Tuesday, February 26, 2019

ಗೀತೆ ನಮನ ಸಂಗ್ರಹ ಭಾಗ - 1

ಗೀತೆ ಸಂಗ್ರಹ

1.

ಶೀರ್ಷಿಕೆ:- *ಇಷ್ಟೇ ಸಾಕು ಜನುಮಕೆ*


ಜಗವೆಲ್ಲಾ ಜಂಜಾಟದಿ ನಲುಗಿರಲು
ಅಜ್ಞಾನದ ಅಲೆಯು ಸುತ್ತಿರಲು
ಮನುಜನ ಮನದಲ್ಲಿ ನಾನೆಂಬ ದುರ್ಗುಣ ಕವಿದಿರಲು
ಜ್ಞಾನದ ಜ್ಯೋತಿಯೊಂದು ಜಗಕ್ಕೆ ಬರುತಿರಲು


ವೀರಾಪುರದ ಪುಣ್ಯ ನೆಲದಲ್ಲಿ ಜ್ಯೋತಿಯೊಂದು ಉದಯಿಸಿ
ಉದ್ದಾನ ಶಿವಯೋಗಿಗಳ ಕಣ್ಣಿಗೆ ಕಾಣಿಸಿ
ಜ್ಞಾನದ ಆಲಯವು ಆವಿರ್ಭವಿಸಿ
ದೀಪದಂತೆ ದಿವ್ಯತೆಯು ಉದಯಿಸಿ ಬೆಳಗಿತು ಆಲಯವ

ಜ್ಞಾನದ ದೀಪವ ಬೆಳಗಿಸಲು ನಡೆದಾಡುವ ದೇವರು ನೆಲೆಸಿದ
ಬೇಡಿ ಬಂದವರಿಗೆ ತ್ರಿವಿಧ ದಾಸೋಹವನ್ನಿತ್ತ
ಜ್ಞಾನವೊಂದೇ ಶ್ರೇಷ್ಠ ಮಟ್ಟವೆಂದ
ತುಮಕೂರಿನಲ್ಲಿ ತಂಪಾಗಿ ತಾ ನಡೆದಾಡಿದ

ಇಲ್ಲಿ ಹೊತ್ತಿಸಿದ ದೇವಿಗೆ ಜಗಕ್ಕೆ ಬೇಕೆನಿಸಿತು
ಶಿಸ್ತು ಇಲ್ಲಿ ದೇವರಾಯಿತು
ದಣಿವು ಕಾಣದಾಯಿತು
ಆಡಂಬರವ ತೊರೆದು ತನ್ನನ್ನೇ ತಾ ಮರೆತು ಶಿವಕುಮಾರನೆಂಬ ಜ್ಯೋತಿ ಬೆಳಗಿತು

ದೀಪವು ನಿಮಗೆ ಬೆಳಕಾಗಿ
ಗುರುವೇ ನೀವು ಜಗಕ್ಕೆ ದೇವರಾಗಿ
ಬಾಗಿದ ತೆನೆಯಾಗಿ ಬಸವಾದಿ ಶರಣರಿಗೆ ವಚನಾಗಿ
ಮನಬಾಗಿ ಕರ ಮುಗಿದವರಿಗೆ ನೀನೇ ದೇವರಾದೆ ಗುರುವೇ,

ನಿಮ್ಮ ಪಾದದ ಸಪ್ಪಳವು ಮೌನಕ್ಕೆ ಅನುರಣಿಕೆಯಾಗಲು
ನಿಮ್ಮ ಕಂಡ ಕಣ್ಣುಗಳೇ ಪಾವನವಾಗಲೂ
ಇಷ್ಟೇ ಸಾಕು ಜನುಮಕೆ ಎಂದು ಅಂತರಂಗವು ನುಡಿಲು, ಶರಣು ಶರಣಯ್ಯ ಎಂದು ನಮಿಸುವೆ ಗುರುದೇವಾ...

         ಶ್ರೀಹರಿ‌ ದ್ರಾವಿಡ್..

@@@@@@@


2.
ಅಮರ ದೇವರಿಗೆ ನಮನ

ಶರಣು ಶರಣು ಶ್ರೀ ಶಿವಕುಮಾರ
ಮನುಜ ರೂಪಿಯ ಶಿವ ಅವತಾರ
ಸಿದ್ಧಗಂಗೆಯನು ಪಾವನಗೊಳಿಸಿ
ಶುದ್ಧ ಜೀವನ ನಡೆಸಿದ ಕುವರ
ಭುವಿಯಲಿ ನಿಮ್ಮ ಕೀರ್ತಿಯು ಅಮರ //

ಹೊನ್ನಪ್ಪ ಗಂಗಮ್ಮ ಗರ್ಭಗುಡಿಯಲಿ
ಮಾಗಡಿ ಬಳಿಯ ವೀರಾಪುರದಲಿ
ಉದಿಸಿದ ಮನುಕುಲ ಉದ್ಧಾರಕನೇ
ನಿಮ್ಮ ಸಾಧನೆಯು ಶಿಖರದೆತ್ತರ
ಕಾಯಕ ತತ್ವಕೆ ನೀ ಹರಿಕಾರ //

ತ್ರಿವಿಧ ದಾಸೋಹಿ ಅವತಾರದಲಿ
ಆಶ್ರಯ ಅನ್ನ ಅಕ್ಷರ ನೀಡುತಲಿ
ಲಕ್ಷಾಂತರ ಶಿಷ್ಯರನು ಸಲಹುತ
ಆದಿರಿ ನಡೆದಾಡುವ ಮಹದೇವ
ನಂಬಿದವರ ಪಾಲಿಗೆ ನಿಜ ದೈವ //

ಆಧುನಿಕ ಬಸವೇಶ್ವರ ಎನಿಸಿ
ಚಾರಿತ್ರ್ಯ ಶುದ್ಧಿಯ ನಡೆ ಅನುಸರಿಸಿ
ಮಠಾಧಿಪತಿಯ ಸ್ಥಾನದ ಗೌರವ
ಹೆಚ್ಚಿಸಿದ ನಿಸ್ವಾರ್ಥದ ಯೋಗಿ
ವೈಯಕ್ತಿಕ ಸುಖ ಸಂಸಾರ ತ್ಯಾಗಿ //

ಸಾತ್ವಿಕ ಆಹಾರ ಪದ್ಧತಿಯಲ್ಲಿ
ಸಚ್ಚಿಂತನೆಗಳ ಆಧ್ಯಾತ್ಮದಲ್ಲಿ
ದೀರ್ಘಕಾಲದ ಆಯುಷ್ಯ ಗಳಿಸಿ
ಶಿವೈಕ್ಯರಾದ ಶ್ರೀ ಶಿವಕುಮಾರ
ಜನಮಾನಸದಲಿ ಎಂದಿಗು ಅಮರ //

ಜಾತಿ ಧರ್ಮಗಳ ಎಲ್ಲೆಯ ಮೀರಿ
ಮಾನವ ಕುಲದ ಸಮತೆಯ ತೋರಿ
ಬದುಕಿನ ಶಾಂತಿಗೆ ಬೆಳಕನು ಬೀರಿದ
ಅಮರ ದೇವರಿಗೆ ಅಂತಿಮ ನಮನ
ಭುವಿಯಲಿ ಆಗಲಿ ಪುನರಪಿ ಜನನ //

ಹೊರಾ.ಪರಮೇಶ್ ಹೊಡೇನೂರು, ರುದ್ರಪಟ್ಟಣ
ಅರಕಲಗೂಡು ತಾ.ಹಾಸನ ಜಿ.

@@@@@@

3.

ಶಿವಕುಮಾರ ಸ್ವಾಮೀಜಿ

ಸಿದ್ಧಗಂಗೆಯ ಸಿದ್ಧಪುರುಷ
ಕರುನಾಡ ಬೆಳಗಿದ ಯುಗಪುರುಷ
ಜಗದ ಅಂಧಕಾರ ಅಳಿಸಿದ ನಿಜದೈವ.

ಸಾವಿರಾರು ಕಂದಮ್ಮಗಳಿಗೆ
ಭಕ್ತಿಮಾರ್ಗದಲ್ಲಿ ಮುಕ್ತಿಯ ತೋರಿಸಿ
ಜಾತೀಯತೆ ತೊಲಗಿಸಿದ ನಡೆದಾಡುವ ದೇವರು.

ಶಿವನಾಗಿ ಜನಿಸಿ
ಸರ್ವರ ಏಳಿಗೆಗೆ ತನುಮನ ಅರ್ಪಿಸಿದ
ಕರುನಾಡಿನ ಆಧುನಿಕ ಬಸವಣ್ಣ.

ಕ್ಯಾತ್ಸಂದ್ರದ ಬೆಟ್ಟಗುಡ್ಡಗಳ ನಡುವೆ
ಜೀವ ಜಲದ ನೆಲೆಯಾಗಿಸಿ
ಬೇಡಿ ಬಂದವರಿಗೆ ಆಶ್ರಯ ನೀಡಿದ ಆಶ್ರಯದಾತ.

ಜೋಳಿಗೆ ಹಿಡಿದು ಭಿಕ್ಷೆಯ ಬೇಡಿ
ಒಡಲು ತುಂಬಿಸಿದ ಅನ್ನದಾತ
ಕರ್ನಾಟಕ ರತ್ನ ಶಿವಕುಮಾರ ಸ್ವಾಮೀಜಿ.

ಅನ್ನ ಅಕ್ಷರದ ಅರಿವನು ಮೂಡಿಸಿ
ಕಂಬನಿ ಒರೆಸಿದ ದೈವಸ್ವರೂಪಿ
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ.

ಕಲ್ಪತರು ನಾಡಿನ ಕಲ್ಪವೃಕ್ಷ
ಕಾಯಕದಲ್ಲಿ ಯೋಗವ ಕಂಡ
ಶತಾಯಷಿ ಸಿದ್ದಗಂಗಾ ಸ್ವಾಮೀಜಿ.

ಸಿದ್ದಗಂಗೆಯಲ್ಲಿ ಮಿಂದವರು
ಪುಣ್ಯವಂತರು ಸಂಸ್ಕಾರವಂತರು
ಶಿವಕುಮಾರ ಸ್ವಾಮೀಜಿ ಪಡೆದ ಈ ನಾಡೇ ಧನ್ಯ,ಧನ್ಯ.

ಧನ್ಯವಾದಗಳೊಂದಿಗೆ,

ಕೆ ಸಿ ರಘು ಹೊಸೂರು.
ಶಿಕ್ಷಕರು. ಕವಿಗಳು.

@@@@@@@@

4.

ನಡೆದಾಡುವ ದೇವರು

ಇಂದು ಮಹಾನ್ ವ್ಯಕ್ತಿಯ ಆಗಳಿಕೆ
ನಮ್ಮಗಳ ಮನಕೆ ತುಂಬಾ ಬೇಸರಿಕೆ
ಎನಿಸಿಹರು ತ್ರಿವಿಧ ದಾಸೋಹಿ
ಅನ್ನ, ಅಕ್ಷರ, ಜ್ಞಾನವ ನೀಡಿ

ಅರ್ಪಿಸುತ್ತಾ ಇದ್ದೇವೆ ಗುರುಗಳಿಗೆ ಶ್ರದ್ದಾಂಜಲಿ
ಬಾಳೋಣ ಅವರ ಗುಣಗಳಿಗೆ ಇಡದೇ ತಿಲಾಂಜಲಿ
ಕರೆದರು ನಡೆದಾಡುವ ದೇವರು
ಹಸಿದವರಿಗೆ ಅನ್ನವ ನೀಡಿದರು

ವಿದ್ಯೆ ಅರಸಿ ಬಂದವರಿಗೆ ಶಿಕ್ಷಣವ
ಕೊಟ್ಟು ಹೆಚ್ಚಿಸಿದರು ಅವರ ಜ್ಞಾನವ
ಬದುಕಿದ್ದು ೧೧೧ ವರುಷ
ಕೊನೆಯವರೆಗೂ ಮೊಗದಲ್ಲಿ ಹರುಷ

ಬನದ ಹುಣ್ಣಿಮೆ ಸೋಮವಾರದಂದೇ ಲಿಂಗೈಕ್ಯ
ಈಶ್ವರನಲ್ಲಿ ಆದರು ಐಕ್ಯ
ಇವರು  ಶತಮಾನದ ಕ್ರಾಂತಿಕಾರಿ ಯಗಪುರುಷ
ನಿತ್ಯ ದಾಸೋಹದ ಮೂಲಕ ಪಡೆದರು ಸಂತೋಷ

ನಂಬಿದ್ದರು ಕಾಯಕವೇ ಕೈಲಾಸ
ಮಾಡಿ ಪಡೆದರು ಸಂತಸ
ತೋರಲಿಲ್ಲ ಯಾರಲ್ಲೂ ಜಾತಿಭೇದವ
ಶರಣ ಸಂಸ್ಕೃತಿಯ ದಿವ್ಯ ಕಮಲ

ಆಕಸ್ಮಿಕವಾಗಿ ಸನ್ಯಾಸತ್ವ ಸ್ವೀಕಾರ
ಧರಿಸಿ ಕಾವಿ, ರುದ್ರಾಕ್ಷಿ ಸರ
ಹೊತ್ತರು ಸಿದ್ಧಗಂಗಾ ಮಠದ ಪೂರ್ಣ ಜವಾಬ್ದಾರಿ
ಶ್ರಮಿಸಿದರು ಮಠದ ಏಳಿಗೆಗಾಗಿ

ಪಾತಃಕಾಲ ೪ಗಂಟೆಗೇ ಸ್ನಾನ
ಇಷ್ಟಲಿಂಗ ಪೂಜೆಯಲ್ಲಿ ತಲ್ಲೀನ
ಇತ್ತು ಶ್ರೀಗಳಲ್ಲಿ ದೂರದರ್ಶಿತ್ವ
ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ

ಮುಂಜಾನೆ, ಸಂಜೆಯ ಪ್ರಾರ್ಥನೆಯಲ್ಲಿ ಸಹಬಾಗಿ
ಇರುತ್ತಿದ್ದರು ಎಲ್ಲರ ಜೊತೆಯಾಗಿ
ಭಕ್ತರಿಗೆ ನೀಡುತ್ತಾ ಇದ್ದರು ದರುಶನ
ಮಾಡುತ್ತಾ ಇದ್ದರು ಕುಶಲೋಪರಿ ವಿಚಾರ

ಮಠದ ಆಡಳಿತ, ಪರಿಶೀಲನ ಕಾರ್ಯದಲ್ಲಿ ನಿರತ
ಭಕ್ತರಿಗಾಗಿಯೇ ಅವರ ಮನ ತುಡಿತ
ಭಕ್ತರ ಕಷ್ಟ ಸುಖಕ್ಜೆ ಸ್ಪಂದನ
ಮಾದರಿ ನಮಗೆ ಅವರ ಜೀವನ

ಗುರುಗಳು ಜಾತ್ಯಾತೀತ ವ್ಯಕ್ತಿ
ಹಿಂದೂ ಧರ್ಮದ ಅದಮ್ಯ ಶಕ್ತಿ
ಅನ್ನ, ಅಕ್ಷರ ಜ್ಞಾನಕ್ಕಾಗಿ ಬದುಕು ಮೀಸಲು
ಹಲವಾರು ಪ್ರಶಸ್ತಿಗಳು ಸಾಲು ಸಾಲು

ಸಂದಿತು ಕರ್ನಾಟಕ ರತ್ನ, ಪದ್ಮ ವಿಭೂಷಣ ಪ್ರಶಸ್ತಿ
ಸಮಾಜ ಸೇವೆಯಲ್ಲಿ ಬಲು ಆಸಕ್ತಿ
ಒಂದು ಅಗುಳಿಗೂ ಕೊಟ್ಟಿದ್ದರು ಮಹತ್ವ
ತಿಳಿದು ಆಹಾರದ ಅಂತಃಸತ್ವ

ಮಠಕ್ಕೇ ಆಗಮಿಸುತ್ತಿದ್ದ ಭಕ್ತಗಣ
ನೀಡುತ್ತಾ ಇದ್ದರು ತಮ್ಮ ದಿವ್ಯ ದರುಶನ
ಮುಂಜಾನೆ, ಸಂಜೆಯ ಪ್ರಾರ್ಥನೆಗೆ ಕಡ್ಡಾಯ ಹಾಜರು
ಅವರ ವ್ಯಕ್ತಿತ್ವ ಜಗಜ್ಜಾಹೀರು

ಹಲವಾರು ವಿದ್ಯಾಸಂಸ್ತೆಗಳ ಸ್ಥಾಪನೆ
ಮೂಲಕ ಎಲ್ಲರಿಗೂ ಉಚಿತ ಶಿಕ್ಷಣವನ್ನೆ
ಗುರುಗಳ ಜೊತೆಗಿನ ಪ್ರಾರ್ಥನೆ
ಇದೇ ಮಠದ ಪ್ರಮುಖ ಆಕರ್ಷಣೆ

ಬೆಳಗ್ಗೆ ಸಂಜೆ ಇಷ್ಟಲಿಂಗದಾ ಪೂಜೆ
ನಂತರ ಇತಮಿತ ಆಹಾರದ ಸೇವನೆ||
ಆಕಸ್ಮಿಕವಾಗಿ ಸನ್ಯಾಸತ್ವ ಸ್ವೀಕಾರ
ಧರಿಸಿದರು ಕಾವಿ, ರುದ್ರಾಕ್ಷಿ ಹಾರ

ಎನಿಸಿದ್ದರು ಕಾಯಕಯೋಗಿ
ಜೊತೆಗೆ ಜ್ಞಾನದಾನಿ, ವಿದ್ಯಾದಾನಿ
ಕರೆಯುವರು ನಡೆದಾಡುವಾ ದೇವರು
ಅವರ ಪಡೆದ ನಾವೇ ಧನ್ಯರು

ತುಂಬಿತ್ತು ಗುರುಗಳಲ್ಲಿ ನಿಸ್ವಾರ್ಥತೆ
ದೀನದುರ್ಬಲರಲ್ಲಿ ದಯಾಪರತೆ
ನೀಡುತ್ತಾ ಇದ್ದರು ಹಸಿದು ಬಂದವರಿಗೆ ಆಹಾರ
ತಿಳಿಸುತ್ತಾ ಇದ್ದರು ಆಧ್ಯಾತ್ಮಿಕ ವಿಚಾರ

ಇರಿಸುತ್ತಿದ್ದರು ಭಕ್ತರಿಗಾಗಿ ಬಹು ಸಮಯ
ಮೇಲು ಕೀಳರಿಯದ ಪೂಜನೀಯ
ಎಲ್ಲರೂ ಒಂದೇ ಎಂದು ವಾದ
ಮೂಲಕ ಧರ್ಮ ಇಬ್ಬಾಗತೆಗೆ ವಿರೋಧ

ಅಗಿದ್ದರು ಅಗಾಧ ತತ್ವಜ್ಞಾನಿ
ಮಹಾ ತಪಸ್ವಿ, ಮಹಾಮುನಿ
ಧರ್ಮ ಸಿದ್ಧಾಂತ ಪುರುಷ
ಬಾಳಿದ್ದರು ಶತಾಯುಷ

ಶ್ರೀಗಳ ನುಡಿಯೇ ಜ್ಯೋತಿರ್ಲಿಂಗ
ಕೊನೇಗಾಲದಲ್ಲೂ ಪೂಜಿಸಿದರು ಇಷ್ಟಲಿಂಗ
ಬದುಕಿನುದ್ದಕ್ಕೂ ಮಹಾಜಂಗಮ
ಆಚಾರ ವಿಚಾರಗಳ ಸಂಗಮ

ಶ್ರೀಗಳು ಮಾಡಿರುವ ಸಾದನೆ
ಸೆಳೆದರು ವಿಶ್ವದ ಗಮನಾನೆ
ಆಗಿದ್ದರು ಶ್ರೀಗಳು ವಿಶ್ವಚೇತನ
ಸರ್ವರ ಏಳಿಗೆಗೆ ಸದಾ ಮಿಡಿತ

 ಗುರುಗಳು ಅದ್ಭುತ ತಪೋನಿಧಿ
ಇತ್ತು ಅಗಾಧ ಗುಣಗಳ ನಿಧಿ||
ಬಲು ಅಪರೂಪದ ಅನ್ನದಾನಿ, ವಿದ್ಯಾದಾನಿ
ಜೊತೆಗೆ ಜ್ಞಾನದಾನಿ ಮಹಾಮುನಿ

ಗುರುಗಳು ಸಹನೆ,ಕಾರುಣ್ಯಮೂರ್ತಿ
ಅವರು ನಮಗೆಲ್ಲಾ ಸ್ಫೂರ್ತಿ
ಜ್ಞಾನಯೋಗಿ ಕರ್ಮಯೋಗಿ ತ್ಯಾಗಮಯಿ
ದಾಸೋಹ ಸಿರಿ ಶಿವ ಸ್ವರೂಪಿ
ಕರುಣಾಮಯಿ

ಪಡೆದರು ಲೋಕಕಲ್ಯಾಣದಲ್ಲೇ ಆತ್ಮ ಕಲ್ಯಾಣವ
ಎನಿಸಿಕೊಂಡರು ಎಲ್ಲರಿಂದಲೂ ಗುರುದೇವೋಭವ
ಅನುಸರಿಸಿದರು ಬಸವ ತತ್ವ
ತಿಳಿದ ಅದರಲ್ಲಿನ ಅಂತಃಸತ್ವ

ಉತ್ತಮ ನಡೆನುಡಿಯ ಕಲ್ಪವೃಕ್ಷ
ಆರ್ಶಿರ್ವಾದವೇ ನಮಗೆ ರಕ್ಷ
ಸಿದ್ಧಗಂಗೆಯ ಸಿದ್ಧಪುರುಷ
ಧರ್ಮ ಸಂದೇಶದ ದಿವ್ಯ ಪುರುಷ

ಆಗಿದ್ದರು ದೀನ ದಲಿತರಿಗೆದೀಪ
ಹಲವರ ಬದುಕಿಗೆ ದಾರಿದೀಪ
ಅಗಣಿತರ ಬಾಳಿಗಾಗಿ ಮುಡಿಪು
ಇವರಿಂದ ಬಾಳು ಹೊಳಪು

ಇವರು ಮಹಾಜಂಗಮ
ಹಲವಾರು ಗುಣಗಳ  ಸಂಗಮ
ಇವರು ಆಗಿದ್ದರು ವಿಶ್ವಕ್ಕೇ ರತ್ನ
ನೀಡಬೇಕು ಗುರುಗಳಿಗೆ ಭಾರತ ರತ್ನ

ಗುರುಗಳ ಚಿನ್ನದಂತಹ ಮಾತು
ಕೇಳಿ ಮನಕೆ ಆನಂದ ತಂದಿತು
ಗುರು ತೋರಿದಾ ದಾರಿ
ನಡೆದರೆ ತಲುಪಬಹುದು ಗುರಿ

ಅಗ್ರಹಾರಪ್ರಶಾಂತ
ಶ್ರವಣಬೆಳಗೊಳ

@@@@@@@

6.
*ಬಯಲೇ ಆಲಯವೆಂದೆ*


ಚೈತನ್ಯನದ ಚಿಲುಮೆ ನಿಮ್ಮ ಒಲುಮೆ
ಶಿಸ್ತಿನಿಂದ ‌ಸಿದ್ದಗಂಗೆಯ ಮೆರೆಸಿದೆ
ಕಲಿಯುಗದಲ್ಲಿ ಕರುಣೆ ತೋರುವ ಶಿವನಾದೆ
ಅಜ್ಞಾನ‌ ಅಳಿಸಿ ಸುಜ್ಞಾನ ನೀಡಿದೆ

ಏಸು ದೇವರ ಪೂಜಿಸಿದರೇ  ಫಲವೇನು ನಿನ್ನ ನಡೆಯ ಅರಿಯದೇ
ಪೂಜಿಸಿದ ಫಲವು ತನಗಾಗಿ
ಮಾಡಿದ ಸತ್ಕಾರ್ಯ ಸಮಾಜದ ಏಳಿಗೆಗಾಗಿ
ತನ್ನತನವನ್ನೇ ಮರೆತು ಕಾಯಕವೇ ದೇವರೆಂದೆ
ಅರಸಿ ಬಂದವರಿಗೆ ಸೂರನ್ನು ನೀಡಿ ಅರಸನಾದೆ

ನಿನ್ನ ನುಡಿಗಳು ಶಿವನ ನಾಮದಂತೆ
ಸಿದ್ದಗಂಗೆಯ ನೆಲವು,ಜಲವು ಕೈಲಾಸದಂತೆ
ನೀ ನಡೆಯುವ ಪಾದದ ದನಿಯು ನಾದದಂತೆ
ಆರದ ಅಗ್ನಿ ನಿನಗೆ ಮಂದಾರತಿಯಂತೆ

ಶರಣರ ದಾರಿಯಲ್ಲಿ ನಡೆದು ನಡೆದಾಡುವ ದೇವರಾದೆ
ನೀನಿಟ್ಟ ದಾಸೋಹ ಜಗಕ್ಕೆ ಜ್ಯೋತಿ
ಸರ್ವರಿಗೂ ಬೆಳಕಾಗಿದೆ ನಿನ್ನ ನೀತಿ
ನೀತಿಯ ಅನುಸರಿಸಿ ನಿನ್ನ ಕಂಡ ನಾ ಧನ್ಯ

ಆಡಂಬರವ ಬಯಸದೇ ಬಂಗಾರವಾದೆ
ಶಿವನ ಅಂಗಾರವೇ ಬಂಗಾರವೆಂದೆ
ನೆಲವು,ಜಲವು ಪಲ್ಲಕ್ಕಿ, ಅಭಿಷೇಕವೆಂದೆ
ನಿನಗೆ ನಮಿಸಿದ ನಾನು ನಿಮ್ಮ ಪಾದಕ್ಕೆ ಪದ್ಮವಾದೆ...

*ಗುರುವನ್ನು ಅರಿಯಲು ಅಲೆಯಬೇಕೆ*
*ಬಯಲೇ ಆಲಯವೆಂದಿಹ ಶ್ರೀ ಶಿವಕುಮಾರ ಶರಣನಿಗೆ ಶರಣೆಂದರೆ ಸಾಕೇ ಸಾಕು..*

      ಶ್ರೀಹರಿ ದ್ರಾವಿಡ್ (ಲೇಖಯೋಗಿ)..


@@@@@@@

7.



@@@@@@

8.


@@@@@@

9.


@@@@@@

10.


@@@@@@
11.


@@@@

12.


_ ಕಾಯಕ ಯೋಗಿ ಕರುಣೆಯ ಕಡಲು_

ಅನ್ನ ದಾಸೋಹದ ಹರಿಕಾರ
ಇಷ್ಟಲಿಂಗದ ಪೂಜೆಯಿಂದ
ದೇವನೊಲಿಸಿಕೊಂಡ ಸಾಕಾರ

ಜಾತಿ ಮತ ಪಂಥ ಮೀರಿದ
ಬಡ ಜನರ ಬಂಧು
ಸಾವಿರದ ಸಾಗರದ ಮಮತೆಯ ಸಿಂಧು

ಅನಾಥ ಮಕ್ಕಳಿಗೆ ಅಕ್ಷರ ಕಲಿಸಿದ
ಅಕ್ಕರೆಯ ಜನಕ ಜಗದ್ವಂದ್ಯ
ಆಸರೆ ನೀಡಿ ಪ್ರೇಮ ಹಂಚಿದ ವಿಶ್ವಮಾನ್ಯ

ಎಲ್ಲರ ಮನೆ ಮನಗಳಲ್ಲಿ ಮನೆ ಮಾತಾದ
ಸರಳತೆಯ ಕಾಯಕದ ಯೋಗಿಯಾದ
ನಮ್ಮನೊಡನಿದ್ದು ನಮಗೆಲ್ಲರಿಗೆ ಒಡೆಯನಾದ

ಕಾಣದ ದೇವರು ಕಂಡ ಸಿದ್ಧಗಂಗಾ ಶ್ರೀಗಳು
ಜಪ ತಪದ ನಡುವೆಯೆ ಸೇವೆಯ ಸೌಧ ಕಟ್ಟಿದರು
ಕಣ್ಣಿಗೆ ಕಾಣುವ ನಡೆದಾಡುವ ದೇವರಾದರು

ದೇಶ ಸುತ್ತಲಿಲ್ಲ
ಇದ್ದಲ್ಲಿಯೇ ಕೇಳಿದ್ದನ್ನು ಕೊಡುವ ಕಾಮಧೇನುವಾದರು
ದೇಹಿ ಎಂದವರಿಗೆ ಬದುಕ ನೀಡಿದ ಕಲ್ಪತರುವಾದರು

ಮಾತನಾಡುವವರಿಗೆ ಮಾಡಿ ತೋರಿಸಿದರು
ಪ್ರಶ್ನಿಸುವವರಿಗೆ ಉತ್ತರವಾದರು
ಕತ್ತಲಿಗೆ ಬೆಳಕಾದರು,ದಾರಿದೀಪವಾದರು

ದಯೆ ಕರುಣೆಯ ವಾತ್ಸಲ್ಯಮಯಿ
ಮಕ್ಕಳ ಮಮತಾಮಯಿ ತಾಯಿ
ನಿಮ್ಮ ಚರಣ ಕಮಲಗಳಿಗೆ ಹೃದಯಪೂರಿತ ನಮನ

-ಎನ್.ಆರ್.ರೂಪಶ್ರೀ-

ವಿಳಾಸ;ಎಲ್.ಆಯ್.ಜಿ150.ಶ್ರೀಧರ ಕೃಪಾ ನಿಲಯ,ಎಮ್,ಬ್ಲಾಕ್,ಕುವೆಂಪು ನಗರ,ಸಿ.ಆಯ್.ಟಿ.ಬಿ ವಲಯ,2 ನೇ ಹಂತ,ಮೈಸೂರು-570023,

@@@@@@

13.

ಓ ಶಿವಕುಮಾರಸ್ವಾಮೀಜಿ

ಓ...........
ಸಿದ್ದಗಂಗಸ್ವಾಮೀಜಿ.......
ನೆನೆವೆವು ನಿನ್ನ ಕೊಡುಗೆಯ,
ಹಗಲೂ.......,
ಇರುಳೂ......,
ಬಡಜನತೆಗೆ......,
ವಿದ್ಯೆಯ ಪ್ರವಚಿಸಿ
ಬೆಳೆಸಿದೆ ನೀ ..... ಹೆಮ್ಮರದ,
ವಿದ್ಯಾಪೀಠವಾ......,
ನಿನ್ನ ಏಕೈಕ ಗುರಿಯಹೊಂದಿ......,
ಜಾತಿ ಬೇಧವಿಲ್ಲದೆ......,
ಬೆಳೆಸಿದೆ ನೀ......,
ಸಿದ್ದಗಂಗ ಮಠವಾ......,
ಮುಗಿಲಿನತ್ತಾ......,
ಎಲ್ಲರೊಂದಿಗೂ ಬೆರೆತ ನೀ......,
ದೂರವಿದ್ದೇ ರಾಜಕೀಯದಿಂದ......,
ಈ ನಿನ್ನ ನೆಡಿಗೆಯೇ......,
ಸ್ವಚ್ಛದೊಂದು ಉದಾಹರಣೇ......,
ನಿನ್ನ ಮಹಾಜ್ಞಾನದಲ್ಲೀ......,
ಮನಃತುಂಬಿದೇ......,
ದೇಶದ ಜನರೆಲ್ಲರಿಗೂ......,
ನಿನ್ನ ಮೆಚ್ಚಿದಾ ......,
ಭಕ್ತಜನ ಕರೆದರು,
ನೀ......ನೆಡೆದಾಡುವಾದೇವರೆಂದೂ ......,
ನಿನ್ನ ಕುತೂಹಲದ ವ್ಯಕ್ತಿತ್ವಾ
ಜ್ಞಾನ ಭಂಡಾರ ಹೊತ್ತ ಬೆಟ್ಟದಂತೆ,
ನಿನ್ನ ಆಶೀರ್ವಾದ ಪಡೆಯಲು,
ಜನಸಾಗರವೇ ಹರಿದು ಬರುತ್ತಿತ್ತು ನಿನ್ನೆಡೆಗೆ.
ನಮ್ಮೆಲ್ಲ್ಲರನೂ ಅಗಲೀ,
ಸೇರಿದೇ ನೀನೂ
ಭೂಮಿತಾಯಿಯಾ......,
ವಿಭೂತಿ ಮಡಿಲಿನೊಂದಿಗೆ
ಓ ಸಿದ್ದಲಿಂಗಸ್ವಾಮಿಜೀ
ನೆನೆವೆವು ನಿನ್ನ ಕೊಡುಗೆಯ
ಹಗಲೂ......,
ಇರುಳೂ......,
ಲೇಖಕ: ಹೆಚ್.ಎಂ. ವಿಶ್ವ

@@@

14.

ಪಾರಿಜಾತ ಪ್ರೇಮಲೀಲ

@@@@

15.
ಸ್ವರ್ಗದಲ್ಲೂ ಸಂಭ್ರಮವಂತೆ

ಬಂದರಂತೆ ಬಂದರಂತೆ ಶಿವನ ಕುಮಾರ
ಸ್ವರ್ಗದಲ್ಲೂ ಸಂಭ್ರಮವಂತೆ!
ಪ್ರಣತಿಯೇ ಉರಿದು ಜಗಕ್ಕೆ ಬೆಳಕಾದಂತೆ
ವೃಕ್ಷತಾ ಬೆಳೆದು ಖಗ ಮೃಗಗಳಿಗೆ ಆಹಾರವಿತಂತೆ
ಗಂಗೆತಾ ಧರೆಗಿಳಿದು ಮನುಜರ ಪಾಪ ತೊಳೆದಂತೆ
ಬರದ ನಾಡಿಗೆ ಮುಂಗಾರು ಬಂದಂತೆ
ಸತ್ತ ಮನುಕುಲದ ಆತ್ಮಕ್ಕೆ ಮರುಜೀವವಾದಂತೆ
ಕಾವಿ ಹೊದು ಅಣ್ಣ ಮತ್ತೆ ಬಂದಂತೆ
ತ್ರಿಲೋಕಗಳಲ್ಲೂ ಸಿಗದ ರತ್ನದಂತೆ
ತ್ರಿವಿಧ ದಾಸೋಹಿಯಾಗಿ ಧರೆಯ ಸಾಕಿದರಂತೆ
ಬಂದರಂತೆ ಬಂದರಂತೆ ಶಿವನ ಕುಮಾರ
ಸ್ವರ್ಗದಲ್ಲೂ ಸಂಭ್ರಮವಂತೆ!


_ಶ್ರೇಯಸ್.ಎಸ್
@@@@@

16.
ದಾರಿ ದೀಪ
...............
ಇಷ್ಟಲಿಂಗವ ಪೂಜೆಗೈದು,ಆ
ಕೂಡಲಸಂಗಮಗೆ ಇಷ್ಟವಾದಿರಿ,
ಇಷ್ಟಕ್ಕೇ ನಿಲ್ಲದೆ, ತ್ರಿವಿಧ ದಾಸೋಹಗೈದು ಸಕಲ
ಸಂಕುಲಕ್ಕೆ ದೇವರಾದಿರಿ,
ಸಾಮಾನ್ಯವಾದ ಈ ಜೀವನದಿ,ಅಸಾಮಾನ್ಯ
ಸಾಧನೆಗೈದಿರಿ,
ಕೊನೆಯುಸಿರಲ್ಲೂ ಸಾವಿರ ಒಡಲ ಚಿಂತೆ ನಿಮಗೆ!
ನೀವೇ ಗುರುಪರಂಪರೆಗೆ ಗುರುವು ನಮಗೆ
ಬರುವ ಕಾಲಕೆ ದಾರಿದೀಪವು ಜಗಕೆ
ನಿಮಗೆ ಆ ದೇವರು ಕೂಡಾ ಎಲ್ಲಿಯ ಹೋಲಿಕೆ?
ಅರ್ಧ ದಾರಿ ತೋರಿ
ಹೋಗಿರುವಿರೆನ್ನುವಾಗಲೇ
ಆಗಸದಿ ಪೂರ್ಣ ಚಂದಿರನಾಗಿ ಬೆಳಕ ಚೆಲ್ಲುವಿರಿ
ನಿಮ್ಮ ಕಂಡ ನಮ್ಮ ಬದುಕು
ಸಾರ್ಥಕವೇ ಸರಿ.
............        ...........     ........

ಬಿ. ಮನೋಹರ್

@@@@@@

17.

ನಂದಾದೀಪ
.................
ನಗುವ ನಂದನ ನೀವು
ನಗೆಯ ಚಂದನ ನೀವು
ಮರೆಯಾದಿರಿ ಹೀಗೇಕೆ
ಎದೆಯಲ್ಲಿ ತುಂಬಿ ನೋವು
ಹಸಿದ ಜೀವಕೆ ಅನ್ನವಿಕ್ಕಿದ ಕೈ
ಕಾಯಕದ ಪಾಠಗಳ ನಿರಂತರ
ನುಡಿದ ಬಾಯಿ
ನಿದ್ದೆಯೆಂಬುದ ನೀಗಿ ಅನವರತ
ಜಗದ ,ಜನರ ಒಳಿತಿಗಾಗಿ
ಶ್ರಮಿಸಿದ ಮೈ
ತಂದೆ ನೀನು, ತಾಯಿ ನೀನು
ಎಂಬುದರ ಸಾಕಾರ ರೂಪ
ನಮ್ಮೆಲ್ಲರ ಕಣ್ಣಲ್ಲಿ
ಕಣ್ಣಿರುವವರೆಗೂ
ನಿಮ್ಮದೇ ಮಣಿದೀಪ.


ಪಿ. ಕಾತ್ಯಾಯಿನಿ ಶಿವಲಿಂಗ ಸ್ವಾಮಿ

@@@@@

18.

ಸರ್ವ ವ್ಯಾಪಿ
.................
ಧ್ಯಾನದಲ್ಲಿ ಕಣ್ಮುಚ್ಚಿದರೂ
ಕಾಣುವುದೇ ನಿಮ್ಮ ರೂಪ
ಅನ್ನದ ಅಗುಳಗುಳಲ್ಲೂ
ನಿಮ್ಮದೇ ನಗೆದೀಪ.
ವಿಭೂತಿಯ ಮೂರೆಳೆಯಲ್ಲೂ
ನಿಮ್ಮದೇ ಬಿಂಬ
ಪೂಜೆಗೆ ಕುಳಿತರೆ ಲಿಂಗದಲ್ಲೂ
ನಿಮ್ಮ ಪ್ರತಿಬಿಂಬ.
ಸಾಧು ಜೀವಿಗಳಲ್ಲೂ ತುಂಬಿರುವಿರಿ
ನಿಮ್ಮದೇ ಚಿತ್ರ
ಬರೆಯಲೇ ಬೇಕಿದೆ ನನಗೆ
ನಿಮಗೊಂದು ಪತ್ರ
ನೀವಿಲ್ಲವೆಂಬುದೇ
ಅತಿದೊಡ್ಡ ಸುಳ್ಳು
ನೀವಿರುವಿರೆಲ್ಲೆಲ್ಲೂ
ನನ್ನದಿದು ಸೊಲ್ಲು.


ಪಿ. ಕಾತ್ಯಾಯಿನಿ ಶಿವ ಲಿಂಗ ಸ್ವಾಮಿ

ಕೊಳ್ಳೇಗಾಲ
@@@@@@@

19.

ಕಂಡೆ ನಾ ದೇವನನ್ನ 

ಕಂಡೆ ನಾ ಮಗುವಿನ ನಗುವಿನಲ್ಲಿ ಆ ದೇವನ
ಕಂಡೆ ನಾ ಆ ಮಗುವಿನ ಅಳುವಿನಲು ಆ ಜೀವವ

ಪುಸ್ತಕವಿಲ್ಲದ ಕೈಗೆ ಪುಸ್ತಕ ಕೊಟ್ಟ ದೇವ
ಪುಸ್ತಕದಿಂದಲೆ ಜೀವನ ಎಂದು ತೋರಿದ ಜೀವ

ಹಸಿದ ಹೊಟ್ಟೆಗೆ ಅನ್ನ ಕೊಟ್ಟ ದೇವ
ಹಸಿವ ನೀಗಿಸಿ ಅನ್ನ ಬ್ರಹ್ಮನಾದ ಜೀವ

ಅಜ್ಞಾನಿಯನ್ನು ಜ್ಞಾನಿ ಮಾಡಿದ ದೇವ
ಜ್ಞಾನದಿಂದಲೇ ಬದುಕು ಎಂದು ತೋರಿದ ಜೀವ

ತ್ರಿಕಾಲದಲ್ಲು ದೇವನನ್ನು ಸ್ಮರಿಸಿ ಪೂಜಿಸಲು ಕಲಿಸಿದ ದೇವ
ತ್ರಿಕಾಲವೇ ತಾನಾಗಿ ಭುವಿಯಲ್ಲಿ ನಡೆದಾಡಿದ ಜೀವ

ನ್ಯಾಯ ನೀತಿ ಧರ್ಮಗಳನ್ನು ಸಾರಿದ ದೇವ
ಗುರು ಲಿಂಗ ಜಂಗಮರ ಪ್ರಿಯರಾದ ಜೀವ

ಸಾಗರದಾಚೆಗೂ ಜ್ಞಾನ ಸಾರಿದ ದೇವ
ಸಾವಿರಾರು ಜನರ ನೆಚ್ಚಿನ ಜೀವ

ನೇಸರನಂತೆ ಜಗವ ಬೆಳಗಿದ ದೇವ
ಹುಣಿಮೆಯ ಚಂದಿರನಂತೆ ಶಾಂತವಾಗಿ ಬಾಳಿದ ಜೀವ

ಅಣ್ಣನೇ ಮತೊಮ್ಮೆ ಜನಿಸಿದಂತೆ ಕಂಡ ದೇವ
ಅಣ್ಣನ ದಾರಿಯಲ್ಲೇ ನಡೆದು ತೋರಿದ ಜೀವ

ದೇವ ದೇವರಿಗೆಲ್ಲ ಪ್ರಿಯನಾದ ದೇವ
ಭಕುತರ ಮನದಲ್ಲಿ ಅಳಿಯದೆ ಉಳಿದ ಜೀವ

_ ಶ್ರೇಯಸ್. ಎಸ್

@@@@@

20.
ತವರೂರು
................
ಬೆಳಗಿದರು ಬೆಳಗಿದರು ನಂದಾದೀಪದ ರೀತಿ
ಕಾಯಕವೇ ಕೈಲಾಸವೆಂದ ಪರಂಜ್ಯೋತಿ
ಬೇವಿನ ರಸವನ್ನು ಅಮೃತದಂತೆ ಸವಿದು
ದೇಹವ ವಜ್ರಕಾಯವಾಗಿ ಕಡೆದು
ಜನಮನದಲೆಲ್ಲಾ ಭಕ್ತಿನೂಲನ್ನು
ಹೊಸೆದು
ಪ್ರಸಾದದ ಮಹಿಮೆಯ
ಬದುಕಲ್ಲಿ ಬೆಸೆದು.

ಕಾವಿಯನು ಉಟ್ಟು ಸರಸರನೆ
ಬಂದರು
ಅರೆಕ್ಷಣ ಕಣ್ತೆರೆಯೆ ಪೂರ್ಣ ಚಂದಿರನಾಗಿ ಕಂಡರು
ಬಪ್ಪರು ಇಪ್ಪರು ಎಲ್ಲೆಲ್ಲೂ
ಇವರು
ಸಿಧ್ಧಗಂಗೆಯೆಂದಿಗೂ ನಮ್ಮಯಾ ತವರು.

ಪಿ. ಕಾತ್ಯಾಯಿನಿ ಶಿವ ಲಿಂಗ ಸ್ವಾಮಿ.

ಕೊಳ್ಳೇಗಾಲ.
@@@@@

21.

ನಮೋನಮೋ
....................
ಸುಜ್ಞಾನವೆಂಬ ಪ್ರಣತೆಯಲ್ಲಿ
ದಾಸೋಹವೆಂಬ ತೈಲವನೆರೆದು
ವಿದ್ಯಾದಾನವೆಂಬ ಬತ್ತಿಯಲ್ಲಿ
ಶಿವಕುಮಾರನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿಬೆಳಗುತಿದ್ದಿತಯ್ಯಾ ಸಿದ್ಧಗಂಗಾ ಕ್ಷೇತ್ರ.
ಆ ಬೆಳಕಿನೊಳಗೆ ಒಪ್ಪುತ್ತಿದ್ದರಯ್ಯಾ
ಅಸಂಖ್ಯಾತ ಭಕ್ತ ವಿದ್ಯಾರ್ಥಿಗಳು.



ಸಿದ್ಧಪುರುಷಗೆ ನಮನ

ಗುರುಗಳ ದರುಶನಕೆಂದು
ಸುಕ್ಷೇತ್ರಕ್ಕೆ ಬಂದೆ
ಹೊರಗೆಲ್ಲೋ ಪಯಣಿಸಿದ್ದ
ಗುರು ಸಿಗದೆ ನೊಂದೆ.

ಕಾರ್ಯಕ್ರಮವೊಂದಕ್ಕೆ
ಗುರು ಆಗಮಿಸಿದರು
ನಾನಿದ್ದಲ್ಲಿಗೆ
ಭೂಲೋಕದ ಆ ದೇವನ ಕಂಡು
ಪಾವನವಾಯ್ತು
ಈ ಜನ್ಮ ಇಲ್ಲಿಗೆ.

ದೇವರು ಪ್ರತ್ಯಕ್ಷ ನಾಗುವುದು
ಎಂದರೆ ಇದೇ ಏನು?
ಕಣ್ಮುಚ್ಚಿದಾಗಲೆಲ್ಲಾ ಕಾಣುವೆ
ಅದೇ ದೃಶ್ಯವನ್ನು.

ಜಗದಾಂಬ ಸದಾ ಶಿವ ಮೂರ್ತಿ
ಅಧ್ಯಕ್ಷರು
ಶರಣು ವಿಶ್ವ ವಚನ ಫೌಂಡೇಷನ್

ಕೊಳ್ಳೇಗಾಲ.

@@@@@

22.
ಪ್ರದೀಪ್ ಕುಮಾರ್
ವೈದ್ಯರು ಹಾಗು ಸಾಹಿತಿಗಳು
ಮಂಡ್ಯ
@@@@@@@@

23.
ಪ್ರದೀಪ್ ಕುಮಾರ್
ವೈದ್ಯರು ಹಾಗು ಸಾಹಿತಿಗಳು
ಮಂಡ್ಯ
@@@@

24.
@@@@@@

25.

@@@@@

26.

@@@@@

27.

@@@@@

28.

@@@@@

29.

@@@@

30.

*ನಡೆದಾಡುವ ದೇವರಿಗೆ ನಮನ*🙏🙏🙏

(ಮಯೂರ ಚಿತ್ರದ ನಾನಿರುವುದೆ ನಿಮಗಾಗಿ ಹಾಡಿನ ಧಾಟಿ)

ನೀವಿರುವುದೇ ನಮಗಾಗಿ...|2|
ಈ ನಾಡಿನ ಹಿತಕಾಗಿ...
ಸಿದ್ಧಗಂಗೆಯಾ.. ಸಿದ್ಧಪುರುಷರೆ...
ಬಾಳಿರಿ ನೀವೂ ಸುಖವಾಗಿ...|2|
ನೀವಿರುವುದೆ ನಮಗಾಗಿ..‌ ||ಪ||

ಯಾವ ಜನ್ಮದ ಪುಣ್ಯದ ಫಲವೋ
ನೀವೀ ನಾಡಲಿ ಜನಿಸಿದಿರಿ...
ತಪಸಿನ ಫಲವೋ... ದೇವರ ಒಲವೋ|2|
ಕನ್ನಡ ನಾಡದು ಪಾವನವೂ...
ತ್ರಿವಿಧ ದಾಸೋಹಿಯು ನೀವು
ಕಾಯಕ ಯೋಗಿಯು ನೀವು|2|
ನಿಮ್ಮನು ಹಡೆದ ಜನ್ಮದಾತರೆ
ಪುಣ್ಯವಂತರೂ.. ||ಪ||

ಕೋಟಿ ಕೋಟಿ ವಿದ್ಯಾರ್ಥಿಗಳಿಗೆ
ದಾರಿ ದೀಪವೂ ನೀವಂತೆ..‌|2|
ಗುರುವೂ ನೀವೂ... ಗುರಿಯೂ ನೀವೂ|2|
ಬಾಳ ಹಣತೆಯ ಬೆಳಗಿದಿರಿ.‌‌...
ಬೆಳಗುತಲಿರುವುವು ಎಂದೂ
ಬೆಳಕನು ನೀಡುತ 
ಮುಂದು....|2|
ನಿಮ್ಮನು ಪಡೆದ ಶಿಷ್ಯಕೋಟಿಯು
ಭಾಗ್ಯವಂತರೂ..‌‌ ||ಪ||

ನೂರಾರು ವರುಷ ಬಾಳಿರಿ ನೀವು
ನಮ್ಮೀ ಕನ್ನಡ ನಾಡಿನಲಿ |2|
ನಡೆದಾಡುವಾ... ದೇವರು ನೀವೂ|2|
ನಿಮ್ಮಯ ಒಲವು ನಮಗಿರಲೀ...

ಕರವನು ಮುಗಿವೆವು ಬೇಡಿ
ಆಶೀರ್ವಾದವ ಮಾಡಿ...
ನಮ್ಮಯ ಜೀವನ ಪಾವನವಾಗಲಿ...
ನಿಮ್ಮಯ ಹರಕೆಯಲಿ...‌‌ ||ಪ||



*✍ದೇವರಾಜ್ ನಿಸರ್ಗತನಯ
*ಬಂಗಾರಪೇಟೆ*
$@@@@@

31.
*ನಡೆದಾಡುವ ದೇವರಿಗೆ ಪ್ರಣಾಮ !*

ಕರುನಾಡ ಕಲ್ಪವೃಕ್ಷ
ನಿಷ್ಕಾಮ ಕಾಯಕಯೋಗಿ
ತ್ರಿವಿಧ ದಾಸೋಹಿ ಶಿವಸ್ವರೂಪನೆ
ಶರಣ ತತ್ವ ಪಾಲಿಸಿದ 
ಪರಮ ಪಾವನ ಮೂರ್ತಿಯೆ
ನಡೆದಾಡುವ ದೇವರೇ
ನಿನಗಿದೋ ನಮ್ಮ ಪ್ರಣಾಮ !

ಜಾತಿಮತ ಬೇಧವ ತೋರದೆ
ಮೇಲು ಕೀಳೆಂಬ ತರತಮವಿಲ್ಲದೆ
ಬಡಮಕ್ಕಳ ಬದುಕನು ಹಸನು ಮಾಡಿ
ಅನ್ನ ಅಕ್ಷರ ಆರೋಗ್ಯವ ನೀಡಿ
ಸಕಲರನು ಸಲಹಿದ ಮಾತೃ ಹೃದಯವೆ
ನಿನಗಿದೋ ನಮ್ಮ ಪ್ರಣಾಮ !

ಸ್ವಾರ್ಥವೆಂಬುದು ಸುಳಿಯಲೆಯಿಲ್ಲ
ನಿಸ್ವಾರ್ಥದ ಕಡಲು ನೀನಾದೆಯಲ್ಲ
ಲಕ್ಷ ಲಕ್ಷ ಶಿಷ್ಯ ಕೋಟಿಗೆ ಗುರುವಾಗಿ
ನ್ಯಾಯ ನೀತಿ ಸತ್ಯ ಧರ್ಮಕೆ ಶರಣಾಗಿ
ಕೋಟಿ ಕೋಟಿ ಜನರ ಹೃದಯಗಳಲಿ
ಪ್ರಜ್ವಲಿಸುವ ದಿವ್ಯಜ್ಯೋತಿಯೇ
ನಿನಗಿದೋ ನಮ್ಮ ಪ್ರಣಾಮ !

ಕಾಯಕ ತತ್ವವ ಜನರಲಿ ಬಿತ್ತಿ
ದುಡಿಮೆಯೆ ದೇವರು ಎಂಬುದ ಕೆತ್ತಿ
ಕಾಯಕವೇ ಕೈಲಾಸವು ಎಂದು
ಸಾರಿದ ಸಂತ ಬಡವರ ಬಂಧು
ಬಸವಾದಿ ಶರಣರ ಬಿಡದೆ ಪಾಲಿಸಿದ
ಅಭಿನವ ಬಸವಣ್ಣನೇ
ನಿನಗಿದೋ ನಮ್ಮ ಪ್ರಣಾಮ !

ಕಾಮಕ್ರೋಧ ಲೋಭ ಮೋಹಗಳ
ಮೆಟ್ಟಿ ನಿಂತು ಮೂಢನಂಬಿಕೆಯ
ನಡೆ ನುಡಿಗಳಲಿ ನಿಷ್ಟೆಯ ತೋರಿದ
ಸರಳತೆಯ ಸಾಕಾರ ಮೂರ್ತಿ
ಮಾನವೀಯ ಅಂತಃಕರಣ ಸ್ಪೂರ್ತಿ
ಶತಾಯುಷಿ ಶಿವಕುಮಾರ ಸ್ವಾಮಿಯೆ
ನಿನಗಿದೋ ನಮ್ಮ ಪ್ರಣಾಮ !

ಪಾವನ ಮಣ್ಣದು ಸಿದ್ಧಗಂಗೆಯು
ಕನ್ನಡ ನಾಡಿನ ಪಾವನ ಗಂಗೆ
ಮನುಕುಲದ ಉದ್ಧಾರಕಾಗಿಯೆ
ಧರೆಗಿಳಿದ ಶರಣ ಸಿದ್ಧಪುರುಷರೆ
ನಿಮ್ಮನು ಪಡೆದ ನಾವೇ ಧನ್ಯರು
ಈ ಮಣ್ಣ ಕಣಕಣದಲೂ ನಿಮ್ಮುಸಿರ
ಹಸಿರು ಬೆಳೆಸಿದ ನಿತ್ಯಯೋಗಿಯೆ
ನಿನಗಿದೋ ನಮ್ಮ ಪ್ರಣಾಮ !

*ದೇವರಾಜ್ ನಿಸರ್ಗತನಯ*
*ಬಂಗಾರಪೇಟೆ*
@@@@

32.
@@@@

33.
ವಂದನೆ ಕವಿತೆ 
ವಂದನೆ ..... ಗುರುವಿಗೆ ವಂದನೆ
ವಂದನೆ ... ನಡೆದಾಡುವ ದೇವರಿಗೆ ವಂದನೆ
ತಾಯಿ ಗೌರಮ್ಮನ ೧೩ನೇ ಮಗನಾದ 
ಶ್ರೀ ಶಿವಕುಮಾರ ಗುರುವಿಗೆ ವಂದನೆ ॥ ೧ ॥
ಕೇಸರಿ ಪೇಟವನ್ನು  ಹಾಕಿಕೊಂಡು 
ಕೈಯಲ್ಲಿ ಕೋಲನ್ನು ಹಿಡಿದುಕೊಂಡು
ಹಣೆಗೆ ಭಸ್ಮ ಧರಿಸಿಕೊಂಡು
ಕಾಲಿಗೆ ಪಾದರಕ್ಷೆ ಹಾಕಿಕೊಂಡ
ಶ್ರೀ ಗುರುವಿಗೆ ವಂದನೆ ॥ ೨ ॥
ವಂದನೆ ... ಗುರುವಿಗೆ ವಂದನೆ
ವಂದನೆ .... ನಡೆದಾಡುವ ದೇವರಿಗೆ ವಂದನೆ.
ವಂದನೆ ವಂದನೆ ವಂದನೆ

ಹೃಷೀಕ .ಎಂ
ಎರಡನೇ ತರಗತಿ
ಜೆ ಎಸ್ ಎಸ್ ಪಬ್ಲಿಕ್ ಶಾಲೆ
ಎಸ್ ಜೆ ಸಿ ಇ ಕ್ಯಾಂಪಸ್ 
ಮೈಸೂರು

@@@@@@

34.

ಹೊರಟಿರಾ ನಿಮ್ಮ ಜಗಕೆ?

ಜೋಳಿಗೆ ಜಂಗಮ ಹೊರಟಿರಾ ನಿಮ್ಮ ಜಗಕೆ
ಹುಣ್ಣಿಮೆಯ ಬೆಳಕೂ ಕವಿದಿದೆ ಕತ್ತಲು ಮನಕೆ
ಕಾಯಕ ಯೋಗಿ ಕಾಯ ತೊರೆದು ಹೊರಟರೇಕೆ?
ಸೂರ್ಯನಂತೆ ಪಥ ಬದಲಿಸಿ
ಹೊರಟಿರೆ ಉತ್ತರಾಯಣಕೆ.

ಗದ್ದಲವಿಲ್ಲದೆ ಮನದ ಗದ್ದುಗೆ ಏರಿದ ಸಿದ್ಧ ಪುರುಷರೆ
ಕಾಯುವ ದಂಡಿಸಿ ಕಾಯಕ 
ಕಂಡವ್ರೆ
ದಣಿವಿಲ್ಲದ ದುಡಿಮೆಯಲ್ಲಿ 
ಧನ್ಯತೆಯ ಪಡೆದವರೆ
ಎಣ್ಣೆ ಬತ್ತಿ ಇಲ್ಲದೆ ದೇದೀಪ್ಯವಾಗಿ ಬೆಳಗಿದವರೆ


ಮಕ್ಕಳ ತುತ್ತಿಗೆ ಜೋಳಿಗೆಯ ಜಂಗಮನಾದವರೆ
ತಾಯಿಯಾಗಿ , ತಂದೆಯಾಗಿ ,
ಅರಿವಿನ ಗುರುವಾದವರೆ
ಹಸಿದವನಿಗೆ ತುತ್ತು ಕೊಟ್ಟು,
ನೆತ್ತಿಗೆ ವಿಧ್ಯೆಯ ಬುತ್ತಿಯನಿಟ್ಟವರೆ
ದೇವರೆಲ್ಲಿ ಎಂದವಗೆ ಮಕ್ಕಳೆಡಗೆ ಬೊಟ್ಟು ಮಾಡಿ  ತೋರಿದವರೆ

ಸಂತರು ಸಂತ ಶಿವೋಹಂ ದಾಸೋಹಂ ಎಂದರೆ
ಇವನಾರವ ಇವನಾರವನೆನದೆ   ಇವ ನಮ್ಮವ ಇವ ನಮ್ಮವ 
ಮೆರೆದವರೆ
ಹೆತ್ತ ವರು ಮರೆಸಿ ಬಂಧುವಾಗಿ
ಪೊರೆದವರೆ
ತ್ರಿ ವಿಧ ದಾಸೋಹ,ಶಕ ಪುರುಷ
ಧಣಿವರ್ಯರೆ

ಶರಣರ ಜೀವನ ಮರಣದಲ್ಲಿ 
ಎಂಬ ಮಾತಿಗೆ 
ನಾಡಿಗೆ ನಾಡೇ ಇಂದು ನಿಮ್ಮ ಕಡೆಗೆ
ಸಾವಿರದ ಸಾಧಕರಿಗಿಲ್ಲ 
ಭಾರತರತ್ನ
ಜಗಕೆ ಬೆಳಕ ನೀಡಿದ ನೀವೇ
ಅನರ್ಘ್ಯ ರತ್ನ

ದೊಡ್ಡ ಬುದ್ಧಿ ಹೊರಟೇ ಬಿಟ್ಟಿರೇ ನಿಮ್ಮ ಮನೆಗೆ
ಸಾವಿಲ್ಲದ ಕೇಡಿಲ್ಲದ  
ಕಂಗಳೂರಿನ ಅಂಗಳದೆಡೆಗೆ

                        ಸಿ.ಈ.ತ್ರಿವೇಣಿ
                  ಸ.ಪ.ಪೂ.ಕಾಲೇಜು.ಭೇರ್ಯ
@@@@@

35.
"ಜಗದ ಕಣ್ಮಣಿ ಸಿದ್ದಗಂಗಾ ಶ್ರೀ ಗಳು."

          

ಜಗದ ಜ್ಯೋತಿ ಶ್ರೀ ಗುರುವೇ ನೀವು

ಬಡವರ, ಅನಾಥರ,ಮುದ್ದು ಮಕ್ಕಳ ಬಂಧುವೇ ನೀವು

ಜಗದ ಮತದ , ವಿಶ್ವ ಶ್ರೇಷ್ಠ ಶ್ರೀಗಳು ನೀವು 

ಸಕಲರ ರಕ್ಷಕ, ಪ್ರೇಮ,ವ್ಯಾತ್ಸಲದ ಜ್ಯೋತಿಯ ಸ್ವೋರ್ತಿಯೇ

ಗುರುವೇ ನೀವು


ಇಷ್ಟಲಿಂಗದ ಕುರುವಿನಲ್ಲಿ

ಶಿವೈಕ್ಯರಾದ ಶಿವಶರಣರು

ಕಾಯಕ ಸೇವೆಯೇ  ಶ್ರೇಷ್ಠರು

ಸತ್ಯದ ಸ್ವರೊಪಿ ಶ್ರೀ ಗಳು

ದಾರ್ಶನಿಕರ ಮೌಲ್ಯಗಳು ಪಾಲಿಸಿದ

ಜಗದ ಒಡೆಯ ಪೂಜ್ಯರು

ಸೃಷ್ಟಿ ಕರ್ತನ ಕಡೆಗೆ ಸಾಗಿದರು

ವಿಶ್ವ ಶ್ರೇಷ್ಠ ರತ್ನ ಶ್ರೀಗಳು


ದಾಸೋಹ ಕಿಂಕರ

ಶಿಕ್ಷಣದ ಸಮನತೇಯ 

ವಿಶ್ವದ ಹಿರಿಮೆಯೆ

ಶರಣರ ವೈಚಾರಿಕ ನುಡಿ

ವೈಚಾರಿಕ ಪ್ರಜ್ಞೆಯ ವಿಶ್ವರೂಪ

ಸಿದ್ದಗಂಗೆಯ ಸತ್ಯದ ಕಣ್ಮಣಿ

ಸರ್ವರ ಪಾಲಿನ, ತ್ಯಾಗದ ಒಡಲಿನ ಶ್ರೀಗಳು


ಮಕ್ಕಳಲ್ಲಿ ಯೇ ದೇವರ ಕಂಡ

ಕಾಯಕವೇ ಕೈಲಾಸವೆಂಬ ನೀತಿ ಯ

ಮಂತ್ರದ ಸ್ವೋರ್ತಿಯ ಚಲುಮೆ 

ಶಿಖರದ ಒಡೆಯ ಪೂಜ್ಯರು 

ನಿಸ್ವಾರ್ಥ ಸೇವೆಯ ಶ್ರೀ ಗಳು ನೀವು


ಬಸವಾದಿ ಶರಣರ

ಆಶೆ ಯಂತೆ , ಜೀವಿಸಿದ

ಶ್ರೇಷ್ಠ,ಶರಣ,ಸಂತ

ಅಂಧಾಚಾರಗಳಿಗೆ ಮುಕ್ತಿ ನೀಡಿದ

ಕಾಯಕ ಯೋಗಿ 

ಕರ್ಮಯೋಗಿ, ಶ್ರೀ ಗಳು ನೀವು


ಬದುಕಿನ ಬಾಳಿನ

ಜೀವನದಲ್ಲಿ ಸಾಧಿಸಿದ್ದು

ಶ್ರೇಷ್ಠ ತೇಯ ಪ್ರಜ್ವಲತೇಯನ್ನು ಕರುಣೀಸಿದ

ಮಾಹಾ ಮುರ್ತಿಯ ಸಂತ

 ಮುಕುಟದ ಶಿಖರದ

ಭಾವೈಕ್ಯತೆಯ ಸಂಗಮ

ತನು ಮನ ಶಾಂತಿ ಯ ಪುರುಷ

ಶ್ರೀ ಸಿದ್ದಗಂಗಾ ಶ್ರೀಗಳ ಆತ್ಮಕ್ಕೆ

ಶರಣು ಶರಣೆಂಬೆ ನಾನು!!!



✍🏼 *ಸಂಗಮೇಶ ಜವಾದಿ ಕೊಡಂಬಲ ಬೀದರ್.*

@@@@@

36.
" ಧ್ರುವತಾರೆ "

ಭುವಿಯ ಮೇಲೆ ಜನಿಸಿದ 
ಭೂಲೋಕದ ಧ್ರುವತಾರೆ 
ಶಿವನ ಅವತಾರವೆತ್ತಿ ವೀರಾಪುರದಲಿ 
ಜನ್ಮತಳೆದ ಕಲಿಯುಗದ ದೈವವೇ 

ಗಂಗಮ್ಮ -ಹೊನ್ನೇಗೌಡರ ಉದರದಿ 
ಚಿಗುರೊಡೆದ ಕುಸುಮವೇ 
ತುಮಕೂರಿಗೆ ನೆರಳಾಗಿ ನೆಲೆನಿಂತ 
ನಡೆದಾಡುವ ಶಿವಯೋಗಿಯೇ 
ನಿನ್ನ ಚರಣ ಕಮಲಗಳಿಂದ ಪಾವನವಾಯಿತು ಈ ಗಂಧದ ನಾಡು 

ಅನಾಥ ಮಕ್ಕಳ ತಂದೆ 
ಬಡವರ ಪಾಲಿನ ಪಾಲಕ 
ಸಮಾಜ ಸೇವೆಯೇ ಈಶ ಸೇವೆಯೆಂದು 
ನಂಬಿದ ಕಾಯಕಯೋಗಿವರಿಯನೇ 
ನಿನ್ನ ನೇತ್ರ ಜ್ಯೋತಿಯಿಂದ ಭವ್ಯವಾಯಿತು 
ಈ ಕರುನಾಡ ಮಕ್ಕಳ ಬದುಕು 

ಜ್ನ್ಯಾನದ ಹಸಿವಿಗೆ ಅಕ್ಷರದ ಧಾರೆಯೆರೆದವರು 
ಉದರದ ತೃಷೆಯನು ತಣಿಸಿದ ಅನ್ನದಾತ 
ತ್ರಿವಿಧ ದಾಸೋಹದಿ ಲೋಕಕಲ್ಯಾಣ ಕೈಗೊಂಡಾತ 
ನಿನ್ನ ಮಮತೆಯ ಮಡಿಲಿಗೆ ಸರ್ವರ ಸೆಳೆದಾತ 
ಶಿವಸ್ವರೂಪಿ ಶಿವಕುಮಾರ 
ನಾಮಧೇಯಕೆ ಒಡೆಯನಿತ 

ಜಾತಿಭೇದವ ಮೆಟ್ಟಿನಿಂತ ಬಸವಣ್ಣನ ಆರಾಧಕ 
ಕುಲಭೇದವನಿಲ್ಲದೆ ಸಕಲರನು 
ಪೋಷಿಸಿದ ಸಾಹುಕಾರ 
ನಿನ್ನ ಗರಡಿಯಲಿ ಬೆಳೆದರು  ರಾಷ್ಟ್ರಕವಿ ಶಿವರುದ್ರಪ್ಪ 
ಸಾಹಿತ್ಯದ ಮೇರು ಸಾಧಕರನು ಬೆಳೆಸಿದಾತ 
ನಿನ್ನ ಹಸ್ತ ಸ್ಪರ್ಶದಿಂದಲೇ ಪಾಪಗಳೆಲ್ಲ ಕಳೆದಾತ 

ಸಿದ್ಧಗಂಗೆಯ ಸಂತ ,
ಕಾಯಕದಲ್ಲಿ ಕೈಲಾಸಕಂಡ ಯೋಗಿ 
ಪಯಣಿಸುತಿರುವೆಯಾ ದೇವಲೋಕಕೆ 
ನಮ್ಮನೆಲ್ಲ ಅನಾಥರನ್ನಾಗಿಸಿ 
ಮರಳಿ ಬಾ ಎನ್ನ ನಾಡಿಗೆ 
ಮತ್ತೆ ಚಿಗುರೊಡೆಯಲಿ ನಿಸ್ವಾರ್ಥತೆಯ 
ಭಾವ ಎಲ್ಲೆಡೆ 

  ಜಯಶ್ರೀ ಜಮಾದಾರ
 ಶಿಕ್ಷಕರು 
ಸರಕಾರಿ ಪ್ರೌಢ ಶಾಲೆ ಹಳ್ಳಿಸಲಗರ 
ತಾ : ಆಳಂದ   ಜಿ : ಕಲಬುರಗಿ
@@@@@@

37.
🌺ಶ್ರೀಗಳ ಚರಣಕಮಲಕೆ🌺

ಏನುಹೇಳಲಿ ದೇವಮಹಿಮೆಯ
ನಾನು ಚಿಕ್ಕವ ನಿರುವೆನು
ಭಾನುಮುಟ್ಟುವನಿಮ್ಮಕೆಲಸವು
ಜೇನು ಹುಳದ ತ್ಯಾಗವು //1//

ಮಾತುಮಾತಿಗೆಬಸವನಾಮವು
ಸೋತೆನೆಂದು ಕೂರಲಿಲ್ಲ
ಕೂತುತನ್ನ ಚಿಂತೆಯಮಾಡದೆ
ಬೆರೆತುಹೋದಿರಿ ಕೆಲಸದಿ//2//

ಮನವಜಯಿಸಿದಜಗದ್ಗುರುಗಳು
ಸುಮದಪರಿಮಳ ಚೆಲ್ಲಿ ನಿಂತರು
ತಮದಬದುಕಿಗೆಬೆಳಕಬೀರುತ
ಮನವಬೆಳಗಿದಮಹಿಮರು//3/

ನರನಹೃದಯದಕೊಳೆಯತೆಗೆದು
ಹರನಕರುಣೆಯತೋರಿಜಗದಲಿ
ಶರಣಸಂಸ್ಕೃತಿಕಟ್ಟಿಬೆಳೆಸಿದ
ಚರಣಕಮಲಕೆ ಎರಗುವ//4//
   ನೈದಿಲೆ, ಕಡಲಮಗೆ.
@@@@

38.
**ಶಿವಕುಮಾರೇಶ **
🌷🌷🌷🌷🌷🌷

""ಶಿವಕುಮಾರೇಶ ಸಿದ್ಧಗಂಗೆ ನಿನ್ನ ವಾಸ ""

ಪಸರಿಸಿಹ ನಿನ್ನ ನಾಮ 
ಜಗದಗಲ, ಮುಗಿಲಗಲ,... 
ಬಯಸಿದೆ ನೀ ಸದಾ... 
ಭಕ್ತ ಸಂಕುಲಕೆ ಸುಬಿಕ್ಷೇ... 

""ಶಿವಕುಮಾರೇಶ ""

ಹೊನ್ನೇಗೌಡ.---ಗಂಗಮ್ಮನ ಉದರದ ಕುವರ, 
ಧರೆಗಿಳಿದ, ಕರುಣಾಕರ... 
ಶಿವನ ಸುಪುತ್ರ... 
ಭಕ್ತರ ದೈವಕೆ ನೀನೇ ದೇವಾ... 

""ಶಿವಕುಮರೇಶ ""

ಪಡೆದೆ ನೀ ಉದ್ಧಾನ ಶಿವಯೋಗಿಗಳಿಂದ ದೀಕ್ಷೆ. . 
ಮಠದ ಎಳಿಗೆ ಪಣ ತೊಟ್ಟೆ. 
ಛಲ ಬಿಡದೆ ಎಡರು --ತೊಡರುಗಳು ಮೆಟ್ಟಿ... 
ಮನೆ --ಮನೆ ಭಿಕ್ಷೆ ಬೇಡಿದೆ...
ಮಕ್ಕಳ ಹಸಿವು ನೀಗಿಸಿದೆ... 

"'ಶಿವಕುಮಾರೇಶ ""

ಅನ್ನ -ಅಕ್ಷರ-ಅಧ್ಯಾತ್ಮ 
ತ್ರೀವಿಧ  ದಾಸೋಹಕ್ಕೆ ನಿನ್ನ ಹೆಸರ.... 
ನಿರ್ಗತಿಕರಿಗೆ ನೀನೇ ಆಧಾರ.. 
ದಿನಪ್ರತಿ ನಿನ್ನ ದರುಶನಕೆ... 
ಹರಿದು ಬರುವದು ಭಕ್ತ ಸಾಗರ. 

""ಶಿವಕುಮಾರೇಶ ""

ನಿತ್ತ್ಯದಿ ಪೂಜಾ -ಕಂಕಯ್ರ್ಯ ನಡೆಸುವದು, ನಿನ್ನ ಕಾಯ .. 
ಬಸವ ಪ್ರತಿಪಾದನೇ ನಿನ್ನ ಧ್ಯೆಯ... 
ಬಡವ--ಬಲ್ಲಿದರು ಎನ್ನದೆ 
ಸಮಾನತೆ ಸಾರಿದ ದೇವಾ... 

""ಶಿವಕುಮಾರೇಶ "'

ನಿನ್ನ ಕಾಯ ಕ್ಕೆ ಬೇವಿನ ರಸಉಣಿಸಿ... 
ಭಕ್ತಗಣಕ್ಕೆ ಜೇನಿನ ರಸ ಉಣಿಸಿದ ಯೋಗಿ. . 
ಪರ್ಮತಮನಲ್ಲಿ.... 
ಲೀನವಾದೇ ತ್ಯಾಗಿ... 
ಅನ್ನದಾನೇಶ್ವರ... 
ನಮಿಸುವೆ ನಿನಗೆ... 
ಮತ್ತೆ ಹುಟ್ಟಿ ಬಾ 
ತಂದೆ... 

""ಶಿವಕುಮಾರೇಶ 
ಸಿದ್ಧಗಂಗೆ ನಿನ್ನ ನಿವಾಸ '"
🌻🌻🌻

       **ಓಂಕಾರ ಪಾಟೀಲ **
@@@@

39.
*ನಡೆದೇ ಬಿಟ್ಟರು ನಮ್ಮ ದೇವರು* 

ದೇವರ ನಾಡಿಗೆ ನಡೆದರು 
ದೇವಮಾನವ ಶ್ರೀಗಳು 
ಬಂದ ಕಾಯಕಲ್ಪ ಮುಗಿಸಿ 
ದೂತ ಕಾರ್ಯವ ತ್ಯಜಿಸಿ 
ದೇವರ ನಾಡಿಗೆ ದೇವರಾಗಿ 
ನಡೆದೇ ಬಿಟ್ಟರು 
ನಮ್ಮ ದೇವರು !

ಹಸಿವಿಗೆ ಅನ್ನವಿತ್ತ; 
ಅನ್ನದೇವರು 
ಬುದ್ಧಿಗೆ ವಿದ್ಯೆಯನಿತ್ತ; 
ವಿದ್ಯಾದೇವರು 
ಅಂಧಕಾರದ  ಜೀವಕ್ಕೆ  
ಜ್ಞಾನದ ದೀವಿಗೆಯನಿತ್ತ; 
ದೈವಜ್ಞಾನಿಗಳು 
ದೇವರ ನಾಡಿಗೆ ದೇವರಾಗಿ 
ನಡೆದೇ ಬಿಟ್ಟರು 
ನಮ್ಮ ದೇವರು !!

ಭಕ್ತರ ಮನದ ಶಾಂತಿ 
ಮಕ್ಕಳ ಕರುಣೆಯ  ಕಾಂತಿ 
ಮುಗ್ಧ ಮನಸ್ಸಿನ  ಬೆಳಗು
ಜಗದ ಜನತೆಗೆ 
ಬದುಕಿನ ಸಾರ್ಥಕತೆಯ 
ದಾರಿಯನು ಮುಂದಿಟ್ಟ
ದಿವ್ಯ ಚೇತನವು
ದೇವರ ನಾಡಿಗೆ ದೇವರಾಗಿ 
ನಡೆದೇ ಬಿಟ್ಟರು 
ನಮ್ಮ ದೇವರು !!

                ರಾಚು ಶ್ಯಾಂ ಮಾರಳ್ಳಿ  

ನಡೆದಾಡುವ ದೇವರಿಗೊಂದು ನಮನ
@@@@@

40.
***** ವಿಶ್ವ ಚೇತನ *****

ಹೊಳೆ ಹೊಳೆದು ಬಂದಿರೈ ನೀವು
ಈ ಭುವಿಗೆ ನಡೆದಾಡುವ
ದೇವರಾಗಿ, ಶರಣ ಸಂತರಾಗಿ
ತ್ರಿವಿಧ ದಾಸೋಹಿಗಳಾಗಿ
ಸಾಕಾರ ಮೂರ್ತಿಯಾಗಿ --!

ಬಡಜನರ ಬದುಕಿಗೆ ನಂದಾದೀಪವಾಗಿ
ಒಲವಿನ ವಾತ್ಸಲ್ಯದ ಮಹಾಮೇರಾಗಿ
ಸಿದ್ಧಗಂಗೆಯ ಸಿದ್ಧ ಪುರುಷರಾಗಿ 
ಸರ್ವ ಜನಾಂಗದವರ ಗುರುಗಳಾಗಿ
ಮಕ್ಕಳ ಮನಸ್ಸಿನ ಕಲ್ಪತರುವಾಗಿ! 

ಮರಳಿನ ಮೇಲೆ ಅಕ್ಷರ ಕಲಿತು
ವಿದ್ಯಾಜ್ಯೋತಿಯ ಧಾನಿಯಾಗಿ
ತತ್ವ ಜ್ಞಾನದ ಹಣತೆಯ ಹಚ್ಚಿ
ಜ್ಞಾನಿಗಳ ಜ್ಞಾನಿಯು ನೀವಾಗಿ
ಬೆಳಗಿ ನಿಂದಿರಿ ಇಳೆಯಲಿ!

ಧರ್ಮ ತತ್ವದ ಸಂದೇಶ ಸಾರಿ
ದಿವ್ಯ ಚೇತನವಾಗಿ ದಾರಿಯ ತೋರಿ
ತಪೋ ಮೂರ್ತಿಯಾಗಿ ಶತಾಯುಷಿ
ಸ್ವಾಮೀಜಿಯಾಗಿ ಶಿವಕಾರುಣ್ಯ ಸ್ವರೂಪಿಯಾಗಿ
ಹುಣ್ಣಿಮೆಯ ಪೂರ್ಣ ಚಂದ್ರರಾದಿರಿ ಈ ಜಗಕ್ಕೆ!

     ** ಸುದರ್ಶನ್ ಕುಸುಬೂರು
@@@@

41.
*ದೇವರೆಡೆಗೆ*
ಸದ್ದು ಗದ್ದಲವಿಲ್ಲದೆ ಸಾಧನೆಯ ಶಿಖರವೇರಿ 
ಕಾಯಕದ ಮೂಲಕ ಕೈಲಾಸ ಕಂಡು  
ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾದ 
ದೈವದ ಜ್ಯೋತಿ ದೇವರೆಡೆಗೆ ಸಾಗಿದೆ 

ಹೋಮ ಹವನದ ಹಂಗಿಲ್ಲದೆ 
ಮಂತ್ರ ತಂತ್ರದ ಮಾಯೆಗೆ ಸಿಗದೆ 
ಅನ್ನ ಅಕ್ಷರ ವಿದ್ಯಾ ಯಜ್ಞದಿಂದ 
ಬಡವರ ಬದುಕಿನಲಿ ನಗು ತುಂಬಿದ  
ದೈವದ ಜ್ಯೋತಿ ದೇವರೆಡೆಗೆ ಸಾಗಿದೆ 

ಶತಮಾನ ಪೂರೈಸಿ ಸರ್ವರನ್ನು ಹಾರೈಸಿ 
ನಮ್ಮೆದುರಿಗೆ ನೆಡೆದಾಡಿದ ದೇವರು 
ಭುವಿಯ ಬೆಳಗುತ್ತಾ ಧಣಿವರಿಯದೆ 
ದುಡಿದು ಕರುನಾಡಿಗೆ ಕೀರ್ತಿ ತಂದು ಹಾಡು ಮುಗಿಸಿದ 
ದೈವದ ಜ್ಯೋತಿ ದೇವರೆಡೆಗೆ ಸಾಗಿದೆ 

ಸ್ವರ್ಗದಿಂದ ಧರೆಗಿಳಿದ ಪುಣ್ಯಾತ್ಮ 
ಲಿಂಗ ಪೂಜೆಯಲ್ಲಿ ಶ್ರೇಷ್ಠತೆ ಸಾಧಿಸಿ 
ಅರಿವಿನ ದೀಪ ಹಚ್ಚಿದ ಜಂಗಮ 
ನುಡಿದಂತೆ ನಡೆದು ದಾರಿ ದೀಪವಾದ 
ದೈವದ ಜ್ಯೋತಿ ದೇವರೆಡೆಗೆ ಸಾಗಿದೆ 

ನಾಡರಮನೆಯ ನಂದ ದೀಪ ಆರಿದೆ 
ಜಗದಲೆಲ್ಲ ಅಂಧಕಾರ ಆವರಿಸಿದೆ 
ಮತ್ತೆ ಹುಟ್ಟಿ  ಬರಲಿ ಭಗವಂತ 
ಸರ್ವರ ಹಿತ ಕಾಯಲು ಭೂ ಲೋಕದಲ್ಲಿ ಭಗವಂತನ ತೋರಲು 

              ಪ್ರಸನ್ನಕುಮಾರ್ ಸುರೆ 
                      ಬಾಣಾವರ
@@@@

42.
ಸಿದ್ದಗಂಗಾ ಶ್ರೀಗಳಿಗೆ ನುಡಿನಮನ

ಕಾಯಕ ಯೋಗಿಗೆ ನನ್ನ ನಮನ
ಬಸವನಂತೆ ಬಾಳಿದ ದಿವ್ಯ ಚೇತನ!! (ಪ)
ತ್ರಿವಿಧ ದಾಸೋಹ ನಡೆಸಿದಾತ
ಎಲ್ಲರನು ಅಪ್ಪಿಕೊಂಡ ಶಾಂತಿದೂತ!!(ಅ.ಪ)

ಜಾತಿ-ಮತ,ಲಿಂಗಭೇದವನು ಅಳಿಸಲು
ಅಕ್ಷರದ ಅಸ್ತ್ರವನು ಜಗಕೆ ನೀಡಿದ
ನಡೆ-ನುಡಿ ಒಂದಾಗಿ ಬಾಳಿ ಬದುಕಿದ
ಅನಾಥಮಕ್ಕಳಿಗೆ ಚೈತನ್ಯ ತುಂಬಿದ!!(೧)

ಕಣದ ಕೈಲಾಸ ಯಾರು ನೋಡಿಲ್ಲ
ನಿಜ ಕೈಲಾಸದಂತಿದೆ ಸಿದ್ದಗಂಗಾ
ನಿತ್ಯವೂ ಹರಿಯುವ ಜ್ಞಾನ ಸಾಗರ
ಶತಾಯುಷಿ ಸಂತ ಶ್ರೀಶಿವುಕುಮಾರ!!(೨)

ಮಾನವೀಯತೆಯ ಮಹಲು ಕಟ್ಟಿದ
ಮಹಾತಪಸ್ವಿ
ಸಂಸ್ಕಾರ ಬೆಳಿಸಿದ ಶಿಸ್ತಿನ ಸಿಪಾಯಿ
ಹಸಿದವರಿಗೆ ಅನ್ನವಿಟ್ಟ ಅನರ್ಘ್ಯ ರತ್ನ
ಶಾಶ್ವತ ಮೌನಕ್ಕೆ ಜಾರಿದ ಪರಂಜ್ಯೋತಿ!!(೩)

🙏🙏🙏
ಪುಷ್ಪಲತಾ ಕುಮಾರಸ್ವಾಮಿ
ಗೌರಿಶಂಕರನಗರ
ಮೈಸೂರು
🙏🙏🙏🙏🙏🙏🙏🙏
@@@@

43.
*ಅನಂತದೆಡೆಗೆ ನಡೆದ ಶ್ರೀ ಚೇತನ*

ಮಾತೃ ಹೃದಯದ ಮಮತಾಮಹಿ 
ಅನ್ನದಾನಿ
ವಿದ್ಯೆಯ ನೀಡಿದ ಕರುಣಾಮಹಿ ಜ್ಞಾನದಾನಿ
ದೇವರ ಸನ್ನಿಧಿ ನಿಮ್ಮಯ ತಾಣ ಶತಮಾನದ ಶತಾಯುಷಿ

ತ್ರಿವಿಧ ದಾಸೋಹಿ ಸಿದ್ಧಗಂಗೆಯ ಸಿದ್ಧಪುರುಷ
ಜ್ಞಾನ ಪ್ರಸಾದದ ಬಂಡಾರ ಮಹಾಋಷಿ
ಶರಣ ಸಂಸ್ಕೃತಿಯ ಬ್ರಹ್ಮಕಮಲ
ಕಾಯಕದಲ್ಲಿಯೆ ಕರ್ಮ ಕಾಯಕವೆಂಬುದೇ ಧರ್ಮ
ಕಾಯಕತತ್ವದ ಕ್ರಿಯಾಶೀಲ ಚೇತನ
ಬೇಧವ ತೋರದ ವಿಶ್ವ ಚೇತನ
ವಿದ್ಯಾರ್ಥಿಗಳ ನಿಧಿ ಆಧ್ಯಾತ್ಮ ಜ್ಯೋತಿ

ಆಧ್ಯಾತ್ಮ ಗುರು ಜ್ಞಾನದ ದೊರೆ
ಪ್ರತಿಫಲ ಬಯಸದೆ ಸೇವೆಯ ಗೈದ ಕಾಯಕಯೋಗಿ
ಮಾನವ ಧರ್ಮದ ಮುಕುಟಮಣಿ ವಿಭೂತಿ ಪುರುಷ
ಮನುಕುಲದ ದಾರಿದೀಪ ಯುಗಪುರುಷ
ಆಶ್ರಯದಾತ ವಾತ್ಸಲ್ಯ ಶ್ರೀ ಸಿದ್ಧಗಂಗಾ ಶ್ರೀನಿಧಿ
ಜಂಗಮ ಶ್ರೇಷ್ಟ ಜ್ಞಾನಕೋಶ 
ಅವತಾರ ಪುರುಷ ಮಹಾಚೇತನ
ಅನಂತದೆಡೆಗೆ ನಡೆದ ನಡೆದಾಡುವ ದೇವರು ಅಜರಾಮರ 

ದೇಸು ಆಲೂರು...✍
@@@@

44.
@@

45.

ರುಕ್ಮಿಣಿ ತನಯ
ಸುರೇಶ್ ರಾವ್ ಚವ್ಹಾಣ್ (ಆರೋಗ್ಯ ಇಲಾಖೆ)
ಮೈಸೂರು
@@@
46.

@@@

48.
@@@@

49.

@@@

50.


ಚಿತ್ರ ಸಂಗ್ರಹ ಭಾಗ - 2

ಶ್ರೀಕ್ಷೇತ್ರದ facebook ಪುಟದಲ್ಲಿ ಪ್ರಕಟವಾದಂತೆಯೇ ಈ ಅಂಕಣಗಳು ಗೋಚರಿಸುತ್ತವೆ.

ಅಂಕಣ - ೧

Monday, February 11, 2019

ಕೃತಿಗಳು ಮತ್ತು ಬಸವಭಾನು ಸಂಚಿಕೆ ಬಿಡುಗಡೆ


ವಿವಿಧ ಕೃತಿಗಳು





ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಪ್ರಕಾಶನದ ನಗರ್ಲೆ ಶಿವಕುಮಾರರವರ ಕೃತಿ ಯುಗಪ್ರವರ್ತಕ ಬಸವಣ್ಣ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಕೊಲ್ಲಾಪುರ ಅದೃಶ್ಯಕಾಡಸಿದ್ಧೇಶ್ವರಮಹಾಸ್ವಾಮಿಗಳು, ಮಾಜಿ ಸಚಿವ ವಿ.ಸೋಮಣ್ಣ, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹಿನ್ಕಲ್ ಬಸವರಾಜು, ಬಸವಬಳಗ ಒಕ್ಕೂಟ ಅಧ್ಯಕ್ಷ ಲೋಕೇಶ್, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ತೋಂಟದಾರ್ಯ, ಪುಟ್ಟಬುದ್ಧಿ, ಬಿ.ವಿ.ವಸಂತಕುಮಾರ್, ಪ್ರಶಾಂತ್, ಮಧುಮಲೇಶ್, ನಿಖಿಲೇಶ್ ಮಲ್ಲಿಕಾರ್ಜುನ,ಡಾ.ಮಂಜಪ್ಪ ಮಹದೇವಪ್ಪ, , ಜಯಗೌಡ ಮತ್ತು ರೂಪ ಕುಮಾರಸ್ವಾಮಿ ಇದ್ದರು.

=======================================================================



ಸರಗೂರು: ಸತ್ಯ,ಶಿವ,ಸುಂದರ ಸಮಾಜದ ನಿರ್ಮಾಣಕ್ಕೆ ವಚನಸಾಹಿತ್ಯ ಅವಶ್ಯಕ ಎಂದು ನಾಡಿನ ಹಿರಿಯ ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್‍ರವರು ಹೇಳಿದರು.  ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರು ರಾಜೇಂದ್ರಭವನದಲ್ಲಿ ಶರಣ ಸಾಹಿತ್ಯದ ಹಾವಿನಹಾಳ ಕಲ್ಲಯ್ಯ, ಜಗನ್ಮಾತೆ ಅಕ್ಕಮಹಾದೇವಿ ಮತ್ತು ವಚನ ಜ್ಞಾನೋದಯ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ವಚನಗಳು ಅಚ್ಚಗನ್ನಡದ ಉದಯಕ್ಕೆ ಕಾರಣವಾದಂತಹ ಸಾಹಿತ್ಯ, ಇದು ಜನರ ಭಾವನೆಗಳಿಗೆ ಸ್ಪಂದಿಸುವ ಹಾಗೂ ಜೀವನ ವಿಧಾನವನ್ನು ಸರಿಪಡಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ. ಬಸವಣ್ಣ ಆಚಾರವೇ ಸ್ವರ್ಗ ಎಂದರು ಆದರೆ ಇಂದು ಅತ್ಯಾಚಾರ ಮತ್ತು ಅನಾಚಾರಗಳು ತಲೆ ಎತ್ತಿರುವುದು ವಿಷಾದನೀಯ ಸಂಗತಿ. ವಚನಗಳನ್ನು ಸಮಾಜದ ಎಲ್ಲಾ ಜನರಿಗೆ ಮನದಟ್ಟು ಮಾಡಿಸಿದರೆ ಸುಂದರ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇಂದಿನ ಧರ್ಮ ಜಿಜ್ಞಾಸೆಯ ಕಾಲಘಟ್ಟದಲ್ಲಿ ಎಲ್ಲವನ್ನೂ ಮೀರಿ ‘ವಚನಧರ್ಮ’ ಎಂದು ಕರೆಯುವುದು ಸೂಕ್ತವಾಗಿದೆ. ವಚನಗಳು ವಿಶ್ವದ ಗಮನವನ್ನು ಸೆಳೆಯುವ ಆಕರ್ಷಣೀಯ ಗುಣ ಹೊಂದಿದೆ ಎಂದರು. ತದನಂತರ ಕೃತಿಗಳ ಪರಿಚಯವನ್ನು ಮಾಡಿ ಮಾತನಾಡಿದ ಪ್ರೊ. ಮೊರಬದ ಮಲ್ಲಿಕಾರ್ಜುನರವರು ವಚನಕಾರರಲ್ಲಿ ಅಜ್ಞಾತರಾಗಿದ್ದ ಹಾವಿನಹಾಳ ಕಲ್ಲಯ್ಯರವರ ಜೀವನ ಚರಿತ್ರೆಯನ್ನು ಹೊರತಂದು ವಚನಾಸಕ್ತರ ಮನವನ್ನು ಪ್ರದೀಪ್ ಹೆಬ್ರಿರವರು ಗೆದ್ದಿದ್ದಾರೆ. ಅನೇಕ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿ ಬದುಕಿನಲ್ಲಿ ಎದುರಾಗುವ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಅಕ್ಕಮಹಾದೇವಿಯವರು ವಚನಗಳ ಮೂಲಕ ತಿಳಿಹೇಳಿದ್ದಾರೆ. ಅಂತಹ ಅಕ್ಕನ ಸಂಪೂರ್ಣ ವ್ಯಕ್ತಿತ್ತವನ್ನು ಕಟ್ಟಿಕೊಡಲು ನಗರ್ಲೆ ಶಿವಕುಮಾರರವರು ರಚಿಸಿರುವ ಜಗನ್ಮಾತೆ ಅಕ್ಕಮಹಾದೇವಿ ಕೃತಿ ಒಳಗೊಂಡಿದೆ. ಆಂಗ್ಲವ್ಯಾಮೋಹ ಹೆಚ್ಚಾಗುತ್ತಿರುವಂತಹ ಇತ್ತೀಚಿನ ದಿನಗಳಲ್ಲಿ ಇನ್ನೂರು ವಚನಗಳನ್ನು ಕನ್ನಡದಿಂದ ಆಂಗ್ಲಭಾಷೆಗೆ ಅನುವಾದ ಮಾಡಿ ಶಾಲಾ ಮಕ್ಕಳು ವಚನಾಸಕ್ತಿಯನ್ನು ಬೆಳೆಸಿಕೊಳ್ಳಲು ರೂಪ ಕುಮಾರಸ್ವಾಮಿರವರ ವಚನ ಜ್ಞಾನೋದಯ ಕೃತಿ ಸಹಾಯಕವಾಗಿದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶವನ್ನು ಮನದಟ್ಟು ಮಾಡಿಸಿದರು. ಲೇಖಕರಾದ ಡಾ.ಪ್ರದೀಪ್‍ಕುಮಾರ್ ಹೆಬ್ರಿ, ನಗರ್ಲೆ ಶಿವಕುಮಾರ, ರೂಪ ಕುಮಾರಸ್ವಾಮಿ ತಮ್ಮ ಕೃತಿಗಳ ರಚನೆಯ ಉದ್ದೇಶ ಮತ್ತು ಅದರ ತಿರುಳಿನ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಕಂಠೇಶ್ವರ ಟಿ.ವಿ.ಸೆಂಟರ್ ಮಾಲೀಕರಾದ ಉಮೇಶ್‍ಶರ್ಮರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಗೌರಾವಾಧ್ಯಕ್ಷ ಎನ್.ಶ್ರೀಕಂಠಮೂರ್ತಿ, ಅಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಬಿ.ಪಂಪಾಪತಿ, ಲಿಂಗಣ್ಣ, ಪುಟ್ಟಪ್ಪ, ರತ್ನಮ್ಮ, ಪೂರ್ಣಿಮ, ಪ್ರೇಮಪ್ರಭುಸ್ವಾಮಿ, ಶ್ರೀಕಂಠಸ್ವಾಮಿ, ಮಹದೇವಪ್ಪ, ಗೀತಾ, ಕಾವೇರಿ, ಅಂಬಿಕಾ, ಗೊ.ರು.ಪರಮೇಶ್ವರಪ್ಪ, ಚಂದ್ರಶೇಖರ್,ಜಯಗೌಡ,ಶಾರದಾಶಿವಲಿಂಗಸ್ವಾಮಿ,ರಾಜೇಶ್ವರಿಮಹೇಶ್,ಧನ್ಯಸತ್ಯೇಂದ್ರಮೂರ್ತಿ,ಕಾತ್ಯಾಯಿನಿ,ಚಂಚಲ,ಗೀತರಾಜಶೇಖರ್,ವಿಜಯಚಿನ್ನಸ್ವಾಮಿ,ಲಲಿತ,ರಾಜುಗೌಡ,ದೊಡ್ಡಸ್ವಾಮಿ,ಗಂಗಾಧರಸ್ವಾಮಿ,ರಾಜಶೇಖರಮೂರ್ತಿ,ಶಶಿಕಲಾ ಗಿರೀಶ್, ನಾಗೇಂದ್ರ, ಸಂತೋóóóಷ,  ಮಹೇಶ್, ವೃಷಬೇಂದ್ರ ಉಪಸ್ಥಿತರಿದ್ದರು.
-------------------------------------------------------------------------------------------------------------------------


ಮೈಸೂರು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ವಚನಸಾಹಿತ್ಯ ಪ್ರಮುಖ ಕಾರಣ ಎಂದು ಹಿರಿಯ ಪತ್ರಕರ್ತ ಈಚನೂರು ಕುಮಾರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ವಚನ ಕುಮಾರಸ್ವಾಮಿ ಸಂಪಾದನೆಯ ವಚನಸಾರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಜಗತ್ತಿನ ಅನೇಕ ರಾಷ್ಟ್ರಗಳು ವಚನಗಳ ಸಾರವನ್ನು ಅರಿತು ವಚನಗಳ ಕಡೆ ಮುಖಮಾಡಿರುವಾಗ ಅನೇಕ ಕನ್ನಡಿಗರು ವಚನಗಳ ಪ್ರಾಮುಖ್ಯತೆಯ ಅರಿಯದೇ ಮರೆಯುತ್ತಿರುವುದು ವಿಷಾದನೀಯ. ಯಾವುದೇ ವಾದ ವಿವಾದಗಳು ಉಂಟಾದರೂ ಅದಕ್ಕೆ ವಚನಸಾಹಿತ್ಯದಲ್ಲಿ ಉತ್ತರವಿದೆ. ಕೆಲವು ವಚನಗಳು ಅರ್ಥವಾಗದೇ ಇದ್ದಾಗ ಅದಕ್ಕೆ ಭಾವಾರ್ಥ ಅಗತ್ಯವಿರುವುತ್ತದೆ. ಕೆಲವು ವಚನಗಳು ಒಗಟಿನ ರೀತಿ ಇರುತ್ತವೆ. ಅಂತಹ ಒಗಟನ್ನು ಬಿಡಿಸುವ ಕೆಲಸವನ್ನು ವಚನಕುಮಾರಸ್ವಾಮಿ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು. ವಚನಸಾರ ಪುಸ್ತಕ ಕುರಿತು ಮಾತನಾಡಿದ ಲೇಖಕ ನಗರ್ಲೆ ಶಿವಕುಮಾರ ಈ ಪುಸ್ತಕದಲ್ಲಿ ಬಸವಣ್ಣನವರಿಂದ ಪ್ರಾರಂಭವಾಗಿ ಅಲ್ಲಮಪ್ರಭು ಅಕ್ಕಮಹಾದೇವಿ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಇಪ್ಪತ್ತೈದು ವಚನಕಾರರ ಭಾವಾರ್ಥವಿದ್ದು, ವಚನಗಳಿಗೆ ಸರಳವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಯಶಸ್ಸನ್ನೂ ಕಾಣುತ್ತಿರುವ ಇವರು ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು. ನಂತರ ಮಾತನಾಡಿದ ವಚನಸಾರ ಪುಸ್ತಕ ಸಂಪಾದಕ ವಚನ ಕುಮಾರಸ್ವಾಮಿ ಇಂದು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ ಇದಕ್ಕೆ ಕಾರಣವನ್ನು ಹುಡುಕಲು ಹೋದಾಗ ಅನೇಕ ಪುಸ್ತಕಗಳು ಗಾತ್ರದಲ್ಲಿ ದೊಡ್ಡದಾಗಿದ್ದು ಅದನ್ನು ನೋಡಿದ ಕೂಡಲೇ ನಂತರ ಓದಿದರಾಯಿತು ಎಂದು ಹಾಗೇ ಇಡುತ್ತಿರುವುದನ್ನು ಕಾಣಬಹುದು. ಕೆಲವೇ ನಿಮಿಷಗಳಲ್ಲಿ ಓದಲು ಸಹಾಯಕವಾಗಿ ಪುಸ್ತಕಪ್ರೇಮಿಗಳನ್ನು ಹೆಚ್ಚಿಸುವ ಉದ್ದೇಶದಿಂದ ಕಿರುಕೃತಿಯನ್ನು ಸಂಪಾದಿಸಿದ್ದೇನೆ. ಆದುದರಿಂದ ಪುಸ್ತಕದ ಲೇಖಕರು ಮತ್ತು ಸಂಪಾದಕರು ಗಾತ್ರಕ್ಕೆ ಆಧ್ಯತೆ ನೀಡದೆ ವಿಷಯಕ್ಕೆ ಆಧ್ಯತೆ ನೀಡಿ ಕಿರುಪುಸ್ತಕಗಳನ್ನು ತರಲು ಪ್ರಯತ್ನ ಮಾಡಬೇಕು ಎಂದರು.  ಕಾರ್ಯಕ್ರಮದಲ್ಲಿ ಮೈಸೂರು ಆರ್ಟ್ ಗ್ಯಾಲರಿಯ ಶಿವಲಿಂಗಪ್ಪ, ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶ್ರೀಕಂಠಮೂರ್ತಿ, ಕಾರ್ಯದರ್ಶಿ ಪಂಪಾಪತಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ರತ್ನಮ್ಮಜಯಣ್ಣ, ಅನಿಲ್ ವಜಂತ್ರಿ, ಪ್ರೇಮಪ್ರಭುಸ್ವಾಮಿ, ಪೂರ್ಣಿಮಾ, ಲೋಕೇಶಪ್ಪ, ವಚನ ಚೂಡಾಮಣಿ,ಶ್ರೀಕಂಠಸ್ವಾ,ಮಿ, ವೃಷಬೇಂದ್ರ, ನಾಗೇಂದ್ರ, ಪುಟ್ಟಪ್ಪ, ಅಂಬಿಕಾ ಪ್ರಭುಶಂಕರ,  ಕಾವೇರಿ, ಉಪಸ್ಥಿತರಿದ್ದರು.

--------------------------------------------------------------------------------------------------------------------------

ಚಿತ್ರ 1- ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರು ಮನೇಶ್ವರನಗರದ ಬಸವಜ್ಞಾನಮಂದಿರದಲ್ಲಿ ಆಯೋಜಿಸಿದ್ದ ವಚನ ಕುಮಾರಸ್ವಾಮಿ ಸಂಪಾದನೆಯ “ ಬಸವಣ್ಣನವರ ನೂರೊಂದು ವಚನಗಳು” ಕೃತಿಯನ್ನು ಮಾತೆ ಬಸವಾಂಜಲಿ ಬಿಡುಗಡೆ ಮಾಡಿದರು. ಸಾಹಿತಿ ನಗರ್ಲೆ ಶಿವಕುಮಾರ್, ವಚನ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಮೈಸೂರು:- ಬಸವಣ್ಣನವರ ವಚನಗಳು ಸರಳ, ಸುಂದರ ಹಾಗೂ ವೈಜ್ಞಾನಿಕವಾಗಿವೆ ಎಂದು ಸಾಹಿತಿ ನಗರ್ಲೆ ಶಿವಕುಮಾರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್  ಮೈಸೂರು ಮನೇಶ್ವರನಗರದ ಬಸವಜ್ಞಾನಮಂದಿರದಲ್ಲಿ ಆಯೋಜಿಸಿದ್ದ ವಚನ ಕುಮಾರಸ್ವಾಮಿ ಸಂಪಾದನೆಯ “ ಬಸವಣ್ಣನವರ ನೂರೊಂದು ವಚನಗಳು” ಕೃತಿ ಪರಿಚಯ ಮಾಡಿ ಮಾತನಾಡಿದ ಅವರು ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಮೂಲಕ ಜಗಜ್ಯೋತಿಯಾದರು.ಇಡೀ ಮಾನವ ಸಮಾಜವನ್ನು ಏಕದೇವೋಪಾಸನೆಯ ಮೂಲಕ ಒಂದುಗೂಡಿಸಿ, ಸಮಾಜದ ಮೇಲು ಕೀಳುಗಳನ್ನು ನಿವಾರಿಸಿ ಸಮಾನ ಹಾಗೂ ಗೌರವಾನ್ವಿತ ನೆಲೆಯ ಮೇಲೆ ನಿಲ್ಲಿಸುವುದು ಅವರ ಮಹೋದ್ದೇಶವಾಗಿತ್ತು. ಬಸವಣ್ಣನವರ ಕಾಲದಲ್ಲಿ ಕ್ರಾಂತಿಕಾರಿ ಘಟನೆಗಳು ಹಾಗೂ ಅವರ ಬಗ್ಗೆ ನಡೆಸಿರುವ ಸಂಶೋಧನೆ, ಜಿಜ್ಞಾಸೆ, ವೈಚಾರಿಕ ನೆಲೆಗಟ್ಟು, ಸಮಾಜದ ಸಮಾನತೆಗೆ ಮಾಡಿದ ಹೋರಾಟ ಅನನ್ಯವಾದವುಗಳು. 18 ನೇ ಶತಮಾನದಲ್ಲಿ ಇಂಗ್ಲೆಂಡಿಗೆ ಪ್ರಜಾಪ್ರಭುತ್ವ ಬಂತು ಆದರೆ ಕರ್ನಾಟಕದಲ್ಲಿ 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವವಿತ್ತು. ಮಹಿಳೆಯರಿಗೆ ಸ್ವಾತಂತ್ರ್ಯವಿತ್ತು. 32 ಶರಣೆಯರು ವಚನಗಳನ್ನು ರಚಿಸಿದ್ದಾರೆ. ಕೆಲವು ಶರಣ ದಂಪತಿಗಳು ವಚನಗಳನ್ನು ರಚಿಸಿದ್ದಾರೆ ಎಂದು ಹೇಳಿದರು. ಬಸವಜ್ಞಾನಮಂದಿರದ ಮಾತೆ ಬಸವಾಂಜಲಿರವರು ಮಾತನಾಡಿ ಬಸವಣ್ಣನವರು ಮಡಿವಂತ ಸಮಾಜವನ್ನಾಗಲಿ, ಕೊಳಕು ಸಮಾಜವನ್ನಾಗಲಿ ನಿರ್ಮಾಣ ಮಾಡದೆ ಮನಸ್ಸಿನಲ್ಲಿರುವ ಮನದ ಮೈಲಿಗೆಯನ್ನು ಹೋಗಲಾಡಿಸುವ ಸಮಾಜವನ್ನು ನಿರ್ಮಾಣ ಮಾಡಿದರು. ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು ಜೀವನದಲ್ಲಿ ಅಳವಿಸಿಕೊಂಡಿದ್ದೇ ಆದರೆ ಕಲ್ಯಾಣ ರಾಜ್ಯ ಸ್ಥಾಪನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು. ಎಲ್ಲಾ ಜನರಿಗೂ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಾನತೆಗಾಗಿ ಪರಿಶ್ರಮಪಟ್ಟವರು ವಚನಕಾರರು ಎಂದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಶ್ರೀಕಂಠಮೂರ್ತಿ, ಗೀತಾ, ಸಿ.ಬಿ.ರಾಜಶೇಖರ್, ಶರಣಪ್ಪ, ಬಿ.ಪಂಪಾಪತಿ, ಪೂರ್ಣಿಮಾ ನಾಗೇಂದ್ರ, ವಿಜಯಶ್ರೀ ಪಂಪಾಪತಿ, ಸುಜಾತ ದುರ್ಗೇಶ್, ನಾಗೇಂದ್ರಸ್ವಾಮಿ ಉಪಸ್ಥಿತರಿದ್ದರು.
--------------------------------------------------------------------------------------------------------------------


ಶ್ರೀ ಮಲೆಮಹದೇಶ್ವರ ಕೃತಿ ಬಿಡುಗಡೆ ಸಮಾರಂಭ

--------------------------------------------------------------------------------------------------------------------------



ಚಿತ್ರ 1:-  ಕಡೂರು ತಾಲ್ಲೂಕು ಬೀರೂರು ತರಳಬಾಳು ಜಗದ್ಗುರು ಕಲ್ಯಾಣಮಂಟಪದಲ್ಲಿ ಓಂಕಾರಯ್ಯನವರ ಪುತ್ರಿ ಶೃತಿ ಮತ್ತು ಜಿತೇಂದ್ರರ ವಿವಾಹದ ಆರತಕ್ಷತೆಯಲ್ಲಿ ಶರಣು ವಿಶ್ವವಚನ ಫೌಂಡೇಶನ್ ಹೊರತಂದಿರುವ ವಚನ ಕುಮಾರಸ್ವಾಮಿ ಸಂಪಾದನೆಯ ವಚನಕಲ್ಯಾಣ ಕೃತಿ ಬಿಡುಗಡೆಯನ್ನು ಮಾಡಾಳುವಿನ ನಿರಂಜನ ಪೀಠದ ಶ್ರೀ ರುದ್ರಮುನಿಸ್ವಾಮಿಗಳು ಮಾಡಿದರು. ಈ ಸಂದರ್ಭದಲ್ಲಿ ಕೆ.ಆರ್.ನಗರ ತಾಲ್ಲೂಕು ಲಾಳನಹಳ್ಳಿ ಗುರುಮಲ್ಲೇಶ್ವರ ಮಠದ ಮಾತೆ ಜಯದೇವಿತಾಯಿ ಉಪಸ್ಥಿತರಿದ್ದರು.
ಸುದ್ಧಿ:- ವಿವಾಹದಲ್ಲಿಯೂ ಆಧ್ಯಾತ್ಮಿಕಗೆ ನಾಂದಿ ಹಾಡಿರುವುದು ಉತ್ತಮ ಬೆಳವಣಿಗೆ ಎಂದು ಅರಸೀಕೆರೆ ತಾಲ್ಲೂಕು ಮಾಡಾಳುವಿನ ನಿರಂಜನ ಪೀಠದ ಶ್ರೀ ರುದ್ರಮುನಿಸ್ವಾಮಿಗಳು ಹೇಳಿದರು. ಕಡೂರು ತಾಲ್ಲೂಕು ಬೀರೂರು ತರಳಬಾಳು ಜಗದ್ಗುರು ಕಲ್ಯಾಣಮಂಟಪದಲ್ಲಿ ಓಂಕಾರಯ್ಯನವರ ಪುತ್ರಿ ಶೃತಿ ಮತ್ತು ಜಿತೇಂದ್ರರ ವಿವಾಹದ ಆರತಕ್ಷತೆಯಲ್ಲಿ ಶರಣು ವಿಶ್ವವಚನ ಫೌಂಡೇಶನ್ ಹೊರತಂದಿರುವ ವಚನ ಕುಮಾರಸ್ವಾಮಿ ಸಂಪಾದನೆಯ ವಚನಕಲ್ಯಾಣ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ವ್ಯಕ್ತಿ ಹಂತ ಹಂತವಾಗಿ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ವಿವಾಹ ಎಂದ ತಕ್ಷಣ ಸಂತೋಷ, ಸಡಗರ ನೆನಪಾಗುತ್ತದೆ ಆದರೆ ಇಂತಹ ಸಂದರ್ಭದಲ್ಲೂ ಕಾರ್ಯಕ್ರಮ ರೂಪಿಸಿ ಜೀವನಮೌಲ್ಯಗಳನ್ನು ರೂಢಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆ.ಆರ್.ನಗರ ತಾಲ್ಲೂಕು ಲಾಳನಹಳ್ಳಿ ಗುರುಮಲ್ಲೇಶ್ವರ ಮಠದ ಮಾತೆ ಜಯದೇವಿತಾಯಿ ಮಾತನಾಡಿ ವಿವಾಹದಲ್ಲಿ ಬೇರೆ ಬೇರೆ ಕಾಣಿಕೆ ನೀಡುವುದರ ಬದಲು ವಚನ ಪುಸ್ತಕಗಳನ್ನು ವಚನ ತಾಂಬೂಲವನ್ನಾಗಿ ನೀಡಿ ಜ್ಷಾನದಾಸೋಹ ಮಾಡಿರುವುದು ನಿಜವಾಗಿಯೂ ಕೂಡ ಸ್ತುತ್ಯಾರ್ಹವಾದುದು. ಇಂತಹ ಆಧುನಿಕ ಯುಗದಲ್ಲಿಯೂ ಕೂಡ ಧಾರ್ಮಿಕತೆಗೆ ಒತ್ತು ನೀಡುತ್ತಿರುವುದನ್ನು ನೋಡಿದರೆ ಭಾರತ ದೇಶದಲ್ಲಿ ಹುಟ್ಟಿದ್ದೂ ಕೂಡ ಸಾರ್ಥಕವೆನಿಸಿತು ಎಂದರು. ಕಾರ್ಯಕ್ರಮ ಕುರಿತು ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ತಲೆಯಲ್ಲಿ ಸದ್ವಿಚಾರ, ಮನಸ್ಸಿನಲ್ಲಿ ಸದ್ಭಾವನೆ, ಕೈಯಲ್ಲಿ ಸತ್ಕಾರ ಮಾಡಿಸಲು ವಚನಗಳು ಪ್ರೇರಣೆಯಾಗಿದ್ದು ಪ್ರತಿಯೊಬ್ಬರೂ ಕೂಡ ವಚನಗಳನ್ನು ಅಧ್ಯಯನ ಮಾಡಬೇಕು ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕಾದರೆ ವಿವಾಹದಿಂದಲೇ ಪ್ರತಿಯೊಬ್ಬರ ಬದುಕು  ವಿಸ್ತಾರವಾಗುವುದರಿಂದ ಸತಿಪತಿಗಳು ಹೊಂದಾಣಿಕೆಯಿಂದ ನಡೆಯಲು ನೆರವಾಗುವಂತಹ ವಚನಗಳನ್ನು ವಚನಕಲ್ಯಾಣದಲ್ಲಿ ನಿರ್ವಚನ ಮಾಡಲಾಗಿದೆ. ಪ್ರತಿಯೊಬ್ಬರೂ ಇದನ್ನು ಅದ್ಯಯನ ಮಾಡಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಧು ಶೃತಿ, ವರ ಜಿತೇಂದ್ರ, ಓಂಕಾರಯ್ಯ, ಗೀತಾ,ಕುಮಾರಪ್ಪ, ಗೀತಾ, ಬಸವಣ್ಣ, ಗುರುಸಿದ್ಧಮ್ಮ  ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ ಉಪಸ್ಥಿತರಿದ್ದರು.

-------------------------------------------------------------------


ಅರಸೀಕೆರೆ : ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ ನೀಡುವಲ್ಲಿ ಬೀಗರ ಔತಣ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಮಾಡಾಳು ನಿರಂಜನ ಪೀಠದ ರುದ್ರಮುನಿಸ್ವಾಮೀಜಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಕೋಡಮ್ಮದೇವಿ ಸಮುದಾಯಭವನದಲ್ಲಿ ಬೀಗರ ಔತಣ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ ಸಂಪಾದನೆಯ ವಚನಾಮೃತ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಕುಟುಂಬ ಸಮಾಜದ ಬಹು ಮುಖ್ಯ ಘಟಕ, ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕಾದರೆ ಕೌಂಟುಬಿಕ ಬದುಕು ಅನನ್ಯತೆಯಿಂದ ಕೂಡಿರಬೇಕು. ಸುಂದರವಾದ ಜೀವನವನ್ನು ಸಾಗಿಸಲು ವಚನ ನುಡಿಗಳನ್ನು ಅಳವಡಿಸಿಕೊಂಡು ಅದರಂತೆ ನಡೆಯಬೇಕು. ಮಾನವನ ಬದುಕಿಗೆ ಬೇಕಾದ ಎಲ್ಲಾ ಅಗತ್ಯಗಳನ್ನು ಶರಣರು ವಚನಗಳ ಮೂಲಕ ಅನಾವರಣಗೊಳಿಸಿದ್ದಾರೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಪ್ರತಿಯೊಬ್ಬರ ಕೈಯಲ್ಲಿ ಹಾಗೂ ಪ್ರತಿಯೊಂದು ಮನೆಯಲ್ಲಿ ವಚನ ಪುಸ್ತಕ ಇರಬೇಕೆಂಬುದು ಸಂಸ್ಥೆಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ವಚನಗ್ರಾಮ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ಹಮ್ಮಿಕೊಳ್ಳಲಾಗಿದೆ. ಮದುವೆ, ಬೀಗರ ಔತಣ, ಸಂಸ್ಮರಣ ಸಮಾರಂಭಗಳನ್ನು ಆಯೋಜಿಸುವವರು ನಮ್ಮ ಜೊತೆ ಸಹಕರಿಸಿದೆ ಸರ್ವರಲ್ಲೂ ಉತ್ತಮ ಮೌಲ್ಯ ಅಳವಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು. ಅಂದು ಅತ್ತಿಮಬ್ಬೆ ಪೊನ್ನನ ಶಾಂತಿಪುರಾಣದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳಲ್ಲಿ ಬರೆಯಿಸಿ ಓದುಗರಿಗೆ ಹಂಚಿದಳು ಅದೇ ರೀತಿ ಶರಣ ಓಂಕಾರಯ್ಯನವರು 1000 ಪುಸ್ತಕಗಳನ್ನು ಮುದ್ರಿಸಿ ಬೀಗರ ಔತಣ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲರಿಗೂ ಹಂಚುತ್ತಿರುವುದು ಸ್ತುತ್ಯಾರ್ಹವಾದ ಕೆಲಸ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ದೇವರಮುದ್ದನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್ ಬಿ ಓಂಕಾರಯ್ಯ, ಗೀತಾ ಓಂಕಾರಯ್ಯ, ಹೆಚ್ ಕೆ ಮಾದಪ್ಪ, ಹೆಚ್ ಪಿ ಬಸವಲಿಂಗಪ್ಪ, ವಧು ಸ್ಪೂರ್ತಿ, ವರ ವಸಂತಕುಮಾರ್, ಸಿದ್ಧರಾಜು, ರೇಣುಕಮ್ಮ, ಶಿವಸ್ವಾಮಿ, ವೀಣಾ, ಬಸವಣ್ಣ,  ಪತ್ರಕರ್ತ ನಾಗೇಂದ್ರ ಉಪಸ್ಥಿತರಿದ್ದರು
----------------------------------------

ಮೈಸೂರು: ಶರಣರ ವಚನಗಳ ಅಧ್ಯಯನದಿಂದ ಅನೇಕರು ಆಧ್ಯಾತ್ಮದ ಬೆಳಕನ್ನು ಕಂಡುಕೊಂಡಿದ್ದಾರೆ ಎಂದು ಟಿ ನರಸೀಪುರ ವಿದ್ಯೋದಯ ಕಾಲೇಜಿನಿ ವಿಶ್ರಾಂತ ಪ್ರಾಧ್ಯಾಪಕಿ ಡಾ ಸಿ ಜಿ ಉಷಾದೇವಿ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು  ಶರಣು ವಿಶ್ವವಚನ ಫೌಂಡೇಷನ್ ಸಹಯೋಗದೊಂದಿಗೆ ವಿಜಯನಗರದ ಒಂದನೇ ಹಂತದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಎತ್ತಣ ಅಲ್ಲಮ ಎತ್ತಣ ರಮಣ ಕೃತಿಯನ್ನು ಕುರಿತು ಮಾತನಾಡಿದ ಅವರು ಲೇಖಕ ಡಾ ಪ್ರಸನ್ನ ಸಂತೇಕಡೂರು ಅಲ್ಲಮ ಮತ್ತು ರಮಣ ಮಹರ್ಷಿಗಳ ಸಿದ್ಧಾಂತದಲ್ಲಿ ಕಂಡು ಬರುವ ಸಾಮ್ಯತೆಗಳ ಬಗ್ಗೆ ತಿಳಿಸುವುದರ ಜೊತೆಗೆ ಅಲ್ಲಮನ ವಚನಗಳು ರಮಣನಿಗೆ ದಾರಿ ತೋರಲು ಸಹಾಯಕವಾಗಿ ಆತ್ಮೋದ್ಧಾರದ ದಾರಿಯಲ್ಲಿ ನಡೆಸಿವೆ. ಪ್ರಸ್ತುತ ಕೃತಿಯನ್ನು ಸ್ವತಂತ್ರವಾಗಿ ರಚಿಸುವುದರ ಜೊತೆಗೆ ಸಂಶೋಧನೆಯನ್ನು ಮಾಡಿ ಅನೇಕ ಕೃತಿಗಳಿಂದ ಉತ್ತಮ ಅಂಶಗಳನ್ನು ಹೆಕ್ಕಿ ತೆಗೆದು ಎರಡು ವ್ಯಕ್ತಿತ್ವಗಳ ಬಗ್ಗೆ ಸರಳವಾಗಿ ಓದುಗರಿಗೆ ನೀಡಿರುವುದು ತುಂಬಾ ಸಂತಸದ ವಿಷಯ. ಅಮೇರಿಕಾಕ್ಕೆ ಹೋದರೆ ತಾಯ್ನಾಡನ್ನೇ ಮರೆತುಬಿಡುತ್ತಾರೆ ಎಂದು ಹೇಳುವ ಇತ್ತೀಚಿನ ದಿನಮಾನಗಳಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಕನ್ನಡ ನಾಡಿನ ಸಾಹಿತ್ಯದ ಬಗ್ಗೆ ಅಲ್ಲೇ ಅಧ್ಯಯನ ಮಾಡಿ ಕೃತಿ ರಚಿಸಿರುವುದು ಕನ್ನಡಿಗರಾದ ನಾವು ಹೆಮ್ಮೆಪಡಬೇಕಾದ ವಿಷಯ ಎಂದರು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹೆಸರಾಂತ ಸಾಹಿತಿ ಡಾ ಮಳಲಿ ವಸಂತಕುಮಾರ್ ಬಸವಣ್ಣ ವಚನ ಚಳುವಳಿ ಮೂಲಕ ಸಮಸಮಾಜ ಕಟ್ಟಲು ಪ್ರಯತ್ನಿಸಿದರು. ಅಲ್ಲಮನ ಘನ ವ್ಯಕ್ತಿತ್ವವನ್ನು ಗಮನಿಸಿ ಅವರನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿ ಮಾಡಿ ಜಾತಿ, ಧರ್ಮ, ಲಿಂಗರಹಿತವಾಗಿ ಎಲ್ಲರೂ ಚರ್ಚಿಸಲು ಅವಕಾಶ ಮಾಡಿಕೊಟ್ಟಿದ್ದು ಧ್ವನಿ ಇಲ್ಲದವರಿಗೆ ಮಾತನಾಡಲು ಸಹಾಯಕವಾಯಿತು ಎಂದರು. ಕೃತಿ ಲೇಖಕ ಡಾ ಪ್ರಸನ್ನ ಸಂತೇಕಡೂರು ಮಾತನಾಡಿ ನಾನು ಅಮೇರಿಕಾದಲ್ಲಿರುವಾಗ ಅನೇಕ ಕೃತಿಗಳನ್ನು ಅಧ್ಯಯನ ಮಾಡುತ್ತಿದ್ದೆ ಆ ಸಂದರ್ಭದಲ್ಲಿ ರಮಣ ಮಹರ್ಷಿಗಳ ಬಗ್ಗೆ ಓದುತ್ತಾ ಹೋದಂತೆ ಅಲ್ಲಮರ ಪ್ರಭಾವ ಇರಬಹುದು ಎಂದು ಗಮನಿಸಿ ಅವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಶೋಧನೆ ಮಾಡಿದಾಗ ಈ ಕೃತಿ ಹೊರಬರಲು ಸಹಾಯಕವಾಯಿತು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ವಚನ ಚೂಡಾಮಣ ,  ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಗೌರವಾಧ್ಯಕ್ಷ ಶ್ರೀಕಂಠಮೂರ್ತಿ, ಗೀತಾ, ಕಾವೇರಿ, ಪ್ರಭುಸ್ವಾಮಿ, ಅನಿತಾ ನಾಗರಾಜ್, ರಾಜೇಶ್ವರಿ, ದೇವರಾಜು, ವಿಜಯಕುಮಾರ್ ಉಪಸ್ಥಿತರಿದ್ದರು.
----------------------------------------





2020ರ ಬಸವಭಾನು ಸಂಚಿಕೆ ಬಿಡುಗಡೆ


ನಗರ್ಲೆ ಶಿವಕುಮಾರ ಸಂಪಾದನೆಯ ನುಡಿಗಡಣ ಕೃತಿ ಬಿಡುಗಡೆ


2021ರ ಬಸವಭಾನು ಸಂಚಿಕೆ ಬಿಡುಗಡೆ


ಶಿವಪುರ ಉಮಾಪತಿ ಸಂಪಾದನೆಯ ವಚನ ದರ್ಶನ ಕೃತಿ ಬಿಡುಗಡೆ

ಅಕ್ಕಮಹಾದೇವಿ ಮರಮ್ಕಲ್‌ ಸಂಪಾದನೆಯ ಅಕ್ಕನ ನೂರೆಂಟು ವಚನಗಳು ಕೃತಿ ಬಿಡುಗಡೆ