೀಲಾಂಬಿಕರವರು 12ನೇ ಶತಮಾನದಲ್ಲಿಯೇ ಅನ್ಯಾಯದ ವಿರುದ್ದ ಸಿಡಿದೆದ್ದ ಉಡುತಡಿಯ ಕಿಡಿಯಾಗಿ ಅಕ್ಕ ಗೋಚರಿಸುತ್ತಾಳೆ. ಅವಳು ರಚಿಸಿದ ವಚನಗಳು ಇಡೀ ಮನುಕುಲಕ್ಕೆ ದಾರಿದೀಪವಾಗುವುದರ ಜೊತೆಗೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟ, ಸುಖ, ನೋವು, ನಲಿವು ಮುಂತಾವುಗಳನ್ನು ತಾಳ್ಮೆಯಿಂದ ಎದುರಿಸಲು ಸಹಾಯಕವಾಗುವುದರ ಜೊತೆಗೆ ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂಬ ನೀತಿಪಾಠವನ್ನು ಸಾರುತ್ತವೆ ಎಂದರು.ತದನಂತರ ಮಾತನಾಡಿದ ಸುಜಾತಪ್ರಭುಸ್ವಾಮಿರವರು ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ, ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಮದೇವಾ ಮಹಾದೇವಿಯಕ್ಕನ ಒಂದು ವಚನ ನಿರ್ವಚನ ಎಂದು ಚೆನ್ನಬಸವಣ್ಣ ಹೇಳಿರುವಂತೆ ವಚನ ಸಾಹಿತ್ಯದಲ್ಲಿಯೇ ಅಕ್ಕನವರ ವಚನ ಅತ್ಯುನ್ನತ ಸ್ಥಾನ ಪಡೆದಿದೆ ಎಂದರು. ಮೈಸೂರು ಆರ್ಟ್ ಗ್ಯಾಲರಿಯ ಅಧ್ಯಕ್ಷ ಎಂ.ಶಿವಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಕೇಂದರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಪೂರ್ಣಿಮ, ದಿವ್ಯಚೇತನ್, ರಾಜಶೇಖರ್, ಲಿಂಗಪ್ಪ, ಮಂಜುಳ ರಾಜೇಶ್, ಮಂಜುಳ ಮಧು, ಅಕ್ಕಮಹಾದೇವಿಮರಮ್ಕಲ್, ಗೀತಾ ಬಸವರಾಜು, ಹೇಮಲತಾ,ಶ್ರೀಕಂಠಸ್ವಾಮಿ, ಶಾಂತ,ಪ್ರಭುಸ್ವಾಮಿ, ಶಿವರುದ್ರಪ್ಪ ಉಪಸ್ಥಿತರಿದ್ದರು.
========================================================================
ನಂಜನಗೂಡು:- ಉರಿಯುಂಡ ಕರ್ಪೂರವಾಗಿ ಸ್ತ್ರೀ ಕುಲಕ್ಕೆ ಮಾದರಿಯಾದವಳು ಕನ್ನಡದ ಪ್ರಪ್ರಥಮ ಕವಯತ್ರಿ ಅಕ್ಕಮಹಾದೇವಿ ಎಂದು ಸಿಂಧುವಳ್ಳಿ ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ತೆರೆಸಾ ಮಸ್ಕರೇನಸ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್, ಮೈಸೂರು ಮತ್ತು ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ನಂಜನಗೂಡು ಘಟಕದ ಸಹಯೋಗದೊಂದಿಗೆ 3ಏಪ್ರಿಲ್ 2018ರಂದು ನಂಜನಗೂಡಿನ ಹುಸ್ಕೂರು ಬಸವರಾಜುರವರ ತೋಟದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ, ಶಿವಕುಮಾರಮಹಾಸ್ವಾಮಿಗಳವರ ಜನ್ಮದಿನೋತ್ಸವ ಮತ್ತು ಕಾಯಕಯೋಗಿಗೆ ಶರಣು ಕಾರ್ಯಕ್ರಮದಲ್ಲಿ ಕಾಯಕಯೋಗಿಗೆ ಶರಣು ಎಂಬ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ನಾನು ಕ್ರೈಸ್ಥ ಧರ್ಮದವಳಾದರೂ ಬಾಲ್ಯದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಅಕ್ಕಮಹಾದೇವಿಯವರ ವೇಷ ಧರಿಸಿ ಬಹುಮಾನ ಪಡೆದಿದ್ದೆ ಅದರ ಪ್ರತಿಫಲವಾಗಿ ಇಂದು ಅಕ್ಕಮಹಾದೇವಿಯವರ ಜಯಂತಿಯಂದು ಕಾಯಕಯೋಗಿ ಬಿರುದಿಗೆ ಪಾತ್ರಳಾಗಿರುವುದು ನನಗೆ ಅತೀವ ಸಂತೋಷವಾಗಿದೆ. ನಾವು ಇತರರಿಗೆ ಪ್ರೀತಿ, ಕರುಣೆ, ಮಾನವೀಯತೆ ತೋರಿಸಿದಾಗ ಅದರಿಂದ ಸಿಗುವ ಪ್ರೀತಿ ವರ್ಣಿಸಲಸದಳವಾದುದು. ವಿಶ್ವವಚನ ಫೌಂಡೇಷನ್ ಎಲ್ಲಾ ಧರ್ಮದವರನ್ನು ಗೌರವಿಸುವುದರ ಮುಖಾಂತರ ವಿಶ್ವಕ್ಕೆ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದರು. ನಂತರ ಮಾತನಾಡಿದ ನಂಜನಗೂಡು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಅಂತರ್ಜಾಲದ ಮಾಧ್ಯಮವಾದ ವಾಟ್ಸ್ ಆ್ಯಪ್ ಮುಖಾಂತರ ಲಕ್ಷಾಂತರ ಜನರಿಗೆ ವಚನ ಕಳಿಸುವುದರ ಮುಖಾಂತರ ಸಂಸ್ಕಾರವಂತರನ್ನಾಗಿ ಮಾಡಿ ನಾಗರೀಕಸಮಾಜ ನಿರ್ಮಾಣ ಮಾಡಲು ಹೊರಟಿರುವುದು ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ವಚನಗಳನ್ನು ಅಧ್ಯಯನ ಮಾಡುವುದರ ಮುಖಾಂತರ ಶರಣರ ವಿಚಾರ ಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ತದನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಬಡವಿದ್ಯಾರ್ಥಿಗಳಿಗೆ ಆಶಾಕಿರಣವಾದವರು ಶಿವಕುಮಾರಮಹಾಸ್ವಾಮಿಗಳು ಅವರು ಇರುವಂತಹ ಕಾಲಘಟ್ಟದಲ್ಲಿ ನಾವು ಬದುಕಿರುವುದು ನಮ್ಮ ಪುಣ್ಯ. ಅವರ ದಣಿವರಿಯದ ದುಡಿಮೆಯಿಂದ ನಮ್ಮ ಕರ್ನಾಟಕದ ಕಡೆ ಇಡೀ ವಿಶ್ವವೇ ಬಂದು ನೋಡುವಂತಹ ಮಾದರಿ ವ್ಯಕ್ತಿತ್ವ ಅವರದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತ ಬಸವರಾಜ್ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿಸ್ಟರ್‍ತೆರೇಸಾ ಮಸ್ಕರೇನಸ್ ರವರಿಗೆ ಕಾಯಕಯೋಗಿಗೆ ಶರಣು ಎಂಬ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷೆ ಶಶಿಕಲಾ ಗಿರೀಶ್, ಗೌರವಾಧ್ಯಕ್ಷ ಭೋಗನಂಜಪ್ಪ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಉಪಾಧ್ಯಕ್ಷ ನಾಗೇಶಮೂರ್ತಿ, ವೀರಶೈವ ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ, ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಮಹದೇವಪ್ರಸಾದ್, ನೂರ್ ಅಹಮದ್, ರಾಜಶೇಖರ್, ಮಮತ, ನೀಲಮ್ಮ, ವೃಷಭೇಂದಪ್ಪ್ರ, ದೊಡ್ಡಸ್ವಾಮಿ, ರಚನಾ ಉಪಸ್ಥಿತರಿದ್ದರು.
----------------------------------------------------------------------------------------------------------------------
ಚಿತ್ರ ಸುದ್ದಿ: ಚೆನೈನ ಇಂಡಿಯನ್ ವರ್ಚುಯಲ್ ಮಹಾವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಮಹೇಂದ್ರಸಿಂಗ್ ಕಾಳಪ್ಪರವರನ್ಮ್ನ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸರ್ವೋದಯ ಮಂಡಲದ ಅಧ್ಯಕ್ಷೆ ಲೀಲಾ ಶಿವಕುಮಾರ್, ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್. ಗುರುಸ್ವಾಮಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪಕುಮಾರಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಪುಟ್ಟಬುದ್ಧಿ, ಶರಣು ವಿಶ್ವವಚನ ಫೌಂಡೇಷನ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮಜಯಣ್ಣ, ಕೇಂದ್ರೀಯಸಂಚಾಲಕರಾದ ಲಿಂಗಣ್ಣ ಮತ್ತು ಕಾವೇರಿ, ಮಾಧ್ಯಮ ಸಂಚಾಲಕ ನಾಗೇಂದ್ರ, ಗಂಗಾಧರಪ್ಪ, ಆನಂದಮೂರ್ತಿ, ವೀರಭದ್ರಪ್ಪ, ಮಲ್ಲಿಕಾರ್ಜುನಸ್ವಾಮಿ, ಬಸವಣ್ಣ, ಕೆಂಡಗಣ್ಣಸ್ವಾಮಿ ಉಪಸ್ಥಿತರಿದ್ದರು.
======================================================================
ಮೈಸೂರು: ರೋಗಿಗಳ ಹಾರೈಕೆಯಲ್ಲಿ ಭಗವಂತನನ್ನು ಕಾಣುತ್ತಿದ್ದೇನೆ ಎಂದು ಸ್ನೇಹಬಂಧು ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಮೇರಿ ಲೋಬೋ ಹೇಳಿದರು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ 24 ಏಪ್ರಿಲ್ 2019ರಂದು ಆಯೋಜಿಸಿದ್ದ ಜಗನ್ಮಾತೆ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ನೀಡಿದ ಕಾಯಕಯೋಗಿಗೆ ಶರಣು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಶರಣರು ಯಾವುದೇ ಜಾತಿ, ಲಿಂಗ ಭೇದ ಮಾಡದೇ ಮಾನವೀಯ ಮೌಲ್ಯಗಳಿಗೆ ಮಹತ್ವಕೊಟ್ಟರು. ಶರಣರ ಆಚಾರ ವಿಚಾರಗಳನ್ನು ಪ್ರಸಾರ ಮಾಡಲು ಸ್ಥಾಪಿತವಾಗಿರುವ ಸಂಸ್ಥೆಯಾದ ಶರಣು ವಿಶ್ವವಚನ ಫೌಂಡೇಷನ್ ಅನ್ಯ ಧರ್ಮದವಳಾದ ನನ್ನನ್ನು ಸೇವೆಯ ಆಧಾರದ ಮೇಲೆ ಗುರುತಿಸಿ ಪ್ರಶಸ್ತಿ ನೀಡಿರುವುದು ನನ್ನ ಜೀವನದಲ್ಲಿ ಮರೆಯಲಾರದ ಕ್ಷಣ. ನಾನು ಕ್ರೈಸ್ಥ ಧರ್ಮದವಳಾದರೂ ರೋಗಿಯು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ್ದರೂ ಅವರನ್ನು ನನ್ನ ಆಶ್ರಮಕ್ಕೆ ಸೇರಿಸಿಕೊಂಡು ಅವರ ಆರೈಕೆಯಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದೇನೆ. ಯಾವುದೇ ರೋಗಿಗಳು ಮನೆಯವರಿಂದ ಅಥವಾ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ ನನಗೆ ತಿಳಿಸಿದರೆ ಅಂತಹವರಿಗೆ ನಾನು ಆಶ್ರಯ ನೀಡುತ್ತೇನೆ ಎಂದರು. ಸ್ಪಂದನಾ ಮಹಿಳಾ ಬಳಗದ ಅಧ್ಯಕ್ಷೆ ಗೀತಾ ಈಶ್ವರ್ ಮಾತನಾಡಿ ಅಕ್ಕಮಹಾದೇವಿ ಅನುಭವಮಂಟಪದಲ್ಲಿ ವಿಚಾರ ಮಂಡಿಸಲು ಅವಕಾಶ ಮಾಡಿಕೊಡುವುದರ ಮುಖಾಂತರ ಶರಣರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಅಕ್ಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ನಿವಾರಿಸುವ ಪ್ರಯತ್ನ ಮಾಡಿ ದಿಟ್ಟಮಹಿಳೆ ಎನಿಸಿಕೊಂಡಳು. ಆಕೆ ಸಾಮಾಜಿಕ, ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ತಮ್ಮ ವಚನಗಳಲ್ಲಿ ಪ್ರಸ್ಥಾಪಿಸುವುದರ ಮುಖಾಂತರ ವ್ಯಕ್ತಿ ಪರಿಪೂರ್ಣತೆಗೆ ಅವಕಾಶ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಶ್ರವಣದೋಷವುಳ್ಳ ಮಕ್ಕಳ ಮುಖದಲ್ಲಿ ಕೂಡಾ ನಗುವನ್ನು ಕಾಣುವ ಉದ್ದೇಶದಿಂದ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ಅಗತ್ಯಗಳನ್ನು ಮನಗಂಡು ಅವರಿಗೆ ಬೇಕಾದ ಅಗತ್ಯವಸ್ತುಗಳನ್ನು ವಿತರಿಸುವುದರ ಮುಖಾಂತರ ಅವರನ್ನು ಮುಖ್ಯವಾಹಿನಿಗೆ ತರುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಬೆಂಗಳೂರು ಬಿ.ಎಂ.ಟಿ.ಸಿ ನಿರ್ವಾಹಕ ಮಹದೇವಪ್ರಸಾದ್, ನಾಗರತ್ನ, ಗುಂಡಪ್ಪ, ಸ್ನೇಹ ಬಂಧು ಚಾರಿಟಬಲ್ ಟ್ರಸ್ಟ್ ನಿರ್ದೇಶಕ ರವಿಕುಮಾರ್, ಖಜಾಂಚಿ ಗಿರಿಜಾಂಬ, ಈಶ್ವರ್, ವೀರಪ್ಪಾಜಿ, ಶೋಭ, ಮಂಜುಳ, ರೂಪ, ಮಣಿ, ಮಂಜುನಾಥ್, ದಿನೇಶ್, ಮುತ್ತಮ್ಮ, ಚಂದ್ರು, ಗೋಮತಿ, ಗಿರಿಜೇಶ್, ವಚನ, ಇಶಾಂತ್ ಉಪಸ್ಥಿತರಿದ್ದರು.
==========================================

ಮೈಸೂರಿನ ಎಂ ಸಿ ಸಿ ಕಾಲೋನಿಯ ಶ್ರೀ ಶಿವಣ್ಣರವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗಮನಿಸಿ ಕಾಯಕಯೋಗಿಗೆ ಶರಣು ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
______ ___ ____________________ _____________

No comments:
Post a Comment